Tag: prime minister

  • ಪ್ರಜಾಪ್ರಭುತ್ವ ಉಳಿಬೇಕಾದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ರಾಹುಲ್ ಪ್ರಧಾನಿಯಾಗ್ಲೇಬೇಕು: ಖರ್ಗೆ

    ಪ್ರಜಾಪ್ರಭುತ್ವ ಉಳಿಬೇಕಾದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ರಾಹುಲ್ ಪ್ರಧಾನಿಯಾಗ್ಲೇಬೇಕು: ಖರ್ಗೆ

    ಬೀದರ್: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ, ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಹಾಗೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡಬೇಕೆಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ಸಿನ ಬೃಹತ್ ಜನಸ್ಪಂದನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ಮುಗಿಸೋದು ಹಾಗೂ ಅಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಬೇಕು. ನಮ್ಮ ಅಧ್ಯಕ್ಷರಾದ ರಾಹುಲ್ ಗಾಂಧಿಯವರನ್ನು ನಾವು ಪ್ರಧಾನಿಯಾಗಿ ಮಾಡಲೇಬೇಕೆಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಏನೋ ಹೇಳಿಕೊಂಡು ಹೋಗುತ್ತಿದ್ದಾರೆ. ಅವರ ಮಾತನ್ನು ಕೇಳುವ ಅವಶ್ಯಕತೆ ನಮಗಿಲ್ಲ, ನಾವೆಲ್ಲರೂ ಇಂದು ದೇಶ ಉಳಿಸುವ ಅಗತ್ಯತೆ ಎದುರಾಗಿದೆ. ಈ ಕುರಿತು ಎಲ್ಲರೂ ಹೋರಾಟ ನಡೆಸಬೇಕಾಗಿದೆ. ಕಾರ್ಯಕರ್ತರು ಎಚ್ಚೆತ್ತು ಕಾಂಗ್ರೆಸ್ ಬಲಪಡಿಸಲು ಸಿದ್ದರಾಗಬೇಕು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿದೇಶಿ ನಾಯಕರಿಗೆ ಆಹ್ವಾನವಿಲ್ಲ

    ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿದೇಶಿ ನಾಯಕರಿಗೆ ಆಹ್ವಾನವಿಲ್ಲ

    ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ಕೆ ಮೋದಿ ಸೇರಿದಂತೆ ಯಾವುದೇ ಅಂತರಾಷ್ಟ್ರೀಯ ನಾಯಕರಿಗೆ ಆಹ್ವಾನ ನೀಡಿಲ್ಲ ಎಂದು ತೆಹ್ರಿಕ್- ಇ-ಇನ್ಸಾಫ್ (ಪಿಟಿಐ) ಪಕ್ಷ ಸ್ಪಷ್ಟಪಡಿಸಿದೆ.

    ಕಳೆದ ಕೆಲ ದಿನಗಳ ಹಿಂದೆ ಭಾರತ ಪ್ರಧಾನಿ ಮೋದಿ ಸೇರಿದಂತೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರಿ ಸಂಘದ (ಸಾರ್ಕ್) ರಾಷ್ಟ್ರಗಳ ಎಲ್ಲಾ ನಾಯಕರಿಗೆ ಆಗಸ್ಟ್ 11 ರಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತದೆ ಎಂದು ವರದಿಯಾಗಿತ್ತು. ಆದರೆ ಸದ್ಯ ಈ ವರದಿಯನ್ನು ತಿರಸ್ಕರಿಸಲಾಗಿದ್ದು, ಭದ್ರತೆಯ ಕಾರಣದಿಂದ ಯಾವುದೇ ನಾಯಕರಿಗೆ ಆಹ್ವಾನ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ.

    ಇಮ್ರಾನ್ ಖಾನ್ ಮುಂದಾಳತ್ವದ ತೆಹ್ರಿಕ್- ಇ-ಇನ್ಸಾಫ್ ಪಕ್ಷದ ವಕ್ತಾರರು ಭಾರತದ ಕಪಿಲ್ ದೇವ್, ನಟ ಅಮೀರ್ ಖಾನ್, ಸುನೀಲ್ ಗವಾಸ್ಕರ್ ಸೇರಿದಂತೆ ನವಜೋತ್ ಸಿಂಗ್ ಸಿದ್ದು ಅವರಿಗೆ ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದ್ದರು. ಆದರೆ ಸದ್ಯ ಪಿಟಿಐ ಹಿರಿಯಾ ನಾಯಕ ಫೈಸಲ್ ಜಾವೇದ್ ನಾವು ಯಾವುದೇ ಸ್ಟಾರ್ ಅಥವಾ ರಾಜಕೀಯ ನಾಯಕರಿಗೆ ಆಹ್ವಾನ ನೀಡಿಲ್ಲ. ಸಮಾರಂಭದಲ್ಲಿ ಕೇವಲ ದೇಶದ ನಾಯಕರಷ್ಟೇ ಭಾಗವಹಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಹಿಂದೆ ಪಿಟಿಐ ವಕ್ತಾರರೊಬ್ಬರು ವಿದೇಶಿ ನಾಯಕರು ಸೇರಿದಂತೆ ಕೆಲ ಸ್ಟಾರ್ ಗಳಿಗೆ ಆಹ್ವಾನ ನೀಡಿದ್ದಾಗಿ ಹೇಳಿದ್ದರು.

