ಗಾಂಧಿನಗರ: ಎಷ್ಟೇ ನಗರ ನಕ್ಸಲರು (Urban Naxals) ಬಂದರೂ ಗುಜರಾತ್ (Gujarat) ರಾಜ್ಯ ಯುವಜನರ ಜೀವನ ನಾಶ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Naredra Modi) ಎಚ್ಚರಿಸಿದರು.
ನಗರ ನಕ್ಸಲರು ತಮ್ಮ ರೂಪ ಬದಲಿಸಿಕೊಂಡು ರಾಜ್ಯ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಮುಗ್ಧ ಹಾಗೂ ಶಕ್ತಿಯುತ ಯುವಕರು (Youth) ತಮ್ಮನ್ನು ಅನುಸರಿಸುವಂತೆ ದಾರಿ ತಪ್ಪಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ನಮ್ಮ ಯುವ ಪೀಳಿಗೆಯನ್ನ ನಾಶಮಾಡಲು ಬಿಡುವುದಿಲ್ಲ. ದೇಶವನ್ನು ನಾಶ ಮಾಡುವ ಕೆಲಸಕ್ಕೆ ಕೈ ಹಾಕಿರುವ ಅರ್ಬನ್ ನಕ್ಸಲರ ವಿರುದ್ಧ ನಮ್ಮ ಮಕ್ಕಳಿಗೆ ಈಗಲೇ ಎಚ್ಚರಿಕೆ ನೀಡಬೇಕು. ಅವರು ವಿದೇಶಿ ಶಕ್ತಿಗಳ ಏಜೆಂಟ್‌ಗಳಾಗಿದ್ದಾರೆ. ಗುಜರಾತ್ ಅವರ ವಿರುದ್ಧ ತಲೆ ಕೆಡಿಸಿಕೊಳ್ಳುವುದಿಲ್ಲ, ಅಂಥವರನ್ನು ನಾಶ ಮಾಡುತ್ತದೆ ಎಂದು ಕಿಡಿಕಾರಿದರು.
ಇದೇ ವೇಳೆ 2014ರಲ್ಲಿ ನಾನು ಪ್ರಧಾನಿಯಾಗಿ (Prime Minister) ಅಧಿಕಾರ ವಹಿಸಿಕೊಂಡಾಗ ಭಾರತದ ಆರ್ಥಿಕತೆ ವಿಶ್ವದಲ್ಲಿ 10ನೇ ಸ್ಥಾನದಲ್ಲಿತ್ತು. ಆದರೆ ಈಗ 5ನೇ ಸ್ಥಾನದಲ್ಲಿದೆ ಎಂದು ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಇದೇ ಅಕ್ಟೋಬರ್ 1 ರಂದು ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) 5ಜಿ ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ಸರ್ಕಾರದ ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ (National Broadband Mission) ಟ್ವೀಟ್ ಮಾಡಿದೆ.
ಏಷ್ಯಾದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC), ದೂರ ಸಂಪರ್ಕ ಇಲಾಖೆ (DOT) ಹಾಗೂ ಸೆಕ್ಯೂಲರ್ ಆಪರೇಟರ್ಸ್ ಸೋಸಿಯೇಷನ್ ಆಫ್ ಇಂಡಿಯಾ (COAI) ಸಂಯುಕ್ತಾಶ್ರಯದಲ್ಲಿ ಅನಾವರಣಗೊಳ್ಳಲಿದ್ದು, ಈ ಮೂಲಕ ಡಿಜಿಟಲ್ ವೇದಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಇದನ್ನೂ ಓದಿ: ಅಕ್ಟೋಬರ್ ವೇಳೆ ದೇಶದ ಮಹಾನಗರಗಳಲ್ಲಿ 5ಜಿ ಸೇವೆ ಲಭ್ಯ
ಕೇಂದ್ರ ಸರ್ಕಾರ (Central Government) ಅತ್ಯಂತ ಕಡಿಮೆ ಅವಧಿಯಲ್ಲಿ ಶೇ.80 ಪ್ರತಿಶತದಷ್ಟು 5ಜಿ ಸೇವೆ (5G Service) ತಲುಪಿಸುವ ಗುರಿ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿಸಿದ್ದಾರೆ.
ಅನೇಕ ದೇಶಗಳು ಶೇ.40 – 50 ಪ್ರತಿಶತದಷ್ಟು ಗುರಿ ತಲುಪುವುದಕ್ಕೇ ಹಲವು ವರ್ಷಗಳನ್ನು ತೆಗೆದುಕೊಂಡಿವೆ. ಆದರೆ ನಾವು ಟೈಮ್‌ಲೈನ್ ಗುರಿಯಾಗಿಸಿಕೊಂಡಿದ್ದು, ಕೇಂದ್ರ ಸರ್ಕಾರವೂ ನಿರ್ದಿಷ್ಟ ಗುರಿ ನೀಡಿದೆ. ಹಾಗಾಗಿ ನಾವು ಶೇ.80 ಪ್ರತಿಶತದಷ್ಟನ್ನು ತಲುಪಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: 5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ
ಈಗಾಗಲೇ 5ಜಿ ಸೇವೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಇದು 2023 – 2024ರ ನಡುವೆ ಭಾರತಕ್ಕೆ 36.4 ಟ್ರಿಲಿಯನ್ ರೂ.ಗೆ ಆದಾಯ ವೃದ್ಧಿಸುವ ಸಾಧ್ಯತೆಯಿದೆ ಎಂದು ಇತ್ತೀಚಿನ ಜಾಗತಿಕ ಉದ್ಯಮ ಸಂಸ್ಥೆಗಳ ವರದಿ ಅಂದಾಜಿಸಿದೆ.
