Tag: prime minister

  • ಗುರುವಾಯೂರ್ ದೇವಾಲಯದಲ್ಲಿ ಕಮಲದ ಹೂಗಳಿಂದ ಮೋದಿ ತುಲಾಭಾರ

    ಗುರುವಾಯೂರ್ ದೇವಾಲಯದಲ್ಲಿ ಕಮಲದ ಹೂಗಳಿಂದ ಮೋದಿ ತುಲಾಭಾರ

    ತಿರುವನಂತಪುರಂ: ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್‍ಗೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದು, ಆದಕ್ಕೂ ಮುನ್ನ ಬೆಳಗ್ಗೆ ಕೇರಳದ ಗುರುವಾಯೂರ್  ಸನ್ನಿಧಿಯಲ್ಲಿಯಲ್ಲಿ ತುಲಾಭಾರ ಮಾಡಿಸಿದ್ದಾರೆ.

    ಲೋಕಸಭಾ ಚುನಾವಣೆಯ ಭರ್ಜರಿ ಗೆಲುವಿನ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿ 5 ಸಾವಿರ ವರ್ಷಗಳ ಇತಿಹಾಸ ಇರುವ ಗುರುವಾಯೂರ್ ಶ್ರೀ ಕೃಷ್ಣನ ದರ್ಶನ ಪಡೆದರು.

    ಬಿಳಿ ಬಣ್ಣದ ಧೋತಿ ಮತ್ತು ಶಲ್ಯ ಧರಿಸಿದ್ದ ಮೋದಿ ಅವರು ಬಿಜೆಪಿಯ ಚಿಹ್ನೆಯಾದ ಕಮಲದ ಹೂಗಳಿಂದ ತುಲಾಭಾರ ಮಾಡಿಸಿಕೊಂಡರು. ಒಂದು ಗಂಟೆಯ ದರ್ಶನದ ನಂತರ ಮೋದಿ ಅವರು, ಕೇರಳದ ಬಿಜೆಪಿ ಸಮಿತಿ ಗುರುವಾಯೂರ್ ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿದರು.

    ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನಂತರ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಕೇರಳದ ಜನತೆ ಬಿಜೆಪಿಗೆ ಮತಹಾಕದಿದ್ದರೂ ಮೋದಿ ಯಾಕೆ ಕೇರಳಕ್ಕೆ ಬಂದಿದ್ದಾರೆ ಎಂದು ಆಶ್ಚರ್ಯವಾಗಬಹುದು. ಆದರೆ ಕೇರಳ ಬಿಜೆಪಿಗೆ ವೋಟ್ ಮಾಡದೇ ಇದ್ದರೂ ನನ್ನ ಕ್ಷೇತ್ರ ವಾರಣಾಸಿಯಂತೆ ಈ ರಾಜ್ಯವೂ ನನಗೆ ಇಷ್ಟ. ಚುನಾವಣೆ ಮತ್ತು ಪ್ರಜಾಪ್ರಭುತ್ವದ ಆಚರಣೆಗಳು ಬೇರೆ ಬೇರೆ. ಇದನ್ನು ನಾವು ಗೌರವಿಸಬೇಕು ಎಂದು ಹೇಳಿದರು.

    ಕೇರಳದಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆದ್ದಿಲ್ಲ. ಆದರೆ ಮೋದಿ ಅಲ್ಲಿನ ಜನರಿಗೆ ಧನ್ಯವಾದ ತಿಳಿಸಲು ಹೋಗಿದ್ದು ಯಾಕೆ. ಮೋದಿ ತಲೆಯಲ್ಲಿ ಏನಿದೆ ಎಂದು ಕೆಲ ರಾಜಕೀಯ ಚಿಂತಕರು ಪ್ರಶ್ನೆ ಮಾಡುತ್ತಿರಬಹುದು. ಆದರೆ ಇದು ನಮ್ಮ ಸಂಸ್ಕೃತಿ ಇದು ನಮ್ಮ ಚಿಂತನೆ. ಈ ಕಾರಣಕ್ಕೆ ನಾನು ಕೇರಳಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

    ಶುಕ್ರವಾರ ರಾತ್ರಿ ಕೇರಳಕ್ಕೆ ಬಂದಿದ್ದ ಮೋದಿ ಅವರು ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇರಳದಲ್ಲಿ ಖಾತೆ ತೆರೆಯಲು ವಿಫಲವಾಗಿತ್ತು. ಕೇರಳದಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ 16 ಕ್ಷೇತ್ರಗಳ ಪೈಕಿ 15ರಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 20 ಕ್ಷೇತ್ರಗಳ ಪೈಕಿ 19 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಪ್ರಧಾನ ಮಂತ್ರಿ ಆಗ್ತಾರಾ ರವೀನಾ ಟಂಡನ್?

    ಪ್ರಧಾನ ಮಂತ್ರಿ ಆಗ್ತಾರಾ ರವೀನಾ ಟಂಡನ್?

