Tag: Princess

  • ಇನ್‌ಸ್ಟಾದಲ್ಲಿ ತಲಾಕ್ ಕೊಟ್ಟಿದ್ದ ದುಬೈ ರಾಜಕುಮಾರಿಯಿಂದ `ಡಿವೋರ್ಸ್’ ಪರ್ಫ್ಯೂಮ್ ಬಿಡುಗಡೆ

    ಇನ್‌ಸ್ಟಾದಲ್ಲಿ ತಲಾಕ್ ಕೊಟ್ಟಿದ್ದ ದುಬೈ ರಾಜಕುಮಾರಿಯಿಂದ `ಡಿವೋರ್ಸ್’ ಪರ್ಫ್ಯೂಮ್ ಬಿಡುಗಡೆ

    ಅಬುಧಾಬಿ: ಗಂಡನಿಗೆ ಇನ್‌ಸ್ಟಾಗ್ರಾಂನಲ್ಲೇ ವಿಚ್ಛೇದನ ನೀಡಿದ್ದ ದುಬೈ(Dubai) ರಾಜಕುಮಾರಿ ಶೇಖ್ ಮಹ್ರಾ ಅಲ್ಮ್ ಮಕ್ತೌಮ್ (Sheikha Mahra Al Maktoum) ಈಗ ಸುಗಂಧ ದ್ರವ್ಯ (Perfume) ಬಿಡುಗಡೆ ಮಾಡಿ ಸುದ್ದಿಯಾಗಿದ್ದಾರೆ.

    ದುಬೈ ರಾಜಕುಮಾರಿ ಶೇಖ್ ಮಹ್ರಾ ತನ್ನ ಗಂಡ ಶೇಖ್ ಮನ ಅಲ್ ಮಕ್ತೌಮ್ (Sheikh Mana Al Maktoum) ಅವರಿಗೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತ್ರಿವಳಿ ತಲಾಖ್ ಹೇಳಿದ್ದರು. ಗಂಡನ ದಾಂಪತ್ಯ ದ್ರೋಹವೇ ವಿಚ್ಛೇದನ ನೀಡಲು ಕಾರಣ ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: Mysuru| ಕಲುಷಿತ ನೀರು ಸೇವನೆ ಶಂಕೆ- ಓರ್ವ ಸಾವು, 12 ಜನ ಅಸ್ವಸ್ಥ

    ಪೋಸ್ಟ್ ನಲ್ಲಿ, ಆತ್ಮೀಯ ಪತಿ, ನೀವು ಬೇರೆ ಸಂಬಂಧ ಹೊಂದಿರುವುದರಿಂದ ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ ಇಂತಿ ನಿಮ್ಮ ಮಾಜಿ ಹೆಂಡತಿ ಎಂದು ಬರೆದುಕೊಂಡಿದ್ದು, ಇದೀಗ ರಾಜಕುಮಾರಿ ಹೊಸ ಪರ್ಫ್ಯೂಮ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ಪ್ರಜ್ವಲ್‌ ರೇವಣ್ಣಗೆ ಸೀರೆ ಸಂಕಷ್ಟ!

    `ಡಿವೋರ್ಸ್’ (Divorce) ಹೆಸರಿನ ಸುಗಂಧ ದ್ರವ್ಯ ಬಾಟಲಿ ಚಿತ್ರ ಹಾಕಿ ವಿಡಿಯೋ ಹಂಚಿಕೊಂಡಿದ್ದಾರೆ.

    2023ರಲ್ಲಿ ಇವರಿಗೆ ವಿವಾಹವಾಗಿದ್ದು, ಒಂದು ವರ್ಷದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿ ಮಗು ಹುಟ್ಟಿದ 2 ತಿಂಗಳ ಬಳಿಕ ಗಂಡನಿಗೆ ವಿಚ್ಛೇದನ ನೀಡಿದ್ದಾರೆ. ಇದನ್ನೂ ಓದಿ: ರಾಯಚೂರು| ತರಗತಿಯಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದ ವಿದ್ಯಾರ್ಥಿ – ಹೃದಯಾಘಾತದಿಂದ ಸಾವು

  • ಮಾಂತ್ರಿಕನೊಂದಿಗೆ ಮದುವೆ ಘೋಷಿಸಿದ ನಾರ್ವೆಯ ರಾಜಕುಮಾರಿ

    ಮಾಂತ್ರಿಕನೊಂದಿಗೆ ಮದುವೆ ಘೋಷಿಸಿದ ನಾರ್ವೆಯ ರಾಜಕುಮಾರಿ

    ಓಸ್ಲೋ: ಕಿಂಗ್ ಹರಾಲ್ಡ್ ಹಾಗೂ ರಾಣಿ ಸೋಂಜಾ ಅವರ ಹಿರಿಯ ಪುತ್ರಿ ನಾರ್ವೆಯ ರಾಜಕುಮಾರಿ (Norway Princess) ಮಾರ್ಥಾ ಲೂಯಿಸ್ (Martha Louise) ಮುಂದಿನ ವರ್ಷ ಆಗಸ್ಟ್ 31ರಂದು ಮಾಂತ್ರಿಕ ಶಾಮನ್ ಡ್ಯುರೆಕ್ ವೆರೆಟ್ (Durek Verrett) ಅವರನ್ನು ಮದುವೆಯಾಗುವುದಾಗಿ ಘೋಷಿಸಿದ್ದಾರೆ.

    51 ವರ್ಷದ ರಾಜಕುಮಾರಿ ಮಾಂತ್ರಿಕ, ಅಮೆರಿಕದ ಖ್ಯಾತ ಚಿಂತಕ, ಪ್ರಕೃತಿ ಚಿಕಿತ್ಸಕನಾದ ಡ್ಯುರೆಕ್ ವೆರೆಟ್ ಅವರೊಂದಿಗೆ 2022ರ ಜೂನ್‌ನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಈ ಮೂಲಕ ಭಾರೀ ಸುದ್ದಿಯಲ್ಲಿದ್ದರು. ಏಕೆಂದರೆ ಡ್ಯುರೆಕ್‌ನನ್ನು ವಂಚಕ, ಹಣಕ್ಕಾಗಿ ರಾಜಕುಮಾರಿಯನ್ನು ಬಳಸಿಕೊಳ್ಳುತ್ತಿರುವುದಾಗಿ ಸ್ಥಳೀಯವಾಗಿ ವೀಡಿಯೋಗಳು ಹರಿದಾಡಿತ್ತು.

    ಈ ಹಿನ್ನೆಲೆ ಮಾರ್ಥಾ ಲೂಯಿಸ್ ಡ್ಯುರೆಕ್ ವೆರೆಟ್ ಅವರನ್ನು ಮದುವೆಯಾಗಲು ಅಧಿಕೃತ ರಾಜಮನೆತನದ ಯಾವುದೇ ಕರ್ತವ್ಯ ಹಾಗೂ ಸ್ಥಾನಮಾನಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದರು. ತನ್ನ ರಾಜಮನೆತನದ ಬಿರುದನ್ನು ಬಳಸುವುದಿಲ್ಲ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಥವಾ ಯಾವುದೇ ವಾಣಿಜ್ಯ ಸಂಸ್ಥೆಯಲ್ಲಿ ರಾಯಲ್ ಪದವನ್ನು ಬಳಸುವುದಿಲ್ಲ ಎಂದಿದ್ದರು.

    ಇದೀಗ ಜೋಡಿ ತಮ್ಮ ಮದುವೆಯ ದಿನಾಂಕವನ್ನು ಘೋಷಿಸಿಕೊಂಡಿದ್ದಾರೆ. ಮಾತ್ರವಲ್ಲದೇ 1968ರಲ್ಲಿ ಸಾಮಾನ್ಯ ಮಹಿಳೆಯಾಗಿದ್ದ ಸೋಂಜಾ ಅವರನ್ನು ವಿವಾಹವಾಗಿದ್ದ ಕಿಂಗ್ ಹರಾಲ್ಡ್ ಅವರ ಆಶೀರ್ವಾದವನ್ನೂ ಜೋಡಿ ಪಡೆದುಕೊಂಡಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕ್ಯಾನ್ಸರ್ ಔಷಧಕ್ಕೆ ಬರ – ಇದರಲ್ಲಿ ಭಾರತದ ಪಾತ್ರವೇನು?

    ಬುಧವಾರ ಪ್ರತ್ಯೇಕ ಹೇಳಿಕೆಯಲ್ಲಿ ರಾಜ, ರಾಣಿ, ಹಾಗೂ ಕ್ರೌನ್ ಪ್ರಿನ್ಸ್ ಹಾಕಾನ್ ಜೋಡಿಯನ್ನು ಅಭಿನಂದಿಸಿದ್ದಾರೆ. ಡ್ಯುರೆಕ್ ವೆರೆಟ್ ಅವರನ್ನು ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗಿದೆ ಎಂದಿದ್ದಾರೆ. ಇಬ್ಬರ ಮದುವೆ ನೈಋತ್ಯ ನಾರ್ವೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾದ ಫ್ಜೋರ್ಡ್ ತೀರದಲ್ಲಿರುವ ಗೈರಾಂಜರ್ ಪಟ್ಟಣದಲ್ಲಿ ನಡೆಯಲಿದೆ.

    ರಾಜಕುಮಾರಿ ಮಾರ್ಥಾ ಲೂಯಿಸ್ ಈ ಹಿಂದೆ ಖ್ಯಾತ ಬರಹಗಾರ ಅರಿ ಬೆಹ್ನ್ ಅವರನ್ನು ಮದುವೆಯಾಗಿದ್ದರು. ಬಳಿಕ ವಿಚ್ಛೇದಿತರಾಗಿ 3 ವರ್ಷಗಳ ಬಳಿಕ 2019ರಲ್ಲಿ ಬೆಹ್ನ್ ಆತ್ಮಹತ್ಯೆಗೆ ಶರಣಾಗಿದ್ದರು. ಮಾರ್ಥಾ ಲೂಯಿಸ್‌ಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ.    ಇದನ್ನೂ ಓದಿ: ಲಿಬಿಯಾದಲ್ಲಿ ಭೀಕರ ಪ್ರವಾಹ – 5,300 ಜನರ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಂತ್ರಿಕನಿಗಾಗಿ ಅರಮನೆಯನ್ನೇ ತೊರೆದ ನಾರ್ವೇಯ ರಾಜಕುಮಾರಿ

    ಮಾಂತ್ರಿಕನಿಗಾಗಿ ಅರಮನೆಯನ್ನೇ ತೊರೆದ ನಾರ್ವೇಯ ರಾಜಕುಮಾರಿ

    ಓಸ್ಲೋ: ನಾರ್ವೇ (Norway) ದೇಶದ ರಾಜಕುಮಾರಿ (Princess) ಮಾಂತ್ರಿಕನನ್ನು ಮದುವೆಯಾಗಲು ತನ್ನ ರಾಜಮನೆತನದ ಎಲ್ಲಾ ಜವಾಬ್ದಾರಿ ಹಾಗೂ ಸ್ಥಾನಮಾನವನ್ನು ತ್ಯಜಿಸಿದ್ದಾಳೆ.

    ಕಿಂಗ್ ಹೆರಾಲ್ಡ್ ಮತ್ತು ನಾರ್ವೆಯ ರಾಣಿ ಸೋಂಜಾ ಅವರ ಮಗಳು ರಾಜಕುಮಾರಿ ಮಾರ್ಥಾ ಲೂಯಿಸ್ (51) ಜೂನ್‍ನಲ್ಲಿ ಮಾಂತ್ರಿಕ ಹಾಗೂ ಅಮೆರಿಕದ (America) ಖ್ಯಾತ ಚಿಂತಕ, ಪ್ರಕೃತಿ ಚಿಕಿತ್ಸಕ ಡ್ಯುರೆಕ್ ವೆರೆಟ್ ಎಂಬಾತನೊಂದಿಗೆ ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಬಳಿಕ ರಾಜಕುಮಾರಿಯ ನಿಶ್ಚಿತಾರ್ಥ ಅಲ್ಲಿನ ಸ್ಥಳೀಯ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಹೆಚ್ಚು ಸುದ್ದಿ ಆಗಿತ್ತು.

    ಅಲ್ಲಿನ ಸ್ಥಳೀಯರು ಆತನನ್ನು ವಂಚಕ ಎಂದು ಕರೆದರು. ಅಷ್ಟೇ ಅಲ್ಲದೇ ವಾಣಿಜ್ಯ ಲಾಭಕ್ಕಾಗಿ ಆಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬೆಲ್ಲಾ ವೀಡಿಯೋ ಹರಿದಾಡುತ್ತಿತ್ತು. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಬೆಂಗ್ಳೂರಿನ ಖತರ್ನಾಕ್ ಲೇಡಿ

    ಇದರಿಂದಾಗಿ ರಾಜಕುಮಾರಿ ಮಾರ್ಥಾ ಲೂಯಿಸ್ ಡ್ಯುರೆಕ್ ವೆರೆಟ್‍ನನ್ನು ಮದುವೆಯಾಗಲು ಅಧಿಕೃತವಾಗಿ ರಾಜಮನೆತನದ ಯಾವುದೇ ಕರ್ತವ್ಯ ಹಾಗೂ ಸ್ಥಾನಮಾನಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ ರಾಜಮನೆತದ ಸುತ್ತಲೂ ಶಾಂತಿಯನ್ನು ಸೃಷ್ಟಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ರಾಜಕುಮಾರಿ ಮಾರ್ಥಾ ಲೂಯಿಸ್ ಇನ್ನು ಮುಂದೆ ತನ್ನ ರಾಜಮನೆತನದ ಬಿರುದನ್ನು ಬಳಸುವುದಿಲ್ಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಥವಾ ಯಾವುದೇ ವಾಣಿಜ್ಯ ವ್ಯವಸ್ಥೆಯಲ್ಲಿ ರಾಯಲ್ ಎನ್ನುವ ಪದವನ್ನು ಉಲ್ಲೇಖಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವರ ಪೂಜೆಗೆ ಎರಡು ಗುಂಪುಗಳ ನಡುವೆ ಗಲಾಟೆ – ಬೀಗ ಮುರಿದು ಪೂಜೆ ಮಾಡಿದ ಪೊಲೀಸರು

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಹಾಡು ರಿಲೀಸ್ : ಸೊಗಸಾದ ಲಾಲಿ ಹಾಡು

    ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಹಾಡು ರಿಲೀಸ್ : ಸೊಗಸಾದ ಲಾಲಿ ಹಾಡು

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಲಕ್ಷಾಂತರ ಕೇಳುಗರು ಮೆಚ್ಚಿಕೊಂಡಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ, ಸಿಲಿಬ್ರಿಟಿಗಳು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೀಲ್ಸ್ ನಲ್ಲೂ ರಾ ರಾ ರಕ್ಕಮ್ಮ ಧೂಳ್ ಎಬ್ಬಿಸಿದೆ. ಇನ್ನೂ ಈ ಹಾಡು ಕಿವಿಯಲ್ಲಿ ಗುನುಗುತ್ತಿರುವಾಗಲೇ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ ಚಿತ್ರತಂಡ.

    ಇಂದು ಸಂಜೆ 5. 02ಕ್ಕೆ ರಿಲೀಸ್ ಆಗಿರುವ ‘ತಣ್ಣನೆ ಬೀಸೋ ಗಾಳಿ’ ಗೀತೆಯು ಲಾಲಿ ಹಾಡಾಗಿದ್ದು, ವಿಜಯ್ ಪ್ರಕಾಶ್ ಸೊಗಸಾಗಿ ಹಾಡಿದ್ದಾರೆ. ಹಾಡು ಕೇಳುತ್ತಾ ರಾಜಕುಮಾರಿ ಎಷ್ಟೊಂದು ಗಾಢನಿದ್ರೆಗೆ ಜಾರಿರಬಹುದು ಎನ್ನುವಷ್ಟರ ಮಟ್ಟಿಗೆ ಗೀತೆ ಇಂಪಾಗಿದೆ. ಸ್ವತಃ ಅನೂಪ್ ಭಂಡಾರಿಯವರೇ ಈ ಗೀತೆಯನ್ನು ಬರೆದಿದ್ದು ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ. ಸಂಗೀತ ಮತ್ತು ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಕಂಠ ಮತ್ತಷ್ಟು ಜೀವ ತುಂಬಿದೆ. ಇದನ್ನೂ ಓದಿ : ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಗೆ ಲೆಕ್ಕ ಕೇಳಿದೆ ಆಡಳಿತಾಧಿಕಾರಿ

    ‘ತಣ್ಣನೆ ಬೀಸೋ ಗಾಳಿ, ಹಾಡಿದೆ ಜೋಜೋ ಲಾಲಿ. ಈ ನನ್ನ ಮಡಿಲೆ ನಿನ್ನಾ ತೂಗೋ ಉಯ್ಯಾಲೆ, ತೂಗೋ ಉಯ್ಯಾಲೆ’ ಎಂದು ಶುರುವಾಗುವ ಗೀತೆಯು, ‘ಕಣ್ಣಿನ ರೆಪ್ಪೆ ಮುಚ್ಚಿ, ನಿದ್ದೆಗೆ ಬೇಗ ಜಾರಿ, ಮಲಗೆ ಮಲಗೆ ನನ್ನ ಮುದ್ದು ಬಂಗಾರಿ, ಮುದ್ದು ಬಂಗಾರಿ’ ಎನ್ನುವಲ್ಲಿಗೆ ಕೊನೆಗೊಳ್ಳುತ್ತದೆ.

    Live Tv

  • ಕೊರೊನಾಗೆ ರಾಜ ಮನೆತನದಲ್ಲಿ ಮೊದಲ ಸಾವು – ಸ್ಪೇನ್ ರಾಣಿ ಬಲಿ

    ಕೊರೊನಾಗೆ ರಾಜ ಮನೆತನದಲ್ಲಿ ಮೊದಲ ಸಾವು – ಸ್ಪೇನ್ ರಾಣಿ ಬಲಿ

    ಸ್ಪೇನ್: ಇಡೀ ವಿಶ್ವವೇ ಕೊರೊನಾ ವೈರಸ್‍ಗೆ ಬೆಚ್ಚಿಬಿದ್ದಿದೆ. ವಿಶ್ವಾದ್ಯಂತ 30ಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಂದು ಕೊರೊನಾ ವೈರಸ್‍ಗೆ ರಾಜವಂಶಸ್ಥ ಮನೆತನದಲ್ಲಿ ಮೊದಲ ಸಾವಾಗಿದೆ.

    ಸ್ಪೇನ್‍ನ ರಾಣಿ ಮಾರಿಯಾ ಥೆರೇಸಾ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ ಎಂದು ಸಹೋದರ ಪ್ರಿನ್ಸ್ ಸಿಕ್‍ಸ್ಟೋ ಎನ್ರಿಕ್ ಡಿ ಬೊರ್ಬನ್ ತಿಳಿಸಿದ್ದಾರೆ.

    86 ವರ್ಷದ ರಾಣಿ ಮಾರಿಯಾ ಸ್ಪೇನ್ ರಾಜಮನೆತನದ ಹೌಸ್ ಆಫ್ ಬೌರ್ಬನ್-ಪಾರ್ಮಾದ ಸದಸ್ಯೆಯಾಗಿದ್ದರು. 1933ರಲ್ಲಿ ಪ್ಯಾರಿಸ್‍ನಲ್ಲಿ ಜನಿಸಿದ್ದ ಮಾರಿಯಾ ಥೆರೇಸಾ ಫ್ರಾನ್ಸ್ ನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಬಳಿಕ ಪ್ಯಾರಿಸ್‍ನ ಸೊರ್ಬೊನ್‍ನಲ್ಲಿ ಹಾಗೂ ಮ್ಯಾಡ್ರಿಡ್‍ನ ಕಾಂಪ್ಲುಟೆನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.

    ವಿದೇಶಿ ಮಾಧ್ಯಮ ವರದಿಗಳ ಪ್ರಕಾರ, ರಾಣಿ ಮಾರಿಯಾ ಥೆರೇಸಾ ಅವರ ನೇರ ಅಭಿಪ್ರಾಯಗಳು ಮತ್ತು ಕಾರ್ಯಕರ್ತರ ಕೆಲಸದಿಂದಾಗಿ ಅವರನ್ನು ‘ಕೆಂಪು ರಾಜಕುಮಾರಿ’ (ರೆಡ್ ಪ್ರಿನ್ಸ್) ಎಂದು ಕರೆಯಲಾಗುತ್ತಿತ್ತು. ಕಳೆದ ಕೆಲವು ತಿಂಗಳುಗಳಿಂದ ರಾಣಿ ಮಾರಿಯಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

    https://www.facebook.com/sixtoenriquedeborbon/photos/a.264181261771/10158048240541772/?type=3&theater

    ಭಾನುವಾರ ಮಧ್ಯಾಹ್ನ 12:30 ಗಂಟೆ ಮಾಹಿತಿ ಪ್ರಕಾರ ಕೊರೊನಾ ವೈರಸ್‍ಗೆ ಸ್ಪೇನ್‍ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 5,982ಕ್ಕೆ ಏರಿದೆ. ಇದು ಚೀನಾದನ್ನು ಮೀರಿಸಿದೆ. ಸ್ಪೇನ್‍ನಲ್ಲಿ 73,235 ಕೊರೊನಾ ಸೋಂಕಿತ ಪ್ರಕರಣಗಳಿದ್ದು, 54,968 ಜನರು ಚಿಕಿತ್ಸೆ ಪಡೆಯುತ್ತಿದ್ದು, 12,285 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ತುರ್ತು ಪರಿಸ್ಥಿತಿಯನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲು ಸ್ಪೇನ್ ಸಂಸತ್ತು ಒಪ್ಪಿಗೆ ನೀಡಿದೆ.