Tag: Private vehicles

  • ಪ್ರಯಾಣಿಕರಿಂದ ಸುಲಿಗೆ ಮಾಡುವ ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ

    ಪ್ರಯಾಣಿಕರಿಂದ ಸುಲಿಗೆ ಮಾಡುವ ಖಾಸಗಿ ವಾಹನಗಳಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ

    ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಸಾರಿಗೆ ಬಳಿಕ ಜನರು ಹೆಚ್ಚಾಗಿ ಟ್ಯಾಕ್ಸಿ, ಆಟೋ, ಕ್ಯಾಬ್ ಎಂಬ ಆ್ಯಪ್ (APP) ಆಧಾರಿತ ಸೇವೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಪ್ ಆಧಾರಿತ ಸಾರಿಗೆ ಸಂಸ್ಥೆಗಳು (Private Vehicles) ಗ್ರಾಹಕರಿಂದ ದುಪ್ಪಟು ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪವಿದೆ.

     

    ಪ್ರಯಾಣಿಕರು ಅಗತ್ಯಕ್ಕೋ, ಅನಿವಾರ್ಯತೆಗಾಗಿಯೋ ದುಪ್ಪಟ್ಟು ಹಣ ಕೊಡಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರು ಸಾರಿಗೆ ಇಲಾಖೆಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕೊನೆಗೂ ಎಚ್ಚೆತ್ತಿರುವ ಸಾರಿಗೆ ಇಲಾಖೆ ಆಪರೇಷನ್ ಸಾರಿಗೆ ಶುರು ಮಾಡಿದೆ. ಖುದ್ದು ಸಾರ್ವಜನಿಕರು ದೂರು ಕೊಡಲು ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ಆ್ಯಪ್ ಆಧಾರಿತ ಟ್ಯಾಕ್ಸಿ ಕ್ಯಾಬ್ ಆಟೋಗಳು ಪ್ರಯಾಣಿಕರಿಗೆ ದುಬಾರಿ ದುಡ್ಡು ನೀಡುವಂತೆ ಡಿಮ್ಯಾಂಡ್ ಮಾಡಿದರೆ 9449863426 ಈ ಸಹಾಯವಾಣಿಗೆ ಕರೆ ಮಾಡಿ ದೂರು ಕೊಡಬಹುದು. ಈ ಮೂಲಕ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಇಂದು, ನಾಳೆ ಅಂತರರಾಜ್ಯ ಸಂಚಾರಕ್ಕೆ ಬದಲಿ ಮಾರ್ಗ ಬಳಸಿ

    ಹಬ್ಬಗಳ ಸಂದರ್ಭದಲ್ಲಿ ಜನರ ಲೂಟಿ ಮಾಡುತ್ತಿರುವ ಖಾಸಗಿ ಬಸ್‍ಗಳ ಬಗ್ಗೆ ಪಬ್ಲಿಕ್ ಟಿವಿ ಸತತ ವರದಿ ಬಿತ್ತರಿಸುತ್ತಲೇ ಇದೆ. ಇದರ ಬೆನ್ನಲ್ಲೇ ಅಲರ್ಟ್ ಆಗಿರುವ ಸಾರಿಗೆ ಇಲಾಖೆ 12 ತನಿಖಾ ತಂಡಗಳನ್ನು ನೇಮಿಸಿದೆ. ಈ ತಂಡ ಬಸ್‍ಗಳ ಟಿಕೆಟ್ ಬಗ್ಗೆ ಪರಿಶೀಲನೆ ನಡೆಸಲಿದ್ದು, ಪ್ರಯಾಣಿಕರು ಕೂಡ ನೇರವಾಗಿ ದೂರು ಕೊಡಬಹುದು ಎಂದು ಸಾರಿಗೆ ಇಲಾಖೆ ಹೇಳಿದೆ. ಇದನ್ನೂ ಓದಿ: ನಾನು ಕೃಷಿಕ ಎಂದಿದ್ದ ಡಿಕೆಶಿಗೆ ಶಾಕ್‌ ನೀಡಲು ಸಿಬಿಐ ತಯಾರಿ

