Tag: prime minister

  • ಬಿಜೆಪಿಗೆ 1 ಸಾವಿರ ರೂ. ದೇಣಿಗೆ ನೀಡಿದ ಮೋದಿ

    ಬಿಜೆಪಿಗೆ 1 ಸಾವಿರ ರೂ. ದೇಣಿಗೆ ನೀಡಿದ ಮೋದಿ

    ನವದೆಹಲಿ: ಬಿಜೆಪಿ ಪಕ್ಷಕ್ಕೆ 1 ಸಾವಿರ ರೂ. ದೇಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.

    ಮಾಜಿ ಪ್ರಧಾನಿ ದಿವಂಗತ ಅಟಾಲ್ ಬಿಹಾರಿ ವಾಜಪೇಯಿ ಅವರ 97 ನೇ ಜನ್ಮದಿನದಂದು ಬಿಜೆಪಿ ಪ್ರಾರಂಭಿಸಿದ ದೊಡ್ಡ ಅಭಿಯಾನದ ಭಾಗ ಇದಾಗಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷದ ನಿಧಿಗೆ 1,000 ರೂ. ದೇಣಿಗೆ ನೀಡಿದ್ದೇನೆ ಮತ್ತು ನೀವು ಪಕ್ಷವನ್ನು ಬಲಪಡಿಸಲು ಸಹಾಯ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

    ಭಾರತೀಯ ಜನತಾ ಪಕ್ಷದ ನಿಧಿಗೆ ನಾನು 1,000 ರೂ ದೇಣಿಗೆ ನೀಡಿದ್ದೇನೆ. ನೀವು ನೀಡುವಂತಹ ಸಣ್ಣ ದೇಣಿಗೆಯು ನಮ್ಮ ಪಕ್ಷವನ್ನು ಬಲಪಡಿಸುತ್ತದೆ. ಬಿಜೆಪಿಯನ್ನು ಬಲಗೊಳಿಸಲು ಸಹಾಯ ಮಾಡಿ. ಹಾಗೆಯೇ ಭಾರತವನ್ನು ಬಲಿಷ್ಠ ಮಾಡಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ವಾಜಪೇಯಿ ಹುಟ್ಟುಹಬ್ಬ: ಗಣ್ಯರಿಂದ ಗೌರವ ನಮನ

    ಮೋದಿಯ ನಂತರ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಅವರು ಪಕ್ಷದ ನಿಧಿಗೆ 1000 ರೂ. ದೇಣಿಗೆ ನೀಡಿದರು. ನಮೋ ಆ್ಯಪ್‍ನ ‘ದೇಣಿಗೆ’ ಮಾಡ್ಯೂಲ್ ಅನ್ನು ಬಳಸಿಕೊಂಡು ಬಿಜೆಪಿಯನ್ನು ನಾನು ಕೊಡುಗೆಯನ್ನು ನೀಡಿದ್ದೇನೆ. ನೀವು ಕೂಡ ರೆಫರಲ್ ಕೋಡ್ ಬಳಸಿ ಈ ಸಾಮೂಹಿಕ ಆಂದೋಲನದಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಕೊಡುಗೆಯನ್ನು ನೀಡಲು ಹೇಳಿ. ಇದ್ದರಿಂದಾಗಿ ನಿಸ್ವಾರ್ಥ ಮನಸ್ಸಿನಿಂದ ಜನರ ಸೇವೆಯನ್ನು ಮಾಡಲು ಬಿಜೆಪಿಗೆ ಬೆಂಬಲ ನೀಡಬಹುದು ಎಂದು ಟ್ವೀಟ್ ಮಾಡಿದ್ದಾರೆ.

    ಎಷ್ಟು ದೇಣಿಗೆ ಹಾಕಬಹುದು?
    5 ರೂ. ನಿಂದ 1000 ರೂ ಮೊತ್ತದ ದೇಣಿಗೆ ಹಾಕಬಹುದು ಎಂದು ನಡ್ಡಾ ಹೇಳಿದ್ದಾರೆ. ಸ್ವಯಂಪ್ರೇರಿತ ನಿಧಿ ಸಂಗ್ರಹ ಅಭಿಯಾನವು ದೀನ್ ದಯಾಳ್ ಜಿ ಯವರ ಪುಣ್ಯ ತಿಥಿಯ ದಿನಾಂಕವಾದಂತಹ ಫೆಬ್ರವರಿ 11 ರವರೆಗೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

  • ರಾಹುಲ್ ಗಾಂಧಿ ಪ್ರಧಾನಿಯಾದ ನಂತರ ಮಾಡುವ ಮೊದಲ ಕೆಲಸವೇನು? -ವೀಡಿಯೋ

    ರಾಹುಲ್ ಗಾಂಧಿ ಪ್ರಧಾನಿಯಾದ ನಂತರ ಮಾಡುವ ಮೊದಲ ಕೆಲಸವೇನು? -ವೀಡಿಯೋ

    ನವದೆಹಲಿ: ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಶಾಲೆಯೊಂದರ ಮಕ್ಕಳಿಗಾಗಿ ದೀಪಾವಳಿ ಪ್ರಯುಕ್ತ ಔತಣಕೂಟ ಆಯೋಜಿಸಿದ್ದರು. ಈ ವೇಳೆ ರಾಹುಲ್ ಗಾಂಧಿ ಪ್ರಧಾನಿಯಾದ ನಂತರ ಮಾಡುವ ಮೊದಲ ಕೆಲಸವೇನು? ಎನ್ನುವ ಪ್ರಶ್ನಗೆ ಉತ್ತರಿಸಿದ್ದಾರೆ.

