Tag: private part

  • ಕೊತ ಕೊತ ಕುದಿಯುವ ಬಿಸಿ ಬಿಸಿ ಎಣ್ಣೆ ಗಂಡನ ‘ಅದಕ್ಕೇ’ ಸುರಿದ್ಳು ಪತ್ನಿ!

    ಕೊತ ಕೊತ ಕುದಿಯುವ ಬಿಸಿ ಬಿಸಿ ಎಣ್ಣೆ ಗಂಡನ ‘ಅದಕ್ಕೇ’ ಸುರಿದ್ಳು ಪತ್ನಿ!

    ಮದುರೈ: ತಾಳಿ ಕಟ್ಟಿದ ನಾನಿರಬೇಕಾದ್ರೆ ಇನ್ನೊಬ್ಳ ಜೊತೆ ಅಕ್ರಮ ಸಂಬಂಧವಿಟ್ಟುಕೊಳ್ಳಬೇಡ ಎಂದು ಹೇಳಿದರೂ ಕೇಳದ ಪತಿ ಮಹಾಶಯನಿಗೆ ಹೆಂಡತಿಯೊಬ್ಬಳು ತಕ್ಕ ಶಾಸ್ತಿ ಮಾಡಿದ್ದಾಳೆ. ಪತಿಯ ಲವ್ವಿ ಡವ್ವಿಯಿಂದ ಕೆರಳಿದ್ದ ಪತ್ನಿ ಕೊತ ಕೊತ ಕುದಿಯುತ್ತಿದ್ದ ಬಿಸಿ ಎಣ್ಣೆಯನ್ನು ಗಂಡನ ಗುಪ್ತಾಂಗದ ಮೇಲೆ ಸುರಿದಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುರೈ ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ

    ಆಗಿದ್ದೇನು?: ಇಲ್ಲಿನ ನೆಹರೂ ನಗರದ ಎಂ.ಪರಮೇಶ್ವರನ್(37)ಗೆ ಶಶಿಕಲಾ ಎಂಬಾಕೆಯ ಜೊತೆ ಮದುವೆಯಾಗಿತ್ತು. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಪರಮೇಶ್ವರನ್ ಗೆ, ವಿರಟ್ಟಿಪತ್ತು ಎಂಬಲ್ಲಿನ ಮಹಿಳೆಯ ಜೊತೆ ಪರಿಚಯವಾಗಿದೆ. ಈ ಸಂಬಂಧವನ್ನು ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದ ಇಬ್ಬರೂ ಅಕ್ರಮ ಸಂಬಂಧವಿಟ್ಟುಕೊಂಡಿದ್ದರು. ಈ ವಿಚಾರ ಪತ್ನಿ ಶಶಿಕಲಾ ಗಮನಕ್ಕೆ ಬಂದು ಪರಮೇಶ್ವರನ್ ಜೊತೆ ಆಗಾಗ ಗಲಾಟೆ ಮಾಡುತ್ತಿದ್ದಳು. ಪತ್ನಿಯ ವಿಚಾರಣೆಯಿಂದ ಬೇಸತ್ತ ಪತಿ ಪರಮೇಶ್ವರ್ ಮನೆಗೆ ಬರುವುದನ್ನು ಬಿಟ್ಟುಬಿಟ್ಟಿದ್ದ. ಈ ವಿಚಾರ ಎಸ್.ಎಸ್.ಕಾಲೋನಿ ಠಾಣೆಯ ಮೆಟ್ಟಿಲೇರಿತ್ತು. ನಂತರ ಪೊಲೀಸರು ಪರಮೇಶ್ವರ್ ನನ್ನು ಕರೆದು ಎಚ್ಚರಿಕೆ ನೀಡಿ ಮನೆಗೆ ವಾಪಸ್ ಕಳಿಸಿದ್ದರು. ಆದರೆ ಕೆಲ ದಿನಗಳ ಬಳಿಕ ಪರಮೇಶ್ವರನ್ ಮತ್ತೆ ಅಕ್ರಮ ಸಂಬಂಧ ಶುರು ಮಾಡ್ಕೊಂಡ. ಆಕೆಯ ಜೊತೆಯೇ ವಾಸ್ತವ್ಯವನ್ನೂ ಆರಂಭಿಸಿದ.

    ಇದನ್ನೂ ಓದಿ: ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಪ್ಲ್ಯಾನ್ ಮಾಡಿ ಕರೆಸಿಕೊಂಡ್ಳು!: ಕಳೆದ ವಾರ ಪರಮೇಶ್ವರನ್ ಗೆ ಫೋನ್ ಮಾಡಿದ ಪತ್ನಿ ಶಶಿಕಲಾ ಆತನ ಬಳಿ ನಯವಾಗಿಯೇ ಮಾತನಾಡಿದ್ದಾಳೆ. ಮನೆಗೆ ಬಂದು ನನ್ನ ಜೊತೆಯೇ ಸಂಸಾರ ಮಾಡು ಎಂದು ಕೇಳಿಕೊಂಡಿದ್ದಾಳೆ. ಹೀಗಾಗಿ ಕಳೆದ ಶನಿವಾರ ಪರಮೇಶ್ವರನ್ ಮನೆಗೆ ಬಂದು ಊಟ ಮಾಡಿ ಮಲಗಿದ್ದ. ಇದಕ್ಕಾಗಿಯೇ ಕಾಯುತ್ತಿದ್ದ ಶಶಿಕಲಾ ಬಾಣಲೆಯಲ್ಲಿ ಎಣ್ಣೆ ಕಾಯಿಸಲು ಇಟ್ಟಿದ್ದಾಳೆ. ಈತ ನಿದ್ರಾದೇವಿಗೆ ಸಂಪೂರ್ಣವಾಗಿ ಶರಣಾಗಿದ್ದಾನೆ ಎಂದು ಖಚಿತಪಡಿಸಿಕೊಂಡು ಬಾಣಲೆ ಎತ್ತಿಕೊಂಡು ಬಂದು ಅದರಲ್ಲಿದ್ದ ಬಿಸಿ ಬಿಸಿಯಾಗಿ ಕುದಿಯುತ್ತಿದ್ದ ಎಣ್ಣೆಯನ್ನು ಆತನ ಗುಪ್ತಾಂಗಕ್ಕೆ ಸುರಿದಿದ್ದಾಳೆ. ಎಣ್ಣೆ ಬೀಳುತ್ತಿದ್ದಂತೆಯೇ ಎಚ್ಚೆತ್ತ ಪರಮೇಶ್ವರನ್ ಕಿರುಚಾಡಲು ಶುರುಮಾಡಿದ್ದಾನೆ. ತಕ್ಷಣ ಸ್ಥಳೀಯರು ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇದನ್ನೂ ಓದಿ: ಲವ್ ಮಾಡಿ ಗರ್ಭಿಣಿ ಮಾಡ್ದ, ಮದುವೆಯಾಗು ಎಂದಿದ್ದಕ್ಕೆ ಕೊಲೆಯೇ ಮಾಡ್ಬಿಟ್ಟ ಪಾಪಿ!

    ಬಿಸಿ ಬಿಸಿ ಎಣ್ಣೆ ಬಿದ್ದಿದ್ದರಿಂದ ಗುಪ್ತಾಂಗಕ್ಕೆ ಸುಟ್ಟಗಾಯಗಳಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುರೈ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ ಮಹಿಳೆಯನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