    ಬಹುದೊಡ್ಡ ಸಮಾರಂಭ ಮಾಡುವುದರಿಂದ ಜನರ ತೆರಿಗೆ ಹಣ ವ್ಯರ್ಥವಾಗುತ್ತದೆ. ಅದ್ದರಿಂದ ಸರಳ ಸಮಾರಂಭ ಮಾಡುತ್ತೇವೆ ಎಂದು ಪಿಟಿಐ ಮುಖಂಡರೊಬ್ಬರು ಹೇಳಿದ್ದಾರೆ. ಈ ಹಿಂದೆ ಚುನಾವಣೆ ಸಮಯದಲ್ಲಿ ಇಮ್ರಾನ್ ಖಾನ್ ಅನಗತ್ಯ ದುಂದುವೆಚ್ಚ ಮಾಡುವುದಿಲ್ಲ. ಅಲ್ಲದೇ ಪ್ರಧಾನಿ ನಿವಾಸವನ್ನು ಬಳಕೆ ಮಾಡುವುದಿಲ್ಲ ಎಂದು ಭಾಷಣವೊಂದರಲ್ಲಿ ತಿಳಿಸಿದ್ದರು.

    ಇಮ್ರಾನ್ ರ ಈ ಹೇಳಿಕೆಯನ್ನು ಅಲ್ಲಗೆಳೆದಿರುವ ಪಾಕ್ ಮಾಧ್ಯಮಗಳು ಪ್ರಧಾನಿ ನಿವಾಸಿದಲ್ಲಿ ಸರಿಯಾದ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿ ಮಾಡಿದೆ. ಅಲ್ಲದೇ ಪ್ರಮಾಣ ವಚನ ಸಮಾರಂಭಕ್ಕೆ ಗಣ್ಯರಿಗೆ ಆಹ್ವಾನ ನೀಡದಿರಲು ಭದ್ರತೆಯ ಕೊರತೆಯೇ ಪ್ರಮುಖ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

    ಜುಲೈ 25ರಂದು ನಡೆದ ಪಾಕಿಸ್ತಾನ ನಡೆದ ಸಂಸತ್ ಚುನಾವಣೆಯಲ್ಲಿ ಪಿಟಿಐ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ವೇಳೆ ನರೇಂದ್ರ ಮೋದಿ, ಇಮ್ರಾನ್ ಖಾನ್‍ಗೆ ಫೋನ್ ಕರೆ ಮಾಡಿ ವಿಜಯೋತ್ಸವದ ಶುಭಾಶಯ ತಿಳಿಸಿದ್ದರು. ಇದಕ್ಕೂ ಮುನ್ನ ಮಾತನಾಡಿದ ಇಮ್ರಾನ್ ಖಾನ್ ಅವರು, ದ್ವಿಪಕ್ಷೀಯ ನಿಟ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನ ಒಟ್ಟಿಗೆ ಕೆಲಸ ಮಾಡಿ, ಹೊಸ ಅಧ್ಯಾಯ ಬರೆಯಬೇಕು ಎಂದು ಹೇಳಿದ್ದರು.

    2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಆಹ್ವಾನಿಸಿದ್ದರು.

  • ಮೋದಿ ಮೇಲೆ ರಾಸಾಯನಿಕ ದಾಳಿ- ಎಚ್ಚರಿಕೆ ನೀಡಿದ 22ರ ಯುವಕನ ಬಂಧನ

    ಮೋದಿ ಮೇಲೆ ರಾಸಾಯನಿಕ ದಾಳಿ- ಎಚ್ಚರಿಕೆ ನೀಡಿದ 22ರ ಯುವಕನ ಬಂಧನ

    ಮುಂಬೈ: ನ್ಯಾಷನಲ್ ಸೆಕ್ಯುರಿಟಿ ಗಾರ್ಡ್(ಎಸ್‍ಎಸ್‍ಜಿ) ಗೆ ಕರೆ ಮಾಡಿ ಮೋದಿ ಮೇಲೆ ರಾಸಾಯನಿಕ ದಾಳಿ ನಡೆಯುತ್ತದೆ ಅಂತ ಎಚ್ಚರಿಕೆ ನೀಡಿದ 22 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ.

    ಕಾಶಿನಾಥ್ ಮಂದಲ್ ಬಂಧಿತ ಯುವಕನಾಗಿದ್ದು, ಈತ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಸದ್ಯ ಯುವಕನನ್ನು ಜುಲೈ 27ರಂದು ಮುಂಬೈ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಏನಿದು ಘಟನೆ?:
    ಮಂದಲ್ ದೆಹಲಿಯಲ್ಲಿರೋ ಎನ್‍ಎಸ್‍ಜಿ ಕಂಟ್ರೋಲ್ ರೂಮ್ ನ ನಂಬರ್ ಪಡೆದುಕೊಂಡು ಶುಕ್ರವಾರ ಕರೆ ಮಾಡಿದ್ದಾನೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇಂದು ರಾಸಾಯನಿಕ ದಾಳಿ ನಡೆಯತ್ತದೆ ಎಚ್ಚರಿಕೆ ನೀಡಿದ್ದನು. ಕೂಡಲೇ ಅಧಿಕಾರಿಗಳು ಆ ನಂಬರ್ ಟ್ರ್ಯಾಕ್ ಮಾಡಿದ್ದಾರೆ. ನಂತರ ಮುಂಬೈ ಪೊಲೀಸರಿಗೆ ಕರೆ ಮಾಡಿ ಮಾಹಿತಿ ರವಾನಿಸಿದ್ದಾರೆ.