    RAHUL GANDHI

    ತಮಿಳುನಾಡಿನಲ್ಲಿ ಪ್ರಚಾರ ನಡೆಸುವಾಗ ಭೇಟಿ ನೀಡಿದ್ದ ಮುಲಗುಮೂಡು ಗ್ರಾಮದ ಸೇಂಟ್ ಜೋಸೆಫ್ ಪ್ರೌಢಶಾಲೆಗೆ ಮತ್ತೊಮ್ಮೆ ಭೇಟಿ ನೀಡಿ ವಿದ್ಯಾರ್ಥಿಗಳ ಕುಶಲ ವಿಚಾರಿಸಿದ್ದರು. ವಿದ್ಯಾರ್ಥಿಗಳ ಗುಂಪಿನೊಂದಿಗೆ ನಡೆಸಿದ ಸಂವಾದದ ಮಾಹಿತಿಯನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಟ್ವಿಟರ್​ನಲ್ಲಿ ಪೋಸ್ಟ್ ನಲ್ಲಿ ರಾಹುಲ್ ಗಾಂಧಿ ಅವರನ್ನು ವಿದ್ಯಾರ್ಥಿನಿಯೊಬ್ಬರು ನೀವು ಪ್ರಧಾನಿಯಾದಾಗ ಮಾಡುವ ಮೊದಲ ಆದೇಶ ಏನಾಗಿರುತ್ತೆ? ಇದಕ್ಕೆ ಉತ್ತರಿಸಿದ ರಾಹುಲ್ ನಾವು ಮಹಿಳೆಯರಿಗೆ ಮೀಸಲಾತಿ ಕೊಡಬಹುದು ಎಂದು ಹೇಳಿದ್ದಾರೆ. ನಿಮ್ಮ ಮಕ್ಕಳಿಗೆ ಏನು ಕಲಿಸುತ್ತೀರಿ ಎಂಬ ಪ್ರಶ್ನೆಗೆ, ವಿನಯ, ವಿನಯದಿಂದ ನಿಮಗೆ ವಿದ್ಯೆ ಒಲಿಯುತ್ತದೆ. ರಾಹುಲ್, ಈ ವರ್ಷದ ನನ್ನ ದೀಪಾವಳಿ ವಿಶೇಷವಾಗಿತ್ತು. ಸಾಂಸ್ಕೃತಿಕ ವೈವಿಧ್ಯ ನಮ್ಮ ದೇಶದ ದೊಡ್ಡ ಶಕ್ತಿ ಮತ್ತು ಇದನ್ನು ನಾವು ಸಂರಕ್ಷಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಮೈಸೂರಲ್ಲಿ ಶಿಕ್ಷಕರಿಗೆ ಜೀನ್ಸ್ ಪ್ಯಾಂಟ್ ಬ್ಯಾನ್RAHUL GANDHI

    ರೈತರ ಹೋರಾಟಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬೆಂಬಲಿಸಿದ್ದನ್ನು ಔತಣಕೂಟದಲ್ಲಿ ಪಾಲ್ಗೊಂಡಿದ್ದವರೊಬ್ಬರು ಶ್ಲಾಘಿಸಿದರು. ನೀವು ಜನರೊಂದಿಗೆ ಒಂದಾಗಿ ಬೆರೆಯುವುದನ್ನು ಇದು ತೋರಿಸುತ್ತದೆ ಎಂಬ ಅವರ ಮಾತುಗಳನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ.

  • ಮೋದಿಯ ಡಿಜಿಟಲ್ ಇಂಡಿಯಾ ಮೂಲಕ ಪ್ರತಿ ಮನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು: ಉದಯ್ ಗರುಡಚಾರ್

    ಮೋದಿಯ ಡಿಜಿಟಲ್ ಇಂಡಿಯಾ ಮೂಲಕ ಪ್ರತಿ ಮನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು: ಉದಯ್ ಗರುಡಚಾರ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯ ಡಿಜಿಟಲ್ ಇಂಡಿಯಾ ಕನಸಿನ ಭಾರತ ನನಸು ಮಾಡಲು ಪ್ರತಿ ಮನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಚಿಕ್ಕಪೇಟೆ ಶಾಸಕರಾದ ಉದಯ್ ಗರುಡಾಚಾರ್ ಅಭಿಪ್ರಾಯಪಟ್ಟಿದ್ದಾರೆ.

    ಸ್ಲಂ ಪ್ರದೇಶದ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಆನಾಥ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಪ್ರಾಜೆಕ್ಟ್ ವರ್ಕ್ ಮಾಡಲು ಅನುಕೂಲಕ್ಕೆ ಬಿಗ್-ಬಿ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಸ್ಲಂ ಪ್ರದೇಶದ ಶಾಲಾ ಮಕ್ಕಳು ಮತ್ತು ಆನಾಥ ಮಕ್ಕಳು ಕಾಲೇಜು ,ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ಮತ್ತು ಪ್ರಾಜೆಕ್ಟ್ ವರ್ಕ್ ಮಾಡಲು ತರಬೇತಿ ಕೇಂದ್ರ ಉದ್ಘಾಟನೆಯನ್ನು ಉದಯ್ ಗರುಡಾಚಾರ್, ಅರಣ್ಯ ಅಭಿವೃದ್ದಿ ನಿಗಮ ನಿರ್ದೇಶಕಿ ಭಾಗ್ಯವತಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಮರೇಶ್ (ಅಂಬರೀಶ್) ಮತ್ತು ಚಲನಚಿತ್ರ ನಿರ್ಮಾಪಕ ಜಾಕ್ ಮಂಜು ಉದ್ಘಾಟನೆ ಮಾಡಿದರು. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್‍ನಲ್ಲಿ ಮತ್ತೆ ಬಿರುಕು – ಚರಣ್‍ಜಿತ್ ಸಿಂಗ್ ಛನ್ನಿ Vs ಸಿಧು

