Tag: prime minister

  • ಬೆಂಗ್ಳೂರಿಗೆ ಮೋದಿ ಆಗಮನ – BMTC, KSRTC ಬಸ್ ಸಂಚಾರ 2 ಗಂಟೆ ಸ್ಥಗಿತ

    ಬೆಂಗ್ಳೂರಿಗೆ ಮೋದಿ ಆಗಮನ – BMTC, KSRTC ಬಸ್ ಸಂಚಾರ 2 ಗಂಟೆ ಸ್ಥಗಿತ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದು ರಾಜಧಾನಿ ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ಗೆ ಬರುವ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವನ್ನು 2 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.

    ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೂ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ರೈಲಿನೊಳಗಡೆಯೇ ವ್ಯಕ್ತಿಯ ಬರ್ಬರ ಹತ್ಯೆ

    ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬರುವ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಮೆಜೆಸ್ಟಿಕ್ ಬರುವ ಪ್ರಯಾಣಿಕರನ್ನು ಹತ್ತಿರದ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಹಿನ್ನಲೆ ಮೆಜೆಸ್ಟಿಕ್‌ಗೆ ಬರುವ ಬರುವ ಬಸ್ ಸಂಚಾರ 2 ಗಂಟೆ ಸ್ಥಗಿತ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಭಯಂಕರವಾಗಿ ಆಡಿದ್ರೂ ಭಾರತ ಸೋಲೋದಕ್ಕೆ ಅರ್ಹವಾಗಿತ್ತು- ಅಖ್ತರ್ ಟೀಕೆ

    ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ನಿಂದ ಸಾರಿಗೆ ನಿಗಮಕ್ಕೆ ಮನವಿ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರು ಸಹಕರಿಸುವಂತೆ ಸಾರಿಗೆ ಇಲಾಖೆಯೂ ಮನವಿ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಬಡವರಿಗೆ 3 ಸಾವಿರ ಮನೆ ವಿತರಿಸಿದ ಪ್ರಧಾನಿ ಮೋದಿ

    ಬಡವರಿಗೆ 3 ಸಾವಿರ ಮನೆ ವಿತರಿಸಿದ ಪ್ರಧಾನಿ ಮೋದಿ

    ನವದೆಹಲಿ: ಕೊಳೆಗೇರಿ ಪುನರ್ವಸತಿ (Slum Rehabilitation) ಯೋಜನೆಯ ಭಾಗವಾಗಿ ದೆಹಲಿಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಬಡವರಿಗೆ ಹೊಸದಾಗಿ ನಿರ್ಮಿಸಲಾದ 3,024 ಮನೆಗಳನ್ನ ಫ್ಲಾಟ್‌ಗಳನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಹಸ್ತಾಂತರಿಸಿದ್ದಾರೆ.

    ಇಂದು ದೆಹಲಿಯಲ್ಲಿ (NewDelhi) ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಫಲಾನುಭವಿಗಳಿಗೆ ಮನೆ ಕೀಲಿಗಳನ್ನ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: 132 ಕೃತ್ಯಗಳಲ್ಲಿ ಭಾಗಿಯಾಗಿದ್ದ ಬೆಳಗಾವಿಯ 12 ಆರೋಪಿಗಳು ಗಡಿಪಾರು

    ಈ ಬೆಳವಣಿಗೆಯು ಕೊಳೆಗೇರಿ ನಿವಾಸಿಗಳಿಗೆ (Slum People) ಮಾಲೀಕತ್ವ ಹಾಗೂ ಭದ್ರತೆಯ ಭಾವನೆ ತರುತ್ತದೆ ಎಂದು ಈ ಹಿಂದೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಹೇಳಿತ್ತು. ಇದನ್ನೂ ಓದಿ: 132 ಕೃತ್ಯಗಳಲ್ಲಿ ಭಾಗಿಯಾಗಿದ್ದ ಬೆಳಗಾವಿಯ 12 ಆರೋಪಿಗಳು ಗಡಿಪಾರು

    ದೆಹಲಿ ಅಭಿವೃದ್ಧಿ ಪ್ರಾಧಿಕಾರವು (DDA) ಸಹ ಪ್ರತಿಯೊಬ್ಬರಿಗೂ ಕೊಳೆಗೇರಿ ಪುನರ್ವಸತಿ ಯೋಜನೆ ಅಡಿಯಲ್ಲಿ 376 ಜುಗ್ಗಿ-ಜೋಪ್ರಿ (Slum) ಕ್ಲಸ್ಟರ್‌ಗಳಲ್ಲಿ ವಸತಿ ಕಲ್ಪಿಸುವ ಉದ್ದೇಶ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.

