Tag: Private Travels

  • ಹೊಸವರ್ಷ, ಕ್ರಿಸ್‍ಮಸ್ ವೇಳೆ ಖಾಸಗಿ ಬಸ್ಸುಗಳಿಂದ ಲೂಟಿ – ದರ ಕೇಳಿದ್ರೆ ಶಾಕ್ ಆಗ್ತೀರಿ

    ಹೊಸವರ್ಷ, ಕ್ರಿಸ್‍ಮಸ್ ವೇಳೆ ಖಾಸಗಿ ಬಸ್ಸುಗಳಿಂದ ಲೂಟಿ – ದರ ಕೇಳಿದ್ರೆ ಶಾಕ್ ಆಗ್ತೀರಿ

    ಬೆಂಗಳೂರು: ಶುಕ್ರವಾರದಿಂದ ಕ್ರಿಸ್‍ಮಸ್ ರಜೆ ಶುರುವಾಗುತ್ತೆ, ಮಕ್ಕಳಿಗೆ ಸಾಲು ಸಾಲು ರಜೆ ಮುಂದಿನ ವಾರದವರೆಗೆ ಆರಮಾಗಿ ಇರೋಣ ಅಂತ ಎಲ್ಲರೂ ಪ್ರವಾಸಕ್ಕೆ ಪ್ಲಾನ್ ಮಾಡೋದು ಸಹಜ. ಆದರೆ ಪ್ರವಾಸಕ್ಕಾಗಿ ಖಾಸಗಿ ಟ್ರಾವೆಲ್ಸ್ ಕಡೆ ಹೋದರೆ ಪ್ರಯಾಣ ದರ ಕೇಳಿ ದಂಗಾಗೋದು ಗ್ಯಾರಂಟಿಯಾಗಿದೆ.

    ಖಾಸಗಿ ಬಸ್ ಮಾಲೀಕರು ಸಾಲುಸಾಲು ರಜೆ ಇರುವ ಕಾರಣ ಬಸ್ ದರವನ್ನು ದುಪ್ಪಟ್ಟು ಮಾಡಿ ದರೋಡೆಗೆ ಇಳಿದಿದ್ದಾರೆ. ಬೆಂಗಳೂರಿನ ಎರಡು ಫೇಮಸ್ ತಾಣಗಳಲ್ಲಿ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮಾಡಿದ್ದು, ಈ ವೇಳೆ ಟ್ರಾವೆಲ್ ಏಜೆಂಟ್ ದರ ಏರಿಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

    ಬೆಂಗಳೂರು ಟು ಅಲೆಪ್ಪಿ
    ಪ್ರತಿನಿಧಿ: ಅಲೆಪ್ಪಿ (ಕೇರಳ) ಎಷ್ಟಿದೆ ಅಂತ ನೋಡಿ ಸರ್?
    ಟ್ರಾವೆಲ್ಸ್ ಏಜೆಂಟ್: ಎಷ್ಟಿದೆ ನೋಡಿ. ಸಿಕ್ಕಾಪಟ್ಟೆ ಇದೆ.
    ಪ್ರತಿನಿಧಿ: ಏನ್ ಸರ್? ಕೊಚ್ಚಿನ್ ಟಿಕೆಟ್ 2 ಸಾವಿರಕ್ಕೆ ಸಿಗುತ್ತಲ್ಲ?
    ಟ್ರಾವೆಲ್ಸ್ ಏಜೆಂಟ್: ಕೊಚ್ಚಿನ್ ಈಗ 2 ಸಾವಿರಕ್ಕೆ ಸಿಗೋದಿಲ್ಲ ಬಿಡಿ.
    ಟ್ರಾವೆಲ್ಸ್ ಏಜೆಂಟ್: 3,200, 3,500., 3,000 ಅಲೆಪ್ಪಿಗೆ!
    ಪ್ರತಿನಿಧಿ: ಹಳೆದಾ?
    ಟ್ರಾವೆಲ್ಸ್ ಏಜೆಂಟ್: ಹಳೆಯದಲ್ಲ. 22ನೇ ತಾರೀಖಿಗೆ.
    ಪ್ರತಿನಿಧಿ: ಏನ್ ಸರ್ ಸ್ಪೆಷಲ್?
    ಟ್ರಾವೆಲ್ಸ್ ಏಜೆಂಟ್: ಸ್ಪೆಷಲ್ ಅಂದರೆ ಕ್ರಿಸ್‍ಮಸ್ ಮತ್ತು ನ್ಯೂ ಹಿಯರ್ ಸೀಸನ್ ಇದೆ. ಎಲ್ಲರೂ ಕ್ರಿಶ್ಚಿಯನ್ ಹಬ್ಬ ಮಾಡುತ್ತಾರೆ. ಮುಸ್ಲಿಮರು ಮತ್ತು ಹಿಂದುಗಳು ಪ್ಯಾಕೇಜ್‍ಗಳಿಗೆ ಹೋಗುತ್ತಾರೆ. ಆ ಉದ್ದೇಶದಿಂದ ಇಷ್ಟೊಂದು ದರ ಹೆಚ್ಚಾಗಿದೆ. ಈ ರೇಟ್ ಇರುತ್ತೆ. ಬೇರೆ ದಿನಗಳಲ್ಲಿ 900 ರೂ. ಯಿಂದ 1000 ರೂಪಾಯಿ ಇರುತ್ತದೆ.