    ಬಳಿಕ ಮಾತನಾಡಿದ ಉದಯ್ ಗರುಡಾಚಾರ್, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಸ್ಲಂ ಪ್ರದೇಶವಿದೆ. ಅಲ್ಲಿ ಪ್ರತಿಭಾವಂತ ಮಕ್ಕಳು ಇದ್ದಾರೆ ಅವರಿಗೆ ಉತ್ತಮ ಕಂಪ್ಯೂಟರ್ ತಂತ್ರಜ್ಞಾನ ಹೊಂದಲು ಮತ್ತು ಶಾಲಾ, ಕಾಲೇಜು ಮಕ್ಕಳ ಪ್ರಾಜೆಕ್ಟ್ ವರ್ಕ್ ಮಾಡಲು ಉಚಿತವಾಗಿ ಕಲಿಸುವುದರಿಂದ ಶ್ರೀಮಂತರ ಮಕ್ಕಳಿಗೆ ಸಿಗುವ ಕಂಪ್ಯೂಟರ್ ಶಿಕ್ಷಣ ಸ್ಲಂ ಪ್ರದೇಶದ ಮಕ್ಕಳಿಗೆ ಸಿಕ್ಕರೆ ಭಾರತ ಭವಿಷ್ಯ ಉಜ್ವಲವಾಗಲಿದೆ .ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಯಶ್ವಸಿಯಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಎಲ್ಲರಿಗೂ ಅಶ್ವಿನಿ ಧನ್ಯವಾ

    ಭಾಗ್ಯವತಿ ಅಮರೇಶ್ ಮಾತನಾಡಿ, ಶಿಕ್ಷಣದಿಂದ ದೇಶ ಅಭಿವೃದ್ದಿ ಸಾಧ್ಯ. ಆರ್ಥಿಕವಾಗಿ ಸಬಲರಾದವರಿಗೆ ಉನ್ನತ ಶಿಕ್ಷಣ ಸಿಗುತ್ತದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಉಚಿತವಾಗಿ ಕಂಪ್ಯೂಟರ್ ತರಬೇತಿ ಮತ್ತು ಪ್ರಾಜೆಕ್ಟ್ ವರ್ಕ್ ಮಾಡಲು 10 ಕಂಪ್ಯೂಟರ್‍ ಗಳನ್ನು ಅಳವಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಆಶಯ ನಮ್ಮದು ಎಂದು ಹೇಳಿದರು. ಇದನ್ನೂ ಓದಿ: ನಾನು ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್

    ಕಾರ್ಯಕ್ರಮದಲ್ಲಿ ಬಿ.ಜೆ.ಪಿ.ಪ್ರಮುಖ ಮುಖಂಡರು, ಸ್ಲಂ ಪ್ರದೇಶದ ಮಕ್ಕಳು ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.

  • 2022ರ ಅಂತ್ಯಕ್ಕೆ 5 ಬಿಲಿಯನ್ ಡೋಸ್ ಕೋವಿಡ್ ಲಸಿಕೆ ವಿತರಣೆಗೆ ಭಾರತ ಸಿದ್ಧ: ಪ್ರಧಾನಿ ಮೋದಿ

    2022ರ ಅಂತ್ಯಕ್ಕೆ 5 ಬಿಲಿಯನ್ ಡೋಸ್ ಕೋವಿಡ್ ಲಸಿಕೆ ವಿತರಣೆಗೆ ಭಾರತ ಸಿದ್ಧ: ಪ್ರಧಾನಿ ಮೋದಿ

    ರೋಮ್: ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ವಿಶ್ವಕ್ಕೆ ಸಹಕಾರಿಯಾಗಲು ಭಾರತವು 2022ರ ಅಂತ್ಯಕ್ಕೆ 5 ಬಿಲಿಯನ್‍ನಷ್ಟು ಕೋವಿಡ್-19 ಲಸಿಕೆ ಡೋಸ್ ವಿತರಿಸಲಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

    modi

    ರೋಮ್‍ನಲ್ಲಿ ನಡೆದ ಜಿ-20 ಶೃಂಗಸಭೆ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಅಲ್ಲದೇ ಕೋವಿಡ್ ಮಾರಣಾಂತಿಕ ಕಾಯಿಲೆ ಎದುರಿಸುವಲ್ಲಿ “ಒಂದು ಭೂಮಿ, ಒಂದು ಆರೋಗ್ಯ ವಿಧಾನ” ಸಹಕಾರಿ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

    ನಮ್ಮ ನಾಗರಿಕರಿಗೆ ಮಾತ್ರವಲ್ಲ, ಪ್ರಪಂಚದ ಉಳಿದ ಭಾಗಗಳಿಗೆ ಲಸಿಕೆ ಲಭ್ಯವಿರುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಲಸಿಕೆ ವಿತರಣೆಯಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಭಾರತ ನೀಡುವ ಕೊಡುಗೆಯಾಗಿದೆ ಎಂದರು.

    modi

    150ಕ್ಕೂ ಹೆಚ್ಚು ದೇಶಗಳಿಗೆ ಭಾರತದ ವೈದ್ಯಕೀಯ ಪೂರೈಕೆ ಮತ್ತು ಸಾಂಕ್ರಾಮಿಕ ವಿರುದ್ಧದ ಹೋರಾಟದ ಸಮಯದಲ್ಲಿ ಜಾಗತಿಕ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳುವಲ್ಲಿ ಭಾರತದ ಕೊಡುಗೆ ಬಗ್ಗೆ ಇದೇ ವೇಳೆ ಪ್ರಧಾನಿ ಮಾತನಾಡಿದರು. ಇದನ್ನೂ ಓದಿ: ಅಪ್ಪು ಹಣೆಗೆ ಮುತ್ತಿಟ್ಟು ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