    ಕಾರ್ಯಕ್ರಮದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮೋರ್ಬಿ ತೂಗು ಸೇತುವೆ ದುರಂತಕ್ಕೆ 135 ಬಲಿ – ಸಂತ್ರಸ್ತರಿಗೆ ಪ್ರಧಾನಿ ಮೋದಿ ಸಾಂತ್ವನ

    ಮೋರ್ಬಿ ತೂಗು ಸೇತುವೆ ದುರಂತಕ್ಕೆ 135 ಬಲಿ – ಸಂತ್ರಸ್ತರಿಗೆ ಪ್ರಧಾನಿ ಮೋದಿ ಸಾಂತ್ವನ

    ಗಾಂಧಿನಗರ: ಮೋರ್ಬಿ ತೂಗುಸೇತುವೆ ದುರಂತ (Morbi Bridge Collapse) ಸಂಬಂಧ ರಕ್ಷಣಾ ಕಾರ್ಯಾಚರಣೆ ಬಹುತೇಕ ಅಂತ್ಯಗೊಂಡಿದೆ. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.

    ಮೃತರ ಕುಟುಂಬಗಳಿಗೆ ಗುಜರಾತ್ ಸರ್ಕಾರ (Gujarat Government) 5.40 ಕೋಟಿ ಪರಿಹಾರ ವಿತರಿಸಿದೆ. ನಾಳೆ ಗುಜರಾತ್‌ನಲ್ಲಿ ಶೋಕಾಚರಣೆಗೆ ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ, ಇವತ್ತು ಮೋರ್ಬಿಗೆ ಪ್ರಧಾನಿ ಮೋದಿ (Narendra Modi) ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ನಮಗೆ ಪ್ರಧಾನಿ ಬೇಕು, ಜೋಕರ್ ಅಲ್ಲ – `ಗೋ-ಬ್ಯಾಕ್ ಮೋದಿ’ ಅಭಿಯಾನ

    ಎಸ್‌ಪಿ ಕಚೇರಿಯಲ್ಲಿ ಸಿಎಂ (Chief Minister) ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಮೋದಿ ಆಗಮನ ಕಾರಣ ನಿನ್ನೆ ರಾತ್ರಿ ತರಾತುರಿಯಲ್ಲಿ ಮೋರ್ಬಿ ಸರ್ಕಾರಿ ಆಸ್ಪತ್ರೆಗೆ (Hospital) ಸುಣ್ಣ-ಬಣ್ಣ ಬಳಿದಿದ್ದು, ವಿಪಕ್ಷಗಳಿಗೆ ಆಹಾರವಾಗಿದೆ. ದುರಂತಕ್ಕೆ ಕಾರಣರಾದವರ ವಿರುದ್ಧ ಈವರೆಗೂ ಯಾವುದೇ ಕ್ರಮ ಇಲ್ಲ. ಆದ್ರೆ ಫೋಟೋಶೂಟ್‌ಗಾಗಿ ಹೇಗೆಲ್ಲಾ ಮಾಡ್ತಿದ್ದಾರೆ ಎಂದು ಎಎಪಿ (AAP) ಕಿಡಿಕಾರಿದೆ. ಇದನ್ನೂ ಓದಿ: ಮೋದಿ ಬರ್ತಾರೆ ಅಂತ ರಾತ್ರೋರಾತ್ರಿ ಆಸ್ಪತ್ರೆ ಕ್ಲೀನ್

    ಭಾರೀ ಭ್ರಷ್ಟಾಚಾರದ ಕಾರಣ ಈ ದುರಂತ ಸಂಭವಿಸಿದೆ. ಇದು ಸರ್ಕಾರವೇ ನಡೆಸಿದ ಸರ್ಕಾರಿ ಕೊಲೆ ಎಂದು ಸಿಎಂ ಕೇಜ್ರಿವಾಲ್ (Arvind Kejriwal) ಆಪಾದಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇದನ್ನ ನಾನು ರಾಜಕೀಯಗೊಳಿಸಲು ಬಯಸಲ್ಲ ಎಂದು ಮೃದುಸ್ವಭಾವ ತೋರಿಸಿದ್ದಾರೆ.

    ಈ ಮಧ್ಯೆ ಮೋರ್ಬಿ ದುರಂತದ ಬಗ್ಗೆ ಸುಪ್ರೀಂಕೋರ್ಟ್ (Supreme Court) ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತಮಟ್ಟದ ತನಿಖೆಗೆ ಕೋರಿ ವಕೀಲರೊಬ್ಬರು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆಗೆ ಸಮ್ಮತಿ ಸೂಚಿಸಿದೆ. ನವೆಂಬರ್ 14ರಂದು ಸುಪ್ರೀಂಕೋರ್ಟ್ ಈ ಅರ್ಜಿ ವಿಚಾರಣೆ ನಡೆಸಲಿದೆ.

