Tag: prime minister

  • ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲಿ – ಉಡುಪಿಯ ಪಾದಬೆಟ್ಟುವಿನಲ್ಲಿ ವಿಶೇಷ ಹೋಮ

    ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲಿ – ಉಡುಪಿಯ ಪಾದಬೆಟ್ಟುವಿನಲ್ಲಿ ವಿಶೇಷ ಹೋಮ

    ಉಡುಪಿ: ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ಮೂರನೇ ಬಾರಿಗೆ ಪ್ರಧಾನಿಯಾಗಬೇಕು (Prime Minister) ಎಂದು ಉಡುಪಿಯಲ್ಲಿ (Udupi) ಹೋಮ, ಹವನಗಳನ್ನು ಕೈಗೊಳ್ಳಲಾಗಿದೆ.

    2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರುವಂತೆ ನಡೆಸಿದ ಯಾಗ ಇದಾಗಿದ್ದು, ಕಾಪು ತಾಲೂಕು ಪಾದೆಬೆಟ್ಟು ಸುಬ್ರಮಣ್ಯ ಸನ್ನಿಧಿಯಲ್ಲಿ ಪ್ರಾರ್ಥನೆ, ಪೂಜೆ ಹಾಗೂ ಹೋಮವನ್ನು ಅರ್ಚಕರೇ ನೆರವೇರಿಸಿದ್ದಾರೆ. ಇದನ್ನೂ ಓದಿ: ನ್ಯಾಯಾಲಯದ ಮೇಲೆ ನಂಬಿಕೆ ಇದೆ; ಡಿಕೆಶಿ

    ಮುಂದಿನ ಲೋಕಸಭಾ ಚುನಾವಣೆ ಉದ್ದೇಶವಾಗಿಟ್ಟುಕೊಂಡು ಹೋಮ ನಡೆಸಲಾಗಿದೆ. ಬಿಜೆಪಿ ಬಹುಮತದೊಂದಿಗೆ ಜಯಗಳಿಸುವಂತೆ ಪ್ರಾರ್ಥಿಸಿ, ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಪ್ರಾರ್ಥನೆಯನ್ನು ಪೂರ್ಣಾವಧಿಯ ಸಂದರ್ಭದಲ್ಲಿ ಸಲ್ಲಿಕೆ ಮಾಡಲಾಗಿದೆ. ಕ್ಷೇತ್ರದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀರಾಮ ತಾರಕ ಮಂತ್ರ ಹೋಮ, ಚಂಡಿಕಾ ಹೋಮ ನೆರವೇರಿಸಲಾಯಿತು. ಇದನ್ನೂ ಓದಿ: ಕೆಜೆ ಹಳ್ಳಿ, ಡಿಜಿ ಹಳ್ಳಿ ಪ್ರಕರಣದಲ್ಲೂ ಅಫ್ಸರ್ ಪಾಷಾ ಪಾತ್ರ – ಶೋಭಾ ಕರಂದ್ಲಾಜೆ ಆರೋಪ

    ಇದೇ ಸಂದರ್ಭ ಅಥರ್ವಶೀರ್ಷ ಮಹಾಗಣಪತಿ ಹೋಮ, ಋಷಭಸೂಕ್ತ ಹೋಮ, ಮನ್ಯುಸೂಕ್ತ ಹೋಮ ಹಾಗೂ ರುದ್ರ ಯಾಗ ನಡೆಸಲಾಯಿತು. ಒಬ್ಬ ವ್ಯಕ್ತಿಯ ಅಭಿವೃದ್ಧಿಗೆ ಮತ್ತು ಜೀವನದ ಒಳಿತಿಗಾಗಿ ಈ ಹೋಮಗಳನ್ನು ನಡೆಸಲಾಗುತ್ತದೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡುಗೆ ಇಲ್ಲ ನಂದಿನಿ ತುಪ್ಪ-ಕಾಂಗ್ರೆಸ್‌ ತನ್ನ ಅಜೆಂಡಾಕ್ಕಾಗಿ ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಮುಂದಾಗಿದೆ: ಸಿಟಿ ರವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಹುಲ್ ಗಾಂಧಿ ಬಿಗ್ ಬಾಸ್ ಶೋಗೆ ಹೋದರೆ ಪ್ರಧಾನಿ ಆಗ್ತಾರೆ : ನಟಿ ರಾಖಿ ಭವಿಷ್ಯ

    ರಾಹುಲ್ ಗಾಂಧಿ ಬಿಗ್ ಬಾಸ್ ಶೋಗೆ ಹೋದರೆ ಪ್ರಧಾನಿ ಆಗ್ತಾರೆ : ನಟಿ ರಾಖಿ ಭವಿಷ್ಯ

    ವರೆಗೂ ಸಿನಿಮಾ ರಂಗದ ಬಗ್ಗೆ ಮಾತ್ರ ಕಾಮೆಂಟ್ ಮಾಡುತ್ತಿದ್ದ ವಿವಾದಿತ ತಾರೆ ರಾಖಿ ಸಾವಂತ್ (Rakhi Sawant), ಈ ಬಾರಿ ರಾಜಕಾರಣಿಯ ಕುರಿತು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ರಾಹುಲ್ ಗಾಂಧಿ (Rahul Gandhi) ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅವರು ಪ್ರಧಾನಿ ಆಗಬೇಕು ಎನ್ನುವ ಕನಸಿನೊಂದಿಗೆ ಒಂದಷ್ಟು ಸಲಹೆಯನ್ನೂ ರಾಖಿ ಸಾವಂತ್ ನೀಡಿದ್ದಾರೆ.