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರಕ್ಕೀಗ ಚಿತ್ರೀಕರಣ ನಡೆಯುತ್ತಿದೆ. ಈ ಹೊತ್ತಿನಲ್ಲಿಯೇ ಈ ಸಿನಿಮಾದ ತಾರಾಗಣಕ್ಕೆ ಕಲಾವಿದರ ಸೇರ್ಪಡೆ ಕಾರ್ಯವೂ ಸುಸೂತ್ರವಾಗಿಯೇ ನಡೆಯುತ್ತಿದೆ. ಕೆಜಿಎಫ್ ಮೊದಲ ಭಾಗದಲ್ಲಿಯೂ ಪ್ರಧಾನ ಆಕರ್ಷಣೆಯಾಗಿದ್ದದ್ದು ತಾರಾಗಣವೇ. ಈ ಬಾರಿಯೂ ವಿಶೇಷವಾದ ಪಾತ್ರಗಳಿಗೆ ಅದಕ್ಕೆ ತಕ್ಕುದಾದ ಕಲಾವಿದರನ್ನೇ ಆಯ್ಕೆ ಮಾಡಲು ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ.

    ಕೆಜಿಎಫ್ 2 ತಾರಾಗಣ ಸೇರಿಕೊಂಡವರಲ್ಲಿ ಬಾಲಿವುಡ್‍ನ ಖ್ಯಾತ ನಟಿ ರವೀನಾ ಟಂಡನ್ ಕೂಡಾ ಸೇರಿಕೊಂಡಿರೋದು ಗೊತ್ತೇ ಇದೆ. ಈ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ರವೀನಾ ಪಾತ್ರ ಹೇಗಿರಬಹುದೆಂಬ ಕ್ಯೂರಿಯಾಸಿಟಿಯೂ ಶುರುವಾಗಿತ್ತು. ಇದೀಗ ರವೀನಾ ಪಾತ್ರದ ಬಗ್ಗೆ ಚಿತ್ರತಂಡದ ಕಡೆಯಿಂದ ಒಂದಿಷ್ಟು ಮಾಹಿತಿ ಹೊರ ಬಿದ್ದಿದೆ. ಅವರಿಲ್ಲಿ ಪ್ರಧಾನ ಮಂತ್ರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ!

    ರವೀನಾ ಇಲ್ಲಿ ಎಪ್ಪತ್ತರ ದಶಕದ ಆಚೀಚಿನ ಪ್ರಧಾನ ಮಂತ್ರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಮೊದಲ ಭಾಗದಲ್ಲಿ ಈ ಪಾತ್ರದ ಬಗ್ಗೆ ಒಂದು ಸುಳಿವು ನೀಡಲಾಗಿತ್ತಷ್ಟೇ. ಈ ಪಾತ್ರದ ಬಗ್ಗೆ ರವೀನಾ ಕೂಡಾ ಖುಷಿಗೊಂಡಿದ್ದಾರೆಂಬ ಮಾಹಿತಿ ಇದ್ದು ಈ ವಿಚರವಾಗಿ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ. ಈ ಮೂಲಕ ದಶಕಗಳ ನಂತರ ರವೀನಾ ಕನ್ನಡಕ್ಕೆ ಮತ್ತೆ ಮರಳಿದಂತಾಗುತ್ತದೆ. ತೊಂಭತ್ತರ ದಶಕದಲ್ಲಿ ಉಪೇಂದ್ರ ಚಿತ್ರದಲ್ಲಿ ರವೀನಾ ಉಪ್ಪಿಗೆ ಜೋಡಿಯಾಗಿ ನಟಿಸಿದ್ದರು.

    ಇನ್ನುಳಿದಂತೆ ಈಗಾಗಲೇ ಭಾರೀ ಗೆಲುವಿನ ರೂವಾರಿಯಾಗಿರೋ ಕೆಜಿಎಫ್ ಚಿತ್ರಕ್ಕೂ ರವೀನಾ ಅವರಿಗೂ ಕನೆಕ್ಷನ್ನುಗಳಿವೆ. ಈ ಚಿತ್ರವನ್ನು ರವೀನಾ ಮೆಚ್ಚಿ ಕೊಂಡಾಡಿದ್ದರು. ಇದಲ್ಲದೇ ಬಾಲಿವುಡ್ಡಿನಲ್ಲಿ ಕೆಜಿಎಫ್ ಚಿತ್ರದ ವಿತರಣಾ ಹಕ್ಕು ಪಡೆದಿದ್ದದ್ದು ರವೀನಾ ಪತಿ ಅನಿಲ್ ತಡಾನಿಯವರೇ. ಇದೀಗ ಅವರು ಕೆಜಿಎಫ್ ಚಾಪ್ಟರ್ 2ನ ಭಾಗವಾಗೋ ಕ್ಷಣಗಳು ಹತ್ತಿರಾದಂತಿದೆ.