    Live Tv
    [brid partner=56869869 player=32851 video=960834 autoplay=true]

  • ನಮಗೆ ಪ್ರಧಾನಿ ಬೇಕು, ಜೋಕರ್ ಅಲ್ಲ – `ಗೋ-ಬ್ಯಾಕ್ ಮೋದಿ’ ಅಭಿಯಾನ

    ನಮಗೆ ಪ್ರಧಾನಿ ಬೇಕು, ಜೋಕರ್ ಅಲ್ಲ – `ಗೋ-ಬ್ಯಾಕ್ ಮೋದಿ’ ಅಭಿಯಾನ

    ಗಾಂಧಿನಗರ: ಮೋರ್ಬಿಯಲ್ಲಿ ತೂಗು ಸೇತುವೆ (MorbiBridge) ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ (Narendra Modi) ಮತ್ತು ಗುಜರಾತ್ ಸರ್ಕಾರದ (Gujarat Government) ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

    ತೂಗು ಸೇತುವೆ ಕುಸಿದು 135 ಮಂದಿ ಮೃತಪಟ್ಟಿದ್ದಾರೆ, ಅವರಲ್ಲಿ 47 ಮಕ್ಕಳಿದ್ದಾರೆ. ರಕ್ಷಣೆ ಮಾಡಿರುವ 100ಕ್ಕೂ ಹೆಚ್ಚು ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಸಂತ್ರಸ್ತರನ್ನ ಭೇಟಿ ಮಾಡಲು ತೆರಳಿದ್ದಾರೆ. ಮೋರ್ಬಿ ಆಸ್ಪತ್ರೆಗೆ (Morbi Hospital) ಹಾಗೂ ತೂಗು ಸೇತುವೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆಯೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಮೋದಿ ಬರ್ತಾರೆ ಅಂತ ರಾತ್ರೋರಾತ್ರಿ ಆಸ್ಪತ್ರೆ ಕ್ಲೀನ್

    ಸಾಮಾಜಿಕ ಜಾಲತಾಣದಲ್ಲಿ ಬಾಯ್‌ಕಾಟ್ ಮೋದಿ, ಬಾಯ್‌ಕಾಟ್ ಬಿಜೆಪಿ (BJP) ಹಾಗೂ ಗೋ ಬ್ಯಾಕ್ ಮೋದಿ (Go-Back-Modi) ಅಭಿಯಾನ ಆರಂಭಿಸಿದ್ದು, ತೀವ್ರವಾಗಿ ಖಂಡಿಸಿದ್ದಾರೆ. `ಭಾರತಕ್ಕೆ ಪ್ರಧಾನಿ ಬೇಕು, ಜೋಕರ್ ಬೇಡ, ಫ್ಯಾಷನ್ ಡಿಸೈನರ್ ಬೇಡ, ಪ್ರಧಾನಿ ಮೋದಿ ಅವಧಿಯಲ್ಲಿ ದೇಶದಲ್ಲೇ ಅತಿಹೆಚ್ಚು ಭ್ರಷ್ಟ ಅಧಿಕಾರಿಗಳಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ಅತಿಥಿಯಾಗಿ ಬೆಂಗಳೂರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್

    ಗುಜರಾತಿನಲ್ಲಿ ನಡೆದ ದುರಂತದಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ನಿಮ್ಮ ಗಮನ ಮಾತ್ರ ಚುನಾವಣೆಯ ಮೇಲಿದೆ. ಇದು ಮೋದಿ ಅವರಿಗೆ ನಾಚಿಗೇಡಿನ ಸಂಗತಿ ಎಂದು ಕಿಡಿ ಕಾರಿದ್ದಾರಲ್ಲದೇ ಪ್ರಾಣ ಕಳೆದುಕೊಂಡವರಿಂದಾಗಿ ಅವರಿಗೆ 134 ಮತಗಳು ನಷ್ಟವಾಗಿದೆ ಎಂಬ ಚಿಂತೆ ಅವರಿಗಿದೆ ಎಂದು ಟೀಕಿಸಿದ್ದಾರೆ.

    ನಮಗೆ ಪ್ರಧಾನಿ ಬೇಕಾಗಿದೆಯೇ ಹೊರತು ಸ್ವಂತ ದೇಶದ ಜನರ ಜೀವಗಳ ಜೊತೆ ಚೆಲ್ಲಾಟ ಆಡೋರು ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಹೆಂಡ್ತಿ ಅಟ್ಯಾಕ್ ಮಾಡಿದ್ದಾಳೆ ಕಾಪಾಡಿ – ಪ್ರಧಾನಿಗೆ ಟ್ವೀಟ್ ಮಾಡಿದ ಬೆಂಗಳೂರು ಟೆಕ್ಕಿ

