Tag: private part

  • ಸರಸಕ್ಕೆಂದು ಮನೆಗೆ ಕರೆಸಿಕೊಂಡು ಪ್ರಿಯಕರನ ಮರ್ಮಾಂಗ ಕತ್ತರಿಸಿದ್ಲು

    ಸರಸಕ್ಕೆಂದು ಮನೆಗೆ ಕರೆಸಿಕೊಂಡು ಪ್ರಿಯಕರನ ಮರ್ಮಾಂಗ ಕತ್ತರಿಸಿದ್ಲು

    ಹೈದರಾಬಾದ್: ವಿವಾಹೇತರ ಸಂಬಂಧಗಳು ಮತ್ತು ಅಕ್ರಮ ಸಂಬಂಧಗಳು ಮುಂದೊಂದು ದಿನ ಅಪಾಯಕ್ಕೆ ತಂದೊಡ್ಡುತ್ತದೆ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿದೆ. ಅಕ್ರಮ ಸಂಬಂಧಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿರುವ ದುರಾದೃಷ್ಟಕರ ಘಟನೆಗಳು ಸಾಕಷ್ಟಿದೆ. ಇದೀಗ ಆಂಧ್ರಪ್ರದೇಶದ (Andhra Pradesh) ಪ್ರಕಾಶಂ ಜಿಲ್ಲೆಯ (Prakasam District) ಕೊಂಡಪಿ ಮಂಡಲದ (Kondapi Mandal) ಕೊಳೆಗೇರಿಯಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ 60 ವರ್ಷದ ವ್ಯಕ್ತಿಯ ಮರ್ಮಾಂಗವನ್ನು ಪ್ರಿಯತಮೆಯೇ ಕತ್ತರಿಸಿ ಹಾಕಿದ್ದು, ವ್ಯಕ್ತಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

     

    ಹೌದು ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿ ಇದೀಗ ಆಸ್ಪತ್ರೆಯ ಹಾಸಿಗೆಯಲ್ಲಿ ಪರದಾಡುತ್ತಿದ್ದಾನೆ. ಇದಕ್ಕೆ ಕಾರಣ 55ರ ವರ್ಷದ ಆತನ ಗೆಳತಿ. ಹೌದು, ತನ್ನನ್ನು ಒಬ್ಬನೇ ಬಂದು ಭೇಟಿಯಾಗುವಂತೆ ಹೇಳಿದ್ದ ಪ್ರಿಯತಮೆಯೇ ವ್ಯಕ್ತಿಯ ಮರ್ಮಾಂಗವನ್ನು ಬ್ಲೇಡ್ ನಿಂದ ಕತ್ತರಿಸಿದ್ದಾಳೆ. ಇದನ್ನೂ ಓದಿ: ಸ್ನಾನದ ವೀಡಿಯೋ ಲೀಕ್‌ ಬೆನ್ನಲ್ಲೇ ಹಾಸ್ಟೆಲ್‌ ತೊರೆಯುತ್ತಿರುವ ವಿದ್ಯಾರ್ಥಿನಿಯರು – 5 ದಿನ ವಿವಿ ಬಂದ್‌

    ಸುಮಾರು 10 ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದ ಈ ಜೋಡಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಈ ಬಾರಿ ಮನೆಗೆ ಕರೆಸಿಕೊಂಡು ಮಹಿಳೆ ಈ ಕೃತ್ಯವೆಸಗಿದ್ದಾಳೆ. ಇದೀಗ ಸ್ಥಳೀಯರು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತಿದೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸುಮಲತಾ ಹೇಳಿದ ದಿನ ಆಣೆ ಮಾಡಲು ರೆಡಿ- ಮೇಲುಕೋಟೆ ಸನ್ನಿಧಿಯಲ್ಲಿ ಪುಟ್ಟರಾಜು ಸವಾಲು ಸ್ವೀಕಾರ

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರ ಮುಂದೆ ನಗ್ನತೆ ಪ್ರದರ್ಶನ – ವ್ಯಕ್ತಿಯ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ

    ಮಹಿಳೆಯರ ಮುಂದೆ ನಗ್ನತೆ ಪ್ರದರ್ಶನ – ವ್ಯಕ್ತಿಯ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಜನ

    ಭೋಪಾಲ್: ಮಹಿಳೆಯರು ಮತ್ತು ಯುವತಿಯರ ಮುಂದೆ ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಖಾಸಗಿ ಅಂಗಕ್ಕೆ ಊರಿನ ಜನ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಈ ಪ್ರಕರಣ ಸಂಬಂಧ ಪೆಟ್ರೋಲ್‌ ಹಚ್ಚಿದ ಇಬ್ಬರನ್ನು ಬಂಧಿಸಲಾಗಿದ್ದು, ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಕಜ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರತಿನಿತ್ಯ ಮಹಿಳೆಯರು ಮತ್ತು ಯುವತಿಯರ ಮುಂದೆ ವ್ಯಕ್ತಿಯೋರ್ವ ತನ್ನ ಖಾಸಗಿ ಅಂಗವನ್ನು ತೋರಿಸುವ ಮೂಲಕ ಅಶ್ಲೀಲವಾಗಿ ವರ್ತಿಸುತ್ತಿದ್ದನು. ಈ ಕುರಿತಂತೆ ಗ್ರಾಮಸ್ಥರು ಸಾಕಷ್ಟು ಬಾರೀ ಆತನಿಗೆ ಎಚ್ಚರಿಕೆ ನೀಡಿದ್ದಾರೆ.  ಇದನ್ನೂ ಓದಿ: ಗಣೇಶೋತ್ಸವ ಆಚರಿಸುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಜಮೀರ್‌ಗೆ ಶ್ರೀರಾಮ ಸೇನೆ ಸವಾಲ್‌

    ಹೀಗಿದ್ದರೂ ಶನಿವಾರ ಗ್ರಾಮದ ಮಹಿಳೆಯರ ಮುಂದೆ ತನ್ನ ಚಾಳಿಯನ್ನು ಮುಂದುವರೆಸಿದ್ದಕ್ಕೆ ಆತನಿಗೆ ಇಬ್ಬರು ವ್ಯಕ್ತಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಆತನ ಖಾಸಗಿ ಅಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಮಾನಸಿಕ ಅಸ್ವಸ್ಥನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಇದೀಗ ಸಂತ್ರಸ್ತನ ಸ್ಥಿತಿ ಗಂಭೀರವಾಗಿದ್ದು, ಈತ ಮಾನಸಿಕ ರೋಗಿ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    Live Tv
    [brid partner=56869869 player=32851 video=960834 autoplay=true]

  • ಡೇಟಾ ಪ್ಯಾಕ್‌ ಹಾಕಲು ಹಣ ನೀಡಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಯುವಕ

    ಡೇಟಾ ಪ್ಯಾಕ್‌ ಹಾಕಲು ಹಣ ನೀಡಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಯುವಕ

    ಹುಬ್ಬಳ್ಳಿ: ವ್ಯಕ್ತಿಯೊಬ್ಬ ಮೊಬೈಲ್ ಡೇಟಾ ಹಾಕಿಸಲು  ಹಣ ನೀಡಿಲ್ಲವೆಂದು ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಘಟನೆ ಧಾರವಾಡ ತಾಲೂಕಿನ ನವಲೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿ ಬಸವರಾಜ ಅವರ ಮಗ ಮೈಲಾರಿ ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಯುವಕ. ಕೇವಲ ಆರನೇಯ ತರಗತಿ ಓದಿರುವ ಮೈಲಾರಿಯ ವಯಸ್ಸು 20 ದಾಟಿದ್ದರು, ಯಾವುದೇ ಕೆಲಸ ಮಾಡದೇ ಕಾಲ ಕಳೆಯುತ್ತಿದ್ದ. ಜೊತೆಗೆ ಮೊಬೈಲ್ ಹುಚ್ಚು ಜಾಸ್ತಿ ಹಿಡಿಸಿಕೊಂಡಿದ್ದ. ನಿನ್ನೆ ಮೈಲಾರಿಯ ಮೊಬೈಲ್ ಕರೆನ್ಸಿ ಖಾಲಿಯಾಗಿತ್ತು. ಹೀಗಾಗಿ ಮೈಲಾರಿ ತನ್ನ ತಂದೆ ಬಳಿ ಹಣ ಕೇಳಿದ್ದಾನೆ. ಆದರೆ ತಂದೆ ಮೊಬೈಲ್‍ಗೆ ಕರೆನ್ಸಿ ಹಾಕಿಸಲು ಒಪ್ಪಿರಲಿಲ್ಲ. ಈ ಕಾರಣಕ್ಕಾಗಿ ಮನೆಯಲ್ಲಿ ಜಗಳವಾಗಿದೆ. ಇದರಿಂದಾಗಿ ಕೋಪಗೊಂಡ ಯುವಕ ಗೊರಪ್ಪನ ವೇಶ ಹಾಕಿಕೊಂಡು ಮನೆಯ ಹತ್ತಿರ ದೇವಸ್ಥಾನಕ್ಕೆ ತೆರಳಿದ್ದಾನೆ. ದೇವಸ್ಥಾನಕ್ಕೆ ತೆರಳಿ ಅಲ್ಲಿರುವ ತ್ರಿಶೂಲವನ್ನು ತನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡು ಅಸ್ವಸ್ಥನಾಗಿ ಬಿದ್ದಿದ್ದಾನೆ. ಇದನ್ನೂ ಓದಿ: ಲವ್ವರ್‌ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್‌ಮ್ಯಾನ್

    ಇದನ್ನು ಕಂಡ ಸ್ಥಳೀಯರು ಅವರ ತಂದೆ ಬಸವರಾಜರಿಗೆ ವಿಷಯ ತಿಳಿಸಿದ್ದಾರೆ. ಸದ್ಯ ಮೈಲಾರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಪರೇಷನ್ ಮಾಡಿ ತ್ರಿಶೂಲ ಹೊರ ತೆಗೆಯಲಾಗಿದೆ. ಮೈಲಾರಿ ಮೊದಲಿಂದಲೂ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದ. ಆತನ ತಂದೆ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಖಾಲಿಯಾಗಿ ತಿರುಗಾಡುತ್ತಿದ್ದ ಮೈಲಾರಿ, ತನ್ನ ಬೇಸರ ಕಳೆಯಲು ಮೊಬೈಲ್ ನೆಚ್ಚಿಕೊಂಡಿದ್ದನು.  ಇದನ್ನೂ ಓದಿ: ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಆದರೆ ದುಡಿಯದ ಮಗನನ್ನು ಕಂಡು ತಂದೆಗೆ ಸಹಜವಾಗಿ ಬೇಸರದ ಭಾವನೆಯಿತ್ತು. ಈ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳ ಕೂಡವಾಗುತಿತ್ತು. ಆದರೆ ಮೊನ್ನೆ ಜಗಳದಿಂದ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಮನೆಬಿಟ್ಟು ಹೋದ ಮೈಲಾರಿ, ಈ ಅನಾಹುತವನ್ನು ಮಾಡಿಕೊಂಡಿದ್ದಾನೆ.

  • ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟ್ಲಿ ತುರುಕಿ ವಿಕೃತಿ ಮೆರೆದ..!

    ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟ್ಲಿ ತುರುಕಿ ವಿಕೃತಿ ಮೆರೆದ..!

    – ಕೋಣೆಯಲ್ಲಿ ಲಾಕ್ ಆಗಿದ್ದ ತಾಯಿ-ಮಗಳ ರಕ್ಷಣೆ

    ಭುವನೇಶ್ವರ: ವೇಶ್ಯಾವಾಟಿಕೆಗೆ ಒಪ್ಪದ ಪತ್ನಿಯ ಗುಪ್ತಾಂಗಕ್ಕೆ ಪತಿ ಮಹಾಶಯ ಮದ್ಯದ ಬಾಟಲಿಯನ್ನು ತುರುಕಿ ವಿಕೃತಿ ಮೆರೆದ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಮಹಿಳೆ, ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಪತಿ ಚಂದನ್ ಆಚಾರ್ಯನನ್ನು ಬಂಧಿಸಿದ್ದಾರೆ.

    ಚಂದನ್ ಆಚಾರ್ಯ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈತ ತನ್ನ ಪತ್ನಿ ಹಾಗೂ 5 ವರ್ಷದ ಮಗಳ ಜೊತೆ ಒಡಿಶಾದ ಚಂದ್ರಶೇಖರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮಾವತಿ ವಿಹಾರ್ ನಲ್ಲಿ ನೆಲೆಸಿದ್ದಾನೆ.

