Tag: prime minister

  • ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದ್ರೆ ದೇಶ ಉದ್ಧಾರ ಆಗಲ್ಲ: ಬಸವರಾಜ ರಾಯರೆಡ್ಡಿ

    ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದ್ರೆ ದೇಶ ಉದ್ಧಾರ ಆಗಲ್ಲ: ಬಸವರಾಜ ರಾಯರೆಡ್ಡಿ

    – ಪ್ರಧಾನಿ ಮೋದಿಗೆ ಏನೂ ಗೊತ್ತಿಲ್ಲ, ಆದ್ರೂ ದೇಶ ಆಳುತ್ತಿದ್ದಾರೆ

    ಕೊಪ್ಪಳ: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದರೇ ದೇಶ ಉದ್ಧಾರ ಆಗಲ್ಲ. ಶಾಲೆ ಕಟ್ಟಿದರೆ ಉದ್ಧಾರವಾಗುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

    ನಗರದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವರು, ಮಂದಿರ, ಮಸೀದಿ ಹಾಗೂ ಚರ್ಚ್ ಕಟ್ಟುವುದು ರಾಜಕೀಯ ಪಕ್ಷದ ಕೆಲಸವಲ್ಲ. ದೇಶ ಕಟ್ಟುವುದು ಸರ್ಕಾರದ ಮುಖ್ಯ ಗುರಿಯಾಗಿರಬೇಕು. ಹೀಗಿದ್ದರೂ ರಾಮ ಮಂದಿರ ನಿರ್ಮಾಣದಲ್ಲಿ ಪಕ್ಷಗಳು ಭಾಗವಹಿಸುತ್ತಿರುವುದು ದೊಡ್ಡ ದುರ್ದೈವ ಎಂದು ಕಿಡಿಕಾರಿದರು. ಇದನ್ನು ಓದಿ: ಕೇಂದ್ರ ಸರ್ಕಾರ ಬಿದ್ದರೂ ಪರವಾಗಿಲ್ಲ, ಮಂದಿರ ಕಟ್ಟಿ: ಪೇಜಾವರಶ್ರೀ

    ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ದುರ್ದೈವ. ಈ ರೀತಿಯ ಬೆಳವಣಿಗೆಯಿಂದ ಮುಂದಿನ ದಿನಮಾನಗಳಲ್ಲಿ ದೇಶಕ್ಕೆ ದೊಡ್ಡ ದುರಂತ ಕಾದಿದೆ ಎಂದ ಸಚಿವರು, ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದ ಯೋಜನೆಗಳನ್ನೇ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏನೂ ಗೊತ್ತಿಲ್ಲ. ಆದರೂ ದೇಶ ಆಳುತ್ತಿರುವುದು ದೊಡ್ಡ ದುರಂತ. ಬಿಜೆಪಿಯವರು ಧರ್ಮ, ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದಾಗಿ ರಾಜಕೀಯ ತೀರ ಕೆಳಮಟ್ಟಕ್ಕೆ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚಾಯ್‍ವಾಲಾ ಪ್ರಧಾನಿಯಾಗಲು ಜವಾಹರಲಾಲ್ ನೆಹರು ಕಾರಣ: ಶಶಿ ತರೂರ್

    ಚಾಯ್‍ವಾಲಾ ಪ್ರಧಾನಿಯಾಗಲು ಜವಾಹರಲಾಲ್ ನೆಹರು ಕಾರಣ: ಶಶಿ ತರೂರ್

    ನವದೆಹಲಿ: ಚಾಯ್‍ವಾಲಾ ಆಗಿದ್ದ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಯಾಗಿದ್ದಾರೆಂದರೇ, ಅದಕ್ಕೆ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರೇ ಕಾರಣ ಎಂದು ಕಾಂಗ್ರೆಸ್ ಮುಖಂಡ, ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದ ಶಶಿ ತರೂರ್ ಹೇಳಿದ್ದಾರೆ.

    ನವೆಂಬರ್ 14ರ ಪಂಡಿತ್ ಜವಾಹರಲಾಲ್ ನೆಹರೂರವರ ಹುಟ್ಟುಹಬ್ಬವನ್ನು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಇದೇ ವೇಳೆ ದೆಹಲಿಯಲ್ಲಿ ಚಾಚಾರ `ನೆಹರೂ, ದಿ ಇನ್ವೆಂಷನ್ ಆಫ್ ಇಂಡಿಯಾ’ ಪುಸ್ತಕ ಮರುಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಭಾರತೀಯನು ಸಹ, ದೇಶದ ಅತ್ಯುನ್ನತ ಮಟ್ಟಕ್ಕೆ ಏರಲು ಅವಕಾಶ ಮಾಡಿಕೊಟ್ಟಿದ್ದವರೇ ಪಂಡಿತ್ ಜವಹರಲಾಲ್ ನೆಹರು. ಇವರು ಸ್ಥಾಪಿಸಿದ ಸಂಸ್ಥೆಗಳು ಹಾಗೂ ವ್ಯವಸ್ಥೆಗಳಿಂದ ಇಂದು ಚಾಯ್‍ವಾಲಾರೊಬ್ಬರು ದೇಶದ ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು.

