Tag: priya varrier

  • ‘ವಿಷ್ಣುಪ್ರಿಯ’ ಹಾಡಿಗೆ ಫ್ಯಾನ್ಸ್ ಫಿದಾ: ರೊಮ್ಯಾಂಟಿಕ್ ಜೋಡಿಗೆ ಜೈ

    ‘ವಿಷ್ಣುಪ್ರಿಯ’ ಹಾಡಿಗೆ ಫ್ಯಾನ್ಸ್ ಫಿದಾ: ರೊಮ್ಯಾಂಟಿಕ್ ಜೋಡಿಗೆ ಜೈ

    ತೊಂಬತ್ತರ ದಶಕದ ಸಮ್ಮೋಹಕ ಪ್ರೇಮ ಕಥಾನಕ ಹೊಂದಿರುವ ಚಿತ್ರ `ವಿಷ್ಣುಪ್ರಿಯ’ (Vishnu Priya). ಈ ಹಿಂದೆ ಪಡ್ಡೆಹುಲಿಯಾಗಿ ಭರವಸೆ ಮೂಡಿಸಿದ್ದ ಶ್ರೇಯಸ್ ಮಂಜು (Shreyas K Manju) ವಿಷ್ಣುಪ್ರಿಯನಾಗಿ, ವಿಶಿಷ್ಟವಾದ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಈ ಚಿತ್ರದ ಚೆಂದದ ಹಾಡೊಂದು ವಾರಗಳ ಹಿಂದೆ ಬಿಡುಗಡೆಗೊಂಡಿತ್ತು. ಇದೀಗ ದಿನದಿಂದ ದಿನಕ್ಕೆ ಆ ಹಾಡು ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ. ಕೇಳಿದಾಕ್ಷಣವೇ ಪ್ರೇಮದೂರಿಗೆ ಕೈ ಹಿಡಿದು ಕರೆದೊಯ್ಯುವ ಛಾತಿ ಹೊಂದಿರುವ ಆ ಪ್ರೇಮಗೀತೆ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ, ಮೆಚ್ಚುಗೆ ಗಳಿಸುತ್ತಾ ಮುಂದುವರೆಯುತ್ತಿದೆ.

    ಚಿಗುರು ಸಮಯ ಹಿತವಾದ ಒಂದು ಮೌನ, ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಮೌನ… ಎಂಬ ಈ ಹಾಡು ಸಂಗೀತ, ಸಾಹಿತ್ಯ ಹಾಗೂ ದೃಶ್ಯ ಸೇರಿದಂತೆ ಎಲ್ಲ ಕೋನಗಳಲ್ಲಿಯೂ ಸಮ್ಮೋಹಕವಾಗಿದೆ. ಇದಕ್ಕೆ ಸಾಹಿತ್ಯ ಒದಗಿಸಿರುವವರು ವಿ ನಾಗೇಂದ್ರ ಪ್ರಸಾದ್. ಬಹುಶಃ ಈ ಮೂಲಕ ವರ್ಷಾರಂಭದಲ್ಲಿಯೇ ನವಿರು ಭಾವವೊಂದನ್ನು ನಾಗೇಂದ್ರ ಪ್ರಸಾದ್ ಕೇಳುಗರ ಬೊಗಸೆ ತುಂಬಿಸಿದ್ದಾರೆ. ನಜೀನ್ ಅರ್ಷಾದ್ ಕಂಠಸಿರಿಯಲ್ಲಿ ಈ ಹಾಡು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಈ ಮೂಲಕ ಕೇರಳದ ಪ್ರಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಕನ್ನಡದಲ್ಲಿಯೂ ಕಮಾಲ್ ಮಾಡಿದ್ದಾರೆ.

    ಮತ್ತೆ ಮತ್ತೆ ಕೇಳಿಸಿಕೊಳ್ಳುವ ಗುಣ ಹೊಂದಿರುವ ಈ ಪ್ರೇಮ ಗೀತೆಯ ಪ್ರಭೆಯಲ್ಲಿ ವಿಷ್ಣುಪ್ರಿಯನ ಕ್ರೇಜ್ ಮತ್ತಷ್ಟು ಮಿರುಗುತ್ತಿದೆ. ಈ ವರ್ಷದ ಮೆಲೋಡಿಯಸ್ ಹಾಡೆಂದು ಗುರುತಿಸಿಕೊಳ್ಳುವ ಎಲ್ಲ ಗುಣಗಳೂ ಈ ಚಿಗುರು ಚಿಗುರು ಹಾಡಿಗಿದೆ. ಅಂದಹಾಗೆ, ಇದು ವಿ.ಕೆ ಪ್ರಕಾಶ್ ನಿರ್ದೇಶನದ ಚಿತ್ರ.

    ತೊಂಬತ್ತರ ದಶಕದಲ್ಲಿ ಘಟಿಸುವ ಈ ಕಥನದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ನಟಿಸಿದ್ದರೆ, ಒರು ಅಡಾರ್ ಲವ್ ಖ್ಯಾತಿಯ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಈ ಪ್ರೇಮಕಥೆ ಅದೆಷ್ಟು ತಾಜಾತನದಿಂದ ನಳನಳಿಸುತ್ತಿದೆ ಎಂಬುದರ ಸ್ಪಷ್ಟ ಸೂಚನೆಯೊಂದು ಈ ಹಾಡಿನ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ.