    ರಾಹುಲ್ ಪ್ರಧಾನಿ ಆಗಬೇಕು ಎನ್ನುವುದು ಕೇವಲ ಕಾಂಗ್ರೆಸ್ಸಿಗರ ಕನಸು ಮಾತ್ರವಲ್ಲ, ರಾಖಿ ಕೂಡ ಅಂಥದ್ದೊಂದು ಕನಸು ಕಂಡಿದ್ದಾರೆ. ಹಾಗಾಗಿಯೇ ರಾಹುಲ್ ಪ್ರಧಾನಿ ಆಗಬೇಕು ಎಂದರೆ ಅವರು ಬಿಗ್ ಬಾಸ್ ಮನೆಗೆ ಹೋಗಬೇಕು ಎಂದಿದ್ದಾರೆ. ಬಿಗ್ ಬಾಸ್ (Bigg Boss) ಗೆ ಹೋದರೆ ಮತ್ತಷ್ಟು ಪಾಪ್ಯುಲರ್ ಆಗುತ್ತಾರೆ. ಆನಂತರ ಪ್ರಧಾನಿ (Prime Minister) ಕೂಡ ಆಗಬಹುದು ಎಂದು ರಾಖಿ ಬರೆದುಕೊಂಡಿದ್ದಾರೆ.

    ರಾಖಿ ಮತ್ತೆ ಮದುವೆ ಆಗಲ್ವಂತೆ..

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮತ್ತೆ ಪತಿ ಆದಿಲ್ ಖಾನ್ (Adil Khan) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೈಲಿನಿಂದ ಅವನು ಮೆಸೇಜ್ ಕಳುಹಿಸಿರುವ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಆತನ ವಿರುದ್ಧ ಮತ್ತಷ್ಟು ಆರೋಪಗಳನ್ನೂ ಮಾಡಿದ್ದು, ಮತ್ತೆಂದೂ ತಾವು ಮದುವೆ (Marriage) ಆಗುವುದಿಲ್ಲ ಎಂದು ಘೋಷಿಸಿದ್ದಾರೆ. ಆದಿಲ್ ಗೆ ಬುದ್ಧಿ ಕಲಿಸದೇ ತಾವು ಬಿಡುವುದಿಲ್ಲ ಎಂದಿದ್ದಾರೆ ರಾಖಿ.

    ಸದ್ಯ ಆದಿಲ್ ಮೈಸೂರು ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ರಾಖಿಗೆ ಸಂದೇಶವನ್ನೂ ಕಳುಹಿಸಿದ್ದಾನಂತೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ, ‘ನನ್ನಿಂದ ತಪ್ಪಾಗಿದೆ. ಮತ್ತೆ ನಾನು ನಿನ್ನೊಂದಿಗೆ ಬದುಕುವೆ. ನನ್ನ ಮೇಲಿನ ದೂರನ್ನು ವಾಪಸ್ಸು ತೆಗೆದುಕೊ. ಒಟ್ಟಿಗೆ ಖುಷಿಯಾಗಿ ಬದುಕೋಣ’ ಅಂತ ಆದಿಲ್ ಮಸೇಜ್ ಕಳುಹಿಸಿದ್ದಾನಂತೆ. ಆದರೆ, ಆದಿಲ್ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದಿದ್ದಾರೆ ರಾಖಿ. ಇದನ್ನೂ ಓದಿ:ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಬರ್ತ್‌ಡೇಗೆ ಸಿದ್ಧತೆ ಹೇಗಿದೆ ಗೊತ್ತಾ?

    ‘ನಾನು ಆದಿಲ್ ಗೆ ಡಿವೋರ್ಸ್ ಕೊಡುವುದಿಲ್ಲ. ಅವನು ನನ್ನಂತೆ ಇನ್ನ್ಯಾರಿಗೂ ಮೋಸ ಮಾಡಬಾರದು. ನಾನೂ ಕೂಡ ಮದುವೆಯಾಗಲಾರೆ. ಮತ್ತೆ ಅವನು ನನ್ನೊಂದಿಗೆ ಬದುಕುತ್ತೇನೆ ಎನ್ನುತ್ತಾನೆ. ಬಹುಶಃ, ಅವನು ನನ್ನನ್ನು ಸಾಯಿಸೋದಕ್ಕೆ ಪ್ಲ್ಯಾನ್ ಮಾಡಿರಬಹುದು. ಹಾಗಾಗಿ ಅವನು ನನ್ನ ಜೊತೆ ಇರುತ್ತೇನೆ ಎಂದು ಹೇಳುತ್ತಿದ್ದಾನೆ. ಆದರೆ, ಅವನನ್ನು ನಾನು ನಂಬುವುದಿಲ್ಲ. ಮತ್ತೆ ಒಟ್ಟಿಗೆ ಬದುಕುವುದಿಲ್ಲ’ ಎನ್ನುತ್ತಾರೆ ರಾಖಿ.

     

    ಆದಿಲ್ ಜೊತೆ ಬೇರೆ ಯಾರೂ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಡಿವೋರ್ಸ್ ನೀಡುವುದಿಲ್ಲ ಎಂದೂ ರಾಖಿ ಘೋಷಣೆ ಮಾಡಿದ್ದಾರೆ. ಡಿವೋರ್ಸ್ ನೀಡಿದರೆ ಅವನು ಮತ್ತೊಂದು ಮದುವೆ ಆಗುತ್ತಾನೆ. ಮತ್ತೆ ಅವನ ಬಾಳಲ್ಲಿ ಯಾವ ಹುಡುಗಿಯೂ ಬರುವುದು ಬೇಡ ಎನ್ನುವುದು ರಾಖಿ ಸಾವಂತ್ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿತ್ಯಾನಂದನ ಕೈಲಾಸ ದೇಶಕ್ಕೆ ನಟಿ ರಂಜಿತಾ ಪ್ರಧಾನಿ

    ನಿತ್ಯಾನಂದನ ಕೈಲಾಸ ದೇಶಕ್ಕೆ ನಟಿ ರಂಜಿತಾ ಪ್ರಧಾನಿ

    ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ (Nityananda) ತನ್ನ ಆತ್ಮೀಯ ಶಿಷ್ಯಯನ್ನು ತನ್ನ ದೇಶದ ಪ್ರಧಾನಿಯನ್ನಾಗಿ (Prime Minister) ಮಾಡಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೈಲಾಸ ದೇಶ (Kailasa Desha) ಎಂಬ ಹೊಸ ದೇಶವನ್ನೇ ಕಟ್ಟಿರುವ ನಿತ್ಯಾನಂದ ಹಲವು ವರ್ಷಗಳ ಕಾಲ ತನ್ನ ಶಿಷ್ಯರ ಜೊತೆ ಅಲ್ಲಿಯೇ ನೆಲೆಯೂರಿದ್ದಾನೆ. ಇದೀಗ ಆ ದೇಶಕ್ಕೆ ಪ್ರಧಾನಿಯನ್ನು ನೇಮಕ ಮಾಡಿದ್ದಾನೆ.