  • ಮೋದಿ ಕ್ಯಾಬಿನೆಟ್‍ನಲ್ಲಿ ಖಾತೆ ಹಂಚಿಕೆ ಸಸ್ಪೆನ್ಸ್- ಇಂದು ಸಂಜೆ ಮೊದಲ ಸಭೆ

    ಮೋದಿ ಕ್ಯಾಬಿನೆಟ್‍ನಲ್ಲಿ ಖಾತೆ ಹಂಚಿಕೆ ಸಸ್ಪೆನ್ಸ್- ಇಂದು ಸಂಜೆ ಮೊದಲ ಸಭೆ

    ನವದೆಹಲಿ: 2ನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿಯವರ ಜೊತೆಗೆ 24 ಮಂದಿ ಸಂಪುಟ ದರ್ಜೆ ಸಚಿವರು, 9 ಮಂದಿ ಸ್ವತಂತ್ರ ಖಾತೆ ರಾಜ್ಯ ಸಚಿವರಾಗಿ, 24 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡಾ ಪ್ರಮಾಣ ವಚನ ಸ್ವೀಕರಿಸೋ ಮೂಲಕ ಮೋದಿ ಸಂಪುಟ ಸೇರಿದ್ದಾರೆ. ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್ ಸೇರಿದಂತೆ ಹಲವು ಹಳೆಮುಖಗಳನ್ನೂ ಮುಂದುವರಿಸಲಾಗಿದೆ.

    ಆದರೆ ಸುಷ್ಮಾ ಸ್ವರಾಜ್, ಉಮಾಭಾರತಿ, ಸುರೇಶ್ ಪ್ರಭು, ಮೇನಕಾ ಗಾಂಧಿ ಸೇರಿದಂತೆ ಹಿಂದಿನ ಸಂಪುಟದಲ್ಲಿದ್ದ 37 ಮಂದಿಗೆ ಕೊಕ್ ನೀಡಲಾಗಿದೆ. ಜೆಡಿಯುನ ಒಬ್ಬರಿಗೆ ಮಾತ್ರವೇ ಪ್ರಮಾಣವಚನ ಸ್ವೀಕರಿಸಲು ಮೋದಿ ಆಹ್ವಾನ ಬಂದಿದ್ದರಿಂದ, ತಮ್ಮ ಪಕ್ಷದಿಂದ ಯಾರೂ ಪ್ರಮಾಣ ವಚನ ಸ್ವೀಕರಿಸಲ್ಲ ಎಂದು ನಿತೀಶ್ ಕುಮಾರ್ ತಿಳಿಸಿದರು. ಅಲ್ಲದೆ ಒಂದೇ ಸ್ಥಾನ ನೀಡಿರೋ ಬಿಜೆಪಿ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದು, ನಾವು ಎನ್‍ಡಿಎ ಭಾಗಿವಾಗಿಯೇ ಇರುತ್ತೇವೆ ಅಂತಲೂ ಸ್ಪಷ್ಟಪಡಿಸಿದ್ದಾರೆ.

    ಇತ್ತ ಕ್ಯಾಬಿನೆಟ್ ನಲ್ಲಿ ಯಾರು ಯಾರಿಗೆ ಯಾವ್ಯವಾ ಖಾತೆ ನೀಡುತ್ತಾರೆ ಎಂಬ ಕುತೂಹಲವಿದ್ದು, ಸಂಜೆ 5 ಗಂಟೆಗೆ ಹೊಸ ಸರ್ಕಾರದ ಸಂಪುಟ ಸಭೆ ನಡೆಯಲಿದೆ.

  • ನಮೋ ಪ್ರಮಾಣ ವಚನ – ಕ್ರೀಡಾಪಟುಗಳು, ರಾಜ್ಯದ ಗಣ್ಯರಿಗೆ ಆಹ್ವಾನ

    ನಮೋ ಪ್ರಮಾಣ ವಚನ – ಕ್ರೀಡಾಪಟುಗಳು, ರಾಜ್ಯದ ಗಣ್ಯರಿಗೆ ಆಹ್ವಾನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕನ್ನಡದ ಮೂವರು ಕ್ರಿಕೆಟ್ ದಿಗ್ಗಜರಿಗೆ ಆಹ್ವಾನ ನೀಡಲಾಗಿದೆ.

    ಈ ಕಾರ್ಯಕ್ರಮಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಮೋದಿ ಅವರು ಆಹ್ವಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಆಹ್ವಾನಿಸಲಾಗಿದೆ.

    ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸುತ್ತೂರು ಮಠದ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾದಾರ ಚೆನ್ನಯ್ಯ ಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ, ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್ ಭೈರಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

    ಕ್ರೀಡಾ ವಿಭಾಗದಿಂದ ಮಾಜಿ ಓಟಗಾರ್ತಿ ಪಿ.ಟಿ ಉಷಾ, ಮತ್ತು ಹರ್ಭಜನ್ ಸಿಂಗ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್ ತರಬೇತುಗಾರ ಪುಲೆಲ್ಲಾ ಗೋಪಿಚಂದ್ ಮತ್ತು ಜಿಮ್ನಾಸ್ಟಿಕ್ ಆಟಗಾರ್ತಿ ದೀಪಾ ಕರ್ಮಕರ್ ಭಾಗವಹಿಸಲಿದ್ದಾರೆ.