    ಕೂಡಲೇ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಆ ನಂಬರ್ ಟ್ರೇಸ್ ಮಾಡಿದ್ದಾರೆ. ವ್ಯಕ್ತಿಯನ್ನು ಮಂದಲ್ ಎಂದು ಗುರುತಿಸಿ, ಜಾರ್ಖಂಡ್ ಮೂಲದವನು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಕೂಡಲೇ ಅವರು ಮುಂಬೈ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ತೆರಳಿ ಆತನನ್ನು ಸೆರೆಹಿಡಿದಿದ್ದಾರೆ. ಪೊಲೀಸರು ಬಂಧಿತನ ವಿಚಾರಣೆ ನಡೆಸಿದಾಗ, ಓಂ ಸೆಕ್ಯುರಿಟಿ ಸರ್ವಿಸ್ ನಲ್ಲಿ ಸುಮಾರು 7 ತಿಂಗಳಿಂದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದೆ. ಕಳೆದ ರಾತ್ರಿಯಷ್ಟೇ ನಾನು ಕೆಲಸ ಬಿಟ್ಟಿದ್ದೇನೆ ಎಂದು ಹೇಳಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ತಂಡ(ಎಟಿಎಸ್) ಬಂಧಿತ ಮಂದಲ್ ನನ್ನು ವಿಚಾರಣೆ ನಡೆಸಿದಾಗ, ಗೂಗಲ್ ಸರ್ಚ್ ಮಾಡಿ ನಾನು ಎನ್‍ಎಸ್‍ಜಿ ನಂಬರ್ ಪಡೆದುಕೊಂಡೆ. ಸಮಾರಂಭದಲ್ಲಿ ಭಯ ಹುಟ್ಟಿಸುವಂತಹ ಕೆಲಸ ಮಾಡುವ ಉದ್ದೇಶದಿಂದ ಈ ರೀತಿ ಮಾಡಿದ್ದೇನೆ. ಅಲ್ಲದೇ ಪೊಲೀಸರು ನನ್ನನ್ನು ಟ್ರೇಸ್ ಮಾಡುತ್ತಾರೆ ಅಂತ ಗೊತ್ತಿತ್ತು ಅಂತ ಹೇಳಿದ್ದಾನೆ.

    ಮಂದಲ್ ತಾನು ನೆಲೆಸಿದ್ದ ಗ್ರಾಮವನ್ನು ಬಿಟ್ಟು ಬೇರೆ ಕಡೆ ಹೋಗಲು ಮುಂಬೈ ರೈಲ್ವೇ ನಿಲ್ದಾಣದಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ. ಸದ್ಯ ಬಂಧಿತ ಮಂದಲ್ ನಿಂದ ಮೊಬೈಲ್ ವಶಪಡಿಸಿಕೊಂಡು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಮೊದಲು ಇಂಡೋ, ಪಾಕ್ ಸಂಬಂಧ ಸುಧಾರಿಸಲಿ-ಬಳಿಕ ಕ್ರಿಕೆಟ್ ಮಾತು: ಕಪಿಲ್ ದೇವ್

    ಮೊದಲು ಇಂಡೋ, ಪಾಕ್ ಸಂಬಂಧ ಸುಧಾರಿಸಲಿ-ಬಳಿಕ ಕ್ರಿಕೆಟ್ ಮಾತು: ಕಪಿಲ್ ದೇವ್

    ನವದೆಹಲಿ: ಕ್ರೀಡಾಂಗಣದಲ್ಲಿ ಹಲವು ಬಾರಿ ನೇರ ಹಣಾಹಣಿ ನಡೆಸಿದ್ದ ಪಾಕ್ ಮಾಜಿ ಆಟಗಾರ ಇಮ್ರಾನ್ ಖಾನ್ ಚುನಾವಣೆಯಲ್ಲಿ ಯಶಸ್ವಿಯಾಗಿದ್ದು ಖುಷಿ ತಂದಿದೆ. ಆದರೆ ಎರಡು ದೇಶಗಳ ನಡುವಿನ ಉತ್ತಮ ಸಂಬಂಧ ಬೆಳವಣಿಗೆ ಮುಖ್ಯ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

    ಮಾಧ್ಯಮವೊಂದಕ್ಕೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಪಿಲ್ ದೇವ್, ವಿಶ್ವದ ಹಲವು ಕ್ರಿಕೆಟ್ ಅಭಿಮಾನಿಗಳು ಭಾರತ ಹಾಗೂ ಪಾಕ್ ನಡುವೆ ಹೆಚ್ಚಿನ ಕ್ರಿಕೆಟ್ ಪಂದ್ಯಗಳು ನಡೆಯಬೇಕು ಎಂದು ಹೇಳುತ್ತಾರೆ. ಆದರೆ ಇದಕ್ಕೂ ಮುನ್ನ ದೇಶದ ನಡುವೆ ಉತ್ತಮ ಸಂಬಂಧ ಉಂಟಾಗುವುದು ಮುಖ್ಯ. ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆಯಾಗುವ ಕುರಿತ ವಿಶ್ವಾಸವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಇಮ್ರಾನ್ ಯಶಸ್ಸಿನ ಕುರಿತು ತಾನು ಸಂತಸನಾಗಿದ್ದೇನೆ. ಪಾಕ್ ಕ್ರಿಕೆಟ್ ತಂಡವನ್ನು ಇಮ್ರಾನ್ ಮುನ್ನಡೆಸಿದ್ದ ರೀತಿ ತಮ್ಮಲ್ಲಿ ವಿಶ್ವಾಸ ಮೂಡಿಸಿದೆ. ಹಿಂದಿನಿಂದಲೂ ಇಮ್ರಾನ್ ಸಕ್ಸಸ್ ಪಡೆಯಲು ಸಾಕಷ್ಟು ಶ್ರಮವಹಿಸಿದ್ದಾರೆ. ಅವರಿಗೆ ಈ ಕಾರ್ಯವನ್ನು ನಿರ್ವಹಿಸುವ ಶಕ್ತಿ ಇರುವುದರಿಂದ ರಾಜಕೀಯ ಜೀವನದ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.

    ಪಾಕಿಸ್ತಾನ ತಂಡದ ನಾಯಕತ್ವ ವಹಿಸಿದ ಇಮ್ರಾನ್ ಗೆ ಆಟಗಾರರನ್ನು ನಿರ್ವಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆ ವೇಳೆ ಪಾಕ್ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಲು ಇಮ್ರಾನ್ ನಾಯಕತ್ವ ಕಾರಣ. ಆದ್ದರಿಂದ ಪಾಕ್ ಮುಂದಿನ ಪ್ರಧಾನಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ ಎಂದರು.