    ಭಾರತದ ಆರ್ಥಿಕ ಸುಧಾರಣೆಗಳ ಕುರಿತು ಮಾತನಾಡಿದ ಮೋದಿ ಅವರು, ಆರ್ಥಿಕ ಚೇತರಿಕೆ ಮತ್ತು ಪೂರೈಕೆ ಬಾಂಧವ್ಯದ ವೈವಿಧ್ಯೀಕರಣದಲ್ಲಿ ಭಾರತದೊಂದಿಗೆ ಪಾಲುದಾರರಾಗಲು ಜಿ20 ರಾಷ್ಟ್ರಗಳನ್ನು ಆಹ್ವಾನಿಸಿದರು.

    covid vaccine

    ಕೋವಿಡ್ ಸಾಂಕ್ರಾಮಿಕ ವಿರುದ್ಧ ಹೋರಾಡಲು ಹಾಗೂ ಭವಿಷ್ಯದ ಜಾಗತಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಲು “ಒಂದು ಭೂಮಿ, ಒಂದು ಆರೋಗ್ಯ” ಎಂಬ ದೃಷ್ಟಿಕೋನವನ್ನು ಪ್ರತಿಪಾದಿಸಿದರು.

  • ನಿಮ್ಮಂಥ ‘ಮನೆಮುರುಕರು’ ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಅಂದ್ಕೊಂಡಿದ್ದಾರೆ – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

    ನಿಮ್ಮಂಥ ‘ಮನೆಮುರುಕರು’ ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಅಂದ್ಕೊಂಡಿದ್ದಾರೆ – ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

    ಬೆಂಗಳೂರು: ಸಿದ್ದರಾಮಯ್ಯ ಒಬ್ಬ ಮನೆ ಮುರುಕ ಎಂದು ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

    ಹಾನಗಲ್ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಪ್ರಚಾರ ನಡೆಸಿ ಭಾಷಣ ಮಾಡಿದ್ದ ಸಿದ್ದರಾಮಯ್ಯ ಅವರು, ‘ಪ್ರಧಾನಿ ಮೋದಿ ವಿರುದ್ಧ ಮಾತಾಡಿದರೆ ದೇಶದ್ರೋಹಿಯಂತೆ, ಯಾವನ್ರಿ ಇವನು ಪ್ರಧಾನ ಮಂತ್ರಿ? ಇಂಥವರೆಲ್ಲ ಪ್ರಧಾನಿ ಆಗೋಕೆ ಲಾಯಕ್ಕೇನ್ರಿ? ನನಗೆ ವೈಯಕ್ತಿಕವಾಗಿ ಯಾರ ಮೇಲೂ ಕೋಪ ಇಲ್ಲ. ಅವರು ಮಾಡ್ತಿರೋದನ್ನು ನೋಡಿ ಕೋಪ ಬರ್ತಿದೆ ಎಂದು ಗುಡುಗಿದ್ದರು.

    ಈ ಕುರಿತಂತೆ ಬಿಜೆಪಿ ತನ್ನ ಅಧಿಕೃತ ಟ್ವೀಟ​ರ್‌​ನಲ್ಲಿ, ಮಾತೆತ್ತಿದರೆ ನಾನು ಹಳ್ಳಿಯವನು ಅಂತೀರ, ನಾನು ಮಾತನಾಡುವ ಶೈಲಿ ಹೀಗೆ ಅಂತೀರಾ, ನಿಮಗೆ ಗ್ರಾಮೀಣ ಸಂಸ್ಕೃತಿಯ ಅರಿವೇ ಇಲ್ಲ. ಅನ್ಯರನ್ನು ಪ್ರೀತಿ, ಬಹುವಚನ, ಆದರದಿಂದ ಮಾತನಾಡುವುದು ಗ್ರಾಮೀಣ ಸಂಸ್ಕೃತಿ. ಆದರೆ ನಿಮ್ಮಂಥ ‘ಮನೆಮುರುಕರು’ ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಎಂದುಕೊಂಡಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಉದಾಸಿ, ಸಜ್ಜನರ್ ಸೇರಿ ಖಾಲಿ ಚೀಲಗಳನ್ನೂ ಬಿಡದಂತೆ ಸಕ್ಕರೆ ಕಾರ್ಖಾನೆ ನುಂಗಿದ್ದಾರೆ: ಸಿದ್ದರಾಮಯ್ಯ

    ನಿರಂತರ 20 ವರ್ಷಗಳಿಂದ ಜನರಿಂದ ಆಯ್ಕೆಯಾಗಿ ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿಯವರ ಕುರಿತು ಏಕವಚನದಲ್ಲಿ ಮಾತನಾಡುವ ಮುನ್ನ ಎಚ್ಚರವಹಿಸಿ. ನಿಮ್ಮ ದುರಹಂಕಾರ, ದಾಷ್ಟ್ರ್ಯಕ್ಕಾಗಿ ಮಾಜಿ ಮುಖ್ಯಮಂತ್ರಿಯೊಬ್ಬರಿಂದ ನಿಮ್ಮ ಸಾಂವಿಧಾನಿಕ ಹುದ್ದೆಯ ಮೇಲೆ ಪ್ರಯೋಗವಾದ ಪದವನ್ನು ಹೇಗೆ ಅರಗಿಸಿಕೊಂಡಿರಿ? ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ- ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು

    siddaramaia

    ಜನರಿಂದ ನಿರಂತರ ಎರಡನೇ ಅವಧಿಗೆ ಆಯ್ಕೆಯಾದ ಪ್ರಧಾನ ಸೇವಕ ಅಲಂಕರಿಸಿರುವ ಪ್ರಧಾನಿ ಆ ಹುದ್ದೆಯ ಕುರಿತು ಕೀಳು ಮಟ್ಟದಲ್ಲಿ ಮಾತನಾಡಿ ನಿಮ್ಮ ಕೀಳು ಸಂಸ್ಕಾರ ಅನಾವರಣ ಮಾಡಿಕೊಂಡಿದ್ದೀರಿ. ಸರ್ಕಾರಿ ಬಂಗಲೆಯಲ್ಲೇ ಉಳಿಯಬೇಕೆಂಬ ಹಟಕ್ಕೆ ಪ್ರತಿಪಕ್ಷ ಸ್ಥಾನ ಪಟ್ಟು ಹಿಡಿದು ಉಳಿಸಿಕೊಂಡ ನಿಮ್ಮಂತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸುವ ಮೂಲಕ ಕೆಂಡಕಾರಿದ್ದಾರೆ. ಇದನ್ನೂ ಓದಿ: ಗಾಂಧಿಯನ್ನೇ ಟೀಕಾಕಾರರು ಬಿಡ್ಲಿಲ್ಲ, ನನ್ನಂತ ಹುಲು ಮಾನವನನ್ನು ಬಿಡ್ತಾರಾ? – ಹೆಚ್‍ಡಿಕೆ ವಿರುದ್ಧ ಸಿದ್ದರಾಮಯ್ಯ ಟ್ವೀಟ್

    ಅಪ್ಪ, ಅಜ್ಜಿ, ಮುತ್ತಾತ ಪ್ರಧಾನಿಯಾಗಿದ್ದರೆಂಬ ಕಾರಣಕ್ಕೆ ತಾನು ಪ್ರಧಾನಿಯಾಗಬೇಕೆಂದು ಓರ್ವ “ಹೆಬ್ಬೆಟ್ಟು” ಗಿರಾಕಿ ಕನಸು ಕಾಣುತ್ತಿದ್ದಾನೆ. ಸಿದ್ದರಾಮಯ್ಯನವರೇ, ಆತನ ಯೋಗ್ಯತೆ, ಅರ್ಹತೆ ಏನು ಎಂದು ವಿಚಾರಿಸಿ. ನಿಮ್ಮ ಶಾಶ್ವತ ಪ್ರಧಾನಿ ಅಭ್ಯರ್ಥಿಯ ಬಗ್ಗೆಯೂ ಹೀಗೇ ಮಾತನಾಡುತ್ತೀರಾ ನೀವು? ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸಿ ಬಿಜೆಪಿ ತಿರುಗೇಟು ನೀಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮ ಪಕ್ಷದ ಬಗ್ಗೆ ಮಾತನಾಡುವುದನ್ನು ಮೊದಲು ನಿಲ್ಲಿಸಲಿ: ಎಚ್‍ಡಿಕೆ

  • ಬಿಹಾರದ ಸಿಎಂ ಮುಂದಿನ ಪ್ರಧಾನಿ ಆಗ್ಬೇಕು: ಜಮಾ ಖಾನ್

    ಬಿಹಾರದ ಸಿಎಂ ಮುಂದಿನ ಪ್ರಧಾನಿ ಆಗ್ಬೇಕು: ಜಮಾ ಖಾನ್

    ಪಾಟ್ನಾ: ಜನತಾದಳ ಪಕ್ಷದ ನಾಯಕ ಜಮಾ ಖಾನ್‍ರವರು ಬಿಹಾರದ ಸಿಎಂ ನಿತೀಶ್ ಕುಮಾರ್ ಭಾರತದ ಮುಂದಿನ ಪ್ರಧಾನಿಯಾಗಬೇಕೆಂದು ಅಜ್ಮೀರ್ ಷರೀಫ್‍ನಲ್ಲಿ ಹೇಳಿದ್ದಾರೆ. ಜೆಡಿ(ಯು) ಕೇಂದ್ರದಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟದ(ಎನ್‍ಡಿಎ) ಒಂದು ಭಾಗವಾಗಿದೆ.

    jama-khan

    ಬಿಹಾರ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಜಮಾ ಖಾನ್ ರಾಜಸ್ಥಾನದ ಅಜ್ಮೀರ್ ಷರೀಫ್‍ಗೆ ಭೇಟಿ ನೀಡಿದ್ದ ವೇಳೆ ನಿತೀಶ್ ಕುಮಾರ್‌‌ರವರು ದೇಶದ ಮುಂದಿನ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿದ್ದಾರೆ. ನಿತೀಶ್ ಕುಮಾರ್ ಮುಂದಿನ ಪ್ರಧಾನಿಯಾಗಬೇಕೆಂಬುವುದು ಇಡೀ ದೇಶದ ಧ್ವನಿಯಾಗಿದೆ. ನಿತೀಶ್ ಕುಮಾರ್​ಗೆ ಬಿಹಾರ ಮಾತ್ರವಲ್ಲದೇ ಇಡೀ ದೇಶದ ಆಡಳಿತ ಸಿಗಲಿ ಎಂದು ನಾನು ಖ್ವಾಜಾ ಗರೀಬ್ ನವಾಜ್‍ರನ್ನು ಪ್ರಾರ್ಥಿಸಿದ್ದೇನೆ. ಇದರಿಂದ ಇಡೀ ದೇಶದಲ್ಲಿ ಶಾಂತಿ ಮತ್ತು ಸಹೋದರತ್ವ ಉಳಿಯುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ನಿತೀಶ್ ಕುಮಾರ್ ಅವರನ್ನು ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ಮಾಡಿದ ಮೊದಲ ಜೆಡಿಯು ನಾಯಕ ಜಮಾ ಖಾನ್ ಅಲ್ಲ. ಈ ಹಿಂದೆ ಪಕ್ಷದ ಹಿರಿಯ ನಾಯಕ ಕೆ.ಸಿ. ತ್ಯಾಗಿ ಮತ್ತು ಜೆಡಿಯುನ ಸಂಸದೀಯ ಮಂಡಳಿ ಅಧ್ಯಕ್ಷರಾದ ಉಪೇಂದ್ರ ಕುಶ್ವಾಹ ಎಂದು ತಿಳಿಸಿದ್ದಾರೆ.