    ಪತಿ ಚಂದನ್ ಆಚಾರ್ಯ ತನ್ನನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿರುವುದರಿಂದ ಮನನೊಂದ ಪತ್ನಿ ಚಂದ್ರಶೇಖರ್ ಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಹಿಳೆ ದೂರು ನೀಡುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಕೋಣೆಯಲ್ಲಿ ಲಾಕ್ ಆಗಿದ್ದ ಮಹಿಳೆ ಹಾಗೂ ಆಕೆಯ 5 ವರ್ಷದ ಮಗಳನ್ನು ರಕ್ಷಿಸಿದ್ದಾರೆ. ಇತ್ತ ಆರೋಪಿ ಪತಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    10 ವರ್ಷಗಳ ಹಿಂದೆ ಮಹಿಳೆ ಚಂದನ್ ಆಚಾರ್ಯನನ್ನು ವರಿಸಿದ್ದರು. ಇಷ್ಟು ವರ್ಷ ಚೆನ್ನಾಗಿಯೇ ಇದ್ದ ಸಂಸಾರ, 5 ದಿನಗಳ ಹಿಂದೆಯಿಂದ ಮಹಿಳೆಗೆ ಪತಿ ಹಿಂಸೆ ನೀಡುತ್ತಿದ್ದನು. ಪತಿಯ ನಿರ್ಧಾರಕ್ಕೆ ಪತಿ ಒಪ್ಪಲಿಲ್ಲ. ಅಲ್ಲದೆ ತನ್ನದೇ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿಕೊಳ್ಳಲು ಮಹಿಳೆ ನಿರಾಕರಿಸಿದರು.

    ಇದರಿಂದ ಪತಿ ಹಾಗೂ ಪತ್ನಿಯ ಮಧ್ಯೆ ಮನಸ್ತಾಪ ಉಂಟಾಗಿತ್ತು. ಒಂದು ದಿನ ಕಂಠಪೂರ್ತಿ ಕುಡಿದು ಮನೆಗೆ ಬಂದ ಪತಿರಾಯ, ರಾಡ್ ನಿಂದ ಪತ್ನಿಗೆ ಚೆನ್ನಾಗಿ ಥಳಿಸಿದ್ದಾನೆ. ನಂತರ ತನ್ನ ಕೈಯಲಿದ್ದ ಮದ್ಯದ ಬಾಟ್ಲಿಯನ್ನು ಪತ್ನಿಯ ಗುಪ್ತಾಂಗಕ್ಕೆ ತುರುಕಿದ್ದಾನೆ. ಪರಿಣಾಮ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪ್ರಜ್ಞೆ ಬಂದ ಬಳಿಕ ಮಹಿಳೆ ನಡೆದ ಘಟನೆಯನ್ನು ತನ್ನ ತಾಯಿಯ ಮುಂದೆ ವಿವರಿಸಿದ್ದಾರೆ. ಅಲ್ಲದೆ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ದೂರು ದಾಖಲಿಸಿ, ಜೈಲಿಗಟ್ಟಿದ್ದಾಳೆ.

  • ನೀರು ಕೊಡಲು ನಿರಾಕರಣೆ – ವಿಧವೆಯ ಗುಪ್ತಾಂಗಕ್ಕೆ ರಾಡ್ ತುರುಕಿದ್ರು!

    ನೀರು ಕೊಡಲು ನಿರಾಕರಣೆ – ವಿಧವೆಯ ಗುಪ್ತಾಂಗಕ್ಕೆ ರಾಡ್ ತುರುಕಿದ್ರು!

    – ಶಸ್ತ್ರ ಚಿಕಿತ್ಸೆಯ ಮೂಲಕ ರಾಡ್ ತೆಗೆದ ವೈದ್ಯರು
    – ಮಹಿಳೆಯ ಸ್ಥಿತಿ ಗಂಭೀರ

    ಭೋಪಾಲ್: ನೀರು ಕೊಡಲು ನಿರಾಕರಿಸಿದ ವಿಧವೆಯನ್ನು ಮನೆಯಿಂದ ಹೊರಗೆಳೆದು ಆಕೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ ವಿಕೃತಿ ಮೆರೆದ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದಿದೆ.

    ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಗಂಭೀರ ಗಾಯಗೊಂಡಿದ್ದು, ರೇವಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಹಿಳೆ ತನ್ನ ಇಬ್ಬರು ಪುತ್ರರೊಂದಿಗೆ ಶಾಂತಿ ನಗರದಲ್ಲಿ ವಾಸವಾಗಿದ್ದಾರೆ. ಅಲ್ಲದೆ ಅಮಾಲಿಯಾ ಪ್ರದೇಶಲ್ಲಿ ಟೀ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ ಏಕಾಏಕಿ ಬಂದ ಮೂವರು ನೀರು ಕೊಡುವಂತೆ ಕೇಳಿದ್ದಾರೆ. ಈ ವೇಳೆ ಮಹಿಳೆ ನೀರು ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮೂವರು, ಮಹಿಳೆಯನ್ನು ಮನೆಯಿಂದ ಹೊರಗೆಳೆದು ಆಕೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ ವಿಕೃತಿ ಮೆರೆದಿದ್ದಾರೆ.

    ಘಟನೆಯಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ಕೂಡಲೇ ರೇವಾ ಜಿಲ್ಲೆಯಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರ ಚಿಕಿತ್ಸೆಯ ಮೂಲಕ ವೈದ್ಯರು ಮಹಿಳೆಯ ಖಾಸಗಿ ಅಂಗದಿಂದ ರಾಡ್ ತೆಗೆದಿದ್ದಾರೆ.

    ಪ್ರಕರಣ ಸಂಬಂಧ ಗೃಹ ಸಚಿವ ನರೋಟ್ಟಂ ಮಿಶ್ರಾ ಮಾತನಾಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

  • ಶ್ವಾನದ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಖಾಸಗಿ ಅಂಗಕ್ಕೆ ಕೋಲು ತುರುಕಿದ ಪಾಪಿಗಳು!

    ಶ್ವಾನದ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಖಾಸಗಿ ಅಂಗಕ್ಕೆ ಕೋಲು ತುರುಕಿದ ಪಾಪಿಗಳು!

    – 11 ಇಂಚಿನ ಕೋಲು ಹೊರತೆಗೆದ ವೈದ್ಯರು
    – ಸಾವು- ಬದುಯಕಿನ ಮಧ್ಯೆ ನೂರಿ ಹೋರಾಟ

    ಮುಂಬೈ: ಪ್ರಾಣಿ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ಮುಂಬೈನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

    ಹೌದು. 8 ವರ್ಷದ ನೂರಿ ಎಂಬ ಹೆಣ್ಣು ಶ್ವಾನದ ಮೇಲೆ ಪಾಪಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮುಂಬೈನ ಪೊವಾಯ್ ಶಾಪಿಂಗ್ ಕಾಂಪ್ಲೆಕ್ಸ್ ಒಳಗಡೆ ಈ ಆಘಾತಕಾರಿ ಘಟನೆ ನಡೆದಿದೆ.

    ಮಹಿಳೆಯೊಬ್ಬರು ಪ್ರಾಣಿಗಳಿಗೆ ಪ್ರತಿದಿನ ಆಹಾರ ಮತ್ತು ಔಷಧಿ ನೀಡುತ್ತಿದ್ದಾರೆ. ಹೀಗೆ ಅವರು ಗುರುವಾರ ಬಂದಾಗ ನಾಯಿಯ ಖಾಸಗಿ ಅಂಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ಸ್ಥಳೀಯ ಪಶು ವೈದ್ಯರ ಬಳಿ ಶ್ವಾನವನ್ನು ಕರೆದುಕೊಂಡು ಹೋಗಿದ್ದಾರೆ.

