Tag: priyank upendra

  • ವಿಜಯ್ ರಾಘವೇಂದ್ರ ನಟನೆಯ `ಎಫ್‌ಐಆರ್’ 6 ಟು 6 ಚಿತ್ರಕ್ಕೆ ಪ್ರಿಯಾಂಕ ಉಪೇಂದ್ರ ಕ್ಲ್ಯಾಪ್

    ವಿಜಯ್ ರಾಘವೇಂದ್ರ ನಟನೆಯ `ಎಫ್‌ಐಆರ್’ 6 ಟು 6 ಚಿತ್ರಕ್ಕೆ ಪ್ರಿಯಾಂಕ ಉಪೇಂದ್ರ ಕ್ಲ್ಯಾಪ್

    ನ್ನಡ ಚಿತ್ರರಂಗದ ಚಿನ್ನಾರಿಮುತ್ತ ನಟ ವಿಜಯ್ ರಾಘವೇಂದ್ರ ನಟನೆಯ `ಎಫ್‌ಐಆರ್’ 6 ಟು 6 ಚಿತ್ರದ ಮೂಲಕ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದ್ದಾರೆ. ಈ ಚಿತ್ರದ ಮೂಲಕ ಹೊಸಬರ ತಂಡಕ್ಕೆ ವಿಜಯ್ ರಾಘವೇಂದ್ರ ಸಾಥ್ ನೀಡಿದ್ದಾರೆ.

    ವಿಜಯ್ ರಾಘವೇಂದ್ರ ನಟನೆಯ ಹೊಸ ಚಿತ್ರ `ಎಫ್‌ಐಆರ್’ 6 ಟು 6 ಅನೌನ್ಸ್ ಆಗಿದ್ದು, ಚಿತ್ರಕ್ಕೆ ರಮಣ್ ರಾಜ್ ಕೆ ನಿರ್ದೇಶನ ಮಾಡಲಿದ್ದಾರೆ. ಬೆಂಗಳೂರಿನ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ `ಎಫ್‌ಐಆರ್’ 6 ಟು 6 ಚಿತ್ರದಲ್ಲಿ ವಿಜಯ್ ರಾಘವೇಂದ್ರ ಎಂದೂ ಕಾಣಿಸಿಕೊಂಡಿರದ ಭಿನ್ನ ಪಾತ್ರದ ಮೂಲಕ ರಂಜಿಸಲಿದ್ದಾರೆ. ನಟ ವಿಜಯ್‌ಗೆ ನಾಯಕಿಯಾಗಿ ಅಕ್ಷಿತಾ ಬೋಪಯ್ಯ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಯಶ್ ಶೆಟ್ಟಿ, ಬಾಲರಾಜ್ ವಾಡಿ, ಎಸ್ ಕೆ ನಾಗೇಂದ್ರ ಅರಸ್, ಶ್ರೀ ರಾಜು ಸೇರಿದಂತೆ ಹಲವರು ಬಣ್ಣ ಹಚ್ಚಲಿದ್ದಾರೆ. ಇದನ್ನೂ ಓದಿ:ಕೆಲವೇ ಹೊತ್ತಿನಲ್ಲಿ ಮಲಯಾಳಂ ಸ್ಟಾರ್ ನಟ ದಿಲೀಪ್ ಪ್ರಕರಣ ತೀರ್ಪು

    24/7 ಮತ್ತು ʻವಿರಾಮದ ನಂತರʼ ಚಿತ್ರಗಳನ್ನ ನಿರ್ದೇಶಿಸಿದ್ದ ರಮಣ್ ರಾಜ್ ಕೆ `ಎಫ್‌ಐಆರ್’ 6 ಟು 6 ಕಥೆಗೆ ಯಶ್ ಫಿಲ್ಮಂ ಪ್ರೊಡಕ್ಷನ್ ಬ್ಯಾನರ್ ನಡಿ ಭಾಗ್ಯ ಆರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಬೆಂಗಳೂರಿನ ಸುತ್ತಮುತ್ತ `ಎಫ್‌ಐಆರ್’ 6 ಟು 6 ಚಿತ್ರೀಕರಣ ಭರದಿಂದ ಸಾಗ್ತಿದೆ. ಇನ್ನು ನಟ ವಿಜಯ್ ರಾಘವೇಂದ್ರ ಅವರ ಹೊಸ ಗೆಟಪ್ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್

    ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್

    ಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಅವರು ನಾಯಕನಾಗಿ ನಟಿಸಿರುವ ಒಂದೇ ಒಂದು ಸಿನಿಮಾ ಈವರೆಗೂ ರಿಲೀಸ್ ಆಗಿಲ್ಲ. ಆದರೆ, ಮೇಲಿಂದ ಮೇಲೆ ಅವರ ಸಿನಿಮಾಗಳು ಸೆಟ್ಟೇರುತ್ತಿವೆ. ಈಗಾಗಲೇ ಅವರ ಕೈಯಲ್ಲಿ ಮೂರು ಚಿತ್ರಗಳಿವೆ. ಅದರಲ್ಲಿ ಎರಡು ಚಿತ್ರಗಳು ಬಿಡುಗಡೆಗೂ ಸಿದ್ಧವಾಗಿವೆ. ಈಗ ನಾಲ್ಕನೇ ಚಿತ್ರಕ್ಕೆ ಅವರು ಸಹಿ ಮಾಡಿದ್ದಾರೆ. ಮೊನ್ನೆಯಷ್ಟೇ ಅವರ ಮತ್ತೊಂದು ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ಹಂಟರ್ ಎಂದು ಹೆಸರಿಡಲಾಗಿದೆ. ಸ್ವತಃ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ, ನಿರಂಜನ್ ಗೆ ಶುಭ ಕೋರಿದ್ದಾರೆ. ಇದನ್ನೂ ಓದಿ : ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!

