Tag: private training aircraft

  • ಖಾಸಗಿ ತರಬೇತಿ ವಿಮಾನ ಪತನ – ಆರು ಮಂದಿ ಬಚಾವ್

    ಖಾಸಗಿ ತರಬೇತಿ ವಿಮಾನ ಪತನ – ಆರು ಮಂದಿ ಬಚಾವ್

    ಲಕ್ನೋ: ಲ್ಯಾಂಡಿಂಗ್ ಸಮಯದಲ್ಲಿ ಚಕ್ರಕ್ಕೆ ವಿದ್ಯುತ್ ವಯರ್ ಸಿಕ್ಕಿಹಾಕಿಕೊಂಡ ಪರಿಣಾಮ ಖಾಸಗಿ ತರಬೇತಿ ವಿಮಾನ ಪತನಗೊಂಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ 6 ಮಂದಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಧಾನಿಪುರ ವಾಯುನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಇಂದು ಬೆಳಗ್ಗೆ ವಾಯುನೆಲೆಯಲ್ಲಿ ವಿಟಿ-ಎವಿವಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಚಕ್ರಗಳಿಗೆ ವಿದ್ಯುತ್ ವಯರ್‌ಗಳು ಸಿಕ್ಕಿಹಾಕಿಕೊಂಡ ಪರಿಣಾಮ ವಿಮಾನ ಪತನವಾಗಿದೆ.

    ನಿರ್ವಹಣೆ ಸಂಬಂಧ ವಿಮಾನವನ್ನು ಧಾನಿಪುರದಲ್ಲಿ ಲ್ಯಾಂಡಿಂಗ್ ಮಾಡಲಾಗುತ್ತಿತ್ತು. ವಿಮಾನ ಪತನಗೊಂಡ ಬಳಿಕ ಅದರಲ್ಲಿ ಇದ್ದವರು ವಿಮಾನದಿಂದ ಹೇಗೋ ಹೊರಬಂದಿದ್ದಾರೆ. ನಂತರ ಕೆಲ ನಿಮಿಷಗಳಲ್ಲಿಯೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿದೆ. ಈ ಬಗ್ಗೆ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.