    ನಟಿ ರಂಜಿತಾ (Ranjitha) ಕಾರಣದಿಂದಾಗಿಯೇ ನಿತ್ಯಾನಂದ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ. ಇಬ್ಬರ ನಡುವಿನ ಖಾಸಗಿ ವಿಡಿಯೋ ವಿಚಾರವಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿದ್ದ. ನಂತರ ದೇಶವನ್ನೇ ಬಿಡಬೇಕಾಗಿ ಬಂತು. ದೇಶವನ್ನು ತೊರೆಯುವಾಗ ತನ್ನ ಅಷ್ಟೂ ಶಿಷ್ಯರನ್ನು ವಿಮಾನ ಏರಿಸಿ ಹೊರಟೇ ಬಿಟ್ಟ. ಹೊಸ ದೇಶ ಕಟ್ಟಿ ಮತ್ತೆ ಅಚ್ಚರಿ ಮೂಡಿಸಿದೆ. ಈ ದೇಶಕ್ಕೆ ರಂಜಿತಾ ಅವರನ್ನು ಪ್ರಧಾನಿ ಮಾಡಿದ್ದಾನೆ ಎನ್ನುವುದು ಸದ್ಯದ ವರ್ತಮಾನ. ಇದನ್ನೂ ಓದಿ:ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಟೀಸರ್ ಔಟ್

    ಈ ಹಿಂದೆ ತನ್ನ ದೇಶದ ಕರೆನ್ಸಿಯನ್ನು ನಿತ್ಯಾನಂದ ಬಿಡುಗಡೆ ಮಾಡಿದ್ದ. ತನ್ನ ದೇಶದ ವೀಸಾ ಕೂಡ ಘೋಷಿಸಿದ್ದ. ಕೈಲಾಸ ದೇಶಕ್ಕೆ ಬರುವವರು ಯಾವೆಲ್ಲ ನಿಯಮ ಪಾಲಿಸಬೇಕು ಎನ್ನುವ ಕುರಿತಾದ ವೆಬ್ ಸೈಟ್ ಕೂಡ ನಿತ್ಯಾನಂದ ಮಾಡಿಕೊಂಡಿದ್ದಾನೆ. ಯಾರಿಗೆಲ್ಲ ವೀಸಾ ಕೊಡಲಾಗುತ್ತದೆ ಎನ್ನುವ ವಿವರಣೆಯನ್ನು ಅದರಲ್ಲಿ ನೀಡಿದ್ದಾನೆ.

    ಅದು ಪಕ್ಕಾ ಹಿಂದೂಗಳೇ ಇರುವ ದೇಶವೆಂದು ನಿತ್ಯಾನಂದ ಈ ಹಿಂದೆ ಘೋಷಿಸಿಕೊಂಡಿದ್ದ. ಜೊತೆಗೆ ಶಿಷ್ಯ ರಂಜಿತಾಳ ಹೆಸರನ್ನೇ ಬದಲಾಯಿಸಿ ನಿತ್ಯಾನಂದಮಯಿ (Nityanandamayi)ಎಂದೂ ಹೆಸರಿಟ್ಟಿದ್ದ. 2019ರಲ್ಲಿ ದೇಶದಿಂದ ಪರಾರಿಯಾಗಿ ಇದೀಗ ಹೊಸ ದೇಶದಲ್ಲಿ ಖುಷಿಯಾಗಿದ್ದಾನೆ. ಪ್ರಧಾನಿಯನ್ನೂ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾನೆ. ಈ ಕುರಿತು ಖಚಿತ ಮಾಹಿತಿ ಇರದೇ ಇದ್ದರೂ, ತಮಿಳು ಪತ್ರಿಕೆಗಳು ಈ ಸುದ್ದಿಯನ್ನು ದೊಡ್ಡದಾಗಿ ಪ್ರಚಾರ ಮಾಡಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರ ಘಟನೆ : ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿ ಎಂದು ಟೀಕಿಸಿದ ನಟ ಕಿಶೋರ್

    ಮಣಿಪುರ ಘಟನೆ : ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿ ಎಂದು ಟೀಕಿಸಿದ ನಟ ಕಿಶೋರ್

    ನ್ನಡ ಸಿನಿಮಾ ರಂಗದ ಹೆಸರಾಂತ ನಟ ಕಿಶೋರ್ (Kishor ) ಮತ್ತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮೇಲೆ ಹರಿಹಾಯ್ದಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಪ್ರಧಾನಿ (Prime Minister) ವಿರುದ್ಧ ಮಾತನಾಡಿರುವ ಕಿಶೋರ್, ಈ ಬಾರಿ ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನಿಟ್ಟುಕೊಂಡು ನರೇಂದ್ರ ಮೋದಿ ಅವರಿಗೆ ತಿವಿದಿದ್ದಾರೆ.