    ಬೆಂಗಳೂರು ಟು ಗೋವಾ
    ಪ್ರತಿನಿಧಿ: ಗೋವಾಗೆ 4 ಟಿಕೆಟ್ ಬೇಕಾಗಿತ್ತು ಸರ್..
    ಟ್ರಾವೆಲ್ಸ್ ಏಜೆಂಟ್– ಯಾವಾಗ ಸರ್?
    ಪ್ರತಿನಿಧಿ: 22ಕ್ಕೆ ಸರ್
    ಟ್ರಾವಲ್ಸ್ ಏಜೆಂಟ್– ಶನಿವಾರ ಅಲ್ವಾ?
    ಪ್ರತಿನಿಧಿ: ಹೌದು ಸರ್.
    ಟ್ರಾವೆಲ್ಸ್ ಏಜೆಂಟ್– ಎಸಿ. ನಾನ್ ಎಸಿ?
    ಪ್ರತಿನಿಧಿ: ಸ್ಲೀಪರ್
    ಟ್ರಾವಲ್ಸ್ ಏಜೆಂಟ್– 2550
    ಪ್ರತಿನಿಧಿ: ಅಷ್ಟೊಂದಾ ಸರ್?
    ಟ್ರಾವಲ್ಸ್ ಏಜೆಂಟ್– ನೀವೇ ನೋಡಿ.
    ಪ್ರತಿನಿಧಿ: ಹೋದ ವಾರ 900 ಸಾವಿರ ಇತ್ತು.
    ಟ್ರಾವಲ್ಸ್– ಅದು ರೆಗ್ಯೂಲರ್ ಆವತ್ತು ರೇಟ್ ಕಡಿಮೆ. ಈಗ ರಜೆ ಇದೆ 22, 23, 24, 25 ರಜೆ ಕ್ರಿಸ್‍ಮಸ್ ಹಾಲಿಡೆ.
    ರಿಪೋರ್ಟ್‍ರ್– 1500 ಒಳಗಡೆ ಯಾವುದಾದರೂ ಇದ್ದರೆ ನೊಡಿ ಸರ್
    ಟ್ರಾವಲ್ಸ್– 18 ಅಲ್ವ ಇವತ್ತು ನೋಡಿ ನಾನ್ ಎಸಿ ಸ್ಲೀಪರ್ 500
    ರಿಪೋರ್ಟ್‍ರ್– 4 ಜನಕ್ಕೆ 1500 ಒಳಗಡೆ ನಮಗೆ ಬೇಕು ಸರ್.
    ಟ್ರಾವಲ್ಸ್– 22 ಬೆಂಗಳೂರು ಟು ಗೋವ ನೀವೆ ನೋಡಿ ಸರ್ ಯಾವುದು ಕಡಿಮೆ ಇದೆ. ನೋಡಿ ಸರ್ ಇದೊಂದು ಯಾವುದು ಶ್ಯಾಮಲಾ ಟ್ರಾವಲ್ಸ್ ಸಿಟ್ಟಿಂಗ್ ಎಸಿ  ಎಷ್ಟಿದೆ?
    ರಿಪೋರ್ಟ್‍ರ್– 2149
    ಟ್ರಾವಲ್ಸ್– ನಾನ್ ಎಷ್ಟು ಹೇಳಿದೆ ಸುಗಮ ವಿಆರ್‍ಎಲ್ ಎಷ್ಟಿದೆ ನೋಡಿ ಇದೊಂದೆ ಕಡಿಮೆ ಇರೋದು ಇಲ್ಲಿ. ಇನ್ನು ಉಳಿದವೆಲ್ಲ ಪುಲ್ ಜಾಸ್ತಿ.
    ರಿಪೋರ್ಟ್‍ರ್– ಎಲ್ಲಿವರೆಗೂ ಈ ರೇಟ್ ಇರುತ್ತೆ ಸರ್
    ಟ್ರಾವಲ್ಸ್– 24 ರವರೆಗೆ ಈ ರೇಟ್ ಇರುತ್ತೆ

