Tag: prime minister

  • ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್

    ಇಸ್ಲಾಮಾಬಾದ್: ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ನಡುವೆ ಕರಾಚಿಯಲ್ಲಿ ಔಷಧಿಗಳು, ದಿನಸಿ ಮತ್ತು ವಿದ್ಯುತ್ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ವಿವರಿಸುತ್ತಾ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಿಎಂಎಲ್-ಎನ್ ನಾಯಕಿ ಮರ್ಯಮ್ ನವಾಜ್ ವಿರುದ್ಧ ಪಾಕಿಸ್ತಾನಿ ಮಹಿಳೆಯೊಬ್ಬರು ವಾಗ್ದಾಳಿ ನಡೆಸಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    Shehbaz Sharif

    ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟಿನ ನಡುವೆ ಹೋರಾಟ ನಡೆಸುತ್ತಿದೆ. ರಾಜಕೀಯವಾಗಿ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಎಲ್ಲೆಡೆ ಆತಂಕವನ್ನು ಸೃಷ್ಟಿಸುತ್ತಿದೆ. ಪಾಕ್ ನಾಗರಿಕರು ಸಾಮಾಜಿಕ ಜಾಲತಾಣ ಮೂಲಕ ತಮ್ಮ ಆರ್ಥಿಕತೆಯನ್ನು ಸುಧಾರಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿಲ್ಲ ಎಂದು ಟೀಕಿಸುತ್ತಿದ್ದಾರೆ. ಇದನ್ನೂ ಓದಿ: ನೈಟ್ ಕ್ಲಬ್​ನಲ್ಲಿ ಯುವತಿಗೆಯೊಂದಿಗೆ ಅಸಭ್ಯ ವರ್ತನೆ – ಪ್ರಶ್ನಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಬೌನ್ಸರ್ಸ್!

    ಸದ್ಯ ಮಹಿಳೆಯೊಬ್ಬರ ವೀಡಿಯೋವನ್ನು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಬಗ್ಗೆ ಕರಾಚಿ ಮಹಿಳೆಯೊಬ್ಬರು ಇನ್ನೂ ಮುಂದೆ ಮಕ್ಕಳಿಗೆ ಊಟ ನೀಡದೇ ಅವರ ಜೀವನವನ್ನು ಕೊನೆಗೊಳಿಸಬೇಕೇ ಎಂದು ಪ್ರಶ್ನಿಸುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಹೌದು, ರಾಬಿಯಾ ಅವರು, ಬೆಲೆ ಏರಿಕೆಯಿಂದಾಗಿ ತಾವು ಎದುರಿಸುತ್ತಿರುವ ಕಷ್ಟವನ್ನು ಕ್ಯಾಮೆರಾ ಮುಂದೆ ತೊಡಿಕೊಂಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತಮಗೆ ಆಗುತ್ತಿರುವ ಖರ್ಚುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿಸಬೇಕು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ನಾನು ಏನು ಮಾಡಬೇಕು, ಮನೆ ಬಾಡಿಗೆ ಕಟ್ಟಬೇಕೋ, ದುಬಾರಿ ವಿದ್ಯುತ್ ಬಿಲ್‍ಗಳನ್ನು ಪಾವತಿಸಬೇಕೋ, ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸಬೇಕೋ, ನನ್ನ ಮಕ್ಕಳಿಗೆ ಊಟ ಹಾಕಬೇಕೋ ಅಥವಾ ಅವರನ್ನು ಕೊಲ್ಲಬೇಕೋ? ಎಂದು ಪ್ರಶ್ನಿಸುತ್ತಾ ಕಣ್ಣೀರು ಹಾಕಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ಸಿಗರ ಮನಸ್ಥಿತಿಯಲ್ಲಿ ಅತಂತ್ರವಿದೆ, ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ: ಬೊಮ್ಮಾಯಿ

    ನನ್ನ ಮಕ್ಕಳಲ್ಲಿ ಒಬ್ಬರಿಗೆ ಫಿಟ್ಸ್ ಇದೆ. ಆದರೆ ನಾಲ್ಕು ತಿಂಗಳಿನಿಂದ ಅವರಿಗೆ ನೀಡಲಾಗುತ್ತಿರುವ ಔಷಧಿ ಬೆಲೆ ಏರಿಕೆಯಾಗಿದೆ. ಹಾಗಂತ ನನ್ನ ಮಕ್ಕಳಿಗೆ ಔಷಧಿ ನೀಡದೇ ಇರುವುದಕ್ಕೆ ಆಗುತ್ತಾ? ಸರ್ಕಾರ ಈಗಾಗಲೇ ಬಹುತೇಕ ಬಡವರನ್ನು ಕೊಂದಿದೆ. ಸರ್ವಶಕ್ತನಾದ ಅಲ್ಲಾಹನಿಗೆ ಈ ಬಗ್ಗೆ ಪ್ರಶ್ನಿಸಲು ನೀವು ಭಯಪಡುತ್ತೀರೋ ಅಥವಾ ಇಲ್ಲವೋ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಈ ವೀಡಿಯೋಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರ ಜೂನ್‍ನಲ್ಲಿ ವಿದ್ಯುತ್ ದರವನ್ನು ಹೆಚ್ಚಿಸಿಲ್ಲ ಅಥವಾ ಔಷಧಿಗಳ ಮೇಲೆ ಹೊಸ ತೆರಿಗೆಯನ್ನು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2022ರ ಏಪ್ರಿಲ್‍ನಲ್ಲಿ ಅಧಿಕಾರ ವಹಿಸಿಕೊಂಡ ಪಿಎಂ ಶೆಹಬಾಜ್ ಷರೀಫ್ ಅವರ ಸಮ್ಮಿಶ್ರ ಸರ್ಕಾರವು ಸಾಕಷ್ಟು ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ಗೆದ್ದಿರೋದು 2024ರಲ್ಲಿ ಅಲ್ಲ, ಮೈತ್ರಿ ಮುರಿದ ಬಳಿಕ ಸಿಎಂ ನಿತೀಶ್ ವಾಗ್ದಾಳಿ