    ಮಣಿಪುರ (Manipur) ಹಿಂಸಾಚಾರದಿಂದ (Violence) ನಲಗುತ್ತಿದೆ. ಅಲ್ಲಿ ಶಾಂತಿ ಸ್ಥಾಪಿಸಲು ಹಲವಾರು ತೀರಿಯಲ್ಲಿ ಕಸರತ್ತುಗಳು ನಡೆಯುತ್ತಿವೆ. ಮಣಿಪುರ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಯುತ್ತಿವೆ. ನಿನ್ನೆಯಷ್ಟೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಆದರೆ, ಪ್ರಧಾನಿ ಮೌನವಹಿಸಿದ್ದಾರೆ ಎನ್ನುವುದು ಕಿಶೋರ್ ಆರೋಪ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ಈ ಕುರಿತಾಗಿ ಕಿಶೋರ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ‘ಮನ್ ಕೀ ಬಾತ್ ನಲ್ಲಿ ಕಳೆದುಹೋದ ಮಣಿಪುರದ ಬಾತ್. ದೇಶದಲ್ಲಿ ಎಲ್ಲೇ ಅಶಾಂತಿ ನಡೆದಾಗಲೂ ಒಬ್ಬ ಪ್ರಧಾನಿ ಮಾಡಬಹುದಾದ ಮೂಲಭೂತ, ಅತೀ ಸರಳ, ಕಾಮನ್ ಸೆನ್ಸ್‍್ ನ ಕೆಲಸ ಶಾಂತಿಯ ಕರೆ ಕೊಡುವುದು. ಅದನ್ನೂ ಕೂಡ ಮಾಡದ ಪ್ರಧಾನಿಯ ಮನಸ್ಥಿಯೇನು?’ ಎಂದು ಕಿಶೋರ್ ಪ್ರಶ್ನೆ ಮಾಡಿದ್ದಾರೆ.

     

    ಮುಂದುವರೆದು, ‘ಕೋಟಿ ಓಟಿನ ದೇಶದಲ್ಲಿ ಕೇವಲ 2 ಲೋಕಸಭೆ ಸೀಟಿನ ಮಣಿಪುರದ ಸತ್ತುಹೋದ ನೂರು ಓಟು, ಮನೆ ಕಳೆದುಕೊಂಡ 50 ಸಾವಿರ ಓಟುಗಳು. ಈ ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿಗೆ ಯಾವ ಲೆಕ್ಕವೆಂಬುದೇ? 2002ರಲ್ಲಿ ಗುಜರಾತ್ 2023ರಲ್ಲಿ ಮಣಿಪುರ. ಜೀವಗಳು ಮುಖ್ಯವಲ್ಲ ಓಟುಗಳಷ್ಟೇ ಮುಖ್ಯ. ಇತಿಹಾಸಕ್ಕೆ ನೆನಪಿರಲಿ’ ಎಂದು ಕಿಶೋರ್ ಬರೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈಜಿಪ್ಟ್‌ನಲ್ಲಿ ‘ಯೇ ದೋಸ್ತಿ’ ಹಾಡು ಹೇಳಿ ಮೋದಿ ಸ್ವಾಗತಿಸಿದ ಮಹಿಳೆಯರು

    ಈಜಿಪ್ಟ್‌ನಲ್ಲಿ ‘ಯೇ ದೋಸ್ತಿ’ ಹಾಡು ಹೇಳಿ ಮೋದಿ ಸ್ವಾಗತಿಸಿದ ಮಹಿಳೆಯರು

    ಕೈರೋ: 2 ದಿನಗಳ ಈಜಿಪ್ಟ್‌ ಪ್ರವಾಸ (Egypt Tour) ಕೈಗೊಂಡಿರುವ ಪ್ರಧಾನಿ ಮೋದಿ (Narendra Modi) ಶನಿವಾರ ಈಜಿಪ್ಟ್‌ ರಾಜಧಾನಿ ಕೈರೋಗೆ ಬಂದಿಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಈಜಿಪ್ಟ್‌ ಪ್ರಧಾನಿ ಮೊಸ್ತಫಾ ಮೊಡ್‌ಬೌಲಿ (Madbouly) ಅವರು ಆಲಿಂಗನ ಮಾಡುವ ಮೂಲಕ ಬರಮಾಡಿಕೊಂಡರು. ನಂತರ ಸಕಲ ಸೇನಾ ಗೌರವದೊಂದಿಗೆ ಭವ್ಯ ಸ್ವಾಗತಕೋರಲಾಯಿತು.

    ಆ ನಂತರ ಅಲ್ಲಿನ ಹೋಟೆಲ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಈಜಿಪ್ಟ್‌ನ ಭಾರತೀಯ ಸಮುದಾಯದೊಂದಿಗೆ (Indian Community) ಸಂವಾದ ನಡೆಸಿದರು. ಈ ವೇಳೆ ಸಾಂಸ್ಕೃತಿಕ ಉಡುಗೆಯಲ್ಲಿ ಸಿಂಗಾರಗೊಂಡು ಸ್ವಾಗತಿಸಿದ ಮಹಿಳೆಯರು ʻಯೇ ದೋಸ್ತಿʼ ಗೀತೆಯನ್ನಾಡುವ ಮೂಲಕ ಮೋದಿ ಅವರನ್ನು ಬರಮಾಡಿಕೊಂಡರು.

    ಅಧ್ಯಕ್ಷ ಎಲ್‌-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, 1997ರ ಬಳಿಕ ಈಜಿಪ್ಟ್‌ಗೆ ತೆರಳಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವ ಮೊದಲ ಪ್ರಧಾನಿಯೂ ಆಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 3,200 ಕೋಟಿ ಹೂಡಿಕೆ ಮಾಡಲಿದೆ ಸೆಮಿಕಂಡಕ್ಟರ್ ಕಂಪನಿ Applied Materials

    ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ವೃದ್ಧಿ ಉದ್ದೇಶದಿಂದ ಪ್ರಧಾನಿ ಮೋದಿ ಭಾನುವಾರ ಎಲ್‌-ಸಿಸಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈಜಿಪ್ಟ್‌ನಲ್ಲಿರುವ ಭಾರತ ಮೂಲದ ಸಂಪುಟ ಸದಸ್ಯರೊಂದಿಗೆ ಮತ್ತು ಪ್ರಮುಖ ತಜ್ಞರೊಂದಿಗೂ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?