    ನಿರಂಜನ್ ಮೊದಲ ಸಿನಿಮಾನೇ ಉಪ್ಪಿ ಜತೆ 
    ದಶಕದ ಹಿಂದೆ ತೆರೆಕಂಡ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಎ’ ಚಿತ್ರವೇ ನಿರಂಜನ್ ನಟನೆ ಮೊದಲ ಸಿನಿಮಾ. ಚಿಕ್ಕ ವಯಸ್ಸಿನಲ್ಲೇ ನಟನಾಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸದಾ ಮಲಗಿರುವ ಚಿಕ್ಕದೊಂದು ಮಗುವಿನ ದೃಶ್ಯವಿದೆ. ಆ ಮಗುವಿಗೆ ಈಗಿನ ನಿರಂಜನ್. ನಂತರ ನಾಟಕ, ಸಿನಿಮಾಗಳತ್ತ ಆಸಕ್ತಿ ಬೆಳೆದು, ಈಗ ಭರವಸೆಯ ನಾಯಕನಾಗಿದ್ದಾರೆ. ಈ ಚಿತ್ರಕ್ಕಾಗಿ ನಿರಂಜನ್ ಕಳೆದ ಆರು ತಿಂಗಳಿಂದ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇವರದ್ದು ಮಾಸ್ ಲುಕ್ ಇರಲಿದೆಯಂತೆ. ಇದನ್ನೂ ಓದಿ : ಅಪ್ಪುವಿನಂತೆ ಸಾವಿನಲ್ಲೂ ಸಾರ್ಥಕತೆ ಮೆರೆದ ಮಾವ ರೇವನಾಥ್

    ತ್ರಿವಿಕ್ರಮ್ ಅವರ ಮೂರನೇ ಕನಸು
    ಕನ್ನಡ ಸಿನಿಮಾ ರಂಗಕ್ಕೆ ‘ಪರಿ’ ಎಂಬ ಸದಭಿರುಚಿತ ಚಿತ್ರ ಕೊಟ್ಟಿರುವ, ನಂತರದ ದಿನಗಳಲ್ಲಿ ‘ಸೀಜರ್’ ಎನ್ನುವ ಮತ್ತೊಂದು ಚಿತ್ರಕ್ಕೆ ಬಂಡವಾಳ ಹೂಡಿದ್ದ ತ್ರಿವಿಕ್ರಮ್ ಸಾಪಲ್ಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸೀಜರ್ ಸಿನಿಮಾದ ನಿರ್ದೇಶಕ ವಿನಯ್ ಕೃಷ್ಣ ಅವರನ್ನೇ ತಮ್ಮ ಮೂರನೇ ಚಿತ್ರಕ್ಕೂ ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದಾರೆ ತ್ರಿವಿಕ್ರಮ್. ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್‍ಕುಮಾರ್ ತಂದೆ ಹೃದಯಾಘಾತದಿಂದ ನಿಧನ

    ಚಂದನ್ ಶೆಟ್ಟಿ ಸಂಗೀತ
    ಸೀಜರ್ ಸಿನಿಮಾ ತಂಡದ ತಾಂತ್ರಿಕ ವರ್ಗವೇ ಈ ಸಿನಿಮಾಗೆ ಕೆಲಸ ಮಾಡುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಚಂದನ್ ಶೆಟ್ಟಿ ಅವರ ಸಂಗೀತ ಸಂಯೋಜನೆಯಲ್ಲಿ ಗೀತೆಗಳು ಮೂಡಿ ಬರಲಿವೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರು ಒಪ್ಪುವಂತಹ ಹಾಡುಗಳು ಈ ಚಿತ್ರದಲ್ಲಿ ಇರಲಿವೆ ಅಂದಿದ್ದಾರೆ ಚಂದನ್ ಶೆಟ್ಟಿ. ಇದನ್ನೂ ಓದಿ : ಪುನೀತ್ ರಾಜ್‍ಕುಮಾರ್ ನೆನಪಿಗೋಸ್ಕರ ಮ್ಯಾರಥಾನ್

    ಸೌಮ್ಯ ಮನನ್
    ಕೇರಳದ ಬೆಡಗಿ ಸೌಮ್ಯ ಮೆನನ್ ಈ ಸಿನಿಮಾದ ನಾಯಕಿ. ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮಲೆಯಾಳಂ ಸಿನಿಮಾದಲ್ಲಿ ನಟಿಸಿದ ಅನುಭವ ಇವರಿಗಿದೆ. ಪ್ರಕಾಶ್ ರಾಜ್, ನಾಜರ್, ಸುಮನ್, ಸಾಧುಲೋಕಿಲ ಸೇರಿದಂತೆ ಅನುಭವಿ ಕಲಾವಿದರ ತಂಡವೇ ಇಲ್ಲಿದೆ.