Tag: private hospital

  • ಕೊರೊನಾ ವೇಳೆ ಜನರಿಂದ ಸುಲಿಗೆ – 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್

    ಕೊರೊನಾ ವೇಳೆ ಜನರಿಂದ ಸುಲಿಗೆ – 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್

    ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ ಈವೆರೆಗೆ ಪ್ರತಿಕ್ರಿಯೆ ನೀಡದ 30 ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

    ಸಾಂದರ್ಭಿಕ ಚಿತ್ರ

    ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ 577 ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿತ್ತು. ಈ ಪೈಕಿ 450ಕ್ಕೂ ಹೆಚ್ಚು ಆಸ್ಪತ್ರೆಗಳು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿವೆ. ಹೆಚ್ಚುವರಿಯಾಗಿ ವಸೂಲಿ ಮಾಡಿದ್ದ ಹಣವನ್ನೂ ವಾಪಸ್ ನೀಡಿವೆ. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡದ 30 ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಸಿದ್ದರಾಮಯ್ಯನವರ ಜನಪ್ರಿಯತೆ ನೋಡಿ ಉರಿ ಶುರುವಾಗಿದೆ: ಡಾ. ಎಚ್.ಸಿ. ಮಹದೇವಪ್ಪ

    ಕೆಲವು ಆಸ್ಪತ್ರೆಗಳು ಕೋವಿಡ್ ಸಮಯದಲ್ಲಿ ರೋಗಿಗಳ ಶುಲ್ಕ ಪಡೆಯುವ ಜೊತೆಗೆ ಸರ್ಕಾರದಿಂದಲೂ ಹಣ ಪಡೆದಿವೆ ಎಂದು ಇಲಾಖೆ ಹೇಳಿದೆ. ಇದನ್ನೂ ಓದಿ: ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ ಪಡೆದುಕೊಳ್ಳುತ್ತಿದ್ದ ಸಂಭಾವನೆ ಬಹಿರಂಗ

    ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಅಡಿಯಲ್ಲಿ ಚಿಕಿತ್ಸೆ ನೀಡಲು ಆದೇಶಿಸಿತ್ತು. ಅದಕ್ಕಾಗಿ ಸಂಬಂಧಪಟ್ಟ ಆಸ್ಪತ್ರೆಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಿಂದ ವೆಚ್ಚ ಬರಿಸಿತ್ತು. ಆದರೂ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗಿದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನೋಟಿಸ್ ನೀಡಿತ್ತು. ಆದರೆ 30 ಆಸ್ಪತ್ರೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಮಿದುಳು ಜ್ವರದಿಂದ ಬಳಲುತ್ತಿದ್ದ ಬಾಲಕ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್

    ಮಿದುಳು ಜ್ವರದಿಂದ ಬಳಲುತ್ತಿದ್ದ ಬಾಲಕ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್

    ಬೆಳಗಾವಿ: ಮಿದುಳು ಜ್ವರದಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಾಲಕನನ್ನು ಬೆಳಗಾವಿಯ ಯಶ್ ಆಸ್ಪತ್ರೆಗೆ ಕರೆತರಲಾಗಿದೆ.

    ಪಬ್ಲಿಕ್ ಟಿವಿಯ ಕಳಕಳಿಯ ಸುದ್ದಿಗೆ ಸ್ಪಂದಿಸಿರುವ ಬೆಳಗಾವಿ ಫೇಸ್‍ಬುಕ್ ಫ್ರೆಂಡ್ಸ್ ಸರ್ಕಲ್ ತಂಡದವರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವೆಚ್ಚವನ್ನು ಭರಿಸಿದ್ದಾರೆ. ಈಗಾಗಲೇ ಬಾಲಕನನ್ನು ನಗರದ ಯಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಶೈಲೇಶ್(8)ಗೆ ಮಿದುಳು ಜ್ವರ ಬಂದು ಕೋಮಾದಲ್ಲಿದ್ದನು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದನು. ಇತ್ತ ಮಗನನ್ನು ಉಳಿಸಿಕೊಳ್ಳಲು ತಂದೆ-ತಾಯಿ ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ದೇವರ ಮೊರೆ ಹೋಗಿದ್ದರು. ಈ ಕುರಿತು ಪಬ್ಲಿಕ್ ಟಿವಿ ಇಂದು ಬೆಳಗ್ಗೆ ಮಾನವೀಯ ಸುದ್ದಿಯನ್ನು ಪ್ರಕಟಿಸಿತ್ತು. ಇದನ್ನೂ ಓದಿ: ನನ್ನ ಮಗನನ್ನು ಉಳಿಸು ದೇವರೇ – ಶಿಲುಬೆ ಮುಂದೆ ಕಂದನನ್ನು ಮಲಗಿಸಿದ ದಂಪತಿ 

    ಪಬ್ಲಿಕ್ ಟಿವಿ ಸುದ್ದಿಯನ್ನು ಗಮನಿಸಿದ ಫೇಸ್‍ಬುಕ್ ಫ್ರೆಂಡ್ ಸರ್ಕಲ್ ಯುವಕರು ಕೋಮಾದಲ್ಲಿದ್ದ ಬಾಲಕನನ್ನು ಖಾನಾಪೂರ ತಾಲೂಕಿನ ನಂದಗಡ ಗ್ರಾಮದಿಂದ ಬೆಳಗಾವಿಯ ಯಶ್ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕರೆದುಕೊಂಡು ಬಂದಿದ್ದಾರೆ. ಸದ್ಯ ಯಶ್ ಆಸ್ಪತ್ರೆಯಲ್ಲಿ ಶೈಲೇಶ್ ಆರೋಗ್ಯವನ್ನ ವೈದ್ಯರು ತಪಾಸಣೆ ಮಾಡುತ್ತಿದ್ದಾರೆ.

    ಯಶ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಎಸ್.ಕೆ.ಪಾಟೀಲ್ ಅವರಿಂದ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಬಾಲಕನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಆಸ್ಪತ್ರೆಗೆ ಬೆಳಗಾವಿ ಡಿಎಚ್‍ಓ ಅವರು ಭೇಟಿ ನೀಡಿ ಮಗುವಿನ ಆರೋಗ್ಯವನ್ನ ಪರಿಶೀಲನೆ ನಡೆಸಿದ್ದಾರೆ. ಮಗವಿನ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ 4 ದಿನ ಭಾರೀ ಮಳೆ – 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ 

    ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕೂಡ ಮಗುವಿನ ಆರೋಗ್ಯ ತಪಾಸಣೆಗೆ ಬೇಕಾದ ಅಗತ್ಯ ಖರ್ಚುವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ.