    ಪ್ರಸ್ತುತ ಖಾಸಗಿ ಬಸ್ ದರಗಳು:
    ಬೆಂಗಳೂರಿನಿಂದ ಅಲೆಪ್ಟಿ ಹೋಗಲು ಇಂದಿನ ಬೆಲೆ 1000 ರೂ. ಇದೆ. ಆದರೆ ದಿನಾಂಕ 22ಕ್ಕೆ 2500 ರೂ. ಆಗಿದೆ. ಇನ್ನೂ ಗೋವಾಗೆ ಹೋಗಲು 800 ರೂ. ಪ್ರಯಾಣ ದರ ಇದ್ದುದ್ದು, ಕ್ರಿಸ್‍ಮಸ್ ಗೆ 2999 ರೂ. ಅಧಿಕವಾಗಿದೆ. ಬೆಂಗಳೂರಿನಿಂದ ಮುನ್ನಾರ್ ಗೆ ಇಂದಿನ ಪ್ರಯಾಣದ 900 ರೂ. ಆದರೆ ಇದೇ ಸ್ಥಳಕ್ಕೆ  22ರಂದು ಹೋಗಲು 1800 ರೂ. ಹೆಚ್ಚಾಗಿದೆ. ಊಟಿಗೆ ಹೋಗಲು 500 ಇದ್ದ ದರ. ಕ್ರಿಸ್‍ಮಸ್ ರಜೆಯ ಕಾರಣ 1800 ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು 1500 ರೂ. ಅಧಿಕವಾಗಿದೆ. ಇಂದು ಹೋಗುವುದಾದರೆ ಕೇವಲ 500 ರೂ.ಗೆ ಹೋಗಬಹುದು. ಇಂದು ಬೆಂಗಳೂರಿಂದ ಮರುಡೇಶ್ವರಕ್ಕೆ  ಹೋಗಲು 600 ರೂ. ಬಸ್ ದರವಾಗುತ್ತದೆ. ಆದರೆ 22 ಕ್ಕೆ 1200 ರೂ. ಹೆಚ್ಚಳವಾಗಿದೆ.

    ಸರ್ಕಾರ ಪ್ರತಿ ಬಾರಿ ಕಡಿವಾಣ ಹಾಕುತ್ತೀವಿ ಅಂದರ ಖಾಸಗಿ ಬಸ್‍ ಗಳ ಲಾಭಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳೇ ಮಣಿದಿದ್ದಾರೆ. ಎಷ್ಟೇ ಕಡಿವಾಣ ಹಾಕಿದರೂ ಕೇವಲ ಸುತ್ತೋಲೆಯಲ್ಲಿ ಇರುತ್ತೆ ವಿನಃ ಜಾರಿಗೆ ಬಂದ ಉದಾಹರಣೆನೆ ಇಲ್ಲ. ಇನ್ನಾದರೂ ಸರ್ಕಾರ ಈ ಹಗಲು ದರೋಡೆಯನ್ನ ತಡೆಯುತ್ತಾ ಅಥವಾ ಖಾಸಗಿ ಲಾಭಿಗೆ ಮಣಿಯುತ್ತಾ ಅನ್ನೋದನ್ನ ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಬ್ಬಕ್ಕೆ ದುಪ್ಪಟ್ಟು ದರ ಪಡೆಯುತ್ತಿರೋ ಖಾಸಗಿ ಟ್ರಾವೆಲ್ಸ್‌ಗಳಿಗೆ ಬಿಗ್ ಶಾಕ್

    ಹಬ್ಬಕ್ಕೆ ದುಪ್ಪಟ್ಟು ದರ ಪಡೆಯುತ್ತಿರೋ ಖಾಸಗಿ ಟ್ರಾವೆಲ್ಸ್‌ಗಳಿಗೆ ಬಿಗ್ ಶಾಕ್

    ಬೆಂಗಳೂರು: ಹಬ್ಬಕ್ಕೆ ದುಪ್ಪಟ್ಟು ದರ ಪಡೆಯುತ್ತಿರುವ ಖಾಸಗಿ ಟ್ರಾವೆಲ್ಸ್‌ಗಳಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ಕೊಟ್ಟಿದೆ. ಹೌದು, ನಿಯಮ ಮೀರಿ ಪ್ರಯಾಣದ ದರ ಪಡೆಯುತ್ತಿರುವ ಖಾಸಗಿ ಬಸ್‍ಗಳ ಮೇಲೆ ಅಧಿಕಾರಿಗಳು ರೈಡ್ ಮಾಡುತ್ತಿದ್ದಾರೆ.