    ಮೋದಿ ಗೆದ್ದಿರೋದು 2024ರಲ್ಲಿ ಅಲ್ಲ, ಮೈತ್ರಿ ಮುರಿದ ಬಳಿಕ ಸಿಎಂ ನಿತೀಶ್ ವಾಗ್ದಾಳಿ

    ಪಾಟ್ನಾ: ಮೈತ್ರಿ ಕಡಿದುಕೊಂಡು ನೂತನ ಸರ್ಕಾರ ರಚನೆಯಾದ ದಿನದಿಂದಲೇ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿಗೆ ಬಿಹಾರದ ನೂತನ ಸಿಎಂ ನಿತೀಶ್ ಕುಮಾರ್ ಮುಂದಾಗಿದ್ದಾರೆ.

    ಜನತಾ ದಳ (ಯುನೈಟೆಡ್) (ಜೆಡಿಯು) ಬಿಜೆಪಿಯೊಂದಿಗೆ ಮುರಿದು ಬಿಹಾರದಲ್ಲಿ ಸರ್ಕಾರ ರಚಿಸಲು ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳೊಂದಿಗೆ ಕೈಜೋಡಿಸಿತು. ಇಂದು 8ನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಆರ್‌ಜೆಡಿಯ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?

    ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಮಾತನಾಡಿದ ಅವರಿಂದು, ಪ್ರಧಾನಿ ನರೇಂದ್ರ ಮೋದಿ ಗೆದ್ದಿರೋದು 2014, 2018ರಲ್ಲಿ 2024ರಲ್ಲಿ ಅಲ್ಲ. ನಾವು 2024ರ ಚುನಾವಣೆಯ ಬಗ್ಗೆ ಚಿಂತಿಸಬೇಕು ಎಂದು ಪಕ್ಷದ ಎಲ್ಲ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ನಮ್ಮ ಪಕ್ಷವು ಬಿಜೆಪಿ ತೊರೆಯಲು ಒಟ್ಟಾಗಿ ನಿರ್ಧಾರ ಮಾಡಿತು. 2024ರ ಚುನಾವಣೆಗೆ ಏನು ಬೇಕಾದರೂ ಆಗಬಹುದು. 2014-2018ರಲ್ಲಿ ಅಧಿಕಾರಕ್ಕೆ ಬಂದವರು 2024 ರಲ್ಲಿ ಗೆಲ್ಲುತ್ತಾರೆಯೇ? 2024ಕ್ಕೆ ನಾವೆಲ್ಲರೂ ಒಂದಾಗಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಂದು ಹುಡುಗಿ ನಿಮ್ಮೊಂದಿಗೆ ಸೆಕ್ಸ್ ಮಾಡಬೇಕು ಅಂದ್ರೆ..? – ಶಕ್ತಿಮಾನ್ ಖ್ಯಾತಿಯ ಮುಖೇಶ್ ವಿವಾದಾತ್ಮಕ ಹೇಳಿಕೆ

    ಇದೇ ವೇಳೆ 2024ಕ್ಕೆ ಪ್ರಧಾನಿ ಅಭ್ಯರ್ಥಿ ಆಗಲಿದ್ದಾರೆ ಎನ್ನುವ ಹೇಳಿಕೆಯನ್ನು ತಳ್ಳಿಹಾಕಿದ್ದು, ನಾನು ಪ್ರಧಾನಿಗೆ ಹುದ್ದೆಗೆ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಸ್ತಿ ವಿವರ ಘೋಷಿಸಿಕೊಂಡ ಪ್ರಧಾನಿ ಮೋದಿ – ಎಷ್ಟಿದೆ ಗೊತ್ತಾ?

