Tag: Priyank Khargay

  • ADGP ಅಮೃತ್‌ಪೌಲ್ ಸೇಫ್ಟಿಪಿನ್ ಅಷ್ಟೇ, PSI ಅಕ್ರಮದ ಕಿಂಗ್‌ಪಿನ್‌ಗಳು ವಿಧಾನಸೌಧದಲ್ಲಿದ್ದಾರೆ – ಪ್ರಿಯಾಂಕ್‌ ಖರ್ಗೆ

    ADGP ಅಮೃತ್‌ಪೌಲ್ ಸೇಫ್ಟಿಪಿನ್ ಅಷ್ಟೇ, PSI ಅಕ್ರಮದ ಕಿಂಗ್‌ಪಿನ್‌ಗಳು ವಿಧಾನಸೌಧದಲ್ಲಿದ್ದಾರೆ – ಪ್ರಿಯಾಂಕ್‌ ಖರ್ಗೆ

    ಕಲಬುರಗಿ: PSI ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಂಧಿತರಾದ ADGP ಅಮೃತ್ ಪೌಲ್ ಕೇವಲ ಸೇಫ್ಟಿ ಪಿನ್ ಅಷ್ಟೇ. ಮೂಲ ಕಿಂಗ್‌ಪಿನ್‌ಗಳು ವಿಧಾನಸೌಧದಲ್ಲೇ ಇದ್ದಾರೆ ಎಂದು ಕಾಂಗ್ರೆಸ್ ಹಿರಿಯ ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

    ಕಲಬುರಗಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌದದ 3ನೇ ಮಹಡಿಯಲ್ಲಿನ ಅನೇಕರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಮಾಜಿ ಸಿಎಂ ಅವರ ಅಭ್ಯರ್ಥಿಗಳು ಎಷ್ಟು? ಅವರ ಮಗನ ಅಭ್ಯರ್ಥಿಗಳು ಎಷ್ಟು? ಅಂದಿನ ಗೃಹ ಸಚಿವರ ಅಭ್ಯರ್ಥಿಗಳು ಎಷ್ಟು? ಇದೆಲ್ಲವೂ ಹೊರಗೆ ಬರಬೇಕಲ್ವಾ? ನೀವು ಭ್ರಷ್ಟರು ಅಲ್ಲದಿದ್ರೆ PSI ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಸವಾಲು ಎಸೆದಿದ್ದಾರೆ.

    PSI SCAM

    ಇದೇ ವೇಳೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ `ಕರ್ನಾಟಕ ಅತ್ಯಂತ ಭ್ರಷ್ಟ ಸರ್ಕಾರ’ ಎಂದು ಹೆಸರು ಬಂದಿತ್ತು. ದೆಹಲಿಯ ಪ್ರತಿಷ್ಟಿತ ಮ್ಯಾಗಜಿನ್ ಸಹ ಇದನ್ನು ಉಲ್ಲೇಖಿಸಿತ್ತು. ಮತ್ತೆ ಈಗ ಅದೇ ಸುದ್ದಿಯನ್ನೇ ಮರುಪ್ರಕಟ ಮಾಡಬೇಕಿದೆ. ಪಿಎಸ್‌ಐ ಹಗರಣದ ಬಗ್ಗೆ ಸದನದಲ್ಲೇ ಶಾಸಕ ರವಿ ಅವರ ಪ್ರಶ್ನೆಗೆ ಉತ್ತರಿಸಿ ಉನ್ನತ ತಂಡದ ಅಧಿಕಾರಿಗಳು ಕ್ಲೀನ್ ಚಿಟ್ ಕೊಟ್ಟಿರುವುದಾಗಿ ಗೃಹ ಸಚಿವರು ಉತ್ತರಿಸಿದ್ದರು. ಈಗ ಎಡಿಜಿಪಿ ಅರೆಸ್ಟ್ ಆಗಿದ್ದಾರೆ. ಗೃಹ ಸಚಿವರು ನಮ್ಮ ಮೇಲೆ ಟೀಕೆ ಮಾಡುತ್ತಿದ್ದಾರೆ. ಅವರಿಗೆ ಕಾಮನ್ ಸೆನ್ಸ್ ಇಲ್ಲವಾ? ಪಿಎಸ್‌ಐ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದೇ ಸಮರ್ಥಿಸಿದ್ದ ಗೃಹ ಸಚಿವರು ಈಗ ಎಡಿಜಿಪಿ ಸೇರಿದಂತೆ ಸುಮಾರು 60 ಜನ ಅಧಿಕಾರಿಗಳು ಹಾಗೂ ಇತರರು ಅರೆಸ್ಟ್ ಆಗಿದ್ದಾರೆ ಗೃಹ ಸಚಿವರು ಈಗೇನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಾಂಕ್ ಖರ್ಗೆ ಇಲ್ಲದಿರುವ ವಿಷಯವನ್ನು ಸೃಷ್ಟಿಸಿಲು ಪ್ರಯತ್ನಿಸ್ತಿದ್ದಾರೆ: ಡಾ.ಕೆ.ಸುಧಾಕರ್