    ಈ ಕಾರ್ಯಕ್ರಮಕ್ಕೆ ನೆರೆಹೊರೆಯ ರಾಷ್ಟ್ರದ ಮುಖ್ಯಸ್ಥರು, ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಮತ್ತು ಚಲನಚಿತ್ರ ನಟರನ್ನು ಆಹ್ವಾನ ಮಾಡಲಾಗಿದೆ. ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆ ಸಂದರ್ಭದಲ್ಲಿ ಸಾವನ್ನಪ್ಪಿದ 50 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಕುಟುಂಬಗಳನ್ನು ಆಹ್ವಾನ ಮಾಡಲಾಗಿದೆ.

    ವಿದೇಶಿ ಗಣ್ಯರುಗಳಾಗಿ ಪ್ರಮಾಣ ವಚನ ಸ್ವೀಕರ ಸಭೆಗೆ ಬಿಮ್‍ಸ್ಟಿಕ್ (ಬಂಗಾಳ ಕೊಲ್ಲಿ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಇರುವ ಸಂಘಟನೆ) ಈ ಸಂಘಟನೆಯ ಬಾಂಗ್ಲಾದೇಶ, ಭೂತಾನ್, ಮಯನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ದೇಶದ ಮುಖ್ಯಸ್ಥರು ಬರುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

    ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಮಾರಂಭಕ್ಕೆ ಆಹ್ವಾನ ಮಾಡಲಾಗಿದೆ. ಇವರ ಜೊತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಮಾರಂಭಕ್ಕೆ ಆಗಮಿಸಲಿದ್ದಾರೆ.

  • ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ – ರಂಗೋಲಿಯಲ್ಲಿ ಅರಳಿದ ಕಮಲ, ಮೋದಿ

    ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ – ರಂಗೋಲಿಯಲ್ಲಿ ಅರಳಿದ ಕಮಲ, ಮೋದಿ

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಅಭಿಮಾನಿಗಳು ರಂಗೋಲಿ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

    ಕಲಿಯುಗದ ಶ್ರೀ ರಾಮಚಂದ್ರನ ಪಟ್ಟಾಭಿಷೇಕ ಎಂದು ಮಹಿಳೆಯರು ರಂಗೋಲಿಯಲ್ಲಿ ಬರೆದಿದ್ದಾರೆ. ಅರಳಿದ ಕಮಲ, ಮೋದಿ, ಶ್ರೀರಾಮ ಹಾಗು ರಾಷ್ಟ್ರ ಧ್ವಜವನ್ನು ರಂಗೋಲಿಯಲ್ಲಿ ಬಿಡಿಸಿದ್ದಾರೆ. ಭಾರತಕ್ಕೆ ಮತ್ತೊಮ್ಮೆ ರಾಮ ರಾಜ್ಯದ ಭಾಗ್ಯ ಸಿಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2ನೇ ಬಾರಿಗೆ ಮೋದಿ ಪ್ರಮಾಣ ವಚನ- ಅಭಿಮಾನಿಯಿಂದ ಪ್ರತಿಮೆ ವಿತರಣೆ

    ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಶೋಭ ಅವರು ವಿನೂತನವಾಗಿ ರಂಗೋಲಿ ಹಾಕಿ, ವ್ಯಾಯಾಮ ಶಾಲೆಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಶೋಭಾ ಅಲ್ಲದೆ ಮೋದಿ ಅಭಿಮಾನಿಗಳು ಕೂಡ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

    ಸದ್ಯ ದೇಶದ ಪ್ರಧಾನಿಯಾಗಿ ಮತ್ತೆ ಅಧಿಕಾರ ಸ್ವೀಕಾರ ಮಾಡುತ್ತಿರುವ ನರೇಂದ್ರ ಮೋದಿ ಅವರಿಗೆ ಜನರು ತಮ್ಮದೇ ಶೈಲಿಯಲ್ಲಿ ಮೋದಿಗೆ ತಮ್ಮ ಪ್ರೀತಿಯನ್ನ ವ್ಯಕ್ತಪಡಿಸಿ ಶುಭಾಶಯ ತಿಳಿಸುತ್ತಿದ್ದಾರೆ.

  • ಮೋದಿ ಪೂರ್ಣ ಬಹುಮತ ಪಡೆದಿದ್ದಕ್ಕೆ ಯಕ್ಷಗಾನದ ಹರಕೆ ತೀರಿಸಿದ ಮಂಗಳೂರು ಟೀಂ

    ಮೋದಿ ಪೂರ್ಣ ಬಹುಮತ ಪಡೆದಿದ್ದಕ್ಕೆ ಯಕ್ಷಗಾನದ ಹರಕೆ ತೀರಿಸಿದ ಮಂಗಳೂರು ಟೀಂ

    ಮಂಗಳೂರು: ಕರಾವಳಿಯಲ್ಲಿ ಇಷ್ಟಾರ್ಥ ಈಡೇರಿಕೆಗೆ ಹರಕೆ ಹೇಳಿ ಯಕ್ಷಗಾನ ಮಾಡಿಸುತ್ತಾರೆ.