    jama khan

    ಕಳೆದ ತಿಂಗಳು ಜೆಡಿಯು ರಾಷ್ಟ್ರೀಯ ಕೌನ್ಸಿಲ್ ಸಭೆಯ ನಂತರ ಕೆಸಿ ತ್ಯಾಗಿಯವರು, ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿ ಅಲ್ಲ. ಅವರು 2024ರಲ್ಲಿ ಪ್ರಧಾನಿಯಾಗುವ ರೇಸ್‍ನಲ್ಲಿಲ್ಲ. ನಮ್ಮ ಎನ್‍ಡಿಎ ನಾಯಕ ಮೋದಿ. ಆದರೆ ನಿತೀಶ್ ಕುಮಾರ್ ಪ್ರಧಾನಿಯಾಗಲು ಇರಬೇಕಾದ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದರು. ಮತ್ತೊಂದೆಡೆ ಉಪೇಂದ್ರ ಕುಶ್ವಾಹ ಇಂದಿನ ದಿನಗಳಲ್ಲಿ ಪಿಎಂ ಮೋದಿ ಹೊರತುಪಡಿಸಿ, ಅನೇಕ ಮಂದಿ ನಿತೀಶ್ ಕುಮಾರ್ ಪ್ರಧಾನಿಯಾಗುವ ಗುಣ ಹೊಂದಿದ್ದಾರೆ ಎಂದು ಹೇಳಿದ್ದಾರೆ.

    ಆದರೆ ಈ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್, ಆ ರೀತಿ ಏನು ಇಲ್ಲ. ನಾನೇಕೆ ಪಿಎಂ ಆಗಬೇಕು? ನನಗೆ ಈ ವಿಷಯದಲ್ಲಿ ಆಸಕ್ತಿ ಇಲ್ಲ ಎಂದಿದ್ದರು. ಇದನ್ನೂ ಓದಿ: ಗಾಯಕ್ವಾಡ್ ಘರ್ಜನೆ – ಚೆನ್ನೈ ಸೂಪರ್ ಕಿಂಗ್ಸ್‌ಗೆ 20 ರನ್‍ಗಳ ಜಯ

  • ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್

    ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್

    ಇಸ್ಲಾಮಾಬಾದ್: ಉಗ್ರರ ಆಡಳಿತವನ್ನು ನೋಡಿ ಜನರು ಅಫ್ಘಾನಿಸ್ತಾನ ತೊರೆಯುತ್ತಿದ್ದರೆ ಇತ್ತ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ತಾಲಿಬಾನ್ ಪರ ಹೇಳಿಕೆ ನೀಡಿ ಈಗ ಫುಲ್ ಟ್ರೋಲ್ ಆಗುತ್ತಿದ್ದಾರೆ.

    ಶಾಹಿದ್ ಅಫ್ರಿದಿ ಅವರು, ತಾಲಿಬಾನಿಗಳು ಅತ್ಯಂತ ಧನಾತ್ಮಕ ಮನಸ್ಸಿನಿಂದ ಬಂದಿದ್ದಾರೆ ಎಂದು ಹೇಳಿ ಉಗ್ರರನ್ನು ಹೊಗಳಿದ್ದಾರೆ.

    ಪಾಕಿಸ್ತಾನದ ಪತ್ರಕರ್ತೆ ನೈಲಾ ಇನಾಯತ್ ಅವರು ಶಾಹಿದ್ ಅಫ್ರಿದಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಾಲಿಬಾನಿಗಳು ಧನಾತ್ಮಕ ಮನಸ್ಸಿನಿಂದ ಬಂದಿದ್ದಾರೆ. ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡುತ್ತಿದ್ದಾರೆ ಎಂದು ಅಫ್ರಿದಿ ಹೇಳಿದ್ದಾರೆ. ಇದನ್ನೂ ಓದಿ : ಇನ್ಮೇಲಿಂದ ಅಫ್ರಿದಿಗೂ ನನಗೂ ಸಂಬಂಧವಿಲ್ಲ, ಅವನು ಮಿತಿ ಮೀರಿದ್ದಾನೆ: ಭಜ್ಜಿ ಗರಂ 

    ಅಫ್ರಿದಿ ತಾಲಿಬಾನಿಗಳ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಜನ ಈಗ ಟೀಕಿಸಿ ವ್ಯಂಗ್ಯವಾಡುತ್ತಿದ್ದಾರೆ. “ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ”, “ಪಾಕಿಸ್ತಾನ ಉಗ್ರರ ಸ್ವರ್ಗ ಎನ್ನುವುದಕ್ಕೆ ಇಲ್ಲಿದೆ ಉತ್ತಮ ಉದಾಹರಣೆ” ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಬರೆದು ಟ್ರೋಲ್ ಮಾಡುತ್ತಿದ್ದಾರೆ.