    ಆ ನಂತರ 11ನೇ ಶತಮಾನದ ಅಲ್‌-ಹಕೀಮ್‌ ಮಸೀದಿಗೆ ಭೇಟಿ ನೀಡಲಿದ್ದಾರೆ. ಈ ಮಸೀದಿ 11ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಸಾದ್ಯ ಹಾಗೂ ಬೊಹ್ರಾ ಸಮುದಾಯದಿಂದ ನವೀಕರಿಸಲಾಗಿದೆ. ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದ ಬಳಿಕ ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಮೊದಲ ಮಹಾಯುದ್ಧದಲ್ಲಿ ಈಜಿಪ್ಟ್‌ಗಾಗಿ ಹೋರಾಡಿ ಬಲಿದಾನಗೈದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲಿದ್ದಾರೆ. ಪ್ರಧಾನಿ ಮೋದಿ ಅವರ ಭೇಟಿಯು ಭಾರತ ಮತ್ತು ಈಜಿಪ್ಟ್‌ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

  • ಸಾಂಪ್ರದಾಯಿಕ ಸ್ವಾಗತ ಕೊಟ್ಟು ಮೋದಿಯನ್ನು ʻಬಾಸ್‌ʼ ಎಂದು ಕರೆದ ಆಸ್ಟ್ರೇಲಿಯಾ ಪ್ರಧಾನಿ

    ಸಾಂಪ್ರದಾಯಿಕ ಸ್ವಾಗತ ಕೊಟ್ಟು ಮೋದಿಯನ್ನು ʻಬಾಸ್‌ʼ ಎಂದು ಕರೆದ ಆಸ್ಟ್ರೇಲಿಯಾ ಪ್ರಧಾನಿ

    – ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಸದೃಢ ದೇಶ
    – ವಿಶ್ವದ ಅತ್ಯಂತ ಜನಪ್ರಿಯ ದೇಶವೂ ಹೌದು – ಆಲ್ಬನೀಸ್ ಮೆಚ್ಚುಗೆ
    – ಯೋಗ ಕೂಡ ನಮ್ಮನ್ನು ಬೆಸೆದಿದೆ ಎಂದ ಮೋದಿ

    ಕ್ಯಾನ್ಬೆರಾ: ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ (Australia) ಬುಡಕಟ್ಟು ಸಂಪ್ರದಾಯದಂತೆ ಭವ್ಯ ಸ್ವಾಗತ ಸ್ವೀಕರಿಸಿದರು.

    ನಂತರ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಮಾಸ್ಟರ್ ಶೆಫ್ ಹಾಗೂ ಕ್ರಿಕೆಟ್’, ಭಾರತ ಮತ್ತು ಆಸ್ಟ್ರೇಲಿಯಾ (Australia) ನಡುವಿನ ಸಂಬಂಧವನ್ನ ಒಗ್ಗೂಡಿಸಿವೆ. ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಕೊಡುಗೆ ನೀಡಿರುವ ಭಾರತೀಯ ಸಮುದಾಯಕ್ಕೆ (Indian Community) ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿಷ್ಟಾಚಾರಕ್ಕೆ ಗುಡ್‌ಬೈ – ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತ ಕೋರಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ

    ನಮ್ಮ ಜೀವನಶೈಲಿ ವಿಭಿನ್ನ ಇರಬಹುದು. ಆದರೆ ಯೋಗ ಕೂಡ ನಮ್ಮನ್ನು ಬೆಸೆದಿದೆ. ನಾವು ಕ್ರಿಕೆಟ್ ಮೂಲಕ ಸುದೀರ್ಘ ಸಮಯದಿಂದ ಸಂಪರ್ಕಿತರಾಗಿದ್ದೇವೆ. ಆದರೆ ಈಗ ಟೆನ್ನಿಸ್ ಮತ್ತು ಸಿನಿಮಾಗಳೂ ನಮ್ಮನ್ನ ಬೆಸೆಯುತ್ತಿವೆ. ನಾವು ವಿಭಿನ್ನ ರೀತಿಯಲ್ಲಿ ಅಡುಗೆಗಳನ್ನು ಮಾಡಬಹುದು, ಆದರೆ ಮಾಸ್ಟರ್‌ಶೆಫ್ ನಮ್ಮನ್ನು ಈಗ ಒಂದುಗೂಡಿಸುತ್ತಿದೆ ಎಂದಿದ್ದಾರೆ.  

    ಮುಖ್ಯವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧವು 3C, 3D ಮತ್ತು 3E ಗಳಿಂದ ಕೂಡಿದೆ. 3C ಅಂದರೆ ಕಾಮನ್‌ವೆಲ್ತ್, ಕ್ರಿಕೆಟ್ ಮತ್ತು ಕರ್ರಿ, 3Dಗಳು ಡೆಮಾಕ್ರಸಿ, ಡಯಾಸ್ಪೊರಾ ಹಾಗೂ ದೋಸ್ತಿ ಮತ್ತು 3E ಗಳು- ಎನೆರ್ಜಿ, ಎಕಾನಮಿ ಹಾಗೂ ಎಜುಕೇಷನ್‌ನ ಆಚೆ ಬೆಳೆದಿದೆ. ಇದು ಪರಸ್ಪರ ವಿಶ್ವಾಸ ಮತ್ತು ಪರಸ್ಪರ ಗೌರವದೊಂದಿಗೆ ನಡೆಯುತ್ತಿದೆ. ಭಾರತ ವಿಶ್ವದ ಆರ್ಥಿಕ ಸದೃಢ ರಾಷ್ಟ್ರಗಳಲ್ಲಿ ಒಂದಾಗಿದ್ದು, ಐಎಂಎಫ್ ಸಹ ಭಾರತವನ್ನ ಜಾಗತಿಕ ಆರ್ಥಿಕತೆಯಲ್ಲಿ ಉಜ್ವಲ ರಾಷ್ಟ್ರವಾಗಿ ಪರಿಗಣಿಸಿದೆ ಎಂದು ಹಾಡಿಹೊಗಳಿದ್ದಾರೆ.