     

    ಗಂಡುಗಲಿ ಕೆ.ಮಂಜು ನಿರ್ಮಾಣದ ವಿಷ್ಣುಪ್ರಿಯ ಚಿತ್ರದಲ್ಲಿ ಸುಚೇಂದ್ರಪ್ರಸಾದ್, ಅಚ್ಯುತ್ ಕುಮಾರ್ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಪ್ರೇಮಕಥೆ ಮಾತ್ರವಲ್ಲ; ತೊಂಬತ್ತರ ದಶಕದಲ್ಲಿ ನಡೆದಿದ್ದ ನೈಜ ಕಥನವೂ ಹೌದು. ಈ ಹಿಂದೆ ಮೊದಲ ಚಿತ್ರ ಪಡ್ಡೆಹುಲಿಯಲ್ಲಿ ಮೈದುಂಬಿ ನಟಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದವರು ಶ್ರೇಯಸ್ ಮಂಜು. ಅವರ ಪಾತ್ರದ ಚಹರೆಗಳು ಈ ಹಾಡಿನ ಮೂಲಕ ಜಾಹೀರಾಗಿದೆ. ಈ ಹಾಡು ಕೇಳಿದವರು, ನೋಡಿದವರೆಲ್ಲ ವಿಷ್ಣುಪ್ರಿಯನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

  • Priya Varrier: ಎದೆಯ ಗೀಟು ಕಾಣುವಂತೆ ಬೋಲ್ಡ್‌ ಆಗಿ ಪೋಸ್‌ ಕೊಟ್ಟ ನಟಿ

    Priya Varrier: ಎದೆಯ ಗೀಟು ಕಾಣುವಂತೆ ಬೋಲ್ಡ್‌ ಆಗಿ ಪೋಸ್‌ ಕೊಟ್ಟ ನಟಿ

    ಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ (Priya Varrier) ಅವರು ಇದೀಗ ಹೊಸ ಫೋಟೋಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ಎದೆಯ ಗೀಟು ಕಾಣುವಂತೆ ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಮಲೆಯಾಳಿ ಕುಟ್ಟಿಯ ನಯಾ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಓವರ್ ನೈಟ್‌ನಲ್ಲಿ ಪಡ್ಡೆಹುಡುಗರ ಕ್ರಶ್ ಕ್ವೀನ್ ಆಗಿ ಕ್ರೇಜ್ ಹುಟ್ಟು ಹಾಕಿದ ಪ್ರಿಯಾ ವಾರಿಯರ್ ಈಗ ಮತ್ತೆ ನ್ಯೂಸ್‌ನಲ್ಲಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ನಟಿ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಎದೆಯ ಭಾಗ ಕಾಣುವಂತೆ ಬೋಲ್ಡ್ ಆಗಿ ನಟಿ ಪೋಸ್ ನೀಡಿದ್ದಾರೆ. ಪ್ರಿಯಾ ಲುಕ್‌ಗೆ ಪಡ್ಡೆಹೈಕ್ಳು ಫಿದಾ ಆಗಿದ್ದಾರೆ.‌ ಇದನ್ನೂ ಓದಿ:Bigg Boss: ನಮ್ಮ ಹುಡುಗಿ ನಿನ್ನ ಲವ್‌ನಲ್ಲಿ ಬೀಳಲ್ಲ- ಕಾರ್ತಿಕ್‌ಗೆ ತನಿಷಾ ಎಚ್ಚರಿಕೆ

    ಮಲಯಾಳಂ, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಿಯಾ ಸಿನಿಮಾ ಮಾಡ್ತಿದ್ದಾರೆ. ಸೂಪರ್ ಹಿಟ್ ಅನಿಸುವಂತಹ ಸಿನಿಮಾ ನಿಡದೇ ಇದ್ರೂ ಪ್ರಿಯಾಗೆ ನಟಿಸಲು ಡಿಮ್ಯಾಂಡ್ ಇದೆ.

    ಸದ್ಯ ಕನ್ನಡದಲ್ಲಿ ‘ವಿಷ್ಣುಪ್ರಿಯಾ’ (Vishnupriya) ಸಿನಿಮಾ ಬೆಳ್ಳಿತೆರೆಗೆ ಬರಲು ರೆಡಿಯಾಗಿದೆ. ಶ್ರೇಯಸ್ ಮಂಜುಗೆ ನಾಯಕಿಯಾಗಿ ಪ್ರಿಯಾ ನಟಿಸಿದ್ದಾರೆ.

  • ಕಡಲ ಕಿನಾರೆಯಲ್ಲಿ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್

    ಕಡಲ ಕಿನಾರೆಯಲ್ಲಿ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್

    ಮಾಲಿವುಡ್ (Mollywood) ನಟಿ ಪ್ರಿಯಾ ವಾರಿಯರ್ ಸದ್ಯ ಮಾಲ್ಡೀವ್‌ಗೆ ಹಾರಿದ್ದಾರೆ. ಕಡಲ ಕಿನಾರೆಯಲ್ಲಿ ಸಖತ್ ಮೋಜು- ಮಸ್ತಿ ಮಾಡುತ್ತಾ ಕಾಲು ಕಳೆಯುತ್ತಾರೆ. ನಟಿಯ ಹಾಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ‘ಒರು ಅಡಾರ್ ಲವ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ಪ್ರಿಯಾ ವಾರಿಯರ್ ಅವರು ಕಣ್ಣು ಹೊಡೆದು ದೇಶದೆಲ್ಲಡೆ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದರು. ಸದ್ಯ ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚ್ತಿರುವ ನಟಿ ಪ್ರಿಯಾ ‘ವಿಷ್ಣುಪ್ರಿಯಾ’ (Vishnu Priya) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ

    ಬಹುಭಾಷಾ ನಟಿ ಪ್ರಿಯಾ, ಮಾಲ್ಡೀವ್ಸ್‌ನಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಕಡಲ ಕಿನಾರೆಯಲ್ಲಿ ಟೂ ಪೀಸ್ ಬಿಕಿನಿಯಲ್ಲಿ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಹಾಟ್ ಅವತಾರಕ್ಕೆ ಪಡ್ಡೆಹುಡುಗರು ಫುಲ್ ಫಿದಾ ಆಗಿದ್ದಾರೆ. ಸದ್ಯ ನಟಿಯ ಬಿಕಿನಿ ಫೋಟೋಗಳು ಸದ್ದು ಮಾಡುತ್ತಿದೆ.

    ಮೊದಲ ಸಿನಿಮಾದಲ್ಲಿ ಸಂಚಲನ ಮೂಡಿಸಿದ ಹಾಗೇ ನಂತರದ ಸಿನಿಮಾಗಳಲ್ಲಿ ಪ್ರಿಯಾಗೆ ಸಕ್ಸಸ್ ತಂದು ಕೊಡಲಿಲ್ಲ. ಸಾಲು ಸಾಲು ಚಿತ್ರಗಳನ್ನ ಒಪ್ಪಿಕೊಂಡಿರುವ ನಟಿಗೆ ಲಕ್ ಬದಲಾಗುತ್ತಾ.? ಮತ್ತೆ ಸಂಚಲನ ಮೂಡಿಸುತ್ತಾರೆ ಕಾದುನೋಡಬೇಕಿದೆ.

  • ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ

    ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ

    ಮಾಲಿವುಡ್ (Mollywood) ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಸದ್ಯ ಮಾಲ್ಡೀವ್ಸ್ (Maldives) ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ತನ್ನ ಬೋಲ್ಡ್ ಲುಕ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಈ ಕುರಿತ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತನ್ನ ಕಣ್ಸನ್ನೆನಿಂದ ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಪ್ರಿಯಾ ವಾರಿಯರ್, ಬಳಿಕ ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದರು. ಇದೀಗ ‘ವಿಷ್ಣು ಪ್ರಿಯಾ’ (Vishnupriya) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ನಟ ಶ್ರೇಯಸ್‌ಗೆ (Shreyas) ಜೋಡಿಯಾಗಿ ಬರುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.

    ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ಗೆ ಬ್ರೇಕ್ ಹಾಕಿ, ವೆಕೇಷನ್‌ಗಾಗಿ ಮಾಲ್ಡೀವ್ಸ್‌ಗೆ ನಟಿ ಪ್ರಿಯಾ ಹಾರಿದ್ದಾರೆ. ಮಾಲ್ಡೀವ್ಸ್‌ ಸುಂದರ ತಾಣಗಳಿಗೆ ಭೇಟಿ ಕೊಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಶಾರ್ಟ್ ಡ್ರೆಸ್ ಧರಿಸಿ ಪ್ರಿಯಾ ಮಸ್ತ್ ಆಗಿ ಮಿಂಚಿದ್ದಾರೆ. ನಟಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಪಾಲಕ್ ಜೊತೆ ಕಿಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ರಾಹಿಂ ಅಲಿ ಖಾನ್

    ಪ್ರಿಯಾ ವಾರಿಯರ್ ಕೈಯಲ್ಲಿ 6ಕ್ಕೂ ಹೆಚ್ಚು ಸಿನಿಮಾಗಳಿವೆ. ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಹಲವು ಚಿತ್ರಗಳು ಈ ವರ್ಷ ತೆರೆಗೆ ಬರಲಿದೆ. ಕಣ್ಸನ್ನೆ ಬೆಡಗಿ ಸಿನಿಮಾಗಳನ್ನ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. Vishnupriya ಸಿನಿಮಾದ ರೊಮ್ಯಾಂಟಿಕ್ ಲವ್ ಸ್ಟೋರಿ ಹೇಳಲು ರೆಡಿಯಾಗಿದ್ದಾರೆ.