    Live Tv
    [brid partner=56869869 player=32851 video=960834 autoplay=true]

  • ಬಸ್ ಬಂದ್- ಪಬ್ಲಿಕ್ ಟಿವಿ ಮುಂದೆ ಕಣ್ಣೀರಿಟ್ಟ ಮಹಿಳೆ

    ಬಸ್ ಬಂದ್- ಪಬ್ಲಿಕ್ ಟಿವಿ ಮುಂದೆ ಕಣ್ಣೀರಿಟ್ಟ ಮಹಿಳೆ

    – ಖಾಸಗಿ ಮಾಹನಗಳಿಗೆ ದುಪ್ಪಟ್ಟು ದರ
    – ಬಸ್ ಇಲ್ಲ, ರೈಲೂ ಇಲ್ಲ

    ಗದಗ: ಇಂದು 2ನೇ ದಿನವೂ ಸಾರಿಗೆ ಬಸ್ ಬಂದ್ ನಿಂದ ಸಾರ್ವಜನಿಕರು ಸಾಕಷ್ಟು ಪರದಾಡಿದರು. ಅನಿವಾರ್ಯತೆ ಇರುವ ಪ್ರಯಾಣಿಕರು ರೈಲು ಪ್ರಯಾಣದತ್ತ ಮುಖ ಮಾಡಿದ್ದಾರೆ. ಬಸ್ ಇಲ್ಲದೇ ಸರಿಯಾಗಿ ರೈಲು ಇಲ್ಲದೆ ಅಸ್ತವ್ಯಸ್ತತೆಯಿಂದ ಮಹಿಳಾ ಪ್ರಯಾಣಿಕರೊಬ್ಬರು ಪಬ್ಲಿಕ್ ಟಿವಿ ಎದುರು ಕಣ್ಣೀರಿಟ್ಟು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

    ಕೊಪ್ಪಳ ಮೂಲದ ದೀಪಾ ಕುಲಕರ್ಣಿ ಎಂಬ ಮಹಿಳೆ ಮಗಳೊಂದಿಗೆ ಗದಗಿನಲ್ಲಿ ಅನಾರೋಗ್ಯಕ್ಕೊಳಗಾದ ಸಂಬಂಧಿಕರೊಬ್ಬರನ್ನು ಮಾತನಾಡಿಸಲು ಬಂದಿದ್ದರು. ನಿನ್ನೆ ಏಕಾಏಕಿ ಬಸ್ ಬಂದ್ ನಿಂದ ಮರಳಿ ಊರಿಗೆ ಹೋಗಲಾಗದೆ ಸಾಕಷ್ಟು ಪರದಾಡಿದ್ದಾರೆ.

    ಇಂದು ರೈಲ್ವೆ ನಿಲ್ದಾಣದಲ್ಲೂ ಸರಿಯಾಗಿ ರೈಲು ಇಲ್ಲದಕ್ಕೆ ಕಣ್ಣೀರಿಟ್ಟ ಮಹಿಳೆ ತಮಗಾದ ತೊಂದರೆ ಬಗ್ಗೆ ಪಬ್ಲಿಕ್ ಟಿವಿ ಎದುರು ಕಣ್ಣೀರಿಟ್ಟು ಅಳಲು ತೋಡಿಕೊಂಡಿದ್ದಾರೆ. ದಿಢೀರ್ ಬಂದ್ ಮಾಡಿರುವುದು ಸಾಕಷ್ಟು ತೊಂದರೆಯಾಗಿದೆ. ಮಗಳನ್ನು ಕಟ್ಟಿಕೊಂಡು ಬಸ್ ಹಾಗೂ ರೈಲು ನಿಲ್ದಾಣದಲ್ಲಿ ಹೇಗೆ ಇರಬೇಕು. ಅರ್ಧ ದಾರಿನಲ್ಲಿ ಹೀಗಾದ ವೇಳೆ ಯಾರಾದರೂ ಸಂಬಂಧಿಕರು ಇದ್ದರೆ ಪರವಾಗಿಲ್ಲ ಇಲ್ಲವಾದರೆ ನಮ್ಮ ಪರಸ್ಥಿತಿ ಕೇಳುವವರು ಯಾರು. ಸರ್ಕಾರ ಜನಸಾಮಾನ್ಯರಿಗಾಗುವ ತೊಂದರೆ ತಪ್ಪಿಸಬೇಕು ಅಂತ ಆಗ್ರಹಿಸಿದರು.