    ಇದಕ್ಕೂ ಮುನ್ನ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಆಲ್ಬನೀಸ್, ಮೋದಿ ಅವರನ್ನ ‘ದಿ ಬಾಸ್’ ಕರೆದಿದ್ದಾರೆ. ಭಾರತೀಯ ಸಮುದಾಯದ ಜೊತೆ ಸಿಡ್ನಿಯಲ್ಲಿ ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ಅವರು ಮೋದಿ ಅವರನ್ನ ಕೊಂಡಾಡಿದ್ದಾರೆ. ಇದನ್ನೂ ಓದಿ: ರಷ್ಯಾ ಯುದ್ಧ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್‌ ಅಧ್ಯಕ್ಷ ಭೇಟಿಯಾದ ಮೋದಿ

    ನಾನು ಕೊನೆಯ ಬಾರಿ ಈ ವೇದಿಕೆಯಲ್ಲಿ ಯಾರನ್ನಾದರೂ ನೋಡಿದ್ದು ಅಂದ್ರೆ ಬ್ರೂಸ್ ಸ್ಪ್ರಿಂಗ್‌ಸ್ಟೀನ್, ಆದ್ರೆ ಅವರಿಗೂ ಸಹ ಪ್ರಧಾನಿ ಮೋದಿಗೆ ಸಿಕ್ಕ ಸ್ವಾಗತ ಸಿಕ್ಕಿರಲಿಲ್ಲ, ಪ್ರಧಾನಿ ಮೋದಿ ಬಾಸ್ ಎಂದು ಬಣ್ಣಿಸಿದ್ದಾರೆ.

    ಇಂದಿಗೆ ನಾನು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ವರ್ಷ ಕಳೆದಿದ್ದು, ನಾವು ಒಟ್ಟಿಗೆ ನಡೆಸುತ್ತಿರುವ 6ನೇ ಸಭೆಯಾಗಿದೆ. ಇದು ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಸಂಬಂಧವನ್ನ ಮತ್ತಷ್ಟು ಗಟ್ಟಿಗೊಳಿಸಿದೆ ಎಂಬುದನ್ನು ತೋರಿಸುತ್ತದೆ. ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಸದೃಢ ದೇಶವಾಗಿ ಬೆಳೆಯುತ್ತಿದೆ. ಈಗಾಗಲೇ ವಿಶ್ವದ ಅತ್ಯಂತ ಜನಪ್ರಿಯ ದೇಶವೂ ಆಗಿದೆ. ಅದಕ್ಕಾಗಿ ನಾವು ಹೂಡಿಕೆ ಸಂಪರ್ಕ ಬೆಳೆಸಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದಕ್ಕೂ ಮುನ್ನ ಭಾರತೀಯ ನೃತ್ಯಪಟುಗಳಿಂದ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಧಾನಿ ಮೋದಿ ಅವರಿಗೂ ಮುನ್ನ ಮಾತನಾಡಿದ ಆಲ್ಬನೀಸ್, ಅದಕ್ಕೂ ಮುನ್ನ ಆಯೋಜಿಸಿದ್ದ ದ್ವಿಪಕ್ಷೀಯ ಸಭೆ ಕುರಿತು ಮಾಹಿತಿ ನೀಡಿದರು.

  • ಪತಿಗೆ ವಿಚ್ಛೇದನ ಘೋಷಿಸಿ, ಸ್ನೇಹಿತರಾಗಿ ಇರ್ತೀವಿ ಅಂದ ನಿರ್ಗಮಿತ ಪ್ರಧಾನಿ ಸನ್ನಾ ಮರಿನ್‌

    ಪತಿಗೆ ವಿಚ್ಛೇದನ ಘೋಷಿಸಿ, ಸ್ನೇಹಿತರಾಗಿ ಇರ್ತೀವಿ ಅಂದ ನಿರ್ಗಮಿತ ಪ್ರಧಾನಿ ಸನ್ನಾ ಮರಿನ್‌

    ಹೆಲ್ಸಿಂಕಿ: ಫಿನ್‌ಲ್ಯಾಂಡ್‌ನ ನಿರ್ಗಮಿತ ಪ್ರಧಾನಿ (Finland PM) ಸನ್ನಾ ಮರಿನ್‌ (Sanna Marin) ವಿಚ್ಛೇದನ ಘೋಷಣೆ ಮಾಡಿದ್ದು, ಪತಿ ಮಾರ್ಕಸ್‌ ರೈಕೊನೆನ್‌ ಅವರೊಂದಿಗೆ ಜೊತೆಯಾಗಿ ವಿಚ್ಛೇದಕ್ಕೆ ಅರ್ಜಿ ಸಲ್ಲಿಸಿದ್ದಾರೆ.

    19‌ ವರ್ಷಗಳ ನಮ್ಮ ಸುದೀರ್ಘ ಜೀವನಕ್ಕೆ ಹಾಗೂ ನಮ್ಮ ಪುಟ್ಟ ಮಗಳಿಗೆ ಕೃತಜ್ಞರಾಗಿರುತ್ತೇವೆ. ಉತ್ತಮ ಸ್ನೇಹಿತರಾಗಿ ಉಳಿಯುತ್ತೇವೆ. ತಮ್ಮ 5 ವರ್ಷದ ಮಗಳನ್ನು ಇಬ್ಬರೂ ಸಮಾನವಾಗಿ ನೋಡಿಕೊಳ್ಳುವುದಾಗಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಮ್ರಾನ್‌ ಖಾನ್‌ ಬೆನ್ನಲ್ಲೇ ಪಾಕ್‌ ವಿದೇಶಾಂಗ ಮಾಜಿ ಸಚಿವ ಅರೆಸ್ಟ್‌ – ಅಜ್ಞಾತ ಸ್ಥಳಕ್ಕೆ ಶಿಫ್ಟ್‌

    2020ರಲ್ಲಿ ಕೋವಿಡ್‌ (Covid) ಬಿಕ್ಕಟ್ಟಿನ ವೇಳೆ ರೈಕೊನೆನ್‌ ಹಾಗೂ ಮರಿನ್‌ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಿದ್ದರು.

