Tag: principal chief commissioner of income tax

  • ಕರ್ನಾಟಕ, ಗೋವಾ ವಲಯ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರಾಗಿ ದಿನೇಶ್‍ಚಂದ್ರ ಪಟವಾರಿ

    ಕರ್ನಾಟಕ, ಗೋವಾ ವಲಯ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರಾಗಿ ದಿನೇಶ್‍ಚಂದ್ರ ಪಟವಾರಿ

    ಬೆಂಗಳೂರು: ಕರ್ನಾಟಕ, ಗೋವಾ ವಲಯ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರಾಗಿ ದಿನೇಶ್‍ಚಂದ್ರ ಪಟವಾರಿ ಡಿಸೆಂಬರ್ 9ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

    1986ರ ಐಆರ್ ಎಸ್ ತಂಡದವರಾದ ದಿನೇಶ್‍ಚಂದ್ರ ಅವರು ಎಂ.ಕಾಂ (ಖಾತೆ) ಮತ್ತು ಎಂ.ಕಾಂ (ಹಣಕಾಸು ನಿರ್ವಹಣೆ) ಹಾಗೂ ಅಹಮದಾಬಾದಿನ ಐಐಎಂನಿಂದ ಸಾರ್ವಜನಿಕ ನೀತಿಯಲ್ಲಿ ಪದವಿ ಸಹ ಪಡೆದುಕೊಂಡಿದ್ದಾರೆ. ದಿನೇಶ್‍ಚಂದ್ರ ಅವರು ಆಫ್ಷನ್ ಆ್ಯಂಡ್ ಫ್ಯೂಚರ್ಸ್ ಇನ್ ಎನ್ ಇಂಡಿಯನ್ ಪರ್ಸಸ್ಪೆಕ್ಟಿವ್ ಪುಸ್ತಕ ಬರೆದಿದ್ದಾರೆ

    ಈ ಮೊದಲು ತಮಿಳುನಾಡು ಮತ್ತು ಪುದುಚೇರಿ ಪ್ರದೇಶದ ಆದಾಯ ತೆರಿಗೆ ವಿಭಾಗದ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ದಿನೇಶ್‍ಚಂದ್ರ ಅವರಿಗೆ ಈ ಎರಡು ವಲಯಗಳನ್ನ ಹೆಚ್ಚುವರಿಯಾಗಿ ನೀಡಲಾಗಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಲವು ಬೇನಾಮಿ ಆಸ್ತಿಗಳನ್ನ ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ಮುಂಬೈ, ರಾಜ್‍ಕೋಟ್, ಅಹಮದಾಬಾದ್, ಬರೋಡಾ ಮತ್ತು ಜೈಪುರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.