5ಜಿ ಸೇವೆ ಎಲ್ಲಿ ಸಿಗುತ್ತೆ?
2022ರ ಅಂತ್ಯಕ್ಕೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಆರಂಭವಾಗಲಿದೆ. ಆರಂಭದಲ್ಲಿ ಅಹಮದಾಬಾದ್, ಬೆಂಗಳೂರು (Bengaluru), ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ 5ಜಿ ಸೇವೆ ಲಭ್ಯವಾಗಲಿದೆ.
Live Tv
[brid partner=56869869 player=32851 video=960834 autoplay=true]
ಉಡುಪಿ: ಪ್ರಧಾನಿ ನರೇಂದ್ರಮೋದಿ (Narendra Modi) ಅವರಿಗಿಂತಲೂ ಅಭಿಮಾನಿಗಳೇ ಅವರ ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ವಿವಿಧ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು (Social Activities) ಮಾಡುವ ಮೂಲಕ ತಮ್ಮ ಅಭಿಮಾನ ತೋರುತ್ತಿದ್ದಾರೆ. ಹಾಗೆಯೇ ಉಡುಪಿಯ ಅಭಿಮಾನಿ ಶಿಲ್ಪಾ ಸಾಲಿಯಾನ್ (Shilpa Saliyan) ಅವರು ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದೇಹದಾನ ಮಾಡಿದ್ದಾರೆ.
ಮೋದಿಗಾಗಿ ಪೂಜೆ ಹೋಮ ಹವನ:
ಪ್ರಧಾನಿ ಮೋದಿ (Prime Minister) ಹುಟ್ಟುಹಬ್ಬ ದೇಶದಲ್ಲಿ ಒಂದು ವಾರ ಆಚರಣೆಯಾಗಲಿದೆ. ಪ್ರಧಾನಿ ಮೋದಿಗೆ ದೇಶಾದ್ಯಂತ ಹುಚ್ಚು ಅಭಿಮಾನಿಗಳಿದ್ದಾರೆ. ಈ ನಡುವೆ ಉಡುಪಿಯ ಅಪ್ಪಟ ಅಭಿಮಾನಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ದಿನ ತನ್ನ ದೇಹವನ್ನು ದಾನ ಮಾಡಿದ್ದಾರೆ. ಮಣಿಪಾಲ ಕೆಎಂಸಿ (Manipala KMC Hospital) ವೈದ್ಯಕೀಯ ವಿಭಾಗಕ್ಕೆ ತನ್ನ ದೇಹದಾನ ಮಾಡುವುದಾಗಿ ಸಹಿ ಹಾಕಿದ್ದಾರೆ. ಇದನ್ನೂ ಓದಿ: ಮಹತ್ತರವಾದ ಕಾರಣಕ್ಕಾಗಿ ಮತ್ತೆ ಕ್ರಿಕೆಟ್ ಆಡಲು ಮೈದಾನಕ್ಕಿಳಿದ ಲೆಜೆಂಡ್ ಕ್ರಿಕೆಟಿಗರು
ದೇಹದಾನಕ್ಕಿದೆ ಕಟ್ಟುನಿಟ್ಟಿನ ನಿಯಮ:
ಪ್ರಧಾನಿ ನರೇಂದ್ರ ಮೋದಿಯ ದೊಡ್ಡ ಅಭಿಮಾನಿಯಾಗಿರುವ ಶಿಲ್ಪಾ ಸಾಲಿಯಾನ್ ದೇಹ ದಾನಕ್ಕೆ ನಿರ್ಧಾರ ಮಾಡಿದಾಗ ಸಾಕಷ್ಟು ನಿಯಮಗಳು ಅಡ್ಡಿಯಾದವು. ಗಂಡ, ತಂದೆ – ತಾಯಿ ಮತ್ತು ಕುಟುಂಬಸ್ಥರ ಸಹಿ ಇಲ್ಲದೇ ದೇಹ ದಾನ ಮಾಡಲು ಸಾಧ್ಯವಿಲ್ಲ ಎಂದು ಕೆಎಂಸಿಯ ವೈದ್ಯರು (Doctors) ಹೇಳಿದ್ದರು. ಬಳಿಕ ಇಡೀ ಕುಟುಂಬವನ್ನು ಒಪ್ಪಿಸಿ, ದೇಹ ದಾನದಿಂದ ಮುಂದೆ ವೈದ್ಯಕೀಯ ಲೋಕಕ್ಕೆ ಆಗಬಹುದಾದ ಉಪಯೋಗಗಳನ್ನು ತಿಳಿಸಿ ಒಪ್ಪಿಗೆ ಪಡೆದು ದೇಹದಾನಕ್ಕೆ ಸಹಿ ಮಾಡಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಭೂಕುಸಿತ – 14 ಸಾವು, 10 ಮಂದಿ ನಾಪತ್ತೆ
ದೇಹದಾನದ ಬಳಿಕ ಪಬ್ಲಿಕ್ ಟಿವಿಯೊಂದಿಗೆ (Public TV) ಮಾತನಾಡಿರುವ ಶಿಲ್ಪಾ ಸಾಲಿಯಾನ್, ನಾನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ. ಪ್ರಧಾನಿ ಮೋದಿ ಜೀವನವನ್ನೇ ದೇಶಕ್ಕೋಸ್ಕರ ಮುಡಿಪಾಗಿಟ್ಟಿದ್ದಾರೆ. ಈ ದೇಹ ಸತ್ತ ಮೇಲೆ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ನಾಲ್ಕು ಜನಕ್ಕೆ ಉಪಯೋಗ ಆಗಲಿ ಎಂದು ದೇಹದಾನ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅಂತಹ ವ್ಯಕ್ತಿ ಹಿಂದೆ ದೇಶದ ಪ್ರಧಾನಿಯಾಗಿಲ್ಲ. ಮುಂದೆ ಆಗಲು ಸಾಧ್ಯವಿಲ್ಲ. 75 ವರ್ಷ ಆದ ನಂತರ ಅವರು ನಿವೃತ್ತಿ ಆಗಬಾರದು. ಅವರ ದೇಹದಲ್ಲಿ ಶಕ್ತಿ ಇರುವ ತನಕ ಅವರು ಪ್ರಧಾನಿಯಾಗಿ ಇರಬೇಕು ಎಂದು ಎಂದು ಆಶಿಸಿದ್ದಾರೆ.