    ಮರಿನ್ ಮತ್ತು ಅವರ ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ಕಳೆದ ತಿಂಗಳು ಫಿನ್‌ಲ್ಯಾಂಡ್‌ನ ಸಂಸತ್ತಿನ ಚುನಾವಣೆಯಲ್ಲಿ ರಾಷ್ಟ್ರೀಯ ಒಕ್ಕೂಟದ ಪಕ್ಷ ಮತ್ತು ರಾಷ್ಟ್ರೀಯವಾದಿ ಫಿನ್ಸ್ ಪಕ್ಷದ ಎದುರು ಪರಾಭವಗೊಂಡಿತ್ತು. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್- ಪ್ರತಿಭಟನೆಯಲ್ಲಿ 8 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

    2019ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮರಿನ್‌ ವಿಶ್ವದ ಕಿರಿಯ ಪ್ರಧಾನಿ ಹಾಗೂ ಹೊಸ ನಾಯಕರಿಗೆ ರೋಲ್‌ ಮಾಡೆಲ್‌ ಎನಿಸಿಕೊಂಡಿದ್ದರು.

  • ಪ್ರಧಾನಿಯಾಗಿರುವವರು ಪಂಚಾಯ್ತಿ ಚುನಾವಣೆಗಳಲ್ಲಿ ತಿರುಗುವ ಹಾಗೆ ತಿರುಗ್ತಿದ್ದಾರೆ: ರಮೇಶ್ ಕುಮಾರ್

    ಪ್ರಧಾನಿಯಾಗಿರುವವರು ಪಂಚಾಯ್ತಿ ಚುನಾವಣೆಗಳಲ್ಲಿ ತಿರುಗುವ ಹಾಗೆ ತಿರುಗ್ತಿದ್ದಾರೆ: ರಮೇಶ್ ಕುಮಾರ್

    ಕೋಲಾರ: ಪ್ರಧಾನಿಯಾಗಿರುವವರು ಪಂಚಾಯ್ತಿ ಚುನಾವಣೆಗಳಲ್ಲಿ ತಿರುಗುವ ಹಾಗೆ ತಿರುಗ್ತಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ವ್ಯಂಗ್ಯವಾಡಿದ್ದಾರೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರಾಯಲಪಾಡುನಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ಪ್ರದಾನಿ ನರೇಂದ್ರ ಮೋದಿ (Narendra Modi) ಪ್ರವಾಸ ಕುರಿತು ಪ್ರತಿಕ್ರಿಯಿಸಿ, ಮದನಪಲ್ಲಿಯಲ್ಲಿ ಬೀಡಿ ಮಾರಾಟ ಮಾಡಲು ತಿರುಗುವ ಹಾಗೆ ಇವರು ತಿರುಗುತ್ತಿದ್ದಾರೆ. ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾಗಾಂಧಿಯಂತಹವರೆಲ್ಲ ಪ್ರಧಾನಿ ಆಗಿದ್ದರು, ಈ ರೀತಿ ಆಡಲಿಲ್ಲ. ನಿಮ್ಮ ಸಚಿವರು ಲಂಚ ತೆಗೆದುಕೊಂಡಿದ್ದಾರೆ ಎಂದು ಗುತ್ತಿಗೆದಾರರು ಬರೆದ ಪತ್ರಕ್ಕೆ ಈ ದಿನದವರೆಗೂ ಉತ್ತರ ನೀಡಲಿಲ್ಲ ಎಂದು ಕಿಡಿಕಾರಿದರು.

    7 ಕೆ.ಜಿ ಕೊಡುತ್ತಿದ್ದ ಅಕ್ಕಿಯನ್ನು 4 ಕೆ.ಜಿಗೆ ಇಳಿಸಿದರು. ಕಾಂಗ್ರೆಸ್‍ನ ಗುರುತಿನಿಂದ ಗೆದ್ದ ಶಾಸಕರನ್ನು ಕೋಟ್ಯಂತರ ಹಣ ಕೊಟ್ಟು ಖರೀದಿಸಿದರು. ಹೀಗೆ ಸರ್ಕಾರ ರಚಿಸಿ ಈ ರೀತಿಯಾಗಿ ಸರ್ಕಾರ ನಡೆಸುತ್ತಿದ್ದಾರೆ. ಕರ್ನಾಟಕದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ಸರ್ವನಾಶ ಮಾಡಿದೆ. ಈ ಸರ್ಕಾರಕ್ಕೆ ಮಾನವೀಯತೆ ಇಲ್ಲ, ಅರ್ಥವೂ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಎಸ್‌ವೈ, ಬೊಮ್ಮಾಯಿಗೆ ಕೇವಲ ಮೂರೂವರೆ ವರ್ಷ ಮಾತ್ರ ಅವಕಾಶ ಸಿಕ್ಕಿದೆ – ಮೋದಿ

    84 ವರ್ಷದ ಮಹಾತ್ಮ ಗಾಂಧಿಯವರನ್ನು ಗುಂಡಿಟ್ಟು ಕೊಂದಿದ್ದು ಆರ್‍ಎಸ್‍ಎಸ್. ಆರ್‍ಎಸ್‍ಎಸ್ ಅಂದ್ರೆ ಅದು ಬಿಜೆಪಿ, ಬಿಜೆಪಿ ಅಂದ್ರೆ ಅದು ಬಜರಂಗದಳ ಎಂದು ಹೇಳುವ ಮೂಲಕ ಬಜರಂಗದಳ ನಿಷೇಧವನ್ನು ರಮೇಶ್ ಕುಮಾರ್ ಸಮರ್ಥಿಸಿಕೊಂಡರು.

  • ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ

    ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ

    ಟೋಕಿಯೋ: ಜಪಾನ್ (Japan) ಪ್ರಧಾನಿ ಫ್ಯೂಮಿಯೋ ಕಿಶಿಡಾ (Fumio Kishida) ಅವರು ಭಾಷಣ ಮಾಡುತ್ತಿದ್ದ ವೇಳೆ ಹತ್ತಿರದಲ್ಲೇ ಸ್ಫೋಟ (Blast) ಸಂಭವಿಸಿರುವುದಾಗಿ ವರದಿಯಾಗಿದೆ.