    ಇಂದು ಕೇಂದ್ರ ಸರ್ಕಾರ ಮಂಗಳಯಾನದ ಕುರಿತು ಹೆಮ್ಮೆಪಟ್ಟುಕೊಳ್ಳುತ್ತಿದೆ. ಆದರೆ ಅದಕ್ಕೆ ಕಾರಣವಾದ ಇಸ್ರೋ ಸಂಸ್ಥೆಯನ್ನು ಹುಟ್ಟು ಹಾಕಿದ್ದವರು ಯಾರು? ದೇಶದ ಬಡವರೂ ಸಹ ಆಕಾಶದೆತ್ತರಿಗಿನ ಗುರಿಗಳನ್ನು ಏರುವ ಕನಸನ್ನು ಕಲಿಸಿಕೊಟ್ಟವರು ಯಾರು? ಅಸಂಖ್ಯಾ ಯುವಕರನ್ನು ಸಿಲಿಕಾನ್ ವ್ಯಾಲಿಗೆ ಕಳುಹಿಸಲು, ಐಐಟಿಗಳನ್ನು ಸ್ಥಾಪನೆ ಮಾಡಿದವರು ಯಾರು? ಅಲ್ಲಿರುವ ಶೇ.40ರಷ್ಟು ಸ್ಟಾರ್ಟ್ಅಪ್ ಕಂಪನಿಗಳು ಇಂದು ಭಾರತೀಯರ ಕೈಯಲ್ಲಿವೆ ಎಂದರೇ ಅದಕ್ಕೆ ಕಾರಣ ಯಾರು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ನಮಗೆಲ್ಲ ವೇದಿಕೆ ನಿರ್ಮಾಣ ಮಾಡಿಕೊಟ್ಟ ಭಾರತದ ಶ್ರೇಷ್ಟ ವ್ಯಕ್ತಿ ಪಂಡಿತ್ ಜವಾಹರಲಾಲ್ ನೆಹರೂರವರ ಬಗ್ಗೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕಡೆಗಣಿಸುವ ಯತ್ನ ನಡೆಯುತ್ತಿದೆ. ತಾವು ಪ್ರಧಾನಿಯಾಗಲು ಕಾರಣರಾಗಿದ್ದ ಚಾಚಾರನ್ನು ನರೇಂದ್ರ ಮೋದಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರಧಾನಿ ಮೋದಿಯನ್ನ ಜೀವಂತವಾಗಿ ಸುಡುವ ಕಾಲ ಬಂದಿದೆ: ಟಿ.ಬಿ.ಜಯಚಂದ್ರ

    ಪ್ರಧಾನಿ ಮೋದಿಯನ್ನ ಜೀವಂತವಾಗಿ ಸುಡುವ ಕಾಲ ಬಂದಿದೆ: ಟಿ.ಬಿ.ಜಯಚಂದ್ರ

    ತುಮಕೂರು: ರಾಜ್ಯ ರಾಜಕೀಯದಲ್ಲಿ ನಾಯಕರು ಸಭ್ಯತೆ ಮರೆತು ಹೇಳಿಕೆ ನೀಡುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಈ ಬಾರಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನೋಟು ನಿಷೇಧ ಖಂಡಿಸಿ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವರು, ನೋಟು ರದ್ದತಿಯಲ್ಲಿ ನನಗೆ 50 ದಿನ ಕಾಲವಕಾಶ ಕೊಡಿ ಇದರಲ್ಲಿ ಗೆದ್ದು ಬರುತ್ತೇನೆ. ಒಂದು ವೇಳೆ ಬರದಿದ್ದರೆ ನನ್ನನ್ನ ಜೀವಂತವಾಗಿ ಸುಡಿ ಅಂತಾ ಪ್ರಧಾನಿ ಮೋದಿಯವರೇ ಹೇಳಿದ್ದರು. ಅವರ ಮಾತಿನಂತೆ ಬಹುಶಃ ಜೀವಂತವಾಗಿ ಸುಡುವ ಕಾಲ ಇಂದು ಬಂದಿದೆ ಎಂದು ಕಿಡಿಕಾರಿದರು.

    ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ರಾಜಿನಾಮೇ ನೀಡಿ ಮನೆಗೆ ಹೊಗಬೇಕು. ಕೇಂದ್ರ ಸರ್ಕಾರದ ನಡೆ ಕತ್ತೆಗೆ ಹೋಲಿಕೆಯಾಗುತ್ತದೆ. ಅದು ಎಂದಿಗೂ ಕೆಲಸ ಮಾಡಿಲ್ಲ. ಆ ಕೆಲಸ ಮಾಡಿದ್ದು ಗುಳ್ಳೆನರಿ. ಪ್ರತಿಭಟನೆಗೆ ಆ ಗುಳ್ಳೆನರಿ ತಂದಿದ್ದರೆ ಬಹಳ ಚೆನ್ನಾಗಿರುತ್ತಿತ್ತು ಎಂದ ಸಚಿವರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯನ್ನ ಗುಳ್ಳೆನರಿಗೆ ಹೋಲಿಸಿ ವ್ಯಂಗ್ಯವಾಡಿದರು.

    ಬಿಎಸ್‍ವೈ ಖಂಡನೆ:
    ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿಕೆ ವಿರುದ್ಧ ಕಿಡಿಕಾರಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಸಹಿಸದೆ ಬುದ್ಧಿ ಸ್ಥಿಮಿತತೆ ಕಳೆದುಕೊಂಡವರಂತೆ ಮಾತನಾಡ್ತಿದ್ದಾರೆ. ಮಾಜಿ ಕಾನೂನು ಸಚಿವರಾಗಿದ್ದ ಜಯಚಂದ್ರ ಅವರ ಹೇಳಿಕೆ ಖಂಡನೀಯ. ಅವರ ಕೀಳುಮಟ್ಟದ, ಆಕ್ಷೇಪಾರ್ಹ ಹೇಳಿಕೆಗೆ ಜನರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಮಾಧ್ಯಮ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/