    ಖಾಸಗಿ ವಾಹನಗಳ ದುಪ್ಪಟ್ಟು ದರದಿಂದ ಬೇಸತ್ತ ಜನರು ರೈಲು ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ದೂರದ ಪ್ರದೇಶಗಳಿಗೆ ತೆರಳುವ ಸಾರ್ವಜನಿಕರು ಟಿಕೆಟ್ ಕೌಂಟರ್ ನಲ್ಲಿ ಸರದಿಯ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಪ್ರಯಾಣ ಮಾಡುತ್ತಿದ್ದಾರೆ.

  • ಖಾಸಗಿ ವಾಹನದಲ್ಲಿ ಊರಿಗೆ ತೆರಳುವ ಜನರಿಗೆ ಶಾಕ್ – ಪಾಸ್‍ಗೆ ಸರ್ಕಾರದಿಂದ ಬ್ರೇಕ್

    ಖಾಸಗಿ ವಾಹನದಲ್ಲಿ ಊರಿಗೆ ತೆರಳುವ ಜನರಿಗೆ ಶಾಕ್ – ಪಾಸ್‍ಗೆ ಸರ್ಕಾರದಿಂದ ಬ್ರೇಕ್

    ಬೆಂಗಳೂರು: ಲಾಕ್‍ಡೌನ್‍ನಿಂದ ತಮ್ಮ ಊರಿಗೆ ತೆರೆಳಲು ಒದ್ದಾಡುತ್ತಿರುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಕರು ಮತ್ತಿತರರಿಗೆ ಸರ್ಕಾರ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಆದರೆ ಈಗ ಖಾಸಗಿ ವಾಹನಗಳಲ್ಲಿ ಊರಿಗೆ ತೆರೆಳಲು ಹೊರಟಿದ್ದ ಮಂದಿಗೆ ಸರ್ಕಾರ ಶಾಕ್ ನೀಡಿದ್ದು, ಖಾಸಗಿ ವಾಹನಗಳಿಗೆ ಪಾಸ್ ನೀಡದಂತೆ ಆದೇಶಿಸಿದೆ.

    ಖಾಸಗಿ ವಾಹನದಲ್ಲಿ ಊರಿಗೆ ತೆರಳಲು ಬಯಸುವವರು ಪಾಸ್ ಪಡೆದು ಹೋಗಬಹುದು ಎಂದು ಶನಿವಾರ ಆದೇಶ ಮಾಡಿದ್ದ ಸರ್ಕಾರ ತನ್ನ ಆದೇಶವನ್ನು ವಾಪಸ್ ಪಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಉಚಿತ ಬಸ್ ವ್ಯವಸ್ಥೆ ಮಾಡಿರುವ ಕಾರಣಕ್ಕೆ ಖಾಸಗಿ ವಾಹನಗಳಿಗೆ ಅವಕಾಶ ಇಲ್ಲ. ಖಾಸಗಿ ವಾಹನಕ್ಕೆ ಯಾವುದೇ ರೀತಿಯ ಪಾಸ್ ನೀಡದಂತೆ ಸರ್ಕಾರದಿಂದ ಪೊಲೀಸರಿಗೆ ಮೌಖಿಕ ಆದೇಶ ರವಾನಿಸಲಾಗಿದೆ.

    ಇಂದಿನಿಂದ ಯಾವುದೇ ಪಾಸ್ ವಿತರಣೆ ಇಲ್ಲ, ಖಾಸಗಿ ವಾಹನದಲ್ಲಿಯೇ ತೆರಳಬೇಕು ಎಂದರೆ ಸ್ವಲ್ಪ ದಿನ ಕಾಯಬೇಕಾಗುತ್ತದೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವ್ಯಕ್ತಿಯೊಬ್ಬರು ನಾವು ಪಾಸ್ ಪಡೆಯಲೆಂದು ನಾವು ಡಿಸಿಪಿ ಕಚೇರಿಗೆ ತೆರಳಿದಾಗ ನಮಗೆ ಯಾವುದೇ ಆದೇಶ ಬಂದಿಲ್ಲ ಎಂದು ತಿಳಿಸಿದ್ದಾರೆ. ಈಗ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

    ಈ ಹಿಂದೆ ಸರ್ಕಾರ ಹೊರಡಿಸಿದ ಆದೇಶದಲ್ಲಿ, ಒಂದು ದಿನ, ಒಂದು ಕಡೆಗೆ ಹೋಗಲು ಮಾತ್ರ ಈ ಪಾಸ್ ಬಳಸಬಹುದು. ಅಂತರ್ ಜಿಲ್ಲೆಗಳಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಮ್ಮ ಆದೇಶದಲ್ಲಿ ಪ್ರಕಟಿಸಿದ್ದರು. ಪಾಸ್ ಬೇಕಾದವರು ತಮ್ಮ ದಾಖಲೆಗಳನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಥವಾ ಕಮಿಷನರೇಟ್‍ಗಳಲ್ಲಿ ಉಪ ಪೊಲೀಸ್ ಕಮಿಷನರ್ ಗೆ ನೀಡಿ ಅವರಿಂದ ಪಾಸ್‍ಗಳನ್ನು ಪಡೆಯಲು ಅವಕಾಶ ನೀಡಲಾಗಿತ್ತು.

    ಊರುಗಳಿಗೆ ಹಿಂತಿರುಗುವ ಜನರ ಪ್ರಯಾಣದ ಸಮಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಪಾಸ್ ಪಡೆದವರು ಪ್ರಯಾಣಿಸುವ ಜಿಲ್ಲೆಗಳಲ್ಲಿ ಅಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಬೇಕು. ಒಂದ ವೇಳೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ಕೂಡಲೇ ಅವರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

  • ವಿದೇಶದಿಂದ ಬಂದ ಕೇರಳಿಗರು ಖಾಸಗಿ ವಾಹನ ಬಳಸುವಂತಿಲ್ಲ – ದ.ಕ ಜಿಲ್ಲಾಡಳಿತ ಕಟ್ಟೆಚ್ಚರ

    ವಿದೇಶದಿಂದ ಬಂದ ಕೇರಳಿಗರು ಖಾಸಗಿ ವಾಹನ ಬಳಸುವಂತಿಲ್ಲ – ದ.ಕ ಜಿಲ್ಲಾಡಳಿತ ಕಟ್ಟೆಚ್ಚರ

    ಮಂಗಳೂರು: ದೇಶದಿಂದ ಬಂದ ಕೇರಳಿಗರಿಗೆ ಖಾಸಗಿ ವಾಹನ ಬಳಸುವಿಕೆಯನ್ನು ಮಂಗಳೂರು ವಿಮಾನ ನಿಲ್ದಾನದಲ್ಲಿ ಜಿಲ್ಲಾಡಳಿತ ನಿಷೇಧಿಸಿದೆ.

    ಕೇರಳದಿಂದ ಬಂದ ಪ್ರಯಾಣಿಕರಿಗೆ ಜಿಲ್ಲಾಡಳಿತ ಸರ್ಕಾರಿ ಬಸ್ ಸೇವೆ ಕಲ್ಪಿಸಿದೆ. ಕರ್ನಾಟಕದ ಸರ್ಕಾರಿ ಬಸ್ ನಲ್ಲಿ ಕೇರಳದ ಗಡಿವರೆಗೂ ಡ್ರಾಪ್ ಮಾಡಲಾಗುತ್ತಿದೆ. ಇಂದು ದುಬೈನಿಂದ ಬಂದ ಪ್ರಯಾಣಿಕರನ್ನು 3 ಬಸ್ ನಲ್ಲಿ ತಲಪಾಡಿಯವರೆಗೂ ಬಿಡಲಾಗಿದೆ.