    ಪರೀಕ್ಷೆ ನಡೆಸಿದ ವೈದ್ಯರು ಯಾವುದೋ ಒಂದು ಬಲವಾದ ವಸ್ತು ಶ್ವಾನದ ದೇಹದೊಳಗೆ ಹೊಕ್ಕಿದೆ. ಪರಿಣಾಮ ಈ ರೀತಿ ರಕ್ತಸ್ರಾವವಾಗುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಅಲ್ಲದೆ ಕಿಡಿಗೇಡಿಗಳು ಶ್ವಾನದ ಖಾಸಗಿ ಅಂಗದ ಮೂಲಕ 11 ಇಂಚಿನ ಕೋಲು ತುರುಕಿರುವುದು ಬೆಳಕಿಗೆ ಬಂದಿದ್ದು, ಅದನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.

    ನೂರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ದೇವಿ ಶೆತ್ ಮಾಧ್ಯಮಗಳ ಜೊತೆ ಮಾತನಾಡಿ, ಆಕೆ(ಶ್ವಾನ) ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕರೆದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರಿಂದ ಆಕೆ ನೋವಿನಿಂದ ಬಳಲುತ್ತಿರುವುದು ಗಮನಕ್ಕೆ ಬಂತು. ನಾನು ಆಕೆಯ ಸ್ಥಿತಿಯನ್ನು ನೋಡಿದ ಸಂದರ್ಭದಲ್ಲಿ ಆಕೆಯ ಬಳಿಯಿಂದಲೇ ಹಲವಾರು ಮಂದಿ ಓಡಾಡುತ್ತಿದ್ದರು. ಬೀದಿ ನಾಯಿಗಳ ಮೇಲೂ ನಮಗೆ ಜವಾಬ್ದಾರಿ ಇದೆ. ಆದರೆ ಆಕೆ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದರೂ, ಆಕೆಗೆ ಏನೂ ಆಗಿಲ್ಲ ಎಂಬಂತೆ ಜನ ವರ್ತಿಸಿದರು. ಈ ಮೂಲಕ ಅವುಗಳನ್ನು ಜನ ತಿರಸ್ಕರಿಸುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ಸದ್ಯ ನೂರಿಯ ಖಾಸಗಿ ಅಂಗದಿಂದ ಕೋಲನ್ನು ಹೊರತೆಗೆದಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಯಾಕೆಂದರೆ ಆಕೆಯ ಕರುಳಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ದೇಹದ ಇತರ ಅಂಗಗಳು ಕೂಡ ಹಾನಿಗೊಳಗಾಗಿವೆ. ಹೀಗಾಗಿ ಆಕೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಇತ್ತ ಆಕೆಯ ಜೀವ ಉಳಿಸಲು ಎನ್‍ಜಿಓ ಒಂದು ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿದೆ ಎಂದು ದೇವಿ ತಿಳಿಸಿದರು.

    ಘಟನೆ ಸಂಬಂಧ ಪೊವಾಯ್ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 377(ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸಲಿಂಗಕಾಮದಾಸೆಗೆ ಮರ್ಮಾಂಗಕ್ಕೆ ವಿದ್ಯಾರ್ಥಿಯಿಂದಲೇ ಕತ್ತರಿ – ಪೊಲೀಸರ ತಂತ್ರದಿಂದ ಅಸಲಿ ಕೃತ್ಯ ಬೆಳಕಿಗೆ

    ಸಲಿಂಗಕಾಮದಾಸೆಗೆ ಮರ್ಮಾಂಗಕ್ಕೆ ವಿದ್ಯಾರ್ಥಿಯಿಂದಲೇ ಕತ್ತರಿ – ಪೊಲೀಸರ ತಂತ್ರದಿಂದ ಅಸಲಿ ಕೃತ್ಯ ಬೆಳಕಿಗೆ

    – ಮದ್ವೆ ಆಗದೇ ಇರಲು ಕೃತ್ಯ ಎಸಗಿ ಸಿಕ್ಕಿಬಿದ್ರು
    – ತನ್ನ ಭವಿಷ್ಯವನ್ನೇ ಹಾಳು ಮಾಡಿಕೊಂಡ ವಿದ್ಯಾರ್ಥಿ

    ಮಂಡ್ಯ: ಆ ವಿದ್ಯಾರ್ಥಿ ತನ್ನ ಪಾಡಿಗೆ ಕಾಲೇಜಿಗೆ ಹೋಗಿ ಮನೆ ಬರುತ್ತಿದ್ದ. ಅಪ್ಪ-ಅಮ್ಮನ ಪಾಲಿಗೆ ಒಳ್ಳೆಯ ಮಗ ಹಾಗೂ ಕಾಲೇಜಿಗೆ ಒಳ್ಳೆಯ ವಿದ್ಯಾರ್ಥಿಯೂ ಸಹ ಆಗಿದ್ದ. ಆದರೆ ಒಬ್ಬ ವಿಕೃತ ಮನಸ್ಸಿನ ಯುವಕನ ಜೊತೆ ಸೇರಿ ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಹೆತ್ತ ತಂದೆ ತಾಯಿಗಳಿಗೂ ಸಹ ನೋವನ್ನು ನೀಡುತ್ತಿದ್ದಾನೆ.

    ಸಾಮಾನ್ಯವಾಗಿ ಕಾಲೇಜಿನ ದಿನಗಳಲ್ಲಿ ಹುಡುಗ-ಹುಡುಗಿಗೆ ಲವ್ ಆಗೋದು ಕಾಮನ್. ಅಷ್ಟೇ ಏಕೆ ನಂಗೆ ಆ ಹುಡುಗಿ ಬೇಕೇ ಬೇಕು ಎಂದು ಹುಡುಗಿಯನ್ನು ಹುಡುಗರು ಅಪಹರಣ ಮಾಡುವಂತಹ ಕಾಲವು ಸಹ ಬಂದಿದೆ. ಆದರೆ ಇಲ್ಲಿ ಹುಡುಗರಿಬ್ಬರ ವಿಕೃತ ಸ್ಥಿತಿಯಿಂದಾಗಿ ವಿದ್ಯಾರ್ಥಿಯ ಭವಿಷ್ಯ ಹಾಳಾಗುವುದರ ಜೊತೆಗೆ ಪೋಷಕರು ಸಹ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.