  • ಏಕತಾ ಪ್ರತಿಮೆ ಉದ್ಘಾಟನೆಗೆ ಬರುತ್ತಿರುವ ನಿಮಗೆ ಬಹಿಷ್ಕಾರ: ಮೋದಿಗೆ ಗ್ರಾಮಸ್ಥರ ಪತ್ರ

    ಏಕತಾ ಪ್ರತಿಮೆ ಉದ್ಘಾಟನೆಗೆ ಬರುತ್ತಿರುವ ನಿಮಗೆ ಬಹಿಷ್ಕಾರ: ಮೋದಿಗೆ ಗ್ರಾಮಸ್ಥರ ಪತ್ರ

    ಗಾಂಧಿನಗರ: ಸರ್ದಾರ್ ವಲ್ಲಭಭಾಯಿ ಅವರ ಏಕತಾ ಪ್ರತಿಮೆಯನ್ನು ಲೋರ್ಕಾಪಣೆಗೊಳಿಸಲು ಆಗಮಿಸುತ್ತಿರುವ ಪ್ರಧಾನಿ ಮೋದಿಗೆ 22 ಗ್ರಾಮಗಳ ಬುಡಕಟ್ಟು ಜನಾಂಗದ ಮುಖಂಡರು ಭಾರೀ ಆಕ್ರೋಶ ವ್ಯಕ್ತಪಡಿಸಿ ಬಹಿಷ್ಕಾರ ಹಾಕಿದ್ದಾರೆ.

    ಕೇವಾಡಿಯಾ ಸೇರಿದಂತೆ 22 ಗ್ರಾಮಗಳ ಬುಡಕಟ್ಟು ಜನಾಂಗದ ಮುಖಂಡರು ಪ್ರಧಾನಿ ಮೋದಿಗೆ ಪತ್ರ ಬರೆದು ಪ್ರತಿಮೆ ಹಾಗೂ ಸ್ಮಾರಕ ಅನಾವರಣ ಕಾರ್ಯಕ್ರಮ ನಿಜಕ್ಕೂ ಸಾವಿನ ಸಂಭ್ರಮಾಚರಣೆ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಏಕತಾ ಪ್ರತಿಮೆಯ ವಿಶೇಷತೆ ಏನು? ಎಷ್ಟು ಬಲಶಾಲಿಯಾಗಿದೆ? ಖರ್ಚು ಎಷ್ಟಾಗಿದೆ? – ಇಲ್ಲಿದೆ ಪೂರ್ಣ ವಿವರ

    ಬಹಿರಂಗ ಪತ್ರದಲ್ಲಿ ಏನಿದೆ?:
    ನಿಮ್ಮನ್ನು ನಾವು ಸ್ವಾಗತಿಸುವುದಿಲ್ಲ. ನೀವು ನಮಗೆ ಬೇಡವಾಗಿರುವ ಅತಿಥಿ. ಸರ್ದಾರ್ ಸ್ಮಾರಕ ನಿರ್ಮಾಣಕ್ಕಾಗಿ ಅರಣ್ಯ, ನದಿ, ಜಲಪಾತ, ಭೂಮಿ ಮತ್ತು ಕೃಷಿ ಪ್ರದೇಶಗಳನ್ನು ನಾಶಮಾಡಲಾಗಿದೆ. ನಮ್ಮ ಪೂರ್ವಿಕರ ಕಾಲದಿಂದಲೂ ಇವುಗಳನ್ನೇ ನಂಬಿಕೊಂಡು, ಬದುಕು ಕಟ್ಟಿಕೊಂಡು ಬಂದಿದ್ದೇವೆ. ನಮ್ಮ ಬದುಕನ್ನು ಕಸಿಕೊಂಡು, ಸ್ಮಾರಕ ನಿರ್ಮಾಣ ಮಾಡಲಾಗಿದೆ. ಪ್ರತಿಮೆ ಹಾಗೂ ಸ್ಮಾರಕ ಅನಾವರಣ ಕಾರ್ಯಕ್ರಮ ನಿಜಕ್ಕೂ ಸಾವಿನ ಸಂಭ್ರಮಾಚರಣೆ. ಇದು ನಿಮಗೆ ತೋಚಲಿಲ್ಲವೇ ಎಂದು ಬುಡಕಟ್ಟು ಜನಾಂಗದ ಮುಖಂಡರು ಪ್ರಶ್ನಿಸಿದ್ದಾರೆ.

    ಗುಜರಾತ್ ನಲ್ಲಿ ಅದೆಷ್ಟೋ ಹಳ್ಳಿಗಳಿಗೆ ಶಾಲೆ, ಆಸ್ಪತ್ರೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳೇ ಸಿಗುತ್ತಿಲ್ಲ. ತೆರಿಗೆ ರೂಪದಲ್ಲಿ ಪಡೆದ ಜನರ ಹಣವನ್ನು ಜನರ ಮೂಲ ಅವಶ್ಯಕತೆ ಒದಗಿಸಲು ಬಳಸಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ. ಒಂದು ವೇಳೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿ ಈಗಲೂ ಬದುಕಿರುತ್ತಿದ್ದರೆ ಇಂತಹ ಪ್ರತಿಮೆ ನಿರ್ಮಾಣಕ್ಕೆ ಯಾರದರೂ ಮುಂದಾಗಿದ್ದರೆ ಅವರು ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದರು ಎಂದು ಪತ್ರದ ಮೂಲಕ ಕಿಡಿಕಾರಿದ್ದಾರೆ.

    ಏಕತಾ ಪ್ರತಿಮೆ ಯೋಜನೆಗೆ ಕಾಂಗ್ರೆಸ್ ಅಷ್ಟೇ ಅಲ್ಲದೆ, ಹಿರಿಯ ಗುಜರಾತ್ ರಾಜಕಾರಣಿ ಶಂಕರ್ ಸಿಂಗ್ ವಘೇಲಾ ಅವರು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಭೂಮಿ, ನೆಲೆ ಕಳೆದುಕೊಂಡ 22 ಗ್ರಾಮಗಳ ಬುಡಕಟ್ಟು ಜನಾಂಗದ ನಾಯಕರು ಕಿಡಿ ಹೊರಹಾಕಿದ್ದಾರೆ.

    ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಈ ಯೋಜನೆಯನ್ನು 2010ರಲ್ಲಿ ಘೋಷಣೆ ಮಾಡಿದ್ದರು. 2010ರಲ್ಲೇ ಘೋಷಣೆ ಮಾಡಿದಾಗಲೇ ಈ ಯೋಜನೆಗೆ ಅಲ್ಲಿನ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ವಿಳಂಬವಾಗಿ 2013ರ ಅಕ್ಟೋಬರ್ ನಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗ್ಳೂರಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕ ಸ್ಥಾಪನೆ : ಏನಿದು ಆರ್‌ಎಎಫ್? ಎಲ್ಲಿ ಸ್ಥಾಪನೆಯಾಗುತ್ತೆ?

    ಮಂಗ್ಳೂರಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕ ಸ್ಥಾಪನೆ : ಏನಿದು ಆರ್‌ಎಎಫ್? ಎಲ್ಲಿ ಸ್ಥಾಪನೆಯಾಗುತ್ತೆ?

    ನವದೆಹಲಿ: ಗಲಭೆ ಹಾಗೂ ದೊಂಬಿಯಂತಹ ಸಮಯದಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆಗೆಂದೇ ಇರುವ ಕ್ಷಿಪ್ರ ಕಾರ್ಯಪಡೆ(ಆರ್‌ಎಎಫ್) ತುಕಡಿಯನ್ನು ಮಂಗಳೂರಿನಲ್ಲಿ ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

    ಸದ್ಯ ದೇಶದಲ್ಲಿರುವ ಒಟ್ಟು 10 ಆರ್‌ಎಎಫ್ ತುಕಡಿಗಳ ಪೈಕಿ, 5 ಹೊಸ ತುಕಡಿಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ ಜನವರಿಯಲ್ಲೇ 5 ಆರ್‌ಎಎಫ್ ಘಟಕವನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಈಗ ಎಲ್ಲಿ ಸ್ಥಾಪನೆಯಾಗಲಿದೆ ಎನ್ನುವ ವಿವರವನ್ನು ಪ್ರಕಟಿಸಿದೆ.

    ಕರ್ನಾಟಕದ ಮಂಗಳೂರು, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಉತ್ತರಪ್ರದೇಶದ ವಾರಾಣಸಿ, ರಾಜಸ್ಥಾನದ ಜೈಪುರ, ಬಿಹಾರ ಹಾಜಿಪುರ ಮತ್ತು ಹರಿಯಾಣದ ನುಹ್ ಜಿಲ್ಲೆಗಳಲ್ಲಿ ಹೊಸ ಆರ್‌ಎಎಫ್ ಘಟಕ ಪ್ರಾರಂಭವಾಗಲಿದೆ.

    ಘಟಕ ಸ್ಥಾಪನೆ ಸಂಬಂಧ ಪಟ್ಟಂತೆ ಅಗತ್ಯವಾದ ಜಾಗ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಕಾರ್ಯಚರಣೆ ನಡೆಸುತ್ತಿರುವ ಆರ್‌ಎಎಫ್ ಸಿಬ್ಬಂದಿಗಳು ಶೀಘ್ರವೇ ಹೊಸ ನೆಲೆಗಳಿಗೆ ವರ್ಗಾವಣೆಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈಗಾಗಲೇ ದೇಶದ ಹೈದರಾಬಾದ್, ಅಹಮದಾಬಾದ್, ಅಲಹಾಬಾದ್, ಮುಂಬೈ, ದೆಹಲಿ, ಆಲಿಘರ್, ಕೊಯಮತ್ತೂರ್, ಜಮ್ಶೆಡ್‍ಪುರ್, ಭೋಪಾಲ್ ಹಾಗೂ ಮೀರತ್ ಪ್ರದೇಶಗಳಲ್ಲಿ ಆರ್‌ಎಎಫ್ ಪಡೆ ಕಾರ್ಯಾಚರಣೆ ನಡೆಸುತ್ತಿವೆ.

    ಏನಿದು ಆರ್‌ಎಎಫ್?
    ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಅರ್ಥಾತ್ ಕ್ಷಿಪ್ರ ಕಾರ್ಯಾಚರಣೆ ಪಡೆ. ದೊಂಬಿ, ಗಲಭೆ ಸೇರಿದಂತೆ ಮತ್ತಿತರ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ವಿಶೇಷ ತರಬೇತಿ ಹೊಂದಿದ ಅರೆಸೇನಾಪಡೆ ಘಟಕ. ಇಲ್ಲಿಯವರೆಗೂ ದೇಶದಲ್ಲಿ ಒಟ್ಟು 10 ಆರ್‌ಎಎಫ್ ತುಕಡಿಗಳಿವೆ. ಪ್ರತಿ ತುಕಡಿಯಲ್ಲಿ 1,000 ಸಿಬ್ಬಂದಿಗಳಿದ್ದು, ಅವರು ಅತ್ಯಾಧುನಿಕ ತಾಂತ್ರಿಕ ಉಪಕರಣಗಳು, ಮಾರಕವಲ್ಲದ ಶಸ್ತ್ರಾಸ್ತ್ರಗಳು, ಹೊಗೆಸೂಸುವ ಗ್ರೆನೇಡ್‍ಗಳು ಹಾಗೂ ಇನ್ನೂ ಮುಂತಾದ ತುರ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ.