    ಆಸ್ತಿ ವಿವರ ಘೋಷಿಸಿಕೊಂಡ ಪ್ರಧಾನಿ ಮೋದಿ – ಎಷ್ಟಿದೆ ಗೊತ್ತಾ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ. ಮೋದಿ ಅವರ ಚರಾಸ್ತಿಯು ಒಂದು ವರ್ಷದಲ್ಲಿ 26.13 ಲಕ್ಷದಷ್ಟು ಏರಿಕೆಯಾಗಿದ್ದು, ಅವರ ಬಳಿ ಒಟ್ಟು 2.23 ಕೋಟಿ ಮೌಲ್ಯದ ಆಸ್ತಿ ಇದೆ.

    ಗುಜರಾತ್‌ನ ಗಾಂಧಿನಗರದಲ್ಲಿರುವ ಭೂಮಿಯನ್ನು ದಾನ ಮಾಡಿರುವುದರಿಂದ ಅವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ. 2022ರ ಮಾರ್ಚ್‌ 31ರ ವೇಳೆಗೆ ಮೋದಿ ಅವರ ಒಟ್ಟು ಆಸ್ತಿ ಮೌಲ್ಯ 2,23,82,504 ರೂ. ಆಗಿದೆ.  ಇದನ್ನೂ ಓದಿ: ಶ್ರೀಲಂಕಾದಲ್ಲಿ 50 ಪೆಟ್ರೋಲ್‌ ಬಂಕ್‌ ತೆರೆಯಲಿದೆ ಐಒಸಿ

    ಕಳೆದ ವರ್ಷ ಪ್ರಧಾನಿ ಮೋದಿ ಬಳಿಯಿದ್ದ ನಗದು ಮೊತ್ತ 36,900 ರೂ.ನಿಂದ 35,250 ರೂ.ಗೆ ಇಳಿದಿತ್ತು. 2021ರ ಮಾರ್ಚ್ 31, 2021 ರವರೆಗೆ ಅವರ ಬ್ಯಾಂಕ್‌ ಖಾತೆಯಲ್ಲಿ 1,52,480 ರೂ. ಇದ್ದ ಹಣ 46,555 ರೂ.ಗೆ ಕಡಿಮೆಯಾಗಿದೆ ರಿಂದ ಕಡಿಮೆಯಾಗಿದೆ.

    ಮೋದಿ ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿಲ್ಲ. ವಾಹನ ಕೂಡ ಹೊಂದಿಲ್ಲ. 1.73 ಲಕ್ಷ ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬಿಜೆಪಿ- ಜೆಡಿಯು ಮೈತ್ರಿಗೆ ಗುಡ್‌ಬೈ – ನಿತೀಶ್‌ ರಾಜೀನಾಮೆಗೆ ಕಾರಣ ಏನು?

    ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಪ್ರತಿ ಹಣಕಾಸು ವರ್ಷದ ಅಂತ್ಯದೊಳಗೆ ಎಲ್ಲಾ ಕೇಂದ್ರ ಸಚಿವರು ತಮ್ಮ ಆಸ್ತಿಯನ್ನು ಘೋಷಿಸಲು ನಿರ್ಧರಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ರಾಮ ಭಕ್ತರನ್ನು ಅಪಮಾನಿಸಲೆಂದೇ ಕಾಂಗ್ರೆಸ್ ಪ್ರತಿಭಟಿಸಿದೆ – ರಾಮಮಂದಿರಕ್ಕೆ ನಂಟು ಕಲ್ಪಿಸಿದ ಅಮಿತ್ ಶಾ, ಯೋಗಿ

    ರಾಮ ಭಕ್ತರನ್ನು ಅಪಮಾನಿಸಲೆಂದೇ ಕಾಂಗ್ರೆಸ್ ಪ್ರತಿಭಟಿಸಿದೆ – ರಾಮಮಂದಿರಕ್ಕೆ ನಂಟು ಕಲ್ಪಿಸಿದ ಅಮಿತ್ ಶಾ, ಯೋಗಿ

    ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕರು ಶುಕ್ರವಾರ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರು ಗರಂ ಆಗಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಇದೇ ದಿನ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹೀಗಾಗಿ ರಾಮಭಕ್ತರನ್ನು ಅಪಮಾನಿಸುವ ಸಲುವಾಗಿಯೇ ಕಾಂಗ್ರೆಸ್ ಬ್ಲಾಕ್ ಫ್ರೈಡೆ ಆಚರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರೇ ನೀವು ಹೀಗೆ ಮಾಡಿದ್ದು ಎಷ್ಟು ಸರಿ? ಇನ್ನೂ ಎಷ್ಟು ದಿನ ಈ ತುಷ್ಟೀಕರಣ ಎಂದು ಪ್ರಶ್ನಿಸಿದ್ದಾರೆ.

    ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಂತೂ ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿದ್ದಾರೆ. ಪವಿತ್ರವಾದ ದಿನದಂದೂ ಕಪ್ಪು ಬಟ್ಟೆ ಧರಿಸ್ತೀರಾ? ಕಾಂಗ್ರೆಸ್ ನಾಯಕರ ನಡೆ ಪ್ರಜಾಪ್ರಭುತ್ವಕ್ಕೆ, ನ್ಯಾಯವ್ಯವಸ್ಥೆಗೆ ಮಾಡುತ್ತಿರುವ ಅಪಮಾನ ಎಂದು ಗರಂ ಆಗಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ. ಇದನ್ನೂ ಓದಿ: ಮಗು ಕೊಂದ ಕೇಸ್‍ಗೆ ಟ್ವಿಸ್ಟ್- ತಾಯಿ ಕುಕೃತ್ಯಕ್ಕೆ ಕಾರಣವಾಯ್ತಾ ಪರ್ಸನಲ್ ಮ್ಯಾಟರ್..?

    ಜೈರಾಮ್ ರಮೇಶ್ ಟ್ವೀಟ್ ಮಾಡಿ, ಬೆಲೆ ಏರಿಕೆ ಖಂಡಿಸಿ ನಾವು ಪ್ರತಿಭಟನೆ ಮಾಡ್ತಿದ್ರೆ, ಕೇಂದ್ರ ಗೃಹಮಂತ್ರಿಗಳು ಇಲ್ಲೂ ಮತೀಯ ರಾಜಕಾರಣ ಮಾಡಲು ಹೊರಟಿದ್ದಾರೆ. ಬೋಗಸ್ ಆರ್ಗ್ಯೂಮೆಂಟ್ ಮಾಡ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆಗೆ ವೋಟಿಂಗ್ – NDA ಅಭ್ಯರ್ಥಿ ಜಗದೀಪ್ ಧನ್ಕರ್ ಆಯ್ಕೆ ಖಚಿತ

    ಎಐಸಿಸಿ ವಕ್ತಾರ ಪವನ್ ಖೇರಾ, ಜಿಎಸ್‌ಟಿ, ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರದ ಬಗ್ಗೆ ಜನ ಪ್ರಶ್ನೆ ಮಾಡ್ತಾ ಇದ್ದಾರೆ. ಇವೆಲ್ಲಾ ಅವರಿಗೆ ಔಟಾಫ್ ಸಿಲಬಸ್. ಅದಕ್ಕೆ ಮಂದಿರ-ಮಸೀದಿಯ ಉತ್ತರ ನೀಡಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಧಾನಿ ನಿವಾಸಕ್ಕೆ ಘೆರಾವ್? – ಬೆಲೆ ಏರಿಕೆ ವಿರುದ್ಧ ಹೆಚ್ಚಿದ ಕಿಚ್ಚು

    ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಧಾನಿ ನಿವಾಸಕ್ಕೆ ಘೆರಾವ್? – ಬೆಲೆ ಏರಿಕೆ ವಿರುದ್ಧ ಹೆಚ್ಚಿದ ಕಿಚ್ಚು

    ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಗಳಿಂದಾಗಿ ಆಕ್ರೋಶಗೊಂಡಿರುವ ರಾಷ್ಟ್ರೀಯ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

    ಪ್ರತಿಭಟನೆಯ ಭಾಗವಾಗಿ `ಪ್ರಧಾನಿ ಮನೆಗೆ ಘೆರಾವ್’ ಹಾಕಲು ಮುಂದಾಗಿದೆ. ಈಗಾಗಲೇ ಸಂಸತ್ ಭವನದಿಂದ `ಚಲೋ ರಾಷ್ಟ್ರಪತಿ ಭವನ್’ ಮೆರವಣಿಗೆ ಆರಂಭಿಸಿದ್ದು, ಧಿಕ್ಕಾರ ಕೂಗುತ್ತಾ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರು ಮತ್ತು ಹಿರಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ರಾಷ್ಟ್ರಪತಿ ಭವನದವರೆಗೆ ಮೆರವಣಿಗೆ ತೆರಳಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ಕೈದು ಉದ್ಯಮಿಗಳಿಗಾಗಿ ರಾಜಕಾರಣಿಗಳಿಬ್ಬರು ಕೆಲಸ ಮಾಡ್ತಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ

    ಕಾಂಗ್ರೆಸ್ ಬೃಹತ್ ಪ್ರತಿಭಟನೆಗೂ ಮುನ್ನವೇ ದೆಹಲಿಯ ಕೆಲ ಭಾಗಗಳಲ್ಲಿ ದೊಡ್ಡ-ದೊಡ್ಡ ಸಭೆ, ಸಮಾರಂಭಗಳನ್ನ ನಿಷೇಧಿಸಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಲ್ಯೂಟೆನ್ಸ್ ದೆಹಲಿಯ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಲಿದೆ ಎಂದು ದಿಲ್ಲಿ ಸಂಚಾರ ಪೊಲೀಸರು ಈಗಾಗಲೇ ಸೂಚನೆ ಹೊರಡಿಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಎಲ್ಲೆಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆಯೋ, ಆ ಭಾಗಗಳಲ್ಲಿ ಮಾರ್ಗ ಬದಲಾವಣೆ ಹಾಗೂ ಸಂಚಾರ ನಿಯಂತ್ರಣಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ive Tv
    [brid partner=56869869 player=32851 video=960834 autoplay=true]

  • ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ನೂರಾರು ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ಆರಂಭ

    ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ನೂರಾರು ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ಆರಂಭ

    – ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವಂತೆ ಪ್ರಧಾನಿಗೆ ಮನವಿ

    ನವದೆಹಲಿ: ಯುದ್ಧ ಪೀಡಿತ ಉಕ್ರೇನ್‌ನಿಂದ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳು ಭಾರತೀಯ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕೆ ಆಗ್ರಹಿಸಿ 5 ದಿನಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

    ಉಕ್ರೇನ್‌ನಿಂದ ವಾಪಸ್ಸಾದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಕಳೆದುಕೊಳ್ಳುವ ಆತಂಕದಲ್ಲಿದ್ದು, ಖಿನ್ನತೆ, ಆತಂಕ ಇತರ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಹಾಗಾಗಿ ತಮ್ಮ ಭವಿಷ್ಯ ಉಳಿಸಬೇಕು. ಅದಕ್ಕಾಗಿ ಸರ್ಕಾರ ನಮಗೆ ಸಹಾಯ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ

    ದೆಹಲಿಯ ರಾಮಲೀಲಾ ಮೈದಾನದಲ್ಲಿ ಜುಲೈ 23 ರಿಂದ 27ರ ವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ. ಕಳೆದ ತಿಂಗಳು, ದೇಶದ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಹಲವಾರು ವಿದ್ಯಾರ್ಥಿಗಳು ರಾಜಧಾನಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.

    ನಾವು ಜಂತರ್ ಮಂತರ್‌ನಲ್ಲಿ ಮೂರು ಬಾರಿ, ದ್ವಾರಕದಲ್ಲಿನ ರಾಷ್ಟ್ರೀಯ ವೈದ್ಯಕೀಯ ಆಯೋಗದ (MNC) ಕಚೇರಿಯಲ್ಲಿ, ಪ್ರಧಾನಮಂತ್ರಿ ಕಚೇರಿ, ಆರೋಗ್ಯ ಸಚಿವಾಲಯ, ಶಿಕ್ಷಣ ಸಚಿವಾಲಯ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಭಾರತದ ರಾಷ್ಟçಪತಿಗಳಿಗೆ ನಮ್ಮ ಬೇಡಿಕೆ-ಕೋರಿಕೆ ಪತ್ರವನ್ನು ಸಲ್ಲಿಸಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಭರವಸೆ ಇಲ್ಲ. ಅನಿವಾರ್ಯ ಕಾರಣಗಳಿಂದಾಗಿ ಇಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದರೆ. ಇದನ್ನೂ ಓದಿ: ಇಂಡಿಗೋ ಏರ್‌ಲೈನ್ಸ್‌ನ ಗಗನಸಖಿಯೊಂದಿಗೆ ಅಸಭ್ಯ ವರ್ತನೆ- ಪ್ರಯಾಣಿಕನ ಬಂಧನ

    ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸರಿಸುಮಾರು 12,000 ಅಂತಹ ವಿದ್ಯಾರ್ಥಿಗಳಿರುವುದರಿಂದ 600 ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಸಂಸ್ಥೆಯು ಸುಮಾರು 20 ವಿದ್ಯಾರ್ಥಿಗಳನ್ನು ವ್ಯವಸ್ಥೆಗೊಳಿಸಬಹುದು ಎಂದು ಅವರು ಕೇಳಿಕೊಂಡಿದ್ದಾರೆ.

    ರಷ್ಯಾದ ಪಡೆಗಳು ಉಕ್ರೇನ್ ವಿರುದ್ಧ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಉಕ್ರೇನ್‌ನಾದ್ಯಂತ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿರುವ ಕನಿಷ್ಠ 18,000 ವಿದ್ಯಾರ್ಥಿಗಳು ಫೆಬ್ರವರಿಯಲ್ಲಿ ಭಾರತಕ್ಕೆ ಮರಳಿದರು.

    Live Tv
    [brid partner=56869869 player=32851 video=960834 autoplay=true]

  • ಇಟಲಿ ಪ್ರಧಾನಿ ದ್ರಾಘಿ ರಾಜೀನಾಮೆ

    ಇಟಲಿ ಪ್ರಧಾನಿ ದ್ರಾಘಿ ರಾಜೀನಾಮೆ

    ರೋಮ್: ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷಗಳು ವಿಶ್ವಾಸ ಮತವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಇಟಲಿಯ ಪ್ರಧಾನಿ ಮಾರಿಯೋ ದ್ರಾಘಿ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

    ಕ್ವಿರಿನಾಲೆ ಅರಮನೆಯಲ್ಲಿ ನಡೆದ ಸಭೆಯಲ್ಲಿ ದ್ರಾಘಿ ಅವರು ಅಧ್ಯಕ್ಷ ಸೆರ್ಗಿಯೋ ಮಟ್ಟರೆಲ್ಲಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆ ಪತ್ರವನ್ನು ಸ್ವೀಕರಿಸಿರುವ ಇಟಲಿ ಅಧ್ಯಕ್ಷ, ಸದ್ಯದ ಪರಿಸ್ಥಿತಿಯಲ್ಲಿ ಹಂಗಾಮಿ ಪ್ರಧಾನಿ ಆಗಿ ಮುಂದುವರಿಯಲು ಮನವಿ ಮಾಡಿಕೊಂಡಿದ್ದಾರೆ.