ಮುಂದುವರಿದು ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಮೃತ ದೇಹಗಳ ಕೊರತೆ ಇದೆ. ಬೇರೆ ಬೇರೆ ಸಂದರ್ಭಗಳಲ್ಲಿ ನೀವೂ ದೇಹದಾನ ಮಾಡಿದರೆ ಅಧ್ಯಯನಕ್ಕೂ ಅನುಕೂಲವಾಗಲಿದೆ ಎಂದು ಶಿಲ್ಪಾ ಸಾಲಿಯಾನ್ ಸಲಹೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿ ದ್ವೇಷ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದ್ವೇಷವನ್ನು ಹರಡುತ್ತಾ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ. 8 ವರ್ಷಗಳಲ್ಲಿ ಭಾರತವನ್ನು ದುರ್ಬಲಗೊಳಿಸಿದ್ದು, ಪಾಕಿಸ್ತಾನ ಮತ್ತು ಚೀನಾ ಇದರ ಲಾಭ ಪಡೆದುಕೊಳ್ಳುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ದ್ವೇಷ ಬೆಳೆಯುತ್ತಿದೆ. ಹಣದುಬ್ಬರ, ನಿರುದ್ಯೋಗ ಸಮಸ್ಯೆ ಬೆಲೆ ಏರಿಕೆ ಮೊದಲಾದ ಸಮಸ್ಯೆಗಳು ಜನರನ್ನು ದ್ವೇಷದ ಕಡೆ ತಿರುಗುವಂತೆ ಮಾಡುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡೂ ಸೇರಿ ದೇಶವನ್ನು ವಿಭಜನೆ ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಭಯ ಮತ್ತು ದ್ವೇಷದಿಂದ ಇಬ್ಬರು ಕೈಗಾರಿಕೋದ್ಯಮಿಗಳಿಗೆ ಲಾಭವಾಗುತ್ತಿದೆ. ವಿಮಾನ ನಿಲ್ದಾಣ, ಬಂದರು ಇದೆಲ್ಲದರ ಪ್ರಯೋಜನವನ್ನೂ ಅವರೇ ಪಡೆಯುತ್ತಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಲು ಬಿಜೆಪಿ ಕೆಲಸ ಮಾಡುತ್ತಿದೆ. ನಮ್ಮ ಸಿದ್ಧಾಂತ ದೇಶದ ಪ್ರಗತಿಯಿಂದ ಪ್ರತಿಯೊಬ್ಬರು ಪ್ರಯೋಜನ ಪಡೆಯಬೇಕು ಎಂದು ಹೇಳಿದರೆ, ಪ್ರಧಾನಿ ಅವರ ವಿಚಾರ ಧಾರೆ ಉದ್ಯಮಿಗಳು ಮಾತ್ರ ಪ್ರಯೋಜನ ಪಡೆಯಬೇಕು ಎಂದು ಹೇಳುತ್ತದೆ. ಇದರಿಂದಾಗಿಯೇ ಮೋದಿ ಸರ್ಕಾರ ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ದಿನದ 24 ಗಂಟೆಯು ಉದ್ಯಮಿಗಳಿಗಾಗಿಯೇ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಶೋಧ ಕಾರ್ಯಾಚರಣೆಗಳ ಬಗ್ಗೆಯೂ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರು ಮಾತನಾಡುತ್ತಾರೋ ಅವರ ಮೇಲೆ ದಾಳಿ ನಡೆಸಲಾಗುತ್ತಿದೆ. ಇತ್ತೀಚೆಗೆ ನನ್ನನ್ನು 55 ಗಂಟೆ ಕಾಲ ಇ.ಡಿ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿತ್ತು. ಆದರೆ ನಾನು ನಿಮ್ಮ ಇಡಿಗೆ ಹೆದರುವುದಿಲ್ಲ ಎಂದು ಪ್ರಧಾನಿ ಅವರಿಗೆ ಹೇಳಲು ಬಯಸುತ್ತೇನೆ. ಬೇಕಿದ್ದರೆ ನೂರು ವರ್ಷಗಳವರೆಗೂ ಪ್ರಶ್ನೆಗಳನ್ನು ಕೇಳಲಿ ನಾನು ಹೆದರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ `IAC ವಿಕ್ರಾಂತ್’ ಅನ್ನು ಇಂದು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ. ಇದೇ ವೇಳೆ ಭಾರತೀಯ ನೌಕಾಪಡೆಯು ಹೊಸ ಧ್ವಜವನ್ನು ಪರಿಚಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಧ್ವಜವನ್ನೂ ಅನಾವರಣಗೊಳಿಸಿದ್ದಾರೆ.