    ಪ್ರಿಯಾಂಕ್ ಖರ್ಗೆ ಇಲ್ಲದಿರುವ ವಿಷಯವನ್ನು ಸೃಷ್ಟಿಸಿಲು ಪ್ರಯತ್ನಿಸ್ತಿದ್ದಾರೆ: ಡಾ.ಕೆ.ಸುಧಾಕರ್

    ಶಿವಮೊಗ್ಗ: ಪ್ರಿಯಾಂಕ್ ಖರ್ಗೆ ಅವರು ಇಲ್ಲದಿರುವ ವಿಷಯಗಳನ್ನು ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಬಿಟ್ ಕಾಯಿನ್ ವಿಚಾರದ ಬಗ್ಗೆ ಸರಿಯಾದ ತನಿಖೆ ನಡೆದರೆ ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿ ಬರುತ್ತಾರೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ, ಜಿಲ್ಲೆಯ ಶಿಕಾರಿಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಮೊದಲು ಸತ್ಯವನ್ನು ಅರ್ಥ ಮಾಡಿಕೊಂಡು ಮಾತನಾಡುವುದನ್ನು ಕಲಿಯಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಿದೆ ಎಂದರು. ಇದನ್ನೂ ಓದಿ: ಈಗ ಸಿಕ್ಕವರು ಕಿಂಗ್‌ಪಿನ್‌ಗಳಲ್ಲ, ಗೃಹ ಸಚಿವರ ಮೇಲೆಯೇ ನನಗೆ ಅನುಮಾನ – ಪ್ರಿಯಾಂಕ್ ಖರ್ಗೆ

    ದೇಶದಲ್ಲಿ ಬಿಟ್ ಕಾಯಿನ್ ಕಳವಿನ ಬಗ್ಗೆಯಾಗಲಿ, ದುರುಪಯೋಗವಾಗಿದೆ ಎಂಬ ಬಗ್ಗೆಯಾಗಲಿ ಒಂದೇ ಒಂದು ದೂರು ಆದರೂ ದಾಖಲಾಗಬೇಕಿತ್ತು. ಅಂತಹ ಯಾವುದೇ ದಾಖಲಾತಿಗಳೇ ಆಗಿಲ್ಲ. ಭಾರತದಲ್ಲಿ ಸರ್ಕಾರ ಯಾವುದೇ ವಿದೇಶಿ ತನಿಖಾ ತಂಡ ಬಂದು ತನಿಖೆ ನಡೆಸಲು ಅವಕಾಶವಿದೆ ಅಂತ ಸ್ಪಷ್ಟಪಡಿಸಿದೆ ಎಂದರು. ಇದನ್ನೂ ಓದಿ: ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?

  • ಪ್ರಿಯಾಂಕ್ ಖರ್ಗೆಯವರ ಏಜೆಂಟ್ ಆಗಿ ನೀವ್ಯಾಕೆ ಮಾತನಾಡಿದ್ದಿರಾ?: ಪ್ರಮೋದ್ ಮುತಾಲಿಕ್

    ಪ್ರಿಯಾಂಕ್ ಖರ್ಗೆಯವರ ಏಜೆಂಟ್ ಆಗಿ ನೀವ್ಯಾಕೆ ಮಾತನಾಡಿದ್ದಿರಾ?: ಪ್ರಮೋದ್ ಮುತಾಲಿಕ್

    ಕಲಬುರಗಿ: ಪ್ರಿಯಾಂಕ್ ಖರ್ಗೆಯವರ ಏಜೆಂಟ್ ಆಗಿ ನೀವ್ಯಾಕೆ ಮಾತನಾಡಿದ್ದಿರಾ? ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

