Tag: principle

  • ಪ್ರಾಕ್ಟಿಕಲ್ ಕ್ಲಾಸ್ ವೇಳೆ ಮೊಬೈಲ್‍ನಲ್ಲಿ ರೀಲ್ಸ್- ರೊಚ್ಚಿಗೆದ್ದ ಪ್ರಿನ್ಸಿಪಾಲ್‍ರಿಂದ ಮೊಬೈಲ್ ಪೀಸ್ ಪೀಸ್!

    ಪ್ರಾಕ್ಟಿಕಲ್ ಕ್ಲಾಸ್ ವೇಳೆ ಮೊಬೈಲ್‍ನಲ್ಲಿ ರೀಲ್ಸ್- ರೊಚ್ಚಿಗೆದ್ದ ಪ್ರಿನ್ಸಿಪಾಲ್‍ರಿಂದ ಮೊಬೈಲ್ ಪೀಸ್ ಪೀಸ್!

    ಬೆಂಗಳೂರು: ಶಾಲಾ-ಕಾಲೇಜುಗಳಿಗೆ ಮೊಬೈಲ್ (Mobile) ಕೊಂಡೊಯ್ಯಬಾರದು ಅನ್ನೋದು ನಿಯಮ. ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ರೆ ಮೊಬೈಲ್ ಕಥೆ ಅಷ್ಟೆ. ಫೈನ್ ಹಾಕೋದು, ಪೇರೆಂಟ್ಸ್ ಗೆ ಕಂಪ್ಲೆಂಟ್ ಮಾಡೋದು ಮಾಡಿ ವಿದ್ಯಾರ್ಥಿಗಳಲ್ಲಿ ಲೆಕ್ಚರರ್ಸ್ ಸದಾ ಭಯ ಇಟ್ಟಿರ್ತಾರೆ. ಇಷ್ಟಿದ್ದರು ಕೂಡ ಕಾಲೇಜು ವಿದ್ಯಾರ್ಥಿಗಳು ಕದ್ದು ಮುಚ್ಚಿ ಮೊಬೈಲ್ ಬಳಸ್ತಾರೆ. ವಿರಾಮದಲ್ಲೋ, ಲಂಚ್ ಬ್ರೇಕ್, ಕಾಲೇಜು ಸಮಯ ಮುಗಿದ ಬಳಿಕ ಮೊಬೈಲ್ ಬಳಸಿದ್ರೆ ಯಾರೂ ಕೇಳೊಕೆ ಬರೊಲ್ಲ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪ್ರಿನ್ಸಿಪಾಲ್ (Principal) ಮೊಬೈಲ್ ಹೊಡೆದು ಹಾಕಿದ್ದಾರೆ ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಹೊಸಕೋಟೆಯ (Hosakote) ಖಾಸಗಿ ಕಾಲೇಜಿನ ವಿದ್ಯಾರ್ಥಿ ಸೂರ್ಯ ಮೊಬೈಲ್ ತೆಗೆದುಕೊಂಡು ಹೋಗಿದ್ದ. ಈ ಹಿಂದೆಯೇ ಕ್ಲಾಸ್ ರೂಂಗೆ ಮೊಬೈಲ್ ತರದಂತೆ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ನಾಗರಾಜ್ ವಾರ್ನ್ ಮಾಡಿದ್ರಂತೆ. ಪ್ರಿನ್ಸಿಪಾಲ್ ಮಾತಿಗೆ ಕಿಮ್ಮತ್ತು ಕೊಡದ ವಿದ್ಯಾರ್ಥಿಗಳು, ಕಾಲೇಜಿಗೆ ಮೊಬೈಲ್ ಕೊಂಡೊಯ್ತಿದ್ರು. ಪಾಠದ ನಡುವೆಯೇ ಮೊಬೈಲ್‍ನಲ್ಲಿ ಆಟ ಕಾಮನ್ ಆಗೋಗಿತ್ತು. ವೆಲ್ಡಿಂಗ್ ಟ್ರೈನಿಂಗ್ ಕ್ಲಾಸ್ ನಡೆಯುತ್ತಿರೋ ವೇಳೆ ಸೂರ್ಯ ಹಾಗೂ ಆತನ ಸ್ನೇಹಿತರು ರೀಲ್ಸ್ ಮಾಡ್ತಿದ್ರಂತೆ. ಇದನ್ನು ಗಮನಿಸಿದ ಶಾಲಾ ಪ್ರಿನ್ಸಿಪಾಲ್, ಕೋಪದಲ್ಲಿ ಮೊಬೈಲ್ ತೆಗೆದು ನೆಲಕ್ಕೆ ಹೊಡೆದು ಪುಡಿ ಮಾಡಿದ್ದರು.

    ಸೂರ್ಯ ಮನೆಯವರಿಂದ ಪ್ರಿನ್ಸಿಪಾಲ್ ವಿರುದ್ಧ ದೂರು ನೀಡಿದ್ದು, ಇಎಂಐ ಕಟ್ತಾ ಇದ್ದೀವಿ ಪ್ರಿನ್ಸಿಪಾಲ್ ಮೊಬೈಲ್ ಹಾಳು ಮಾಡಿದ್ದಾರೆ ಅಂತಾ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

  • ಗೋಡ್ಸೆ ಕೊಂದಿದ್ದು ಗಾಂಧಿ ದೇಹವನ್ನ, ಕಾಂಗ್ರೆಸ್ ಕೊಂದಿದ್ದು ಗಾಂಧಿ ತತ್ವವನ್ನ: ಸಿ.ಟಿ.ರವಿ

    ಗೋಡ್ಸೆ ಕೊಂದಿದ್ದು ಗಾಂಧಿ ದೇಹವನ್ನ, ಕಾಂಗ್ರೆಸ್ ಕೊಂದಿದ್ದು ಗಾಂಧಿ ತತ್ವವನ್ನ: ಸಿ.ಟಿ.ರವಿ

    ಚಿಕ್ಕಬಳ್ಳಾಪುರ: ಗಾಂಧೀಜಿಯವರ ಟೋಪಿಯನ್ನು ಹಾಕಿಕೊಂಡ ಕಾಂಗ್ರೆಸ್ ಪಕ್ಷ ಉಳಿದವರಿಗೆ ಟೋಪಿ ಹಾಕುವ ಕೆಲಸ ಮಾಡಿತು. ಗಾಂಧಿ ತತ್ವವನ್ನ ಬಿಟ್ಟು ಬಿಡ್ತು. ಗೋಡ್ಸೆ ಕೊಂದಿದ್ದು ಗಾಂಧಿ ದೇಹವನ್ನ ಮಾತ್ರ. ಆದರೆ ಕಾಂಗ್ರೆಸ್ ಕೊಂದಿದ್ದು ಗಾಂಧಿ ತತ್ವಗಳನ್ನು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

    ಜಿಲ್ಲೆಯ ಗೌರಿಬಿದನೂರು ವಿದುರಾಶ್ವತ್ಥ ಗ್ರಾಮದಲ್ಲಿ ಮಾತನಾಡಿದ ಸಿ.ಟಿ.ರವಿ, ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಸವಿ ನೆನೆಪಿನಾರ್ಥಕವಾಗಿ ‘ಗಾಂಧಿ ತತ್ವದ ಎಡೆಗೆ, ನಮ್ಮ ನಡಿಗೆ’ ಅನ್ನೋ ಜನಜಾಗೃತಿ ಪಾದಯಾತ್ರೆ ನಡೆಸಿದ್ದೇವೆ. ಸ್ವತಂತ್ರ ಹೋರಾಟದ ತಪೋಭೂಮಿಯಾದ ವಿದುರಾಶ್ವತ್ಥ ಗ್ರಾಮದಿಂದ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ನಮ್ಮ ನಡಿಗೆ ಗಾಂಧಿ ತತ್ವಗಳ ಕಡೆಗೆ ಎಂದು ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

    ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿಪಕ್ಷ ನಾಯಕನ ಆಯ್ಕೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿರುವ ರವಿ ಅವರು, ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರನ್ನ ಒಗ್ಗೂಡಿಸುವಂತಹ ನಾಯಕರೂ ಯಾರೂ ಇಲ್ಲ. ಸಿದ್ದರಾಮಯ್ಯ ಸಹ ಕೇವಲ ಒಂದು ಗುಂಪಿನ ನಾಯಕರಷ್ಟೇ. ಹೀಗೆ ಕಾಂಗ್ರೆಸ್‍ನಲ್ಲಿ ಹಲವು ಗುಂಪುಗಳಿದ್ದು. ಹಲವು ಮಂದಿ ನಾಯಕರಿದ್ದಾರೆ. ಇಡೀ ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳುವಂತಹ ಏಕೈಕ ನಾಯಕ ಸದ್ಯಕ್ಕೆ ಕರ್ನಾಟಕದಲ್ಲಿ ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು.

  • ವಿದೇಶದಲ್ಲಿ ಕೆಲಸದ ಆಫರ್ – ಲಕ್ಷಾಂತರ ರೂ. ಹಣ ಪಡೆದು ಪ್ರಿನ್ಸಿಪಾಲ್ ಪರಾರಿ

    ವಿದೇಶದಲ್ಲಿ ಕೆಲಸದ ಆಫರ್ – ಲಕ್ಷಾಂತರ ರೂ. ಹಣ ಪಡೆದು ಪ್ರಿನ್ಸಿಪಾಲ್ ಪರಾರಿ

    ಕಾರವಾರ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಪ್ರಾಂಶುಪಾಲನೋರ್ವ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಪರಾರಿಯಾದ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.

    ಹೊನ್ನಾವರದಲ್ಲಿ ಕಳೆದ 2016ರಿಂದ ‘ಕಲ್ಪತರು’ ಹೆಸರಿನಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜು ಪ್ರಾರಂಭವಾಗಿತ್ತು. ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮುಗಿಸಿದರೆ ವಿದೇಶದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಕಾಲೇಜಿನ ಪ್ರಾಂಶುಪಾಲ ಚೆನ್ನೈ ಮೂಲದ ಗಂಗಾಧರ ವಿದ್ಯಾರ್ಥಿಗಳನ್ನು ಕೋರ್ಸ್‍ಗೆ ದಾಖಲು ಮಾಡಿಕೊಂಡಿದ್ದ.

    ಕಾಲೇಜು ಶುಲ್ಕ ಎಂದು ಪ್ರತಿಯೊಬ್ಬರಿಂದ 60 ಸಾವಿರ ಹಣವನ್ನು ಸಹ ಪಡೆದಿದ್ದ. ಇನ್ನು ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಹಾಂಕಾಂಗ್‍ನಲ್ಲಿರುವ ‘ಶಾಂಗ್ರಿಲಾ’ ಹೋಟೆಲ್ ನಲ್ಲಿ ಕೆಲಸ ಕೊಡಿಸುವುದಾಗಿ ಪ್ರಾಂಶುಪಾಲ ಗಂಗಾಧರ ಸುಮಾರು 76 ವಿದ್ಯಾರ್ಥಿಗಳಿಂದ 1.10 ಲಕ್ಷ ಹಣವನ್ನ ಪಡೆದಿದ್ದ. ವಿದ್ಯಾರ್ಥಿಗಳಿಗೆ ಪಾಸ್ ಪೋರ್ಟ್ ವೀಸಾ ಮಾಡಿಸಿ ಕೆಲಸಕ್ಕೆ ಕಳುಹಿಸುವುದಾಗಿ ಹೇಳಿ ಮೇ 6ರಂದು ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ. ಅಲ್ಲಿಂದ ಮೇ 10 ರಂದು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಹೋಟೆಲ್ ಒಂದರಲ್ಲಿ ತಂಗುವಂತೆ ಹೇಳಿ ಶಾಂಗ್ರಿಲಾ ಹೋಟೆಲ್ ನವರು ಇಲ್ಲಿ ಸಂದರ್ಶನ ತೆಗೆದುಕೊಳ್ಳುತ್ತಾರೆ ಎಂದು ಪ್ರಾಂಶುಪಾಲ ಹೇಳಿದ್ದ.

    ಮೇ 12 ರಂದು ಗಂಗಾಧರ, ನಾನು ಕೆಲಸ ಇರುವ ಕಾರಣ ಮುಂಬೈಗೆ ಹೋಗುತ್ತಿದ್ದೇನೆ. ಒಂದು ವಾರದ ಒಳಗೆ ಬಂದು ನಿಮ್ಮ ಹಣ ವಾಪಸ್ ಕೊಡುತ್ತೇನೆ ಎಂದು ವಾಟ್ಸಪ್ ಮೆಸೇಜ್ ಮಾಡಿದ್ದಾನೆ. ಇದಾದ ನಂತರ ಕಷ್ಟಪಟ್ಟು ಹೋಟೆಲ್ ಬಿಲ್ ಕಟ್ಟಿ ವಾಪಸ್ ಊರಿಗೆ ಬಂದ ವಿದ್ಯಾರ್ಥಿಗಳು ಒಂದು ವಾರ ಪ್ರಾಂಶುಪಾಲನಿಗಾಗಿ ಕಾದರೂ ಪ್ರಾಂಶುಪಾಲ ಮಾತ್ರ ವಾಪಸ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವಂಚನೆಗೊಳಗಾದ ವಿದ್ಯಾರ್ಥಿಗಳು ನ್ಯಾಯ ಕೊಡಿಸುವಂತೆ ಅಪರ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಕೆಲಸ ಸಿಕ್ಕಿದ ಮೇಲೆ ಕಷ್ಟ ನಿವಾರಣೆ ಆಗುತ್ತದೆ ಎಂದು ಸಾಲ ಮಾಡಿ ಹಣ ಖರ್ಚು ಮಾಡಿದ್ದ ವಿದ್ಯಾರ್ಥಿಗಳು ಇದೀಗ ಕೆಲಸವೂ ಇಲ್ಲದೇ ಕೊಟ್ಟ ಹಣವೂ ವಾಪಸ್ ಸಿಗದೇ ಬೀದಿಗೆ ಬಿದ್ದು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.

    ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಹಣವನ್ನು ಹೇಗಾದರೂ ಮಾಡಿ ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

  • ಕಾಲೇಜಿನ ಅವ್ಯವಸ್ಥೆ ಪ್ರಶ್ನಿಸಿದ್ದೇ ತಪ್ಪಾಯ್ತು- ಹಲ್ಲೆ ಮಾಡಿದ ಪ್ರಿನ್ಸಿಪಾಲ್ ವಿರುದ್ಧ ಗಂಗಾವತಿಯಲ್ಲಿ ಪ್ರತಿಭಟನೆ

    ಕಾಲೇಜಿನ ಅವ್ಯವಸ್ಥೆ ಪ್ರಶ್ನಿಸಿದ್ದೇ ತಪ್ಪಾಯ್ತು- ಹಲ್ಲೆ ಮಾಡಿದ ಪ್ರಿನ್ಸಿಪಾಲ್ ವಿರುದ್ಧ ಗಂಗಾವತಿಯಲ್ಲಿ ಪ್ರತಿಭಟನೆ

    ಕೊಪ್ಪಳ: ಕಾಲೇಜಿನಲ್ಲಿ ಆಗ್ತಿರೋ ತಪ್ಪುಗಳ ಬಗ್ಗೆ ಧ್ವನಿಯೆತ್ತಿದ ಕಾರಣಕ್ಕೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಚಾರ್ಯರೊಬ್ಬರು ಹಲ್ಲೆ ಮಾಡಿದ್ದರು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಕೊಪ್ಪಳ ಜಿಲ್ಲೆ ಗಂಗಾವತಿ ಕಾಲೇಜಿನಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

    ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ರೋ ಎಸ್‍ಕೆಎನ್ ಜಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪ್ರಾಚಾರ್ಯ ಪ್ರೊ, ಹಸನ್ಮಿಯ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸ್ತಿದ್ದಾರೆ.

    ಇಂದು ಪದವಿ ಪರೀಕ್ಷೆ ನಡೆಯೋ ವೇಳೆಗೆ ಸ್ನಾತಕೋತ್ತರ ವಿದ್ಯಾರ್ಥಿಗಳು ರಮೇಶ್ ಹಾಗೂ ಆನಂದ ಮೇಲ್ಭಾಗದ ಕೊಠಡಿ ಹತ್ತಿರ ಹೋಗಿದ್ದಾರೆ ಇದನ್ನೇ ನೆಪವಾಗಿಟ್ಟುಕೊಂಡು ಪ್ರಾಚಾರ್ಯ ಹಲ್ಲೆ ಮಾಡಿ ನಿಂದಿಸಿದ್ದಾರೆ. ಅಲ್ಲದೇ ಈ ಕಾಲೇಜಿನ ಲ್ಲಿ ಪ್ರಾಚಾರ್ಯರು ಪದೇ ಪದೇ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.