    ಪ್ರಧಾನಿ ಮೋದಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಲ್ಲಿ ಕಟೀಲು ಮೇಳದ ಯಕ್ಷಗಾನ ಆಡಿಸುವುದಾಗಿ ಮಂಗಳೂರಿನ ಟೀಂ ಮೋದಿ ತಂಡ ಹರಕೆ ಹೊತ್ತಿತ್ತು. ಅದರಂತೆ, ಭಾರೀ ಗೆಲುವಿನೊಂದಿಗೆ ಮೋದಿ ವಿಜಯ ಪತಾಕೆ ಹಾರಿಸುತ್ತಿದ್ದಂತೆ ಮಂಗಳೂರಿನಲ್ಲಿ ತರಾತುರಿಯಲ್ಲಿ ಕಟೀಲು ಮೇಳದಿಂದ ದೇವಿ ಮಹಾತ್ಮೆ ಹರಕೆ ಬಯಲಾಟ ಆಡಿಸಿದೆ.

    ಬಿಜೆಪಿ ಶಾಸಕರು, ನೂತನ ಸಂಸದ ನಳಿನ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಯಕ್ಷಗಾನ ವೀಕ್ಷಣೆಗೆ ಆಗಮಿಸಿದ್ದರು. ಕಟೀಲು ದೇವಿಗೆ ಯಕ್ಷಗಾನ ಸೇವೆಯೂ ಪೂಜೆ ಇದ್ದಂತೆ. ಹಾಗಾಗಿ ಕಲಾವಿದರ ಮೂಲಕ ದೇವಿಯ ಕತೆಯನ್ನು ಆಡಿಸುವುದೇ ದೊಡ್ಡ ಸೇವೆ ಎನ್ನುವ ಪ್ರತೀತಿ ಇದೆ.

    ಇದೀಗ ಮೋದಿ ಗೆಲುವಿಗಾಗಿ ಹರಕೆ ಹೊತ್ತುಕೊಂಡಿದ್ದ ಮೋದಿ ಟೀಂ ಮಂಗಳೂರಿನ ರಥಬೀದಿಯಲ್ಲಿ ಯಕ್ಷಗಾನದ ಹರಕೆ ಸೇವೆ ಸಲ್ಲಿಸಿ ಕೃತಾರ್ಥವಾಗಿದೆ.

  • ವಿಶ್ವವೇ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡೋಣ – ಮೋದಿ

    ವಿಶ್ವವೇ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡೋಣ – ಮೋದಿ

    – ದೇಶದ ಜನತೆ ಫಕೀರನ ಜೋಳಿಗೆ ತುಂಬಿದ್ರು
    – ಭಾರತವನ್ನು ಸಮೃದ್ಧ ರಾಷ್ಟ್ರವನ್ನಾಗಿ ನಿರ್ಮಿಸೋಣ

    ನವದೆಹಲಿ: ಮೊದಲ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಕ್ಷೇತ್ರಗಳನ್ನು ಗೆದ್ದಿತ್ತು. ಇಂದು ಅದೇ ಬಿಜೆಪಿ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮತದಾನಗೈದ ಎಲ್ಲರಿಗೂ ಧನ್ಯವಾದ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಬಿಜೆಪಿ ಗೆಲುವು ಇತಿಹಾಸವನ್ನು ಬರೆದಿದೆ. ಸ್ವತಂತ್ರ ಭಾರತದ ಮೊದಲ ಬಾರಿಗೆ ರಣ ರಣ ಬಿಸಿಲನ್ನು ಲೆಕ್ಕಿಸದೇ ಮತದಾರರು ಬಂದು ಅತಿ ಹೆಚ್ಚು ಮತದಾನ ಮಾಡಿದ್ದಾರೆ. ಎಲ್ಲ ಅಡೆತಡೆಗಳನ್ನು ಮೀರಿ ಲೋಕತಂತ್ರದ ಹಬ್ಬದಲ್ಲಿ ಕೆಲಸ ಮಾಡಿದ ಚುನಾವಣಾ ಆಯೋಗ, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು.

    ಮಹಾಭಾರತದ ಯುದ್ಧದ ಬಳಿಕ ಶ್ರೀಕೃಷ್ಣನನ್ನು ಕೆಲವರು ನೀವು ಯಾವ ಪಕ್ಷದಲ್ಲಿದ್ದೀರಿ ಎಂದು ಕೇಳಿದ್ದರು. ಇಂದು ಅದೇ ಉತ್ತರವನ್ನು ಭಾರತದ ಜನತೆಯ ಮೂಲಕ ನಾನು ಯಾರ ಪಕ್ಷದಲ್ಲಿಯೂ ಇರಲಿಲ್ಲ. ನಾವು ಹಸ್ತಿನಾಪುರಕ್ಕಾಗಿ ನಿಂತಿದ್ದೆ. ಇಂದು ಕೋಟಿ ಕೋಟಿ ಭಾರತೀಯರು ಶ್ರೀಕೃಷ್ಣನ ರೂಪದಲ್ಲಿ ಭಾರತದ ಅಭಿವೃದ್ಧಿ ಪರ ನಿಂತಿದ್ದರ ಪರಿಣಾಮ ನಾನು ನಿಮ್ಮ ಮುಂದಿದ್ದೇನೆ ಎಂದರು.

    ಚುನಾವಣೆಯಲ್ಲಿ ದೇಶದ ಪ್ರತಿಯೊಬ್ಬ ನಾಗರೀಕರನು ಸ್ಪರ್ಧೆ ಮಾಡಿದ್ದರು. ಹಾಗಾಗಿ ಇದು ಜನತೆಗೆ ಗೆಲುವು. ಬಿಜೆಪಿಯ ಈ ಗೆಲುವನ್ನು ದೇಶದ ಜನರಿಗೆ ಅರ್ಪಿಸಲು ನಾನು ಇಚ್ಛಿಸುತ್ತೇನೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳು ನಮ್ಮ ಕಡೆಯಿಂದ ಶುಭಾಶಯಗಳು. ಗೆದ್ದ ಅಭ್ಯರ್ಥಿಗಳು ಹೆಗಲಿಗೆ ಹೆಗಲು ನೀಡಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡೋಣ. ಪಕ್ಷ ಯಾವುದೇ ಇರಲಿ ದೇಶದ ಅಭಿವೃದ್ಧಿ ನಮ್ಮದಾಗಿರಲಿ ಎಂದು ಹೇಳಿದರು.

    ಕೇಂದ್ರ ಸರ್ಕಾರ ಅಭಿವೃದ್ಧಿಯನ್ನ ಮಂತ್ರವಾಗಿಸಿಕೊಂಡು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ ಎಂದು ನಮ್ಮನ್ನು ಗೆಲ್ಲಿಸಿದ ದೇಶದ ಜನತೆಗೆ ಎಲ್ಲರ ಪರವಾಗಿ ಭರವಸೆ ನೀಡುತ್ತೇನೆ. ದೇಶದ ಸಾಮಾನ್ಯ ನಾಗರೀಕನು ಲೋಕತಂತ್ರದ ಬಾವುಟವನ್ನು ಇಂದು ಎತ್ತಿ ಹಿಡಿದಿರುವುದು ನಮ್ಮ ಮುಂದಿದೆ. ಹಾಗಾಗಿ ಸಾಮಾನ್ಯ ನಾಗರೀಕರನ ಮೂಲಭೂತ ಅವಶ್ಯಕತೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ. 20ನೇ ಶತಮಾನದ ರಾಜಕೀಯ ನಾಯಕರು ತಮ್ಮ ತಂತ್ರಗಳನ್ನು ಬಿಡಬೇಕು. ನಾವೆಲ್ಲ 21ನೇ ಶತಮಾನದಲ್ಲಿ ಇದ್ದೇವೆ. ಜನರು ಮೋದಿ ಮೋದಿ ಎಂದು ಹೇಳುವ ಮೂಲಕ ಪ್ರಾಮಾಣಿಕತೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ವಿಪಕ್ಷ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

    ದೇಶದ ರೈತ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ, ಕಾನೂನು ನಿಯಮಗಳನ್ನು ಪಾಲಿಸುವ ಸೇರಿದಂತೆ ಇದು ಎಲ್ಲರ ಜಯವಾಗಿದೆ. ಮಹಾಮೈತ್ರಿಕೂಟದ ನಾಯಕರು ಜಾತ್ಯಾತೀತ ಹೆಸರಿನ ಮುಖವಾಡ ಧರಿಸಿ ಒಂದಾಗಿದ್ದರು. ಆದ್ರೆ ಜಾತ್ಯಾತೀತ ಮುಖವಾಡ ಧರಿಸಿದ್ದ ಎಲ್ಲರಿಗೂ ದೇಶದ ಜನತೆ ಉತ್ತರ ನೀಡಿದ್ದು, ಇಂದು ಯಾರು ಮಾತನಾಡುತ್ತಿಲ್ಲ ಎಂದು ಟಾಂಗ್ ನೀಡಿದರು.

    ಈ ಚುನಾವಣೆ 21ನೇ ಶತಮಾನ ಸದೃಢ ಸರ್ಕಾರ ರಚಿಸಿ ದೇಶದ ಉಜ್ವಲ ಭವಿಷ್ಯದಲ್ಲಿ ಪಾತ್ರವಾಗಿದೆ. ಕೇಂದ್ರದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದ್ದು, ಇಂದು ಕೇವಲ ಎರಡು ಜಾತಿಗಳು ಮಾತ್ರ ಉಳಿಯಲಿವೆ. ಒಂದು ಬಡತನ ಮತ್ತೊಂದು ಬಡತನ ನಿರ್ಮೂಲನೆ ಮಾಡಲು ಮುಕ್ತ ಮಾಡುವ ವರ್ಗ. ಹಾಗಾಗಿ ಎರಡೂ ವರ್ಗಗಳಲ್ಲಿ ಮುಂದಿನ ಸರ್ಕಾರ ಶಕ್ತಿ ತುಂಬಿಸಬೇಕಿದೆ. 2019-24ರ ಅವಧಿಯಲ್ಲಿ ವಿಶ್ವವೇ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡೋಣ ಎಂದು ಕೇಳಿಕೊಂಡರು.

    ಗಾಂಧಿ-150 ಜನ್ಮದಿನ ಮತ್ತು ಭಾರತದ 75ನೇ ಸ್ವತಂತ್ರ್ಯ ದಿನಾಚರಣೆಯ ಈ ಎರಡೂ ಹಬ್ಬಗಳು 2019-24ರ ಅವಧಿಯಲ್ಲಿ ಬರಲಿವೆ. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಸಮೃದ್ಧ ರಾಷ್ಟ್ರವನ್ನಾಗಿ ಮಾಡೋಣ. ಸ್ವತಂತ್ರ ಭಾರತ ಸಮೃದ್ಧ ಭಾರತವನ್ನು ಮಾಡೋಣ ಎಂದು ಹೇಳಿದರು.

    ಚುನಾವಣೆಯಲ್ಲಿ ಯಾರು ಏನು ಹೇಳಿದರು ಎನ್ನುವುದು ನಮಗೆ ಬೇಡ. ಎಲ್ಲವೂ ಮುಗಿದು ಹೋಗಿದೆ. ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ದೇಶದ ಅಭಿವೃದ್ಧಿಗಾಗಿ ನಮ್ಮ ಜೊತೆ ಹೆಜ್ಜೆ ಹಾಕುವವರು ಪ್ರಾಮಾಣಿಕವಾಗಿರಬೇಕು. ದೇಶದ ಅಭಿವೃದ್ಧಿಗೆ ದೇಶದ ಜನತೆ ತಮ್ಮ ಮತಗಳ ಮೂಲಕ ಈ ಫಕೀರನ ಜೋಳಿಗೆ ತುಂಬಿಸಿದ್ದಾರೆ ಎಂದು ಮೋದಿ ಹೇಳಿದರು.

  • ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿತ್ತು – ಜಿ.ಎಸ್.ಬಸವರಾಜು

    ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿತ್ತು – ಜಿ.ಎಸ್.ಬಸವರಾಜು

    ತುಮಕೂರು: ಇವತ್ತಿನ ಎಕ್ಸಿಟ್ ಪೋಲ್ ಸಮೀಕ್ಷೆ ನೋಡಿ ಮತ್ತೆ ಪ್ರಧಾನಿ ಆಗಬೇಕು ಎಂದು ಕನಸು ಕಂಡಿದ್ದ ದೇವೇಗೌಡರ ಆಸೆಗೆ ತಣ್ಣೀರು ಬಿದ್ದಿದೆ ಎಂದು ತುಮಕೂರಿನ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ವ್ಯಂಗ್ಯವಾಡಿದ್ದಾರೆ.

    ಇಂದಿಗೆ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆ ಮುಗಿದಿದೆ. ಇದರ ಬೆನ್ನಲ್ಲೇ ಹಲವಾರು ಸಮೀಕ್ಷೆಗಳ ಪ್ರಕಾರ ಬಿಜೆಪಿ ಪಕ್ಷ ಮುಂಚೂಣಿಯಲ್ಲಿದ್ದು, ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿ.ಎಸ್.ಬಸವರಾಜು ಅವರು, ಮೋದಿ ಮತ್ತೇ ಪ್ರಧಾನಿ ಅನ್ನೋದನ್ನು ಸಮೀಕ್ಷೆ ಸಾಬೀತು ಮಾಡಿದೆ ಎಂದು ಹೇಳಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರಲ್ಲಿ ನಾವು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಎಕ್ಸಿಟ್ ಪೋಲ್‍ನಲ್ಲಿ ಮೋಸ ಇಲ್ಲ. ಇದು ಒಂದು ರೀತಿ ಶಾಸ್ತ್ರ ಹೇಳಿದಹಾಗೆ ನೂರಕ್ಕೆ 80% ಸತ್ಯ ಇರುತ್ತದೆ. ಚುನಾವಣೋತ್ತರ ಸಮೀಕ್ಷೆ ಯಿಂದ ದೇವೇಗೌಡರಿಗೆ ನಿದ್ದೆ ಬರುವುದಿಲ್ಲ. ಈ ಸಮೀಕ್ಷೆ ಬಂದು ಮತ್ತೆ ಪ್ರಧಾನಿಯಾಗುವ ಕನಸು ಕಂಡಿದ್ದ ದೇವೇಗೌಡರು ಅವರ ಆಸೆಗೆ ತಣ್ಣೀರು ಬಿದ್ದ ಹಾಗಾಗಿದೆ ಎಂದು ಹೇಳಿದರು.

