Tag: Priya Prakash Warrior

  • ಕಣ್ಸನ್ನೆ ಚೆಲುವೆಗೆ ಖುಲಾಯಿಸಿತು ಲಕ್

    ಕಣ್ಸನ್ನೆ ಚೆಲುವೆಗೆ ಖುಲಾಯಿಸಿತು ಲಕ್

    ಹೈದರಾಬಾದ್: ಕಣ್ಸನ್ನೆ ಮೂಲಕವೇ ಲಕ್ಷಾಂತರ ಜನರ ಮನಗೆದ್ದು, ಕಣ್ಸನ್ನೆ ಚೆಲುವೆ ಎಂದೇ ಗುರುತಿಸಿಕೊಂಡಿರುವ ಪ್ರಿಯಾ ಪ್ರಕಾಶ್ ವಾರಿಯರ್‍ಗೆ ಇದೀಗ ಅದೃಷ್ಟ ಖುಲಾಯಿಸಿದೆ. ಈ ಮೂಲಕ ಅವರಿಗೆ ದೊಡ್ಡ ಬ್ರೇಕ್ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಪ್ರುಯಾ ಪ್ರಕಾಶ್ ವಾರಿಯರ್ ಕೆಲ ಸಿನಿಮಾಗಳನ್ನು ಮಾಡಿದರೂ ಅಷ್ಟೇನು ದೊಡ್ಡ ಬ್ರೇಕ್ ಅವರಿಗೆ ಸಿಕ್ಕಿಲ್ಲ. ಹೀಗಾಗಿ ಉತ್ತಮ ಅವಕಾಶದ ನಿರೀಕ್ಷೆಯಲ್ಲಿದ್ದ ಕಣ್ಸನ್ನೆ ಚೆಲುವೆಗೆ ಅದೃಷ್ಟ ಖುಲಾಯಿಸಿದೆ. ಸ್ಟಾರ್ ನಟರೊಬ್ಬರ ಚಿತ್ರದಲ್ಲಿ ನಟಿಸಲು ಪ್ರಿಯಾ ವಾರಿಯರ್‍ಗೆ ಅವಕಾಶ ಒದಗಿದ್ದು, ಈ ಚಿತ್ರವನ್ನು ಫೇಮಸ್ ನಿರ್ದೇಶಕರು ನಿರ್ದೇಶಿಸುತ್ತಿದ್ದಾರೆ. ಹೀಗಾಗಿ ಪ್ರಿಯಾ ಅವರಿಗೆ ಬಹುದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶ ಲಭಿಸಿದೆ.

    ಮಲೆಯಾಳಂನ ಒರು ಅಡಾರ್ ಲವ್ ಸಿನಿಮಾದ ಹಾಡಿನ ಮೂಲಕ ಫೇಮಸ್ ಆಗಿದ್ದ ಪ್ರಿಯಾಗೆ ನಂತರ ಭಾರೀ ಜನಪ್ರಿಯತೆ ಒದಗಿತ್ತು. ಅಲ್ಲದೆ ನಂತರ ಹೆಚ್ಚು ಆಫರ್‍ಗಳು ಸಹ ಬಂದವು. ಆದರೆ ಅದಾವುದೂ ಅವರಿಗೆ ಅಷ್ಟೇನು ದೊಡ್ಡ ಯಶಸ್ಸು ತಂದುಕೊಡಲಿಲ್ಲ. ಇದೀಗ ತೆಲುಗಿನ ಸ್ಟಾರ್ ನಟ ನಿತಿನ್ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಇನ್ನೂ ವಿಶೇಷ ಎಂಬಂತೆ ಈ ಸಿನಿಮಾವನ್ನು ಒಕ್ಕಡುನ್ನಾಡು, ಸಾಹಸಂ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಚಂದ್ರಶೇಖರ್ ಯೆಲೆಟಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟೈಟಲ್ ಸಹ ವಿಶೇಷವಾಗಿದ್ದು, ‘ಚೆಕ್’ ಎಂದು ಹೆಸರಿಡಲಾಗಿದೆ. ಹೀಗಾಗಿ ನಿತಿನ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.

    ನಟ ನಿತಿನ್ ಕೈಯಲ್ಲಿ ಈಗ ಸಿಕ್ಕಾಪಟ್ಟೆ ಸಿನಿಮಾಗಳಿವೆ. ಈ ಹಿಂದೆ ಒಪ್ಪಿಕೊಂಡ ಸಿನಿಮಾಗಳ ಪೈಕಿ ಇದೀಗ ಒಂದು ಚಿತ್ರದ ಶೀರ್ಷಿಕೆ ಘೋಷಣೆ ಆಗಿದ್ದು, ‘ಚೆಕ್’ ಎಂದು ಹೆಸರಿಡಲಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಸಿನಿಮಾದ ಟೈಟಲ್ ಮತ್ತು ಪ್ರಿ-ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಚದುರಂಗದ ‘ಚೆಕ್’ ಆಧರಿಸಿ ಟೈಟಲ್ ಇಡಲಾಗಿದೆ. ಹೀಗಾಗಿ ಕಥೆ ಯಾವ ರೀತಿ ಇರಲಿದೆ ಎಂಬುದು ಸದ್ಯ ಅಭಿಮಾನಿಗಳ ಕುತೂಹಲ. ಇನ್ನೂ ಸಪ್ರ್ರೈಸ್ ಎಂದರೆ ಈ ಸಿನಿಮಾಗೆ ಇಬ್ಬರು ನಾಯಕಿಯರು. ಒಬ್ಬರು ರಾಕುಲ್ ಪ್ರೀತ್ ಸಿಂಗ್ ಹಾಗೂ ಮತ್ತೊಬ್ಬರು ಪ್ರಿಯಾ ವಾರಿಯರ್. ಹೀಗಾಗಿ ಚಿತ್ರ ವಿಶೇಷತೆ ಹೊಂದಿದೆ.

    ಪ್ರಿಯಾ ಪ್ರಕಾಶ್ ವಾರಿಯರ್ ಇದೇ ಮೊದಲ ಬಾರಿಗೆ ಸ್ಟಾರ್ ನಟನ ಜೊತೆಗೆ ನಟಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಅದೃಷ್ಟ ಖುಲಾಯಿಸಿದಂತಾಗಿದೆ. ಅಂದಹಾಗೆ ಚೆಕ್ ಚಿತ್ರಕ್ಕೆ ಬಾಹುಬಲಿ ಖ್ಯಾತಿಯ ಎಂಎಂ ಕೀರವಾಣಿ ಸಂಗೀತ ನಿರ್ದೇಶನವಿದೆ. ವಿ.ಆನಂದ್ ಪ್ರಸಾದ್ ನಿರ್ಮಿಸುತ್ತಿದ್ದು, ಸಿನಿಮಾದ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಟೈಟಲ್ ಮತ್ತು ಪಾತ್ರವರ್ಗದ ಕುರಿತು ಈಗ ಮಾಹಿತಿ ಹಂಚಿಕೊಂಡಿದೆ.