Tag: private jet

  • ಟೇಕಾಫ್‌ ಆದ ಕೆಲವೇ ಹೊತ್ತಲ್ಲಿ ಸ್ಕಿಡ್‌ ಆಗಿ ಹುಲ್ಲಿನ ಮೇಲೆ ಬಿದ್ದ ಪ್ರೈವೆಟ್ ಜೆಟ್‌

    ಟೇಕಾಫ್‌ ಆದ ಕೆಲವೇ ಹೊತ್ತಲ್ಲಿ ಸ್ಕಿಡ್‌ ಆಗಿ ಹುಲ್ಲಿನ ಮೇಲೆ ಬಿದ್ದ ಪ್ರೈವೆಟ್ ಜೆಟ್‌

    ಲಕ್ನೋ: ಉತ್ತರ ಪ್ರದೇಶದ (Uttara Pradesh) ಫರೂಕಾಬಾದ್‌ನ ವಾಯುನೆಲೆಯಿಂದ ಭೋಪಾಲ್‌ಗೆ ಹೊರಟಿದ್ದ ಖಾಸಗಿ ಜೆಟ್ (Private Jet) ವಿಮಾನವು ರನ್‌ವೇಯಿಂದ ಟೇಕಾಫ್‌ ಆದ ಕೆಲವೇ ಸೆಕೆಂಡುಗಳಲ್ಲಿ ಸ್ಕಿಡ್‌ ಆಗಿ ಹುಲ್ಲಿನ ಮೇಲೆ ಬಿದ್ದ ಘಟನೆ ನಡೆದಿದೆ.

    ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಆಹಾರ ಸಂಸ್ಕರಣಾ ಕಂಪನಿಯ ಉನ್ನತ ಸದಸ್ಯರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇದನ್ನೂ ಓದಿ: ಸ್ಪೆಷಲ್‌ ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾ, ಬಾಲಕೋಟ್ ತಿರಮಿಸು ತಿಂದ ಭಾರತೀಯ ವಾಯುಸೇನೆ

    ಈ ಘಟನೆ ಮೊಹಮ್ಮದಾಬಾದ್ ವಾಯುನೆಲೆಯಲ್ಲಿ ನಡೆದಿದೆ. ಅವಘಡ ಸಂಬಂಧ ವಿವರವಾದ ತನಿಖೆ ನಡೆಯುತ್ತಿದೆ. ವಿಮಾನದ ಟೈರ್‌ಗಳಲ್ಲಿ ಕಡಿಮೆ ಗಾಳಿಯ ಒತ್ತಡವು ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದೆ.

    ವುಡ್‌ಪೆಕರ್ ಗ್ರೀನ್‌ಗ್ರಿ ನ್ಯೂಟ್ರಿಯಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸದಸ್ಯರು, ಉಪ ವ್ಯವಸ್ಥಾಪಕ ನಿರ್ದೇಶಕ ಅಜಯ್ ಅರೋರಾ, ಎಸ್‌ಬಿಐ ಮುಖ್ಯಸ್ಥ ಸುಮಿತ್ ಶರ್ಮಾ, ಬಿಪಿಒ ರಾಕೇಶ್ ಟಿಕು – ಕ್ಯಾಪ್ಟನ್ ನಸೀಬ್ ಬಮಲ್ ಮತ್ತು ಕ್ಯಾಪ್ಟನ್ ಪ್ರತೀಕ್ ಫರ್ನಾಂಡಿಸ್ ಜೆಟ್‌ನಲ್ಲಿ ಇದ್ದರು. ಇದನ್ನೂ ಓದಿ: ನಿಯಂತ್ರಣ ತಪ್ಪಿ 6 ಕಾರುಗಳಿಗೆ ಡಿಕ್ಕಿ ಹೊಡೆದ ಲ್ಯಾಂಡ್ ರೋವರ್ ಡಿಫೆಂಡರ್ – ಚಾಲಕ ವಶಕ್ಕೆ

  • ಮುಂಬೈ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್ ಪತನ

    ಮುಂಬೈ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್ ಪತನ

    ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಗುರುವಾರ ಭಾರೀ ಮಳೆಯ ನಡುವೆ ಖಾಸಗಿ ವಿಮಾನವೊಂದು (Private Jet Crash) ಲ್ಯಾಂಡ್ ಆಗಲು ಯತ್ನಿಸುತ್ತಿದ್ದಾಗ ಪತನಗೊಂಡಿದೆ.

    ವಿಮಾನದಲ್ಲಿ ಆರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸೇರಿ 8 ಮಂದಿ ಇದ್ದರು. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುರ್ತು ಸೇವೆಗಳು ತಿಳಿಸಿವೆ. ಅವರಿಗೆ ಯಾವ ಪ್ರಮಾಣದಲ್ಲಿ ಗಾಯಗಳಾಗಿವೆ ಎಂಬ ಬಗ್ಗೆ ತಿಳಿದಿಲ್ಲ. ಯಾವುದೇ ಪ್ರಾಣಹಾನಿಯಾಗಿಲ್ಲ. ಇದನ್ನೂ ಓದಿ: ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರನ ಬಂಧನ

    ಅವಘಡದಿಂದ ರನ್‌ವೇಯಲ್ಲಿ ಉಂಟಾಗಿದ್ದ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ಪುನರಾರಂಭಿಸಲಾಗಿದೆ. ಮಳೆಯಿಂದಾಗಿ ಜಾರುವಂತಾಗಿದ್ದ ರನ್‌ವೇ 27ರ ಬಳಿ ಈ ಘಟನೆ ನಡೆದಿದೆ. ವಿಮಾನವು ನೆಲಕ್ಕೆ ಅಪ್ಪಳಿಸುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಖಾಸಗಿ ಜೆಟ್‌ ಪತನಗೊಂಡ ವೇಳೆ ರನ್‌ವೇಯನ್ನು ಕೆಲವು ನಿಮಿಷಗಳ ಕಾಲ ಮುಚ್ಚಲಾಯಿತು. ಈ ಸಮಯದಲ್ಲಿ ಡೆಹ್ರಾಡೂನ್‌ನಿಂದ ಬರುತ್ತಿದ್ದ ವಿಮಾನ – UK865 ಅನ್ನು ಗೋವಾದ ಮೋಪಾ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ವಿಸ್ತಾರಾ ಏರ್‌ಲೈನ್ಸ್ ತಿಳಿಸಿದೆ. ಇದನ್ನೂ ಓದಿ: ಪಾಕ್‌ ಜೊತೆ ಭಾರತೀಯ ಸೇನೆಯ ಮಾಹಿತಿ ಹಂಚಿಕೊಳ್ಳುತ್ತಿದ್ದ ಯೋಧ ಅರೆಸ್ಟ್‌

    ವಿಮಾನವು ಲಿಯರ್‌ಜೆಟ್ 45 ಆಗಿದೆ. ಕೆನಡಾ ಮೂಲದ ಬೊಂಬಾರ್ಡಿಯರ್ ಏವಿಯೇಷನ್‌ನ ವಿಭಾಗವು ತಯಾರಿಸಿದ ಒಂಬತ್ತು ಆಸನಗಳ ಸೂಪರ್-ಲೈಟ್ ಬಿಸಿನೆಸ್ ಜೆಟ್ ಇದಾಗಿದೆ. ಇದು ಬೆಂಗಳೂರು ಮೂಲದ ವಿಎಸ್‌ಆರ್ ವೆಂಚರ್ಸ್‌ಗೆ ನೋಂದಾಯಿಸಲ್ಪಟ್ಟಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಾಹಿತಿ ನೀಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಲಾನ್ ಮಸ್ಕ್ ಅವರ ಬಿಗ್ ಆಫರ್ ತಿರಸ್ಕರಿಸಿದ ಯುವಕ

    ಎಲಾನ್ ಮಸ್ಕ್ ಅವರ ಬಿಗ್ ಆಫರ್ ತಿರಸ್ಕರಿಸಿದ ಯುವಕ

    ವಾಷಿಂಗ್ಟನ್: ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲೋನ್ ಮಸ್ಕ್ ನೀಡದ ಆಫರ್ ಅನ್ನು ಯುವಕನೊಬ್ಬ ತಿರಸ್ಕರಿಸಿ ಸುದ್ದಿಯಾಗಿದ್ದಾನೆ.

    ಜ್ಯಾಕ್ ಸ್ವೀನಿ ಎನ್ನುವ 19 ವರ್ಷದ ಯುವಕ ಮಸ್ಕ್ ಅವರ ಖಾಸಗಿ ವಿಮಾನವನ್ನು ಟ್ರ್ಯಾಕ್ ಮಾಡಿ @ElonJet ಹ್ಯಾಂಡಲ್ ಮೂಲಕ ಟ್ವೀಟ್ ಮಾಡುತ್ತಿದ್ದಾನೆ. ತನ್ನ ಜೆಟ್‍ಗಳ ಕುರಿತು ಟ್ವೀಟ್ ಮಾಡುವುದನ್ನು ನಿಲ್ಲಿಸಲು ಮಸ್ಕ್ ಯುವಕನಿಗೆ ರೂ 5,000 (ಸುಮಾರು ರೂ. 3.75 ಲಕ್ಷ) ಆಫರ್ ಮಾಡಿದ್ದಾರೆ.

    ಆದರೆ ಸ್ವೀನಿ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಪ್ರತಿಯಾಗಿ ರೂ 50,000 (ಸುಮಾರು ರೂ. 37.55 ಲಕ್ಷ) ಬೇಡಿಕೆಯಿಟ್ಟಿದ್ದಾನೆ. ಈ ಮೊತ್ತವು ತನ್ನ ಶಾಲಾ ಶುಲ್ಕವನ್ನು ಭರಿಸುತ್ತದೆ ಮತ್ತು ಟೆಸ್ಲಾ ಕಾರು ಖರೀದಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಇನ್ನು ಐದೇ ವರ್ಷಗಳಲ್ಲಿ ಮಾನವ ಮಂಗಳ ಗ್ರಹಕ್ಕೆ ಪ್ರಯಾಣಿಸಬಹುದು: ಎಲೋನ್ ಮಸ್ಕ್ ಭರವಸೆ

    ಪ್ರತಿ ಬಾರಿ ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗನ್ನು ಟ್ರ್ಯಾಕ್ ಮಾಡಲು ಯುವಕ ಪ್ರೋಗ್ರಾಮ್ ರಚಿಸಿದ್ದಾನೆ. ಸ್ವೀನಿ ಮಸ್ಕ್‌ನ ಖಾಸಗಿ ಜೆಟ್‍ಗಳನ್ನು ಮಾತ್ರವಲ್ಲದೆ ಬಿಲ್ ಗೇಟ್ಸ್ ಮತ್ತು ಜೆಫ್ ಬೆಜೋಸ್ ಸೇರಿದಂತೆ ಉನ್ನತ ಮಟ್ಟದ ಜನರನ್ನೂ ಸಹ ಟ್ರ್ಯಾಕ್ ಮಾಡುತ್ತಿದ್ದಾನೆ. ಇದನ್ನೂ ಓದಿ: ನನ್ನ ಹೆಸರು ಸಲ್ಮಾನ್ ಖಾನ್’ ಎಂದು ಹಾಲಿವುಡ್ ನಟನಿಗೆ ಪರಿಚಯ ಮಾಡಿಕೊಂಡ ಸಲ್ಲು