    ಅತ್ಯಂತ ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಜನರು ಈ ತೀರ್ಪು ನೀಡಿದ್ದಾರೆ. ಯುವಕರು ಯುವತಿಯರು ಮತ್ತು ಪ್ರಜ್ಞಾವಂತರು ಬಿಜೆಪಿಗೆ ಮತಹಾಕಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಡೈವೋರ್ಸ್ ಪಡೆದ ಗಂಡ ಹೆಂಡತಿ ಇದ್ದ ಹಾಗೆ. ಅವರ ಕ್ಷೇತ್ರದಲ್ಲಿ ಇವರು, ಇವರ ಕ್ಷೇತ್ರದಲ್ಲಿ ಅವರು ಸರಿಯಾಗಿ ಕೆಲಸ ಮಾಡಿಲ್ಲ. ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಹಾಕಿದರೆ ತುಮಕೂರಲ್ಲಿ ಕಾಂಗ್ರೆಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ. ಇದನ್ನು ನೋಡಿದರೆ ಡೈವೋರ್ಸ್ ಕೊಟ್ಟ ಗಂಡ, ಹೆಂಡತಿ ಮಗಳ ಮದುವೆಗೆ ಬಂದಹಾಗೆ ಬಂದು ಹೋಗಿದ್ದಾರೆ. ಒಬ್ಬರ ಮುಖ ಒಬ್ಬರು ನೋಡಿಲ್ಲ ಎಂದು ಮೈತ್ರಿ ನಾಯಕರನ್ನು ಲೇವಡಿ ಮಾಡಿದರು.

  • ಮೋದಿ ಮತ್ತೆ ಪ್ರಧಾನಿಯಾದ್ರೆ ಸಂವಿಧಾನ ಬದಲಾವಣೆ ಮಾಡ್ತೇವೆ- ಯತ್ನಾಳ್

    ಮೋದಿ ಮತ್ತೆ ಪ್ರಧಾನಿಯಾದ್ರೆ ಸಂವಿಧಾನ ಬದಲಾವಣೆ ಮಾಡ್ತೇವೆ- ಯತ್ನಾಳ್

    ವಿಜಯಪುರ: ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ. ಅಗ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಲುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಮನ್ ಸಿವಿಲ್ ಕೋಡ್ ಜಾರಿ ಮಾಡಿ ಎಲ್ಲರಿಗೂ ಒಂದೇ ಕಾನೂನು ತರಲಾಗುವುದು. ಎಲ್ಲರು ಒಂದೇ ಮದುವೆ ಆಗಬೇಕು, ಎರಡೇ ಮಕ್ಕಳನ್ನು ಪಡೆಯಬೇಕು ಎಂದು ನಿಯಮ ಮಾಡುತ್ತೇವೆ. ಕಾಶ್ಮೀರಕ್ಕೆ ನೀಡಲಾದ 370ನೇ ವಿಧಿ ತೆಗೆದು ಹಾಕಿ ಸಮಾನ ನಾಗರಿಕ ಸಂಹಿತೆ ತರಲಾಗುವುದು ಎಂದು ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ರಾಮ ಮಂದಿರ ಮಾಡುತ್ತೇವೆ. ಕಾಶಿ ವಿಶ್ವನಾಥ ದೇವಾಲಯವನ್ನು ಪುನಃ ನಿರ್ಮಾಣ ಮಾಡುತ್ತೇವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 300ಕ್ಕಿಂತ ಹೆಚ್ಚು ಸ್ಥಾನ ಬರುತ್ತದೆ. ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.

  • ಮೋದಿ ಸಮಾವೇಶಕ್ಕೆ ಬಂದ ಕಾರ್ಯಕರ್ತರ ಬಸ್ಸಿನ ಮೇಲೆ ಕಲ್ಲುತೂರಾಟ

    ಮೋದಿ ಸಮಾವೇಶಕ್ಕೆ ಬಂದ ಕಾರ್ಯಕರ್ತರ ಬಸ್ಸಿನ ಮೇಲೆ ಕಲ್ಲುತೂರಾಟ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು ತೆರಳುತ್ತಿದ್ದ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆದಿದೆ.

    ಮಂಗಳೂರು ಹೊರವಲಯದ ಕುತ್ತಾರು ಬಳಿ ಘಟನೆ ನಡೆದಿದ್ದು, ಎರಡು ಬಸ್ ಗಳಿಗೆ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ಪರಿಣಾಮ ಬಸ್ಸಿನಲ್ಲಿದ್ದ ನಾಲ್ಕು ಮಂದಿ ಕಾರ್ಯಕರ್ತರ ತಲೆಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕತ್ಸೆ ನೀಡಲಾಗಿದೆ. ಇದನ್ನು ಓದಿ: ವಂಶೋದಯ ಅಲ್ಲ ನಮ್ಮದು ಅಂತ್ಯೋದಯ್ – ನಿಮ್ಮ ಒಂದು ವೋಟಿನಿಂದ ದೇಶ ಬದಲಾಗಿದೆ: ಮೋದಿ

    ಮಂಗಳೂರಿನ ಕೇಂದ್ರ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್, ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದರು. 5 ವರ್ಷದ ಅವಧಿಯಲ್ಲಿ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಜನರ ಮುಂದೆ ತೆರೆದಿಟ್ಟಿದ್ದರು. ಸಮಾವೇಶದಲ್ಲಿ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದ ಬಿಜೆಪಿ ಲೋಕಸಭಾ ಅಭ್ಯರ್ಥಿಗಳು ಸೇರಿದಂತೆ ಬಿಜೆಪಿ ಶಾಸಕರು, 80 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.