  • ದೇಶಕ್ಕಾಗಿಯೇ ಕುಟುಂಬ ತ್ಯಾಗ ಮಾಡಿದ್ದು, ರಾಹುಲ್ ಅವರೇ ಪ್ರಧಾನಿಯಾಗ್ಬೇಕು: ಡಿಕೆಶಿ

    ದೇಶಕ್ಕಾಗಿಯೇ ಕುಟುಂಬ ತ್ಯಾಗ ಮಾಡಿದ್ದು, ರಾಹುಲ್ ಅವರೇ ಪ್ರಧಾನಿಯಾಗ್ಬೇಕು: ಡಿಕೆಶಿ

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಪ್ರಧಾನಿ ಆಗೋದರ ಬಗ್ಗೆ ನಮ್ಮ ಪಾರ್ಟಿ ತೀರ್ಮಾನ ಮಾಡುತ್ತದೆ. ದೇಶದ ಹಿತದೃಷ್ಟಿಯಿಂದ ಆ ಮನೆತನ ಯಾವಾಗಲೂ ತ್ಯಾಗ ಮಾಡುತ್ತಾ ಬಂದಿದೆ ಅಂತ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿಯವರು ಯಾವತ್ತೋ ಪ್ರಧಾನಿ ಆಗಬಹುದಿತ್ತು. ರಾಹುಲ್ ಗಾಂಧಿಯವರೂ ಪ್ರಧಾನಿಯಾಗಬೇಕಿತ್ತು. ಆದ್ರೆ ವ್ಯಕ್ತಿಗಿಂತ ದೇಶ ಮುಖ್ಯ ಅನ್ನೋದನ್ನು ರಾಹುಲ್ ಪ್ರತಿಪಾದನೆ ಮಾಡುತ್ತಾ ಬಂದಿದ್ದಾರೆ ಅಂದ್ರು.

    ರಾಷ್ಟ್ರಧ್ವಜ ನನ್ನ ಧರ್ಮ ಅಂತ ಹೇಳಿದವರು ರಾಹುಲ್ ಗಾಂಧಿಯವರು. ಈ ಹಿನ್ನೆಲೆಯಲ್ಲಿ ಅವರು ನಾನು ಪ್ರಧಾನಿಯಾಗಬೇಕೆಂದು ಎಲ್ಲೂ ಹೇಳಿಕೆ ನೀಡಿಲ್ಲ. ಯಾಕಂದ್ರೆ ಬೇರೆಯವರಿಗೂ ಅವಕಾಶ ಸಿಗಲಿ ಅಂತ ನಂಬಿದ್ದಾರೆ. ಒಟ್ಟಿನಲ್ಲಿ ರಾಹುಲ್ ಗಾಂಧಿಯೇ ನಮ್ಮ ನಾಯಕ ಅಂತ ಅವರು ಹೇಳಿದ್ರು. ಇದನ್ನೂ ಓದಿ: ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಯೇ ಹೊರತು, ಸಾಲದಿಂದಲ್ಲ: ಆತ್ಮಹತ್ಯೆಗೆ ಡಿಕೆಶಿ ವ್ಯಾಖ್ಯಾನ

    ಇದೇ ಸಂದರ್ಭದಲ್ಲಿ ಮಲಪ್ರಭೆಗೆ ಮಹದಾಯಿ ನೀರನ್ನು ತಿರುಗಿಸಿಕೊಂಡಿದೆ ಎಂಬ ಗೋವಾ ಸರ್ಕಾರದ ಕ್ಯಾತೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಕಾನೂನು ಚೌಕಟ್ಟಿನಲ್ಲೇ ಇದ್ದೇವೆ. ಲೀಕೇಜ್ ನೀರಿನ ಬಗ್ಗೆಯೂ ನ್ಯಾಯಧೀಕರಣ ಗಮನಕ್ಕೆ ತಂದಿದ್ದೇವೆ. ಫೋಟೋ ಸಮೇತ ಕೊಟ್ಟಿದ್ದೇವೆ. ನಾವು ಎಲ್ಲೂ ನೀರನ್ನು ಬಳಕೆ ಮಾಡ್ತಿಲ್ಲ. ಗೋವಾ ಸಣ್ಣ ರಾಜ್ಯ. ಹೀಗಾಗಿ ಅವರ ಜೊತೆ ಯುದ್ಧ, ಜಗಳ ಮಾಡೋದಕ್ಕೆ ಇಷ್ಟ ಇಲ್ಲ. ಆಗಸ್ಟ್ ಒಳಗೆ ನ್ಯಾಯಬದ್ಧವಾದ ತೀರ್ಪು ಬರುವ ನಂಬಿಕೆ ಇದೆ. ಗೋವಾದವರು ಕೂಡ ಆ ನೀರನ್ನ ಬಳಸಿಕೊಳ್ಳಲಿ ಅಂತ ಹೇಳಿದ್ರು.

  • ಕೈ ಕೈ ಹಿಡಿದು ಮಕ್ಕಳನ್ನು ದಾಟಿಸುತ್ತಿದ್ದಾರೆ ಗುಜರಾತ್ ಗ್ರಾಮಸ್ಥರು

    ಕೈ ಕೈ ಹಿಡಿದು ಮಕ್ಕಳನ್ನು ದಾಟಿಸುತ್ತಿದ್ದಾರೆ ಗುಜರಾತ್ ಗ್ರಾಮಸ್ಥರು

    ಗಾಂಧಿನಗರ: ಸೇತುವೆ ಮುರಿದು ಬಿದ್ದಿದ್ದ ಪರಿಣಾಮ ಬ್ಯಾರೇಜ್ ದಾಟಿ ಶಾಲೆಗೆ ಹೋಗಲು ಮಕ್ಕಳು ಹರಸಾಹಸ ಪಡುತ್ತಿರುವ ಪರಿಸ್ಥಿತಿ ಗುಜರಾತ್‍ನ ಗ್ರಾಮವೊಂದರಲ್ಲಿ ನಿರ್ಮಾಣವಾಗಿದೆ.