    Live Tv

  • ಆರೋಗ್ಯಮೇಳದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ: ಸುಧಾಕರ್

    ಆರೋಗ್ಯಮೇಳದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ: ಸುಧಾಕರ್

    ಚಿಕ್ಕಬಳ್ಳಾಪುರ: ಮೇ 14 ಮತ್ತು 15 ರಂದು ಚಿಕ್ಕಬಳ್ಳಾಪುರ ನಗರದ ಶ್ರೀ ಆದಿಚುಂಚನಗಿರಿ ಮಠದ ಎಸ್‍ಜೆಸಿಐಟಿ ಕಾಲೇಜಿನಲ್ಲಿ ನಡೆಯಲಿರುವ ಉಚಿತ ಬೃಹತ್ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಚಿತ ಆರೋಗ್ಯ ಚಿಕಿತ್ಸೆ ಮತ್ತು ಔಷಧೋಪಾಚಾರ ಸೇವೆ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

    ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರ ಮಟ್ಟದ ಉಚಿತ ಬೃಹತ್ ಆರೋಗ್ಯ ಮೇಳ ಆಯೋಜನೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳು ಮತ್ತು ಸಲಹೆಗಳನ್ನು ನೀಡಿ ಮಾತನಾಡಿದರು. ಇದನ್ನೂ ಓದಿ:  ಆತಂಕದಿಂದ ಲಗೇಜ್ ತೆಗೆದುಕೊಂಡು ಎಲ್ಲಿಗೆ ಓಡಿದರು ಆಲಿಯಾ ಭಟ್ 

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 3.5 ಲಕ್ಷ ಜನಸಂಖ್ಯೆ ಇದ್ದು, ಈ ಪೈಕಿ 1.5 ಲಕ್ಷ ಜನರನ್ನು ಮೇಳಕ್ಕೆ ನೋಂದಾಯಿಸಬೇಕು. ಅವರೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಿಸಿ ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಸಕಲ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಇತರ ಕ್ಷೇತ್ರಗಳಿಂದ ಯಾವುದೇ ವ್ಯಕ್ತಿ ಆರೋಗ್ಯ ಸೇವೆ, ಶಸ್ತ್ರಚಿಕಿತ್ಸೆ ಬಯಸಿ ಆರೋಗ್ಯ ಮೇಳಕ್ಕೆ ಆಗಮಿಸಿದರೆ, ಭೌತಿಕ ನೋಂದಣಿ ಮಾಡಿ ಅವರೆಲ್ಲರಿಗೂ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಬೇಕು. ಯಾವುದೇ ಕಾರಣಕ್ಕೂ ಆರೋಗ್ಯ ಸೇವೆಯನ್ನು ಯಾರಿಗೂ ನಿರಾಕರಿಸುವಂತಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

    ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಸೇರಿದಂತೆ 100ಕ್ಕೂ ಹೆಚ್ಚು ಸಂಸ್ಥೆಗಳಿಂದ ಸುಮಾರು 1,500ಕ್ಕೂ ಹೆಚ್ಚು ವೈದ್ಯರು, 1,000ಕ್ಕೂ ಹೆಚ್ಚು ಪ್ರಯೋಗಾಲಯ ತಾಂತ್ರಿಕ ತಜ್ಞರು, ಆರೋಗ್ಯ ಸೇವೆ ನೀಡಲು ಮೇಳದಲ್ಲಿ ಅಂದು ಭಾಗವಹಿಸುತ್ತಿದ್ದಾರೆ. ಎಲ್ಲರು ಮೇಳದಲ್ಲಿ ಭಾಗವಹಿಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳುವಂತೆ ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಶಿವಸೇನೆಗೆ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ: ಸಂಜಯ್ ರಾವತ್

    ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್, ಉಪವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್ ಹಾಗೂ ಜಿಲ್ಲೆಯ ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

  • ಕೋವಿಡ್ ಲಸಿಕೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಗೆ 312 ಕೋಟಿ ಹಣ: ಸಿಐಟಿಯು ತೀವ್ರ ಖಂಡನೆ

    ಕೋವಿಡ್ ಲಸಿಕೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಗೆ 312 ಕೋಟಿ ಹಣ: ಸಿಐಟಿಯು ತೀವ್ರ ಖಂಡನೆ

    – ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನಿಧಿ ದುರ್ಬಳಕೆ ತೀವ್ರ ಖಂಡನೆ

    ಬೆಂಗಳೂರು: ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೆ 40 ಲಕ್ಷ ಕೋವಿಡ್ ಲಸಿಕೆಗಳನ್ನು ನೀಡುವ ನೆಪದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಖಾಸಗಿ ಆಸ್ಪತ್ರೆಗಳಿಗೆ 312 ಕೋಟಿ ರೂಪಾಯಿಗಳನ್ನು ಧಾರೆ ಎರೆಯಲು ಹೊರಟಿದ್ದಾರೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕೈಗೊಂಡಿರುವ ಈ ಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ) ಸಿಐಟಿಯು ತೀವ್ರವಾಗಿ ಖಂಡಿಸಿದೆ. ಕೂಡಲೇ ಈ ತೀರ್ಮಾನವನ್ನು ಹಿಪಡೆಯಬೇಕೆಂದು ಆಗ್ರಹಿಸಿದೆ.

    ಕಾರ್ಮಿಕ ಸಚಿವರು ಖಾಸಗಿ ಆಸ್ಪತ್ರೆಗಳ ಮಾಲಿಕರೊಂದಿಗೆ ಸಭೆ ನಡೆಸಿ ಪ್ರತಿ ಲಸಿಕೆಗೆ 780 ರೂಪಾಯಿ ದರದಲ್ಲಿ ರಾಜ್ಯದ 30 ಲಕ್ಷ ನೋಂದಾಯಿತ ಕಾರ್ಮಿಕರಿಗೆ ಹಾಗೂ 10 ಲಕ್ಷ ವಲಸೆ ಕಾರ್ಮಿಕರಿಗೆ ಲಸಿಕೆ ನೀಡುವ ತೀರ್ಮಾನ ಕೈಗೊಂಡಿರುವುದು ಮಂಡಳಿಯ ನಿಧಿಯನ್ನು ಖಾಲಿ ಮಾಡುವ ಹುನ್ನಾರವಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ನಿಧಿಯನ್ನು ಕಾರ್ಮಿಕ ಸಚಿವರು ಹಾಗೂ ಮಂಡಳಿ ಅಧಿಕಾರಿಗಳ ಕೂಟವು ದುರ್ಬಳಕೆ ಮಾಡಿಕೊಳ್ಳಲು ಇಂತಹ ಪ್ರಯತ್ನ ನಡೆಸಿದೆ ಎಂಬ ಆರೋಪ ಕೇಳಿ ಬಂದಿವೆ.

    ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು ದೇಶಾದ್ಯಾಂತ ಎಲ್ಲ ನಾಗರಿಕರಿಗೂ ಉಚಿತವಾಗಿ ಕೋವಿಡ್ ಲಸಿಕೆಗಳನ್ನು ವಿತರಿಸುತ್ತಿದೆ. ಕರ್ನಾಟಕದಲ್ಲೂ ನಿರ್ಮಾಣ ವಲಯದ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ವಲಸೆ ಕಾರ್ಮಿಕರು ಮೊದಲನೆ ಹಾಗೂ ಎರಡನೇ ಡೋಸ್‍ಗಳನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಹೀಗಿದ್ದೂ ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಖರೀದಿಸುವ ಅಗತ್ಯವಾದರೂ ಏನಿದೆ ಎಂದು ಸಿಐಟಿಯು ಪ್ರಶ್ನಿಸಿದೆ. ಇದನ್ನೂ ಓದಿ: ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