    https://twitter.com/AxisofE/status/1432641701055643650

    ಭಾರತದ ಬಗ್ಗೆ ಕಟುವಾಗಿ ಟೀಕೆ ಮಾಡುವ ಮನಸ್ಥಿತಿ ಹೊಂದಿರುವ ಅಫ್ರಿದಿ ಈ ಹಿಂದೆ ನಾನು ಟಿವಿಯನ್ನು ಒಡೆದು ಹಾಕಿದ್ದೆ ಎಂದು ಹೇಳಿದ್ದರು. ಇದನ್ನೂ ಓದಿ : ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    ಶಾಹಿದ್ ಅಫ್ರಿದಿ ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ಹಳೆಯ ವಿಡಿಯೋ ಹಿಂದೆ ವೈರಲ್ ಆಗಿತ್ತು. ಟಿವಿ ವಾಹಿನಿಯ ನಿರೂಪಕಿ ಸಂದರ್ಶನವೊಂದರಲ್ಲಿ ನೀವು ಎಷ್ಟು ಬಾರಿ ಟಿವಿ ಒಡೆದಿದ್ದೀರಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಅಫ್ರಿದಿ, ನಾನು ಒಂದು ಬಾರಿ ಟಿವಿಯನ್ನು ಒಡೆದಿದ್ದೇನೆ ಎಂದು ಉತ್ತರಿಸಿದ್ದರು.

    ನನ್ನ ಪತ್ನಿಯ ಕಾರಣದಿಂದಾಗಿ ಒಂದು ಬಾರಿ ಟಿವಿ ಒಡೆದಿದ್ದೇನೆ. ಭಾರತೀಯ ವಾಹಿನಿಯೊಂದರ ಡ್ರಾಮಾ ಶೋ ತುಂಬಾ ಜನಪ್ರಿಯವಾಗಿತ್ತು. ಈ ಶೋವನ್ನು ನನ್ನ ಪತ್ನಿ ನೋಡುತ್ತಿದ್ದಳು, ಆಗ ನೀನೊಬ್ಬಳೆ ನೋಡು ಮಕ್ಕಳು ಇದನ್ನು ನೋಡಲು ಬಿಡಬೇಡ ಎಂದು ಹೇಳಿದ್ದೆ. ಒಂದು ಬಾರಿ ನಾನು ರೂಮಿನಿಂದ ಹೊರಗಡೆ ಬಂದಾಗ ನನ್ನ ಮಕ್ಕಳಲ್ಲಿ ಒಬ್ಬಳು ಟಿವಿ ಶೋ ನೋಡಿಕೊಂಡು ಆರತಿ ಮಾಡುವುದನ್ನು ಅನುಕರಣೆ ಮಾಡುತ್ತಿದ್ದಳು. ಇದನ್ನು ಕಂಡ ತಕ್ಷಣ ಕೋಪ ಬಂತು ಹೀಗಾಗಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿದ್ದರು.

  • ಪ್ರಧಾನಿ, ರಾಷ್ಟ್ರಪತಿ ಹಾರಾಟಕ್ಕೆ ಬಂದಿಳಿದ ವಿಶೇಷ ಏರ್ ಇಂಡಿಯಾ ಒನ್ ವಿಮಾನ- ವಿಡಿಯೋ

    ಪ್ರಧಾನಿ, ರಾಷ್ಟ್ರಪತಿ ಹಾರಾಟಕ್ಕೆ ಬಂದಿಳಿದ ವಿಶೇಷ ಏರ್ ಇಂಡಿಯಾ ಒನ್ ವಿಮಾನ- ವಿಡಿಯೋ

    ನವದೆಹಲಿ: ದೇಶದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಿಗಳ ಪ್ರವಾಸಕ್ಕಾಗಿ ವಿಶೇಷವಾಗಿ ತಯಾರಿಸಲ್ಪಟ್ಟ ಏರ್ ಇಂಡಿಯಾ ಒನ್ ವಿಮಾನ ಇಂದು ಭಾರತ ತಲುಪಿದೆ.

    ಅಮೆರಿಕಾದಿಂದ ದೆಹಲಿಯ ಏರ್ ಪೋರ್ಟ್‍ಗೆ ಏರ್ ಇಂಡಿಯಾ ಒನ್ ಬಂದಿಳಿಯಿತು. ಆಗಸ್ಟ್ ನಲ್ಲಿಯೇ ಈ ವಿಮಾನ ಭಾರತಕ್ಕೆ ಹಸ್ತಾಂತರ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಇದೀಗ ಏರ್ ಇಂಡಿಯಾ ಒನ್ ದೆಹಲಿ ತಲುಪಿದೆ.

    ಅಮೆರಿಕಾ ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ಮಾದರಿಯಲ್ಲಿಯೇ ಎರಡು ಬೋಯಿಂಗ್-777 ವಿಮಾನಗಳನ್ನು ಏರ್ ಇಂಡಿಯಾ ಒನ್ ಹೆಸರಲ್ಲಿ ತಯಾರಿಸಲು ಆರ್ಡರ್ ನೀಡಲಾಗಿತ್ತು. ಸದ್ಯ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಪ್ರಧಾನಿ ಪ್ರವಾಸಕ್ಕೆ ಬೋಯಿಂಗ್-747 ವಿಮಾನವನ್ನು ಬಳಸಲಾಗುತ್ತಿದೆ. ಮತ್ತೊಂದು ಬೋಯಿಂಗ್-777 ಏರ್ ಇಂಡಿಯಾ ಒನ್ ವಿಮಾನ ಮುಂದಿನ ದಿನಗಳಲ್ಲಿ ಭಾರತಕ್ಕೆ ಹಸ್ತಾಂತರ ಆಗಲಿದೆ.

    ಏರ್ ಇಂಡಿಯಾ ಒನ್ ವಿಶೇಷತೆ:
    ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ವಿಮಾನ ಹೊಂದಿದ್ದು, 1,300 ಕೋಟಿ ರೂ. ಮೌಲ್ಯದ ಅಲ್ಟ್ರಾ ಸೂಪರ್ ವಿಮಾನ ಇದಾಗಿದೆ. ವಿವಿಐಪಿಗಳಿಗೆ ದೊಡ್ಡ ಕ್ಯಾಬಿನ್, ಮಿನಿ ಮೆಡಿಕಲ್ ಸೆಂಟರ್ ಸೇರಿದಂತೆ ನಿರಂತರವಾಗಿ 17 ಗಂಟೆ ಕಾಲ ಹಾರುವ ಸಾಮಥ್ರ್ಯವನ್ನು ಹೊಂದಿದೆ. ಬಹುತೇಕ ಬ್ಯುಸಿನೆಸ್ ಕ್ಲಾಸ್ ಸೀಟ್ ಅಳವಡಿಕೆ ಮಾಡಲಾಗಿದ್ದ, ವಾಯುಸೇನೆ ಪೈಲಟ್‍ಗಳಿಂದ ಮಾತ್ರ ಚಾಲನೆ ಮಾಡಲಾಗುತ್ತದೆ. ಈ ವಿಮಾನ ಅತ್ಯಾಧುನಿಕ ಸಂವಹನ ವ್ಯವಸ್ಥೆಯನ್ನು ಹೊಂದಿದ್ದು, ಹ್ಯಾಕ್ ಮಾಡದೆ ಮಧ್ಯ ಗಾಳಿಯಲ್ಲಿ ಆಡಿಯೋ ಮತ್ತು ವಿಡಿಯೋ ಸಂವಹನ ಕಾರ್ಯವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

  • ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಲು ಪ್ರಧಾನಿ, ಕೇಂದ್ರ ಸಚಿವರ ಭೇಟಿ: ಬಿಎಸ್‍ವೈ

    ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಲು ಪ್ರಧಾನಿ, ಕೇಂದ್ರ ಸಚಿವರ ಭೇಟಿ: ಬಿಎಸ್‍ವೈ

    ನವದೆಹಲಿ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕುರಿತು ಚರ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಹಲವು ಸಚಿವರನ್ನು ಭೇಟಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

    ದೆಹಲಿಯಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕ ಭವನ-1 ‘ಕಾವೇರಿ’ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ರಾಜ್ಯದ ಬಗ್ಗೆ ಚರ್ಚೆ ಮಾಡಲಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಬಾಕಿ ಯೋಜನೆಗೆ ಅನುದಾನ ಮತ್ತು ಒಪ್ಪಿಗೆ ಪಡೆಯಲಿದ್ದೇವೆ ಎಂದರು.

    ಇದಕ್ಕೂ ಮುನ್ನ ಕರ್ನಾಟಕ-1 ಕಾವೇರಿ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು. ಎರಡು ತಳ ಮಹಡಿಗಳೂ, ನೆಲ ಮಹಡಿ ಹಾಗೂ ಆರು ಮಹಡಿ ಒಳಗೊಂಡಂತೆ ಒಟ್ಟು ಒಂಭತ್ತು ಮಹಡಿಗಳ ಈ ಕಟ್ಟಡವನ್ನು ನಿರ್ಮಾಣಕ್ಕೆ ಬಾಲಾಜಿ ಕೃಪಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್‍ಗೆ ನೀಡಿದೆ. ಮುಂದಿನ 24 ತಿಂಗಳಲ್ಲಿ ಕಟ್ಟಡದ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

  • 1.75 ಲಕ್ಷ ಮನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

    1.75 ಲಕ್ಷ ಮನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ/ಭೋಪಾಲ್: ಪ್ರಧಾನ ಮಂತ್ರಿ ಆವಸ್ ಯೋಜನೆ ಅಡಿಯಲ್ಲಿ ಮಧ್ಯಪ್ರದೇಶದಲ್ಲಿ ನಿರ್ಮಿಸಲಾಗಿದ್ದ 1.75 ಲಕ್ಷ ಮನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಉದ್ಘಾಟಿಸಿದರು.

    ಘರ್ ಪ್ರವೇಶ ಹೆಸರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಮನೆ ಮಾಲೀಕರಿಗೆ ಮನೆ ಕೀ ನೀಡುವ ಮೂಲಕ ಶುಭ ಹಾರೈಸಿದರು. ಮಧ್ಯಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಕೂಲಿ ಕಾರ್ಮಿಕರಿಗಾಗಿ ಈ ಮನೆಗಳು ನಿರ್ಮಾಣವಾಗಿದ್ದು, ಮಧ್ಯಪ್ರದೇಶ ರಾಜ್ಯ ಒಂದರಲ್ಲೇ ಈವರೆಗೆ ಸ್ವಂತ ಸೂರು ಇಲ್ಲದ ಸುಮಾರು 17 ಲಕ್ಷ ಬಡ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಕ್ಕಿದೆ.

    ಈ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ 1.20 ಲಕ್ಷ ರೂ.ಗಳ ಸರ್ಕಾರದ ಅನುದಾನ ಸಿಗುತ್ತಿದೆ. ಇದರಲ್ಲಿ ಶೇ.60 ಕೇಂದ್ರದಿಂದ ಮತ್ತು ಶೇ.40 ರಾಜ್ಯದಿಂದ ಹಣ ನೀಡಲಾಗುತ್ತದೆ. ಈ ಯೋಜನೆಯಡಿ ದೇಶಾದ್ಯಂತ 2022ರ ವೇಳೆಗೆ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.