    ಗುಜರಾತ್‍ನ ಖೇಡಾ ಜಿಲ್ಲೆಯ ನಾಯ್ಕಾ ಹಾಗೂ ಭೈರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬ್ಯಾರೆಜ್ ಸೇತುವೆ ಎರಡು ತಿಂಗಳ ಹಿಂದೆಯೇ ಮುರಿದು ಬಿದ್ದಿದೆ. ಮಕ್ಕಳು ಇದೇ ಸೇತುವೆ ಮೂಲಕವೇ ಶಾಲೆಗೆ ಹೋಗಬೇಕು. ಹೀಗಾಗಿ ನಿತ್ಯವೂ ಮಕ್ಕಳನ್ನು ಸೇತುವೆ ದಾಟಿಸಲು ಪೋಷಕರು, ಇಲ್ಲವೇ ಸ್ಥಳೀಯರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ನಾಯ್ಕಾ ಹಾಗೂ ಭೈರೆ ಗ್ರಾಮಕ್ಕೆ ಸಂಪರ್ಕ ಸಲ್ಪಿಸಲು ಮತ್ತೊಂದು ದಾರಿಯಿದೆ. ಅದು 10 ಕಿ.ಮೀ. ಸುತ್ತುವರಿದು ಬರಬೇಕಾಗುತ್ತದೆ. ಸೇತುವೆ ಮೂಲಕ ಹೋದರೆ ಕೇವಲ 1 ಕಿ.ಮೀ. ಅಷ್ಟೇ. ಹೀಗಾಗಿ ಇದೇ ಬ್ಯಾರೇಜ್‍ನ ಪ್ರತಿ ಕಟ್ಟೆಯ ಮೇಲೆ ಒಬ್ಬರು ನಿಂತು, ಮಕ್ಕಳನ್ನು ಹಿಡಿದು ಕಾಲುವೆ ದಾಟಿಸುತ್ತಿದ್ದಾರೆ. ಜೀವ ಭೀತಿಯಲ್ಲಿ ಕಳೆದ ಎರಡು ತಿಂಗಳಿನಿಂದ ಈ ಯಾತನೆಯನ್ನು ಗ್ರಾಮಸ್ಥರು ಪಡುತ್ತಿದ್ದಾರೆ.

    ಕೆಲವೇ ದಿನಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಮಳೆಯಿಂದಾಗಿ ಕಾಮಗಾರಿ ಆರಂಭಗೊಳ್ಳಲು ತಡವಾಗುತ್ತಿದೆ ಎಂದು ಮಳೆಯಿಂದಾಗಿ ಜಿಲ್ಲಾಧಿಕಾರಿ ಐ.ಕೆ.ಪಟೇಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕೈಕೈ ಹಿಡಿದು ಮಕ್ಕಳು ಸೇತುವೆ ದಾಟುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://youtu.be/7Ma7zRL7538

  • ಬ್ರಾಹ್ಮಣ ಕನ್ಯೆಯನ್ನು ಮದುವೆಯಾದ್ರೆ ರಾಹುಲ್ ಗಾಂಧಿ ಪ್ರಧಾನಿ ಆಗ್ತಾರೆ: ದಿವಾಕರ್ ರೆಡ್ಡಿ

    ಬ್ರಾಹ್ಮಣ ಕನ್ಯೆಯನ್ನು ಮದುವೆಯಾದ್ರೆ ರಾಹುಲ್ ಗಾಂಧಿ ಪ್ರಧಾನಿ ಆಗ್ತಾರೆ: ದಿವಾಕರ್ ರೆಡ್ಡಿ

    ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಆಗಬೇಕಾದರೆ ಬ್ರಾಹ್ಮಣ ಯುವತಿಯನ್ನು ಮದುವೆ ಆಗಬೇಕು ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕ ಸಿ.ದಿವಾಕರ್ ರೆಡ್ಡಿ ಹೇಳಿದ್ದಾರೆ.

    ವಿಶಾಖಪಟ್ಟಣಂನಲ್ಲಿ ನಡೆದ ಕಾರ್ಯಕ್ರಮವೊಂದರ ಭಾಷಣದ ವೇಳೆ ಶಾಸಕ ಸಿ ದಿವಾಕರ್ ರೆಡ್ಡಿ ಅವರು ಪ್ರಸ್ತಾಪಿಸಿದ ಮಾತುಗಳು ರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಹುಲ್ ಗಾಂಧಿ ಬ್ರಾಹ್ಮಣ ಕನ್ಯೆಯನ್ನು ವರಿಸಿದರೆ ಪ್ರಧಾನಿ ಆಗೋದು ಪಕ್ಕಾ ಎಂದು 2014 ಲೋಕಸಭಾ ಪೂರ್ವದಲ್ಲಿಯೇ ಸೋನಿಯಾ ಗಾಂಧಿ ಅವರಿಗೆ ದಿವಾಕರ್ ರೆಡ್ಡಿ ಅವರು ಹೇಳಿದ್ದರಂತೆ.