    ನನ್ನ ಹೆಂಡ್ತಿ ಅಟ್ಯಾಕ್ ಮಾಡಿದ್ದಾಳೆ ಕಾಪಾಡಿ – ಪ್ರಧಾನಿಗೆ ಟ್ವೀಟ್ ಮಾಡಿದ ಬೆಂಗಳೂರು ಟೆಕ್ಕಿ

    ಬೆಂಗಳೂರು: ನನ್ನ ಹೆಂಡತಿ (Wife) ಚಾಕುವಿನಿಂದ (Knife) ನನ್ನ ಮೇಲೆ ದಾಳಿ ನಡೆಸಿದ್ದಾಳೆ. ನನ್ನನ್ನು ಕಾಪಾಡಿ ಎಂದು ಬೆಂಗಳೂರಿನ (Bengaluru) ಯದುನಂದನ್ ಆಚಾರ್ಯ ಪ್ರಧಾನಿ ಕಾರ್ಯಾಲಯದ (PMO Office) ಮೊರೆ ಹೋಗಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಮೇಲೆ ದಾಳಿ ಆಗಿದೆ. ಆದ್ರೆ ಬಹುಷಃ ನನಗೆ ಯಾರು ಹೆಲ್ಪ್ ಮಾಡಲ್ಲ. ಯಾಕಂದ್ರೆ ನಾನೊಬ್ಬ ಪುರುಷ. ನನ್ನ ಹೆಂಡತಿ ನನ್ನನ್ನು ಚಾಕುವಿನಿಂದ ಇರಿದಿದ್ದಾಳೆ. ಇದೇನಾ ನಾರಿ ಶಕ್ತಿ? ನನ್ನ ಕೈಯಲ್ಲಿ ರಕ್ತ ಬರ್ತಿದೆ. ನನ್ನ ಪತ್ನಿ ವಿರುದ್ಧ ಗೃಹ ಹಿಂಸೆ ಕೇಸ್ ದಾಖಲಿಸ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್‌ಗೆ ಬೌಲಿಂಗ್‌ ಮಾಡಿದ ಹರ್ಭಜನ್‌ ಸಿಂಗ್‌ʼ

    ಈ ಟ್ವೀಟ್‌ ಅನ್ನು ಪಿಎಂಒ, ಕೇಂದ್ರ ಮಂತ್ರಿ ಕಿರಣ್ ರಿಜಿಜು ಹಾಗೂ ಬೆಂಗಳೂರು ಪೊಲೀಸ್ ಕಮೀಷನರ್‌ಗೆ (Bangaluru Police Commissioner) ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಕಮೀಷನರ್, ಏನಾಯ್ತು ಎಂದು ಠಾಣೆಗೆ ಬಂದು ದೂರು ನೀಡಿ ಎಂದು ಪ್ರತಿಕ್ರಿಯಿಸಿದ್ದಾರೆ. ನೊಂದ ಪತಿಯರು ಯದುನಂದನ್ ಬೆಂಬಲಿಸಿ ಸಾಕಷ್ಟು ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 3ನೇ ಕಿಂಗ್ ಚಾರ್ಲ್ಸ್‌ರಿಂದ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ನೇಮಕ

    3ನೇ ಕಿಂಗ್ ಚಾರ್ಲ್ಸ್‌ರಿಂದ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ನೇಮಕ

    ಲಂಡನ್: ಭಾರತ ಮೂಲದ ರಿಷಿ ಸುನಾಕ್ (Rishi Sunak) ಅವರನ್ನು ಬ್ರಿಟನ್ ಪ್ರಧಾನಿಯಾಗಿ (British Prime Minister) 3ನೇ ಕಿಂಗ್ ಚಾರ್ಲ್ಸ್ (King Charles III) ಅವರು ಮಂಗಳವಾರ ನೇಮಕ ಮಾಡಿದ್ದಾರೆ. ಇದೀಗ ಸುನಾಕ್ ಬ್ರಿಟನ್ ಪ್ರಧಾನಿಯಾದ ಮೊದಲ ಭಾರತೀಯ ವ್ಯಕ್ತಿ ಮಾತ್ರವಲ್ಲದೇ ಅತ್ಯಂತ ಕಿರಿಯ ಯುಕೆ ಪಿಎಂ ಎನಿಸಿಕೊಂಡಿದ್ದಾರೆ.

    ಸುನಾಕ್ ಅವರನ್ನು ಬ್ರಿಟನ್ ಪ್ರಧಾನಿಯಾಗಿ ಆಯ್ಕೆ ಮಾಡಲು ಭಾರೀ ಬೆಂಬಲ ವ್ಯಕ್ತವಾದ ಹಿನ್ನೆಲೆ ಪೆನ್ನಿ ಮೊರ್ಡಂಟ್ ಪ್ರಧಾನಿ ಹುದ್ದೆಯ ರೇಸ್‌ನಿಂದ ಹಿಂದೆ ಸರಿದರು. ಬಳಿಕ ಸುನಾಕ್ ಸೋಮವಾರ ಅಧಿಕೃತವಾಗಿ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದರು.