    ವಿಮಾನದಲ್ಲಿ ಬಂದ ಪ್ರಯಾಣಿಕರು ತಲಪಾಡಿಯಿಂದ ತಮ್ಮ ಖಾಸಗಿ ವಾಹನಗಳಲ್ಲಿ ಕೇರಳಕ್ಕೆ ಪ್ರಯಾಣ ಬೆಳಸಬೇಕಿದ್ದು, ವಿದೇಶದಿಂದ ಬಂದವರಿಗೆ ಮಂಗಳೂರಿನಲ್ಲಿ ಸುತ್ತಾಡಲು ನಿರ್ಬಂಧ ಹೇರಲಾಗಿದೆ. ವಿದೇಶದಿಂದ ಬಂದವರು ವಿಮಾನ ನಿಲ್ದಾಣದಿಂದ ಸೀದಾ ಬಸ್ ಹತ್ತಬೇಕು ಎಂದು ಕಟ್ಟಪ್ಪಣೆ ಮಾಡಲಾಗಿದೆ.

  • ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಡಗರ- ಖಾಸಗಿ ವಾಹನಗಳ ಪ್ರವೇಶ ನಿರ್ಬಂಧ

    ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಡಗರ- ಖಾಸಗಿ ವಾಹನಗಳ ಪ್ರವೇಶ ನಿರ್ಬಂಧ

    – ಉಚಿತ ಬಸ್ ಗಳ ವ್ಯವಸ್ಥೆ

    ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಎಲ್ಲಾ ದೇಗುಲಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ನಡೆಯುತ್ತಿದೆ. ಅದರಲ್ಲೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢದ ಪ್ರಥಮ ಶುಕ್ರವಾರದ ಪೂಜೆ ಅದ್ಧೂರಿಯಾಗಿ ನಡೆಯುತ್ತಿದೆ.

    ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ಮೊದಲನೇ ಆಷಾಢ ಶುಕ್ರವಾರದ ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವಾಲಯದ ಒಳ, ಹೊರಾವರಣ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ. ನಸುಕಿನಲ್ಲೇ ದೇವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಹೀಗಾಗಿ ನೂಕು ನುಗ್ಗಲು ಉಂಟಾಗದಂತೆ ವ್ಯಾಪಕ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

    ಆಷಾಢ ಮಾಸದ ಒಟ್ಟು 5 ಶುಕ್ರವಾರಗಳಲ್ಲೂ ಚಾಮುಂಡಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ನಾಡಿನ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು, ಜನಪ್ರತಿನಿಧಿಗಳು, ಸಿನಿಮಾ ನಟರು ಪ್ರತಿ ಆಷಾಢ ಶುಕ್ರವಾರದಲ್ಲೂ ದೇವಿಯ ದರ್ಶನ ಪಡೆಯುತ್ತಾರೆ. ಹೀಗಾಗಿ ಮುಂಜಾನೆಯಿಂದ ರಾತ್ರಿವರೆಗೂ ದೇವಸ್ಥಾನದ ಬಾಗಿಲು ತೆರೆದಿರುತ್ತದೆ.

    ಹಾಗೆಯೇ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ಆಷಾಡ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಬರುವ ಎಲ್ಲಾ ರೀತಿಯ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಚಾಮುಂಡಿ ಬೆಟ್ಟದ ಕೆಳಗಿನ ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಉಚಿತ ಬಸ್‍ಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಹೀಗಾಗಿ ಭಕ್ತರು ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಉಚಿತವಾಗಿ ಸೇವೆಯಲ್ಲಿರುವ ನಗರ ಸಾರಿಗೆ ಬಸ್‍ಗಳಲ್ಲಿ ಬೆಟ್ಟಕ್ಕೆ ತೆರಳಬೇಕಿದೆ.