    “ರಾಷ್ಟ್ರ ರಾಜಕೀಯದಲ್ಲಿ ಉತ್ತರ ಪ್ರದೇಶ ಬ್ರಾಹ್ಮಣರ ಬೆಂಬಲ ಅಗತ್ಯ. ಏಕೆಂದರೆ ಅಲ್ಲಿ ರಾಜ್ಯವನ್ನು ಆಳುತ್ತಿರುವುದು ಬ್ರಾಹ್ಮಣರೇ. ಹೀಗಾಗಿ ಉತ್ತಮ ಬ್ರಾಹ್ಮಣ ಕನ್ಯೆಯನ್ನು ರಾಹುಲ್ ಅವರಿಗೆ ತನ್ನಿ ಅಂತಾ ಸೋನಿಯಾ ಗಾಂಧಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಸ್ಥಾನ ತಪ್ಪಿತು’ ಎಂದು ಕಾಂಗ್ರೆಸ್ಸಿನಲ್ಲಿ ತಾವು ನೀಡಿದ್ದ ಸಲಹೆಯನ್ನು ಈಗ ಹೊರಹಾಕಿದ್ದಾರೆ.

  • ಪ್ರಧಾನಿ, ಮುಖ್ಯಮಂತ್ರಿ ಹುದ್ದೆಗೆ ಎಷ್ಟು ಬಾರಿ ಆಯ್ಕೆ ಅವಧಿ ನಿಗದಿಪಡಿಸಿ -`ಕೈ’ ಮುಖಂಡ ಸಿಂಧಿಯಾ

    ಪ್ರಧಾನಿ, ಮುಖ್ಯಮಂತ್ರಿ ಹುದ್ದೆಗೆ ಎಷ್ಟು ಬಾರಿ ಆಯ್ಕೆ ಅವಧಿ ನಿಗದಿಪಡಿಸಿ -`ಕೈ’ ಮುಖಂಡ ಸಿಂಧಿಯಾ

    ನವದೆಹಲಿ: ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಹುದ್ದೆಗೆ ಒಬ್ಬ ವ್ಯಕ್ತಿ ಎಷ್ಟು ಬಾರಿ ಆಯ್ಕೆ ಮಾಡಬಹುದು ಎಂಬುವುದನ್ನು ನಿಗದಿ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ, ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

    ಮಹಾರಾಷ್ಟ್ರ ಗುನಾ ಲೋಕಾಸಭಾ ಕ್ಷೇತ್ರದ ಸಂಸದರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಹೆಚ್ಚಿನ ಅವಧಿ ನೇಮಕ ಹಾಗೂ ರಾಜ್ಯ ಸರ್ಕಾರಗಳು ನಿಗಧಿ ಮಾಡಿರುವ ನಿವೃತ್ತಿ ವಯಸ್ಸಿನ ಕುರಿತ ಪ್ರಶ್ನೆಗೆ ಉತ್ತರಿಸಿ, ಅಮೆರಿಕಲ್ಲಿ 2 ಅವಧಿಗೆ ಅಧ್ಯಕ್ಷರಾಗಲು ಅವಕಾಶವಿದ್ದು, ಇಂತಹ ನಿಯಮವನ್ನು ನಾವು ನಿಗಧಿ ಮಾಡಬೇಕಿದೆ ಎಂದು ಹೇಳಿದ್ದಾರೆ. ಅಲ್ಲದೇ ಯಾವುದೇ ಒಬ್ಬ ವ್ಯಕ್ತಿ ವೃತ್ತಿ ಜೀವನದ ಅಂಚಿನಲ್ಲಿದ್ದರೆ ಆತನ ಸ್ಥಾನಕ್ಕೆ ಉತ್ತಮ ವ್ಯಕ್ತಿಯನ್ನು ನೇಮಿಸುವ ಹಾಗೇ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಹುದ್ದೆಗಳನ್ನು ಆಕ್ರಮಿಸಿಕೊಂಡಿರುವ ಜನರ ಅಧಿಕಾರಾವಧಿಗಳನ್ನು ಸಹ ನಿಗದಿಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

    ನಿವೃತ್ತ ಸರ್ಕಾರಿ ಅಧಿಕಾರಿಗಳನ್ನು ಮತ್ತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೇಮಕ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಅಂತಹ ಅಧಿಕಾರಿಗಳು ನೇಮಕವಾದರೆ ಪಿತೂರಿ ನಡೆಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಇದೇ ವೇಳೆ ಮಹಾರಾಷ್ಟ್ರ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಅವರು, ಸರ್ಕಾರದ ರೈತರ ಆತ್ಮಹತ್ಯೆಗಳು ಹಾಗೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಲು ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಭೋಪಾಲ್ ನಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ರೇಪ್ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

  • ಮೋದಿ ಅಲೆ ಎದುರಿಸಲು ರಾಹುಲ್ ಬಿಗ್ ಪ್ಲಾನ್ – ಕೊನೆಗೂ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಅನ್ನೋದು ನಿರ್ಧಾರವಾಯ್ತು!

    ಮೋದಿ ಅಲೆ ಎದುರಿಸಲು ರಾಹುಲ್ ಬಿಗ್ ಪ್ಲಾನ್ – ಕೊನೆಗೂ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಅನ್ನೋದು ನಿರ್ಧಾರವಾಯ್ತು!

    ನವದೆಹಲಿ: ಮುಂಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯನ್ನು ತಡೆಯಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ನಡೆಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿದೆ.