    ಹಬ್ಬದ ದಿನಗಳಲ್ಲಿ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಊರಿಗೆ ಮರಳುತ್ತಾರೆ. ಹೀಗಾಗಿ ಖಾಸಗಿ ಟ್ರಾವೆಲ್ಸ್ ಗಳು ಲಾಭಕ್ಕಾಗಿ ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯುತ್ತವೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

    ಜಂಟಿ ಸಾರಿಗೆ ಆಯುಕ್ತ ಜ್ಞಾನೇಂದ್ರ ಕುಮಾರ್ ಮತ್ತು ಅಪರ ಸಾರಿಗೆ ಆಯುಕ್ತ ನಾರಾಯಣ್ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗುತ್ತಿದೆ. ಒಟ್ಟು 12 ತಂಡಗಳನ್ನು ರಚಿಸಲಾಗಿದ್ದು, ಅದರಲ್ಲಿ 35 ಜನ ಆರ್‌ಟಿಓ ಇನ್‍ಸ್ಪೆಕ್ಟರ್ ಗಳು ಹಾಗೂ 20 ಜನ ಅಧಿಕಾರಿಗಳಿದ್ದಾರೆ. ಈ ತಂಡಗಳು ಬೆಂಗಳೂರಿನಿಂದ ಹೊರ ಹೊಗುವ ಪ್ರತಿ ಬಸ್ ಅನ್ನು ತಪಾಸಣೆ ಮಾಡುತ್ತಿವೆ.

    ಬಸ್‍ನಲ್ಲಿ ಪ್ರಯಾಣಿಕರು ಮತ್ತು ಅವರ ಲಗೇಜ್ ಹೊರತು ಪಡಿಸಿ ಯಾವುದೇ ರೀತಿಯ ವಸ್ತುಗಳನ್ನು ಹಾಕುವಂತಿಲ್ಲ. ನಿಯಮ ಮೀರಿ ಹಣ ಪಡೆದಿರುವ ಬಗ್ಗೆ ಮಾಹಿತಿ ಪಡೆಯಲು ಪ್ರಯಾಣಿಕರಿಂದ ಟಿಕೆಟ್ ತಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಒಂದು ವೇಳೆ ಹೆಚ್ಚಿನ ಹಣ ಪಡೆದಿದ್ದರೆ ಅಂತಹ ಟ್ರಾವೆಸ್ಸ್ ವಿರುದ್ಧ ಪ್ರಕರಣ ದಾಖಲಿಸಲು ಆರ್‍ಟಿಓ ಅಧಿಕಾರಿಗಳು ಮುಂದಾಗಿದ್ದಾರೆ.

    ಎಲ್ಲೆಲ್ಲಿ ಪರಿಶೀಲನೆ?: ಮೆಜೆಸ್ಟಿಕ್, ಕಲಾಸಿಪಾಳ್ಯ, ಗೊರಗುಂಟೆಪಾಳ್ಯ, ನೆಲಮಂಗಲ, ದೇವನಹಳ್ಳಿ ಟೋಲ್ ಸೇರಿದಂತೆ ಬೆಂಗಳೂರಿನಿಂದ ಹೊರ ಭಾಗಗಳ ಪ್ರತಿ ಟೋಲ್‍ಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಈ ಮೂಲಕ ಖಾಸಗಿ ಟ್ರಾವೆಲ್ಸ್ ಗಳ ದರ್ಬಾರ್ ಗೆ ಬ್ರೇಕ್ ಹಾಕಲು ಹಾಗೂ ಪ್ರಯಾಣಿಕರ ಮೇಲೆ ಆಗುತ್ತಿರುವ ಹೊರೆಯನ್ನು ತಡೆಯಲು ಸಾರಿಗೆ ಇಲಾಖೆ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರತಿಷ್ಠಿತ ಟ್ರಾವೆಲ್ಸ್ ಕಂಪನಿಯಿಂದ ಕನ್ನಡ ಧ್ವಜಕ್ಕೆ ಅವಮಾನ

