ಚಿಕ್ಕಬಳ್ಳಾಪುರ: ಕೊರೊನಾದಿಂದ ರಾಜ್ಯ ಸರ್ಕಾರಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಂಬಳ ನೀಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಬಗ್ಗೆ ಸಭೆ ನಡೆಸಿ ಮಾತನಾಡುತ್ತಿದ್ದ ಸಚಿವವರು, ಸಭೆ ನಡುವೆ ಕೊರೊನಾದಿಂದ ಸರ್ಕಾರಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಒಂದು ಕಡೆ ನಾವು ಜನರನ್ನು ಮನೆಯಲ್ಲಿರುವಂತೆ ಮನವಿ ಮಾಡುತ್ತೇವೆ. ಅಧಿಕಾರಿಗಳನ್ನು ಮನೆಯಲ್ಲೇ ಇರುವಂತೆ ಹೇಳುತ್ತೇವೆ. ಮತ್ತೊದೆಡೆ ಹಣಕಾಸಿನ ಸಮಸ್ಯೆ ಇದೆ. ಯಾವುದೇ ಹಳ್ಳಿಗಳಿಗೂ ಹೋದರೂ ದಾನ ಧರ್ಮ ಮಾಡುವವರ ಸಂಖ್ಯೆ ಬಹಳ ಇದೆ. ನಮ್ಮ ಸಂಸ್ಕೃತಿಯೇ ನಮ್ಮನ್ನ ಉಳಿಸುತ್ತಿದೆ. ಅಕ್ಕಿಯನ್ನು ಇಲ್ಲ ಅಂತಿದ್ದವರು ಈಗ ಮನೆಯಲ್ಲಿ ಸ್ಟಾಕ್ ಮಾಡಿಕೊಂಡಿದ್ದಾರೆ. ಬಡವರಿಗೆಲ್ಲರಿಗೂ ಸರ್ಕಾರ ಸ್ಪಂದಿಸುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರು ಕುಡಿಯುವ ನೀರು ಪೂರೈಕೆಯ ಟ್ಯಾಂಕರ್ ಗಳ ಹಣ ಸೇರಿದಂತೆ ಕೆಲ ಯೋಜನೆಗಳ ಹಣ ಇನ್ನೂ ಬಿಡುಗಡೆಯಾಗಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಮಾತನಾಡಿದ ಈಶ್ವರಪ್ಪ, ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆಯಿದೆ. ಹಲವು ಯೋಜನೆಗಳಿಗೆ ಸಕಾಲಕ್ಕೆ ಹಣ ಬಿಡುಗಡೆಯಾಗಿಲ್ಲ. ಸರ್ಕಾರದಲ್ಲಿ ಹಣ ಇದ್ದಿದ್ದರೇ ಒಂದು ವಾರದೊಳಗೆ ಹಣ ಬಿಡುಗಡೆ ಮಾಡಿಕೊಡಿಸುತ್ತಿದೆ. ಆದರೆ ಈಗ ಆ ರೀತಿ ಮಾಡಲು ಆಗುತ್ತಿಲ್ಲ. ಆದರೂ ಕೇಂದ್ರ ಸರ್ಕಾರದಿಂದ ಈ ಬಾರಿ ಒಂದೇ ಕಂತಿನಲ್ಲಿ ಮೊದಲ ಬಾರಿಗೆ 1,861 ಕೋಟಿ ನರೇಗಾ ಹಣ ಬಿಡುಗಡೆಯಾಗಿದೆ. ಹೀಗಾಗಿ ಬಂದ ಹಣವನ್ನು ನಿಮಗೆ ಕೊಡುತ್ತೇವೆ. ಇನ್ನೂ ಇಲ್ಲ ಅಂದಾಗಲೂ ನಿಮಗೆ ಹೇಳಬೇಕಲ್ವಾ ಎಂದು ಹೇಳುತ್ತಿರುವುದಾಗಿ ತಿಳಿಸಿದರು. ನಂತರ ಇದೇ ಮಾತಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆರ್ಥಿಕ ಸಮಸ್ಯೆ ಇರೋದು ನಿಜವಾದ್ರೂ, ಸರ್ಕಾರ ಈ ಸಮಸ್ಯೆಯನ್ನ ಬಗೆಹರಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಲಾಕ್‍ಡೌನ್ ಆಗಿ ಇಂದಿಗೆ ಒಂದು ತಿಂಗಳಾಗಿದೆ. ಕಳೆದ ಮೂವತ್ತು ದಿನಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆ ಆಗುತ್ತಲೇ ಇದೆ. ಸದ್ಯ ಇಪ್ಪತ್ತು ಸಾವಿರ ಗಡಿ ದಾಟಿರುವ ಮಹಾಮಾರಿ ಲಾಕ್‍ಡೌನ್ ಮಾಡಿದಿದ್ದರೇ ದೊಡ್ಡ ಅನಾಹುತವನ್ನೇ ಸೃಷ್ಟಿಸುತ್ತಿತ್ತು. ಈ ನಡುವೆ ಕೊರೊನಾ ನಿರ್ವಹಣೆಯಲ್ಲಿ ಭಾರತ ಬೆಸ್ಟ್ ಎನಿಸಿಕೊಂಡ್ರೆ ಪ್ರಧಾನಿ ಮೋದಿ ನಂಬರ್ ಸ್ಥಾನದಲ್ಲಿ ಕೂತಿದ್ದಾರೆ. ಲಾಕ್‍ಡೌನ್ ಮೂವತ್ತು ದಿನಗಳಲ್ಲಿ ಕೊರೊನಾ ಕಂಟ್ರೋಲ್ ಆಗಿದಿಯಾ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.
ಮಾರ್ಚ್ 24 ರಾತ್ರಿ ಎಂಟು ಗಂಟೆಗೆ ಇಡೀ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರು. 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಿದ್ದ ಪ್ರಧಾನಿ ಮೋದಿ ಎಪ್ರಿಲ್ ಹದಿನಾಲ್ಕರಂದು ಮೇ 3 ವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದರು. ಹೀಗೆ ಎರಡು ಹಂತದಲ್ಲಿ ಲಾಕ್‍ಡೌನ್ ಜಾರಿಯಾಗಿ ಮೂವತ್ತು ದಿನಗಳು ಕಳೆದಿದೆ.
ಕಳೆದೊಂದು ತಿಂಗಳಿಂದ ಜನ ಮನೆಯಲ್ಲೇ ಕೂತಿದ್ದಾರೆ. ಆರ್ಥಿಕ ಸಂಕಷ್ಟ ಏನೇ ಬಂದರು ಇಡೀ ದೇಶ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಟ ನಡೆಸುತ್ತಲೇ ಇದೆ. ವಿದೇಶಗಳಲ್ಲಿ ಕೊರೊನಾ ಅಬ್ಬರಿಸಿ ಪರಿ ನೋಡಿ ಪ್ರಧಾನಿ ಮೋದಿ ದೇಶದಲ್ಲಿ ಆರಂಭದಲ್ಲಿ ಲಾಕ್‍ಡೌನ್ ಗೆ ಕರೆ ನೀಡಿದ್ದರು. ಹಾಗಾದ್ರೆ ಕಳೆದ ಮೂವತ್ತು ದಿನಗಳಲ್ಲಿ ಕೊರೊನಾ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆಯಾ, ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಿದಿಯಾ ಪ್ರಶ್ನೆಗೆ ಉತ್ತರ ಕೆಳಗಿನಂತಿದೆ.
* ಲಾಕ್‍ಡೌನ್ ಘೋಷಣೆಯಾದ ದಿನ ಅಂದರೆ ಮಾರ್ಚ್ 24 ರಂದು ದೇಶದಲ್ಲಿ 519 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು, 10 ಮಂದಿ ಸಾವನ್ನಪ್ಪಿದ್ದರು.
* ಮಾರ್ಚ್ 30ರ ವೇಳೆಗೆ 1251 ಕ್ಕೆ ತಲುಪಿ 32 ಮಂದಿ ಕೊರೊನಾಗೆ ಬಲಿಯಾಗಿದ್ದರು.
* ಎಪ್ರಿಲ್ 6ಕ್ಕೆ ದೇಶದಲ್ಲಿ ಸೋಂಕು ಹರಡುವಿಕೆ ಪ್ರಮಾಣ 20% ಏರಿಕೆಯಾಗಿ 4,281 ಪ್ರಕರಣಗಳು ದಾಖಲಾಗಿ 111 ಮಂದಿ ಅಸುನೀಗಿದ್ದರು.
* ಎಪ್ರಿಲ್ 12 ರಂದು 8,447 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು 273 ಮಂದಿ ಕೊರೊನಾ ಮಾರಿಗೆ ಉಸಿರು ಚೆಲ್ಲಿದ್ದರು.
* ಲಾಕ್‍ಡೌನ್ ವಿಸ್ತರಣೆಯಾದ ಬಳಿಕ ಎಪ್ರಿಲ್ 18ಕ್ಕೆ ದೇಶದಲ್ಲಿ 14,792 ಮಂದಿಯಲ್ಲಿ ಕೊರೊನಾ ಕಾಣಸಿಕೊಂಡಿದಲ್ಲದೇ 488 ಬಲಿ ಪಡೆದುಕೊಂಡಿತ್ತು.
* ಇನ್ನು ನಿನ್ನೆ ಅಂಕಿಅಂಶಗಳನ್ನು ನೋಡಿದ್ರೆ ಒಟ್ಟು 20,471 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 652 ಮಂದಿ ಸಾವನ್ನಪ್ಪಿದ್ದಾರೆ.
In case of causing grievous hurt, imprisonment shall be for a term six months to seven years and with fine of Rs.1,00,000/- to Rs.5,00,000/. In addition, the offender shall also be liable to pay compensation to the victim and twice the fair market value for damage of property pic.twitter.com/f8dt3aXW3L
ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಲಾಕ್‍ಡೌನ್ ಬಳಿಕ ಪ್ರತಿನಿತ್ಯ 8% ರಿಂದ 12% ಸೋಂಕು ಹೆಚ್ಚು ಕಂಡು ಬರ್ತಿದೆ ಮತ್ತು ಸಾವನ್ನಪ್ಪಿವವರ ಪ್ರಮಾಣ 8%- 20% ಎಂದು ಹೇಳಿದೆ. ಈ ನಡುವೆ ಲಾಕ್‍ಡೌನ್ ಗಿಂತ ಮುಂಚೆ ಪ್ರತಿ 3-5 ದಿನಕ್ಕೆ ದುಪ್ಪಟ್ಟಾಗುತ್ತಿದ್ದ ಸೋಂಕಿತರ ಸಂಖ್ಯೆ ಈಗ 8-10 ದಿನ ಏರಿಕೆಯಾಗಿದೆಯಂತೆ. ಹೀಗಾಗಿ ಲಾಕ್‍ಡೌನ್ ಭಾರತದಲ್ಲಿ ಉತ್ತಮವಾಗಿದ್ದು, ಸೋಂಕು ಹತೋಟಿಯಲ್ಲಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಅಲ್ಲದೇ ಲಾಕ್‍ಡೌನ್ ಮುಂದುವರಿಸುವ ಸಲಹೆ ಕೂಡಾ ನೀಡಿದೆ. ಹೀಗಾಗಿ ಮೇ 3 ಬಳಿಕವೂ ಲಾಕ್ ಡೌನ್ ಮುಂದುವರಿಸುವ ಸಾಧ್ಯತೆ ಎನ್ನಲಾಗುತ್ತಿದೆ.
ಕೊರೊನಾ ನಿರ್ವಹಣೆಯಲ್ಲಿ ಮೋದಿ ನಂಬರ್ ಒನ್.!
ಕೊರೊನಾ ವೈರಸ್ ನಿಭಾಯಿಸುತ್ತಿರುವ ದೇಶಗಳ ಪೈಕಿ ಜಾಗತಿಕ ಮಟ್ಟದಲ್ಲಿ ಭಾರತ ಬೆಸ್ಟ್ ಎನಿಸಿಕೊಂಡಿದೆ. ಅಲ್ಲದೇ ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಪ್ರಧಾನಿ ಅತ್ಯುತ್ತಮ ಎಸಿಕೊಂಡಿದ್ದಾರೆ. ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ, ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ಜನವರಿ 1ರಿಂದ ಏ.14 ವರೆಗಿನ ಜಾಗತಿಕ ವರದಿಗಳನ್ನಾಧರಿಸಿ ಈ ಸಮೀಕ್ಷೆ ನಡೆಸಲಾಗಿದ್ದು, ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಮೊದಲನೇ ಸ್ಥಾನ ಲಭಿಸಿದೆ. ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಒಟ್ಟು 68 ಅಂಕಗಳು ಲಭಿಸಿದ್ದು, ಇದು ಇತರ 9 ನಾಯಕರಗಿಂತ ಅತೀ ಹೆಚ್ಚಾಗಿದೆ ಎಂದು ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ ಸ್ಪಷ್ಟಪಡಿಸಿದೆ. ಈ ಅಂಶವನ್ನು ಹಣಕಾಸು ಸಚಿವ ನಿರ್ಮಲ ಸೀತರಾಮನ್ ಟ್ವೀಟ್ ಮಾಡಿದ್ದಾರೆ.
Public opinion based approval ratings of world leaders shown in the charts. @PMOIndia leads #IndiaFightsCorona from the front. Consistent high approval ratings for @narendramodi. Nation has confidence in its leadership in an extraordinary situation due a pandemic. pic.twitter.com/fwrRDsp0o7
ಕೊರೊನಾ ವಿರುದ್ಧ ಹೋರಾಟ ನಿರಂತರವಾಗಿದ್ದು ಇದರ ಫಲ ಪಡೆಯಲು ದೇಶದ ಜನರು ಇನ್ನಷ್ಟು ದಿನ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಮನೆಯಲ್ಲಿದ್ದು ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿ.
ಮುಂಬೈ: ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಮುಂಬೈನಲ್ಲಿ ನೆಲೆಸಿರುವ ಬಾಲಿವುಡ್ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಅವರ ಬಳಿ ಪತಿ ಇರುವಲ್ಲಿಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿಕೊಂಡಿದ್ದಾರೆ.
ರಾಖಿ ಸಾವಂತ್ ಈ ಬಗ್ಗೆ ಮಾತನಾಡಿರುವ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. “ಮೋದಿ ಜೀ ಮುಂಬೈನಲ್ಲಿ ಕೊರೊನಾ ವೈರಸ್ ಕಡಿಮೆಯಾಗುವುದಿಲ್ಲ. ಹೀಗಾಗಿ ಶೀಘ್ರವೇ ನೀವು ಪ್ರೈವೇಟ್ ಜೆಟ್‍ನಲ್ಲೋ ಅಥವಾ ಹೆಲಿಕಾಪ್ಟರ್ ನಲ್ಲೋ ನನ್ನನ್ನು ಮುಂಬೈನಿಂದ ಹೊರಗೆ ಕರೆದುಕೊಂಡು ಹೋಗಿ” ಎಂದು ಮೊದಲಿಗೆ ಮನವಿ ಮಾಡಿಕೊಂಡಿದ್ದಾರೆ.
ನಾನು ಕೆಲವು ತಿಂಗಳ ಹಿಂದಷ್ಟೆ ಮದುವೆಯಾಗಿದ್ದೀನಿ, ಇನ್ನೂ ನನಗೆ ಮಕ್ಕಳು ಸಹ ಆಗಿಲ್ಲ. ಹೀಗಾಗಿ ನನ್ನನ್ನು ನನ್ನ ಗಂಡನ ಬಳಿಗೆ ಕರೆದುಕೊಂಡು ಹೋಗಿ. ನಾನು ನಿಮ್ಮನ್ನು ಬೆಂಬಲಿಸಿದ್ದೇನೆ, ಆದ್ದರಿಂದ ನೀವು ನನಗೆ ಸಹಾಯ ಮಾಡಿ. ಪ್ಲೀಸ್ ಮೋದಿಜೀ ನನ್ನನ್ನು ಪತಿಯ ಬಳಿ ಕರೆದುಕೊಂಡು ಹೋಗಿ” ಎಂದು ರಾಖಿ ಗೋಗರೆದಿದ್ದಾರೆ.
ಅಷ್ಟೇ ಅಲ್ಲದೇ ಮುಂಬೈನಲ್ಲಿ ಇನ್ನೂ ಆರು ತಿಂಗಳು ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವುದಿಲ್ಲ. ಅಪಾರ್ಟ್ ಮೆಂಟ್‍ನಲ್ಲಿ ಇರುವವರು ಮನೆಯಲ್ಲಿಯೇ ಇದ್ದಾರೆ. ಆದರೆ ಈ ಗುಡಿಸಿಲಿನಲ್ಲಿ ವಾಸಿಸುವರು ಮನೆಯಿಂದ ಹೊರಬಂದು ಸುಮ್ಮನೆ ತಿರುಗಾಡುತ್ತಿದ್ದಾರೆ. ಅವರಿಗೆ ಬುದ್ಧಿ ಇಲ್ಲ. ಹೀಗಾಗಿ ಮುಂಬೈನಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಎಂದು ರಾಖಿ ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಮೋದಿ ಅವರೇ ಚಂದ್ರನ ಮೇಲೆ ಮನೆ ಏನಾದರೂ ಕಟ್ಟಿದ್ದರೆ, ಅಲ್ಲಿಗಾದರೂ ನನ್ನನ್ನು ಕಳುಹಿಸಿ ಎಂದು ಬೇಸರದಿಂದ ಕೇಳಿಕೊಂಡಿದ್ದಾರೆ. ನಮ್ಮ ಸಿಎಂ ತುಂಬಾ ತಾಳ್ಮೆ, ಸೌಮ್ಯವಿರುವವರು. ಹೀಗಾಗಿ ಅವರು ಸುಮ್ಮನೆ ಮನೆಯಿಂದ ಹೊರಗೆ ಓಡಾಡುತ್ತಿರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಖಿ ಸಾವಂತ್ 2019ರ ಜುಲೈ 28ರಂದು ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಖಿ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ಯಾವಾಗಲೂ ತನ್ನ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಈವರೆಗೂ ರಾಖಿ ತನ್ನ ಪತಿಯ ಫೋಟೋವನ್ನು ರಿವೀಲ್ ಮಾಡಿಲ್ಲ.
ಕೋಲಾರ: ಲಾಕ್‍ಡೌನ್ ಮುಂದುವರೆಸಿರುವ ಪ್ರಧಾನಿ ಮೋದಿ ಬಡವರಿಗೆ ಯಾವುದೇ ಯೋಜನಗಳನ್ನು ನೀಡಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಿದ್ದರೆ ಗುಡಿಸಿ ಗುಂಡಾತರ ಮಾಡುತ್ತಿದ್ದರು. ಪ್ರಧಾನಿ ಮೋದಿ ಮಾಡುತ್ತಿರುವ ಯೋಜನೆಗಳನ್ನು ಜನ ವೀಕ್ಷಿಸುತ್ತಿದ್ದಾರೆ. ಪ್ರಧಾನಿ ಮೋದಿ ಏನ್ಮಾಡ್ತಿದ್ದಾರೆ ಎಂದು ಇಡೀ ಪ್ರಪಂಚಕ್ಕೆ ಗೊತ್ತಿದೆ ಮೋದಿ ಅವರು ಮಾಡಿರುವ ಯೋಜನೆಗಳು ಎಲ್ಲಾ ಜನಾಂಗದವರು ಮತ್ತು ದೇಶ ಮೆಚ್ಚಿಕೊಳ್ಳುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ ಈ ರೀತಿ ಹೇಳಿಕೆ ನೀಡುವುದು ಸಹಜ, ಇಂತಹ ಪರಿಸ್ಥಿತಿಯಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ. ಪಕ್ಷಾತೀತವಾಗಿ ಬೆಂಬಲ ನೀಡುವಂತಹ ಕೆಲಸ ಆಗಬೇಕು. ಸಿದ್ದರಾಮಯ್ಯನವರು ಇದರಲ್ಲಿ ರಾಜಕೀಯ ಮಾಡಬಾರದು. ಪ್ರಧಾನಿ ಮೋದಿ, ಬಿಎಸ್‍ವೈ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಅವರಿಗೆ ಪಕ್ಷಾತೀತವಾಗಿ ಬೆಂಬಲ ಕೊಡಬೇಕು ಎಂದರು.
ನವದೆಹಲಿ: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಮತ್ತೆ ಮೂರು ವಾರಗಳ ಲಾಕ್‍ಡೌನ್ ಸಮಯವನ್ನು ವಿಸ್ತರಣೆ ಮಾಡಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ವೇಳೆ ಕೊರೊನಾ ವಿರುದ್ಧ ಮೋದಿ ಸಪ್ತ ಸೂತ್ರಗಳನ್ನು ಸೂಚಿಸಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೊನಾ ನಿಯಂತ್ರಿಸಲು ಲಾಕ್‍ಡೌನ್ ಅನಿವಾರ್ಯವಾಗಿದೆ. ಲಾಕ್‍ಡೌನ್ ಪಾಲನೆಯಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮತ್ತಷ್ಟು ನಿಯಂತ್ರಿಸಲು ಮೇ 3ರವರೆಗೆ ಲಾಕ್‍ಡೌನ್ ವಿಸ್ತರಿಸುತ್ತಿದ್ದೇನೆ. ನಾವು ಕೊರೊನಾ ವಿರುದ್ಧ ಹೇಗೆ ಹೋರಾಟ ನಡೆಸಬೇಕು. ಜನರ ಕಷ್ಟಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಬಗ್ಗೆ ರಾಜ್ಯಗಳ ಜೊತೆ ಚರ್ಚೆ ಮಾಡಿದ್ದೇವೆ. ಎಲ್ಲ ರಾಜ್ಯಗಳು ಲಾಕ್‍ಡೌನ್ ವಿಸ್ತರಿಸಲು ಸಲಹೆ ನೀಡಿವೆ. ಕೆಲ ರಾಜ್ಯಗಳು ಈಗಾಗಲೇ ವಿಸ್ತರಣೆ ಮಾಡಿವೆ ಎಂದು ತಿಳಿಸಿದರು.
India to remain in lockdown till May 3, announces PM Modi
ಮೋದಿಯ ಏಳು ಸೂತ್ರಗಳು:
1. ಮನೆಯಲ್ಲಿರುವ ವೃದ್ಧರ ಬಗ್ಗೆ ಕಾಳಜಿ ವಹಿಸಿ.
2 ರೋಗ ಇದ್ದವರಿಗೆ ಜಾಗೃತಿ ವಹಿಸಿ, ಅವರನ್ನು ಕೊರೊನಾದಿಂದ ರಕ್ಷಿಸಿ.
3. ಸಾಮಾಜಿಕ ಅಂತರ ಮತ್ತು ಲಾಕ್‍ಡೌನ್ ನಿಮಯ ಪಾಲಿಸಿ, ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಬಳಸಿ.
4. ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಿ.
5. ಆರೋಗ್ಯ ಸೇತು ಆಪ್ ಡೌನ್‍ಲೌಡ್ ಮಾಡಿಕೊಂಡು ಇತರಿಗೆ ಪ್ರೇರೇಪಿಸಿ.
6. ಬಡ ಕುಟುಂಬಗಳಿಗ ನೆರವು ನೀಡಿ
7. ಕೆಲಸದಿಂದ ಯಾರನ್ನು ತೆಗೆಯಬೇಡಿ
ಈ ರೀತಿ ಮೋದಿ ಕೊರೊನಾ ವಿರುದ್ಧ ಏಳು ಸೂತ್ರಗಳನ್ನು ಸೂಚಿಸಿದ್ದಾರೆ. ಅಲ್ಲದೇ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಜನರನ್ನ ಗೌರವಿಸಬೇಕು ಎಂದು ಕೂಡ ಸೂಚಿಸಿದ್ದಾರೆ.
While making new guidelines, we have kept in mind the interests of the poor and daily wage workers. Harvesting of Rabi crops is also underway. Central Govt and state Govts are working together to ensure that farmers face minimal problems: PM Modi #COVID19pic.twitter.com/Z9Se34DlbH
ಈ ಹಿಂದೆ ಪಾಲಿಸಿದಂತೆ ಮುಂದೆಯೂ ನಿಯಮ ಪಾಲಿಸಬೇಕು. ಹೊಸ ಪ್ರದೇಶದಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳಬೇಕಿದೆ. ಒಂದು ಸಾವು ನಮ್ಮ ಚಿಂತೆಯನ್ನ ಹೆಚ್ಚಿಸುತ್ತದೆ. ಮೊದಲಿಗಿಂತ ಹೆಚ್ಚು ನಿಯಮಗಳು ಹಾಟ್‍ಸ್ಪಾಟ್‍ಗಳಲ್ಲಿ ಹೆಚ್ಚಲಿದೆ. ಹೊಸ ಹಾಟ್‍ಸ್ಪಾಟ್‍ಗಳನ್ನು ಗುರುತಿಸಲಾಗುತ್ತದೆ. ದೇಶಾದ್ಯಂತ ಒಂದು ವಾರ ಡಬ್ಬಲ್ ಲಾಕ್‍ಡೌನ್ ಇರಲಿದೆ ಎಂದರು.
ಏ.20ರವರೆಗೆ ಎಲ್ಲಾ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಕಠಿಣ ನಿಯಮಗಳು ಜಾರಿಯಾಗಲಿದೆ. ಕೊರೊನಾ ಸಂಖ್ಯೆ ಕಡಿಮೆಯಾದರೆ ಏ.20ರ ಬಳಿಕ ಷರತ್ತುಗಳನ್ನು ಒಳಗೊಂಡು ಕೆಲವು ವಿನಾಯಿತಿ ಸಿಗಲಿದೆ ಎಂದು ಹೇಳಿದರು.
Till 20th April, all districts, localities, states will be closely monitored, as to how strictly they are implementing norms. States which will not let hotspots increase, they could be allowed to let some important activities resume, but with certain conditions: PM Modi pic.twitter.com/tL2YOBxe7u
ಆರಂಭದಲ್ಲಿ ಲಾಕ್‍ಡೌನ್‍ಗೆ ಜನ ನೀಡಿದ ಸಹಕಾರವನ್ನು ಪ್ರಸ್ತಾಪಿಸಿ, ಕೊರೊನಾ ವಿರುದ್ಧ ಭಾರತ ಹೋರಾಟ ಶಕ್ತಿಯುತವಾಗಿ ಮುಂದುವರಿದಿದೆ. ಜನರ ತ್ಯಾಗದಿಂದ ದೊಡ್ಡ ಅನಾಹುತಗಳು ತಪ್ಪಿ ನಿಯಂತ್ರಣದಲ್ಲಿದೆ. ಕೆಲವರಿಗೆ ಆಹಾರದ ಸಮಸ್ಯೆಯಾಗಿದೆ, ಓಡಾಟದ ತೊಂದರೆಯಾಗಿದೆ. ನಿಮಗೆ ಕಷ್ಟವಾದ್ರೂ ಅದನ್ನು ಸಹಿಸಿಕೊಂಡಿದ್ದೀರಿ. ದೇಶದ ಸಿಪಾಯಿ ಹಾಗೇ ಕರ್ತವ್ಯ ನಿಭಾಯಿಸುತ್ತಿದ್ದೀರಿ ನಿಮಗೆ ಧನ್ಯವಾದಗಳು ಎಂದು ಹೇಳಿದರು.
ಸಂವಿಧಾನದ ಪ್ರಸ್ತಾವನೆಯಲ್ಲಿ ‘ವೀ ದಿ ಪೀಪಲ್ ಆಫ್ ಇಂಡಿಯಾ’ ಎಂದು ಬರೆಯಲಾಗಿದೆ. ಇದು ಇದೇ ಎಂದು ನಾನು ಭಾವಿಸಿದ್ದೇನೆ. ನಮ್ಮ ಸಾಮೂಹಿಕ ಹೋರಾಟವೇ ಅಂಬೇಡ್ಕರ್ ಅವರಿಗೆ ದೇಶದ ಜನರು ನೀಡುವ ನಮನ ಎಂದರು.
#COVID19 testing is being done in over 220 labs. According to world's experience of tackling COVID-19, 1500-1600 beds are needed when cases reach 10,000. We have over 1 lakh beds in India & over 600 hospitals for treating COVID patients. We're expanding these facilities: PM Modi pic.twitter.com/4kdVQXjWGb
ದೇಶದಲ್ಲಿ ಹಲವು ಹಬ್ಬ ಹರಿದಿನಗಳಿಗೆ. ಸಾಕಷ್ಟು ಧಾರ್ಮಿಕ ಉತ್ಸವಗಳು ನಡೆಯುತ್ತಿದ್ದವು. ಅನೇಕ ರಾಜ್ಯದಲ್ಲಿ ಹೊಸ ವರ್ಷ ಆರಂಭವಾಗಬೇಕಿದೆ. ಇದರ ನಡುವೆ ಜನರು ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ಸರಳವಾಗಿ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಇದು ಶ್ಲಾಘನೀಯ ಮತ್ತು ಪ್ರಶಂಸನೀಯ ಕೊರೊನಾ ಪರಿಣಾಮ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ಮೋದಿ ಹೇಳಿದರು.
ನವದೆಹಲಿ: ಮೊದಲ ಹಂತದ ಲಾಕ್‍ಡೌನ್ ಇಂದು ಮಧ್ಯರಾತ್ರಿಗೆ ಅಂತ್ಯವಾಗಲಿದ್ದು, 21 ದಿನಗಳ ಗೃಹಬಂಧನ ಅಂತ್ಯವಾಗಲಿದೆ. ಇಂದು ಬೆಳಗ್ಗೆ 10 ಗಂಟೆಗೆ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದು, ದೇಶದ ಗಂಭೀರ ಪರಿಸ್ಥಿತಿಯನ್ನು ಜನರಿಗೆ ವಿವರಿಸಲಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ನಡೆದ ಎಲ್ಲ ರಾಜ್ಯಗಳ ಸಿಎಂಗಳ ಸಭೆಯಲ್ಲಿ ಹಲವು ವಿನಾಯಿತಿಗಳೊಂದಿಗೆ ಏಪ್ರಿಲ್ 30 ವರೆಗೂ ಲಾಕ್‍ಡೌನ್ ವಿಸ್ತರಿಸುವ ಒಮ್ಮತದ ನಿರ್ಣಯಕ್ಕೆ ಬರಲಾಗಿತ್ತು. ಈ ನಿರ್ಣಯವನ್ನು ಮೊದಲ ಹಂತದ ಲಾಕ್‍ಡೌನ್ ಕೊನೆಯ ದಿನವಾದ ಇಂದು ಪ್ರಧಾನಿ ಮೋದಿ ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಬಾರಿಯ ಲಾಕ್‍ಡೌನ್ ವಿಭಿನ್ನವಾಗಿರಲಿದೆ ಎಂದು ಸಿಎಂ ಯಡಿಯೂರಪ್ಪ ಸುಳಿವು ನೀಡಿದ್ದರು. ಹೀಗಾಗಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಒಂದು ಲಾಕ್‍ಡೌನ್ ನಿಮಯಗಳು ಕಠಿಣವಾಗಲಿದ್ದು, ಮತ್ತೊಂದು ಕಡೆ ಸಂಕಷ್ಟದಲ್ಲಿರುವ ಜನರಿಗೆ ಕೆಲ ವಿನಾಯಿತಿಗಳನ್ನು ಸರ್ಕಾರ ನೀಡುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪರಿಸ್ಥಿತಿ ಹೇಗಿದೆ ಮತ್ತು ಲಾಕ್‍ಡೌನ್ ವಿಸ್ತರಿಸುವ ನಿರ್ಧಾರ ಯಾಕೆ ಎನ್ನುವುದನ್ನ ಹೇಳಿ ವಿನಾಯಿಗಳನ್ನು ಘೋಷಿಸಬಹುದು. ಒಂದು ವೇಳೆ ಕೇವಲ ಲಾಕ್‍ಡೌನ್ ವಿಸ್ತರಣೆ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಮಾತಾನಾಡಿದರೆ ಭಾಷಣದ ಬಳಿಕ ಕೇಂದ್ರ ಗೃಹ ಇಲಾಖೆ ವಿನಾಯಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದ್ದು, ಇಡೀ ದೇಶವನ್ನು ಕೇಂದ್ರ ಸರ್ಕಾರ ಮೂರು ವಿಭಾಗಗಳಾಗಿ ವಿಂಗಡಿಸುವ ಸಾಧ್ಯತೆ ಇದೆ. ರೆಡ್, ಆರೇಂಜ್ ಮತ್ತು ಗ್ರೀನ್ ಝೋನ್‍ಗಳನ್ನು ಮಾಡಲಿದ್ದು, ಈ ಝೋನ್‍ಗಳನ್ನು ಆಧರಿಸಿ ಕೇಂದ್ರ ಗೃಹ ಇಲಾಖೆ ನಿಯಮಗಳನ್ನು ರೂಪಿಸಲಿದೆ.
ರೆಡ್ ಝೋನ್:
* ರೆಡ್ ಝೋನ್‍ನಲ್ಲಿ ಸರ್ಕಾರ ಯಾವ ವಿನಾಯಿತಿಗಳು ಸಿಗುವುದಿಲ್ಲ ಎನ್ನಲಾಗುತ್ತಿದೆ.
* ಕೇಂದ್ರ ಸರ್ಕಾರವೇ ಹಾಟ್‍ಸ್ಪಾಟ್ ಪ್ರದೇಶಗಳನ್ನು ಸೀಲ್ ಮಾಡಲು ಸೂಚನೆ ನೀಡಬಹುದು.
* ಮನೆಯಿಂದ ಯಾರೂ ಹೊರಬಾರದಂತೆ ಕಠಿಣ ಕ್ರಮಗಳನ್ನು ಜಾರಿಗೆ ತರಬಹುದು.
* ಉತ್ತರ ಪ್ರದೇಶ ದೆಹಲಿ ಮಾದರಿಯನ್ನು ಇಡೀ ದೇಶಕ್ಕೆ ಅನ್ವಯಿಸಬಹುದು.
* ಸರ್ಕಾರದ ವತಿಯಿಂದಲೇ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಬಹುದು.
* ಈ ಪ್ರದೇಶದಲ್ಲಿ ಮುಂದಿನ ಹದಿನಾರು ದಿನ ಹೈ ಅಲರ್ಟ್ ಘೋಷಣೆ ಮಾಡಬಹುದು
ಆರೇಂಜ್ ಝೋನ್:
* ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ಪ್ರದೇಶದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬಹುದು.
* ಉಳಿದ ಪ್ರದೇಶದಲ್ಲಿ ಲಾಕ್‍ಡೌನ್ ಅನ್ವಯಿಸಲಿದ್ದು, ನಿಯಮಗಳ ಸಡಿಲಿಕೆ ಮಾಡಬಹುದು.
* ಸಣ್ಣ ಪ್ರಮಾಣದಲ್ಲಿ ಅಂಗಡಿಗಳನ್ನು ತೆರಯಲು ಆರ್ಥಿಕ ವಹಿವಾಟು ನಡೆಸಲು ಅವಕಾಶ ನೀಡಬಹುದು.
* ಕೃಷಿ, ಸಣ್ಣ ಕಾರ್ಖಾನೆಗಳನ್ನು ಅಗತ್ಯ ಎಚ್ಚರಿಕೆಯೊಂದಿಗೆ ನಡೆಸಲು ಸೂಚನೆ ನೀಡಬಹುದು.
* ಜನ ಪ್ರಯಾಣ ನಡೆಸುವುದನ್ನು ತಡೆಯಲು ಸಾರಿಗೆ ಸಂಚಾರ ನಿಷೇಧ ಮುಂದುವರಿಸಬಹುದು.
* ನಿರ್ದಿಷ್ಟ ಪ್ರದೇಶದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು.
ಗ್ರೀನ್ ಝೋನ್:
* ಸೋಂಕು ಕಾಣಿಸಿಕೊಳ್ಳದ ಈ ಜಿಲ್ಲೆಗಳಲ್ಲಿ ಹೆಚ್ಚು ವಿನಾಯಿತಿ ಸಿಗುವ ಸಾಧ್ಯತೆ ಇದೆ.
* ಅಂತರ್ ಜಿಲ್ಲೆ ಸಂಚಾರ ನಿಷೇಧಿಸಿ ಆರ್ಥಿಕ ವಹಿವಾಟು ಆರಂಭಿಸಲು ಅವಕಾಶ ನೀಡಬಹುದು.
* ಅಂಗಡಿಗಳು, ಸಣ್ಣ ಪುಟ್ಟ ವ್ಯವಹಾರ ಹೋಟೆಲ್ ಉದ್ಯಮಗಳ (ಪಾರ್ಸಲ್‍ಗೆ ಮಾತ್ರ) ಆರಂಭಿಸಬಹುದು.
* ಜನರು ಮುನ್ನೆಚ್ಚರಿಕೆ ಕ್ರಮ ವಹಿಸಿ ನಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಡಬಹುದು.
* ಗ್ರಾಮೀಣ ಪ್ರದೇಶದಲ್ಲಿ ಕೃಷಿ, ನರೇಗಾ ಮೂಲಕ ಕೆಲಸ ಆರಂಭಿಸಲು ಅವಕಾಶ ನೀಡಬಹುದು.
* ಈ ವಲಯಗಳಿಗೆ ಕಾರ್ಮಿಕರನ್ನು ಕರೆ ತರಲು ಸಣ್ಣ ಪ್ರಮಾಣದಲ್ಲಿ ಸಾರಿಗೆ ಆರಂಭಿಸಲು ಅನುವು ಮಾಡಬಹುದು.
* ಮಹಿಳಾ ಸ್ವ ಸಹಾಯ ಗುಂಪುಗಳ ಕಾರ್ಯಗಳನ್ನು ಪುನಾರಂಭ ಮಾಡಲು ಅವಕಾಶ ನೀಡಬಹುದು.
* ಕೊರೊನಾ ಸೋಂಕು ಕಾಣದ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸೇಲ್ಪ್ ರಿಸ್ಕ್ ಮೇಲೆ ಕೈಗಾರಿಕೆ ಆರಂಭಿಸಲು ಅನುವು ನೀಡಬಹುದು.
* ಪ್ರಮುಖವಾಗಿ ರೊಟೇಷನ್‍ನಲ್ಲಿ ಸರ್ಕಾರಿ ಕಚೇರಿಗಳನ್ನು ತೆರದು ಸೇವೆ ನೀಡಲು ಸೂಚಿಸುವ ಸಾಧ್ಯತೆ ಇದೆ.
ಈ ನಡುವೆ ಕೇಂದ್ರ ಕೈಗಾರಿಕಾ ಉದ್ಯಮಗಳ ಸಚಿವಾಲಯ ಕೆಲ ಕೈಗಾರಿಗೆಗಳನ್ನು ಆರಂಭಿಸಲು ಒಪ್ಪಿಗೆ ಸೂಚಿಸಬಹುದು ಎನ್ನಲಾಗಿದ್ದು, ಯಾವ ಕೈಗಾರಿಗೆಗಳಿಗೆ ಅವಕಾಶ ಸಿಗಬಹುದು ಅಂತ ನೋಡುವುದಾದರೆ,
– ಹೆವಿ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಉಪಕರಣಗಳು
– ಆಟೋ ಮೊಬೈಲ್, ಉಕ್ಕು ಕಾರ್ಖಾನೆಗಳು
– ವಿದ್ಯುತ್ ಚಾಲಿತ ಮಗ್ಗಗಳು, ರಕ್ಷಣೋತ್ಪನ ತಯಾರಿಕಾ ಘಟಕಗಳು
– ಸಿಮೆಂಟ್, ರಬ್ಬರ್, ಕೃಷಿ ಆಧಾರಿತ ಕೈಗಾರಿಕೆಗಳು, ರಾಸಾಯನಿಕ ಮತ್ತು ರಸಗೊಬ್ಬರ
– ಕಟ್ಟಡ ನಿರ್ಮಾಣ ಕಾಮಗಾರಿ, ಬೀದಿಬದಿ ವ್ಯಾಪಾರಿಗಳು, ರಿಪೇರಿ ಅಂಗಡಿಗಳು
– ಪೇಂಟ್ಸ್, ಆಹಾರ ಮತ್ತು ಪಾನೀಯ ಉತ್ಪನ್ನ ತಯಾರಿಕ ಘಟಕಗಳು
– ಪ್ಲಾಸ್ಟಿಕ್ ತಯಾರಿಕಾ ಘಟಕಗಳು
– ಆಭರಣ ತಯಾರಿಕಾ ಘಟಕಗಳು ಅವಕಾಶ ನೀಡಬಹುದು
– ಅಲ್ಲದೇ ಒಟ್ಟು ನೌಕರರಲ್ಲಿ ಶೇಕಡಾ 20-25ರಷ್ಟು ನೌಕರರಿಗೆ ಮಾತ್ರ ಪಾಳಿಯಲ್ಲಿ ಕೆಲಸಕ್ಕೆ ಅವಕಾಶ
– ನೌಕರರನ್ನು ಕಾರ್ಖಾನೆಗಳಿಗೆ ಕರೆ ತರಲು ವಿಶೇಷ ಬಸ್‍ಗಳು, ರೈಲು ಓಡಾಟದ ವ್ಯವಸ್ಥೆ
– ಜಿಲ್ಲೆಗಳೊಳಗೆ, ಜಿಲ್ಲೆಗಳ ನಡುವೆ, ರಾಜ್ಯದೊಳಗೆ, ರಾಜ್ಯಗಳ ನಡುವೆ ಸಾರಿಗೆ ಸಂಪರ್ಕಕ್ಕೆ ಅವಕಾಶ ಕೊಡಬಹುದು
ಹೀಗೆ ಸಾಕಷ್ಟು ನಿರೀಕ್ಷೆಗಳು ಮೂಡಿದ್ದು ಪ್ರಧಾನಿ ಮೋದಿ ಭಾಷಣದಲ್ಲಿ ಏನು ಹೇಳಬಹುದು ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ.
ಮಂಗಳೂರು: ಕೊರೊನಾ ಮಹಾಮಾರಿ ಹಿನ್ನೆಲೆ ಇನ್ನೂ 15 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸಲಾಗಿದ್ದು, ಆದರೆ ಕೆಲವು ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ. ಈ ಪಟ್ಟಿಯಲ್ಲಿ ಮೀನುಗಾರಿಕೆ ಸಹ ಇದ್ದು, ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಇಂದಿನಿಂದ ನಾಡದೋಣಿ, ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಮೀನುಗಾರಿಕೆ ಆರಂಭವಾಗಲಿದೆ. ಜನಸಂದಣಿ ಇಲ್ಲದ ಪ್ರದೇಶದಲ್ಲಿ ಮೀನು ಇಳಿಸಲು ವ್ಯವಸ್ಥೆ ಮಾಡಲಾಗಿದೆ. ಮಾರುಕಟ್ಟೆಗೆ ಸಾಗಿಸದೆ ಮೀನುಗಾರ ಮಹಿಳೆಯರ ಮೂಲಕ ಮನೆ ಬಾಗಿಲಿಗೆ ಮೀನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಬಂದರು ಹಾಗೂ ಧಕ್ಕೆಗಳಲ್ಲಿ ಮೀನು ಇಳಿಸುವುದಕ್ಕೆ ನಿಷೇಧ ಹೇರಲಾಗಿದ್ದು, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸುಮಾರು 14 ಸಾವಿರ ನಾಡದೋಣಿ, ಸಾಂಪ್ರದಾಯಿಕ ದೋಣಿಗಳಿವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮೀನು ಮಾರಾಟ ಮಾಡುವಂತೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದ್ದಾರೆ.
ನವದೆಹಲಿ: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ 21 ದಿನದ ಲಾಕ್‍ಡೌನ್ ಕೂಡ ಮುಗಿಯುತ್ತಿದೆ. ಹೀಗಾಗಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಭೆ ಮಾಡುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ಬೆಳಗ್ಗೆ 11 ಗಂಟೆಯಿಂದ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ಶುರು ಮಾಡಿದ್ದಾರೆ. ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಸಭೆ ನಡೆಸುತ್ತಿದ್ದಾರೆ. ಈ ಮೂಲಕ ಮೋದಿ ಅವರು ಕೊರೊನಾ ಹರಡದಂತೆ ಮಾಸ್ಕ್ ಧರಿಸಬೇಕು ಎಂಬುದನ್ನು ಸಾರ್ವಜನಿಕರಿಗೆ ತಿಳಿಸುತ್ತಿದ್ದಾರೆ.
ಪ್ರತಿಯೊಬ್ಬ ಮುಖ್ಯಮಂತ್ರಿಯ ಜೊತೆ ಕೊರೊನಾ ಬಗ್ಗೆ ಐದು ನಿಮಿಷ ಪ್ರತ್ಯೇಕವಾಗಿ ಚರ್ಚೆ ಮಾಡುತ್ತಿದ್ದಾರೆ. ಇಂದಿನ ಸಭೆಯ ಬಳಿಕ ಲಾಕ್‍ಡೌನ್ ವಿಸ್ತರಣೆ ಅಧಿಕೃತ ಘೋಷಣೆ ಆಗಬಹದು ಎನ್ನಲಾಗುತ್ತಿದೆ. ಈಗಾಗಲೇ ಒಡಿಶಾ ಮತ್ತು ಪಂಜಾಬ್ ರಾಜ್ಯದ ಸಿಎಂಗಳು ಎಪ್ರಿಲ್ ಅಂತ್ಯದವರೆಗೂ ಲಾಕ್‍ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ.
ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಲಾಕ್‍ಡೌನ್ ತೆರವು ಮಾಡಬೇಕಾ ಮುಂದುವರಿಸಬೇಕಾ ಅನ್ನೊ ಗೊಂದಲದಲ್ಲಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ಸಭೆ ಬಳಿಕ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಕುತೂಹಲ.
ನವದೆಹಲಿ: ಕೊರೊನಾ ಸಂಕಷ್ಟಕ್ಕೆ ಸಿಲುಕಿ ದೇಶ ಬಡವ ಆಗಿದೆ. ಲಾಕ್ ಡೌನ್ ಇರುತ್ತೊ ತೆರವಾಗತ್ತೊ ಅನ್ನೊ ಗೊಂದಲದಲ್ಲಿ ಜನರಿದ್ದಾರೆ. ಇದೇ ವಿಚಾರ ಸಂಬಂಧ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಲಿದ್ದು ಇಂದಿನ ಸಭೆ ನಿರ್ಣಾಯಕವಾಗಿದ್ದು, ಈ ನಡುವೆ ಲಾಕ್ ಡೌನ್ ವಿಸ್ತರಣೆ ಅಧಿಕೃತ ಘೋಷಣೆ ನಾಳೆ ಆಗಬಹದು ಎನ್ನಲಾಗುತ್ತಿದೆ.
ಕಳೆದೆರಡು ದಿನಗಳಿಂದ ದೇಶದಲ್ಲಿ ಕೊರೊನಾಗಿಂತ ಹೆಚ್ಚು ಚರ್ಚೆ ಆಗ್ತಿರೋದು ಲಾಕ್ ಡೌನ್ ಬಗ್ಗೆ. ಇನ್ನೇನು ಜಸ್ಟ್ ನಾಲ್ಕು ದಿನಗಳ ಕಳೆದು ಬಿಟ್ರೆ ಹೋಂ ಕ್ವಾರಂಟೈನ್ ಅವಧಿ ಮುಗಿದೆ ಹೋಯ್ತು ಅಂತಾ ಎಲ್ಲರೂ ಯೋಚಿಸಿದ್ರು. ಆದರೆ ಅದು ಸುಳ್ಳಾಗುವ ಎಲ್ಲ ಲಕ್ಷಣಗಳು ಕಂಡು ಬರ್ತಿದೆ.
ಲಾಕ್ ಡೌನ್ ವಿಸ್ತರಣೆ ಬಗ್ಗೆ ಚರ್ಚೆ ಗಳು ಆರಂಭವಾಗಿದ್ದು ಇದೇ ವಿಚಾರ ಸಂಬಂಧ ಇಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭವಾಗಲಿದ್ದು ಎಲ್ಲ ಸಿಎಂಗಳು ಪಿಎಂ ಜೊತೆ ಸೇರಿ ಲಾಕ್ ಡೌನ್ ವಿಸ್ತರಣೆ ಭವಿಷ್ಯ ನಿರ್ಧರಿಸಲಿದ್ದಾರೆ.
ಈ ನಡುವೆ ಒಡಿಶಾ ಮತ್ತು ಪಂಜಾಬ್ ರಾಜ್ಯದ ಸಿಎಂ ಗಳು ಎಪ್ರಿಲ್ ಅಂತ್ಯದವರೆಗೂ ಲಾಕ್‍ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ. ಇದಲ್ಲದೆ ಹಲವು ರಾಜ್ಯಗಳು ಲಾಕ್‍ಡೌನ್ ಸಂಬಂಧಿಸಿದಂತೆ ಈ ರೀತಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದೆ.
* ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಆರ್ಥಿಕತೆಯನ್ನು ಆಮೇಲೆ ಪರಿಶೀಲನೆ ಮಾಡಬಹುದು. ಜೀವಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಲಾಕ್ ಡೌನ್ ಮುಂದುವರಿಸುವುದು ಸೂಕ್ತ ಎಂದಿದ್ದರು
* ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಲಾಕ್‍ಡೌನ್ ವಿಸ್ತರಣೆ ಅವಶ್ಯಕ. ಜನರು ಸರ್ಕಾರದ ಜೊತೆ ಹೆಜ್ಜೆ ಹಾಕಬೇಕು ಅಂತಾ ಅಭಿಪ್ರಾಯಪಟ್ಟಿದ್ದಾರೆ.
* ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೊರೊನಾ ವಿರುದ್ಧ ಮೂರು ಹೆಜ್ಜೆ ಮುಂದೆ ಇಡಬೇಕಿದ್ದು, ಲಾಕ್‍ಡೌನ್ ಮತ್ತಷ್ಟು ದಿನ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
* ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಲಾಕ್‍ಡೌನ್ ಮುಂದುವರಿಸುವ ಅಧಿಕಾರ ರಾಜ್ಯಗಳಿಗೆ ಕೇಂದ್ರ ಬಿಟ್ಟುಕೊಡಬೇಕು ಪರಿಸ್ಥಿತಿ ಮೇಲೆ ರಾಜ್ಯಗಳ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ
* ಈ ನಡುವೆ ಛತ್ತೀಸಗಢ, ಜಾರ್ಖಂಡ್ ರಾಜ್ಯಗಳು ಲಾಕ್‍ಡೌನ್ ವಿಸ್ತರಣೆ ಬಹು ಪರಾಕ್ ಎಂದಿವೆ.
ಇದೇ ಅಭಿಪ್ರಾಯ ಬಹುತೇಕ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಲಾಕ್‍ಡೌನ್ ತೆರವು ಮಾಡಬೇಕಾ ಮುಂದುವರಿಸಬೇಕಾ ಅನ್ನೊ ಗೊಂದಲದಲ್ಲಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ಸಭೆ ಬಳಿಕ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಕುತೂಹಲ.
ಮೋದಿಗೆ ಟಾಸ್ಕ್ ಫೊರ್ಸ್ ವರದಿ: ಈ ಎಲ್ಲ ಬೆಳವಣಿಗೆ ನಡುವೆ ಆರೋಗ್ಯ, ಹಣಕಾಸು, ಗೃಹ ಇಲಾಖೆಗಳ, ಸೋಶಿಯಲ್ ಇಂಪ್ಯಾಕ್ಟ್ ಟಾಸ್ಕ್ ಫೋರ್ಸ್ ಗಳಿಂದ ಪ್ರಧಾನಿ ಕಚೇರಿ ವರದಿಗಳನ್ನು ತರಸಿಕೊಂಡಿದೆ. ವರದಿಗಳನ್ನು ಆಧರಿಸಿ ಪಿಎಂಗೆ ವಿವರಣೆ ನಡೆಯಲಿದೆ. ಈ ಟಾಸ್ಕ್ ಫೋರ್ಸ್ ಗಳು ನೀಡುವ ಶಿಫಾರಸ್ಸನ್ನು ಮೋದಿ ಗಂಭೀರವಾಗಿ ಪರಿಗಣಿಸಿಲಿದ್ದಾರೆ.
ಮೋದಿ ಭಾಷಣ? ಇಷ್ಟೆಲ್ಲ ಬೆಳವಣಿಗೆ ಆಗ್ತಿದ್ದಂತೆ ದೆಹಲಿ ವಲಯದಿಂದ ಮತ್ತೊಂದು ಮಹತ್ವದ ಮಾಹಿತಿ ಹೊರ ಬಂದಿದೆ. ಭಾನುವಾರ ರಾತ್ರಿ ಎಂಟು ಗಂಟೆಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಈ ವೇಳೆ ಎಲ್ಲ ವರದಿಗಳನ್ನು ಆಧರಿಸಿ ಲಾಕ್‍ಡೌನ್ ಮುಂದುವರಿಸಬೇಕಾ? ಸೀಲ್‍ಡೌನ್ ಮಾಡಬೇಕಾ ಅಥಾವ ರಾಜ್ಯಗಳಿಗೆ ಲಾಕ್ ಡೌನ್ ಮುಂದುವರಿಸುವ ಅವಕಾಶ ನೀಡ್ತಾರಾ ಅನ್ನೊದರ ಬಗ್ಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದು. ಒಟ್ಟಾರೆ ನಾಳೆ 130 ಕೋಟಿ ಜನರಿಗೆ ಮಹತ್ವದ ದಿನ ಎಂದರೆ ತಪ್ಪಾಗಲಾರದು.
ನವದೆಹಲಿ: ಲಾಕ್‍ಡೌನ್, ಸೀಲ್ಡ್ ಔಟ್, ಬಂದ್ ಮುಂದುವರಿಯುತ್ತಾ? ಎಲ್ಲವೂ ತೆರವಾಗಿ ಆಗಿ ಮತ್ತೆ ಸ್ವತಂತ್ರವಾಗಿ ಓಡಾಡಬಹುದಾ? ಕೇಂದ್ರ ಸರ್ಕಾರದ ನಿಲುವೇನು? ಹೀಗೆ ಭಾರತ್ ಲಾಕ್ ಡೌನ್ ಸಂಬಂಧ ಕಳೆದರಡು ದಿನಗಳಿಂದ ನೂರೆಂಟು ಪ್ರಶ್ನೆಗಳು ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಇಂದು ನಿರ್ಣಾಯಕ ದಿನವಾಗುವ ಸಾಧ್ಯತೆ ಇದೆ.
ಈ ಮನೆಯಲ್ಲಿ ಕೂತು ಕೂತು ಸಾಕಾಗಿದೆ ಇನ್ನೇನು ಲಾಕ್ ಡೌನ್ ಮುಗಿತು ಅಂದುಕೊಂಡವರಿಗೆ ಬಿಗ್ ಶಾಕ್ ಶೀಘ್ರದಲ್ಲಿ ಕಾದಿದೆ. ಹೌದು ಲಾಕ್ ಡೌನ್ ವಿಸ್ತರಣೆ ಸಂಬಂಧ ಇಂದು ಮಹತ್ವದ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಲಾಕ್ ಡೌನ್ ಮುಂದುವರಿಸುವಂತೆ ಎಂಟಕ್ಕೂ ಹೆಚ್ಚು ರಾಜ್ಯಗಳು ಮನವಿ ಮಾಡಿಕೊಂಡಿದೆ. ಒಡಿಶಾ ಒಂದು ಹಂತಕ್ಕೆ ಮುಂದೆ ಹೋಗಿ ಎಪ್ರೀಲ್ 30 ವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈಗ ದೇಶದಲ್ಲಿ ಲಾಕ್ ಡೌನ್ ಮುಂದುವರಿಸಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಗೊಂದಲಿದ್ದು, ಈ ಸಂಬಂಧ ವರದಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಕೇಳಿತ್ತು.
ಎಲ್ಲ ರಾಜ್ಯ ಸರ್ಕಾರಗಳು ತಮ್ಮ ಅಭಿಪ್ರಾಯದ ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಸಾಧ್ಯತೆ ಇದೆ. ಈ ವರದಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪರಿಶೀಲನೆ ನಡೆಸಲಿದ್ದಾರೆ. ಇಂದು ಬಹುತೇಕ ಎಲ್ಲ ರಾಜ್ಯಗಳು ತಮ್ಮ ವರದಿ ನೀಡಲಿದ್ದು ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಕೆಲವು ರಾಜ್ಯಗಳು ತಮ್ಮ ಅಭಿಪ್ರಾಯವನ್ನು ನೇರವಾಗಿ ಪ್ರಧಾನಿ ಮುಂದಿಡಲಿವೆ.
ಈ ಎಲ್ಲ ಅಭಿಪ್ರಾಯಗಳನ್ನು ಪಡೆದುಕೊಳ್ಳಲಿರುವ ಪ್ರಧಾನಿ ಮೋದಿ ಎಪ್ರಿಲ್ 14 ರ ಬಳಿಕ ಲಾಕ್ ಡೌನ್ ಮುಂದುವರಿಸಬೇಕಾ ಅಥವಾ ಹಂತ ಹಂತವಾಗಿ ತೆರವು ಮಾಡಬೇಕಾ ಅನ್ನೋದು ನಿರ್ಧಾರ ಮಾಡಲಿದ್ದು, ಇಂದು ರಾಜ್ಯಗಳು ನೀಡುವ ವರದಿ ನಿರ್ಣಾಯಕ ಪಾತ್ರ ವಹಿಸಲಿದೆ.