    ಕಳೆದ ಫೆಬ್ರವರಿ 14ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಬಳಿ ಯಾರೋ ದುಷ್ಕರ್ಮಿಗಳು ಕಾಲೇಜು ವಿದ್ಯಾರ್ಥಿಯ ಮರ್ಮಾಂಗ ಕತ್ತರಿಸಿ ವಿದ್ಯಾರ್ಥಿಯನ್ನು ರಸ್ತೆಯಲ್ಲಿ ಬಿಸಾಡಿ ಹೋಗಿದ್ದರು. ವಿದ್ಯಾರ್ಥಿ ನೋವು ತಡೆಯಲಾರದೇ ತನ್ನ ತಂದೆಗೆ ಕಾಲ್ ಮಾಡಿದ್ದಾನೆ. ನಂತರ ವಿದ್ಯಾರ್ಥಿಯನ್ನು ಶ್ರೀರಂಗಪಟ್ಟಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಈ ಪ್ರಕರಣವನ್ನು ಶ್ರೀರಂಗಪಟ್ಟಣ ಪೊಲೀಸರು ದಾಖಲಿಸಿಕೊಂಡರು. ಈ ವೇಳೆ ಇಡೀ ಪ್ರಕರಣದ ಸುತ್ತ ನಾನಾ ಅನುಮಾನಗಳು ಸಹ ಮೂಡಿದ್ದವು. ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.

    ವಿದ್ಯಾರ್ಥಿ ಹೇಳಿದ್ದೇನು?
    ಈ ವೇಳೆ ಪೊಲೀಸರು ವಿದ್ಯಾರ್ಥಿಯ ಹೇಳಿಕೆ ಪಡೆಯುವಾಗ, ವಿದ್ಯಾರ್ಥಿ ಯಾರೋ ಕಾರಿನಲ್ಲಿ ಬಂದು ಲಿಫ್ಟ್ ಕೊಡ್ತೀನಿ ಬಾ ಅಂತಾ ಎಂದರು. ಕಾರು ಹತ್ತಿದಾಗ ಅವರು ಹಣ ಕೇಳಿದರು, ನಾನು ಇಲ್ಲ ಅಂದಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆಯನ್ನು ಆಧಾರವನ್ನಾಗಿ ಇಟ್ಟುಕೊಂಡು ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದರು. ಪೊಲೀಸರು ಈ ಪ್ರಕರಣದ ಕುರಿತು ತನಿಖೆ ನಡೆಸುವಾಗ ಯಾವುದೇ ಸುಳಿವು ಸಹ ಸಿಕ್ಕಿರಲಿಲ್ಲ.

    ರಹಸ್ಯ ಬಯಲು ಮಾಡಿತ್ತು ಸಿಸಿ ಕ್ಯಾಮೆರಾ
    ಈ ನಡುವೇ ವಿದ್ಯಾರ್ಥಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಪ್ರಕರಣದಲ್ಲಿ ಯಾವುದೇ ತಿರುವು ಸಿಗದೇ ತಲೆ ಮೇಲೆ ಕೈ ಹೊತ್ತು ಕೂತಿದ್ದ ಪೊಲೀಸರು ಒಂದು ಪ್ಲಾನ್ ಮಾಡಿದ್ದರು. ವಿದ್ಯಾರ್ಥಿ ಇದ್ದ ವಾರ್ಡ್‍ಗೆ ರಹಸ್ಯವಾಗಿ ಪೊಲೀಸರು ಸಿಟಿ ಟಿವಿಯನ್ನು ಅಳವಡಿಸಿದ್ದರು. ಅಲ್ಲದೇ ಓರ್ವ ಪೇದೆಯನ್ನು ನರ್ಸ್ ವೇಶದಲ್ಲಿ ಅಲ್ಲಿಯೇ ಇರಿಸಿದ್ದರು. ಈ ಬಳಿಕ ವಿದ್ಯಾರ್ಥಿಯನ್ನು ನೋಡಲು ಓರ್ವ ಯುವಕ ಪದೇ ಪದೇ ಆಸ್ಪತ್ರೆಗೆ ಬರುತ್ತಿದ್ದ. ಅಲ್ಲದೇ ಆ ವಿದ್ಯಾರ್ಥಿಯನ್ನು ತಬ್ಬಿಕೊಂಡು ಮುತ್ತನ್ನು ಸಹ ಕೊಡುತ್ತಿದ್ದ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಆಗಿರುವುದರ ಜೊತೆಗೆ ಮಾರುವೇಶದಲ್ಲಿ ಇದ್ದ ಪೊಲೀಸ್ ಪೇದೆಯೂ ಸಹ ನೋಡಿದ್ದರು. ಇದನ್ನು ಗಮನಿಸಿದ ಪೊಲೀಸರಿಗೆ ಅನುಮಾನ ಹುಟ್ಟಿತ್ತು.

    ವಿಚಾರಣೆ ವೇಳೆ ಪ್ರಕರಣಕ್ಕೆ ಟ್ವಿಸ್ಟ್
    ಆಸ್ಪತ್ರೆಗೆ ಬಂದು ವಿದ್ಯಾರ್ಥಿಗೆ ಕಿಸ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ವಿಚಾರಣೆ ಮಾಡಿದ್ದರು. ಈ ವೇಳೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಕುಮಾರ ಅಲಿಯಾಸ್ ಸುನಿ ಎಂದು ತಿಳಿಯುತ್ತದೆ. ನಂತರ ಪ್ರಕರಣ ಸಂಬಂಧ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಹೊರಗೆ ಬಂದಿದೆ. ವಿದ್ಯಾರ್ಥಿಯ ಮರ್ಮಾಂಗ ಕಟ್ ಮಾಡಲು ಮೂಲ ಕಾರಣ ಸಲಿಂಗಕಾಮ ಎಂದು ಈ ವೇಳೆ ಬೆಳಕಿಗೆ ಬಂದಿದೆ. ಅಲ್ಲದೇ ವಿದ್ಯಾರ್ಥಿಯ ಮರ್ಮಾಂಗವನ್ನು ಯಾರು ಕಟ್ ಮಾಡಿಲ್ಲ. ವಿದ್ಯಾರ್ಥಿಯೇ ಕತ್ತರಿಸಿಕೊಂಡಿದ್ದಾನೆ ಎನ್ನುವ ಅಂಶವೂ ಸಹ ಪೊಲೀಸರಿಗೆ ತಿಳಿದೆ.