ಮರಾಠ ಸಾಮ್ರಾಜ್ಯದ ಚಕ್ರವರ್ತಿ ಶಿವಾಜಿಗೆ ಗೌರವ ಸೂಚಿಸುವ ಈ ಧ್ವಜವು ತಮ್ಮ ಆಳ್ವಿಕೆಯ ಕಾಲದಲ್ಲಿ ನೌಕಾಪಡೆಯನ್ನು ಹೊಂದಿದ್ದರು ಎಂಬುದನ್ನು ನೆಪಿಸುತ್ತದೆ. ಈ ನಿಟ್ಟಿನಲ್ಲಿಂದು ಭಾರತೀಯ ನೌಕಾಪಡೆಯು ಹೊಸ ಹೆಜ್ಜೆಯನ್ನಿರಿಸಿದೆ. ಇದನ್ನೂ ಓದಿ: ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ಗೆ ಮೋದಿ ಚಾಲನೆ
ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದರೂ, ಭಾರತೀಯ ನೌಕಾಪಡೆಯ ಧ್ವಜದಲ್ಲಿ ಇನ್ನೂ ಉಳಿದುಕೊಂಡಿದ್ದ ವಸಾಹತುಶಾಹಿ ನೆನಪಿಸುವ ಅಂಶಗಳಿಗೆ ಇಂದು ತೆರೆ ಎಳೆಯಲಾಗಿದೆ. ಹೊಸ ಧ್ವಜ ಪರಿಚಯಿಸುವ ಮೂಲಕ ಗುಲಾಮಗಿರಿಯ ಸಂಕೇತ, ವಸಾಹತುಶಾಹಿಯ ಕುರುಹುಗಳನ್ನು ತೆಗೆದುಹಾಕಲಾಗಿದೆ.
ಭಾರತೀಯ ಕಡಲ ಪರಂಪರೆಗೆ ಅನುಗುಣವಾಗಿ ಈ ನೌಕಾಧ್ವಜ ನಿರ್ಮಾಣಗೊಂಡಿದ್ದು, `ನಿಶಾನ್’ ಎಂದು ಹೆಸರಿಡಲಾಗಿದೆ. ಇದು ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರಕ್ಕೆ ಮತ್ತಷ್ಟು ಪುಷ್ಠಿ ನೀಡುವ ಉದ್ದೇಶವನ್ನೂ ಹೊಂದಿದೆ.
ಈ ಹಿಂದಿನ ಧ್ವಜವು ಬಿಳಿಯ ಬಣ್ಣದಲ್ಲಿದ್ದು, ಲಂಬ ಮತ್ತು ಅಡ್ಡವಾಗಿ ಕೆಂಪು ಪಟ್ಟಿಗಳನ್ನು ಒಳಗೊಂಡಿತ್ತು. ಅದನ್ನು ಸೇಂಟ್ ಜಾರ್ಜ್ ಕ್ರಾಸ್ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷ್ ಆಡಳಿತಗಾರರು ಅದನ್ನು ಹಾಕಿದ್ದರು. ಇದೀಗ ಸೇಂಟ್ ಜಾರ್ಜ್ ಶಿಲುಬೆಯನ್ನ ಹೊಸ ಭಾರತೀಯ ನೌಕಾ ಧ್ವಜದಿಂದ ತೆಗೆದುಹಾಕಲಾಗಿದೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್
ಹೊಸ ಧ್ವಜದ ಬಲಭಾಗದ ಮೂಲೆಯಲ್ಲಿ ಭಾರತೀಯ ನೌಕಾಪಡೆಯ ಹೊಸ ಚಿನ್ಹೆಯನ್ನೂ ಒಳಗೊಂಡಿದೆ. ದೇವನಾಗರಿ ಲಿಪಿಯಲ್ಲಿ `ಸತ್ಯ ಮೇವ ಜಯತೆ’ ಎಂಬ ರಾಷ್ಟ್ರೀಯ ಧ್ಯೇಯವಾಕ್ಯದೊಂದಿಗೆ ಭಾರತೀಯ ರಾಷ್ಟ್ರೀಯ ಲಾಂಚನವೂ ಇದರಲ್ಲಿದೆ. ಇದರ ಅಷ್ಟಭುಜಾಕೃತಿಯು 8 ದಿಕ್ಕುಗಳನ್ನು ಸೂಚಿಸುತ್ತದೆ. ಜೊತೆಗೆ ಶಿವಾಜಿಯ ರಾಜಮುದ್ರೆಯನ್ನೂ ಪರಿಚಯಿಸುತ್ತದೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಜನರನ್ನು ಬಲವಂತವಾಗಿ ಆಹ್ವಾನಿಸಲಾಗುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಗಂಭೀರ ಆರೋಪ ಮಾಡಿದ್ದಾರೆ.