    ಪಶ್ಚಿಮ ಜಪಾನ್‌ನ ವಕಯಾಮಾದಲ್ಲಿ (Wakayama) ಕಿಶಿಡಾ ಭಾಷಣ ಮಾಡುತ್ತಿದ್ದರು. ಈ ವೇಳೆ ಪ್ರಧಾನಿಯೆಡೆಗೆ ಸ್ಫೋಟಕ ವಸ್ತುವನ್ನು ಎಸೆಯಲಾಗಿದೆ ಎಂದು ವರದಿಗಳು ತಿಳಿಸಿವೆ. ತಕ್ಷಣವೇ ಕಿಶಿಡಾ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸರು ನಿರಾಕರಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಪ್ರಧಾನಿ ಭಾಷಣ ಮಾಡುತ್ತಿದ್ದ ವೇಳೆ ಅನುಮಾನಾಸ್ಪದ ವಸ್ತುವನ್ನು ಅವರೆಡೆಗೆ ಎಸೆಯಲಾಗಿದೆ. ಈ ವೇಳೆ ಸ್ಥಳದಲ್ಲಿ ಹೊಗೆ ಕಾಣಿಸಿಕೊಂಡಿದೆ. ಸದ್ಯ ಘಟನಾ ಸ್ಥಳದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಧಿಕಾರಿಗಳು ಸ್ಥಳದಲ್ಲಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಕಾರು ಅಪಘಾತ – ಮಾಜಿ ಸಚಿವ ಆಸ್ಪತ್ರೆಗೆ ದಾಖಲು

    ಕಳೆದ ವರ್ಷ ಜುಲೈನಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರು ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಅವರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದ. ಮಾಜಿ ಪ್ರಧಾನಿ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಶಿಂಜೋ ಅಬೆ ಹತ್ಯೆಯ ಬಳಿಕ ಜಪಾನ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಶಾಸಕ ವೆಂಕಟಸ್ವಾಮಿ ಹೃದಯಾಘಾತದಿಂದ ನಿಧನ

  • ಜಪಾನ್‌ ಪ್ರಧಾನಿಯೊಂದಿಗೆ ಗೋಲ್‌ ಗಪ್ಪ, ಲಸ್ಸಿ ಸವಿದ ಮೋದಿ!

    ಜಪಾನ್‌ ಪ್ರಧಾನಿಯೊಂದಿಗೆ ಗೋಲ್‌ ಗಪ್ಪ, ಲಸ್ಸಿ ಸವಿದ ಮೋದಿ!

    ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯಕ್ಕೆ ಸಾಲು ಸಾಲು ಭೇಟಿ ನೀಡುವ ಕಾರ್ಯಕ್ರಮ ಕೈಗೊಂಡಿದ್ದಾರೆ. ಇದೇ ಮಾರ್ಚ್‌ 25ಕ್ಕೆ ಮತ್ತೊಮ್ಮೆ ಭೇಟಿ ನೀಡಲಿರುವ ಮೋದಿ ಬೆಂಗಳೂರಿನಲ್ಲಿ ಬೃಹತ್‌ ರೋಡ್‌ ಶೋ ಸಹ ನಡೆಸಲಿದ್ದಾರೆ. ಇಂತಹ ಬ್ಯೂಸಿ ಶೆಡ್ಯೂಲ್‌ ನಡುವೆಯೂ ಜಪಾನ್‌ ಪ್ರಧಾನಿಯೊಂದಿಗೆ ಕಾಲಕಳೆದಿದ್ದಾರೆ.

    ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ (Fumio Kishida) ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು, ಸೋಮವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಸ್ವಾಗತಿಸಿದ್ದಾರೆ. ಬಳಿಕ ಮೋದಿ ಅವರೊಂದಿಗೆ ದೆಹಲಿಯ ಬುದ್ಧ ಜಯಂತಿ ಪಾರ್ಕ್‌ಗೆ ಭೇಟಿ ನೀಡಿ, ಬೋಧಿ ವೃಕ್ಷಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಇದೇ ವೇಳೆ ಗೋಲ್‌ ಗಪ್ಪ ಮತ್ತು ಲಸ್ಸಿ ಸೇರಿದಂತೆ ಭಾರತೀಯ ಖಾದ್ಯಗಳನ್ನ ಸವಿದು ಸಂತಸಪಟ್ಟಿದ್ದಾರೆ.

    15 ವರ್ಷಗಳ ಹಿಂದೆ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ದೆಹಲಿಗೆ ಭೇಟಿ ನೀಡಿ, ಇಂಡೋ-ಫೆಸಿಪಿಕ್ ಸಹಕಾರ ಕುರಿತಂತೆ ಮಾತನಾಡಿದ್ದರು. ಇದೀಗ ಫ್ಯೂಮಿಯೊ ಕಿಶಿದಾ G7 ಹಿರೋಶಿಮ ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನ ಔಪಚಾರಿಕವಾಗಿ ಆಹ್ವಾನಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಯಲ್ಲಿ 3 ಕಿ.ಮೀ ವರೆಗೆ ಈಜಿದ ಟ್ರಕ್‌ ಡ್ರೈವರ್‌ – ಮುಂದೇನಾಯ್ತು?

    ಇದೇ ವೇಳೆ ಭಾರತ ಮತ್ತು ಜಪಾನ್ ನಡುವೆ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ವಲಯದಲ್ಲಿ ಪರಸ್ಪರ ಸಹಕಾರ ಪಡೆಯುವ ಬಗ್ಗೆ ಮಾತುಕತೆ ನಡೆಸಿದರು. ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಮಾ.25ರಂದು ಮತ್ತೆ ಮೋದಿ ರಾಜ್ಯಕ್ಕೆ – ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋಗೆ ಮುಹೂರ್ತ ಫಿಕ್ಸ್‌