    ಯುರೋಪಿಯನ್ ಒಕ್ಕೂಟ ಸಹಾಯದ ಕೋವಿಡ್ ಸಾಂಕ್ರಾಮಿಕ ಚೇತರಿಕೆ ಯೋಜನೆ ಅನುಷ್ಠಾನಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂಬ ದ್ರಾಘಿ ಕರೆಯನ್ನು ಎಡ, ಬಲ ಮತ್ತು ಪ್ಯಾಪುಲಿಸ್ಟ್ ಪಕ್ಷಗಳನ್ನೊಳಗೊಂಡಿರುವ ಸಮ್ಮಿಶ್ರ ಸರ್ಕಾರದ ಸದಸ್ಯರು ನಿರಾಕರಿಸಿದ ಬೆನ್ನಲ್ಲೇ ಪ್ರಧಾನಿ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್‍ಗೆ ಕರೆದಿಲ್ಲ, ಬಿಜೆಪಿಗೆ ಹೋಗಬೇಡ ಅಂದಿದ್ದಾರೆ: ಜಿಟಿಡಿ

    ಅಧ್ಯಕ್ಷ ಮಟ್ಟರೆಲ್ಲಾ ಸಂಸತ್ತನ್ನು ವಿಸರ್ಜಿಸುತ್ತಾರೋ ಅಥವಾ ಅವಧಿಪೂರ್ವ ಚುನಾವಣೆಗಳನ್ನು ನಡೆಸುತ್ತಾರೋ ಎನ್ನುವುದು ಈವರೆಗೆ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಬಿಲ್‌ಗೇಟ್ಸ್ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

    Live Tv
    [brid partner=56869869 player=32851 video=960834 autoplay=true]

  • ಬ್ರಿಟಿಷ್ ಪ್ರಧಾನಿ ಹುದ್ದೆಗೆ ಸುನಾಕ್ ಇನ್ನೂ ಹತ್ತಿರ – 4 ನೇ ಸುತ್ತಿನ ಮತದಾನದಲ್ಲೂ ಜಯ

    ಬ್ರಿಟಿಷ್ ಪ್ರಧಾನಿ ಹುದ್ದೆಗೆ ಸುನಾಕ್ ಇನ್ನೂ ಹತ್ತಿರ – 4 ನೇ ಸುತ್ತಿನ ಮತದಾನದಲ್ಲೂ ಜಯ

    ಲಂಡನ್: ಭಾರತ ಮೂಲದ ಮಾಜಿ ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಾಕ್ 4 ನೇ ಸುತ್ತಿನ ಮತದಾನದಲ್ಲಿ 118 ಮತಗಳನ್ನು ಪಡೆಯುವ ಮೂಲಕ ಬ್ರಿಟಿಷ್ ಪ್ರಧಾನಿ ಹುದ್ದೆಗೆ ಇನ್ನೂ ಹತ್ತಿರವಾಗಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕನಾಗುವ ಸ್ಪರ್ಧೆಯಲ್ಲೂ ಸುನಾಕ್ ಮುನ್ನಡೆ ಸಾಧಿಸಿದ್ದಾರೆ.

    ಮಂಗಳವಾರ ನಡೆದ ಕನ್ಸರ್ವೇಟಿವ್ ಪಕ್ಷದ 4 ನೇ ಸುತ್ತಿನ ಮತದಾನದಲ್ಲಿ ಸುನಾಕ್ 118 ಮತಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಕಳೆದ 3 ನೇ ಸುತ್ತಿನ ಮತದಾನದಲ್ಲಿ ಸುನಾಕ್ 115 ಮತಗಳನ್ನು ಪಡೆದಿದ್ದರು. ಇದೀಗ 118 ಮತಗಳನ್ನು ಪಡೆಯುವ ಮೂಲಕ ತಮ್ಮ ಸ್ಥಾನದ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದ 92 ಮಂದಿ ಸಿವಿಲ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

    ವ್ಯಾಪಾರದ ಸಚಿವ ಪೆನ್ನಿ ಮೊರ್ಡಾಂಟ 92 ಮತ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 68 ಮತಗಳನ್ನು ಪಡೆಯುವ ಮೂಲಕ 2ನೇ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಮಾಜಿ ಸಚಿವ ಬಡೆನೊಚ್ 59 ಮತಗಳನ್ನು ಪಡೆಯುವ ಮೂಲಕ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಸಾವಿರ ಗಡಿದಾಟಿದ ಕೊರೊನಾ – ಬೆಂಗ್ಳೂರಲ್ಲಿ 1,013 ಕೇಸ್, 1,104 ಮಂದಿ ಡಿಸ್ಚಾರ್ಜ್