    ಮಂಗಳೂರಿನಲ್ಲಿ ಏಲ್ಲಿ?
    ಮಂಗಳೂರಿನಲ್ಲಿ ಎಲ್ಲಿ ಎನ್ನುವುದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಆರ್‌ಎಎಫ್ ಸ್ಥಾಪನೆ ಸಂಬಂಧ ಈ ಹಿಂದೆ ಬಜಪೆ ಮತ್ತು ಪರವೂರಿನಲ್ಲಿ ಜಾಗ ಗುರುತಿಸಿ 2 ವರ್ಷದ ಹಿಂದೆ ಸರ್ಕಾರ ಪ್ರಸ್ತಾವನೆ ಕಳುಹಿಸಲಾಗಿದೆ. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುರೇಶ್ ಕುಮಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿಗೆ ಮೋದಿ ಹೆದರಿದ್ದಾರೆ: ಪಾಕ್ ಮಾಜಿ ಸಚಿವ

    ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿಗೆ ಮೋದಿ ಹೆದರಿದ್ದಾರೆ: ಪಾಕ್ ಮಾಜಿ ಸಚಿವ

    ನವದೆಹಲಿ: ಕಾಶ್ಮೀರದ ಪೊಲೀಸ್ ಅಧಿಕಾರಿಗಳನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಭಾರತ ಪಾಕಿಸ್ತಾನ ನಡುವಿನ ಮಾತುಕತೆ ರದ್ದು ಮಾಡಿರುವ ಕುರಿತು ಪಾಕ್ ಮಾಜಿ ಸಚಿವ ರೆಹಮಾನ್ ಮಲಿಕ್ ಕಿಡಿಕಾರಿದ್ದು, ಭಾರತದ ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಅವರಿಗೆ ಮೋದಿ ಹೆದರಿದ್ದಾರೆ ಎಂದು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಹುದೊಡ್ಡ ಹಗರಣ ಎಂದು ರಫೇಲ್ ಒಪ್ಪಂದ ಕುರಿತು ಆರೋಪಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿರ ವೀಡಿಯೋ ಹಂಚಿಕೊಂಡಿರುವ ರೆಹಮಾನ್ ಮಲಿಕ್, ಮೋದಿ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಟ್ವಿಟ್ಟರಿನಲ್ಲಿ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯ ವೀಡಿಯೋ ಪೋಸ್ಟ್ ಮಾಡಿ, ರಾಹುಲ್ ಅವರನ್ನು ನಿಂದನೆ ಮಾಡುವವರು ಈ ವೀಡಿಯೋ ನೋಡಿ. ರಾಹುಲ್ ಒಬ್ಬ ಲೀಡರ್, ನಾನು ಹೇಳಿದ್ದನ್ನೇ ಅವರು ಹೇಳುತ್ತಿದ್ದಾರೆ. ಇದನ್ನು ನೋಡಿದ ಬಳಿಕವಾದರು ನನ್ನ ಬಳಿ ಕ್ಷಮೆ ಕೇಳಿ ಎಂದು ಹೇಳಿದ್ದಾರೆ.

    ಈ ವೀಡಿಯೋ ಪೋಸ್ಟ್ ಮಾಡುವ ಮುನ್ನ ಮತ್ತೊಂದು ಟ್ವೀಟ್ ಮಾಡಿರುವ ಮಲಿಕ್, ರಾಹುಲ್ ಗಾಂಧಿ ನಿಮ್ಮ ಮುಂದಿನ ಪ್ರಧಾನಿ. ಪ್ರಧಾನಿ ಮೋದಿ, ರಾಹುಲ್‍ರನ್ನು ಕಂಡು ಹೆದರಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಸರಣಿ ಟ್ವೀಟ್ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಮಲಿಕ್, ನನ್ನ ಕೆಲ ಟ್ವೀಟ್‍ಗಳು ಭಾರತವನ್ನು ಅಲುಗಾಡುವಂತೆ ಮಾಡಿದ್ದು ನನಗೆ ಸಂತಸ ತಂದಿದೆ. ನಾನು ಟ್ವೀಟ್ ಮಾಡುವ ಮೊದಲು ಪ್ರಧಾನಿ ಮೋದಿ ಹಾಗೂ ಆರ್‍ಎಸ್‍ಎಸ್ ಕೃತ್ಯಗಳ ಬಗ್ಗೆ ಕೆಲ ಭಾರತೀಯರಿಗೆ ಅರಿವೆ ಇರಲಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ಭಾರತದ ರಕ್ಷಣಾ ಸೇನೆ ಮುಖ್ಯಸ್ಥ ಬಿಪಿನ್ ರಾವತ್‍ರನ್ನು ಟಾರ್ಗೆಟ್ ಮಾಡಿದ್ದ ಮಲಿಕ್, ಬಿಪಿನ್ ಒಬ್ಬ ಸೋಮಾರಿ ಎಂದು ಆರೋಪಿಸಿದ್ದರು.

    ಮಲಿಕ್ ಶೇರ್ ಮಾಡಿರುವ ವೀಡಿಯೋದಲ್ಲಿ ರಾಹುಲ್ ಗಾಂಧಿ ರಫೇಲ್ ಒಪ್ಪಂದದಲ್ಲಿ ಪ್ರಧಾನಿ ಮೋದಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮೋದಿ ರಫೇಲ್ ಒಪ್ಪಂದ ಮಾಡುವ ವೇಳೆ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗೋವಾದಲ್ಲಿ ಮೀನು ಖರೀದಿ ಮಾಡುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

     

  • ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸ್ತಾರಂತೆ ಹುಚ್ಚ ವೆಂಕಟ್

    ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸ್ತಾರಂತೆ ಹುಚ್ಚ ವೆಂಕಟ್

    ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ನನ್ನ ತವರೂರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಮಂಡ್ಯದ ಜನರು ನನ್ನ ಕೈ ಹಿಡಿಯುತ್ತಾರೆ. ಒಂದು ವೇಳೆ ಕೈ ಬಿಟ್ಟರೂ ಅದಕ್ಕೆ ಬಲವಾದ ಕಾರಣ ಇರುತ್ತದೆ ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ.