ಕಾರ್ಯಕ್ರಮ ನಡೆಯುವ ಮೈದಾನ ಸಾಕಾಗುತ್ತಾ ಇಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ. ಮೈದಾನಕ್ಕಿಂತ ದೊಡ್ಡ ಜಾಗ ಬೇಕು ಅಂತಾ ಕಾಣಿಸುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಪಿಡಿಒಗಳಿಗೆ ನೋಟಿಸ್ ಕಳುಹಿಸಲಾಗಿದೆ. ಪ್ರತಿ ಗ್ರಾಮದಿಂದ 250 ಜನರನ್ನು ಕರೆತರಲು ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗುಡ್ಡದಲ್ಲಿ ಅನ್ಯಕೋಮಿನ ಜೋಡಿ ಪತ್ತೆ- ವಿದ್ಯಾರ್ಥಿ ತಂಡದಿಂದ ಹಲ್ಲೆ
ಕಂದಾಯ ಇಲಾಖೆಯಿಂದ ವಿಎ ಸೇರಿದಂತೆ ಎಲ್ಲಾ ಅಧಿಕಾರಿಗಳು ಬರಬೇಕು ಅಂತಾ ಸೂಚನೆ ನೀಡಲಾಗಿದೆ. ಗ್ರಾಪಂ ಕಾರ್ಯದರ್ಶಿ, ಲೈನ್ ಮ್ಯಾನ್, ನೀರು ಬಿಡುವವನಿಗೂ ನೋಟಿಸ್ ಹೋಗಿದೆ. ಶಾಲೆ-ಕಾಲೇಜುಗಳಿಗೆ ರಜೆ ನೀಡಿ ಎಲ್ಲಾ ಮಕ್ಕಳೂ ಕಾರ್ಯಕ್ರಮದಲ್ಲಿ ಬರಬೇಕು ಅಂತಾ ತಿಳಿಸಲಾಗಿದೆ. ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿ, ಬ್ಯಾಂಕ್ ಸವಲತ್ತು ಪಡೆದವರನ್ನು ಕರೆತರಬೇಕೆಂದು ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಜಿಲ್ಲಾಧಿಕಾರಿ ಸೂಚನೆ ನೀಡಿದಾಗ ಕೆಳ ಅಧಿಕಾರಿಗಳು ಜನರನ್ನು ಕರೆತರಲೇಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಅವರ ಮನೆಯವರನ್ನಾದರೂ ಕರೆತರಬೇಕು. ಒಂದು ವಾರದಿಂದ ಎಲ್ಲಾ ಅಧಿಕಾರಿಗಳು ಬ್ಯುಸಿ ಇದ್ದಾರೆ. ಎಲ್ಲಾ ಸಿಕ್ಕಸಿಕ್ಕ ಮೀನುಗಾರರಿಗೂ ಕಿಸಾನ್ ಕಾರ್ಡ್ ನೀಡಿ ಕಾರ್ಯಕ್ರಮಕ್ಕೆ ಬರಲು ಸೂಚಿಸಿದ್ದಾರೆ. ಇಷ್ಟೆಲ್ಲಾ ಸೂಚನೆ ನೀಡಿದ ಬಳಿಕ ಜನಸಾಗರವೇ ಬರಲಿದೆ. ಜನರಿಗೆ ಯಾವುದೇ ತೊಂದರೆ ಆಗದಂತೇ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದಯವಿಟ್ಟು ಬೆಂಗಳೂರನ್ನು ಕಾಪಾಡಿ- ಪ್ರಧಾನಿಗೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಮನವಿ
Live Tv
[brid partner=56869869 player=32851 video=960834 autoplay=true]
ಕೋಲಾರ: 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಕ್ಷಮಾಪಣೆ ಪತ್ರ ತಲುಪಿಸಿದರೆ ಮಾತ್ರ ಮಾನನಷ್ಟ ಮೊಕದ್ದಮೆ ವಾಪಸ್ ಪಡೆಯಲಾಗುವುದು ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಕೋಲಾರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಹೇಳಿದಂತೆ ಗುತ್ತಿಗೆದಾರರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡುತ್ತಿದ್ದೇನೆ. ಇಂದು ಭಾನುವಾರ ರಜೆಯ ದಿನವಾದ್ದರಿಂದ ನಾಳೆ ಬೆಳಗ್ಗೆ 11 ಗಂಟೆಗೆ ಮಾನನಷ್ಟ ಮೊಕದ್ದಮ್ಮೆ ಹೂಡಲಿದ್ದು, ಸಂಘದವರಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ
ಒಂದು ವೇಳೆ ಗುತ್ತಿಗೆದಾರರು ರಾಜಿಗೆ ಬಂದ್ರೆ ಪತ್ರದ ಮೂಲಕ ಕ್ಷಮಾಪಣೆ ಪತ್ರ ನೀಡಬೇಕು. ಆರೋಪ ಮಾಡಿದವರು ಪ್ರಧಾನಿಗಳಿಗೆ ನೇರವಾಗಿ ಕ್ಷಮಾಪಣೆ ಪತ್ರ ತಲುಪಿಸಬೇಕು. ಅಲ್ಲದೇ ಲೋಕಾಯುಕ್ತ ಹಾಗೂ ಗವರ್ನರ್‌ಗೆ ತಮ್ಮ ಬಳಿಯಿರುವ ದಾಖಲೆಗಳನ್ನ ನೀಡಿದ್ರೆ ಕೇಸ್ ವಾಪಸ್ ಪಡೆಯಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಇಂಡಿಯಾ- ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್- ಭಾರತದ ಗೆಲುವಿಗೆ ದರ್ಗಾದಲ್ಲಿ ಪ್ರಾರ್ಥನೆ
ನೋಟಿಸ್ ಸರ್ವ್ ಮಾಡಿದ 8 ದಿನಗಳಲ್ಲಿ ದಾಖಲೆ ನೀಡಿದ್ರೆ ಗುತ್ತಿಗೆದಾರರ ಹೇಳಿಕೆ ಆಧರಿಸಿ ಕ್ರಮ ಕೈಗೊಳ್ಳುವ ಕುರಿತು ತೀರ್ಮಾನ ಮಾಡಲಾಗುವುದು. ಒಂದು ವೇಳೆ ದಾಖಲೆ ಒದಗಿಸದಿದ್ದರೆ ಮಾನನಷ್ಟ ಮೊಕದ್ದೊಮ್ಮೆ ಜೊತೆಗೆ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೋಲಾರದಲ್ಲಿ ನಾನು ಹೇಳಿದಂತೆ ಕಾಮಗಾರಿಗಳನ್ನ ಪರಿಶೀಲನೆ ಮಾಡಲಾಗುವುದು. ಆಯಾ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಮುಂದಿನ ವಾರದಲ್ಲಿ ಕಾಮಗಾರಿ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೇ ಡಿಸಿಸಿ ಬ್ಯಾಂಕ್ ಅಕ್ರಮ ಹಾಗೂ ಕಳಪೆ ರಸ್ತೆಗಳ ವಿರುದ್ಧವೂ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ಮುಖಂಡರಿಂದ ರಾಜೀನಾಮೆಗೆ ಒತ್ತಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ವಿರೋಧ ಪಕ್ಷಗಳ ಬಳಿ ಏನಾದ್ರು ದಾಖಲೆಗಳಿದ್ದರೆ ಕೊಡಲಿ. ಅದು ಬಿಟ್ಟು ರಾಜೀನಾಮೆ ಕೇಳುವ ಹಕ್ಕು ಅವರಿಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಪಂಜಾಬ್‍ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ಉಂಟಾದ ಭದ್ರತಾ ವೈಫಲ್ಯಕ್ಕೆ ಫಿರೋಜ್‍ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ನೇರ ಕಾರಣ. ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕರ್ತವ್ಯವನ್ನು ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‍ಗೆ ಸಮಿತಿ ವರದಿ ಸಲ್ಲಿಸಿದೆ.
ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ರಚಿಸಿದ ವಿಶೇಷ ಸಮಿತಿಯೂ ತನ್ನ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠಕ್ಕೆ ಸಲ್ಲಿಸಿದೆ. ವರದಿಯಲ್ಲಿ ಪೊಲೀಸ್ ಭದ್ರತಾ ವೈಫಲ್ಯವನ್ನು ಕಟುವಾಗಿ ಟೀಕಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ವೈಫಲ್ಯ -150 ಅಪರಿಚಿತರ ವಿರುದ್ಧ ಎಫ್‌ಐಆರ್
ವರದಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಫಿರೋಜ್‍ಪುರ ಎಸ್‍ಎಸ್‍ಪಿ ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಸಾಕಷ್ಟು ಬಲ ಲಭ್ಯವಿದ್ದರೂ ಅವರು ಭದ್ರತೆ ನೀಡುವಲ್ಲಿ, ಪ್ರತಿಭಟನೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಪ್ರಧಾನಿ ಮಾರ್ಗದ ಬಗ್ಗೆ 2 ಗಂಟೆಗಳ ಮೊದಲು ಅವರಿಗೆ ತಿಳಿಸಲಾಗಿದ್ದರೂ ಅವರು ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಉಲ್ಲೇಖಿಸಿದೆ.
ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ವೈಫಲ್ಯ ಉಂಟಾಗಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ನ್ಯಾಯಾಲಯ ಮೇಲುಸ್ತುವಾರಿಯಲ್ಲಿ ವಿಶೇಷ ಸಮಿತಿ ರಚಿಸಿ ತನಿಖೆಗೆ ಸೂಚಿಸಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್‍ಗೆ ಸಹಕರಿಸಲು ಮತ್ತು ಪಂಜಾಬ್ ಪೊಲೀಸ್ ಮತ್ತು ವಿಶೇಷ ರಕ್ಷಣೆ (SPG) ಮತ್ತು ಇತರ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳ ಅಧಿಕಾರಿಗಳಿಗೆ ಅಗತ್ಯ ನೆರವು ನೀಡುವಂತೆ ಪೀಠವು ನಿರ್ದೇಶನ ನೀಡಿತು.
Live Tv
[brid partner=56869869 player=32851 video=960834 autoplay=true]
ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‍ನಲ್ಲಿ ಬಿಜೆಪಿಯನ್ನು ಸೋಲಿಸುವ ಕಾರ್ಯದಲ್ಲಿ ನಿರತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿಯವರೊಂದಿಗೆ ಸ್ಪರ್ಧೆ ಮಾಡಿ ಪೈಪೋಟಿ ನೀಡಲು ಶ್ರಮಿಸುತ್ತಿದ್ದೇನೆ ಹೊರತು ಪ್ರಧಾನಿಯಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ದೆಹಲಿ ಹೊಸ ಮದ್ಯನೀತಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಿಬಿಐ ತನಿಖೆ ಎದುರಿಸುತ್ತಿದ್ದು, ಅವರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಪಡುತ್ತಿರುವ ಕೇಜ್ರಿವಾಲ್ ಅವರು, ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ತನ್ನ ರಾಜಕೀಯ ವಿರೋಧಿಗಳನ್ನು ಟಾರ್ಗೆಟ್ ಮಾಡಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮನೀಶ್ ಸಿಸೋಡಿಯಾ ಭಾರತ ರತ್ನಕ್ಕೆ ಅರ್ಹರು: ಅರವಿಂದ್ ಕೇಜ್ರಿವಾಲ್
ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಬಹುದು ಎಂಬ ಮಾತಗಳನ್ನು ನಾನು ಕೇಳಿಸಿಕೊಳ್ಳುತ್ತಿದ್ದೇನೆ. ಯಾರಿಗೆ ಗೊತ್ತು, ನನ್ನನ್ನೂ ಕೂಡ ಬಂಧಿಸಬಹುದು. ಇದೆಲ್ಲವನ್ನೂ ಗುಜರಾತ್ ಚುನಾವಣೆಗಾಗಿ ಮಾಡಲಾಗುತ್ತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಪಾಟ್ನಾ: ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡು ಆರ್‌ಜೆಡಿ ಹಾಗೂ ಕಾಂಗ್ರೆಸ್ ಮೈತ್ರಿಯೊಂದಿಗೆ ಬಿಹಾರದಲ್ಲಿ ನೂತನ ಸರ್ಕಾರ ಸ್ಥಾಪಿಸುವ ಮೂಲಕ 8ನೇ ಬಾರಿಗೆ ಸಿಎಂ ಆಗಿರುವ ನಿತೀಶ್ ಕುಮಾರ್ ಮುಂದಿನ ಪ್ರಧಾನಿ ಅಭ್ಯರ್ಥಿಯಾಗುವ ಬಗ್ಗೆ ಮತ್ತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
#WATCH | When asked about his role in Opposition unity at the national level, Bihar CM Nitish Kumar says, "We would want to unite everyone. I am doing positive work. I am receiving a lot of phone calls, I am doing everything. I will do everything but first I will do my work here" pic.twitter.com/oQ0JyNF2LY
2024ಕ್ಕೆ ನಿತೀಶ್ ಕುಮಾರ್ ಮುಂದಿನ ಪ್ರಧಾನಿಯಾಗುತ್ತಾರೆ ಎನ್ನುವ ಹೇಳಿಕೆಗಳಿಗೆ ತೆರೆ ಎಳೆದಿದ್ದು, ಪ್ರಸ್ತುತ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರತ್ನಿಸುತ್ತಿದ್ದೇವೆ. ಅದಕ್ಕಾಗಿ ಎಲ್ಲ ಪಕ್ಷಗಳೂ ಜೊತೆಗೂಡಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ. ಪ್ರಧಾನಿ ಹುದ್ದೆಯ ಆಕಾಂಕ್ಷೆ ನನ್ನ ಮನಸ್ಸಿನಲ್ಲಿ ಇಲ್ಲವೆಂದು ಹೇಳಿದ್ದಾರೆ. ಇದನ್ನೂ ಓದಿ: 75th Independence Day – ನ್ಯೂಯಾರ್ಕ್ ನದಿ ತಟದಲ್ಲಿ ಹಾರಾಡಲಿದೆ 220 ಅಡಿ ಉದ್ದದ ತ್ರಿವರ್ಣ ಧ್ವಜ
ವಿರೋಧ ಪಕ್ಷಗಳಿಂದ ನನಗೆ ಸಾಕಷ್ಟು ಒತ್ತಾಯವಿದೆ. ಮುಂದಿನ ಪ್ರಧಾನಿ ಅಭ್ಯರ್ಥಿಯಾಗುವಂತೆ ಒತ್ತಾಯಿಸಿ ಸಾಕಷ್ಟು ದೂರವಾಣಿ ಕರೆಗಳೂ ಬರುತ್ತಿವೆ. ಆದರೆ ಮೊದಲು ನಾನು ನನ್ನ ಕೆಲಸವನ್ನು ಮುಗಿಸುತ್ತೇನೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
#WATCH | "I say this with folded hands, I have no such thoughts…My work is to work for everyone. I will make an effort to see that all the Opposition parties work together. If they do, it will be good..," says Bihar CM Nitish Kumar when asked that he is being seen as a PM face pic.twitter.com/3yYnOPMT3c
ಬಿಜೆಪಿ ಮೈತ್ರಿ ಕಡಿದುಕೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ನಿತೀಶ್ ಕುಮಾರ್, ಮೋದಿ ಗೆದ್ದಿರುವುದು 2014ರಲ್ಲಿ 2024ರಲ್ಲಿ ಅಲ್ಲ ಎಂದಿದ್ದರು. ಇದೇ ವೇಳೆ ನೀವು ಪ್ರಧಾನಿ ಅಭ್ಯರ್ಥಿಯಾಗುತ್ತೀರಾ? ಎಂಬ ಪ್ರಶ್ನೆಗೆ, `ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ’ ಎಂದೂ ಸ್ಪಷ್ಟನೆ ನೀಡಿದ್ದರು.