    ಬ್ರಿಟನ್ ಪ್ರಧಾನಿಯಾಗಿ ನೇಮಕಗೊಂಡ ಬಳಿಕ ದೇಶವನ್ನುದ್ದೇಶಿಸಿ ತಮ್ಮ ಮೊದಲ ಭಾಷಣವನ್ನು ಮಾಡಿದ ಸುನಾಕ್, ಇದೀಗ ನಮ್ಮ ದೇಶವು ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಯುದ್ಧ ಸಾರಿ, ವಿಶ್ವದಾದ್ಯಂತ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿದ್ದಾರೆ. ಲಿಜ್ ಟ್ರಸ್ ಅವರು ಈ ದೇಶದ ಆರ್ಥಿಕ ಗುರಿಗಳಿಗಾಗಿ ಕೆಲಸ ಮಾಡುವುದು ತಪ್ಪಲ್ಲ, ನಾನು ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಕೆಲವು ತಪ್ಪುಗಳನ್ನು ಮಾಡಲಾಗಿದೆ. ಅದು ಕೆಟ್ಟ ಉದ್ದೇಶದಿಂದ ಅಲ್ಲ, ವಾಸ್ತವವಾಗಿ ವಿರುದ್ಧವಾಗಿ, ಅದೇನೇ ಇದ್ದರೂ ತಪ್ಪೇ ಆಗಿದೆ ಎಂದರು. ಇದನ್ನೂ ಓದಿ: ಗುಜರಾತ್‌ನಲ್ಲಿ ಕೋಮು ಘರ್ಷಣೆ, ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ ದಾಳಿ- 19 ಮಂದಿ ವಶ

    ಇದೀಗ ಎಲ್ಲಾ ತಪ್ಪುಗಳನ್ನು ಸರಿಪಡಿಸಲು ನಾನು ಪ್ರಧಾನಿಯಾಗಿ ನೇಮಕಗೊಂಡಿದ್ದೇನೆ. ನಾನು ನಮ್ಮ ದೇಶವನ್ನು ಕೇವಲ ಮಾತಿನಿಂದ ಅಲ್ಲ, ಬದಲಿಗೆ ಕೆಲಸ ಮಾಡುವ ಮೂಲಕ ಒಂದುಗೂಡಿಸುತ್ತೇನೆ. ಇದಕ್ಕಾಗಿ ನಾನು ಹಗಲಿರುಳು ಶ್ರಮಿಸುತ್ತೇನೆ. ಈಗ ನಂಬಿಕೆ ಗಳಿಸಿದ್ದೇನೆ, ಅದನ್ನು ಹಾಗೆಯೇ ಕಾಪಾಡಿಕೊಳ್ಳುತ್ತೇನೆ ಎಂದು ಸುನಾಕ್ ನುಡಿದರು. ಇದನ್ನೂ ಓದಿ: ಪುನಾರಂಭಗೊಂಡ ವಾಟ್ಸಪ್ – ಸೋಶಿಯಲ್ ಮೀಡಿಯಾಗಳಲ್ಲಿ ತರಹೇವಾರು ಮೀಮ್ಸ್

    Live Tv
    [brid partner=56869869 player=32851 video=960834 autoplay=true]

  • ಅಯೋಧ್ಯೆಯಲ್ಲಿ ಮೋದಿ ದೀಪಾವಳಿ- ರಾಮ ಮಂದಿರ ಕಾಮಗಾರಿ ಪರಿಶೀಲನೆ

    ಅಯೋಧ್ಯೆಯಲ್ಲಿ ಮೋದಿ ದೀಪಾವಳಿ- ರಾಮ ಮಂದಿರ ಕಾಮಗಾರಿ ಪರಿಶೀಲನೆ

    ನವದೆಹಲಿ: ಬೆಳಕಿನ ಹಬ್ಬ ಅಂದ್ರೆ ಅದು ದೀಪಾವಳಿ (Deepavali). ಈ ದೀಪಾವಳಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಅದರಂತೆ ಇಂದು ರಾಮ ಜನ್ಮಭೂಮಿ ಅಯೋಧ್ಯೆ (Ayodhya) ಗೆ ಭೇಟಿ ನೀಡುತ್ತಿದ್ದು, ಬೆಳಕಿನ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.