    ರಾತ್ರೋ ರಾತ್ರಿ ಕಣ್ಣು ಹೊಡೆದು ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಸುಂದರಿ ಪ್ರಿಯಾಗೆ ‘ಒರು ಆಡಾರ್ ಲವ್’ ಚಿತ್ರ 20 ಸೆಕೆಂಡ್ ಕಣ್ಣು ಹೊಡೆದು ಫೇಮಸ್ ಆಗಿದ್ದರು. ಅದೆಷ್ಟರ ಮಟ್ಟಿಗೆ ಪ್ರಿಯಾ ಹವಾ ಕ್ರಿಯೆಟ್ ಆಗಿತ್ತು ಅಂದ್ರೆ ಬಾಲಿವುಡ್ ಅಂಗಳದವೆರೆಗೂ ನಟಿಯ ಹೆಸರು ಚಾಲ್ತಿಯಲ್ಲಿತ್ತು. ಅದೆಷ್ಟು ಬೇಗ ಫೇಮಸ್ ಆದ್ರೋ ಅಷ್ಟೇ ಬೇಗ ಪ್ರಿಯಾ ಹವಾ ಕಮ್ಮಿಯಾಯ್ತು. ಆದ್ರೂ ತಲೆ ಕೆಡಿಸಿಕೊಳ್ಳದೇ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    ಮೊಟ್ಟ ಮೊದಲ ಬಾರಿಗೆ ಕನ್ನಡದ ಸಿನಿಮಾಗೆ ಮಾಲಿವುಡ್ ನಟಿ ಪ್ರಿಯಾ ಬಣ್ಣ ಹಚ್ಚಿದ್ದಾರೆ. ‘ವಿಷ್ಣುಪ್ರಿಯಾ’ ಸಿನಿಮಾದಲ್ಲಿ ಪಡ್ಡೆಹುಲಿ ಖ್ಯಾತಿಯ ಶ್ರೇಯಸ್‌ ಮಂಜು (Shreyas Manju) ನಾಯಕಿಯಾಗಿ ನಟಿಸಿದ್ದಾರೆ. ಕಾರಣಾಂತಗಳಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ಈಗ ಮೇ-ಜೂನ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದನ್ನೂ ಓದಿ:ಸಿಡ್ನಿ ವರನ ಜೊತೆ ನಟಿ ಸುಕೃತಾ ನಾಗ್ ಮದುವೆ ಫಿಕ್ಸ್

     

    View this post on Instagram

     

    A post shared by Shreyas k manju (@shreyaskmanju5)

    ಮಾಲಿವುಡ್ (Mollywood) ನಿರ್ದೇಶಕ ವಿ.ಕೆ ಪ್ರಕಾಶ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. Geetha Govindam ಖ್ಯಾತಿಯ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ವಿಷ್ಣುಪ್ರಿಯಾ’ ಮೂಲಕ ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ ಹೇಳಲು ಶ್ರೇಯಸ್-ಪ್ರಿಯಾ ರೆಡಿಯಾಗಿದ್ದು, ಈ ಸಿನಿಮಾ ಚಿತ್ರಮಂದಿರಲ್ಲಿ ಮೋಡಿ ಮಾಡುತ್ತಾ ಎಂದು ಕಾದುನೋಡಬೇಕಿದೆ.

  • ಸ್ವಿಮ್ಮಿಂಗ್ ಸೂಟ್‌ನಲ್ಲಿ ಹಲ್‌ಚಲ್‌ ಎಬ್ಬಿಸಿದ ಕಣ್ಸನ್ನೆ ಹುಡುಗಿ ಪ್ರಿಯಾ

    ಸ್ವಿಮ್ಮಿಂಗ್ ಸೂಟ್‌ನಲ್ಲಿ ಹಲ್‌ಚಲ್‌ ಎಬ್ಬಿಸಿದ ಕಣ್ಸನ್ನೆ ಹುಡುಗಿ ಪ್ರಿಯಾ

    `ಒರು ಆಡಾರ್ ಲವ್’ (Oru Adaar Love) ಚಿತ್ರದ ಮೂಲಕ ಕಣ್ಸನ್ನೆ ಹುಡುಗಿಯಾಗಿ ನ್ಯಾಷನಲ್ ಕ್ರಶ್ ಪಟ್ಟಕ್ಕೇರಿದ ನಟಿ ಪ್ರಿಯಾ ವಾರಿಯರ್(Priya Varrier) ಮಲಯಾಳಂ ಸಿನಿಮಾ ಜೊತೆ ಸೌತ್ ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಸ್ವಿಮ್ ಸೂಟ್‌ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತಮ್ಮ ಕಣ್ಸನ್ನೆ ವೀಡಿಯೋ ಮೂಲಕ ರಾತ್ರೋ ರಾತ್ರಿ ಫೇಮಸ್ ಆಗಿ ನಟಿ ಪ್ರಿಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಬಿಗ್ ಬ್ರೇಕ್‌ಗಾಗಿ ನಟಿ ಕಾಯ್ತಿದ್ದಾರೆ. ಸ್ವಿಮ್ಮಿಂಗ್ ಸೂಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಹಾಟ್ ಆಗಿ ಪೋಸ್ ಮಾಡಿದ್ದಾರೆ. ಮತ್ತೇರಿಸುವ ಲುಕ್‌ನಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ಹಾರ್ಟಿಗೆ ಹಲ್‌ಚಲ್ ಎಬ್ಬಿಸಿದ್ದಾರೆ. ಇದನ್ನೂ ಓದಿ:ಲಾಡ್ಜ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ನಟಿ ಆಕಾಂಕ್ಷಾ ಮೋಹನ್

    ಇನ್ನೂ ಶ್ರೇಯಸ್ ಮಂಜು ಅವರಿಗೆ ಜೋಡಿಯಾಗಿ ಕನ್ನಡದ `ವಿಷ್ಣು ಪ್ರಿಯಾ’ ಚಿತ್ರದಲ್ಲೂ ನಟಿಸಿದ್ದಾರೆ. ಸದ್ಯ ಮಲಯಾಳಂ, ತೆಲುಗು, ಕನ್ನಡ, ಹಿಂದಿ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.

    ಕಣ್ಣೋಟದ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟಿ ಪ್ರಿಯಾ ವಾರಿಯರ್ ಮುಂಬರುವ ಸಿನಿಮಾಗಳು ಅದೆಷ್ಟರ ಮಟ್ಟಿಗೆ ಸದ್ದು ಮಾಡುತ್ತೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಅಂದು ಕಣ್ಸನ್ನೆ, ಇಂದು ಮಾದಕ ಫೋಟೋ ಹರಿಬಿಟ್ಟು ವೈರಲ್ ಆದ ಪ್ರಿಯಾ ವಾರಿಯರ್

    ಅಂದು ಕಣ್ಸನ್ನೆ, ಇಂದು ಮಾದಕ ಫೋಟೋ ಹರಿಬಿಟ್ಟು ವೈರಲ್ ಆದ ಪ್ರಿಯಾ ವಾರಿಯರ್

    ಕೇವಲ ಕಣ್ಸನ್ನೆ ಮೂಲಕ ರಾತ್ರೋರಾತ್ರಿ ಫೇಮಸ್ ಆದ ಹುಡುಗಿ ಪ್ರಿಯಾ ವಾರಿಯರ್. ಕೇವಲ ಕಣ್ಸನ್ನೆ ಮೂಲಕ ಅಪಾರ ಅಭಿಮಾನಿಗಳನ್ನೂ ಹೊಂದಿರುವ ಪ್ರಿಯಾ ವಾರಿಯರ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಮಾದಕ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಪಡ್ಡೆ ಹುಡುಗರಂತೂ ಪ್ರಿಯಾ ಫೋಟೋಗೆ ಫಿದಾ ಆಗಿದ್ದಾರೆ. ಸೆಕ್ಸಿ ಲುಕ್ ಗೆ ಬಿದ್ದೇ ಹೋಗಿದ್ದಾರೆ.

    ಮುಂಬೈ ಹೋಟೆಲ್ ವೊಂದರಲ್ಲಿ ಪ್ರಿಯಾ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಹಾಟ್ ಹಾಟ್ ಆಗಿ ಕಂಡಿದ್ದಾರೆ. ಅದರಲ್ಲೂ ಕೆಂಪು ಬಣ್ಣದ ಟಾಪ್ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ, ಕುಳಿತಿರುವ ಭಂಗಿ ಮಾತ್ರ ಅರಸಿಕರ ಎದೆಯಲ್ಲೂ ರಸಿಕತೆ ಹುಟ್ಟಿಸುವಂತಿದೆ. ಎದೆಸೀಳು ಕಾಣಿಸುವಂತೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆ ಫೋಟೋಗಳು ವೈರಲ್ ಆಗಿವೆ. ಲಕ್ಷಾಂತರ ಲೈಕ್ಸ್ ಕೂಡ ಬಂದಿವೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

    ಇನ್ಸ್ಟಾದಲ್ಲಂತೂ ಸಖತ್ ಆಕ್ಟಿವ್ ಆಗಿರುವ ಪ್ರಿಯಾ ವಾರಿಯರ್ ಏಳು ಮಿಲಿಯನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಅಲ್ಲದೇ, ಇತರ ಸೋಷಿಯಲ್ ಮೀಡಿಯಾಗಳಲ್ಲೂ ಅವರು ಸಕ್ರೀಯರಾಗಿದ್ದಾರೆ. ಸದ್ಯ ಕನ್ನಡದಲ್ಲೂ ಅವರು ಒಂದು ಸಿನಿಮಾ ಮಾಡಿದ್ದು, ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ವಿಷ್ಣುಪ್ರಿಯಾ ಹೆಸರಿನ ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ.

    ಸದ್ಯ ಪ್ರಿಯಾ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್ ಪ್ರಾಜೆಕ್ಟ್ ವೊಂದರಲ್ಲಿ ಭಾಗವಹಿಸಲು ಅವರು ಮುಂಬೈನಲ್ಲಿದ್ದಾರೆ. ತಾವು ಉಳಿದುಕೊಂಡಿರುವ ಹೋಟೆಲ್ ನಲ್ಲಿ ಈ ಫೋಟೋಗಳನ್ನು ಸೆರೆ ಹಿಡಿದ್ದಾರೆ. ಈ ಫೋಟೋಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇನ್‍ಸ್ಟಾಗ್ರಾಮ್ ತೊರೆದ ಕಣ್ಸನ್ನೆ ಚೆಲುವೆ

    ಇನ್‍ಸ್ಟಾಗ್ರಾಮ್ ತೊರೆದ ಕಣ್ಸನ್ನೆ ಚೆಲುವೆ

    ತಿರುವನಂತಪುರಂ: ತನ್ನ ಕಣ್ಸನ್ನೆ ಮೂಲಕವೇ ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿ, ಕಣ್ಸನ್ನೆ ಚೆಲುವೆ ಎಂದೇ ಖ್ಯಾತಿ ಪಡೆದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಮ್‍ನಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ.

    ಹೌದು ಕಣ್ಸನ್ನೆ ಮೂಲಕವೇ ಬಾಲಿವುಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಫರ್ ಗಿಟ್ಟಿಸಿಕೊಳ್ಳುವ ಮೂಲಕ ಬಹುಬೇಡಿಕೆ ನಟಿಯಾಗಿರುವ ಪ್ರಿಯಾ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದು, ಇದರ ಭಾಗವಾಗಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಇದನ್ನು ಕಂಡ ಅವರ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದೆ. ಇದ್ದಕ್ಕಿದ್ದಂತೆ ಈ ನಿರ್ಧಾರವನ್ನೇಕೆ ಮಾಡಿದರು ಎಂದು ಯೋಚಿಸುತ್ತಿದ್ದಾರೆ.

    ಪ್ರಿಯಾ ವಾರಿಯರ್ ‘ಒರು ಅಡಾರ್ ಲವ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಸಾಕಷ್ಟು ಸಿನಿಮಾಗಳ ಆಫರ್ ಬರಲಾರಂಭಿಸಿದವು. ಸದ್ಯ ಬಹುಬೇಡಿಕೆ ನಟಿಯಾಗಿದ್ದು, ಕನ್ನಡದ ಎರಡು ಸಿನಿಮಾ ಸೇರಿದಂತೆ ಹಲವು ಸಿನಿಮಾಗಳನ್ನು ಇನ್ನೂ ಕೈಯ್ಯಲ್ಲಿಟ್ಟುಕೊಂಡಿದ್ದಾರೆ. ಹೀಗೆ ಜನಪ್ರಿಯತೆ ಗಳಿಸುತ್ತಿರುವಾಗಲೇ ಇದ್ದಕ್ಕಿದ್ದಂತೆ ಇನ್‍ಸ್ಟಾಗ್ರಾಮ್‍ನಿಂದ ದೂರವಾಗಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಪ್ರಿಯಾ ವಾರಿಯರ್ 7.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಮಾತ್ರವಲ್ಲದೆ ಒಂದೇ ದಿನ 6 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದರು. ಆದರೂ ಸಹ ಇನ್‍ಸ್ಟಾದಿಂದ ದೂರ ಉಳಿದಿದ್ದಾರೆ. ತಮ್ಮ ಸಿನಿಮಾಗಳ ಕುರಿತು ಆಗಾಗ ಅಪ್‍ಡೇಟ್ ನೀಡುತ್ತಿದ್ದ ಪ್ರಿಯಾ ವಾರಿಯರ್ ಇದೀಗ ಇದ್ದಕ್ಕಿದ್ದಂತೆ ಮಾಯವಾಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಫೇಸ್ಬುಕ್ ಖಾತೆಯನ್ನು ಉಳಿಸಿಕೊಂಡಿದ್ದು, ಇದರಲ್ಲಿ ತಮ್ಮ ಸಿನಿಮಾಗಳ ಕುರಿತು ಅಪ್‍ಡೇಟ್ ನೀಡುತ್ತಿದ್ದಾರೆ.

    ಇನ್‍ಸ್ಟಾ ಖಾತೆ ಡಿಲೀಟ್ ಮಾಡಲು ಕಾರಣವೇನು ಗೊತ್ತಾ?
    ತಮ್ಮ ಜನಪ್ರಿಯತೆಯಿಂದಾಗಿಯೇ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್‍ಗಳನ್ನು ಹೊಂದಿದ್ದ ಪ್ರಿಯಾ ವಾರಿಯರ್ ಶನಿವಾರ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಅಶ್ಲೀಲ ಕಮೆಂಟ್‍ಗಳು, ನಿಂದನೆ ಹಾಗೂ ವಿಪರೀತ ಟ್ರೋಲ್‍ಗೆ ಒಳಗಾಗಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ಇದರಿಂದ ಅಭಿಮಾನಿಗಳಿಗೆ ಬೇಸರವಾಗಿದ್ದು, ಮತ್ತೆ ಇನ್‍ಸ್ಟಾಗೆ ಮರಳಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.

    ಪ್ರಿಯಾ ವಾರಿಯರ್ ಸದ್ಯ ನಿತಿನ್ ಅಭಿನಯದ ‘ಚೆಕ್’ ತೆಲುಗು ಚಿತ್ರದಲ್ಲಿ ಬ್ಯುಸಿಯಾಗಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದೆ. ಹೀಗಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

  • ಬೆಂಬಲ ನೀಡಿ ಎಂದು ಕನ್ನಡದಲ್ಲಿ ಪೋಸ್ಟ್ ಮಾಡಿದ ಪ್ರಿಯಾ ವಾರಿಯರ್

    ಬೆಂಬಲ ನೀಡಿ ಎಂದು ಕನ್ನಡದಲ್ಲಿ ಪೋಸ್ಟ್ ಮಾಡಿದ ಪ್ರಿಯಾ ವಾರಿಯರ್

    ಬೆಂಗಳೂರು: ‘ಒರು ಆಡಾರ್ ಲವ್’ ಸಿನಿಮಾದಲ್ಲಿ ಕಣ್ಸನ್ನೆಯ ಒಂದೇ ಒಂದು ದೃಶ್ಯದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದ ನಟಿ ಪ್ರಿಯಾ ವಾರಿಯರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಕನ್ನಡದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಹೌದು. ಇನ್‍ಸ್ಟಾಗ್ರಾಮ್‍ನಲ್ಲಿ ಕನ್ನಡದಲ್ಲಿ ಪೋಸ್ಟ್ ಮಾಡಿ ಬೆಂಬಲ ನೀಡಿ ಎಂದು ಪ್ರಿಯಾ ಮನವಿ ಮಾಡಿಕೊಂಡಿದ್ದಾರೆ. ‘ವಿಷ್ಣು ಪ್ರಿಯಾ’ ಚಿತ್ರದ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸುತ್ತಿರುವ ಪ್ರಿಯಾ ವಾರಿಯರ್ ತಮ್ಮ ಚಿತ್ರಕ್ಕೆ ಬೆಂಬಲಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್ ನಾಯಕರಾಗಿದ್ದು, ಮಲಯಾಳಂ, ತಮಿಳಿನಲ್ಲಿ ಸಿನಿಮಾಗಳನ್ನು ನಿರ್ದೇಶಿಸಿರುವ ವಿ.ಕೆ ಪ್ರಕಾಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

    https://www.instagram.com/p/B-Zw5O8ASHh/

    ‘ವಿಷ್ಣು ಪ್ರಿಯ’ ಚಿತ್ರದ ಫಸ್ಟ್ ಲುಕ್ ಇದೇ ತಿಂಗಳ 5ರಂದು ಬಿಡುಗಡೆಯಾಗುತ್ತಿದೆ. ಈ ಸಂಗತಿಯನ್ನು ಪ್ರಿಯಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ನನ್ನ ಎಲ್ಲಾ ಕನ್ನಡದ ಪ್ರೀತಿಯ ಅಭಿಮಾನಿಗಳಿಗೆ ಪ್ರಿಯ ಮಾಡುವ ನಮಸ್ಕಾರಗಳು. ನನ್ನ ಮೊದಲನೇ ಕನ್ನಡದ ಸಿನಿಮಾ ” ವಿಷ್ಣು ಪ್ರಿಯ”ದ ಫಸ್ಟ್ ಲುಕ್ ಏಪ್ರಿಲ್ 5ಕ್ಕೆ ಬಿಡುಗಡೆ ಆಗಲಿದೆ, ಎಲ್ಲರೂ ದಯವಿಟ್ಟು ಶೇರ್ ಮಾಡಿ ಹಾಗೂ ಸಪೋರ್ಟ್ ಮಾಡಿ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನಮ್ಮ ಸಿನಿಮಾ ತಂಡದ ಮೇಲೆ ಇರಲಿ’ ಎಂದು ಪ್ರಿಯಾ ಕನ್ನಡದಲ್ಲಿ ಪೋಸ್ಟ್ ಮಾಡಿದ್ದಾರೆ.

    ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಪ್ರಿಯಾ ಮಾತನಾಡುತ್ತಾ ಕನ್ನಡ ಸಿನಿಮಾಗಳ ಬಗ್ಗೆ ನನಗೆ ತಿಳಿದಿದೆ. ಇಲ್ಲಿ ವಿಭಿನ್ನ ಚಿತ್ರಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ಕನ್ನಡದಿಂದ ಆಫರ್ ಬಂದಾಗ ಹೆಚ್ಚು ಯೋಚನೆ ಮಾಡದೆ ಒಪ್ಪಿದೆ ಎಂದು ಹೇಳಿಕೊಂಡಿದ್ದರು. ಈಗ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಬಗ್ಗೆ ಕನ್ನಡದಲ್ಲಿಯೇ ಪ್ರಿಯಾ ಪೋಸ್ಟ್ ಮಾಡಿ ಕನ್ನಡ ಅಭಿಮಾನಗಳ ಮೆಚ್ಚುಗೆ ಗಳಿಸಿದ್ದಾರೆ.

    90ರ ದಶಕದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು, ಈ ಕಥೆಯ ಎಳೆಯನ್ನು ನಿರ್ದೇಶಕರಿಗೆ ನಿರ್ಮಾಪಕ ಕೆ. ಮಂಜು ಅವರೇ ಹೇಳಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ‘ವಿಷ್ಣು ಪ್ರಿಯಾ’ ಹೆಸರಿಡಲು ಸಾಹಸಸಿಂಹ ವಿಷ್ಣುವರ್ಧನ್ ಅವರು ಕಾರಣರಂತೆ. ಹೌದು. ಮಂಜು ಅವರು ವಿಷ್ಣುವರ್ಧನ್ ಅವರ ಮೇಲಿಟ್ಟಿರುವ ಪ್ರೀತಿ, ಅಭಿಮಾನದಿಂದ ತಮ್ಮ ಪುತ್ರನ ಸಿನಿಮಾಕ್ಕೆ ‘ವಿಷ್ಣು ಪ್ರಿಯ’ ಎಂಬ ಹೆಸರನ್ನಿಟ್ಟಿದ್ದಾರೆ. ಈ ಸಿನಿಮಾ ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

  • ಬಾಹುಬಲಿ ಶೂಟಿಂಗ್ ನಡೆದ ಕೇರಳದ ಕಾಡಲ್ಲಿ `ವಿಷ್ಣುಪ್ರಿಯ’ನ ಸಾಹಸ!

    ಬಾಹುಬಲಿ ಶೂಟಿಂಗ್ ನಡೆದ ಕೇರಳದ ಕಾಡಲ್ಲಿ `ವಿಷ್ಣುಪ್ರಿಯ’ನ ಸಾಹಸ!

    ಹಿಂದೆ ಪಡ್ಡೆಹುಲಿ ಚಿತ್ರದೊಂದಿಗೆ ಮಾಸ್ ಲುಕ್ಕಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದವರು ಶ್ರೇಯಸ್. ಮೊದಲ ಚಿತ್ರದಲ್ಲಿಯೇ ಸ್ಟಾರ್ ಗಿರಿ  ದಕ್ಕಿಸಿಕೊಂಡಿದ್ದ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅವರ ಎರಡನೇ ಚಿತ್ರ ವಿಷ್ಣುಪ್ರಿಯ. ರಾಜ್ಯದ ನಾನಾ ಭಾಗಗಳಲ್ಲಿ ವೇಗವಾಗಿ ಚಿತ್ರೀಕರಣ ನಡೆಸಿಕೊಂಡಿದ್ದ ಚಿತ್ರತಂಡವೀಗ ಕೇರಳದ ಸುಂದರ ತಾಣಗಳಿಗೆ ಶಿಫ್ಟಾಗಿದೆ. ಕಳೆದ ಹತ್ತು ದಿನಗಳಿಂದ ವಿಷ್ಣುಪ್ರಿಯ ಚಿತ್ರದ ಹಾಡುಗಳು ಮತ್ತು ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಾಹುಬಲಿಯಂಥಾ ಸಿನಿಮಾಗಳ ಚಿತ್ರೀಕರಣ ನಡೆದಿದ್ದ ಸ್ಥಳಗಳಲ್ಲಿಯೇ ಈ ಚಿತ್ರದ ಚಿತ್ರೀಕರಣವೂ ನಡೆಯುತ್ತಿರೋದು ನಿಜವಾದ ಆಕರ್ಷಣೆ.

    ಕೇರಳದ ಪ್ರಖ್ಯಾತ ಆದಿರಪಳ್ಳಿ ಜಲಪಾತದಲ್ಲಿ ಈ ಹಿಂದೆ ರಾಜಮೌಳಿ ನಿರ್ದೇಶನದ ಬಾಹುಬಲಿಯ ಚಿತ್ರೀಕರಣ ನಡೆದಿತ್ತು. ಇದೀಗ ಅದೇ ಸ್ಥಳದಲ್ಲಿ ವಿಷ್ಣುಪ್ರಿಯ ಚಿತ್ರದ ಹಾಡಿನ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ಇನ್ನುಳಿದಂತೆ ಪುಲಿಮುರುಗನ್ ಮತ್ತು ಮಹೇಶ್ ಬಾಬು ಚಿತ್ರಗಳ ಚಿತ್ರೀಕರಣ ನಡೆದಿದ್ದ ಮಹಾಘನಿ ಅರಣ್ಯ ಪ್ರದೇಶದಲ್ಲಿ ವಿಷ್ಣುಪ್ರಿಯನ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಇದು ಇಡೀ ಚಿತ್ರದ ಪ್ರಧಾನ ಅಂಶಗಳನ್ನು ಒಳಗೊಂಡಿರುವ ಸಾಹಸ ಸನ್ನಿವೇಶ. ಅದನ್ನು ವಿರಳ ಪ್ರದೇಶದಲ್ಲಿಯೇ ಚಿತ್ರೀಕರಿಸಿಕೊಳ್ಳಬೇಕೆಂದು ನಿರ್ದೇಶಕ ವಿ.ಕೆ. ಪ್ರಕಾಶ್ ಯೋಜನೆ ಹಾಕಿಕೊಂಡಿದ್ದರಂತೆ. ಅದರಂತೆಯೇ ಈಗ ಸಾಂಗವಾಗಿ ಚಿತ್ರೀಕರಣ ಮುಂದುವರೆಯುತ್ತಿದೆ.

    ಈ ಹಿಂದೆ ಪಡ್ಡೆಹುಲಿ ಚಿತ್ರದಲ್ಲಿಯೇ ಆಕ್ಷನ್ ಹೀರೋ ಆಗಿ ಮಿಂಚಿದ್ದವರು ಶ್ರೇಯಸ್. ಆ ಮೊದಲ ಚಿತ್ರಕ್ಕಾಗಿ ಅವರು ತಯಾರಿ ಮಾಡಿಕೊಂಡಿದ್ದ ರೀತಿ, ಅದರಲ್ಲಿ ಎನರ್ಜೆಟಿಕ್ ಆಗಿ ನಟಿಸಿದ್ದ ಅವರಿಗಿಲ್ಲಿ ಮತ್ತಷ್ಟು ಮಾಸ್ ಸನ್ನಿವೇಶಗಳಿರೋ ಪವರ್ ಫುಲ್ ಕಥೆಯೇ ಸಿಕ್ಕಿದೆ. ಇಲ್ಲಿ ಕಣ್ಣೇಟಿನ ಹುಡುಗಿ ಪ್ರಿಯಾ ವಾರಿಯರ್ ಶ್ರೇಯಸ್‍ಗೆ ಜೋಡಿಯಾಗಿ ನಟಿಸಿದ್ದಾರೆ. ಇನ್ನೊಂದು ದಿನದ ಚಿತ್ರೀಕರಣ ಸಮಾಪ್ತಿಯಾದರೆ ವಿಷ್ಣುಪ್ರಿಯಾ ಚಿತ್ರೀಕರಣ ಪೂರ್ಣಗೊಳ್ಳಲಿದೆ. ತಕ್ಕಣವೇ ಉಳಿಕೆ ಕೆಲಸ ಕಾರ್ಯಗಳೂ ಆರಂಭವಾಗಲಿವೆ. ಈ ತಿಂಗಳ ಅಂತ್ಯದೊಳಗೆ ಪೋಸ್ಟರ್ ಬಿಡುಗಡೆಗೊಳಿಸಿ ಜನವರಿ ಮೊದಲ ಭಾಗದಲ್ಲಿಯೇ ಆಡಿಯೋ ಮತ್ತು ಟೀಸರ್ ಲಾಂಚ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.