    ಸಲಿಂಗಕಾಮದ ಪ್ರೇರಣೆ
    ಸುನಿ ಹಾಗೂ ಈ ವಿದ್ಯಾರ್ಥಿ ಕಳೆದ ಐದು ವರ್ಷಗಳಿಂದ ಪರಿಚಯವಾಗಿರುತ್ತಾರೆ. ಸುನಿ ಜಮೀನಿನಲ್ಲೇ ಒಂದು ದೇವಸ್ಥಾನ ಇದ್ದ ಕಾರಣ ವಿದ್ಯಾರ್ಥಿಯನ್ನು ಪ್ರತಿ ಶುಕ್ರವಾರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ನನ್ನ ಮೇಲೆ ದೇವರು ಬರುತ್ತದೆ ಎಂದು ಹೇಳಿದ್ದ. ಅಲ್ಲದೇ ಸುನಿ ಹಾಗೂ ವಿದ್ಯಾರ್ಥಿ ಊರಿನಲ್ಲಿ ಒಟ್ಟಿಗೆ ಓಡಾಡುತ್ತಿದ್ದರು. ನಂತರ ಸುನಿ ತನ್ನಲ್ಲಿ ಇದ್ದ ಸಲಿಂಗಕಾಮದ ಬಗ್ಗೆ ವಿದ್ಯಾರ್ಥಿಯೊಂದಿಗೆ ಹಂಚಿಕೊಂಡಿದ್ದಾನೆ. ಈ ಬಳಿಕ ಇಬ್ಬರು ಒಟ್ಟಾಗಿಯೇ ಇರುತ್ತಾರೆ.

    ಕತ್ತರಿಸಿದ್ದು ಯಾಕೆ?
    ಸುನಿ ನಾನು ಮದುವೆಯಾಗಲ್ಲ ನಾವಿಬ್ಬರೂ ಒಟ್ಟಿಗೆ ಇರೋಣಾ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಅಲ್ಲದೇ ನಿನ್ನ ಮರ್ಮಾಂಗವನ್ನು ಕತ್ತರಿಸಿಕೋ ಆಗ ನಿನಗೆ ಮದುವೆ ಮಾಡಲ್ಲ ಆಗ ನಾವಿಬ್ಬರೂ ಒಟ್ಟಿಗೆ ಆರಾಮವಾಗಿ ಇರಬಹುದು ಎಂದು ಪ್ರೇರಣೆ ನೀಡಿದ್ದಾನೆ. ನಂತರ ಫೆಬ್ರವರಿ 14 ರಂದು ವಿದ್ಯಾರ್ಥಿ ಸೀತಾಪುರ ಗೇಟ್‍ನ ನಿರ್ಜನ ಪ್ರದೇಶದಲ್ಲಿ ತನ್ನ ಮರ್ಮಾಂಗವನ್ನು ವಿದ್ಯಾರ್ಥಿ ಕತ್ತರಿಸಿಕೊಂಡಿದ್ದಾನೆ. ನೋವು ತಾಳಲಾರದೆ ತನ್ನ ತಂದೆಗೆ ಕಾಲ್ ಮಾಡಿದ್ದಾನೆ. ಎಲ್ಲಿ ನಿಜ ಹೇಳಿದರೆ ಬೈಯ್ಯುತ್ತಾರೆ ಎಂಬಾ ಕಾರಣಕ್ಕೆ ವಿದ್ಯಾರ್ಥಿ ಯಾರೋ ಅಪರಿಚಿತರು ಹೀಗೆ ಮಾಡಿ ಬಿಟ್ಟರು ಎಂದು ಕಥೆ ಕಟ್ಟಿದ್ದಾನೆ.

    ಒಟ್ಟಾರೆ ತನ್ನ ಸಲಿಂಗಕಾಮದ ಆಸೆಯಿಂದ ವಿದ್ಯಾರ್ಥಿ ಜೀವನದಲ್ಲಿ ಆಟವಾಡಿರುವ ಸುನಿ ಪೊಲೀಸರ ಅತಿಥಿಯಾದರೆ, ಸುನಿಗೆ ಸಹಕರಿಸಿ ವಿದ್ಯಾರ್ಥಿ ನೋವಿನಲ್ಲಿ ಒದ್ದಾಡುತ್ತಿದ್ದಾನೆ. ಇನ್ನೊಂದೆಡೆ ವಿದ್ಯಾರ್ಥಿಯ ಪೋಷಕರು ತಮ್ಮ ಮಗನ ಸ್ಥಿತಿ ಹೀಗೆ ಆಯ್ತಲ್ಲ ಎಂದು ಕೊರಗುತ್ತಿದ್ದಾರೆ.

  • ಪತ್ನಿಯ ಗುಪ್ತಾಂಗಕ್ಕೆ ಬೈಕ್ ಹ್ಯಾಂಡಲ್ ತೂರಿದ ಪತಿ!

    ಪತ್ನಿಯ ಗುಪ್ತಾಂಗಕ್ಕೆ ಬೈಕ್ ಹ್ಯಾಂಡಲ್ ತೂರಿದ ಪತಿ!

    – ಆಪರೇಷನ್ ಮಾಡಿ ಹ್ಯಾಂಡಲ್ ಹೊರತೆಗೆದ ವೈದ್ಯರು
    – ದಂಪತಿ ಮಧ್ಯೆ ಗಲಾಟೆ ವೇಳೆ ಕೃತ್ಯ

    ಭೋಪಾಲ್: ಮಹಿಳೆಯೊಬ್ಬರ ಗುಪ್ತಾಂಗದಿಂದ ವೈದ್ಯರು 6 ಇಂಚಿನ ಪ್ಲಾಸ್ಟಿಕ್ ಹ್ಯಾಂಡಲನ್ನು ಹೊರತೆಗೆದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

    ಪತಿ ಪ್ರಕಾಶ್ ಭಿಲ್ ಅಲಿಯಾಸ್ ರಾಮ(35) ಕೃತ್ಯದಿಂದ ಬರೋಬ್ಬರಿ 2 ವರ್ಷದಿಂದ ನೋವು ಅನುಭವಿಸುತ್ತಿದ್ದೇನೆ ಎಂದು 36 ವರ್ಷದ ಮಹಿಳೆ ಪೊಲೀಸರಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಮಹಿಳೆ ದೂರು ನೀಡಿದ ಬಳಿಕ ಪೊಲೀಸರು ಪ್ರಕರಣ ಸಂಬಂಧ ಆಕೆಯ ಪತಿಯನ್ನು ಭಾನುವಾರ ಬಂಧಿಸಿದ್ದಾರೆ.

    15 ವರ್ಷದ ಹಿಂದೆ ಮಹಿಳೆ ಪಶ್ಚಿಮ ಭೋಪಾಲ್ ನಿಂದ 251 ಕಿ.ಮೀ ದೂರದಲ್ಲಿರುವ ಧಾರ್ ಜಿಲ್ಲೆಯ ವ್ಯಕ್ತಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ 6 ಮಂದಿ ಮಕ್ಕಳಿದ್ದಾರೆ. ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಹಿಂದೆ ದಂಪತಿ ಮಧ್ಯೆ ಜಗಳ ಆರಂಭವಾಗಿದೆ. ಗಲಾಟೆ ತಾರಕಕ್ಕೇರಿ ಮಹಿಳೆಗೆ ಆಕೆಯ ಪತಿ ಚೆನ್ನಾಗಿ ಥಳಿಸಿದ್ದಾನೆ. ಅಲ್ಲದೆ ತನ್ನ ಬೈಕ್ ನಲ್ಲಿದ್ದ ಹ್ಯಾಂಡಲ್ ತೆಗೆದು ಪತ್ನಿಯ ಗುಪ್ತಾಂಗಕ್ಕೆ ತೂರಿದ್ದಾನೆ. ಆದರೆ ಮಹಿಳೆಗೆ ಈ ವಿಚಾರವನ್ನು ಇತರರೊಂದಿಗೆ ಹೇಳಿಕೊಳ್ಳಲು ನಾಚಿಕೆಯಾಗಿದೆ. ಅಲ್ಲದೆ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿ 2 ವರ್ಷಗಳಿಂದ ನೋವು ಅನುಭವಿಸಿಕೊಂಡೇ ಬಂದಿದ್ದರು ಎಂದು ಚಂದನ್ ನಗರ ಪೊಲೀಸ್ ಠಾಣೆಯ ಅಧಿಕಾರಿ ರಾಹುಲ್ ಶರ್ಮಾ ತಿಳಿಸಿದ್ದಾರೆ.

    ಪತ್ನಿಯ ಗುಪ್ತಾಂಗಕ್ಕೆ ಹ್ಯಾಂಡಲ್ ತೂರಿದ ಬಳಿಕ ರಾಮ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದನು. ಈ ವಿಚಾರ ಪತ್ನಿಗೆ ತಿಳಿದು ಪತಿ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಆದರೂ ತನ್ನ ನೋವಿನ ಬಗ್ಗೆ ಯಾರೊಂದಿಗೂ ಈ ವಿಚಾರವನ್ನು ಹಂಚಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ.

    ಕೆಲ ತಿಂಗಳ ಹಿಂದೆಯಿಂದ ನೋವು ತಡೆದುಕೊಳ್ಳಲು ಸಾಧ್ಯವಾಗದೇ ಮಹಿಳೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಆಗ ಪರೀಕ್ಷೆ ನಡೆಸದ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ಇದಕ್ಕೆ 1 ಲಕ್ಷ ರೂ. ಹಣ ಬೇಕಾಗುತ್ತದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯ ಕಷ್ಟವನ್ನು ಆಲಿಸಿದ ಪೊಲೀಸರು ಕೂಡಲೇ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರೆ. ಸದ್ಯ ಸರ್ಜರಿ ಮಾಡಿ ವೈದ್ಯರು ಹ್ಯಾಂಡಲ್ ಹೊರತೆಗೆದಿದ್ದು, ಪ್ಲಾಸ್ಟಿಕ್ ತುಂಡಿನಿಂದಾಗಿ ಮಹಿಳೆಯ ಗುಪ್ತಾಂಗ, ಸಣ್ಣ ಕರುಳಿಗೆ ಹಾನಿಯುಂಟಾಗಿದೆ ಎಂದು ಹೇಳಿದ್ದಾರೆ.

  • 28ರ ಮಾನಸಿಕ ಅಸ್ವಸ್ಥೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ರಾಡ್ ತೂರಿದ್ರು!

    28ರ ಮಾನಸಿಕ ಅಸ್ವಸ್ಥೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ರಾಡ್ ತೂರಿದ್ರು!

    ಕೋಲ್ಕತ್ತಾ: ದೆಹಲಿಯ ನಿರ್ಭಯಾ ಪ್ರಕರಣವನ್ನೇ ಹೋಲುವ ಭಯಾನಕ ಘಟನೆಯೊಂದು ಇದೀಗ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. 28 ವರ್ಷದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೇ, ಬಳಿಕ ಆಕೆಯ ಗುಪ್ತಾಂಗಕ್ಕೆ ರಾಡೊಂದನ್ನು ತೂರಿದ್ದಾರೆ. ಸಂತ್ರಸ್ಥೆ ಮಾನಸಿಕ ಅಸ್ವಸ್ಥೆ ಎಂಬುದಾಗಿ ವರದಿಯಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ 45 ವರ್ಷದ ರಾಂಪ್ರಬೆಶ್ ಶರ್ಮಾ ಹಾಗೂ 50 ವರ್ಷದ ಅಂಧಾರು ಬರ್ಮನ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೇ ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಡಿಜಿ ಅನೂಜ್ ಶರ್ಮಾ ತಿಳಿಸಿದ್ದಾರೆ.

    ಏನಿದು ಘಟನೆ?: ಫೆಬ್ರವರಿ 18 ರಂದು ಪಶ್ಚಿಮ ಬಂಗಾಳದ ದಿನಜಪೋರ್ ಜಿಲ್ಲೆಯ ಕುಶ್ಮುಂಡಿ ಪ್ರದೇಶದಲ್ಲಿ ಸಂತ್ರಸ್ತೆ ಉತ್ಸವವೊಂದಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಕಾಮುಕರು ಈ ಕೃತ್ಯ ಎಸಗಿದ್ದಾರೆ. ಘಟನೆಯ ಬಳಿಕ ಚಿಂತಾನಜನಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಸ್ಥಳೀಯರು ರಾಯ್ಗಂಜ್ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಮಲ್ಡಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಸದ್ಯ ಆಸ್ಪತ್ರೆಯಲ್ಲಿ ಮಹಿಳೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಘಟನೆ ಬಳಿಕ ಮಹಿಳೆ ನೆಲದಲ್ಲಿ ಒದ್ದಾಡುತ್ತಿರುವುದನ್ನು ಕಂಡು ಸ್ಥಳೀಯರು ಕೂಡಲೇ ನಮಗೆ ಮಾಹಿತಿ ರವಾನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆಸ್ಪತ್ರೆಗೆ ದಾಖಲಾಗುವ ವೇಳೆ ಮಹಿಳೆಯ ಸ್ಥಿತಿ ಚಿಂತಾಜನಕವಾಗಿತ್ತು. ಇಲ್ಲಿಯವರೆಗೆ ಅವರನ್ನು ಸಿಸಿಯು(ಕ್ರಿಟಿಕಲ್ ಕೇರ್ ಯುನಿಟ್) ನಲ್ಲಿ ಇಡಲಾಗಿತ್ತು. ಸದ್ಯ ಅವರ ಆರೋಗ್ಯ ಸುಧಾರಿಸುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತೆಯ ಆರೋಗ್ಯ ವಿಚಾರಿಸಿದ್ದಾರೆ.

    ಮಹಿಳೆ ಅನಾಥೆ: ಸಂತ್ರಸ್ತೆ 10 ವರ್ಷಗಳ ಹಿಂದೆ ತನ್ನ ಹೆತ್ತವರನ್ನು ಕಳೆದುಕೊಂಡಿದ್ದು, ಒಬ್ಬರೇ ಜೀವನ ನಡೆಸುತ್ತಿದ್ದರು. ಅಲ್ಲದೇ ಕಳೆದ ಕೆಲ ವರ್ಷಗಳ ಹಿಂದೆ ಮದುವೆ ಕೂಡ ಆಗಿದ್ದು, ಈಕೆ ಮಾನಸಿಕ ಅಸ್ವಸ್ಥೆ ಎಂದು ತಿಳಿದ ಬಳಿಕ ಪತಿ ವಿಚ್ಚೇಧನ ನೀಡಿದ್ದಾನೆ. ಹೀಗಾಗಿ ಮಹಿಳೆ ಒಬ್ಬರೇ ಜೀವಿಸುತ್ತಿದ್ದು, ಇವರಿಗೆ ನೆರೆಹೊರೆಯವರು ಆಹಾರ ಕೊಡುತ್ತಿದ್ದರು.

    ತನಿಖೆಗೆ ಬಿಜೆಪಿ ಒತ್ತಾಯ: ಜಿಲ್ಲೆಯಲ್ಲಿ ಇಂತಹ ಘಟನೆಗಳು ನಡೆಯುವುದು ಇದೇ ಮೊದಲಲ್ಲ. ಇಂತಹ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಪೊಲೀಸರು ಇಂತಹ ಪ್ರಕರಣಗಳನ್ನು ಪೊಲೀಸರು ಕಡೆಗಣಿಸುತ್ತಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಪೊಲೀಸರು ತಳ್ಳಿ ಹಾಕುವ ಮೊದಲು ಸ್ಪಷ್ಟವಾಗಿ ತನಿಖೆ ನಡೆಸಿ ಮಹಿಳೆಗೆ ನ್ಯಾಯ ದೊರಕಿಸಿಕೊಡುವಂತೆ ಅಲ್ಲಿನ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

  • ಅನೈತಿಕ ಸಂಬಂಧ ಹೊಂದಿದ್ದ ಗಂಡನ ಮರ್ಮಾಂಗವನ್ನೇ ಕಟ್ ಮಾಡಿ ಟಾಯ್ಲೆಟ್‍ನಲ್ಲಿ ಎಸೆದ್ಳು!

    ಅನೈತಿಕ ಸಂಬಂಧ ಹೊಂದಿದ್ದ ಗಂಡನ ಮರ್ಮಾಂಗವನ್ನೇ ಕಟ್ ಮಾಡಿ ಟಾಯ್ಲೆಟ್‍ನಲ್ಲಿ ಎಸೆದ್ಳು!

    ಚಂಡೀಗಢ: ಪತಿ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಪತ್ನಿ ಆತನ ಮರ್ಮಾಂಗವನ್ನೇ ಕಟ್ ಮಾಡಿ ಶೌಚಾಲಯದಲ್ಲಿ ಎಸೆದಿರುವ ವಿಚಿತ್ರ ಘಟನೆಯೊಂದು ಪಂಜಾಬ್‍ನ ಜಲಂಧರ್‍ನ ಜೋಗಿಂಧರ್ ನಗರದಲ್ಲಿ ನಡೆದಿದೆ.

    ಆಜಾದ್ ಸಿಂಗ್ ಪತ್ನಿಯಿಂದ ದಾಳಿಗೊಳಗಾದ ಪತಿ. ತೀವ್ರವಾಗಿ ಅಸ್ವಸ್ಥಗೊಂಡಿರುವ ಆಜಾದ್‍ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಜಾದ್ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸದಾ ಸೆಕ್ಸ್ ಗೆ ಪೀಡಿಸುತ್ತಿದ್ದ ಪತ್ನಿಯನ್ನ ಕೊಂದ ಪತಿ

    ಸೋಮವಾರ ರಾತ್ರಿ ಅಜಾದ್ ಮಲಗಿದ್ದ ವೇಳೆ ಪತ್ನಿ ಸುಖವಂತ್ ಕೌರ್, ಕಬ್ಬಿಣದ ರಾಡ್ ನಿಂದ ಪತಿಯ ತಲೆಗೆ ಹೊಡೆದಿದ್ದಾಳೆ. ಹಲ್ಲೆಯ ಬಳಿಕ ಪ್ರಜ್ಞೆ ಕಳೆದುಕೊಂಡ ಆಜಾದ್‍ನ ಮರ್ಮಾಂಗವನ್ನ ಚಾಕುವಿನಿಂದ ಕಟ್ ಮಾಡಿ ಶೌಚಾಲಯದಲ್ಲಿ ಎಸೆದಿದ್ದಾಳೆ. ಆಜಾದ್‍ರನ್ನು ಆಸ್ಪತ್ರೆಗೆ ದಾಖಲಿಸಿದಾಗ ತೀವ್ರ ರಕ್ತಸ್ರಾವ ಆಗಿತ್ತು. ಆಜಾದ್ ಸ್ಥಿತಿ ಗಂಭೀರವಾಗಿದೆ ಎಂದು ಜಲಂಧರ್ ಎಸಿಪಿ ಸತೀಂಧರ್ ಕುಮಾರ್ ಹೇಳಿದ್ದಾರೆ.

    ಇದನ್ನೂ ಓದಿ:  ಸೆಕ್ಸ್ ನಿರಾಕರಿಸಿದ್ದಕ್ಕೆ ಶೂ ಲೇಸ್‍ನಿಂದ ಪ್ರಿಯತಮೆಯನ್ನೇ ಕೊಂದೇಬಿಟ್ಟ!

    ಘಟನೆ ಸಂಬಂಧ ಆಜಾದ್ ತಂದೆಯ ದೂರಿನನ್ವಯ ಮಹಿಳೆ ವಿರುದ್ಧ ಜಲಂಧರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆಂದು ವರದಿಯಾಗಿದೆ.

    ಇದನ್ನೂ ಓದಿ: ಸೆಕ್ಸ್ ತಿರಸ್ಕರಿಸಿದ್ದಕ್ಕೆ ಯುವಕನ ಮರ್ಮಾಂಗವನ್ನೇ ಕತ್ತರಿಸಿದ್ಳು ಯುವತಿ!

    ಇದನ್ನೂ ಓದಿ: ಸೆಕ್ಸ್ ಗೇಮ್ ನಲ್ಲಿ ಲವ್ವರ್ ನ ಕೊಂದು ಪೀಸ್ ಪೀಸ್ ಮಾಡಿದ್ಳು- ದೇಹದ ಭಾಗವನ್ನ ಫ್ರೀಜರ್ ನಲ್ಲಿಟ್ಟು, ತಂತಿಯಲ್ಲೂ ನೇತು ಹಾಕಿದ್ಳು