ಈ ಕುರಿತು ಮತ್ತೆ ಪ್ರತಿಕ್ರಿಯೆ ನೀಡಿರುವ ನಿತೀಶ್, ಅದು ನನ್ನ ಮನಸ್ಸಿನಲ್ಲಿ ಇಲ್ಲ. ಜನರು ಏನೇ ಹೇಳಿದರೂ, ನನಗೆ ಹತ್ತಿರ ಇರುವ ಜನರು ಹೇಳಿದರೂ ಕೂಡ, ಆ ಬಗ್ಗೆ ಆಲೋಚನೆ ಇಲ್ಲ. ಆದರೆ ಎಲ್ಲ ವಿರೋಧ ಪಕ್ಷಗಳು ಜತೆಯಾಗಿ ಹೋಗುವಂತಾದರೆ ಬಹಳ ಒಳ್ಳೆಯದು. ಅದನ್ನು ಸಾಧ್ಯವಾಗುವಂತೆ ನೋಡಿಕೊಳ್ಳುವುದು ತಮ್ಮ ಕೆಲಸ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ದಾದಾ – ಭಾರತ ಮಹಾರಾಜರ ರಾಜನಾದ ಗಂಗೂಲಿ
ನಾವೆಲ್ಲರೂ ಸೇರಿ ಜನರ ಸಮಸ್ಯೆಗಳು ಮತ್ತು ಉತ್ತಮ ಸಾಮಾಜಿಕ ಪರಿಸರವನ್ನು ನಿರ್ಮಿಸಲು ಸಾಧ್ಯವೇ ಎಂಬ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ. ನಾವು ಎಲ್ಲರನ್ನೂ ಒಟ್ಟಿಗೆ ಸೇರಿಸಲು ಬಯಸಿದ್ದೇವೆ. ನಾನು ಸಕಾರಾತ್ಮಕ ಕೆಲಸ ಮಾಡುತ್ತಿದ್ದೇನೆ. ನನಗೆ ಸಾಕಷ್ಟು ಕರೆಗಳು ಬರುತ್ತಿವೆ. ಆದರೆ ಇಲ್ಲಿ ಮೊದಲು ನನ್ನ ಕೆಲಸ ಮುಗಿಸುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಕೈ ಮುಗಿದು ಹೇಳುತ್ತೇನೆ. ನನ್ನಲ್ಲಿ ಅಂತಹ ಆಲೋಚನೆಗಳಿಲ್ಲ. ಸದ್ಯ ಎಲ್ಲರಿಗಾಗಿ ಕೆಲಸ ಮಾಡುವುದೇ ನನ್ನ ಕೆಲಸ. ಎಲ್ಲ ವಿರೋಧ ಪಕ್ಷಗಳು ಜತೆಗೂಡಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಹಾಗೇ ಮಾಡಿದರೆ ಎಲ್ಲವೂ ಒಳ್ಳೆಯದಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ ಇಲ್ಲ, ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ: ಅರುಣ್ ಸಿಂಗ್
ಅಲ್ಲದೇ ಆರ್‌ಜೆಡಿಯು 2020ರ ಚುನಾವಣಾ ಪ್ರಚಾರ ಸಮಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸ್ಥಾಪಿಸುವ ಭರವಸೆ ನೀಡಿತ್ತು. ಅದರಂತೆ ನಿತೀಶ್‌ಕುಮಾರ್ ಅವರು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.
ಇದಕ್ಕೆ ನಿತೀಶ್ ಕುಮಾರ್ ನಾವು ಎಲ್ಲ ರೀತಿಯಲ್ಲಿ ಕೆಲಸ ಮಾಡಲಿದ್ದು, ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]