    ಪ್ರತಿಷ್ಠಿತ ಟ್ರಾವೆಲ್ಸ್ ಕಂಪನಿಯಿಂದ ಕನ್ನಡ ಧ್ವಜಕ್ಕೆ ಅವಮಾನ

    ಬೆಂಗಳೂರು: ರಾಜ್ಯದಲ್ಲಿ ಪ್ರತಿಷ್ಠಿತ ಟ್ರಾವೆಲ್ಸ್ ಕಂಪನಿಯಾದ ‘ಜಬ್ಬಾರ್ ಟ್ರಾವೆಲ್ಸ್’ ತನ್ನ ಬಸ್ಸಿನಲ್ಲಿ ಸ್ಲೀಪರ್ ಕೋಚ್‍ಗಳ ಬೆಡ್‍ಶೀಟ್‍ಗೆ ಕನ್ನಡ ಧ್ವಜಕ್ಕೆ ಹೋಲಿಕೆ ಆಗುವ ಹೊದಿಕೆಯನ್ನು ಹಾಕಿದ್ದು, ಈ ಮೂಲಕ ಕನ್ನಡ ಧ್ವಜಕ್ಕೆ ಅವಮಾನ ಮಾಡಿದೆ.

    ಜಬ್ಬಾರ್ ಟ್ರಾವೆಲ್ಸ್ ನ ಎಲ್ಲಾ ಸ್ಲೀಪರ್ ಕೋಚ್ ಬಸ್‍ಗಳ ಬೆಡ್‍ಶೀಟ್ ಗಳಿಗೆ ಇದೇ ಮಾದರಿಯ ಹೊದಿಕೆ ಬಳಕೆ ಮಾಡಲಾಗಿದ್ದು, ಇದರಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ ಕೆಲ ಸಾರ್ವಜನಿಕರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ ಟ್ರಾವೆಲ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರಾವೆಲ್ಸ್ ವರ್ತನೆಗೆ ಕನ್ನಡ ಪರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಕ್ರಮಕೈಗೊಳ್ಳಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಲು ತಿಳಿಸುವುದಾಗಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕನ್ನಡ ಪರ ಹೋರಾಟಗಾರರು, ಟ್ರಾವೆಲ್ಸ್ ಸಂಸ್ಥೆ ಉದ್ದೇಶ ಪೂರ್ವಕವಾಗಿಯೇ ಈ ರೀತಿ ಮಾಡಿದೆಯಾ ಎಂಬುದು ತಿಳಿಯಬೇಕಿದೆ. ಈ ಕುರಿತು ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. ಕನ್ನಡಿಗರ ಭಾವನೆಗೆ ನೋವಾಗುವಂತೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಬಸ್ಸಿನಲ್ಲಿ ಈ ರೀತಿ ಮಾಡಿರುವ ಕುರಿತು ಪ್ರಯಾಣಿಕರೆ ಮಾಹಿತಿ ನೀಡಿದ್ದು, ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಬೆಡ್ ಮೇಲೆಯೇ ಮಲಗಿ, ತುಳಿದು ಪ್ರಯಾಣಿಸಬೇಕಿದೆ. ಅದ್ದರಿಂದ ಟ್ರಾವೆಲ್ಸ್ ಎಚ್ಚೆತ್ತು ಈ ತಪ್ಪನ್ನು ಬಹುಬೇಗ ತಿದ್ದಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ‘ಜಬ್ಬಾರ್ ಟ್ರಾವೆಲ್ಸ್’ ಸಂಸ್ಥೆ ಬಹುದಿನಗಳಿಂದ ಕರ್ನಾಟಕದಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. ಆದರೆ ಈ ಹಿಂದೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ವಾಹನದ ಮೇಲೂ ಕನ್ನಡ ಬಾವುಟ ಮಾದರಿಯ ವಿನ್ಯಾಸ ಮಾಡಿದ್ದು ಉತ್ತಮವಾಗಿ ಕಾಣುತ್ತಿದೆ. ಆದರೆ ಬಸ್ಸಿನ ಒಳಭಾಗದಲ್ಲಿ ಈ ರೀತಿ ವಿನ್ಯಾಸ ಮಾಡಿದೆ. ಈ ಕುರಿತು ಸಂಸ್ಥೆಯ ಮಾಲೀಕರು ಇದುವರೆಗೂ ಯಾವುದೇ ಪ್ರತಿಕ್ರಿಯೆನ್ನು ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv