Tag: Prime Minister Nodi

  • ಏ.5ರಂದು ರಾತ್ರಿ ಮನೆಯ ಬಾಲ್ಕನಿಯಲ್ಲಿ ದೀಪ ಬೆಳಗಿಸಿ: ಮೋದಿ ಕರೆ

    ಏ.5ರಂದು ರಾತ್ರಿ ಮನೆಯ ಬಾಲ್ಕನಿಯಲ್ಲಿ ದೀಪ ಬೆಳಗಿಸಿ: ಮೋದಿ ಕರೆ

    – 9 ಗಂಟೆಗೆ 9 ನಿಮಿಷ ಲೈಟ್ ಆಫ್ ಮಾಡಿ ದೀಪ ಬೆಳಗಿ

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ನಾವೆಲ್ಲರೂ ಒಟ್ಟಾಗಿ ಸೇರಿ ಹೋರಾಡಬಹುದು. ಹೀಗಾಗಿ ಏಪ್ರಿಲ್ 5ಕ್ಕೆ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಎಲ್ಲರೂ ಲೈಟ್ ಆಫ್ ಮಾಡಿ ದೀಪ ಬೆಳಗಿಸಿ ಎಂದು ಪ್ರಧಾನಿ ಮೋದಿ ಅವರು ದೇಶವಾಸಿಗಳಿಗೆ ಸಂದೇಶ ಕೊಟ್ಟಿದ್ದಾರೆ.

    ಇಂದು ಬೆಳಗ್ಗೆ 9 ಗಂಟೆಗೆ ಲೈವ್ ಬಂದ ಪ್ರಧಾನಿ, ದೇಶದ ಎಲ್ಲ ಜನರಿಗೂ ನಮಸ್ಕಾರ, ಕೊರೊನಾ ವೈರಸ್ ದೇಶಾದ್ಯಂತ ವ್ಯಾಪಿಸುತ್ತಿದೆ. ಹೀಗಾಗಿ ಲಾಕ್‍ಡೌನ್ ಮಾಡಿ 9 ದಿನ ಆಗಿದೆ. ಎಲ್ಲರೂ ಸಹಕಾರ ಕೊಟ್ಟು ಲಾಕ್‍ಡೌನ್‍ನನ್ನು ಸಮರ್ಥವಾಗಿ ನಿಭಾಯಿಸಿದ್ದೀರಿ. ಜನತಾ ಕರ್ಫ್ಯೂಗೂ ಬೆಂಬಲ ಕೊಟ್ಟಿದ್ದೀರಿ. ಸಂಕಷ್ಟದ ಹೊತ್ತಲ್ಲಿ ಸಾಮೂಹಿಕವಾಗಿ ಶಕ್ತಿ ಪ್ರದರ್ಶನವಾಗಿದೆ. ಇದರಿಂದ ಕೊರೊನಾ ವಿರುದ್ಧ ಹೋರಾಡಬಹುದು. ಸರ್ಕಾರ, ಕಾನೂನು ಜನರು ಎಲ್ಲರು ಸೇರಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಜನರ ಸಹಕಾರಕ್ಕೆ ಧನ್ಯವಾದ ತಿಳಿಸಿದರು.

    ಕೋಟ್ಯಂತರ ಜನರು ಮನೆಯಲ್ಲಿದ್ದಾರೆ. ಎಲ್ಲರಿಗೂ ಮನೆಯಲ್ಲಿ ಕೂತು ಒಬ್ಬನೇ ಏನು ಮಾಡಬಹುದು ಅನಿಸಬಹುದು. ಮನೆಯಲ್ಲಿ ಹೀಗೆ ಎಷ್ಟು ದಿನ ಕಳೆಯಬೇಕು ಅನಿಸಬಹುದು. ಆದರೆ ಲಾಕ್‍ಡೌನ್ ಮುಖ್ಯ. ಇದು ಒಬ್ಬರ ಹೋರಾಟ ಅಲ್ಲ. ಇದಕ್ಕೆ ಸಾಮೂಹಿಕ ಶಕ್ತಿಯ ಅವಶ್ಯಕತೆ ಇದೆ. ಜನತಾ ಜನಾರ್ದನ ಈಶ್ವರನಾ ರೂಪವಾಗಿದೆ. ಹೀಗಾಗಿ ಅಂದಕಾರದ ನಡುವೆ ನಾವು ಪ್ರಕಾಶಮಾನವಾಗಿರಬೇಕು. ನಮ್ಮ ಬಡವರು ಕೊರೊನಾ ನಿರಾಸೆಯಿಂದ ಸಂಕಷ್ಟ ನಡುವೆ ಆಶಾಕಿರಣವಾಗಿದ್ದಾರೆ. ಆದ್ದರಿಂದ ಕೊರೊನಾ ಅನ್ನೋ ಅಂಧಕಾರದಿಂದ ಬೆಳಕಿನತ್ತ ಹೋಗುತ್ತಿದ್ದೇವೆ ಎಂದರು.

    ಏಪ್ರಿಲ್ 5ಕ್ಕೆ ಎಲ್ಲರೂ ಒಟ್ಟಾಗೋಣ. ಏಪ್ರಿಲ್ 5ಕ್ಕೆ ಮಹಾ ಶಕ್ತಿಯ ಜಾಗೃತಿ ಆಗಬೇಕಿದೆ. ಹೀಗಾಗಿ ರಾತ್ರಿ 9 ಗಂಟೆಗೆ ದೀಪ, ಮೇಣದ ಬತ್ತಿ, ಟಾರ್ಚ್, ಮೊಬೈಲ್ ಟಾರ್ಚ್ ಬೆಳಗಿಸಬೇಕು. ಆ ಬೆಳಕಿನಲ್ಲಿ ನಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ನಾವು ಇಬ್ಬರೇ ಇಲ್ಲ, ಎಲ್ಲರೂ ಒಗ್ಗಟಾಗಿದ್ದೇವೆ ಎನ್ನುವ ಸಂಕಲ್ಪ ಮಾಡಬೇಕು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮೋದಿ ಮತ್ತೊಮ್ಮೆ ಜನರಿಗೆ ಕರೆ ಕೊಟ್ಟಿದ್ದಾರೆ.

    ಎಲ್ಲರೂ ಲೈಟ್‍ಆಫ್ ಮಾಡಿ ಬಾಲ್ಕನಿಯಲ್ಲಿ ದೀಪ ಬೆಳಗಿಸಿ. ಕೊರೊನಾ ಓಡಿಸಲು ಸಾಮಾಜಿಕ ಅಂತರವೇ ರಾಮಬಾಣ. ಯಾರೂ ಒಂಟಿಯಲ್ಲ. ನಾವೆಲ್ಲರೂ ಒಂದೇ ಅಂತ ಸಾರೋಣ. 130 ಕೋಟಿ ಜನರ ಮುಖಗಳನ್ನು ನೆನಪಿಸಿಕೊಳ್ಳಿ. ಜೊತೆಗೆ ಗೆಲ್ಲಲು ಆತ್ಮವಿಶ್ವಾಸ ಬೆಳೆಸಿಕೊಳ್ಳಿ, ಉತ್ಸಾಹ ಎನ್ನುವುದು ದೊಡ್ಡ ಬಲ. ನಿಮ್ಮ ಸಹಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ದೇಶವಾಸಿಗಳಿಗೆ ನಮಸ್ಕಾರ ತಿಳಿಸಿದರು.