Tag: Prime Minister’s Office

  • ವೈದ್ಯ, ಆರ್ಮಿ ಡಾಕ್ಟರ್‌, ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ.. ನಾನಾ ವೇಶ – ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿ ಬಂಧನ

    ವೈದ್ಯ, ಆರ್ಮಿ ಡಾಕ್ಟರ್‌, ಪ್ರಧಾನ ಮಂತ್ರಿ ಕಚೇರಿ ಅಧಿಕಾರಿ.. ನಾನಾ ವೇಶ – ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿ ಬಂಧನ

    ನವದೆಹಲಿ: ನಾನು ಸೇನಾ ವೈದ್ಯ, ನರಶಸ್ತ್ರಚಿಕಿತ್ಸಕ, ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ ಎಂದೆಲ್ಲ ಸುಳ್ಳು ಹೇಳಿಕೊಂಡು ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಒರಿಸ್ಸಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಜನರನ್ನು ವಂಚಿಸಿದ ಆರೋಪದ ಮೇಲೆ ಕಾಶ್ಮೀರದ ಕುಪ್ವಾರದ ವ್ಯಕ್ತಿಯನ್ನು ಒಡಿಶಾದಲ್ಲಿ ಬಂಧಿಸಲಾಗಿದೆ. ಕಾಲಕಾಲಕ್ಕೆ ತಮ್ಮ ಗುರುತನ್ನು ಬದಲಾಯಿಸುತ್ತಿದ್ದ. ನರಶಸ್ತ್ರಚಿಕಿತ್ಸಕ, ಸೇನಾ ವೈದ್ಯ, ಪ್ರಧಾನ ಮಂತ್ರಿ ಕಚೇರಿಯ (PMO) ಅಧಿಕಾರಿ ಮತ್ತು ಉನ್ನತ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳ ನಿಕಟ ಸಹವರ್ತಿ ಎಂದೆಲ್ಲ ಹೇಳಿಕೊಂಡು ಓಡಾಡುತ್ತಿದ್ದ. ಇದನ್ನೂ ಓದಿ: ರಾಗಾಗೆ ಮತ್ತೆ ಸಂಕಷ್ಟ – ಜ.6ರಂದು ವಿಚಾರಣೆಗೆ ಹಾಜರಾಗುವಂತೆ UP ಕೋರ್ಟ್‌ನಿಂದ ಸಮನ್ಸ್‌

    ಒಡಿಶಾ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಜನರನ್ನು ವಂಚಿಸಿದ್ದಕ್ಕಾಗಿ 37 ವಯಸ್ಸಿನ ಸೈಯದ್ ಇಶಾನ್ ಬುಖಾರಿ ಅಲಿಯಾಸ್ ಇಶಾನ್ ಬುಖಾರಿ ಅಲಿಯಾಸ್ ಡಾ ಇಶಾನ್ ಬುಖಾರಿಯನ್ನು ಒಡಿಶಾದ ಜೈಪುರ ಜಿಲ್ಲೆಯ ನ್ಯೂಲ್‌ಪುರ ಗ್ರಾಮದಲ್ಲಿ ಶನಿವಾರ ಬಂಧಿಸಿದೆ.

    ಹಲವಾರು ನಕಲಿ ಗುರುತುಗಳನ್ನು ಹೊಂದಿರುವ ವ್ಯಕ್ತಿ ಪಾಕಿಸ್ತಾನದ ಹಲವಾರು ಜನರೊಂದಿಗೆ ಮತ್ತು ಕೇರಳದ ಕೆಲವು ಅನುಮಾನಾಸ್ಪದ ಅಂಶಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಎಸ್‌ಟಿಎಫ್ ಇನ್ಸ್‌ಪೆಕ್ಟರ್ ಜನರಲ್ ಜೆ.ಎನ್.ಪಂಕಜ್ ಹೇಳಿದ್ದಾರೆ. ಇದನ್ನೂ ಓದಿ: ಆತ್ಮಾಹುತಿಗೂ ಪ್ಲಾನ್ ಮಾಡಿದ್ದ ಸಂಸತ್ ದಾಳಿಕೋರರು – ಶೀಘ್ರವೇ ಪ್ರತಾಪ್ ಸಿಂಹ ವಿಚಾರಣೆ

    ಯುಎಸ್‌ನ ಉನ್ನತ ಐವಿ ಲೀಗ್ ಕಾಲೇಜಾಗಿರುವ ಕಾರ್ನೆಲ್ ವಿಶ್ವವಿದ್ಯಾಲಯದ ನಕಲಿ ವೈದ್ಯಕೀಯ ಪದವಿ ಪ್ರಮಾಣಪತ್ರ ಹೊಂದಿದ್ದ. ಕೆನಡಿಯನ್ ಹೆಲ್ತ್ ಸರ್ವಿಸಸ್ ಇನ್‌ಸ್ಟಿಟ್ಯೂಟ್ ಮತ್ತು ತಮಿಳಿನಲ್ಲಿ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್‌ನಿಂದ ವೈದ್ಯಕೀಯ ಪ್ರಮಾಣಪತ್ರವನ್ನು ನಕಲಿ ಮಾಡಿದ್ದ.

    ಅಂತಾರಾಷ್ಟ್ರೀಯ ಪದವಿಗಳು, ಅಫಿಡವಿಟ್‌ಗಳು, ಬಾಂಡ್‌ಗಳು, ಎಟಿಎಂ ಕಾರ್ಡ್‌ಗಳು, ಖಾಲಿ ಚೆಕ್‌ಗಳು, ಆಧಾರ್ ಕಾರ್ಡ್‌ಗಳು ಮತ್ತು ವಿಸಿಟಿಂಗ್ ಕಾರ್ಡ್‌ಗಳನ್ನು ಇಟ್ಟುಕೊಂಡು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದ. ಎಸ್‌ಟಿಎಫ್ ತಂಡಕ್ಕೆ ದೊರೆತ ಸುಳಿವು ಆಧರಿಸಿ ಪೊಲೀಸರು ನಡೆಸಿದ ದಾಳಿಯಲ್ಲಿ 100 ಕ್ಕೂ ಹೆಚ್ಚು ದಾಖಲೆಗಳು ಮತ್ತು ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಪೆಂಟಗನ್‌ ಮೀರಿಸುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ʻಸೂರತ್ ಡೈಮಂಡ್ ಬೋರ್ಸ್ʼ – ಭಾನುವಾರ ಪ್ರಧಾನಿ ಮೋದಿಯಿಂದ ಉದ್ಘಾಟನೆ

  • 9 ವರ್ಷದಲ್ಲಿ ಒಂದು ದಿನವೂ ರಜೆ ಇಲ್ಲದೇ ಪ್ರಧಾನಿ ಮೋದಿ ಕೆಲಸ – 3,000 ಕಾರ್ಯಕ್ರಮಗಳಲ್ಲಿ ಭಾಗಿ

    9 ವರ್ಷದಲ್ಲಿ ಒಂದು ದಿನವೂ ರಜೆ ಇಲ್ಲದೇ ಪ್ರಧಾನಿ ಮೋದಿ ಕೆಲಸ – 3,000 ಕಾರ್ಯಕ್ರಮಗಳಲ್ಲಿ ಭಾಗಿ

    ನವದೆಹಲಿ: ಪ್ರಧಾನಿಯಾಗಿ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ ನರೇಂದ್ರ ಮೋದಿಯವರು ಇಲ್ಲಿಯವರೆಗೆ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಪ್ರಕಟಿಸಿದೆ.

    ಪುಣೆ ಮೂಲದ ಉದ್ಯಮಿ ಪ್ರಫುಲ್ ಪಿ ಸರ್ದಾ ಸಲ್ಲಿಸಿರುವ ಮಾಹಿತಿ ಹಕ್ಕು (RTI) ಪ್ರಶ್ನೆಗೆ ಪಿಎಂಒ ಉತ್ತರಿಸಿದೆ. 2014 ರಲ್ಲಿ ಭಾರತದ ಪ್ರಧಾನಿಯಾದ ನಂತರ ಪಿಎಂ ಮೋದಿ ಎಷ್ಟು ದಿನ ಕಚೇರಿಗೆ ಹಾಜರಾಗಿದ್ದರು? ಅಲ್ಲದೇ ಅವರು ಎಷ್ಟು ದಿನಗಳು ರಜೆ ಪಡೆದಿದ್ದಾರೆ? ಎಂದು ಅರ್ಜಿಯಲ್ಲಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಪಿಎಂಒ, ಪ್ರಧಾನಿ ಮೋದಿಯವರು ಯಾವಾಗಲೂ ಕರ್ತವ್ಯದಲ್ಲಿರುತ್ತಾರೆ. ಅವರು ಅಧಿಕಾರ ವಹಿಸಿಕೊಂಡ ನಂತರ ಯಾವುದೇ ರಜೆಯನ್ನೂ ಪಡೆದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಜಿ20 ಶೃಂಗಸಭೆಗೆ ಅಮೆರಿಕ ಅಧ್ಯಕ್ಷರ ಪ್ರವಾಸ – ಬೈಡನ್ ಪ್ರವಾಸಕ್ಕೂ ಮುನ್ನ ಜಿಲ್ ಬೈಡನ್‍ಗೆ ಕೊರೊನಾ ಸೋಂಕು

    ಎರಡನೇ ಪ್ರಶ್ನೆಯಾಗಿ ಎಷ್ಟು ದಿನಗಳ ಹಾಜರಾತಿ, ವಿವಿಧ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ ಎಂಬ ವಿವರಗಳನ್ನು ಕೇಳಲಾಗಿತ್ತು. ಇದಕ್ಕೆ ಪಿಎಂಒ ವೆಬ್‍ಸೈಟ್ ಲಿಂಕ್‍ನ್ನು ಒದಗಿಸಲಾಗಿದೆ. ಮೇ 2014 ರಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶ ಹಾಗೂ ವಿದೇಶಗಳಲ್ಲಿನ 3,000 ಕ್ಕೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

    ಈ ಉತ್ತರಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಹಲವಾರು ಜನ ಶ್ರೇಷ್ಠ ಮತ್ತು ಆದರ್ಶ ಪ್ರಧಾನಿ, ರಾಷ್ಟ್ರದ ಅಭಿವೃದ್ಧಿ ಕಡೆಗೆ ಅವರ ಸಹಕಾರ, ಸಮರ್ಪಣಾ ಮತ್ತು ಜವಾಬ್ದಾರಿಗಾಗಿ ಯಾವಾಗಲೂ ಗೌರವಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ. ನಿಮ್ಮ ಕೊಡುಗೆಗಾಗಿ ಧನ್ಯವಾದಗಳು ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದು ಕೊಂಡಿದ್ದಾರೆ. ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ರಾಷ್ಟ್ರದ ಸೇವೆಗಾಗಿ ದಣಿವರಿಯದೆ ತನ್ನನ್ನು ಸಮರ್ಪಿಸಿಕೊಳ್ಳುವ ನಾಯಕ, ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

    ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಹ ಇದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ನನ್ನ ಪ್ರಧಾನಿ ನನ್ನ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗಷ್ಟೇ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬ್ಯಾಂಕಾಕ್‍ನಲ್ಲಿ ಭಾರತೀಯ ಸಮುದಾಯದೊಂದಿಗಿನ ಸಂವಾದದಲ್ಲಿ ಪ್ರಧಾನಿ ಮೋದಿ ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ಮಾತಾಡಿದ್ದರು. ಈ ವೇಳೆ ಪ್ರಧಾನಿ ಮೋದಿಯಂತಹ ವ್ಯಕ್ತಿಯನ್ನು ಹೊಂದಲು ಇದು ದೇಶದ ಅಗಾಧ ಅದೃಷ್ಟ ಎಂದು ನಾನು ಭಾವಿಸುತ್ತೇನೆ ಎಂದಿದ್ದರು.

    2016 ರಲ್ಲಿ ಇದೇ ರೀತಿಯ ಆರ್‌ಟಿಐ ಪ್ರಶ್ನೆಯನ್ನು ಸಲ್ಲಿಸಲಾಗಿತ್ತು. ಆ ಸಮಯದಲ್ಲಿ ಆರ್‌ಟಿಐ ಅರ್ಜಿದಾರರೊಬ್ಬರು ದೇಶದ ಪ್ರಧಾನಿಗೆ ರಜೆ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರತಿಯನ್ನು ಕೇಳಿದ್ದರು. ಪ್ರಧಾನಿ ಅವರು ಸಾರ್ವಕಾಲಿಕ ಕರ್ತವ್ಯದಲ್ಲಿದ್ದಾರೆ ಎಂದು ಪಿಎಂಒ ತಿಳಿಸಿತ್ತು. ಇದನ್ನೂ ಓದಿ: ಶಶಿಕಲಾ, ಇಳವರಸಿಗೆ ಜಾಮೀನು ರಹಿತ ವಾರೆಂಟ್ ಜಾರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಧಾನಿ ಕಚೇರಿ ಅಧಿಕಾರಿ ಹೆಸರಿನಲ್ಲಿ ಚಾಮರಾಜನಗರ ಡಿಸಿಗೆ ಫೇಕ್ ಕಾಲ್- ನಕಲಿ ಅಧಿಕಾರಿ ವಿರುದ್ಧ FIR

    ಪ್ರಧಾನಿ ಕಚೇರಿ ಅಧಿಕಾರಿ ಹೆಸರಿನಲ್ಲಿ ಚಾಮರಾಜನಗರ ಡಿಸಿಗೆ ಫೇಕ್ ಕಾಲ್- ನಕಲಿ ಅಧಿಕಾರಿ ವಿರುದ್ಧ FIR

    ಚಾಮರಾಜನಗರ: `ನಾನು ಪ್ರಧಾನ ಮಂತ್ರಿ ಕಚೇರಿಯಲ್ಲಿ ಕೆಲಸ ನಿರ್ವಹಿಸ್ತಾ ಇದ್ದೀನಿ’ ಎಂದು ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದ ನಕಲಿ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿಯಲ್ಲಿ ವಾಸ್ತವ್ಯ, ಜಂಗಲ್ ಸಫಾರಿ, ದೇವರ ದರ್ಶನ ದೊಡ್ಡಸಂಪಿಗೆ ಮರದ ವೀಕ್ಷಣೆಗೆ ವ್ಯವಸ್ಥೆ ಮಾಡುವಂತೆ ರಾವ್ ಹೆಸರಿನ ವ್ಯಕ್ತಿಯೊಬ್ಬ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಕರೆ ಮಾಡಿದ್ದಾನೆ. ಇದನ್ನೂ ಓದಿ: ಹೋಳಿಗೆ, ನಿಪ್ಪಟ್ಟು, ಆಲೂ ಕೂರ್ಮಾ; ತೆಲಂಗಾಣ ಸಾಂಪ್ರದಾಯಿಕ ಖಾದ್ಯ ಸವಿದ ಮೋದಿ – ಮೆನುವಿನಲ್ಲಿತ್ತು 50 ಐಟಂ

    CRIME 2

    ಈ ವೇಳೆ ನಿಖರ ಹುದ್ದೆ ಬಗ್ಗೆ ಡಿಸಿ ಕೇಳಿದ್ದಾರೆ. ಆದರೆ ವ್ಯಕ್ತಿ ಹೆಸರು ಹಾಗೂ ಹುದ್ದೆ ಬಹಿರಂಗಪಡಿಸಬಾರದೆಂದು ತಿಳಿಸಿದ್ದಾನೆ. ಅನುಮಾನಗೊಂಡ ಡಿಸಿ ಪ್ರಧಾನ ಮಂತ್ರಿ ಕಚೇರಿ ಹೆಸರು ದುರುಪಯೋಗ ಆರೋಪ ಹಾಗೂ ವಂಚಿಸಲು ಯತ್ನಿಸಿರುವ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಿ, ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಅರೆ ನಗ್ನ ಫೋಟೋ ನೋಡಿ ರಶ್ಮಿಕಾ ಹೇಳಿದ್ದು ಹೀಗೆ

    ಪೊಲೀಸರು ತನಿಖೆ ಆರಂಭಿಸಿದ್ದು ಅಪರಿಚಿತ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv

  • ರೈತರ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಉತ್ತರ- ನೂರಾರು ವರ್ಷದ ಕೆರೆ ಉಳಿಸಲು ಸೂಚನೆ

    ರೈತರ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಉತ್ತರ- ನೂರಾರು ವರ್ಷದ ಕೆರೆ ಉಳಿಸಲು ಸೂಚನೆ

    – ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಗ್ರಾಮಸ್ಥರು

    ಬೆಂಗಳೂರು: ನೂರಾರು ವರ್ಷದ ಹಳೆಯ ಕೆರೆ ಉಳಿಸುವಂತೆ ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಕಾರ್ಯಾಲಯ ಸಹ ಪ್ರತಿಕ್ರಿಯಿಸಿ, ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದೆ.

    ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ ಸಮೀಪದ ಮಾದಾವರ ಕೆರೆಯ ಕಥೆ-ವ್ಯಥೆ ಇದಾಗಿದ್ದು, ಕೆರೆ ಉಳಿಸುವ ಎಲ್ಲ ಪ್ರಯತ್ನಗಳು ವಿಫಲವಾದ ಬಳಿಕ ಸ್ಥಳೀಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ವರ್ಷ ಉತ್ತಮ ಮಳೆಯಿಂದಾಗಿ ಕೆರೆ ತುಂಬಿರುವುದರಿಂದ ಸಾವಿರಾರು ರೈತ ಕುಟುಂಬಕ್ಕೆ ಅನುಕೂಲವಾಗಿದೆ. ಆದರೆ ಕೆರೆ ಉಳಿಸಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಹೋರಾಟಗಾರ ರಾಮಕೃಷ್ಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಹೋರಾಟಗಾರ ರಾಮಕೃಷ್ಣಯ್ಯಗೆ ಸ್ಥಳೀಯರು ಸಾಥ್ ನೀಡಿ ಕೆರೆ ಬಳಿ ಪ್ರತಿಭಟನೆ ನಡೆಸಿದರು.

    ಗ್ರಾಮಸ್ಥರು ಸ್ಥಳೀಯ ಅಧಿಕಾರಿಗಳು, ತಹಶಿಲ್ದಾರ್, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೆ ಅಲೆದು ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಕೆರೆ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಜಿಂದಾಲ್ ಕಂಪನಿಯ ವಿರುದ್ಧ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದು, ಸುಮಾರು 10 ಎಕರೆಗೂ ಅಧಿಕ ಜಾಗವನ್ನು ಒತ್ತುವರಿ ಮಾಡಿರುವ ಆರೋಪ ವ್ಯಕ್ತವಾಗಿದೆ.

    ಮಾದಾವರ ಗ್ರಾಮಸ್ಥರು ಹಲವು ಬಾರಿ ಜಿಲ್ಲಾಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದಾರೆ, ಕಳೆದ ಐದಾರು ವರ್ಷದಿಂದ ಹೋರಾಟ ಸಹ ನಡೆಸಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಕೆರೆ ತುಂಬಿದ್ದು, ನೀರನ್ನು ಹೊರಕ್ಕೆ ಬಿಡುತ್ತಿಲ್ಲ. ಅಲ್ಲದೆ ಜಿಂದಾಲ್ ಕಂಪನಿಯ ಕಲುಷಿತ ನೀರು ಕೆರೆ ಒಡಲು ಸೇರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಕಾರ್ಯಾಲಯದಿಂದ ಪ್ರತಿಕ್ರಿಯೆ
    ರೈತರ ಮನವಿಯನ್ನು ಪುರಸ್ಕರಿಸಿರುವ ಪ್ರಧಾನ ಮಂತ್ರಿ ಕಾರ್ಯಾಲಯ, ಕೆರೆ ಅಭಿವೃದ್ಧಿ, ಕಲುಶಿತ ನೀರು ಸೇರದಂತೆ ಹಾಗೂ ಒತ್ತುವರಿ ಕುರಿತು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂರು ಉತ್ತರ ತಾಲೂಕಿನ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಈ ಮೂಲಕ ರೈತರ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರೈತರ ನಡೆ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಪ್ರಧಾನಿ ಕಚೇರಿ ವಿಸಿಟಿಂಗ್ ಕಾರ್ಡ್ ಬಳಸಿ ವಂಚನೆ

    ಪ್ರಧಾನಿ ಕಚೇರಿ ವಿಸಿಟಿಂಗ್ ಕಾರ್ಡ್ ಬಳಸಿ ವಂಚನೆ

    ಬೆಂಗಳೂರು: ಪ್ರಧಾನ ಮಂತ್ರಿ ಕಚೇರಿ ವಿಸಿಟಿಂಗ್ ಕಾರ್ಡ್ ಬಳಸಿ ಸಿಲಿಕಾನ್ ಸಿಟಿಯ ಐಷಾರಾಮಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿ ಆರೋಪಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶ ಮೂಲದ ಅನಿಕೇತ್ ಬಂಧಿತ ಆರೋಪಿ, ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್‍ನಲ್ಲಿ ಆರೋಪಿ ರೂಮ್ ಬುಕ್ ಮಾಡಿದ್ದ. ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಯೂತ್ ಅಡ್ವೈಸರ್ ಎಂದು ವಿಸಿಟಿಂಗ್ ಕಾರ್ಡ್ ತೋರಿಸಿ ಆರೋಪಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದ. ಜೂನ್ 16 ರಿಂದ 20ರ ವರೆಗೆ ಐಷಾರಾಮಿ ಹೋಟೆಲ್ ನಲ್ಲಿ ಈತ ವಾಸ್ತವ್ಯ ಹೂಡಿದ್ದ.

    ಅನುಮಾನಗೊಂಡ ಹೋಟೆಲ್‍ನವರು, ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಪೊಲೀಸರು ಪ್ರಧಾನಿ ಕಚೇರಿಗೆ ಪತ್ರ ಬರೆದು ಪರಿಶೀಲನೆ ನಡೆಸಿದಾಗ ಈತ ನಕಲಿ ಎಂಬುದು ಬೆಳಕಿಗೆ ಬಂದಿದೆ. ಸತತ ಒಂದು ತಿಂಗಳ ಕಾಲ ತನಿಖೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಬಂಧನದ ವಿಚಾರ ತಿಳಿದು ಕೇಂದ್ರದ ಐಬಿ(ಇಂಟಲಿಜೆನ್ಸ್ ಬ್ಯೂರೋ) ಮತ್ತು ಎಫ್‍ಆರ್‍ಆರ್‍ಒ ತಂಡಗಳು ಭೇಟಿ ನೀಡಿದ್ದು, ಎರಡೂ ತಂಡಗಳು ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿವೆ.

  • ‘ಮೋದಿ ಹೇಳಿಕೆಯನ್ನು ತಿರುಚಲಾಗಿದೆ’ – ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ

    ‘ಮೋದಿ ಹೇಳಿಕೆಯನ್ನು ತಿರುಚಲಾಗಿದೆ’ – ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ

    ನವದೆಹಲಿ: ನಮ್ಮ ಸಶಸ್ತ್ರ ಪಡೆಗಳ ಧೈರ್ಯದ ಪರಿಣಾಮ ಎಲ್‍ಎಸಿ(ಗಡಿ ವಾಸ್ತವಿಕ ರೇಖೆ) ದಾಟಲು ಚೀನಾ ಸೈನಿಕರಿಂದ ಸಾಧ್ಯವಾಗಲಿಲ್ಲ. 16 ಬಿಹಾರ ರೆಜಿಮೆಂಟ್‍ನ ಸೈನಿಕರ ತ್ಯಾಗವೂ ಚೀನಾ ಸೈನಿಕರು ಭಾರತದ ಗಡಿ ದಾಟುವ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಸ್ಪಷ್ಟನೆ ನೀಡಿದೆ.

    ಭಾರತದ ಒಂದಿಂಚು ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಹೇಳಿದ್ದರು ಎನ್ನಲಾದ ಸುದ್ದಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

    ಚೀನಾ ಆಕ್ರಮಣಕ್ಕೆ ಪ್ರಧಾನಿ ಮೋದಿ ಭಾರತದ ಭೂ ಭಾಗವನ್ನು ಒಪ್ಪಿಸಿದ್ದಾರೆ. ಚೀನಾ ಭಾರತದ ಭೂಭಾಗ ಆಕ್ರಮಣ ಮಾಡಿಕೊಳ್ಳದಿದ್ದರೆ ಸೈನಿಕರ ಹತ್ಯೆ ಆಗಿದ್ದು ಏಕೆ? ಮತ್ತು ನಮ್ಮವರು ಎಲ್ಲಿ ಕೊಲ್ಲಲ್ಪಟ್ಟರು ಎಂದು ಖಾರವಾಗಿ ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದಂತೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಸ್ಪಷ್ಟನೆ ನೀಡಿದೆ.

    ಎರಡು ಪುಟಗಳ ಸ್ಪಷ್ಟೀಕರಣ ಹೇಳಿಕೆಯಲ್ಲಿ ಯಾರು ಚೀನಾ ಸೈನಿಕರು ಭಾರತದ ಗಡಿಯನ್ನು ದಾಟಿಲ್ಲ ಮತ್ತು ನಮ್ಮ ಯಾವ ಸೈನಿಕರನ್ನು ಚೀನಾ ಸೆರೆಹಿಡಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ತಿಳಿಸಿದ್ದಾರೆ. ಆದರೆ ಮೋದಿ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಿದೆ.

    ಜೂನ್ 15ರಂದು ಗಾಲ್ವಾನ್‍ನಲ್ಲಿ ಭಾರತ ಚೀನಾದ ಗಡಿ ಭಾಗದಲ್ಲಿ ಚೀನಾ ಬಲ ಹೆಚ್ಚಿಸಿಕೊಂಡಿತ್ತು ಮತ್ತು ಗಡಿ ದಾಟುವ ಪ್ರಯತ್ನ ಮಾಡಿತ್ತು. ನಮ್ಮ ಸಶಸ್ತ್ರ ಪಡೆಗಳ ಅವರನ್ನು ಹಿಮ್ಮೆಟ್ಟಿಸುವ ಕಾರ್ಯ ಮಾಡಿದ್ದಾರೆ. ಈ ವೇಳೆ ಸೈನಿಕರು ಮುಖಾಮುಖಿಯಾಗಿ ಘರ್ಷಣೆ ಸಂಭವಿಸಿದ್ದು 20 ಭಾರತೀಯ ಸೈನಿಕರ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಮೋದಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಲಾಗಿದೆ.

    ಗಡಿಯಲ್ಲಿ ಬಲ ಹೆಚ್ಚಿಸಿಕೊಂಡು ಚೀನಾ ಅತಿಕ್ರಮಣಕ್ಕೆ ಪ್ರಯತ್ನ ಮಾಡುತ್ತಿದೆ. ಇದು ಪರಿಸ್ಥಿತಿ ಉದ್ವಿಗ್ನತೆಗೆ ಕಾರಣವಾಗಿದೆ. ಆದರೆ ಭಾರತ ಗಡಿಯಲ್ಲಿ ಸೂಕ್ತ ಉತ್ತರ ನೀಡುತ್ತಿದೆ ಎಂದು ವಿರೋಧ ಪಕ್ಷಗಳ ಸಭೆಯಲ್ಲಿ ಪ್ರಧಾನಿ ಹೇಳಿದರು ಎಂದು ಪ್ರಧಾನಮಂತ್ರಿ ಕಾರ್ಯಲಯ ಹೇಳಿದೆ.

    ಭಾರತದ ಒಂದಿಂಚು ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಹೇಳಿದರು ಎನ್ನುವ ಮಾಹಿತಿ ವರದಿಯಾಗುತ್ತದ್ದಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗಿತ್ತು ಮೋದಿ ಚೀನಾ ಆಕ್ರಮಣಕ್ಕೆ ಶರಣಾಗಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಟ್ವೀಟ್‍ಗಳಾಗಿತ್ತಿತ್ತು.

  • ಪ್ರಧಾನಿ ಮೋದಿಗೆ ಪಾವಗಡದ ಫೋಟೋಗ್ರಾಫರ್

    ಪ್ರಧಾನಿ ಮೋದಿಗೆ ಪಾವಗಡದ ಫೋಟೋಗ್ರಾಫರ್

    ತುಮಕೂರು: ಪ್ರಧಾನಿ ಮೋದಿ ಕಲ್ಪತರುನಾಡು ತುಮಕೂರಿಗೆ ನಿನ್ನೆಯಷ್ಟೇ ಭೇಟಿ ನೀಡಿದ್ದರು. ಇದೇ ವೇಳೆ ಪ್ರಧಾನಿಗಳ ಜೊತೆಗಿದ್ದ ಫೋಟೋಗ್ರಾಫರ್ ಕೂಡ ಜಿಲ್ಲೆಯ ಪಾವಗಡ ತಾಲೂಕಿನವರು ಎಂಬ ವಿಚಾರ ಬಹಿರಂಗಗೊಂಡಿದೆ.

    ಪಾವಗಡ ತಾಲೂಕಿನ ಓಬಳಾಪುರ ಮೂಲದ ಯಡಲಮ್ ಕೃಷ್ಣಮೂರ್ತಿ ಲೋಕನಾಥ್ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಪ್ರಧಾನಿ ಮೋದಿಯವರ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲೂ ಲೋಕನಾಥ್ ಅವರೇ ಛಾಯಾಗ್ರಾಹಕರಾಗಿದ್ದಾರೆ. ಪ್ರಧಾನಿ ಕಾರ್ಯಾಲಯದ ಪ್ರಸಾರ ಭಾರತಿ ಉದ್ಯೋಗಿ ಹಾಗೂ ಇಲಾಖೆಯ ಪ್ರಧಾನ ಫೋಟೋ ಹಾಗೂ ವೀಡಿಯೋಗ್ರಾಫರ್ ಎಂಬ ಮಾಹಿತಿ ತಿಳಿದು ಬಂದಿದೆ. ಯಡಲಮ್ ಕೃಷ್ಣಮೂರ್ತಿ ಅವರ ತಂದೆ ಹೆಸರಾಗಿದ್ದು, ತಮ್ಮ ಹೆಸರಿನ ಆರಂಭದಲ್ಲಿ ತಂದೆಯ ಹೆಸರು ಸೇರಿಸಿಕೊಂಡು ಯಡಲಮ್ ಕೃಷ್ಣಮೂರ್ತಿ ಲೋಕನಾಥ್ ಎಂದು ಗುರುತಿಸಿಕೊಂಡಿದ್ದಾರೆ.

    ಪಾವಗಡ ತಾಲೂಕಿನ ಓಬಳಾಪುರ ಇವರ ಮೂಲವಾಗಿದ್ದು, ತಂದೆ ಯಡಲಮ್ ಕೃಷ್ಣಮೂರ್ತಿ, ತಾಯಿಯ ಹೆಸರು ರತ್ನಮ್ಮ. ಓಬಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಪಾವಗಡ ಪಟ್ಟಣದಲ್ಲಿ ಪ್ರೌಢ ಶಿಕ್ಷಣ ಪಡೆದ ಇವರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಲ್ಲಿ ಫೋಟೋಗ್ರಾಫಿ ಕಲಿತು ಪ್ರಸಾರ ಭಾರತಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ತಮ್ಮ ತವರು ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಲೋಕನಾಥ್ ಅವರು, ಜ.2ರಂದು ತುಮಕೂರಿಗೆ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • 6 ವರ್ಷಗಳ ಸಂಸದ ವೇತನವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ರು ಸಚಿನ್

    6 ವರ್ಷಗಳ ಸಂಸದ ವೇತನವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ರು ಸಚಿನ್

    ನವದೆಹಲಿ: ಇತ್ತೀಚೆಗೆ ರಾಜ್ಯಸಭಾ ಸದಸ್ಯ ಅವಧಿ ಮುಗಿಸಿದ ಸಚಿನ್ ತೆಂಡೂಲ್ಕರ್ ತಮ್ಮ ಆರು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ್ದ ಸಂಪೂರ್ಣ ಸಂಬಳ ಹಾಗೂ ಭತ್ಯೆಯನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

    ಸಚಿನ್ ತಮ್ಮ ಅವಧಿಯಲ್ಲಿ ಸುಮಾರು 90 ಲಕ್ಷ ರೂ. ಹಣವನ್ನು ವೇತನ ಹಾಗೂ ಭತ್ಯೆ ರೂಪದಲ್ಲಿ ಪಡೆದಿದ್ದರು. ಸಚಿನ್ ಅವರ ನಿರ್ಧಾರದ ಕುರಿತು ಪ್ರಧಾನಿಗಳ ಕಾರ್ಯಾಲಯ ಸಚಿನ್ ಅವರಿಗೆ ಪತ್ರವನ್ನು ಬರೆಯುವ ಮೂಲಕ ಗೌರವ ಸೂಚಿಸಿದೆ. ತಾವು ನೀಡಿದ ಹಣವನ್ನು ಕಷ್ಟದಲ್ಲಿ ಇರುವವ ಪ್ರಜೆಗಳಿಗೆ ವಿನಿಯೋಗಿಸುವುದಾಗಿ ತಿಳಿಸಿದೆ.

    ಸಚಿನ್ ತಮ್ಮ ಸಂಸದರ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿಯನ್ನು ಬಳಕೆ ಮಾಡಿಕೊಂಡು ದೇಶದ್ಯಾಂತ 185 ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಪ್ರಮುಖವಾಗಿ ತಮ್ಮ ಸಂಸದ ನಿಧಿಯಲ್ಲಿ ನೀಡಲಾಗಿದ್ದ 30 ಕೋಟಿ ರೂ.ಗಳಲ್ಲಿ 7.5 ಕೋಟಿ ರೂ. ಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಮೂಲ ಸೌಲಭ್ಯಗಳನ್ನು ನೀಡಲು ಹೆಚ್ಚು ಹಣವನ್ನು ಬಳಕೆ ಮಾಡಿದ್ದಾರೆ.

    ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ 2 ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ. ಆಂಧ್ರ ಪ್ರದೇಶದ ಪುಟ್ಟಮ್ ರಾಜು ಕಂಡ್ರಿಗ ಹಾಗೂ ಮಹಾರಾಷ್ಟ್ರದ ಡೊಂಜ ಗ್ರಾಮಗಳನ್ನು ಸಚಿನ್ ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದಾರೆ. ಕಳೆದ 6 ವರ್ಷಗಳ ಅವಧಿಯಲ್ಲಿ ಸಂಸತ್ತಿನ ಹಾಜರಾತಿ ಕುರಿತು ಸಚಿನ್ ಹಾಗೂ ನಟಿ ರೇಖಾ ಹೆಚ್ಚು ಟೀಕೆಗೆ ಗುರಿಯಾಗಿದ್ದರು.