https://youtu.be/mRoQDy0ZJY0
Tag: Priya Prakash varrier
-

ಮೋದಿಗೆ ಯಾರಾದ್ರೂ ‘ಐ ಲವ್ ಯು’ ಅಂತಾ ಹೇಳಿದ್ರಾ?: ಜಿಗ್ನೇಶ್ ಮೇವಾನಿ ಪ್ರಶ್ನೆ
ನವದೆಹಲಿ: ಫೆಬ್ರವರಿ 14 ಪ್ರೇಮಿಗಳ ದಿನದಂದು ಪ್ರಧಾನಿ ಮೋದಿಗೆ ಯಾರಾದ್ರೂ ‘ಐ ಲವ್ ಯು’ ಅಂತಾ ಹೇಳಿದ್ರಾ ಎಂದು ಗುಜರಾತ್ ಶಾಸಕ, ದಲಿತ ಮುಖಂಡ ಜಗ್ನೇಶ್ ಮೇವಾನಿ ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದಾರೆ.
ನಮಗೆ ತುಂಬಾ ಜನ ‘ಐ ಲವ್ ಯು’ ಅಂತಾ ಹೇಳಿದ್ದಾರೆ. ಆದ್ರೆ ಮೋದಿ ಅವರಿಗೆ ಇದೂವರೆಗೂ ಯಾರಾದ್ರೂ ‘ಐ ಲವ್ ಯು’ ಎಂದು ಹೇಳಿದ್ದಾರಾ? ನನಗೇನೋ ಅನುಮಾನ. ಈ ಬಗ್ಗೆ ಏನು ಹೇಳ್ತೀರಾ? ಪ್ರೇಮಿಗಳ ದಿನದ ಶುಭಾಶಯ ಅಂತಾ ಜಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತಪಡಿಸುವ ಆರ್‍ಎಸ್‍ಎಸ್ ಬಗ್ಗೆ ಜಿಗ್ನೇಶ್ ಮೇವಾನಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ಸನ್ನೆಯ ವಿಡಿಯೋ ಹಾಕಿ ಪ್ರೇಮಿಗಳ ದಿನಕ್ಕೆ ಶುಭ ಕೋರಿದ್ದಾರೆ. ಪ್ರೇಮಿಗಳ ದಿನವನ್ನು ವಿರೋಧಿಸುವ ಸಂಘ ಪರಿವಾರಕ್ಕೆ ಮಾಣಿಕ್ಯ ಮಲರಾಯ ಪೂವಿ ಹಾಡು ತಕ್ಕ ಉತ್ತರ. ಹಾಗೂ ಭಾರತೀಯರು ಪ್ರೀತಿಯನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ಸುಂದರ ವಿಡಿಯೋವನ್ನು ನೋಡಿ ಆನಂದಿಸಿ ಅಂತಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಾ ಕಣ್ ಸನ್ನೆಗೆ ಸೋತ ರೋಶನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ
ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಜೋಡಿಗಳಿಗೆ ಸಂಘ ಪರಿವಾರದ ಸದಸ್ಯರು ಸ್ಥಳದಲ್ಲಿಯೇ ಮದುವೆ ಮಾಡಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜಿಗ್ನೇಶ್ ಮೇವಾನಿ ಮಲಯಾಳಂನ ‘ಒರು ಆಡಾರ್ ಲವ್’ ಚಿತ್ರದ ವೈರಲ್ ವಿಡಿಯೋ ಹಾಕಿಕೊಂಡು ಟ್ವೀಟ್ ಮಾಡುವ ಮೂಲಕ ಆರ್‍ಎಸ್‍ಎಸ್‍ಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಕಣ್ಸನ್ನೆ ಚೆಲುವೆಗೆ ಪ್ರೇಮಿಗಳ ದಿನದಂದೇ ಸಂಕಷ್ಟ – ಪ್ರಿಯಾ ವಾರಿಯರ್ ಹಾಡಿನ ವಿರುದ್ಧ ಕೇಸ್

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ತಮ್ಮ ಎಕ್ಸ್ ಪ್ರೆಷನ್‍ನಿಂದಲೇ ಇಂಟರ್ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಇದನ್ನೂ ಓದಿ: ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!
हम को बहुतों ने i love you कहा है. लेकिन मोदी जी को कभी किसी ने I love you कहा होंगा? I doubt, what say ? Happy Valentine's day
— Jignesh Mevani (@jigneshmevani80) February 14, 2018
Happy Valentines Day ❤️❤️
Viral hit of ‘Manikya Malaraya Poovi’ is the answer to RSS's Valentines Day protest and Again Indians have proved that they like to love more than hating someone. Enjoy this beautiful video. #ValentinesDay pic.twitter.com/QtWqqqm8zt— Jignesh Mevani (@jigneshmevani80) February 14, 2018
-

ಕಣ್ಸನ್ನೆ ಚೆಲುವೆಗೆ ಪ್ರೇಮಿಗಳ ದಿನದಂದೇ ಸಂಕಷ್ಟ – ಪ್ರಿಯಾ ವಾರಿಯರ್ ಹಾಡಿನ ವಿರುದ್ಧ ಕೇಸ್
ಹೈದರಾಬಾದ್: ಒಂದೇ ಒಂದು ನೋಟದಿಂದಲೇ ಜಗತ್ತಿನಾದ್ಯಂತ ಸೆನ್ಸೇಶನ್ ಆಗಿರುವ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ‘ಒರು ಅಡಾರ್ ಲವ್’ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.
ಚಿತ್ರದ ಹಾಡಿನಲ್ಲಿರುವ ಸಾಲುಗಳು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆ ಎಂದು ಆರೋಪಿಸಿ ಹೈದ್ರಾಬಾದ್‍ನ ಫಲಕನಾಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೊಹಮ್ಮದ್ ಅಬ್ದುಲ್ ಖಾನ್ ತನ್ನ ಸ್ನೇಹಿತರ ಜೊತೆ ದೂರು ದಾಖಲಿಸಿದ್ದು, ಪ್ರವಾದಿ ಕೀರ್ತನೆಗಳನ್ನು ಸಿನಿಮಾ ಹಾಡಿಗೆ ಬಳಸಿರುವುದು ಸರಿಯಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.

ಚಿತ್ರಕ್ಕೆ ಯಾವುದೇ ರೀತಿಯಲ್ಲಿ ನಮ್ಮ ವಿರೋಧವಿಲ್ಲ. ಸಿನಿಮಾದಲ್ಲಿ ಬರುವ ‘ಮಾಣಿಕ್ಯಾ ಮಲರಾಯಾ ಪೂವಿ’ ಎಂಬ ಸಾಲುಗಳನ್ನು ಆಂಗ್ಲ ಭಾಷೆಯಲ್ಲಿ ಭಾಷಾಂತರ ಮಾಡುವ ವೇಳೆಯಲ್ಲಿ ಪ್ರವಾದಿಗಳನ್ನು ಅವಮಾನಿಸಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಈ ಗೀತೆ ರಚನೆಕಾರ ಶಾನ್ ರೆಹಮಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಇದನ್ನೂ ಓದಿ: ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!
ಚಿತ್ರದ 1.32 ಸೆಕೆಂಡ್ ನ ಹಾಡಿನ ವಿಡಿಯೋದಲ್ಲಿ ಪ್ರಿಯಾ ಅವರ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಈ ಹಾಡು ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿಕೊಳ್ಳುವ ಸನ್ನಿವೇಶದಲ್ಲಿ ಮೂಡಿಬಂದಿದೆ. ಹೈಸ್ಕೂಲ್ ನಲ್ಲಿ ಉಂಟಾದ ಮೊದಲ ಲವ್ ಕುರಿತಾಗಿ ಮುಗ್ಧವಾಗಿ ಹಾಡನ್ನು ಚಿತ್ರೀಕರಿಸಲಾಗಿದೆ. ಇದನ್ನೂ ಓದಿ: ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!

18 ವರ್ಷದ ಪ್ರಿಯಾ ಪ್ರಕಾಶ್ ವಾರಿಯಾರ್ ಈಗ ಹಾಲಿವುಡ್ ನ ಸ್ಟಾರ್ ಗಳಾದ ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಾಲಿನಲ್ಲಿ ಬಂದು ನಿಂತಿದ್ದಾರೆ. ಈ ಹಿಂದೆ ಒಂದೇ ದಿನದಲ್ಲಿ ಕೈಲೀ ಜೆನ್ನರ್ 8 ಲಕ್ಷ, ರೊನಾಲ್ಡೊ ಅವರನ್ನು 6.50 ಲಕ್ಷ ಮಂದಿ ಫಾಲೋ ಮಾಡಿದ್ದರು. ಪ್ರಸ್ತುತ 17 ಲಕ್ಷ ಇನ್ ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಪ್ರಿಯಾ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಪ್ರಸ್ತುತ ಇವರ ಇನ್ ಸ್ಟಾಗ್ರಾಮ್ ಖಾತೆಗೆ ಬ್ಲೂ ಟಿಕ್ ಮಾರ್ಕ್ ಲಭಿಸಿದೆ.
We received complaint from a few men that upcoming movie Manikya Malaraya Poovi’s viral song's lyrics is hurting sentiments of Muslims. They haven't submitted a video proof & we asked them to provide us the same. No FIR registered yet: Syed Faiyaz, ACP Falaknuma #Hyderabad pic.twitter.com/T88uBGs3kJ
— ANI (@ANI) February 14, 2018
https://twitter.com/ppriyavarrier/status/962751427394248705
https://twitter.com/ppriyavarrier/status/963256171703382017
https://www.instagram.com/p/Be-0hR9jBqT/?utm_source=ig_embed
-

ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!
ಮುಂಬೈ: ಒಂದು ಹಾಡಿನ ವಿಡಿಯೋ ಮೂಲಕ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿದ್ದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ.
ಕೇವಲ ಒಂದು ದಿನದಲ್ಲಿ ಪ್ರಿಯಾ ಅವರ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 6 ಲಕ್ಷ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಫಾಲೋ ಆಗಿರುವ ವಿಶ್ವದ ಮೂರನೇ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

18 ವರ್ಷದ ಪ್ರಿಯಾ ಪ್ರಕಾಶ್ ವಾರಿಯಾರ್ ಈಗ ಹಾಲಿವುಡ್ ನ ಸ್ಟಾರ್ ಗಳಾದ ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಾಲಿನಲ್ಲಿ ಬಂದು ನಿಂತಿದ್ದಾರೆ. ಈ ಹಿಂದೆ ಒಂದೇ ದಿನದಲ್ಲಿ ಕೈಲೀ ಜೆನ್ನರ್ 8 ಲಕ್ಷ, ರೊನಾಲ್ಡೊ ಅವರನ್ನು 6.50 ಲಕ್ಷ ಮಂದಿ ಫಾಲೋ ಮಾಡಿದ್ದರು.
ಪ್ರಸ್ತುತ 17 ಲಕ್ಷ ಇನ್ ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಪ್ರಿಯಾ ಅವರು ಸೆನ್ಸೇಷನ್ ಸೃಷ್ಟಿಸಿದ್ದಾರೆ. ಪ್ರಸ್ತುತ ಅವರ ಇನ್ ಸ್ಟಾಗ್ರಾಮ್ ಖಾತೆಗೆ `ಬ್ಲೂ ಟೀಕ್ ಮಾರ್ಕ್’ ಲಭಿಸಿದೆ.

ಕೇವಲ ಒಂದು ದಿನದಲ್ಲಿ `ಒರು ಆಡಾರ್ ಲವ್’ ಚಿತ್ರದ `ಮಾಣಿಕ್ಯಾ ಮಾಲಾರಾಯಾ ಪೂವಿ’ ಹಾಡಿನ ಮೂಲಕ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಚಿತ್ರದ ಈ ಹಾಡನ್ನು ವಿನೀತ್ ಶ್ರೀನಿವಾಸನ್ ಅವರು ಹಾಡಿದ್ದು, ಶಾನ್ ರಹಮಾನ್ ಗೀತೆ ಸಂಯೋಜನೆ ಮಾಡಿದ್ದಾರೆ.
ಚಿತ್ರತಂಡ 1.32 ಸೆಕೆಂಡ್ ನ ಹಾಡಿನ ವಿಡಿಯೋ ಬಿಡುಗಡೆ ಮಾಡಿದ್ದು, ಪ್ರಿಯಾ ಅವರ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಈ ಹಾಡನ್ನು ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿಕೊಳ್ಳುವ ಸನ್ನಿವೇಶದಲ್ಲಿ ಮೂಡಿಬಂದಿದೆ. ಹೈಸ್ಕೂಲ್ ನಲ್ಲಿ ಉಂಟಾದ ಮೊದಲ ಲವ್ ಕುರಿತಾಗಿ ಮುಗ್ಧವಾಗಿ ಹಾರನ್ನು ಚಿತ್ರೀಕರಿಸಲಾಗಿದೆ. ಚಿತ್ರದ ಹಾಡಿಗೆ ಸಿಕ್ಕ ಪ್ರತಿಕ್ರಿಯೇ ಕಂಡ ಪ್ರಿಯಾ ಚಿತ್ರದ ನಿರ್ದೇಶಕರು, ಚಿತ್ರ ತಂಡ ಮತ್ತು ಅಭಿಮಾನಿಗಳಿಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ : ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!
https://twitter.com/ppriyavarrier/status/962751427394248705
https://twitter.com/ppriyavarrier/status/963256171703382017
https://www.instagram.com/p/Be-0hR9jBqT/?utm_source=ig_embed