    ಈಗಾಗಲೇ ರೇಷನ್ ಕಿಟ್, ಟೂಲ್ ಕಿಟ್, ಬೂಸ್ಟಪ್ ಕಿಟ್ ಹಾಗೂ ಸುರಕ್ಷಾ ಕಿಟ್, ಹೊಸ ತಂತ್ರಾಂಶ ಅಳವಡಿಕೆ ಹಾಗೂ ಕಂಪ್ಯೂಟರ್ ಮತ್ತು ಟಿವಿಗಳ ಖರೀದಿಗಳಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ. ಅಲ್ಲದೆ 2021-22 ಸಾಲಿನಲ್ಲಿ 2688.90 ಕೋಟಿ ಮಂಡಳಿ ಹಣವನ್ನು ವಿವಿಧ ಬಾಬ್ತುಗಳಿಗೆ ಖರ್ಚು ಮಾಡಲು ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಕೆಪಿಟಿಟಿ ಕಾಯ್ದೆ 1999 ನ್ನು ಕಾರ್ಮಿಕ ಸಚಿವರು ಮತ್ತು ಮಂಡಳಿ ಹಿರಿಯ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ನಿಧಿಯನ್ನು ಮನಬಂದಂತೆ ದುರುಪಯೋಗ ಮಾಡುತ್ತಿದ್ದಾರೆ. ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

    ಕೊರೊನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಅನ್ನ, ಆಹಾರ, ಆರೋಗ್ಯ, ಶಿಕ್ಷಣ ಮತ್ತು ಬದುಕಿನ ಭದ್ರತೆ ಒದಗಿಸುವುದು ಕೇಂದ್ರ ಮತ್ತು ರಾಜ್ಯಗಳ ಕೆಲಸವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ರಾಜ್ಯ ಸರ್ಕಾರ ಇದಕ್ಕಾಗಿ ಖಜಾನೆಯಿಂದ ಖರ್ಚು ಮಾಡುವ ಬದಲು, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಿಸುತ್ತಿದೆ. ಇದೇ ಅವಕಾಶವನ್ನು ಬಳಸಿಕೊಂಡು ಕಾರ್ಮಿಕ ಸಚಿವರು ಹಾಗೂ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೋಟ್ಯಾಂತರ ಹಣ ಲೂಟಿ ಹೊಡೆಯುತ್ತಿದ್ದಾರೆ. ಇದು ಬಡ ಕಾರ್ಮಿಕರ ಹೆಸರಲ್ಲಿ ನಡೆಸುತ್ತಿರುವ ಹಗಲು ದರೋಡೆಯಾಗಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ರಿ) ಸಿಐಟಿಯು ಆಗ್ರಹಿಸಿದೆ.

  • ಖರ್ಚಾಗುತ್ತಿಲ್ಲ, ಲಸಿಕೆ ವಾಪಸ್ ಖರೀದಿಸಿ – ಖಾಸಗಿ ಆಸ್ಪತ್ರೆಗಳಿಂದ ಮನವಿ

    ಖರ್ಚಾಗುತ್ತಿಲ್ಲ, ಲಸಿಕೆ ವಾಪಸ್ ಖರೀದಿಸಿ – ಖಾಸಗಿ ಆಸ್ಪತ್ರೆಗಳಿಂದ ಮನವಿ

    ಬೆಂಗಳೂರು: ಎರಡನೇ ಅಲೆಯ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಮುಂದೆ ಉದ್ದುದ್ದ ಸಾಲುಗಳು ಸಾಮಾನ್ಯವಾಗಿತ್ತು. ಬಳಿಕ ಸರ್ಕಾರ ಎಲ್ಲರಿಗೂ ಲಸಿಕೆ ಉಚಿತ ಎಂದು ಘೋಷಿಸಿಕೊಂಡಿತೋ ಆಗ ಖಾಸಗಿ ಆಸ್ಪತ್ರೆಗಳ ಮುಂದೆ ಇದ್ದ ಕ್ಯೂ ಇದ್ದಕ್ಕಿದ್ದ ಹಾಗೆ ಮಾಯವಾಗಲು ಶುರುವಾಯ್ತು. ಎಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ಲಸಿಕೆ ಹಾಕಿಸಿಕೊಳ್ಳಲು ಮುಂದಾದರು. ಪರಿಣಾಮ ಸದ್ಯ, ಕೂಡಿಟ್ಟ ಲಸಿಕೆ ಖರ್ಚಾಗದ ಕಾರಣ ವಾಪಸ್ ಖರೀದಿಸಿ ಎಂದು ಖಾಸಗಿ ಆಸ್ಪತ್ರೆ ಮನವಿ ಮಾಡುತ್ತಿದೆ.

    ಕೇಂದ್ರ ಸರ್ಕಾರ ಉಚಿತ ಲಸಿಕೆ ಕೊಡುತ್ತಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆ ಕಡೆ ಮುಖಮಾಡದ ಜನ ತಜ್ಞರ ಅಭಿಪ್ರಾಯದ ಪ್ರಕಾರ ಇಷ್ಟೊತ್ತಿಗಾಗಲೇ ಕೊರೊನಾ ಮೂರನೇ ಅಲೆ ಅಪ್ಪಳಿಸಬೇಕಿತ್ತು. ಆದರೆ ಅದೃಷ್ಟವಶಾತ್ ಪರಿಸ್ಥಿತಿ ಹತೋಟಿಯಲ್ಲಿದೆ. ಇದರ ನಡುವೆ ಕೊರೊನಾದಿಂದ ಪರಾಗಲಿರುವ ದೊಡ್ಡ ಅಸ್ತ್ರ ಎಂದರೆ ಅದು ಲಸಿಕೆ ಮಾತ್ರ. ಹೀಗಾಗಿ ಲಸಿಕೆಗೂ ಬೇಡಿಕೆ ಹೆಚ್ಚಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಲಸಿಕೆ ಶೇಖರಣೆ ಮಾಡಿಟ್ಟುಕೊಂಡು ಜನರು ಬಾರದೆ ಗೋಳಾಡುತ್ತಿವೆ. ಮೊದಲು ಲಸಿಕೆ ಉಚಿತವಾಗಿ ಇರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ ಕೇಳಿದ ಪರಿಣಾಮ ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ಘೋಷಿಸಿಕೊಂಡಿತು. ಹೀಗಾಗಿ ಶೇ.75 ಸರ್ಕಾರಿ ಆಸ್ಪತ್ರೆಗಳಿಗೆ ಶೇ.25 ರಷ್ಟು ಲಸಿಕೆ ಖಾಸಗಿ ಆಸ್ಪತ್ರೆಗೆ ಲಸಿಕೆಯನ್ನು ಕೇಂದ್ರ ಸರಬರಾಜು ಮಾಡುತ್ತಿದೆ. ಶೇ.25 ರಷ್ಟು ಲಸಿಕೆ ಮಾತ್ರ ಖಾಸಗಿ ಕ್ಚೇತ್ರಕ್ಕೆ ಸಿಗುತ್ತಿದ್ದರೂ ಅದನ್ನು ಖರ್ಚು ಮಾಡಲಾಗದೆ ಖಾಸಗಿ ಆಸ್ಪತ್ರೆಗಳು ಚಿಂತೆಗೆ ಬಿದ್ದಿದೆ. ಇದಕ್ಕೆ ಕಾರಣ ಸರ್ಕಾರ ಲಸಿಕೆ ಉಚಿತವಾಗಿ ಕೊಡುತ್ತಿರುವ ಹಿನ್ನೆಲೆ ಜನರು ಸರ್ಕಾರಿ ಆಸ್ಪತ್ರೆಯಲ್ಲೇ ಉಚಿತವಾಗಿ ಲಸಿಕೆ ಪಡೆದುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ. ಇದನ್ನೂ ಓದಿ: ಕೋವಿಡ್‍ನಿಂದ ಮೃತಪಟ್ಟ ತಾಯಿ ಮೊಬೈಲ್ ಕೊಡಿ ಪ್ಲೀಸ್ ಎಂದ ಬಾಲಕಿಗೆ ಸಿಕ್ತು ಫೋನ್

    ಹಿಂದೆ ಸರಿಯುತ್ತಿರುವ ಖಾಸಗಿ ಆಸ್ಪತ್ರೆಗಳು:
    ಈಗ ಶೇ.25 ಲಸಿಕೆ ಮಾತ್ರ ಇದ್ದರು ಜನರು ಬಾರದೆ ಖಾಸಗಿ ಆಸ್ಪತ್ರೆಗಳಿಗೆ ತಳಮಳ ಶುರುವಾಗಿದೆ. ಮೂರನೇ ಅಲೆ ಮನಗಂಡು ಸರ್ಕಾರಕ್ಕೆ 15 ಲಕ್ಷ ಡೋಸ್‍ಗೆ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಿತ್ತು. ಆದರೆ ಜನರು ಉಚಿತವಾಗಿ ಲಸಿಕೆ ಪಡೆಯಲು ಮುಂದಾಗಿರುವ ಹಿನ್ನೆಲೆ ಅರ್ಧಕ್ಕರ್ಧ ಲಸಿಕೆ ಅಂದರೆ 7.50 ಲಕ್ಷ ಡೋಸ್ ಮಾತ್ರ ಸಾಕು ಎಂದು ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಹೇಳಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್‍ಗೆ 630 ರೂ ಹಾಗೂ ಸೇವಾ ಶುಲ್ಕ 150 ಸೇರಿಸಿ ಪ್ರತಿ ಡೋಸ್ ಗೆ 780 ರೂ. ಪಡೆದುಕೊಳ್ಳುತ್ತಿದೆ. ಇದೇ ರೀತಿ ಕೋವ್ಯಾಕ್ಸಿನ್‍ಗೆ 1260 ರೂ. ಹಾಗೂ ಸೇವಾ ಶುಲ್ಕ 150 ಸೇರಿಸಿ 1,410 ರೂ. ಅನ್ನು ಜನರಿಂದ ಪಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಕೋವಿಶೀಲ್ಡ್‍ಗೆ 630 ರೂ ಮತ್ತು ಕೋವ್ಯಾಕ್ಸಿನ್‍ಗೆ 1260 ರೂ.ಗೆ ಖಾಸಗಿ ಕ್ಷೇತ್ರಕ್ಕೆ ಮಾರಾಟ ಮಾಡುತ್ತಿದೆ. ಆದರೆ ಈಗ ಸರ್ಕಾರದಿಂದ ಕೊಂಡುಕೊಂಡಿರುವ ಲಸಿಕೆ ಖರ್ಚಾಗದೆ ಖಾಸಗಿ ಆಸ್ಪತ್ರೆಗಳು ಕಂಗಾಲಾಗಿ ಕೂತಿದೆ. ಇದನ್ನೂ ಓದಿ: ಕೋವಿಡ್ ಲಸಿಕೆ ಬಗ್ಗೆ ಯಾದಗಿರಿ ಜನರಲ್ಲಿ ಮೂಢನಂಬಿಕೆ

    ವಾಪಸ್ ಖರೀದಿಗೆ ಚಿಂತನೆ:
    ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಫನಾ ಅಧ್ಯಕ್ಷ ಮನವಿ ಮಾಡಿಕೊಂಡಿದೆ. ಕನಿಷ್ಠ ಪಕ್ಷ ಖಾಸಗಿ ಕ್ಷೇತ್ರದಲ್ಲಿರುವ ಲಸಿಕೆಯನ್ನು ಸರ್ಕಾರವೇ ವಾಪಸ್ ಖರೀದಿಸಿ ಸೇವಾ ಶುಲ್ಕ ಮಾತ್ರ ತಮಗೆ ಪಾವತಿಸಿದರೆ ಸಾಕು ಎಂಬ ನಿಲುವಿಗೆ ಖಾಸಗಿ ಆಸ್ಪತ್ರೆಗಳು ಬಂದಿದೆ. ಹೀಗಾಗಿ ಮೊದಲು ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳಲ್ಲಿನ ಲಸಿಕೆಯನ್ನು ವಾಪಾಸ್ ಖರೀದಿಸಲು ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ. ಸರ್ಕಾರದ ಖರ್ಚಿನಲ್ಲಿ ಪುನಃ ಲಸಿಕೆ ಖರೀದಿಸುವುದು ಆಗುವ ಮಾತಲ್ಲ. ಹೀಗಾಗಿ ಸಿಎಸ್‍ರ್ ಫಂಡ್ ಬಂಡವಾಳ ಮಾಡಿಕೊಂಡು ಖಾಸಗಿ ಕ್ಷೇತ್ರದಲ್ಲಿರುವ ಲಸಿಕೆಯನ್ನು ಖರೀದಿಸಲು ಪಾಲಿಕೆ ಮುಂದಾಗಿದೆ. ಈ ಮೂಲಕ ಅದನ್ನೂ ಸೇವಾ ಶುಲ್ಕ ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಲಸಿಕೆ ಹಂಚಿಕೆ ಮಾಡುವ ಲೆಕ್ಕಾಚಾರ ಬಿಬಿಎಂಪಿಯದ್ದು. ಮೂರನೇ ಅಲೆ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆ ಸಾವಧಾನವಾಗಿ ಉಚಿತ ಲಸಿಕೆ ಹಾಕಿಸಿಕೊಳ್ಳಲು ಜನರು ಮನಸ್ಸು ಮಾಡಿದ್ದಾರೆ. ಇದರಿಂದ ಲಸಿಕೆ ಕೂಡಿಟ್ಟು, ಮಾರಾಟ ಮಾಡಲಾಗದೆ ಖಾಸಗಿ ಆಸ್ಪತ್ರೆಗಳು ಕಂಗೆಟ್ಟು ಹೋಗಿವೆ. ಈಗ ಸರ್ಕಾರವೇ ಲಸಿಕೆ ಕೊಂಡುಕೊಳ್ಳಲಿ ಎಂದು ಖಾಸಗಿ ಆಸ್ಪತ್ರೆಗಳು ಮನವಿ ಮಾಡಿಕೊಳ್ಳುತ್ತಿದೆ.

  • ಕೋಲಾರದ ವೈದ್ಯರ ಬಗ್ಗೆ ಕ್ರಿಕೆಟಿಗ ಇರ್ಫಾನ್ ಪಠಾನ್ ಮೆಚ್ಚುಗೆ

    ಕೋಲಾರದ ವೈದ್ಯರ ಬಗ್ಗೆ ಕ್ರಿಕೆಟಿಗ ಇರ್ಫಾನ್ ಪಠಾನ್ ಮೆಚ್ಚುಗೆ

    ಕೋಲಾರ: ಕೋಲಾರದ ಖಾಸಗಿ ಆಸ್ಪತ್ರೆ ಬಗ್ಗೆ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಆಸ್ಪತ್ರೆ ಬಗ್ಗೆ ಸೆಲ್ಫಿ ವೀಡಿಯೋ ಮಾಡಿ ಹರಿ ಬಿಟ್ಟಿರುವ ಇರ್ಫಾನ್ ಪಠಾನ್, ಖಾಸಗಿ ಆಸ್ಪತ್ರೆ ಹಾಗೂ ಇಲ್ಲಿನ ವೈದ್ಯರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಲಾರ ನಗರದ ಡೂಂಲೈಟ್ ವೃತ್ತದಲ್ಲಿರುವ ಲಕ್ಷ್ಮೀ ಖಾಸಗಿ ಆಸ್ಪತ್ರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪಠಾಣ್ ಆಸ್ಪತ್ರೆಯ ಡಾ.ಗುಣಶೇಖರ್, ಡಾ.ಜಗಮೋಹನ್ ಹಾಗೂ ಡಾ.ರಾಧ ಎಂಬ ವೈದ್ಯರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ಕೊರೊನಾ ಸಂಕಷ್ಟ ಕಾಲದಲ್ಲಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಹಲವರ ಪ್ರಾಣಗಳನ್ನು ಉಳಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಇವರು ತಮ್ಮ ಕುಟುಂಬಗಳನ್ನು ಮರೆತು ಕೆಲಸ ಮಾಡಿದ್ದಾರೆ ಎಂದು ಇರ್ಫಾನ್ ಪಠಾನ್ ಹೇಳಿದ್ದಾರೆ. ಇದನ್ನೂ ಓದಿ: ಆರೋಗ್ಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ ತಲೈವಾ

  • ಕೋವಿಡ್ ಚಿಕಿತ್ಸೆಗೆ ದುಬಾರಿ ಬಿಲ್ – 5 ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ನೊಟೀಸ್ ಜಾರಿ

    ಕೋವಿಡ್ ಚಿಕಿತ್ಸೆಗೆ ದುಬಾರಿ ಬಿಲ್ – 5 ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ನೊಟೀಸ್ ಜಾರಿ

    ಬೆಂಗಳೂರು: ಕೊರೊನಾ ಎರಡನೇ ಮಾಹಾಮಾರಿಯನ್ನೆ ಕೆಲ ಆಸ್ಪತ್ರೆಗಳು ಬ್ಯುಸಿನೆಸ್ ಮಾಡಿಕೊಂಡಿವೆ. ಸರ್ಕಾರದ ನಿಗದಿ ಮಾಡಿದ ಮೇಲೆಯೂ ಅನೇಕ ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಗೆ ದುಬಾರಿ ಶುಲ್ಕ ಪಡೆಯುತ್ತಿವೆ. ಹೀಗೆ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ದರ ಪಡೆದ 5 ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಉತ್ತರ ಕೇಳಿ ನೋಟೀಸ್ ಜಾರಿ ಮಾಡಿದೆ.

    ನಗರದ ಪ್ರತಿಷ್ಠಿತ ಆಸ್ಪತ್ರೆಗಳಾದ ಅಶ್ವಿನಿ ಆಸ್ಪತ್ರೆ, ಸೆಂಟ್ ಜಾನ್ಸ್ ಆಸ್ಪತ್ರೆ, ಆಥ್ರೇಯ ಆಸ್ಪತ್ರೆ, ಕೆಕೆ ಆಸ್ಪತ್ರೆ, ಸ್ಪರ್ಶ್ ಆಸ್ಪತ್ರೆಗಳಿಗೆ ಸರ್ಕಾರ ನೊಟೀಸ್ ಜಾರಿ ಮಾಡಿದೆ. ಈ ನೊಟೀಸ್ ತಲುಪಿದ 3 ದಿನಗಳ ಒಳಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಉತ್ತರ ನೀಡದೇ ಹೋದ್ರೆ ಕಾನೂನಿನ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನ ಸರ್ಕಾರ ಕೊಟ್ಟಿದೆ. ಇದನ್ನೂ ಓದಿ:ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಾಸು ಕೊಟ್ರೆ ಡೆತ್ ಸರ್ಟಿಫಿಕೇಟ್ ಡೀಲ್ ತನಿಖೆಗೆ ಅಶೋಕ್ ಆರ್ಡರ್!

    ರಾಜ್ಯ ಸರ್ಕಾರ ಈಗಾಗಲೇ ಕೋವಿಡ್ ಚಿಕಿತ್ಸೆಗೆ ಎಷ್ಟು ದರ ಅಂತ ನಿಗದಿ ಮಾಡಿದೆ. ಸರ್ಕಾರದ ಕಡೆಯಿಂದ ಹೋದ ರೋಗಿಗೆ ಒಂದು ದರ, ಖಾಸಗಿಯಾಗಿ ದಾಖಲಾದ ರೋಗಿಗೆ ಇಂತಿಷ್ಟು ದರ ಅಂತ ನಿಗಧಿ ಮಾಡಿದೆ. ಆದರೆ ಕೆಲ ಆಸ್ಪತ್ರೆಗಳು ಸರ್ಕಾರದ ನಿಯಮ ಮೀರಿ ಹೆಚ್ಚು ದರ ಪಡೆದಿವೆ. ದುಬಾರಿ ಹಣ ಪಡೆದ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ನೊಟೀಸ್ ನೀಡಿದ್ದು, ಕ್ರಮಕ್ಕೆ ಮುಂದಾಗಿದೆ.

    ಸರ್ಕಾರದ ದರ ನಿಗದಿ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ರೋಗಿಗೆ ಜನರಲ್ ವಾರ್ಡ್ 10,000, ಎಚ್.ಡಿ.ಯು 12,000, ಐಸೋಲೇಶನ್ ವೆಂಟಿಲೇಟರ್ ಹೊರತುಪಡಿಸಿ ಐಸಿಯು 15,000 ಹಾಗೂ ಐಸೋಲೇಶನ್ ಐಸಿಯು ಮತ್ತು ವೆಂಟಿಲೇಟರ್ ಸೇರಿ 25,000 ಆಗಿದೆ.

  • ಕಡಿಮೆ ದರಕ್ಕೆ ಖರೀದಿಸಿ ದುಬಾರಿ ಬೆಲೆಗೆ ಖಾಸಗಿ ಆಸ್ಪತ್ರೆಗಳಿಗೆ ಪಂಜಾಬ್ ಸರ್ಕಾರದಿಂದಲೇ ಲಸಿಕೆ ಮಾರಾಟ

    ಕಡಿಮೆ ದರಕ್ಕೆ ಖರೀದಿಸಿ ದುಬಾರಿ ಬೆಲೆಗೆ ಖಾಸಗಿ ಆಸ್ಪತ್ರೆಗಳಿಗೆ ಪಂಜಾಬ್ ಸರ್ಕಾರದಿಂದಲೇ ಲಸಿಕೆ ಮಾರಾಟ

    – ಸಿಎಂ ಅಮರೀಂದರ್ ಸರ್ಕಾರದ ನಡೆಗೆ ಟೀಕೆ
    – ತನ್ನ ನಡೆಯನ್ನು ಸಮರ್ಥಿಸಿಕೊಂಡ ಸರ್ಕಾರ

    ನವದೆಹಲಿ: ಕೇಂದ್ರ ಸರ್ಕಾರ ಸರಿಯಾಗಿ ಲಸಿಕೆ ವಿತರಣೆ ಮಾಡುತ್ತಿಲ್ಲ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರುತ್ತಿದೆ. ಆದರೆ ಕಾಂಗ್ರೆಸ್ ಆಡಳಿತ ಇರುವ ಪಂಜಾಬ್ ಕಡಿಮೆ ದರದಲ್ಲಿ ಲಸಿಕೆ ಖರೀದಿಸಿ ಅದನ್ನು ದುಬಾರಿ ಬೆಲೆಗೆ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿರುವ ವಿಷಯ ಈಗ ವಿವಾದಕ್ಕೆ ಕಾರಣವಾಗಿದೆ.

    ಹೌದು. ಸಿಎಂ ಅಮರೀಂದರ್ ನೇತೃತ್ವದ ಸರ್ಕಾರ ಇತ್ತೀಚೆಗೆ ಹೈದರಾಬಾದ್‍ನಲ್ಲಿರುವ ಭಾರತ್ ಬಯೋಟೆಕ್ ಕಂಪನಿಯಿಂದ 1 ಲಕ್ಷ ಡೋಸ್ ಲಸಿಕೆಯನ್ನು 600 ರೂ.ನಂತೆ ಖರೀದಿಸಿದೆ. ಖರೀದಿಸಿದ ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡುವ ಬದಲು ಕನಿಷ್ಠ 20 ಸಾವಿರ ಡೋಸ್‍ಗಳನ್ನು ಖಾಸಗಿ ಆಸ್ಪತ್ರೆಗಳಿಗೆ 1,060 ರೂ.ನಂತೆ ಮಾರಾಟ ಮಾಡಿದೆ.

    ಸರ್ಕಾರ ಒಂದು ಲಸಿಕೆಯನ್ನು ಮಾರಾಟ ಮಾಡಿ 660 ರೂ. ಲಾಭ ಮಾಡಿದರೆ ಖಾಸಗಿ ಆಸ್ಪತ್ರೆಗಳು ಈ ಲಸಿಕೆಯನ್ನು 1,560 ರೂ.ಗೆ ಮಾರಾಟ ಮಾಡುತ್ತಿವೆ. ಈ ಮೂಲಕ 500 ರೂ. ಲಾಭ ಮಾಡುತ್ತಿವೆ. ಈಗ ಈ ವಿಚಾರ ಬಿಜೆಪಿಗೆ ಸಿಕ್ಕಿದ್ದೆ ತಡ ಭಾರೀ ಟೀಕೆ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದೆ. ಇದನ್ನೂ ಓದಿ: ಜೂನ್‍ನಲ್ಲಿ ಕರ್ನಾಟಕಕ್ಕೆ ಬರಲಿದೆ 58.71 ಲಕ್ಷ ಲಸಿಕೆ – ಕೇಂದ್ರ, ರಾಜ್ಯದ ಪಾಲು ಎಷ್ಟು?

    ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿ, ಕೇಂದ್ರ ಸರ್ಕಾರ ಉತ್ಪಾದಕರಿಂದ ಲಸಿಕೆಯನ್ನು ಖರೀದಿಸಿ 400 ರೂ.ಗೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದೆ. ಆದರೆ ಪಂಜಾಬ್ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಇದನ್ನು 1,060 ರೂ.ಗೆ ಮಾರಾಟ ಮಾಡಿದರೆ, ಖಾಸಗಿ ಆಸ್ಪತ್ರೆಗಳು ಈ ಲಸಿಕೆಯನ್ನು 1,560 ರೂ.ಗೆ ಮಾರಾಟ ಮಾಡುತ್ತಿದೆ. ಉಚಿತವಾಗಿ ನೀಡಬೇಬೇಕಾದ ಲಸಿಕೆಯನ್ನು 3,120 ರೂ. ನೀಡುತ್ತಿದೆ. ಇದುವೇ ಕಾಂಗ್ರೆಸ್ ಪಕ್ಷದ ನೆಚ್ಚಿನ “ಎರಡಕ್ಕೆ ನಾಲ್ಕು ಪಾಲಿಸಿ” ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    ಸರ್ಕಾರ ಹೇಳೋದು ಏನು?
    ಈ ವಿಚಾರಕ್ಕೆ ಪಂಜಾಬ್ ಸರ್ಕಾರ ಲಸಿಕೆಯ ನೋಡಲ್ ಅಧಿಕಾರಿ ವಿಕಾಸ್ ಗಾರ್ಗ್ ಪ್ರತಿಕ್ರಿಯಿಸಿ, ಲಸಿಕೆ ಸಾಮಾಜಿಕ ಹೊಣೆಗಾರಿಕಾ ನಿಧಿ ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆದಿದ್ದೇವೆ. ಖಾಸಗಿ ಆಸ್ಪತ್ರೆಗಳು ಈ ನಿಧಿಯಲ್ಲಿ ಹಣವನ್ನು ಠೇವಣಿ ಇಡುತ್ತವೆ. ಲಸಿಕೆ ಮಾರಾಟದಿಂದ ಬಂದ ಹಣವನ್ನು ಈ ಖಾತೆಗೆ ಹಾಕಿ ಮತ್ತೆ ಹೊಸ ಲಸಿಕೆ ಖರೀದಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

    ಪಂಜಾಬ್ ಸರ್ಕಾರದ ಈ ನೀತಿಗೆ ಈಗ ಭಾರೀ ಟೀಕೆಗೆ ಬಂದಿದೆ. ಸರ್ಕಾರ ಜನರಿಗೆ ಉಚಿತವಾಗಿ ಲಸಿಕೆಯನ್ನು ನೀಡಬೇಕು. ಆದರೆ ಇಲ್ಲಿ ಖಾಸಗಿ ಆಸ್ಪತ್ರೆಗಳಿಗೆ ನೆರವಾಗಲು ಈ ರೀತಿಯ ನಿಧಿಯನ್ನು ಸ್ಥಾಪನೆ ಮಾಡಿ ಲಾಭ ಮಾಡಲು ಮುಂದಾಗಿರುವುದು ಸರಿಯಲ್ಲ. ಖಾಸಗಿ ಆಸ್ಪತ್ರೆಗಳು ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿ ಮಾಡಬೇಕೇ ಹೊರತು ಸರ್ಕಾರದ ಮೂಲಕ ಖರೀದಿ ಮಾಡುವುದು ಸರಿಯಲ್ಲ ಎಂದು ಪಟಿಯಾಲದ ಆಪ್ ನಾಯಕ ಡಾ. ಬಲ್ಬೀರ್ ಸಿಂಗ್ ಟೀಕಿಸಿದ್ದಾರೆ.

    ಕಾಂಗ್ರೆಸ್ ವಿರುದ್ಧ ಟೀಕೆ ಮುಂದುವರಿಸಿದ ಅನುರಾಗ್ ಠಾಕೂರ್ 11.50 ಲಕ್ಷ ಲಸಿಕೆ ವ್ಯರ್ಥ ಮಾಡಿದ ವಿಚಾರನ್ನು ಉಲ್ಲೇಖಿಸಿ, ಪಂಜಾಬ್ ಸರ್ಕಾರಕ್ಕಿಂತ ರಾಜಸ್ಥಾನ ಸರ್ಕಾರ ಎರಡು ಹೆಜ್ಜೆ ಮುಂದಿದೆ. ಸಾವಿರಾರು ಲಸಿಕೆಗಳು ಕಸದ ತೊಟ್ಟಿಗೆ ಸೇರಿದೆ. ಈ ಮೂಲಕ ಕಾಂಗ್ರೆಸ್ ಜನರ ನಂಬಿಕೆಯನ್ನು ಕಸದ ತೊಟ್ಟಿಗೆ ಎಸೆದಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

  • ರಾಜ್ಯದಲ್ಲಿ ಕಾಸು ಇದ್ದವರಿಗಷ್ಟೇನಾ ವ್ಯಾಕ್ಸಿನ್? – ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 2,000ವರೆಗೆ ಲಸಿಕೆ ಹಂಚಿಕೆ

    ರಾಜ್ಯದಲ್ಲಿ ಕಾಸು ಇದ್ದವರಿಗಷ್ಟೇನಾ ವ್ಯಾಕ್ಸಿನ್? – ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 2,000ವರೆಗೆ ಲಸಿಕೆ ಹಂಚಿಕೆ

    – ಸರ್ಕಾರಿ ಆಸ್ಪತ್ರೆಗಳಲ್ಲಿ ನೋ ಸ್ಟಾಕ್

    ಬೆಂಗಳೂರು: ಕೊರೊನಾ ಓಡಿಸುವ ಸಂಜೀವಿನಿ ಆಗಿರುವ ವ್ಯಾಕ್ಸಿನ್ ವಿಷಯದಲ್ಲೂ ರಾಜಕೀಯ ನಡೀತಿದೆ. ಕಾಸ್ ಇದ್ದೋನೇ ಬಾಸ್ ಅನ್ನೋ ಹಾಗೆ ವ್ಯಾಕ್ಸಿನ್ ಹಂಚಿಕೆ ಆಗ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಿನಕ್ಕೆ ನೂರೋ ಅಥವಾ ಗರಿಷ್ಠ ಅಂದರೆ 300 ಜನಕ್ಕೋ ವ್ಯಾಕ್ಸಿನ್ ಕೊಡೋದು ಅನ್ನುತ್ತಿದ್ದಾರೆ. ಅದರಲ್ಲೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯೇ ಸಿಗುತ್ತಿಲ್ಲ.

    ಖಾಸಗಿ ಆಸ್ಪತ್ರೆಯಲ್ಲಿ 18 ವರ್ಷದಿಂದ ಮೇಲ್ಪಟ್ಟವರಿಗೂ ಲಸಿಕೆ ಸಿಗುತ್ತಿದೆ. ದಿನವೊಂದಕ್ಕೆ 1000 ದಿಂದ 2,000ಕ್ಕೂ ಅಧಿಕ ಮಂದಿಗೆ ಲಸಿಕೆ ವಿತರಣೆ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಲಸಿಕೆ, ಖಾಸಗಿ ಆಸ್ಪತ್ರೆಗಳಿಗೆ ಹೇಗೆ ಸಿಗುತ್ತಿದೆ ಅನ್ನೋದು ಪ್ರಶ್ನೆಯಾಗಿದೆ.

    ಬೆಂಗಳೂರಿನ ಸಿವಿ ರಾಮನ್ ನಗರದ ಬಿಜೆಪಿ ಶಾಸಕ ರಘು, ಸರ್ಕಾರದಿಂದ ಉಚಿತವಾಗಿ ನೀಡುತ್ತಿರೋ ಲಸಿಕೆಯನ್ನ ಪಿಎಚ್‍ಸಿ& ಸಾರ್ವಜನಿಕ ಆಸ್ಪತ್ರೆಯಲ್ಲಿ ವಿತರಣೆಗೆ ಬ್ರೇಕ್ ಹಾಕಿಸಿ, ನ್ಯೂ ತಿಪ್ಪಸಂದ್ರದ ಕಲ್ಯಾಣ ಮಂಟಪಕ್ಕೆ ಶಿಫ್ಟ್ ಮಾಡಿಸಿಕೊಂಡಿದ್ದಾರೆ. ಕ್ಷೇತ್ರಕ್ಕೆ ನಿತ್ಯ 400 ಡೋಸ್ ಬರ್ತಿದೆ. ಇದನ್ನು ಜನ ಸಾಮಾನ್ಯರಿಗೆ ಕೊಡೋ ಬದಲಿಗೆ ತಮಗೆ ಬೇಕಾದವರಿಗೆ ಕೊಡಿಸುತ್ತಿದ್ದಾರೆ ಅನ್ನೋ ಆರೋಪವೂ ಎದುರಾಗಿದೆ. ಕಲ್ಯಾಣ ಮಂಟಪ ಎದುರು ದೊಡ್ಡದಾದ ಫ್ಲೆಕ್ಸ್ ಹಾಕಿಸಿಕೊಂಡಿದ್ದಾರೆ. ಸ್ಥಳೀಯರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದೇಶದಲ್ಲಿ ವ್ಯಾಕ್ಸಿನ್ ಕೊರತೆ ಇಲ್ಲ. ವರ್ಷಾಂತ್ಯಕ್ಕೆ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಲಿದೆ. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ಕೇಂದ್ರ ಸರ್ಕಾರ 23 ಕೋಟಿಗೂ ಅಧಿಕ ಲಸಿಕೆ ಪೂರೈಸಲಾಗಿದೆ. ರಾಜ್ಯ & ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1.57 ಕೋಟಿ ಲಸಿಕೆ ಸ್ಟಾಕ್ ಇದೆ. ವ್ಯರ್ಥವಾಗಿರುವ ಲಸಿಕೆ ಸೇರಿಸಿ 21 ಕೋಟಿ 51 ಲಕ್ಷದ 48 ಸಾವಿರದ 659 ಡೋಸ್ ಬಳಕೆಯಾಗಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಟಾಕೇ ಇಲ್ಲ. ಇವತ್ತು 5.67 ಲಕ್ಷ ಕೋವಿಶೀಲ್ಡ್ ಸೇರಿ ರಾಜ್ಯಕ್ಕೆ ಒಟ್ಟು 1,45,79,010 ಡೋಸ್ ಬಂದಿದೆ.

    ರಾಜ್ಯಗಳಿಗೆ ಶೇ.50ರಷ್ಟು ವ್ಯಾಕ್ಸಿನ್ ಖರೀದಿಯ ಅಧಿಕಾರ ಇದೆ. ಆದರೆ ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಮಾತ್ರ ಖರೀದಿಗೆ ಅವಕಾಶ ಇದೆ. ಆದಾಗ್ಯೂ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಸಿಗ್ತಿಲ್ಲ.

    ಖಾಸಗಿ ಆಸ್ಪತ್ರೆಗಳಲ್ಲಿ ಯಾಕೆ ಲಸಿಕೆ ಸಿಗ್ತಿದೆ?
    1. ಶ್ರೀಘ್ರಗತಿ ವ್ಯಾಕ್ಸಿನ್ ಖರೀದಿ ಪ್ರಕ್ರಿಯೆ, ಸರಬರಾಜು, ವಿತರಣೆ
    (ಬೆಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಯ ಒಂದೇ ಸೆಂಟರ್‍ನಲ್ಲಿ 5 ಸಾವಿರ ವ್ಯಾಕ್ಸಿನ್ ಕೊಡ್ತಾರೆ + ರಾಜಕೀಯ ನಾಯಕರ ಅಧೀನದಲ್ಲಿ ಖಾಸಗಿ ಆಸ್ಪತ್ರೆಗಳು )
    2. ಸ್ಟಾಕ್ ಬಂದ ತಕ್ಷಣ ಶೆಡ್ಯೂಲ್ಡ್ ಮಾಡಿ ಕೋಲ್ಡ್ ಚೈನ್ ವ್ಯವಸ್ಥೆ ಮೂಲಕ ವಿತರಣೆ
    3. ಲಸಿಕಾ ಉತ್ಪಾದನಾ ಕೇಂದ್ರಗಳಿಂದಲೇ ನೇರವಾಗಿ ಖರೀದಿ
    4. ಉತ್ಪಾದನಾ ಕಂಪನಿಗಳಿಗೆ ಡೆಪಾಸಿಟ್ ಹಣ ನೀಡಿ, ಸಾಮರ್ಥ್ಯಕ್ಕೆ ತಕ್ಕಂತೆ ಲಸಿಕೆ ಖರೀದಿ
    5. ವ್ಯವಹಾರದ ಮನಸ್ಥಿತಿಯ ಮೇಲೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚೆಚ್ಚು ವ್ಯಾಕ್ಸಿನ್

    ಸರ್ಕಾರಿ ಆಸ್ಪತ್ರೆಗಳಲ್ಲಿ ಯಾಕೆ ಸಿಗ್ತಿಲ್ಲ ಲಸಿಕೆ?
    1. ಸರ್ಕಾರಕ್ಕೆ ಲಸಿಕೆ ಖರೀದಿಸುವ ಮನಸ್ಸಿಲ್ಲ
    2. ಡೆಪಾಸಿಟ್ ಹಣ ನೀಡುವ ಸಾಮರ್ಥ್ಯ  ಇದ್ರೂ ಜನರ ಕಾಳಜಿ ಇಲ್ಲ
    3. ನಿಧಾನವಾಗಿ ಹಂತ ಹಂತವಾಗಿ ಕೊಡೋಣ ಅನ್ನೋ ಮನಸ್ಥಿತಿ

  • ಆಕ್ಸಿಜನ್‍ಗಾಗಿ ಸಚಿವರಿಗೆ ಕೈಮುಗಿದು ಮನವಿ ಮಾಡಿದ ಖಾಸಗಿ ಆಸ್ಪತ್ರೆ ವೈದ್ಯರು

    ಆಕ್ಸಿಜನ್‍ಗಾಗಿ ಸಚಿವರಿಗೆ ಕೈಮುಗಿದು ಮನವಿ ಮಾಡಿದ ಖಾಸಗಿ ಆಸ್ಪತ್ರೆ ವೈದ್ಯರು

    ಹಾಸನ: ಜಿಲ್ಲೆಯಲ್ಲಿ ದಿನಕಳೆದಂತೆ ಸಮಸ್ಯೆಯಾಗುತ್ತಿರುವ ಆಕ್ಸಿಜನ್ ಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯರ ಬಳಿ ಖಾಸಗಿ ಆಸ್ಪತ್ರೆಯ ವೈದ್ಯರು ಕೈ ಮುಗಿದು ತಮ್ಮ ಅಳಲನ್ನು ತೋಡಿಕೊಂಡಿರುವ ಘಟನೆ ವರದಿಯಾಗಿದೆ.

    ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯರನ್ನು ಖಾಸಗಿ ಆಸ್ಪತ್ರೆಯ ವೈದ್ಯರು ಭೇಟಿಯಾಗಿದ್ದರು. ಈ ವೇಳೆ ವೈದ್ಯರು ಆಕ್ಸಿಜನ್ ಸಮಸ್ಯೆ ಬಗೆಹರಿಸುವಂತೆ ಕೈಮುಗಿದು ಮನವಿ ಮಾಡಿದ್ದಾರೆ. ಖಾಸಗಿಯವರಿಗೆ ಆಕ್ಸಿಜನ್ ಸರಿಯಾಗಿ ವಿತರಣೆ ಆಗುತ್ತಿಲ್ಲ. ನೀವು, ಡಿಸಿ ಹಾಗೂ ಎಲ್ಲಾ ಅಧಿಕಾರಿಗಳು ಸ್ಪಂದಿಸುತ್ತಿದ್ದೀರಿ. ಆದರೂ ನಾವು ಅಸಹಾಯಕರಾಗಿ ಹೋಗಿದ್ದೇವೆ. ನಮಗೆ ಕಷ್ಟವಾಗುತ್ತಿದೆ, ನಿಜವಾದ ಸ್ಥಿತಿ ಏನಿದೆ ಎಂಬುದನ್ನು ರೋಗಿಗೆ ಅರ್ಥ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಆಕ್ಸಿಜನ್ ಸಮಸ್ಯೆಯಾದಾಗ ಇರೋ ರೋಗಿಗಳನ್ನು ಡಿಸ್ಚಾರ್ಜ್ ಮಾಡಲು ಆಗುವುದಿಲ್ಲ. ಹೊಸದಾಗಿ ಅಡ್ಮಿಟ್ ಆಗಲೂ ಬಂದವರಿಗೆ ಅದು, ಇದು ಕಾರಣ ಕೊಟ್ಟು ಕಳುಹಿಸಬಹುದು. ಆದ್ರೆ ಈಗಾಗಲೇ ಅಡ್ಮಿಟ್ ಆಗಿರುವ ರೋಗಿಗಳಿಗೆ ಏನು ಮಾಡೋದು? ನಮಗೆ ನಿರ್ದಿಷ್ಟ ಪೇಷೆಂಟ್ ಎಂದು ವಹಿಸಿ, ಅವರಿಗಾಗುವಷ್ಟು ಆಕ್ಸಿಜನ್ ಕೊಡಿ, ನಾವು ಸರ್ಕಾರಕ್ಕೆ ಸ್ಪಂದಿಸುತ್ತೇವೆ, ಕೋವಿಡ್ ಪೇಷೆಂಟ್ ಒಂದ್ಕಡೆ, ನಾನ್ ಕೋವಿಡ್ ಪೇಷೆಂಟ್ ಒಂದ್ಕಡೆ, ಆಕ್ಸಿಜನ್ ಇಲ್ಲದೇ ಸಾಯುತ್ತಾರೆ, ಜನ ಗಲಾಟೆ ಮಾಡುತ್ತಾರೆ. ನಾವು ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ.

    ನೀವು ಆಕ್ಸಿಜನ್ ಸಹಾಯ ಮಾಡದಿದ್ದರೆ ನಾವು ರೋಗಿಗಳಿಗೆ ಚಿಕಿತ್ಸೆ ಕೊಡಲು ಅಸಹಾಯಕರಾಗುತ್ತೇವೆ. ಎಂದು ಪದೇ ಪದೇ ಕೈ ಮುಗಿದು ಸಚಿವರಿಗೆ ವೈದ್ಯರು ಮನವಿ ಮಾಡಿದ್ರು. ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಸಚಿವ ಗೋಪಾಲಯ್ಯ ಭರವಸೆ ನೀಡಿದರು.