    ಕಾಂಗ್ರೆಸ್ ಒಂದೊಮ್ಮೆ ಕೇವಲ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದರೆ, ಸ್ವಾತಂತ್ರ್ಯ ನಂತರ ಅತೀ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದಂತಾಗುತ್ತದೆ. ಎರಡನೇ ಬಾರಿಗೆ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆ ಮಾಡದಂತೆ ತಡೆಯುವ ಮೂಲಕ ಸಮಾನ ಮನಸ್ಸಿನ ಇತರೇ ಪಕ್ಷಗಳೊಂದಿಗೆ `ಮಹಾಮೈತ್ರಿ’ ಮಾಡಲು ಕಾಂಗ್ರೆಸ್ ಈ ತಂತ್ರ ಮಾಡಿದೆ ಎನ್ನಲಾಗಿದೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮುಂದಾಳತ್ವದಲ್ಲಿ ರೂಪುಗೊಳ್ಳಲಿರುವ ಮಹಾಮೈತ್ರಿಗೆ ಕಾಂಗ್ರೆಸ್ ಹಿರಿಯ ನಾಯಕ ಎಕೆ ಅ್ಯಂಟನಿ ನೇತೃತ್ವದ ಹಿರಿಯರ ಸಮಿತಿ ದೇಶಾದ್ಯಂತ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳಿಂದ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲು ಮುಂದಾಗಿದೆ. ಕಾಂಗ್ರೆಸ್ ಕಮಿಟಿ ನೀಡುವ ಸಲಹೆ ಮೇರೆಗೆ ರಾಹುಲ್ ಗಾಂಧಿ ಅವರು ಮೈತ್ರಿ ಮಾಡಿಕೊಳ್ಳುವ ಅಂತಿಮ ತೀರ್ಮಾನ ಮಾಡಲಿದ್ದಾರೆ.

    ಕಾಂಗ್ರೆಸ್ ಹಿರಿಯ ನಾಯಕರ ಸಮಿತಿ ಮತ್ತೊಂದು ಹಂತದಲ್ಲಿ ಕ್ಷೇತ್ರವಾರು ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಸಿದ್ಧತೆ ನಡೆಸುತ್ತಿದ್ದು, ಉತ್ತಮ ಹಿನ್ನೆಲೆ ಹೊಂದಿರುವ, ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡುತ್ತಿದ್ದು, ಇದು ಮಹಾಮೈತ್ರಿಗೆ ಸೂಚನೆ ಎನ್ನಲಾಗಿದೆ. ಆದರೆ 2014 ರ ಚುನಾವಣೆಯಲ್ಲಿ ಮೋದಿ ಅಲೆ ನಡುವೆಯೂ ಗೆದ್ದು ಬೀಗಿದ್ದ 44 ಸ್ಥಾನಗಳನ್ನು ಮಾತ್ರ ಬಿಟ್ಟುಕೊಡದಿರಲು ನಿರ್ಧರಿಸಿದೆ ಎನ್ನಲಾಗಿದೆ.

    ಪ್ರಮುಖವಾಗಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಈ ಮೈತ್ರಿ ಪರಿಣಾಮಕಾರಿಯಾಗಿ ರೂಪುಗೊಳ್ಳಲು ಸಿದ್ಧತೆ ನಡೆಸಿದೆ. ಈ ಮೈತ್ರಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಹತ್ವದ ಸ್ಥಾನ ಪಡೆಯಲು ಚಿಂತನೆ ನಡೆಸಿದೆ. ಆದರೆ ದಕ್ಷಿಣ ರಾಜ್ಯಗಳಾದ ತೆಲಂಗಾಣದಲ್ಲಿ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೆಡ್ಡು ನೀಡಲು ಮುಂದಾಗಿದೆ. ಇದು ರಾಹುಲ್ ಗಾಂಧಿ ಅವರ ಮಹಾಮೈತ್ರಿಗೆ ಸವಾಲಾಗಿದೆ.

    ಮಹಾಮೈತ್ರಿಯಲ್ಲಿ ಪ್ರಧಾನಿ ಪಟ್ಟಕ್ಕಾಗಿ ರಾಹುಲ್ ಗಾಂಧಿ ಈ ಹಿಂದೆ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಸಹ ಮೈತ್ರಿ ಮುಂದಾಗಿರುವ ಹಲವು ಪಕ್ಷಗಳಲ್ಲಿ ಈ ಕುರಿತು ಅಸಮಾಧಾನ ಇರುವ ಸಾಧ್ಯತೆಗಳಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಂತಹ ನಾಯಕರು ಈ ಕುರಿತು ಒಮ್ಮತ ವ್ಯಕ್ತಪಡಿಸಬೇಕಾದ ಅನಿವಾರ್ಯತೆ ಇದೆ.

  • ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯತೆಯ ಬಣ ಪ್ರಯೋಗಿಸಿದ ಮೋದಿ

    ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯತೆಯ ಬಣ ಪ್ರಯೋಗಿಸಿದ ಮೋದಿ

    ಕಲಬುರಗಿ: ಕರ್ನಾಟಕ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯತೆಯ ಬಣ ಪ್ರಯೋಗಿಸಿದ್ದಾರೆ.