    ನೆಲಮಂಗಲದ ಮಾರುತಿನಗರದಲ್ಲಿ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಮಂಡ್ಯ ಜೆಡಿಎಸ್ ಭದ್ರಕೋಟೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನನಗೆ ಮಾತ್ರ ಮಂಡ್ಯ ಭದ್ರ ಕೋಟೆ ಎಂದ ಅವರು, ರಾಜ್ಯ ಸಮ್ಮಿಶ್ರ ಸರ್ಕಾರ ಶೀಘ್ರವೇ ಪತನವಾಗುತ್ತದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದು ರಾಜ್ಯ ಸರ್ಕಾರಕ್ಕೆ ತೊಂದರೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರು ಮತ್ತೇ ಪ್ರಧಾನಿ ಆಗುತ್ತಾರೆ ಎಂದ ಹುಚ್ಚ ವೆಂಕಟ್, ತಕ್ಷಣವೇ ಮಾತು ಬದಲಿಸಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅವಕಾಶ ಕೊಟ್ಟರೆ ತಪ್ಪೇನು ಇಲ್ಲ ಎಂದರು.

    ವೇದಿಕೆ ಮೇಲೆ ಡೈಲಾಗ್ ಹೇಳುತ್ತಿದ್ದಾಗ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬರಿಗೆ ಕ್ಲಾಸ್ ತೆಗೆದುಕೊಂಡ ಹುಚ್ಚ ವೆಂಕಟ್, ನಾನು ನಿನಗಿಂತ ಜಾಸ್ತಿನೇ ಕುಡಿಯುತ್ತೇನೆ ಕಣೋ. ಕುಡಿದಿರುವೆ ಅಂತಾ ಜಾಸ್ತಿ ಮಾತನಾಡಬಾರದು, ಸುಮ್ಮನೆ ನಿಂತಕೋ ಎಂದು ಖಡಕ್ ವಾರ್ನಿಂಗ್ ಕೊಟ್ಟರು.

    ಬಳಿಕ ಕಾರ್ಯಕ್ರಮ ಆಯೋಜಕರು ಹುಚ್ಚ ವೆಂಕಟ್‍ಗೆ ಸನ್ಮಾನ ಮಾಡಿ, ಪ್ರಶಸ್ತಿ ನೀಡಿದ್ದಾರೆ. ಅಲ್ಲಿಂದ ಹೊರ ಬಂದ ಹುಚ್ಚವೆಂಕಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವಕರ ದಂಡೇ ಮುಗಿಬಿದ್ದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿ ಕರ್ನಾಟಕದ ಜನಕ್ಕೇನು ಮಾಡಿದ್ದಾರೆ? ಜಯಮಾಲಾ ಪ್ರಶ್ನೆ

    ಮೋದಿ ಕರ್ನಾಟಕದ ಜನಕ್ಕೇನು ಮಾಡಿದ್ದಾರೆ? ಜಯಮಾಲಾ ಪ್ರಶ್ನೆ

    ಉಡುಪಿ: ಮೋದಿ ಕರ್ನಾಟಕದ ಜನಕ್ಕೆ ಏನು ಮಾಡಿದ್ದಾರೆ. ಅವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಹೇಳಿದ್ದಾರೆ.

    ಸ್ಥಳೀಯ ಚುನಾವಣೆ ಮತಯಾಚನೆ ಸಂದರ್ಭ ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಯಮಾಲಾ, ಅಕ್ಕಿ ನಿಮ್ಮ ಯೋಜನೆ ಅಂತ ಸುಳ್ಳು ಹೇಳಿದ್ದೀರಿ. ನಿಮ್ಮ ಸುಳ್ಳು ಹೆಚ್ಚು ಕಾಲ ಉಳಿಯೋದಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ಜನಪರ ನಾಯಕರಾಗಿದ್ದಾರೆ. ಇವರ ಮುಂದೆ ಬಿಜೆಪಿಯವರ ಸುಳ್ಳು, ಗಿಮಿಕ್ ಗಳು ವರ್ಕೌಟ್ ಆಗಲ್ಲ. ಸ್ಥಳೀಯ ಚುನಾವಣೆಯಲ್ಲಿ ಮೋದಿಯನ್ನು ನೋಡಿ ಜನ ಮತ ಹಾಕುವುದಿಲ್ಲ ಎಂದು ಭವಿಷ್ಯ ನುಡಿದ್ರು.

