Tag: Private Bank

  • ಡಬಲ್ ಹಣ ನೀಡುವುದಾಗಿ ನಿವೃತ್ತ ನೌಕರರಿಗೆ ಬ್ಯಾಂಕ್‌ನಿಂದ ಪಂಗನಾಮ

    ಡಬಲ್ ಹಣ ನೀಡುವುದಾಗಿ ನಿವೃತ್ತ ನೌಕರರಿಗೆ ಬ್ಯಾಂಕ್‌ನಿಂದ ಪಂಗನಾಮ

    ರಾಮನಗರ: ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ (Bank) ಹೆಚ್ಚಿನ ಬಡ್ಡಿ (Interest) ಕೊಡುತ್ತಾರೆ ಎನ್ನೋ ಆಸೆಯಿಂದ ಇದ್ದ ನಿವೃತ್ತ ನೌಕರರನ್ನು (Retired Employees) ಖಾಸಗಿ ಬ್ಯಾಂಕ್‌ (Private Bank) ಒಂದು ವಂಚಿಸಿರುವ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ. ನಿವೃತ್ತ ನೌಕರರನ್ನು ಟಾರ್ಗೆಟ್ ಮಾಡಿದ್ದ ಬ್ಯಾಂಕ್‍ನವರು, ಡಬಲ್ ಹಣ (Money) ನೀಡೋದಾಗಿ ಹಣ ಠೇವಣಿ ಮಾಡಿಸಿಕೊಂಡು ಅವಧಿ ಮುಗಿದ ಬಳಿಕ ಹಣ ನೀಡದೆ ಕಚೇರಿಯನ್ನು ಬಂದ್ ಮಾಡಿ ಎಸ್ಕೇಪ್ ಆಗಿದ್ದಾರೆ.

    ರಾಮನಗರದ ಪಂಚವಟಿ ಮಲ್ಟಿಸ್ಟೇಟ್‌ ಕ್ರೆಡಿಟ್ ಕೋ-ಆಪರೇಟಿವ್‌ ಬ್ಯಾಂಕ್‍ನಿಂದ ಷೇರುದಾರಿಗೆ ಪಂಗನಾಮ ಹಾಕಲಾಗಿದೆ. ಹಣ ಕಳೆದುಕೊಂಡ ಷೇರುದಾರರು ಈಗ ಪೊಲೀಸರ ಮೊರೆಹೋಗಿದ್ದಾರೆ. ರಾಮನಗರದ ಐಜೂರಿನಲ್ಲಿರುವ ಪಂಚವಟಿ ಮಲ್ಟಿಸ್ಟೇಟ್‌ ಕ್ರೆಡಿಟ್ ಕೋ-ಆಪರೇಟಿವ್‌ ಬ್ಯಾಂಕ್‍ನಲ್ಲಿ ನೂರಾರು ಜನರು ಕೊಟ್ಯಂತರ ರೂ. ಹಣ ಹೂಡಿಕೆ ಮಾಡಿದ್ರು. ನಿವೃತ್ತ ನೌಕರನ್ನು ಟಾರ್ಗೆಟ್ ಮಾಡಿದ್ದ ಬ್ಯಾಂಕ್‍ನವರು ಡಬಲ್ ಹಣ ನೀಡೋದಾಗಿ ಹಣ ಠೇವಣಿ ಮಾಡಿಸಿಕೊಂಡು ಅವಧಿ ಮುಗಿದ ಬಳಿಕ ಹಣ ನೀಡದೇ ಕಚೇರಿಯನ್ನು ಬಂದ್ ಮಾಡಿ ಎಸ್ಕೇಪ್ ಆಗಿದ್ದಾರೆ. ಹೆಚ್ಚಿನ ಹಣದ ಆಸೆಗೆ ಹೂಡಿಕೆ ಮಾಡಿದ್ದ ಷೇರುದಾರರು ಇದ್ದ ಹಣವನ್ನು ಕಳೆದುಕೊಂಡು ಅತಂತ್ರರಾಗಿದ್ದಾರೆ. ಇದನ್ನೂ ಓದಿ: ಯಡ್ಡಿಯೂರಪ್ಪಗೆ ಕಲ್ಲು ಹೊಡೆದ್ರೆ BJP ಪಕ್ಷಕ್ಕೇ ಪೆಟ್ಟು – ವಿಜಯೇಂದ್ರ ಎಚ್ಚರಿಕೆ

    ಠೇವಣಿ ಹಣ ಹಿಂಪಡೆಯಲು ಹೋದಾಗ ಷೇರುದಾರರನ್ನು ಸತಾಯಿಸಿದ ಬ್ಯಾಂಕ್‍ನ ಆಡಳಿತ ಮಂಡಳಿ ಈಗ ಹಣ ಹಿಂತಿರುಗಿಸದೆ ಎಸ್ಕೇಪ್ ಆಗಿದೆ ಎಂಬ ಆರೋಪವಿದೆ. ಜಿಲ್ಲೆಯಾದ್ಯಂತ ನಮ್ಮ ಬ್ರಾಂಚ್‌ ಇದೆ. ರಾಷ್ಟ್ರೀಕೃತ ಬ್ಯಾಂಕ್‍ಗಿಂತಲೂ ಹೆಚ್ಚಿನ ಬಡ್ಡಿ ನೀಡ್ತೇವೆ ಎಂದು ಬ್ಯಾಂಕ್‍ನವರು ಕೊಟ್ಯಂತರ ರೂ. ಪಡೆದಿದ್ದಾರೆ. ಆದ್ರೆ ಈಗ ಬೆಂಗಳೂರಿನ ಕಚೇರಿಯನ್ನೂ ಸಹ ಬಂದ್ ಮಾಡಿ ಆಡಳಿತ ಮಂಡಳಿಯವರು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ರಾಮನಗರ ಸೈಬರ್ ಕ್ರೈಂ ಬ್ರ್ಯಾಂಚ್‍ನಲ್ಲಿ 11 ಮಂದಿ ಷೇರುದಾರರು ದೂರು ನೀಡಿದ್ದು ಬ್ಯಾಂಕ್‍ನ 8 ಮಂದಿ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು (Police) ರಾಮನಗರದ ಬ್ರಾಂಚ್‍ನ ಬ್ಯಾಂಕ್ ದಾಖಲೆಗಳನ್ನು ಸೀಜ್ ಮಾಡಿ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಐಸಿಯುನಲ್ಲಿ ಸ್ಯಾಂಟ್ರೋ ರವಿಗೆ ಚಿಕಿತ್ಸೆ- ಸಂಜೆ ಡಿಸ್ಚಾರ್ಜ್?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲೋನ್ ಕೊಡುವುದಾಗಿ ಖಾಸಗಿ ನೌಕರನಿಗೆ ವಂಚನೆ- ಲಕ್ಷಾಂತರ ರೂ. ಪಂಗನಾಮ

    ಲೋನ್ ಕೊಡುವುದಾಗಿ ಖಾಸಗಿ ನೌಕರನಿಗೆ ವಂಚನೆ- ಲಕ್ಷಾಂತರ ರೂ. ಪಂಗನಾಮ

    ಗದಗ: ಬೆಂಗಳೂರಿನ ಇಂಡಸ್ ಆ್ಯಂಡ್ ಬ್ಯಾಂಕ್ ಕಷ್ಟಮರ್ ಕೇರ್ ನಿಂದ ಲೋನ್ ಕೊಡುವುದಾಗಿ ನಂಬಿಸಿ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಕಂಗಾಲಾಗಿದ್ದಾರೆ.

    ಬ್ಯಾಂಕ್ ಅಕೌಂಟ್, ಪಿನ್, ಎಟಿಎಮ್ ಕಾರ್ಡ್ ಬ್ಲಾಕ್ ಆಗಿದೆ ಎಂದು ಯಾರಾದರೂ ಅಪರಿಚಿತರು ಕರೆ ಮಾಡಿದರೆ ಅವರಿಗೆ ಉತ್ತರ ನೀಡಬೇಡಿ ಎಂದು ಪೊಲೀಸರು ಎಷ್ಟೇ ಎಚ್ಚರಿಕೆ, ಜಾಗೃತಿ ನೀಡಿದರೂ ಜನ ಮಾತ್ರ ಅದರ ಗಮನ ಹರಿಸುತ್ತಿಲ್ಲ. ಅದರಲ್ಲೂ ವಿದ್ಯಾವಂತರೇ ಮೋಸಕ್ಕೆ ಒಳಗಾಗುತ್ತಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣದ ನಿವಾಸಿ ವಿಕಾಸ್ ಪಾಟೀಲ್ ಎಂಬವರು ಕೂಡ ಇದೀಗ ಇಂಥದ್ದೇ ಮೋಸದ ಕರೆಯನ್ನು ನಂಬಿ ಹಣಕಳೆದುಕೊಂಡಿದ್ದಾರೆ.

    ಬೆಂಗಳೂರಿನ ಇಂಡಸ್ ಇಂಡ್ ಬ್ಯಾಂಕ್ ಕಷ್ಟಮರ್ ಕೇರ್ ನಿಂದ ಮಾತಾಡೋದು ಎಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಿಮಗೆ ಲೋನ್ ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಮರುಳಾದ ವಿಕಾಸ್ ಪಾಟೀಲ್, ತಮ್ಮ ಜಕ್ಕಸಂದ್ರ ಶಾಖೆಯ ಅಕೌಂಟ್ ನಂಬರ್ ಕೊಟ್ಟಿದ್ದಾರೆ. ಅಕೌಂಟ್ ನಂಬರ್ ಕೊಟ್ಟಿದ್ದೇ ತಡ ಖದೀಮ ಅದರಲ್ಲಿದ್ದ ಸುಮಾರು 1ಲಕ್ಷ 29 ಸಾವಿರ ಡ್ರಾ ಮಾಡಿಕೊಂಡಿದ್ದಾನೆ.ಇದನ್ನೂ ಓದಿ: ಭೂ ಕುಸಿತದಿಂದ ಮಾರ್ಗ ಬಂದ್ – ಹೆಗಲ ಮೇಲೆ ಬೈಕ್ ಹೊತ್ತು ಸಾಗಿದ ಬಾಹುಬಲಿ

    ಜುಲೈ 11 ರಂದು 49 ಸಾವಿರದಂತೆ 2 ಸಲ ಹಾಗೂ 30 ಸಾವಿರ ರೂ.ಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಆನ್‍ಲೈನ್ ಮೂಲಕ ವಂಚಿಸಿ ಹಣ ಪಡೆದಿದ್ದಾನೆ. ಇದು ಒಂದು ವಾರದ ನಂತರ ವಿಕಾಸ್ ಪಾಟೀಲ್‍ಗೆ ಗೊತ್ತಾಗಿದ್ದು, ವಂಚನೆ ಮಾಡಿದ ಆರೋಪಿ ವಿರುದ್ಧ ಲಕ್ಷ್ಮೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಓರ್ವ ಸಿಬ್ಬಂದಿಗೆ ಕೊರೊನಾ- ಮಲ್ಲೇಶ್ವರಂನ ಪಿಎನ್‌ಬಿ ಬ್ಯಾಂಕ್ ಸೀಲ್‍ಡೌನ್

    ಓರ್ವ ಸಿಬ್ಬಂದಿಗೆ ಕೊರೊನಾ- ಮಲ್ಲೇಶ್ವರಂನ ಪಿಎನ್‌ಬಿ ಬ್ಯಾಂಕ್ ಸೀಲ್‍ಡೌನ್

    ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಸಿಬ್ಬಂದಿಯೊಬ್ಬರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

    ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪಿಎನ್‌ಬಿ ಬ್ಯಾಂಕ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಸಿಬ್ಬಂದಿಯ ರಿಪೋರ್ಟ್ ಪಾಸಿಟಿವ್ ಬಂದ ಹಿನ್ನೆಲೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗೆ ಬ್ಯಾಂಕ್‍ಗೆ ದೌಡಾಯಿಸಿ ಬ್ಯಾಂಕ್ ಅನ್ನು ಸೀಲ್‍ಡೌನ್ ಮಾಡಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಒಂದೇ ದಿನ ಗರಿಷ್ಠ 9,304 ಮಂದಿಗೆ ಕೊರೊನಾ- 260 ಜನ ಸಾವು

    ಸೋಂಕಿತ ವ್ಯಕ್ತಿಯ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. ಜೊತೆಗೆ ಬ್ಯಾಂಕ್‍ನ ಮುಂಭಾಗದಲ್ಲಿ ನೋಟಿಸ್ ಹಾಕಿದ್ದಾರೆ. ಆದರೆ ಸೆಕ್ಯೂರಿಟಿ ಗಾರ್ಡ್ ಸಮೇತ ಯಾರು ಕೂಡ ಬ್ಯಾಂಕ್‍ನಲ್ಲಿ ಇಲ್ಲ. ಹೀಗಾಗಿ ಬ್ಯಾಂಕ್ ಕ್ಲೋಸ್ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಹಿತಿಗಾಗಿ ತಡಕಾಡುತ್ತಿದ್ದಾರೆ.