  • ಮೊಬೈಲ್ ಬ್ಲಾಸ್ಟ್ ಆಗಿ ಯುವಕನ ತೊಡೆ, ಮರ್ಮಾಂಗಕ್ಕೆ ಗಂಭೀರ ಗಾಯ

    ಮೊಬೈಲ್ ಬ್ಲಾಸ್ಟ್ ಆಗಿ ಯುವಕನ ತೊಡೆ, ಮರ್ಮಾಂಗಕ್ಕೆ ಗಂಭೀರ ಗಾಯ

    ಕೊಪ್ಪಳ: ಗ್ರಾಹಕರೆ ಮೊಬೈಲ್ ಖರೀದಿಸೋ ಮುನ್ನ ಎಚ್ಚರ ವಹಿಸಿ. ಯಾಕಂದ್ರೆ ಎಂಐ ನೋಟ್ 4 ಮೊಬೈಲ್ ಬ್ಲಾಸ್ಟ್ ಆಗಿ ಯುವಕನಿಗೆ ಗಂಭೀರ ಗಾಯವಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ಹನುಮೇಶ್ ಹರಿಜನ ಎಂಬವರು ತಮ್ಮ ಮೊಬೈಲನ್ನು ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡಾಗ ಏಕಾಏಕಿ ಬ್ಲಾಸ್ಟ್ ಆಗಿದೆ. ಪರಿಣಾಮ ಯುವಕನ ತೊಡೆಭಾಗ ಮತ್ತು ಮರ್ಮಾಂಗಕ್ಕೆ ಗಂಭೀರ ಗಾಯಗಳಾಗಿವೆ.

    ಹನುಮೇಶ್ ಹರಿಜನ ಆನ್‍ಲೈನ್ ಮೂಲಕ ಮೊಬೈಲ್ ಖರೀದಿಸಿದ್ದರು. ಸದ್ಯ ಗಾಯಗೊಂಡಿರುವ ಯುವಕ ಹನುಮೇಶರನ್ನು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಅಕ್ರಮ ಸಂಬಂಧ ಆರೋಪಕ್ಕೆ ಮನನೊಂದು ಸ್ವಾಮೀಜಿ `ಅದನ್ನೇ’ ಕಟ್ ಮಾಡ್ಕೊಂಡ!

    ಅಕ್ರಮ ಸಂಬಂಧ ಆರೋಪಕ್ಕೆ ಮನನೊಂದು ಸ್ವಾಮೀಜಿ `ಅದನ್ನೇ’ ಕಟ್ ಮಾಡ್ಕೊಂಡ!

    ಜೈಪುರ: 30 ವರ್ಷದ ಸ್ವಯಂಘೋಷಿತ ದೇವಮಾನವನೊಬ್ಬ ತನ್ನ ಗುಪ್ತಾಂಗವನ್ನು ತಾನೇ ಕತ್ತರಿಸಿಕೊಂಡ ವಿಚಿತ್ರ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.

    ಈ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ತಾರಾ ನಗರ್ ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದ್ದು, ಮಂಗಳವಾರ ಸಂಜೆ ವೇಳೆ ಬೆಳಕಿಗೆ ಬಂದಿದೆ. ಕೃತ್ಯ ಎಸಗಿಕೊಂಡಿರೋ ಸ್ವಾಮೀಜಿಯನ್ನು ಸಂತೋಷ್ ದಾಸ್ ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

    ಘಟನೆಗೆ ಕಾರಣವೇನು?: ಸ್ವಾಮೀಜಿ ಸಂತೋಷ್ ದಾಸ್ ತಾರ ನಗರ್ ಪ್ರದೇಶದಲ್ಲಿರುವ ತನ್ನ ಹರಿದಾಸ್ ಆಶ್ರಮದ ಪಕ್ಕದ ಮನೆಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಆರೋಪದಿಂದಲೇ ಸ್ವಾಮೀಜಿ ಈ ಕೃತ್ಯ ಎಸಗಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.

    ಇದನ್ನೂ ಓದಿ:  ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ 

    ಮಂಗಳವಾರ ಬೆಳಗ್ಗೆ ಸ್ಥಳೀಯರ ಆರೋಪವನ್ನು ಸ್ವಾಮೀಜಿ ಒಪ್ಪಿಕೊಂಡಿದ್ದಾನೆ. ಈ ಅವಮಾನವನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಸ್ವಾಮೀಜಿ ಆಶ್ರಮಕ್ಕೆ ಬಂದು ತನ್ನ ಗುಪ್ತಾಂಗವನ್ನು ತಾನೇ ಕತ್ತರಿಸಿಕೊಂಡಿದ್ದಾನೆ. ಬಳಿಕ ನೋವಿನಿಂದ ಚೀರಾಡಿಕೊಂಡಿದ್ದಾನೆ. ಈ ವೇಳೆ ಆಶ್ರಮದಲ್ಲಿದ್ದ ಇತರ ಸ್ವಾಮೀಜಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ದಾಸ್ ನನ್ನು ತಾರಾ ನಗರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬಿಕನೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಸದ್ಯ ಸ್ವಾಮೀಜಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಇದನ್ನೂ ಓದಿ: ಕೇರಳದ ಸ್ವಾಮೀಜಿಯ ಮರ್ಮಾಂಗ ಕತ್ತರಿಸಿದ್ದು ಮಗಳ ಬಾಯ್ ಫ್ರೆಂಡ್ – ತಾಯಿಯಿಂದ ದೂರು

    ಘಟನೆಗೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ವಾಮೀಜಿಯಿಂದ ಹೇಳಿಕೆಯನ್ನು ಇನ್ನಷ್ಟೇ ಪಡೆದುಕೊಳ್ಳಬೇಕಾಗಿದೆ. ಕೆಲ ತಿಂಗಳ ಹಿಂದೆ ತೇರಳದ ತಿರುವನಂತಪುರಂನಲ್ಲಿ ಸ್ವಾಮೀಜಿಯೊಬ್ಬರ ಗುಪ್ತಾಂಗವನ್ನು ಕತ್ತರಿಸಿದ್ದು ಸುದ್ದಿಯಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಈ ಕೃತ್ಯ ಎಸಗಿದ್ದಾಳೆ ಎಂದಿದ್ದರೂ ನಂತರ ಸ್ವಾಮೀಜಿ ನಾನೇ ಗುಪ್ತಾಂಗವನ್ನು ಕತ್ತರಿಸಿಕೊಂಡೆ ಎಂದು ಸ್ಪಷ್ಟನೆ ನೀಡಿದ್ದರು. ಈ ಪ್ರಕರಣದ ಸತ್ಯಾಸತ್ಯತೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

    https://www.youtube.com/watch?v=Oul2v2F1DEM

  • ಶವದ ಮರ್ಮಾಂಗ ಹಿಡಿದು ಮಹಿಳೆ ರೋಧನೆ: ಕಲಬುರಗಿಯಲ್ಲೊಂದು ವಿಚಿತ್ರ ಘಟನೆ

    ಶವದ ಮರ್ಮಾಂಗ ಹಿಡಿದು ಮಹಿಳೆ ರೋಧನೆ: ಕಲಬುರಗಿಯಲ್ಲೊಂದು ವಿಚಿತ್ರ ಘಟನೆ

    ಕಲಬುರಗಿ: ಮೃತ ವ್ಯಕ್ತಿಯೊಬ್ಬರ ಮರ್ಮಾಂಗವನ್ನು ಹಿಡಿದು ಮಹಿಳೆ ರೋಧಿಸಿದ ವಿಚಿತ್ರ ಘಟನೆಯೊಂದು ಕಲಬುರಗಿ ನಗರದ ರೈಲು ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.

    ಮೃತ ವ್ಯಕ್ತಿ ಯಾರು ಎಂಬುವುದಾಗಿ ತಿಳಿದುಬಂದಿಲ್ಲ. ಆದ್ರೆ ರೋಧಿಸುತ್ತಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ತನ್ನ ಗಂಡನೆಂದು ಆ ಮಹಿಳೆ ಹೇಳುತ್ತಿದ್ದಾಳೆ. ಆಕೆಯ ವಿಚಿತ್ರ ವರ್ತನೆ ಕಂಡು ಸಾರ್ವಜನಿಕರು ಮುಜುಗರಗೊಂಡು ಬೆದರಿಸಿದರೂ ಶವ ಬಿಟ್ಟು ಮಹಿಳೆ ಕದಲಿಲ್ಲ.

    ಇದರಿಂದ ಬೇಸತ್ತ ಜನ ಮಹಿಳೆಯ ಕೈಗೆ ಹಗ್ಗ ಬಿಗಿದು ಪಕ್ಕದಲ್ಲಿ ಕೂರಿಸಿದ್ದಾರೆ. ಅಲ್ಲದೇ ಶವ ತೆರವುಗೊಳಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಈ ಕುರಿತು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ರೂ ಈವರೆಗೆ ಶವವನ್ನ ಸ್ಥಳಾಂತರ ಮಾಡಿಲ್ಲ.