Tag: Priyanka Chincholi

  • ಪತಿ ಜೊತೆಗೆ ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚಿಂಚೋಳಿ

    ಪತಿ ಜೊತೆಗೆ ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚಿಂಚೋಳಿ

    ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾಂಕಾ ಚಿಂಚೋಳಿ ಪತಿ ರಾಕೇಶ್ ಜೊತೆಗೆ ಹನಿಮೂನ್‍ಗೆ ಹಾರಿದ್ದಾರೆ.

    ಕಳೆದ ವಾರವಷ್ಟೇ ಕುಟುಂಬದವರ ಸಮ್ಮುಖದಲ್ಲಿ ರಾಕೇಶ್ ಜೊತೆಗೆ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಚಿಂಚೋಳಿ ಇದೀಗ ಪತಿ ಜೊತೆಗೆ ಮಾಲ್ಡೀವ್ಸ್‌ಗೆ ಹನಿಮೂನ್‍ಗೆ ಹಾರಿದ್ದಾರೆ. ಪತಿ ಜೊತೆಗೆ ಏಕಾಂತವಾಗಿ ಕಾಲ ಕಳೆಯುತ್ತಿರುವ ಅವರು, ಮಾಲ್ಡೀವ್ಸ್‌ನ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿರುವ ವೀಡಿಯೋ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮಾಲ್ಡೀವ್ಸ್‌ನ  ಕಡಲ ತೀರದ ದೃಶ್ಯ,  ಏರ್‌ಪೋರ್ಟ್‌, ಮೂನ್ ಲೈಟ್ ಕೆಳಗೆ ಡಿನ್ನರ್ ಮಾಡುತ್ತಿರುವ ದೃಶ್ಯ ಸೇರಿದಂತೆ ಹಲವಾರು ಫೋಟೋಗಳನ್ನು ಇನ್‍ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಚಿಂಚೋಳಿ

    ಕಳೆದ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯಂದು ರಾಕೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಂಕಾ ಚಿಂಚೋಳಿ, ಆಗಸ್ಟ್ 14ರಂದು ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ನಂತರ ಅಮೇರಿಕಾದಿಂದ ಮದುವೆಗಾಗಿ ಭಾರತಕ್ಕೆ ಬಂದ ರಾಕೇಶ್ ಜೊತೆಗೆ ಡಿಸೆಂಬರ್ 10-11ರಂದು ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಸಂಪ್ರದಾಯಿಕವಾಗಿ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.  ಇದನ್ನೂ ಓದಿ:  ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

    ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೈ ಹನುಮಾನ್ ಮತ್ತು ಮನಸಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ ಜೊತೆಗೆ ರಾಗ ಎಂಬ ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ.

  • ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಚಿಂಚೋಳಿ

    ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಚಿಂಚೋಳಿ

    ಬೆಂಗಳೂರು: ಕಿರುತೆರೆ ಜನಪ್ರಿಯ ನಟಿ ಪ್ರಿಯಾಂಕಾ ಚಿಂಚೋಳಿ, ಉದ್ಯಮಿ ರಾಕೇಶ್ ಅವರೊಂದಿಗೆ ಇಂದು ಕುಟುಂಬದವರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.

    ಕಳೆದ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯಂದು ರಾಕೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಂಕಾ ಚಿಂಚೋಳಿ, ಆಗಸ್ಟ್ 14ರಂದು ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಇದೀಗ ಅಮೇರಿಕಾದಿಂದ ಮದುವೆಗಾಗಿ ಭಾರತಕ್ಕೆ ಬಂದಿರುವ ರಾಕೇಶ್ ಅವರು ಪ್ರಿಯಾಂಕ ಜೊತೆ ಇಂದು ಸಂಪ್ರದಾಯಿಕವಾಗಿ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಫೋಟೋ ತೆಗೆಯುವಾಗ ಪುರುಷರು ಯಾಕೆ ತುಂಬಾ ಕಷ್ಟಪಡುತ್ತಾರೆ?: ರಾಧಿಕಾ ಪಂಡಿತ್

    ರಾಕೇಶ್ ಅವರು ಅಮೆರಿಕಾದ ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದು, 4 ತಿಂಗಳ ಬಳಿಕ ಮತ್ತೆ ವಿದೇಶಕ್ಕೆ ಹಾರಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಚಿಂಚೋಳಿ ಅವರ ಮನೆಯಲ್ಲಿ ನಡೆದ ಮೆಹಂದಿ ಶಾಸ್ತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

    ಈ ಮುನ್ನ ಪ್ರಿಯಾಂಕ ಚಿಂಚೋಳಿ ಅವರು, ರಾಕೇಶ್ ಅವರು ಅಮೆರಿಕದ ಬ್ಯಾಂಕ್ ಒಂದರಲ್ಲಿ ಉಪಾಧ್ಯರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಆತಂಕವಿರುವ ಕಾರಣದಿಂದಾಗಿ ವೀಸಾಗೆ ಸಂಬಂಧಿಸಿದಂತೆ ರಿಜಿಸ್ಟರ್ ಮದುವೆಯ ಪ್ರಮಾಣಪತ್ರದ ಅಗತ್ಯವಿದೆಯಂತೆ. ಹೀಗಾಗಿ ರಿಜಿಸ್ಟರ್ ಮದುವೆಯಾಗಿದ್ದು, ಡಿಸೆಂಬರ್ 10-11ರಂದು ಸಾಂಪ್ರದಾಯಿಕವಾಗಿ ಬೆಂಗಳೂರಿನಲ್ಲೇ ಮದುವೆಯಾಗಲಿದ್ದೇವೆ ಎಂದು ತಿಳಿಸಿದ್ದರು. ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

    ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೈ ಹನುಮಾನ್ ಮತ್ತು ಮನಸಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ ಜೊತೆಗೆ ರಾಗ ಎಂಬ ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ.

  • ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

    ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

    ಬೆಂಗಳೂರು: ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾಂಕಾ ಚಿಂಚೋಳಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ನಟಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು, ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪ್ರಿಯಾಂಕಾ ಅವರು ರಾಕೇಶ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಸೀಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ.

    ರಾಕೇಶ್ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇನೆ. 2021ರ ಡಿಸೆಂಬರ್10ರಲ್ಲಿ ಸಂಪ್ರದಾಯಬದ್ಧವಾಗಿ ಮದುವೆಯಾಗಲಿದ್ದೇನೆ. ಈಗಷ್ಟೇ ಮದುವೆ ಸಂಭ್ರಮ ಶುರುವಾಗಿದೆ. ನಿಮ್ಮೆಲ್ಲರ ಪ್ರೀತಿ-ಹಾರೈಕೆ ಬೇಕು ಎಂದು ಬರೆದುಕೊಂಡು ರಿಜಿಸ್ಟರ್ ಮ್ಯಾರೇಜ್ ಸಂದರ್ಭದಲ್ಲಿ ತೆಗೆದಿರುವ ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ನಾನು ರಾಕೇಶ್ ರಿಜಿಸ್ಟರ್ ಮದುವೆ ಆಗಲು ಒಂದು ಕಾರಣವಿದೆ. ರಾಕೇಶ್ ಅವರು ಅಮೆರಿಕದ ಬ್ಯಾಂಕ್ ಒಂದರಲ್ಲಿ ಉಪಾಧ್ಯರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಆತಂಕವಿರುವ ಕಾರಣದಿಂದಾಗಿ ವೀಸಾಗೆ ಸಂಬಂಧಿಸಿದಂತೆ ರಿಜಿಸ್ಟರ್ ಮದುವೆಯ ಪ್ರಮಾಣಪತ್ರದ ಅಗತ್ಯವಿದೆಯಂತೆ. ಹೀಗಾಗಿ ರಿಜಿಸ್ಟರ್ ಮದುವೆಯಾಗಿದ್ದು, ಡಿಸೆಂಬರ್ 10-11ರಂದು ಸಾಂಪ್ರದಾಯಿಕವಾಗಿ ಬೆಂಗಳೂರಿನಲ್ಲೇ ಮದುವೆಯಾಗಲಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

    ಸಾಕಷ್ಟು ಜನರು ಪ್ರಿಯಾಂಕಾ ಚಿಂಚೋಳಿಗೆ ಶುಭಾ ಹಾರೈಸುತ್ತಿದ್ದಾರೆ. ಪ್ರಿಯಾಂಕಾ ಹಾಗೂ ರಾಕೇಶ್‍ರದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಪ್ರಿಯಾಂಕಾ ಪರಿಚಿತರ ಮೂಲಕ ರಾಕೇಶ್ ಪರಿಚಯ ಆಗಿದೆ. ಎರಡೂ ಮನೆಯವರೂ ಖುಷಿಯಿಂದ ಈ ಮದುವೆ ನಿಕ್ಕಿ ಮಾಡಿದ್ದಾರೆ.

    ಕಳೆದ ಫೆಬ್ರವರಿಯಲ್ಲಿ ಪ್ರಿಯಾಂಕಾ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪ್ರಿಯಾಂಕಾ ಪ್ರೇಮಿಗಳ ದಿನದಂದು ಬೆಳಗ್ಗೆ ಸಾಂಪ್ರದಾಯಿಕ ಸೀರೆ ಉಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸಂಜೆ ಕೆಂಪು ಬಣ್ಣದ ಉಡುಗೆ ತೊಟ್ಟು ಔತಣಕೂಟದಲ್ಲಿ ಮಿಂಚಿದ್ದರು. ಮದುವೆ ನಂತರದಲ್ಲಿ ರಾಜೇಶ್ ಮತ್ತೆ ಅಮೆರಿಕಕ್ಕೆ ಹೋಗುತ್ತಾರೋ ಇಲ್ಲವೋ ಎಂಬ ಬಗ್ಗೆ ಖಚಿತತೆ ಇಲ್ಲ. ಪ್ರಿಯಾಂಕಾ ಮದುವೆ ನಂತರವೂ ನಟಿಸಲಿದ್ದಾರಂತೆ. ನಾನು ಯಾವುದೇ ಕೆಲಸ ಮಾಡಿದರೂ ಕೂಡ ಅವರಿಗೆ ಯಾವುದೇ ತೊಂದರೆ ಇಲ್ಲ. ನನ್ನ ಹುಡುಗ ನನಗೆ ತುಂಬ ಪ್ರೋತ್ಸಾಹ ನೀಡುತ್ತಾರೆ ಎಂದು ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

  • ಪ್ರೀತಿ ಹೆಸರಲ್ಲಿ ವಂಚನೆ- ಕಿರುತೆರೆ ಫೇಮಸ್ ನಟಿಯ ವಿರುದ್ಧ ಆರೋಪ

    ಪ್ರೀತಿ ಹೆಸರಲ್ಲಿ ವಂಚನೆ- ಕಿರುತೆರೆ ಫೇಮಸ್ ನಟಿಯ ವಿರುದ್ಧ ಆರೋಪ

    ಬೆಂಗಳೂರು: ಕಿರುತೆರೆ ಫೇಮಸ್ ನಟಿ ಪ್ರಿಯಾಂಕ ಚಿಂಚೋಳಿ ವಿರುದ್ಧ ವಂಚನೆ ಆರೋಪ ಕೇಳಿಬರುತ್ತಿದೆ. ಮಾಡೆಲ್ ಒಬ್ಬರು ನನಗೆ ಪ್ರಿಯಾಂಕ ಪ್ರೀತಿ ಹೆಸರಲ್ಲಿ ಮೋಸ ಮಾಡಿದ್ದಾಳೆ. ಹಣಕ್ಕಾಗಿ ವಂಚಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

    ಬಿಲ್ ಗೇಟ್ಸ್ ಚಿತ್ರದ ನಾಯಕಿ ಮತ್ತು ಹರಹರ ಮಹಾದೇವ್ ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾಂಕ ಚಿಂಚೋಳಿ ಇಷ್ಟು ದಿನ ಅಭಿನಯದಿಂದ ಸುದ್ದಿಯಾಗುತ್ತಿದ್ದರು. ಇದೀಗ ವಿವಾದದಿಂದ ಸುದ್ದಿಯಾಗಿದ್ದಾರೆ. ತಮಗೆ ಪ್ರಿಯಾಂಕ ಪ್ರೀತಿಸಿ ವಂಚಿಸಿದ್ದಾಳೆ ಎಂದು ಮಾಡೆಲ್ ಸಾಯಿರಾಮ್ ಪ್ರಿಯಾಂಕ ವಿರುದ್ಧ ಆರೋಪಿಸಿದ್ದಾರೆ.

    ನಟಿ ಪ್ರಿಯಾಂಕ ಜೊತೆಗಿನ ಒಂದಿಷ್ಟು ಫೋಟೋ ಮತ್ತು ಮೆಸೇಂಜರ್ ಸಂಭಾಷಣೆ ಸಾಯಿರಾಮ್ ಬಳಿ ಇದ್ದು, ಬೇರೊಬ್ಬ ಹುಡುಗನ ಸಂಘ ಮಾಡಿರುವ ಪ್ರಿಯಾಂಕ ನಮಗೆ ಲವ್ ದೋಖಾ ಮಾಡಿದ್ದಾಳೆಂದು ಸಾಯಿರಾಮ್ ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ, ಸಾಯಿರಾಮ್ ಕೇವಲ ನನಗೆ ಸ್ನೇಹಿತ, ಆತ ನನ್ನ ಮೇಲೆ ದುರುದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾನೆ ಎಂದು ಸಾಯಿರಾಮ್ ಮಾಡಿರುವ ಎಲ್ಲಾ ಆರೋಪವನ್ನೂ ತಳ್ಳಿಹಾಕಿದ್ದಾರೆ.

    ಸಾಯಿರಾಮ್ ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿದ್ದು ಪ್ರಿಯಾಂಕ ಶಿಶಿರ್ ಹೆಸರಿನ ನಟನ ಜೊತೆ ನಡೆಸಿರುವ ಮೆಸೆಂಜರ್ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.