    ಬುಧವಾರ 5ನೇ ಸುತ್ತಿನ ಮತದಾನ ನಡೆಯಲಿದ್ದು, ಬ್ರಿಟಿಷ್ ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ ನಡೆಸಲಿರುವ ಅಂತಿಮ ಸುತ್ತಿನ ಇಬ್ಬರು ಅಬ್ಯರ್ಥಿಗಳು ಯಾರು ಎಂಬುದು ತಿಳಿದುಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ರಿಟನ್‌ ಪಿಎಂ ರೇಸ್‌ – ದಿನ ಕಳೆದಂತೆ ಸುನಾಕ್‌ಗೆ ಹೆಚ್ಚಾಗುತ್ತಿದೆ ಬೆಂಬಲ

    ಬ್ರಿಟನ್‌ ಪಿಎಂ ರೇಸ್‌ – ದಿನ ಕಳೆದಂತೆ ಸುನಾಕ್‌ಗೆ ಹೆಚ್ಚಾಗುತ್ತಿದೆ ಬೆಂಬಲ

    ಲಂಡನ್‌: ಬ್ರಿಟನ್ ಪ್ರಧಾನಿ ಅಭ್ಯರ್ಥಿ ರೇಸ್‍ನಲ್ಲಿರುವ ರಿಷಿ ಸುನಾಕ್‍ಗೆ ದಿನಕಳೆದಂತೆ ಬೆಂಬಲ ಹೆಚ್ಚಾಗುತ್ತಿದೆ. ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿಯ ಬಹುತೇಕ ನಾಯಕರು ರಿಶಿ ಸುನಕ್ ಪ್ರಧಾನಿ ಆಗಲಿ ಎಂದು ಬಯಸುತ್ತಿದ್ದಾರೆ.

    ರಿಷಿ ಸುನಾಕ್ ಚುನಾಯಿತರಾದರೆ ಅವರು ದೇಶಕ್ಕೆ ಒಳ್ಳೆಯ ಪ್ರಧಾನಿ ಆಗಿರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಿನ್ನೆ ಪ್ರಕಟವಾದ ಒಪಿನಿಯನ್ ಪೋಲ್‍ನಲ್ಲಿ ಈ ವಿಚಾರ ಬಯಲಾಗಿದೆ.

    ಪೆನ್ನಿ ಮೊರ್ಡಾಂಟ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಕನ್ಸರ್ವೇಟಿವ್ ಪಕ್ಷದ ನಾಯಕ ಹುದ್ದೆಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಗೆದ್ದವರು ಪ್ರಧಾನಿ ಹುದ್ದೆಗೆ ಏರಲಿದ್ದಾರೆ. ಇದನ್ನೂ ಓದಿ: ಲಂಕಾ ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಜು.19 ರಂದು ಸರ್ವಪಕ್ಷಗಳ ಸಭೆ – ಪ್ರಹ್ಲಾದ್ ಜೋಶಿ

    ಬೋರಿಸ್‌ ಜಾನ್ಸನ್‌ ವಿರೋಧ:
    ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಬೋರಿಸ್‌ ಜಾನ್ಸನ್‌ ಅವರು ರಿಷಿ ಸುನಕ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾರನ್ನು ಬೇಕಾದರೂ ಬೆಂಬಲಿಸಿ ಆದರೆ ರಿಷಿ ಸುನಕ್ ನ್ನು ಬೇಡ ಎಂದು ಜಾನ್ಸನ್‌ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.

    ಜಾನ್ಸನ್ ಅವರಿಗೆ ತಮ್ಮ ಪಕ್ಷದ ಸದಸ್ಯರಿಂದಲೇ ಬೆಂಬಲ ಕಳೆದುಕೊಳ್ಳುವುದಕ್ಕೆ ಕಾರಣ ಎಂದು ರಿಷಿ ಕಾರಣ ಜಾನ್ಸನ್‌ ದೂಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 1950ರಲ್ಲೇ ಈದ್ಗಾ ಮೈದಾನ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಟ್ಟಿತ್ತು: ದಾಖಲೆ ರಿಲೀಸ್

    1950ರಲ್ಲೇ ಈದ್ಗಾ ಮೈದಾನ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಟ್ಟಿತ್ತು: ದಾಖಲೆ ರಿಲೀಸ್

    ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನವನ್ನು ಜುಲೈ 31ರ ಒಳಗೆ ಸರ್ಕಾರದ ಸ್ವತ್ತೆಂದು ಘೋಷಿಸಬೇಕು. ಮೈದಾನಕ್ಕೆ 10ನೇ ಚಾಮರಾಜ ಒಡೆಯರ್ ಅವರ ಹೆಸರು ನಾಮಕರಣ ಮಾಡಬೇಕು ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆಯ ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ ಒತ್ತಾಯಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈದ್ಗಾ ಮೈದಾನವನ್ನು ಜುಲೈ 31ರೊಳಗೆ ಸರ್ಕಾರದ ಸ್ವತ್ತೆಂದು ಘೋಷಿಸಬೇಕು. ಚಾಮರಾಜಪೇಟೆ ಬಂದ್ ಮಾಡಿದ್ದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಚುನಾವಣೆ ಬಂತು ಅಂದ್ರೆ ಮೋದಿ ಎರಡು ಬಾಂಬ್ ಇಟ್ಟುಕೊಂಡಿರುತ್ತಾರೆ: ಸತೀಶ್ ಜಾರಕಿಹೊಳಿ

    ಚಾಮರಾಜಪೇಟೆ ಜನತಾ ಹೋಟೆಲ್ ಮುಂಭಾಗ, ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ, ಟಿ.ಆರ್.ಮಿಲ್ ಸರ್ಕಲ್, ಮಕ್ಕಳ ಕೂಟ, ಜಿಂಕೆ ಪಾರ್ಕ್ ಸೇರಿದಂತೆ ಚಾಮರಾಜಪೇಟೆಯ ಒಟ್ಟು 6 ಭಾಗಗಳಲ್ಲಿ ಸಹಿ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿದೆ. ಸಹಿ ಸಂಗ್ರಹಿಸಿ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಒಂದು ಪ್ರತಿಯನ್ನು ಕಳುಹಿಸುತ್ತೇವೆ. ಸದ್ಯದಲ್ಲೇ ರಾಜ್ಯಪಾಲರನ್ನ ಭೇಟಿ ಮಾಡಿ ಮನವಿ ಮಾಡಲಿದ್ದೇವೆ. ಇದನ್ನು ಆಟದ ಮೈದಾನವಾಗಿಯೇ ಉಳಿಯಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಈದ್ಗಾ ಮೈದಾನ ಸರ್ಕಾರದ ಸ್ವತ್ತು ಎಂಬುದಕ್ಕೆ ಮತ್ತೊಂದು ದಾಖಲೆ ಬಿಡುಗಡೆ ಮಾಡಿದೆ. ದಾಖಲೆಯಲ್ಲಿ ಇದು ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಡುವ ಸ್ವತ್ತು ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಡ್ರೋನ್‌ಗೆ ಗುಂಡು -ಸೇನೆಯ ದಾಳಿಗೆ ಮರಳಿ ಪಾಕಿಗೆ ಓಡಿ ಹೋಯ್ತು

    1950ರಲ್ಲೇ ಈದ್ಗಾ ಮೈದಾನ ಮೈಸೂರು ಸಂಸ್ಥಾನದ ಅಧೀನಕ್ಕೆ ಒಳಪಟ್ಟಿತ್ತು. ಇದನ್ನು ಯಾವುದೇ ದರ್ಗಾಕ್ಕೆ ನೀಡಿಲ್ಲ ಎಂಬುದರ ಕುರಿತು ದಾಖಲೆಯಲ್ಲಿ ಗಡಿ ಸಮೇತ ಸ್ಪಷ್ಟವಾಗಿ ಉಲ್ಲೇಖವಾಗಿದೆ. 1950ರಲ್ಲಿ ನಡೆದ ಸಿಟಿಎಸ್ ನಲ್ಲಿ ಈ ಮೈದಾನ ಸರ್ಕಾರದ್ದು ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಆರ್‌ಟಿಐ ದಾಖಲೆ ಪ್ರತಿಯನ್ನು ಬಿಬಿಎಂಪಿಗೆ ಸಲ್ಲಿಕೆ ಮಾಡಲಾಗಿದೆ ಎಂದು ನಾಗರಿಕ ಒಕ್ಕೂಟ ವೇದಿಕೆ ಹೇಳಿದೆ.

    ಬೆಂಗಳೂರಿಗೆ ಮೊಟ್ಟ ಮೊದಲ ಬಡಾವಣೆ ಆಗಿದ್ದೇ ಚಾಮರಾಜಪೇಟೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಬಡಾವಣೆ ನಿರ್ಮಾಣವಾಯಿತು. ಹಾಗಾಗಿ ಈಗಿರುವ ಈದ್ಗಾ ಮೈದಾನ 2.10 ಎಕರೆ ಜಾಗದಲ್ಲಿ ಮೊದಲು ಸಂತೆಗೆ ಎಂದು ಮೀಸಲಿರಿಸಲಾಗಿತ್ತು. ಆ ನಂತರ ಇದು ಆಟದ ಮೈದಾನವಾಗಿ ಬಳಕೆಯಾಯಿತು. ಅದಕ್ಕಾಗಿ ಮೈಸೂರು ಅರಸರ ಹೆಸರಿನಲ್ಲಿ ಮೈದಾನಕ್ಕೆ ನಾಮಕರಣ ಮಾಡಬೇಕು ಎಂದು ಚಾಮರಾಜಪೇಟೆ ನಾಗರಿಕ ಒಕ್ಕೂಟದ ಕಾರ್ಯದರ್ಶಿ ರುಕ್ಮಾಂಗದ ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]