    ಕಲಬುರಗಿ ನಗರದ ಎನ್‍ವಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸೇನೆ ಹಾಗೂ ಯೋಧರ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್ ನಿಂದ ದೇಶಕ್ಕೆ ಗೌರವ ನೀಡುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಲಬುರಗಿ ಜಿಲ್ಲೆ ಶರಣರು ಸಂತರು ನಡೆದಾಡಿದ ಪುಣ್ಯ ಭೂಮಿ. ಅನೇಕ ಮಹಾಪುರಷರು ನಡೆದಾಡಿದ ಈ ನೆಲಕ್ಕೆ ಜನರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಅವರು, ಇಂತಹ ಉರಿ ಬಿಸಿಲಲ್ಲೂ ಇಷ್ಟೊಂದು ಜನ ಸಮಾವೇಶದಲ್ಲಿ ಭಾಗವಹಿಸಿರುವುದನ್ನು ಗಮನಿಸಿದರೆ ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಇದು ಸಕಾಲ ಎಂದೇನಿಸುತ್ತಿದೆ. ಇದು ಕಾಂಗ್ರೆಸ್‍ಗೆ ಎಚ್ಚರಿಕೆಯ ಗಂಟೆ. ಹಲವು ಚುನಾವಣೆಗಳು ಈ ಹಿಂದೆ ಬಂದಿದೆ ಹೋಗಿದೆ. ಆದ್ರೆ ಕರ್ನಾಟಕದ ಜನತೆ ಈ ಬಾರಿ ಸರ್ಕಾರ ಬದಲಿಸುವ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ನಾಲ್ಕು ಮೂಲೆಗಳಲ್ಲಿ ಕೇಸರಿ ಬಾವುಟ ಹಾರಿಸಲಿದ್ದೇವೆ. ಕರ್ನಾಟಕವನ್ನು ಲೂಟಿ ಹೊಡೆಯಲು ಬಿಡುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿಯಿಂದ ಜನರಲ್ಲಿ ಹೊಸ ವಿಶ್ವಾಸ ಮೂಡಿದೆ. ಈ ಚುನಾವಣೆ ಕರ್ನಾಟಕದ ಯುವಜನತೆಯ ಭವಿಷ್ಯ ನಿರ್ಧರಿಸಲಿದೆ. ಇಲ್ಲಿಯ ಯುವಕರಿಗೆ ತಮ್ಮ ಹಕ್ಕು ದೊರೆಯಬೇಕಾಗಿದೆ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿ ಮನವಿ ಮಾಡಿದರು.

    ಕಲಬುರಗಿ ಭಾರತ ಐಕ್ಯತೆಯ ಸಂಕೇತ: ಕಲಬುರಗಿಯೊಂದಿಗೆ ದೇಶದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ವಿಶೇಷವಾದ ನಂಟಿದೆ. ಸ್ವಾತಂತ್ರ್ಯ ನಂತರ ಹೈದರಾಬಾದ್ ನಿಜಾಮರು ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ್ದರು. ಈ ವೇಳೆ ಪಟೇಲರು ನಿಜಾಮ ಸೆದೆಬಡಿದು ಕಲಬುರಗಿಯನ್ನು ಭಾರತದೊಳಗೆ ವಿಲೀನಗೊಳಿಸಿದರು. ಕಲಬುರುಗಿ ವಿಲೀನ ನಂತರವೂ ನಿಜಾಮರು ಇಲ್ಲಿ ಹಿಂಸಾಚಾರ ನಡೆಸಿದ್ದರು. ಈ ವೇಳೆ ಹಲವು ಯೋಧರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಇದನ್ನು ನೆನೆಯಲು ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶವಿತ್ತು, ಆದ್ರೆ ಇದನ್ನು ಕಾಂಗ್ರೆಸ್ ಮಾಡಿಲ್ಲ. ದೇಶದ ಯೋಧರಿಗೆ ಕಾಂಗ್ರೆಸ್ ಅಗೌರವ ಸೂಚಿಸಿದೆ. ಸರ್ಜಿಕಲ್ ಸ್ಟ್ರೈಕ್ ವೇಳೆ ಸಾಕ್ಷ್ಯ ಕೇಳಿದರು. ಯೋಧರು ವಿರೋಧಿಗಳ ಮೇಲೆ ದಾಳಿ ನಡೆಸುವ ವೇಳೆ ಕ್ಯಾಮೆರಾ ತೆಗೆದುಕೊಂಡು ಹೋಗಬೇಕಾ ಅಥವಾ ಬಂದುಕು ತೆಗೆದುಕೊಂಡು ಹೋಗ ಬೇಕಾ ಎಂದು ಮೋದಿ ಪ್ರಶ್ನಿಸಿದರು.

    ಪಾಟೇಲ್ ಅವರ ಹೆಸರು ಕೇಳಿದರೆ ಕಾಂಗ್ರೆಸ್ ಒಂದು ಪರಿವಾರಕ್ಕೆ ನಿದ್ದೆ ಬರುವುದಿಲ್ಲ. ಕಾಂಗ್ರೆಸ್ ಗೆ ಕರ್ನಾಟಕದ ಶ್ರೇಷ್ಠ ಸೇನಾ ಅಧಿಕಾರಿಗಳಾದ ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಗ್ಗೆಯೂ ಗೌರವವಿಲ್ಲ. ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಕಾಂಗ್ರೆಸ್ ಗೆ ದೇಶ ಪ್ರೇಮದ ಅರ್ಥ ಎನ್ ಗೊತ್ತು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಖರ್ಗೆ ಸಿಎಂ ಸ್ಥಾನ : ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಂಪತ್ತು ಎಷ್ಟಿದೆ ನಿಮಗೊತ್ತಾ ಎಂದು ಪ್ರಶ್ನಿಸಿರುವ ಮೂಲಕ ಪ್ರಧಾನಿ ಮೋದಿ ಖರ್ಗೆಗೆ ಟಾಂಗ್ ನೀಡಿದರು. ಈ ಹಿಂದೆ ಚುನಾವಣೆಯಲ್ಲಿ ದಲಿತರ ಕಲ್ಯಾಣ ಮಾಡುತ್ತೇವೆ ಎಂದು ಹೇಳಿ ಖರ್ಗೆ ಅವರನ್ನು ಸಿಎಂ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಅಧಿಕಾರ ಬಂದ ಮೇಲೆ ಗುಪ್ತ ಮತದಾನದ ಹೆಸರಿನಲ್ಲಿ ಖರ್ಗೆಯವರನ್ನು ಸಿಎಂ ಮಾಡದೇ ಕಾಂಗ್ರೆಸ್ ದಲಿತರಿಗೆ ಮೋಸ ಮಾಡಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕಮಲ ಅರಳುತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರ ಕುಟುಂಬ ಅರಳುತ್ತೆ ಎಂದು ಟಾಂಗ್ ನೀಡಿದರು.