    ಹೌದು. ಪ್ರತಿ ವರ್ಷದಂತೆ ಪ್ರಧಾನಿ ನರೇಂದ್ರ ಮೋದಿ ನಾಳೆ ದೇಶದ ಸೈನಿಕರ ಜೊತೆಗೆ ದೀಪಾವಳಿಯನ್ನು ಆಚರಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಇಂದು ಅಯೋಧ್ಯೆಯಲ್ಲಿ ಬೆಳಕಿನ ಹಬ್ಬಕ್ಕೆ ಚಾಲನೆ ನೀಡುತ್ತಿದ್ದಾರೆ. ಅಲ್ಲಿ ನಡೆಯುವ ದಾಖಲೆಯ ದೀಪೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಅಯೋಧ್ಯೆಯಲ್ಲಿ ವಿಶೇಷವಾಗಿ ದೀಪಾವಳಿಯನ್ನು ಉತ್ತರ ಪ್ರದೇಶ (Uttar Pradesh) ಸರ್ಕಾರ ಆಚರಿಸುತ್ತಿದೆ. ಸರಯೂ ನದಿ ನಟದಲ್ಲಿ 15 ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಹೊಸ ಗಿನ್ನಿಸ್ ದಾಖಲೆ ಸೃಷ್ಟಿ ಮಾಡಲಾಗುತ್ತಿದೆ. ಈಗಾಗಲೇ ಗಿನ್ನಿಸ್ ರೆಕಾರ್ಡ್ ತಂಡ ಅಯೋಧ್ಯೆ ತಲುಪಿದ್ದು, ಹಣತೆಗಳ ಎಣಿಕೆ ಶುರು ಮಾಡಿದೆ. ಇಂದು ಸಂಜೆ ಈ ಎಲ್ಲ ದೀಪಗಳು ಬೆಳಗಲಿದ್ದು, ಬಳಿಕ ಅಯೋಧ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಲಿದೆ. ಇಂಥ ಅದ್ಭುತ ದೀಪೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗುತ್ತಿದ್ದಾರೆ.

    ಇಂದು ಸಂಜೆ 5 ಗಂಟೆಗೆ ಉತ್ತರ ಪ್ರದೇಶದ ಅಯೋಧ್ಯಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಸಂಜೆ 5.45ಕ್ಕೆ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ರಾಮ ಮಂದಿರ ನಿರ್ಮಾಣಾ ಕಾರ್ಯ ವೀಕ್ಷಿಸಿ, ಶ್ರೀರಾಮ ಕಥಾ ಪಾರ್ಕ್‍ನಲ್ಲಿ ಶ್ರೀರಾಮನಿಗೆ ಜರುಗಲಿರುವ ಸಾಂಕೇತಿಕ ರಾಜ್ಯಾಭಿಷೇಕದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 6.30ಕ್ಕೆ ಸರಯೂ ನದಿ ತೀರದ ಮಹಾ ಆರತಿಯಲ್ಲಿ ಪಾಲ್ಗೊಂಡು, ರಾಮ್ ಕಿ ಪೌಡಿಯಲ್ಲಿ ನಡೆಯಲಿರುವ 3-ಡಿ ‘ಹೊಲೊಗ್ರಾಫಿಕ್ ಪ್ರೊಜೆಕ್ಷನ್ ಮ್ಯಾಪಿಂಗ್ ಶೋ’ ಮತ್ತು ಮ್ಯೂಸಿಕಲ್ ಲೇಸರ್ ಶೋಗೆ ಸಾಕ್ಷಿಯಾಗಲಿದ್ದಾರೆ.

    ಇನ್ನು ಇದೇ ವೇಳೆ ರಾಮಲಲ್ಲಾಗೆ ಸಂಬಂಧಿಸಿದ 11 ವಿವಿಧ ರಾಜ್ಯಗಳ ಸ್ತಬ್ಧ ಚಿತ್ರ ಪ್ರದರ್ಶನವಾಗಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪ್ರಧಾನಿ ಮೋದಿ ನಾಳೆ ಸೈನಿಕರ ಜೊತೆಗೆ ದೀಪಾವಳಿ ಆಚರಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೀದಿ ನಾಯಿಗಳಿಗೆ ತೊಂದರೆ ಕೊಡೋರ ವಿರುದ್ಧ ಕ್ರಮಕೈಗೊಳ್ಳಿ – ಪ್ರಧಾನಿಗೆ ಪತ್ರ ಬರೆದ ಕುಟುಂಬ

    ಬೀದಿ ನಾಯಿಗಳಿಗೆ ತೊಂದರೆ ಕೊಡೋರ ವಿರುದ್ಧ ಕ್ರಮಕೈಗೊಳ್ಳಿ – ಪ್ರಧಾನಿಗೆ ಪತ್ರ ಬರೆದ ಕುಟುಂಬ

    ಬೆಳಗಾವಿ: ಬೀದಿ ನಾಯಿಗಳಿಗೆ (Stray Dog) ತೊಂದರೆ ಕೊಡುವುದಲ್ಲದೇ ಅವುಗಳಿಗೆ ಉಚಿತವಾಗಿ ಆಹಾರ ಕೊಡುತ್ತಿರುವ ಕುಟುಂಬದವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ಬೆಳಗಾವಿ ಪೊಲೀಸರಿಗೆ ದೂರು ನೀಡಿದರೂ, ಕ್ರಮಕೈಗೊಳ್ಳದ ಹಿನ್ನೆಲೆ ಸಂತ್ರಸ್ತರು ಪ್ರಧಾನಿಗೆ (Prim Minister) ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

    ಬೆಳಗಾವಿಯ (Belgavi) ಖಾಸಭಾಗನ ಮಾರುತಿ ಗಲ್ಲಿಯ ನಿವಾಸಿ ಅನಿತಾ ದೊಡ್ಡಮನಿ ಕುಟುಂಬಸ್ಥರ ಮೇಲೆ ವಕೀಲ ವಿನಾಯಕ್ ವಲೇಪೂರಕರ ಎಂಬುವವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

    ಪ್ರಕರಣ ಹಿನ್ನೆಲೆ: ಅನಿತಾ ದೊಡ್ಡಮನಿ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಅನಿಮಲ್ ವೇಲ್ಫೇರ್ ಅಸೋಸಿಯೇಷನ್ (ಎನ್‌ಜಿಓ) ತೆಗೆದುಕೊಂಡು ಸರ್ಕಾರದ ಅನುಮತಿ ಪಡೆದು ನಗರದಲ್ಲಿರುವ ಬೀದಿ ನಾಯಿಗಳಿಗೆ ಉಚಿತವಾಗಿ ಊಟ ಹಾಕುತ್ತಿದ್ದಾರೆ. ಆದರೆ, ಬೀದಿ ನಾಯಿಗಳಿಗೆ ಊಟ ನೀಡದಂತೆ ಅನಿತಾ ಕುಟುಂಬಸ್ಥರಿಗೆ ವಕೀಲ ವಿನಾಯಕ್ ದಬ್ಬಾಳಿಕೆ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಳೆದ ಒಂಭತ್ತು ತಿಂಗಳ ಹಿಂದೆಯೇ ಶಾಹಾಪುರ ಪೊಲೀಸ್ ಠಾಣೆಯಲ್ಲಿ ಅನಿತಾ ಅವರು ದೂರು ದಾಖಲಿಸಿದ್ದಾರೆ.

    ಆದರೆ ನಾಯಿಗಳಿಗೆ ತೊಂದರೆ ಹಾಗೂ ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದರೂ ಪೊಲೀಸರು ಸೂಕ್ತಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಬೀದಿ ನಾಯಿಗಳಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಪ್ರಧಾನಮಂತ್ರಿವರೆಗೂ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ. ನಾಯಿಗಳಿಗೆ ಹಾಗೂ ನಮಗೆ ಕಿರುಕುಳ ನೀಡುತ್ತಿರುವ ವಿನಾಯಕ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ – `ಕೈ’ ನಾಯಕರ ಪಟ್ಟಿ ರಿಲೀಸ್

    Live Tv
    [brid partner=56869869 player=32851 video=960834 autoplay=true]

  • ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ

    ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ

    ಲಂಡನ್:‌ ಬ್ರಿಟನ್‌ನಲ್ಲಿ (United Kingdom) ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಪ್ರಧಾನಿ ಲಿಜ್‌ ಟ್ರಸ್‌ (Liz Truss) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ ಅವರು ರಾಜೀನಾಮೆ ಘೋಷಿಸಿದ್ದಾರೆ.

    ಆರ್ಥಿಕ ಮತ್ತು ಅಂತಾರಾಷ್ಟ್ರೀಯ ಅಸ್ಥಿರತೆಯ ಸಮಯದಲ್ಲಿ ತಾನು ಅಧಿಕಾರಕ್ಕೆ ಬಂದಿದ್ದೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಉತ್ತರಾಧಿಕಾರಿ ಆಯ್ಕೆಯಾಗುವವರೆಗೂ ನಾನು ಪ್ರಧಾನಿಯಾಗಿಯೇ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಿಷಿ ಸುನಾಕ್‌ಗೆ ಸಿಗುತ್ತಾ ಬ್ರಿಟನ್ ಪ್ರಧಾನಿ ಹುದ್ದೆ?

    ಬ್ರಿಟನ್‌ ಪ್ರಧಾನಿ ಲಿಜ್‌ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರ ಸರ್ಕಾರದಿಂದ ಒಬ್ಬೊಬ್ಬರೇ ಅಧಿಕಾರದಿಂದ ಹೊರ ನಡೆದರು. ಈಚೆಗಷ್ಟೇ ಹಣಕಾಸು ಸಚಿವ ಸ್ಥಾನಕ್ಕೆ ಕ್ವಾಸಿ ಕ್ವಾರ್ಟೆಂಗ್‌ ರಾಜೀನಾಮೆ ನೀಡಿದ್ದರು. ಬುಧವಾರ ಕೂಡ ಗೃಹ ಸಚಿವೆ, ಭಾರತೀಯ ಮೂಲದ ಸುಯೆಲ್ಲಾ ಬ್ರೇವರ್‌ಮನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಬಲಪಂಥೀಯ ಆರ್ಥಿಕತೆಯ ಕಾರ್ಯಸೂಚಿಯಿಂದ ಪ್ರಧಾನಿ ಟ್ರಸ್‌ ಹಿಂದೆ ಸರಿಯುತ್ತಿದ್ದಂತೆಯೇ ಅವರು ಕೂಡ ಅಧಿಕಾರದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಲಾಗಿತ್ತು. ಅದರಂತೆಯೇ ಟ್ರಸ್‌ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಅಗ್ನಿ ಅವಘಡದಿಂದ ಕುಸಿದ ಮಸೀದಿಯ ಗುಮ್ಮಟ- ವೀಡಿಯೋ ವೈರಲ್

    ಪ್ರಧಾನಿ ಸ್ಥಾನಕ್ಕೆ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಿದ ಬಳಿಕ ನಡೆದ ಚುನಾವಣೆಯಲ್ಲಿ ಲಿಜ್‌ ಟ್ರಸ್‌ ಮತ್ತು ಭಾರತ ಮೂಲದ ರಿಷಿ ಸುನಾಕ್‌ ನಡುವೆ ಪಟ್ಟಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಸುನಕ್‌ ಮಣಿಸಿ ಟ್ರಸ್‌ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತು ಬಿಡುಗಡೆ

    ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತು ಬಿಡುಗಡೆ

    ನವದೆಹಲಿ: ರೈತರಿಗೆ (Farmers) ಗುಡ್ ನ್ಯೂಸ್. ಅ.17 ಸೋಮವಾರ ಕಿಸಾನ್ ಸಮ್ಮಾನ್ ಯೋಜನೆಯಡಿ (PM Kisan Samman)  12ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಲಾಗುತ್ತಿದೆ.

    16 ಸಾವಿರ ಕೋಟಿ ಹಣ 8 ಲಕ್ಷ ರೈತರ ಖಾತೆಗಳನ್ನು ಸೇರಲಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi), ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್‍ಪಿಕೆ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೇ, 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಮೋದಿ ಆರಂಭಿಸಲಿದ್ದಾರೆ. ದೇಶದಲ್ಲಿರುವ 2.7 ಲಕ್ಷ ಗೊಬ್ಬರದ ಅಂಗಡಿಗಳನ್ನು ಹಂತ ಹಂತವಾಗಿ ವನ್ ಸ್ಟಾಪ್ ಸೆಂಟರ್‌ಗಳಾಗಿ ಬದಲಿಸಿ ಪಿಎಂ ಸಮೃದ್ಧಿ ಕೇಂದ್ರಗಳೆಂದು ಮರುನಾಮಕರಣ ಮಾಡಲಾಗುತ್ತದೆ. ಇದನ್ನೂ ಓದಿ: 22 ವರ್ಷಗಳ ಬಳಿಕ ನಡೆಯುತ್ತಿರುವ ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ಕೌಂಟ್‍ಡೌನ್

    ವಿವಿಧ ಸಂಘ-ಸಂಸ್ಥೆಗಳಿಂದ ಒಂದು ಕೋಟಿಗೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೀಗ ದೇಶದಲ್ಲಿರುವ ರಸಗೊಬ್ಬರ ಚಿಲ್ಲರೆ ಅಂಗಡಿಗಳನ್ನು ಹಂತ ಹಂತವಾಗಿ ಪ್ರದಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಪರಿವರ್ತಿಸುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ. ಇದನ್ನೂ ಓದಿ: ಹಾಂಕಾಂಗ್‌ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದೇವೆ – ಮುಂದಿನ ಗುರಿ ತೈವಾನ್‌ ಎಂದ ಕ್ಸಿ ಜಿನ್‌ಪಿಂಗ್‌

    ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ:
    ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು 2019ರ ಫೆಬ್ರವರಿ 24 ರಂದು ಜಾರಿಗೊಳಿಸಲಾಯಿತು. ಈ ಯೋಜನೆ ಮೂಲಕ ರೈತರಿಗೆ ವರ್ಷಕ್ಕೆ 6,000 ರೂ. ಪ್ರೋತ್ಸಾಹ ಧನ ನೀಡಿ ಕೃಷಿ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ನಂತೆ ವರ್ಷಕ್ಕೆ ಮೂರು ಕಂತಿನಲ್ಲಿ 6 ಸಾವಿರ ರೂ. ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಈಗಾಗಲೇ 11 ಕಂತುಗಳಲ್ಲಿ ರೈತರ ಖಾತೆಗೆ ಹಣ ಬಿಡುಗಡೆಗೊಳಿಸಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ಕೊನೆಯ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು.

    Live Tv
    [brid partner=56869869 player=32851 video=960834 autoplay=true]