Tag: Priyakara

  • ಮಾಜಿ ಪ್ರಿಯಕರನ ಕತ್ತು ಹಿಸುಕಿ ಕೊಂದ ಮಹಿಳೆ

    ಮಾಜಿ ಪ್ರಿಯಕರನ ಕತ್ತು ಹಿಸುಕಿ ಕೊಂದ ಮಹಿಳೆ

    ಪಾಟ್ನಾ: 34 ವರ್ಷದ ಮಹಿಳೆಯೊಬ್ಬಳು 21 ವರ್ಷದ ತನ್ನ ಮಾಜಿ ಪ್ರಿಯಕರನನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಮಹಿಳೆಯನ್ನು ಖುದೈಜಾ ಬೇಗಂ ಎಂದು ಗುರುತಿಸಲಾಗಿದ್ದು, ಗರಿಬ್ ಗಂಜ್ ಗ್ರಾಮದ ನಿವಾಸಿಯಾಗಿದ್ದಾಳೆ. ಆಕೆಯ ಪತಿ ಅಸ್ಸಾಂನಲ್ಲಿ ವಾಸವಾಗಿದ್ದು, ಈ ದಂಪತಿ ಎರಡು ಗಂಡು ಮಕ್ಕಳಿವೆ. ಇಬ್ಬರು ಮಕ್ಕಳು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ ಎಂದು ತಿಳಿಸಲಾಗಿದೆ.

    ಬೇಗಂ ಮಾಜಿ ಪ್ರಿಯಕರ ಮೊಹಮ್ಮದ್ ರಂಜಾನ್ ಮದ್ಯಪಾನ ಮಾಡಿ ಆಕೆಯ ಮನೆಗೆ ಬಂದಿದ್ದಾನೆ. ಈ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಕೋಪಗೊಂಡ ಬೇಗಂ ಮದ್ಯ ರಾತ್ರಿ ಮಲಗಿರುವ ವೇಳೆ ಸ್ಕ್ರಾಫ್‍ನಿಂದ ಆತನ ಕತ್ತು ಹಿಸುಕಿ ಕೊಂದಿದ್ದಾಳೆ.

    ಬಳಿಕ ಮುಂಜಾನೆ ಗೌತಮ್ ಬುದ್ಧ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಚಾರವನ್ನೆಲ್ಲಾ ಪೊಲೀಸರಿಗೆ ವಿವರಿಸಿದ್ದಾಳೆ. ಹಾಗಾಗಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡರು. ಇದೀಗ ಮೃತನ ತಂದೆ ನವಿಜಾನ್(60) ಮಹಿಳೆ ವಿರುದ್ಧ ದೂರು ದಾಖಲಿಸಿದ್ದು, ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಅಲ್ಲದೆ ಮೃತನ ತಂದೆ, ಬೇಗಂ ತನ್ನ ಮಗನನ್ನು ಕೊಲ್ಲಲೆಂದು ಮನೆಗೆ ಕರೆಸಿಕೊಂಡಿದ್ದಾಳೆ. ಜೊತೆಗೆ ಆರು ತಿಂಗಳ ಹಿಂದೆ ತನ್ನ ಮಗನೊಂದಿಗೆ ಓಡಿಹೋಗಿದ್ದಳು. ಆದರೆ ಕುಟುಂಬದ ಒತ್ತಡದಿಂದ 5 ದಿನಗಳ ನಂತರ ಮನೆಗೆ ಮತ್ತೆ ಹಿಂದಿರುಗಿದ್ದಳು. ತನ್ನ ಮಗನೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುವ ಸಲುವಾಗಿ ಆಕೆ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.