    ಪ್ರತಾಪ್ ಸಿಂಹ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಏಜೆಂಟ್ ಆಗಿ ನೀವ್ಯಾಕೆ ಮಾತನಾಡಿದ್ದಿರಾ? ನೀವು ಧಾರ್ಮಿಕ ಮುಖಂಡರಾಗಿ ಜನರ ಬಗ್ಗೆ ಮಾತಾಡಿ. ಕ್ರಿಶ್ಚಿಯನ್ ಮತಾಂತರ, ಹಿಂದೂಗಳ ಮೇಲೆ ದಬ್ಬಾಳಿಕೆ ಈ ವಿಚಾರಗಳ ಬಗ್ಗೆ ಮಾತಾಡಲು ನಿಮಗೆ ಏನಾಗಿದೆ? ಖರ್ಗೆ ಅವರು ನಿಮಗೆ ಈ ರೀತಿ ಮಾತನಾಡಲು ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ವರ ಗೈರು – ಮನೆ ಮುಂದೆ ಧರಣಿ ಕುಳಿತ ವಧು

    ಸುಲಫಲ ಶ್ರೀಗಳ ಹೇಳಿಕೆ ಕುರಿತು ಮಾತನಾಡಿದ ಅವರು, ಮಠಾಧಿಪತಿಗಳು ಮಠ, ಧರ್ಮ, ದೇಶ ಉಳಿಸಲು ಕಾರ್ಯ ಮಾಡಬೇಕು. ಗೋಹತ್ಯೆಗಳು ನಡೆಯುತ್ತಿವೆ. ಗೋಹತ್ಯೆ ತಡೆಯಲು ಮಠಾಧೀಶರು ಮುಂದಾಗಬೇಕು. ಗೋಹತ್ಯೆ ನಿಷೇಧ ಮಾಡಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಗೋಹತ್ಯೆ ನಿಷೇಧ ಕಾಯ್ದೆ ಕಾಟಚಾರಕ್ಕೆ ಸೀಮಿತವಾಗಿದೆ ಎಂದು ಕಿಡಿಕಾರಿದರು.

    ಮಸೀದಿಗಳ ಮೇಲೆ ಮೈಕ್ ನಿಷೇಧ ಮಾಡಿ ಹಲವು ದಿನಗಳು ಕಳೆದಿವೆ. ಆದರೆ ಸುಪ್ರೀಂ ಕೋರ್ಟ್ ಆದೇಶ ಇದುವರೆಗೆ ಪಾಲನೆ ಆಗುತ್ತಿಲ್ಲ. ಬೆಳ್ಳಂಬೆಳಗ್ಗೆ ಮಸೀದಿಗಳ ಮೇಲೆ ಮೈಕ್ ಶಬ್ದ ಶುರುವಾಗುತ್ತದೆ. ಇದು ಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆ. ದಿನದಲ್ಲಿ ಐದು ಬಾರಿ ಮಸೀದಿಗಳಲ್ಲಿನ ಪ್ರಾರ್ಥನೆ ಶಬ್ದ ಕಿರಿಕಿರಿಯುಂಟಾಗುತ್ತಿದೆ. ಈ ಬಗ್ಗೆ ಶ್ರೀರಾಮ ಸೇನಾ ಹೋರಾಟ ಶುರು ಮಾಡುತ್ತಿದೆ. ನಮಗೆ ಪ್ರಾರ್ಥನೆ ಮಾಡಲು ಅಭ್ಯಂತರವಿಲ್ಲ. ಆದರೆ ಶಬ್ದಕ್ಕೆ ತಕರಾರು ಇದೆ. ಡಿಸಿ ಕ್ರಮ ಕೈಗೊಳ್ಳದಿದ್ದರೆ ನಾವೇ ಮಸೀದಿಗಳ ಮೇಲಿನ ಮೈಕ್ ಕಿತ್ತು ಬಿಸಾಕ್ತುವಿ. ಅನೇಕ ಮುಸ್ಲಿಂ ದೇಶಗಳಲ್ಲಿಯೇ ಮಸೀದಿಗಳ ಮೈಕ್ ತೆಗೆಯಲಾಗಿದೆ ಎಂದು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು. ಇದನ್ನೂ ಓದಿ: ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ: ಸುಮಲತಾ

  • ಪ್ರಿಯಾಂಕ್ ಖರ್ಗೆ ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ: ರಾಜೂಗೌಡ

    ಪ್ರಿಯಾಂಕ್ ಖರ್ಗೆ ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ: ರಾಜೂಗೌಡ

    ಯಾದಗಿರಿ: ಪ್ರಿಯಾಂಕ್ ಖರ್ಗೆ ಅವರು ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ ಎಂದು ಹುಣಸಗಿ ತಾಲೂಕಿನ ಕೊಡೇಕಲ್ ನಲ್ಲಿ ಶಾಸಕ ರಾಜೂಗೌಡ ವಾಗ್ದಾಳಿ ಮಾಡಿದರು.

    priyank kharge

    ರಾಜ್ಯದಲ್ಲಿ ಬಿಟ್ ಕಾಯಿನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ. ಅವರು ಯಾವ ಯಾವ ಖಾತೆ ನಿರ್ವಹಿಸುತ್ತಿದ್ದಾರೆ ಎನ್ನುವುದು ಮರೆತಿದ್ದಾರೆ. ಒಂದು ಬೆರಳು ನೀವು ನೇರ ಮಾಡಿದರೆ, ನಾಲ್ಕು ಬೆರಳು ನಿಮಗೆ ಉಲ್ಟಾ ತೋರಿಸುತ್ತವೆ. ದಯವಿಟ್ಟು ಬೀಟ್ ಕಾಯಿನ್ ಬಗ್ಗೆ ಇಲ್ಲಸಲ್ಲದ ಹೇಳಿಕೆ ಕೊಡಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ನಾವು ಜೆಡಿಎಸ್‍ನಿಂದ ಪರಿಷತ್‍ಗೆ ಸ್ಪರ್ಧೆ ಮಾಡಲ್ಲ: ಜಿಟಿ ದೇವೇಗೌಡ

    ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿರುವ ಕುರಿತು ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೇ ಅವರೇ ನಿಮ್ಮ ತಂದೆಯವರು ಹೋಮ್ ಮಿನಿಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಹೋಗಿ ಅವರನ್ನು ಕೇಳಿ ಪೊಲೀಸ್ ಇಲಾಖೆ ಏನು ಎಂದು ನಿಮ್ಮಪ್ಪನಿಗೆ ಹೋಗಿ ಕೇಳಿ, ಆಮೇಲೆ ಹೇಳಿಕೆ ಕೊಡಿ. ಅದು ಬಿಟ್ಟು ಬಿಟ್ ಕಾಯಿನ್ ಬಗ್ಗೆ ಸುಮ್ಮನೆ ಹೇಳಿಕೆ ಕೊಡಬೇಡಿ ಎಂದರು.

    ವಿರೋಧ ಪಕ್ಷದಲ್ಲಿದ್ದೀವಿ ಅಂತ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ನೀವು ಮಾಡುವ ಆರೋಪಕ್ಕೆ ಘನತೆ ಇರಬೇಕು. ನಮ್ಮ ಮೇಲೆ ಆರೋಪ ಮಾಡಲು ಯಾವುದೇ ವಿಷಯ ಇಲ್ಲ. ಹೀಗಾಗಿ ಕಾಂಗ್ರೇಸ್ ಅವರು ಬಿಟ್ ಕಾಯಿನ್, ಬಿಟ್ ಕಾಯಿನ್ ಅಂತಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಕಾಂಗ್ರೇಸ್ ಅವರಿಗೆ ಮಾಹಿತಿ ಇಲ್ಲ. ಬಿಟ್ ಕಾಯಿನ್ ಬಗ್ಗೆ ಬೇರೆಯವರನ್ನು ಕೇಳಿ ಹೇಳ್ತಾರೆ. ಜನರಿಗೆ ಬಿಟ್ ಕಾಯಿನ್ ಬಗ್ಗೆ ಗೊಂದಲ ಇದೆ. ಕಾಂಗ್ರೆಸ್ ಅವರು ಜನರ ತಲೆಯಲ್ಲಿ ಹುಳ ಬೀಡುವ ಕೆಲಸ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗರಂ ಅದರು. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