    ಈ ಬಾರಿ ಸ್ಥಳೀಯ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದೇನೆ. ಕಾಂಗ್ರೆಸ್ ಸರ್ಕಾರ ಮಾಡಿದ್ದ ಅಭಿವೃದ್ಧಿ ಯಾರೂ ಮಾಡಿಲ್ಲ. ಸಿದ್ದರಾಮಯ್ಯವರ ಸರ್ಕಾರ ಎಲ್ಲಾ ವರ್ಗವನ್ನು ತಲುಪಿತ್ತು. ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ರೈತರ ಸಾಲಮನ್ನಾ ಮಾಡಿದ್ದೇವೆ. ಕೊಡಗಿನ ನೆರೆಗಾಗಿ ತಾತ್ಕಾಲಿಕವಾಗಿ 25 ಕೋಟಿ ರೂ. ಅನುದಾನ ತಂದಿದ್ದೇವೆ. ಜನರಿಗೆ ಸ್ಪಂದಿಸುತ್ತಾ ಈ ಸರ್ಕಾರ ಜನರ ಪರವಾಗಿದೆ. ಜನಪರ ಸರ್ಕಾರ ಈ ಹಿಂದೆಯೂ ಇತ್ತು ಸಮ್ಮಿಶ್ರ ಸರ್ಕಾರದಲ್ಲೂ ಇದೆ ಎಂಬುದು ಜನರಿಗೆ ಗೊತ್ತಿದೆ. ಪಾಲಿಕೆ ಚುನಾವಣೆ ಬಗ್ಗೆ ಜನರಿಗೆ ನಾವು ತಿಳಿಸಿಕೊಡಬೇಕು. ಈಗಿನ ಮತ್ತು ಹಿಂದಿನ ಸರ್ಕಾರ ಒಂದು ಕಪ್ಪು ಚುಕ್ಕೆ ಮಾಡಿಕೊಂಡಿಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ನಾನು ಒಬ್ಬ ಪ್ರಚಾರಕಿ ಅಲ್ಲ, ನಾನು ಒಬ್ಬ ಹೆಣ್ಣು ಮಗಳು ಸರ್ಕಾರ ನನಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವ ಸ್ಥಾನವನ್ನು ಕೊಟ್ಟಿದ್ದಾರೆ. ಅದು ಸಿಕ್ಕಿರುವುದು ನನ್ನ ಋಣ. ಹೀಗಾಗಿ ಆ ಋಣವನ್ನು ತೀರಿಸಲು ಬಂದಿದ್ದು, ಇದು ನನಗೆ ಕೃಷ್ಣ ಮತ್ತು ಮೂಕಾಂಬಿಕೆ ದೇವರು ನೀಡಿರುವ ಆಶೀರ್ವಾದ ಎಂದು ಭಾವಿಸಿಕೊಳ್ಳುತ್ತೇನೆ ಅಂತಾ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿಗೆ ಅಗತ್ಯ ನೆರವು ಪೂರೈಕೆ: ಪ್ರಧಾನಿ ನರೇಂದ್ರ ಮೋದಿ

    ಕೊಡಗಿಗೆ ಅಗತ್ಯ ನೆರವು ಪೂರೈಕೆ: ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ: ಪ್ರವಾಹಕ್ಕೆ ತುತ್ತಾಗಿರುವ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಗೆ ಅಗತ್ಯ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.

    ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ನಲ್ಲಿ, ಮುಖ್ಯಮಂತ್ರಿ ಕುಮಾರಸ್ವಾಮಿ ಜೀ, ರಾಜ್ಯದ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿಗೆ ಬೇಕಾಗುವ ಎಲ್ಲಾ ನೆರವು ಹಾಗೂ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ಪೂರೈಸಲಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಸಿ ಎಂದು ಬರೆದುಕೊಂಡಿದ್ದಾರೆ.

    ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯು ಅಕ್ಷರಶಃ ನಲುಗಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ ಎಂದು ತಿಳಿದಿದ್ದು, ರಾಜ್ಯಕ್ಕೆ ಬೇಕಾಗುವ ಅಗತ್ಯ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಮೋದಿಯವರು ಖುದ್ದು ಸಿಎಂ ಕುಮಾರಸ್ವಾಮಿಯವರಿಗೆ ಕರೆ ಮಾಡಿ, ಕೊಡಗು ಜಿಲ್ಲೆಯ ಸ್ಥಿತಿ-ಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಮರಣ ಮಳೆಗೆ ಈವರೆಗೆ 9 ಮಂದಿ ಸಾವನ್ನಪ್ಪಿ, ಹಲವರು ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಹಲವೆಡೆ ಗ್ರಾಮಕ್ಕೆ ಗ್ರಾಮವೇ ಕಣ್ಮರೆಯಾಗಿದೆ. ಮುಕ್ಕೊಡ್ಲುವಿನ 70ಕ್ಕೂ ಜನರು ತಮ್ಮ ಜೀವ ರಕ್ಷಣೆಗಾಗಿ ಬೆಟ್ಟ ಹತ್ತಿ ಕೂತಿದ್ದಾರೆ. ಹಲವೆಡೆ ಜನ ಬೆಟ್ಟ ಹತ್ತುತ್ತಿದ್ದು, ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಮುಕ್ಕೋಡ್ಲುವಿನಲ್ಲಿ 200ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಒಂದು ಕಡೆ ಮತ್ತೆ ಮಳೆ ಆರ್ಭಟ, ಇನ್ನೊಂದು ಕಡೆ ಗುಡ್ಡ ಕುಸಿತ ಭೀತಿಯಿಂದ ಜೀವವನ್ನು ಕೈಯಲ್ಲಿ ಹಿಡಿದು ಕುಳಿತಿದ್ದಾರೆ.

    ರಕ್ಕಸ ಮಳೆ ಕೊಡವರ ನಾಡನ್ನು ಇಂಚಿಂಚಾಗಿ ನುಂಗುತ್ತಿದೆ. ನೋಡನೋಡುತ್ತಿದ್ದಂತೆ ಗುಡ್ಡಗಳು ಕುಸಿಯುತ್ತಿದೆ. ಬೆಟ್ಟದಿಂದ ಕುಸಿದ ಮಣ್ಣು ನದಿಯಂತೆ ಹರಿಯುತ್ತಿದೆ. ಗುಡ್ಡದೊಂದಿಗೆ ರಸ್ತೆಗಳು ಸಹ ಧರಾಶಾಹಿಯಾಗಿದೆ. ಮಹಾಮಳೆಗೆ ಹಟ್ಟಿಹೊಳೆ ಎಂಬ ಊರು ರಾತ್ರೋರಾತ್ರಿ ನಾಪತ್ತೆಯಾಗಿದೆ. ಹಕ್ಕಿ ಹೊಳೆ ಗ್ರಾಮ ಜಲಾವೃತಗೊಂಡಿದ್ದು, ಜನರೆಲ್ಲಾ ಊರು ಬಿಟ್ಟಿದ್ದಾರೆ. ಇತ್ತ 900ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಬರೋಬ್ಬರಿ 123 ಕಿಲೋಮೀಟರ್ ರಸ್ತೆಗಳೇ ನಾಪತ್ತೆಯಾಗಿದೆ. ಇತ್ತ ಬರೋಬ್ಬರಿ 58 ಸೇತುವೆಗಳು ನಾಶಗೊಂಡಿವೆ ಎಂಬ ಅಂಕಿ ಅಂಶಗಳು ಲಭ್ಯವಾಗಿದೆ.

    3,800 ಲೈಟ್ ಕಂಬಗಳು ಹಾಳಾಗಿದ್ದು, 278 ಸರ್ಕಾರಿ ಕಟ್ಟಡಗಳು ಕುಸಿದುಬಿದ್ದಿವೆ. 3,601 ಜನರ ರಕ್ಷಣೆ ಮಾಡಲಾಗಿದ್ದು, ಕೊಡಗಿನ 36 ಕ್ಯಾಂಪ್‍ಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ 9 ರಕ್ಷಣಾ ಕೇಂದ್ರದಲ್ಲಿ ಒಟ್ಟು 802 ಮಂದಿ ಆಶ್ರಯ ಪಡೆದಿರುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಮ್ರಾನ್ ಖಾನ್ ಆಹ್ವಾನ ತಿರಸ್ಕರಿಸಿದ ಕಪಿಲ್ ದೇವ್

    ಇಮ್ರಾನ್ ಖಾನ್ ಆಹ್ವಾನ ತಿರಸ್ಕರಿಸಿದ ಕಪಿಲ್ ದೇವ್

    ನವದೆಹಲಿ: ಪಾಕಿಸ್ತಾನ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕ ಇಮ್ರಾನ್ ಖಾನ್ ಅವರ ಆಹ್ವಾನವನ್ನು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ತಿರಸ್ಕರಿಸಿದ್ದಾರೆ.

    ಆಗಸ್ಟ್ 18 ರಂದು ನಡೆಯಲಿರುವ ಪಾಕಿಸ್ತಾನ ನೂತ ಪ್ರಧಾನ ಮಂತ್ರಿ ಪ್ರಮಾಣ ವಚನ ಸ್ವೀಕರ ಸಮಾರಂಭಕ್ಕೆ ಕಪಿಲ್ ದೇವ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಸದ್ಯ ಈ ಆಹ್ವಾನವನ್ನು ಕಪಿಲ್ ದೇವ್ ತಿರಸ್ಕರಿಸಿದ್ದಾರೆ.

    ಕಪಿಲ್ ದೇವ್  ತಮ್ಮ ವೈಯಕ್ತಿಕ ಕಾರಣಗಳಿಂದ ಸಮಾರಂಭದಲ್ಲಿ ಭಾಗಹಿಸುತ್ತಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಈ ಕುರಿತು ಇಮ್ರಾನ್ ಖಾನ್ ಗೆ ಮಾಹಿತಿ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನ ಚುನಾವಣೆಯಲ್ಲಿ ಬಹುಮತ ಪಡೆದ ವೇಳೆ ಕಪಿಲ್ ದೇವ್, ಇಮ್ರಾನ್ ಅವರ ಸಾಧನೆ ಕಂಡು ಹರ್ಷ ವ್ಯಕ್ತಪಡಿಸಿ ಶುಭ ಕೋರಿದ್ದರು.

    ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕರಾಗಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದ ಇಮ್ರಾನ್ ಖಾನ್ ತಮ್ಮದೇ ಸ್ವತಃ ಪಕ್ಷ ಸ್ಥಾಪಿಸಿ ಸಕ್ರೀಯ ರಾಜಕಾರಣಿದಲ್ಲಿ ತೊಡಗಿದ್ದಾರೆ. ಅಲ್ಲದೇ ಈ ಬಾರಿಯ ಪಾಕ್ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

    ಅಂದಹಾಗೇ ಈ ಸಮಾರಂಭಕ್ಕೆ ಆಹ್ವಾನ ಪಡೆದಿದ್ದ ನವಜೋತ್ ಸಿಂಗ್ ಸಿಧು ಕಾರ್ಯಕ್ರಮ ಆಹ್ವಾನವನ್ನು ಒಪ್ಪಿಕೊಂಡಿದ್ದರು. ಅಲ್ಲದೇ ಪಾಕಿಸ್ತಾನಕ್ಕೆ ತೆರಳಲು ಗೃಹ ಇಲಾಖೆ ಹಾಗೂ ಪಂಜಾಬ್ ಸರ್ಕಾರ ಅನುಮತಿ ಕೋರಿದ್ದರು. ಆದರೆ ಸಿಧು ಆಹ್ವಾನವನನ್ನು ಒಪ್ಪಿಕೊಂಡ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಸಿಧು ಭಾಗವಹಿಸಿದರೆ ಅವರನ್ನು ದೇಶದ್ರೋಹಿಯಾಗಿ ಪರಿಗಣಿಸಲಾಗುತ್ತದೆ ಎಂದು ಕಿಡಿಕಾರಿದ್ದರು. ಇದನ್ನುಓದಿ:  ಸಿಧು ಪಾಕಿಸ್ತಾನಕ್ಕೆ ತೆರಳಿದ್ರೆ ದೇಶದ್ರೋಹಿ ಎಂದು ಪರಿಗಣಿಸಲಾಗುತ್ತೆ: ಸುಬ್ರಮಣಿಯನ್ ಸ್ವಾಮಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv