Tag: prime minister modi

  • ಏಪ್ರಿಲ್ 11 ರಿಂದ 14ರವರೆಗೆ ದೇಶದಲ್ಲಿ ಲಸಿಕೆ ಉತ್ಸವ: ಪ್ರಧಾನಿ ಮೋದಿ ಕರೆ

    ಏಪ್ರಿಲ್ 11 ರಿಂದ 14ರವರೆಗೆ ದೇಶದಲ್ಲಿ ಲಸಿಕೆ ಉತ್ಸವ: ಪ್ರಧಾನಿ ಮೋದಿ ಕರೆ

    – ಸ್ಯಾಂಪಲ್ ಸಂಗ್ರಹ ವೇಳೆಯಲ್ಲಿನ ಎಡವಟ್ಟಿಗೆ ಬೇಸರ
    – ಲಸಿಕೆಯ ವ್ಯರ್ಥವನ್ನ ತಡೆಯೋಣ

    ನವದೆಹಲಿ: ಏಪ್ರಿಲ್ 11 ರಿಂದ ಏಪ್ರಿಲ್ 14ರವರೆಗೆ ದೇಶದಾದ್ಯಂತ ಕೊರೊನಾ ಲಸಿಕೆ ಉತ್ಸವ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

    ರಾಜ್ಯದ ಮುಖ್ಯಮಂತ್ರಿಗಳ ಜೊತೆಗಿನ ಸಭೆ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ವೇಸ್ಟೇಜ್ ಸಹ ನಿಯಂತ್ರಿಸಬೇಕಿದೆ. ಇದರ ಜೊತೆ ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕಿದೆ. ಏಪ್ರಿಲ್ 11ರಂದು ಜ್ಯೋತಿಬಾಪುಲೆ ಅವರ ಜನ್ಮದಿನ. ಈ ದಿನದ ವಿಶೇಷವಾಗಿ ಏಪ್ರಿಲ್ 11 ರಿಂದ 14 ರವರೆಗೆ ಲಸಿಕೆ ಉತ್ಸವ ನಡೆಯಬೇಕು. ಈ ಸಮಯದಲ್ಲಿ ಅಗತ್ಯವಿರುವ ಜನರಿಗೆ ಲಸಿಕೆ ನೀಡುವ ಅಭಿಯಾನ ನಡೆಯಬೇಕಿದೆ. ಲಸಿಕೆ ನೀಡುವ ಕಾರ್ಯ ಚುರುಕುಗೊಳ್ಳಲಿದೆ. ಕಳೆದ ವರ್ಷವೂ ಒಂದು ಹಂತದವರೆಗೆ ಏರಿಕೆ ಕಂಡು ಇಳಿದಿದೆ. ಸದ್ಯ ಏರಿಕೆ ಪ್ರಮಾಣ ಇಳಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಟಫ್ ರೂಲ್ಸ್ ಅನಿವಾರ್ಯ: ಇನ್ಮುಂದೆ ನೈಟ್ ಕರ್ಫ್ಯೂ  ಪದದ ಬಳಕೆ ಬೇಡ. ಅದರಲ್ಲಿ ಬದಲಾಗಿ ಕೊರೊನಾ ಕರ್ಫ್ಯೂ  ಎಂದು ಹೇಳೋಣ. ಇದರಿಂದ ಕೊರೊನಾ ಜಾಗೃತಿ ಮೂಡುತ್ತದೆ. ಇಂದು ನಮ್ಮ ಬಳಿ ಕಳೆದ ವರ್ಷದ ಅನುಭವ ಇದೆ. ಹಾಗಾಗಿ ಕೊರೊನಾ ನಿಯಂತ್ರಣ ತರಲು ಸಾಧ್ಯವಿಲ್ಲ. ಮೈಕ್ರೋ ಕಂಟೈನ್‍ಮೆಂಟ್‍ಗಳಲ್ಲಿ ಟಫ್ ರೂಲ್ಸ್ ಅನಿವಾರ್ಯತೆ ಇದೆ.

    ಟೆಸ್ಟಿಂಗ್, ಟ್ರೇಸ್, ಟ್ರ್ಯಾಕಿಂಗ್: ಮೊದಲ ಅಲೆಯಲ್ಲಿ ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡರೂ ವೈದ್ಯರ ಬಳಿ ಬರುತ್ತಿದ್ದರು. ಆದ್ರೆ ಈಗ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರ ಪರಿಣಾಮ ಕುಟುಂಬದ ಎಲ್ಲರಿಗೂ ಸೋಂಕು ತಗಲುಗ್ತಿದೆ. ಲಸಿಕೆ ಬಗ್ಗೆ ಮಾತನಾಡೋದಕ್ಕಿಂತ ಕೊರೊನಾ ಟೆಸ್ಟ್ ಹೆಚ್ಚಳ ಮಾಡುವ ಗುರಿ ಎಲ್ಲ ರಾಜ್ಯಗಳ ಮುಂದಿದೆ. ಕೊರೊನಾ ಪರೀಕ್ಷೆಯನ್ನ ಹಗುರುವಾಗಿ ಕಾಣಬೇಡಿ. ಟೆಸ್ಟಿಂಗ್, ಟ್ರೇಸ್, ಟ್ರ್ಯಾಕಿಂಗ್ ಕೊರೊನಾ ನಿಯಂತ್ರಣಕ್ಕೆ ನಮ್ಮ ಬಳಿಯಲ್ಲಿರುವ ಅಸ್ತ್ರ.

    ಕೊರೊನಾ ಪರೀಕ್ಷೆ ಹೆಚ್ಚಳವಾದ್ರೆ ಸಹಜವಾಗಿ ಏರಿಕೆ ಆಗುತ್ತೆ. ಸಂಖ್ಯೆ ಹೆಚ್ಚಳವಾದ್ರೆ ಮುಂದೆ ಏನು ಮಾಡಬೇಕು ಅನ್ನೋದು ನಮಗೆ ಗೊತ್ತಾಗಲಿದೆ. ಆ ರಾಜ್ಯ ಹೆಚ್ಚು, ಕಡಿಮೆ ಅನ್ನೋದರ ಬಗ್ಗೆ ಮಾತಾಡೋದು ಬೇಡ. ಮುಂದಿನ ನಾಲ್ಕು ವಾರ ದೇಶಕ್ಕೆ ಕಠಿಣವಾಗಿದೆ.

    ಕ್ರಮಬದ್ಧ ಕೊರೊನಾ ಪರೀಕ್ಷೆ: ಇನ್ನೂ ನಿಯಮಬದ್ಧವಾಗಿ ಟೆಸ್ಟಿಂಗ್ ನಡೆಯುತ್ತಿಲ್ಲ ಅನ್ನೋದು ಗಮನಕ್ಕೆ ಬಂದಿದೆ. ಕೊರೊನಾ ಟೆಸ್ಟ್ ಮಾಡೋವಾಗ ಸೂಜಿ ಗಂಟಲಿನ ಆಳದವರೆಗೂ ಹೋಗಬೇಕು. ಅಂದಾಗ ಮಾತ್ರ ನಿಖರ ಫಲಿತಾಂಶ ಬರಲಿದೆ. ಕಂಟೈನ್‍ಮೆಂಟ್ ಝೋನ್ ಗೆ ಒಳಪಡುವ ಎಲ್ಲರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು. ಅಂದಾಗ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರಲಿದೆ.

    ಪ್ರತಿ ವರದಿಯ ವಿಶ್ಲೇಷಣೆ ಅಗತ್ಯ: ಕೊರೊನಾ ಸೋಂಕಿತನಿಂದ ಸಾವನ್ನಪ್ಪಿದ ರೋಗಿಯ ಇಂಚಿಂಚೂ ಮಾಹಿತಿ ಕಲೆ ಹಾಕಬೇಕು. ಮೃತ ಸೋಂಕಿತನ ಹೆಲ್ತ್ ಹಿಸ್ಟರಿ ಪತ್ತೆ ಮಾಡಿದ್ರೆ ಮುಂದಾಗುವ ಸಾವುಗಳಿಗೆ ಬ್ರೇಕ್ ಆಗಬಹುದು. ಪ್ರತಿ ಸೋಂಕಿತನ ವರದಿಯ ವಿಶ್ಲೇಷಣೆ ಅಗತ್ಯ. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.5ಕ್ಕಿಂತ ಕಡಿಮೆ ತರಬೇಕು. ಕೊರೊನಾ ಲಸಿಕೆ ವೇಗವನ್ನ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲಸಿಕೆ ಪಡೆದ ನಂತ್ರವೂ ಮಾಸ್ಕ್ ಕಡ್ಡಾಯ.

    ಕಳೆದ ವರ್ಷ ಲಸಿಕೆ ಇಲ್ಲದಿದ್ದರೂ ಕೊರೊನಾ ಗೆದ್ದಿದ್ದೇವೆ. ಈ ವರ್ಷ ಲಸಿಕೆಗಾಗಿ ದಾರಿ ನೋಡದೇ ಟೆಸ್ಟಿಂಗ್ ಹೆಚ್ಚಳವಾಗಬೇಕಿದೆ. ಕೊರೊನಾ ಲಸಿಕೆ ಹಂತವಾಗಿ ನಡೆಯಲಿದ್ದು, ಎಲ್ಲರಿಗೂ ಲಭ್ಯವಾಗಲಿದೆ. ಕೊರೊನಾ ವಿಷಯದಲ್ಲಿಯೂ ಕೆಲವರು ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಔಷಧಿ ಪಡೆದು ಮಳೆಯಲ್ಲಿ ತಿರುಗಾಡಿದ್ರೆ ಜ್ವರ ಬಂದೇ ಬರುತ್ತೆ. ಮಳೆ ಬಂದಾಗ ಛತ್ರಿ ಇಟ್ಟುಕೊಳ್ಳಬೇಕು. ಹಾಗೆಯೇ ಲಸಿಕೆ ಪಡೆದ ನಂತ್ರವೂ ನಿಯಮಗಳ ಪಾಲಿಸೋದು ಅನಿವಾರ್ಯ ಎಂದು ಹೇಳಿದರು.

  • ವಿಪಕ್ಷ ನಾಯಕನಾದ ನನ್ನ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯ ಕೊಟ್ರು: ಸಿದ್ದರಾಮಯ್ಯ

    ವಿಪಕ್ಷ ನಾಯಕನಾದ ನನ್ನ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯ ಕೊಟ್ರು: ಸಿದ್ದರಾಮಯ್ಯ

    – ಪ್ರಧಾನಿಗಳೇ ನಿಮ್ಮ ಸರ್ಕಾರದ ಭ್ರಷ್ಟಾಚಾರಕ್ಕೆ ರೇಟಿಂಗ್ ಕೊಡಿ
    – ”ಮೈ ಬಿ ಖಾವೂಂಗಾ, ತುಮ್ ಬಿ ಖಾವೋ” ಅಂತ ಹೇಳಿಕೆ ಬದಲಿಸಿಕೊಳ್ಳಿ

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಒಳಜಗಳ ಬಹಿರಂಗವಾಗಿದೆ. ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಈಶ್ವರಪ್ಪ ರಾಜ್ಯಪಾಲರು, ಪಕ್ಷದ ಅಧ್ಯಕ್ಷ ಹಾಗೂ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ ಎನ್ನಲಾಗ್ತಿದೆ. ಈಗ ಇದೇ ವಿಷಯವನ್ನ ಅಸ್ತ್ರವಾಗಿ ಬಳಸಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರ ಜೊತೆಯಲ್ಲಿ ಮುಖ್ಯಮಂತ್ರಿಗಳನ್ನ ವಜಾಗೊಳಿಸಿ ಎಂದು ಆಗ್ರಹಿಸಿದ್ದಾರೆ.

    ಮುಖ್ಯಮಂತ್ರಿಗಳ ವಿರುದ್ಧ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು ರಾಜ್ಯದ ಆಡಳಿತ ಕುಸಿದು ಬಿದ್ದಿರುವುಕ್ಕೆ ಸಾಕ್ಷಿಯಾಗಿದೆ. ರಾಜ್ಯಪಾಲರು ತಕ್ಷಣ ಮಧ್ಯೆಪ್ರವೇಶಿಸಿ ಮುಖ್ಯಮಂತ್ರಿಯವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕನಾಗಿ ನಾನು ಮಾಡುತ್ತಾ ಬಂದಿರುವ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಮಾತಿಗೆ ಬದ್ಧರಾಗಿ ಉಳಿಯಬೇಕು ಎಂದು ಒತ್ತಾಯಿಸಿದ್ದಾರೆ.

    ಈಶ್ವರಪ್ಪನವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜಕೀಯ ಹಿತಾಸಕ್ತಿಗಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಸಾರಿದ್ದಾರೆ ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮಗಳು ಕೇವಲ ಗ್ರಾಮೀಣ ಅಭಿವೃದ್ದಿ ಇಲಾಖೆಯೊಂದಕ್ಕೆ ಸಂಬಂಧಿಸಿದ್ದಲ್ಲ, ಇದು ಸರ್ಕಾರದ ಪ್ರತಿಯೊಂದು ಇಲಾಖೆಯೊಳಗಿನ ಕರ್ಮಕಾಂಡ. ಬಿಜೆಪಿ ವರಿಷ್ಠರು ಈಶ್ವರಪ್ಪನವರ ಬಾಯಿಮುಚ್ಚಿಸಲು ಪ್ರಯತ್ನಿಸದೆ ಇತರ ಸಚಿವರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಬೇಕು.

    ಖಜಾನೆ ಖಾಲಿಗೆ ಭ್ರಷ್ಟಾಚಾರದ ವೈರಸ್ ಕಾರಣ: ಮುಖ್ಯಮಂತ್ರಿಗಳ ವಿರುದ್ಧ ಈಶ್ವರಪ್ಪನವರು ರಾಜ್ಯಪಾಲರಿಗೆ ಮಾತ್ರ ಆರೋಪ ಪಟ್ಟಿ ಸಲ್ಲಿಸದೆ, ಅದರ ಪ್ರತಿಯನ್ನು ಪ್ರಧಾನಿ ಮೋದಿ ಮತ್ತು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಕಳಿಸಿದ್ದಾರೆ. ಅವರೆಲ್ಲರೂ ಆರೋಪ ಪಟ್ಟಿ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿ ಆಂತರಿಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಕೊರೊನಾ ವೈರಸ್ ಕಾರಣ ಅಲ್ಲ, ಈ ಸರ್ಕಾರಕ್ಕೆ ಅಂಟಿರುವ ಭ್ರಷ್ಟಾಚಾರದ ವೈರಸ್ ಕಾರಣ ಎನ್ನುವುದನ್ನು ಈಶ್ವರಪ್ಪನವರ ತನ್ನ ಸಂಶೋಧನೆ ಮೂಲಕ ಬಹಿರಂಗಗೊಳಿಸಿದ್ದಾರೆ.

    ಭ್ರಷ್ಟಾಚಾರದ ರೇಟಿಂಗ್ ಕೊಡಿ: ನಮ್ಮ ಸರ್ಕಾರ 10% ಸರ್ಕಾರ ಎಂದು ಆರೋಪಿಸಿದ್ದ ಪ್ರಧಾನಮಂತ್ರಿಯವರೇ, ನಿಮ್ಮದೇ ಸಚಿವರು ನಿಮಗೆ ಕಳಿಸಿರುವ ನಿಮ್ಮ ಸರ್ಕಾರದ ಜಾತಕಪತ್ರವನ್ನು ಪರಿಶೀಲಿಸಿ ನೀವೇ ರಾಜ್ಯಸರ್ಕಾರಕ್ಕೆ ಭ್ರಷ್ಟಾಚಾರದ ರೇಟಿಂಗ್ ಕೊಟ್ಟುಬಿಡಿ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ, “ನಾ ಖಾವುಂಗಾ, ನಾ ಖಾನೆ ದೂಂಗಾ” ಎಂಬ ನಿಮ್ಮ ಜಗದ್ವಿಖ್ಯಾತ ಘೋಷಣೆಯನ್ನು ಬ “ಮೈ ಬಿ ಖಾವೂಂಗಾ, ತುಮ್ ಬಿ ಖಾವೋ” ಎಂದು ಬದಲಿಸಿ ಬಿಡಿ.

    ಬಿಜೆಪಿ ಸರ್ಕಾರ ಅಕ್ರಮ ಶಿಶು: ಆಪರೇಷನ್ ಕಮಲ ಪ್ರಕರಣದ ತನಿಖೆಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ನೀಡಿರುವುದು. ರಾಜ್ಯದ ಬಿಜೆಪಿ ಸರ್ಕಾರ ಆಪರೇಷನ್ ಕಮಲ ಎಂಬ ಅನೈತಿಕ ಚಟುವಟಿಕೆಯ ಅಕ್ರಮ ಶಿಶು ಎನ್ನುವ ನಮ್ಮ ಆರೋಪವನ್ನು ಪುಷ್ಠೀಕರಿಸಿದೆ. ರಾಜ್ಯದ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣವಾದ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ವಿನಿಮಯಗೊಂಡ ಕೋಟ್ಯಂತರ ರೂಪಾಯಿಗಳ ಆಮಿಷದ ಬಗ್ಗೆ ಸಮಗ್ರಸ್ವರೂಪದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

  • ಕಾಂಗ್ರೆಸ್-ಎಡಪಕ್ಷಗಳ ನಡ್ವೆ ಫಿಕ್ಸಿಂಗ್: ಪ್ರಧಾನಿ ಮೋದಿ

    ಕಾಂಗ್ರೆಸ್-ಎಡಪಕ್ಷಗಳ ನಡ್ವೆ ಫಿಕ್ಸಿಂಗ್: ಪ್ರಧಾನಿ ಮೋದಿ

    – ಒಬ್ಬರು ಚಿನ್ನ, ಮತ್ತೊಬ್ಬರು ಬೆಳ್ಳಿ ಕದ್ರು

    ತಿರುವನಂತಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಲಕ್ಕಾಡದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ. ಕೇರಳದ ಜನತೆ ಎಲ್‍ಡಿಎಫ್-ಯುಡಿಎಫ್ ರಾಜಕಾರಣಕ್ಕೆ ಬೇಸತ್ತಿದ್ದು, ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದರು.

    ಐದು ವರ್ಷ ಒಬ್ಬರು ಲೂಟಿ ಮಾಡ್ತಾರೆ, ಮತ್ತೈದು ವರ್ಷ ಮತ್ತೊಬ್ಬರು ಕನ್ನ ಹಾಕ್ತಾರೆ. ಒಬ್ಬರು ಚಿನ್ನ ಮತ್ತು ಮತ್ತೊಬ್ಬರು ಬೆಳ್ಳಿ ಕದ್ದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದೇ ಆಗಿವೆ. ಉತ್ತರ ಪ್ರದೇಶದಲ್ಲಿ ಜೊತೆಯಾಗಿದ್ದು, ಚುನಾವಣೆ ಹಿನ್ನೆಲೆ ಇಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕೇರಳ ವಿಕಾಸದ ಕುರಿತು ಮಾತನಾಡಿ ಮತಯಾಚನೆ ಮಾಡಿದರು. ದೇಶದ ಜನತೆ ವಿಕಾಸ ಮತ್ತು ವಿಶ್ವಾಸದ ಮೇಲೆ ಬಿಜೆಪಿ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದರು. ಈ ವೇದಿಕೆ ಮೇಲಿದ್ದ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅವರನ್ನ ಹಾಡಿ ಹೊಗಳಿದರು. ಕೆಲವರು ಸ್ವಾರ್ಥ ಅಥವಾ ತಮ್ಮ ಲಾಭಕ್ಕಾಗಿ ರಾಜಕಾರಣಕ್ಕೆ ಬರುತ್ತಾರೆ. ಆದ್ರೆ ಶ್ರೀಧರನ್, ತಮ್ಮ ಜೀವನವನ್ನೇ ದೇಶಕ್ಕೆ ಅರ್ಪಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿಯೂ ಕೇರಳ ಜನತೆಯ ಸೇವೆಗೆ ಮುಂದಾಗಿದ್ದಾರೆ ಎಂದು ಹೇಳಿದರು.

  • ಹೌದು, ಗೆಳೆಯರಿಗಾಗಿ ಕೆಲಸ ಮಾಡುತ್ತೇನೆ, ಬಡವರೇ ನನ್ನ ಸ್ನೇಹಿತರು: ಮೋದಿ

    ಹೌದು, ಗೆಳೆಯರಿಗಾಗಿ ಕೆಲಸ ಮಾಡುತ್ತೇನೆ, ಬಡವರೇ ನನ್ನ ಸ್ನೇಹಿತರು: ಮೋದಿ

    ಕೋಲ್ಕತ್ತಾ: ಬಡವರೇ ನನ್ನ ಸ್ನೇಹಿತರು. ಹಾಗಾಗಿ ಈ ಗೆಳೆಯರಿಗಾಗಿಯೇ ನಾನು ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದರು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಪಕ್ಷದ ಪ್ರಚಾರದಲ್ಲಿ ಪ್ರಧಾನಿಗಳು ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ಮತ್ತು ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು.

    ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ವಿಪಕ್ಷ ನಾಯಕರು ಗೆಳೆಯರಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವನು, ನನಗೆ ಅವರ ಕಷ್ಟಗಳು ಗೊತ್ತು. ಅವರು ಹಿಂದೂಸ್ಥಾನದ ಯಾವುದೇ ಕೋಣೆಯಲ್ಲಿದ್ರೂ ಅವರೆಲ್ಲ ನನ್ನ ಗೆಳೆಯರು. ಅವರ ಕಷ್ಟ ಮತ್ತು ದುಃಖಗಳನ್ನ ಅರ್ಥ ಮಾಡಿಕೊಳ್ಳಬಲ್ಲೆ. ಹೌದು ಬಡ ಗೆಳೆಯರಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಾವಿಬ್ಬರು, ನಮಗಿಬ್ಬರು- ನಾಲ್ವರಿಂದ ದೇಶದ ಆಡಳಿತ: ಕೇಂದ್ರದ ವಿರುದ್ಧ ರಾಹುಲ್ ಕಟು ಟೀಕೆ

    ಭವಾನಿಪುರದಲ್ಲಿ ನಿಲುಗಡೆಯಾಗಬೇಕಿದ್ದ ದೀದಿ ಸ್ಕೂಟಿಯು ನಂದಿಗ್ರಾಮದ ಕಡೆಗೆ ದಿಡೀರ್ ತಿರುಗಿದೆ ಅಂತ ವ್ಯಂಗ್ಯವಾಡಿದ್ರು. ಬಂಗಾಳದ ಜನರು ಬದಲಾವಣೆಯ ಬಗೆಗಿನ ಭರವಸೆಯನ್ನು ಎಂದಿಗೂ ಕಳೆದುಕೊಂಡಿಲ್ಲ. ಬಂಗಾಳಕ್ಕೆ ಶಾಂತಿ ಬೇಕಿದೆ. ಹೊಳಪಿನ ಬಂಗಾಳ, ಪ್ರಗತಿಶೀಲ ಬಂಗಾಳ ಬೇಕಾಗಿದೆ ಎಂದರು. ಇಲ್ಲಿ ಹೂಡಿಕೆ ಹೆಚ್ಚಿಸಲು, ಬಂಗಳಾದ ಸಂಸ್ಕೃತಿ ಕಾಪಾಡಲು ಹಾಗೂ ಬದಲಾವಣೆಯನ್ನು ತರುವ ಭರವಸೆ ನೀಡುತ್ತೇನೆ ಎಂದು ಭರವಸೆ ನೀಡಿದರು. ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆಯಾದರು.

    ದೀದಿ ತಿರುಗೇಟು: ಈ ಮಧ್ಯೆ, ಮೋದಿ ಮಾತಿಗೆ ಕೌಂಟರ್ ಕೊಟ್ಟಿರೋ ಮಮತಾ ಬ್ಯಾನರ್ಜಿ, ನಿಮ್ಮ ಆರೋಪಗಳ ಬಗ್ಗೆ ಮುಖಾಮುಖಿ ಚರ್ಚೆಗೆ ನಾನು ಸಿದ್ಧ. ದಿನ, ಸಮಯವನ್ನು ನೀವೇ ನಿಗದಿ ಮಾಡಿ ಅಂತ ಮೋದಿಗೆ ಸವಾಲ್ ಹಾಕಿದ್ದಾರೆ. ಅಲ್ಲದೆ ನಾವು ಗೆಲ್ತೇವೇ.. ಮೋದಿ-ಬಿಜೆಪಿಯನ್ನು ಭಾರತದಿಂದಲೇ ತೊಗಲಿಸ್ತೇವೆ. ನಮ್ಮ ತಂಟೆಗೆ ಬಂದವರು ಸರ್ವನಾಶ ಆಗ್ತಾರೆ ಅಂತ ಗುಡುಗಿದ್ದಾರೆ.

  • ಪ್ರಧಾನಿಗಳು 20 ಅಲ್ಲ 120 ರ‍್ಯಾಲಿ ನಡೆಸಲಿ, ಗೆಲ್ಲೋದು ನಾವೇ: ದೀದಿ ಸವಾಲ್

    ಪ್ರಧಾನಿಗಳು 20 ಅಲ್ಲ 120 ರ‍್ಯಾಲಿ ನಡೆಸಲಿ, ಗೆಲ್ಲೋದು ನಾವೇ: ದೀದಿ ಸವಾಲ್

    – ಪಟ್ಟಿ ರಿಲೀಸ್ ದಿನವೇ ವಿಕ್ಟರಿ ಸಿಂಬಲ್

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆ ಅಖಾಡಕ್ಕೆ ರಂಗೇರುತ್ತಿದ್ದು, ತೃಣಮೂಲ ಕಾಂಗ್ರೆಸ್ ಒಂದೇ ಬಾರಿಗೆ 291 ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಿದೆ. ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದಲ್ಲಿ 20 ಅಲ್ಲ 120 ಬೃಹತ್ ಸಮಾವೇಶಗಳನ್ನು ನಡೆಸಲಿ. ಆದ್ರೆ ಗೆಲುವು ಮಾತ್ರ ನಮ್ಮದೇ ಎಂದು ಹೇಳಿ ಮಾಧ್ಯಮಗಳ ಕ್ಯಾಮೆರಾಗಳಿಗೆ ಗೆಲವುವಿನ ಚಿಹ್ನೆ ತೋರಿಸಿದರು.

    ಪಶ್ಚಿಮ ಬಂಗಾಳದಲ್ಲಿ ಪ್ರಧಾನಿಗಳ ನೇತೃತ್ವದಲ್ಲಿ 20 ದೊಡ್ಡ ಸಮಾವೇಶ ಆಯೋಜನೆಗೆ ಮುಂದಾಗಿದೆ. ಈ ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಚುನಾವಣೆ ಹಿನ್ನೆಲೆ ಬಹುತೇಕ ಕಮಲ ನಾಯಕರು ಬಂಗಾಳದಲ್ಲಿಯೇ ಉಳಿದುಕೊಂಡು ಪಕ್ಷ ಸಂಘಟನೆ ಜೊತೆಯಲ್ಲಿ ಪ್ರಚಾರದ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.

    294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿ ಅಥವಾ 294 ಹಂತಗಳಲ್ಲಿಯೇ ನಡೆದ್ರೂ ಅಮಿತ್ ಶಾ ಅವರಿಗೆ ಸೋಲು ಖಚಿತ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ತಮ್ಮ ಪಡೆಯನ್ನ ಬಂಗಾಳದಲ್ಲಿ ಬಿಜೆಪಿ ನಿಯೋಜಿಸಿದ್ರೂ ಪ್ರಯೋಜನವಿಲ್ಲ ಎಂದು ಅಮಿತ್ ಶಾಗೆ ಮಮತಾ ಬ್ಯಾನರ್ಜಿ ಸವಾಲು ಎಸೆದರು. ಈ ಹಿಂದೆ ಚುನಾವಣೆ ಆಯೋಗ ಕೇಂದ್ರದಲ್ಲಿರುವ ಬಿಜೆಪಿಗೆ ಅನಕೂಲವಾಗುವಂತೆ ಚುನಾವಣೆ ದಿನಾಂಕ ನಿಗದಿ ಮಾಡಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಇದನ್ನೂ ಓದಿ: 291 ಅಭ್ಯರ್ಥಿಗಳ ಹೆಸರು ಘೋಷಿಸಿದ ದೀದಿ – ಟಿಕೆಟ್ ಹಂಚಿಕೆ ಲೆಕ್ಕಾಚಾರ ಹೀಗಿದೆ

    ಜಾತಿ ಸೇರಿದಂತೆ ಪಕ್ಕಾ ರಾಜಕೀಯ ಸಮೀಕರಣದಲ್ಲಿ ಮಮತಾ ಬ್ಯಾನರ್ಜಿ ಟಿಕೆಟ್ ಹಂಚಿಕೆ ಮಾಡಿರುವ ಬಗ್ಗೆ ವಿಶ್ಲೇಷಣೆ ಮಾಡಲಾಗುತ್ತಿದೆ. ಎಲ್ಲ ಸಮುದಾಯಗಳನ್ನ ಗಮನದಲ್ಲಿರಿಸಿಕೊಂಡು ಟಿಕೆಟ್ ಹಂಚಿಕೆ ಮಾಡಿದ್ದಾರೆ, 291ರ ಪೈಕಿ 50 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ರೆ, 42 ಮುಸ್ಲಿಂ ನಾಯಕರು ಟಿಎಂಸಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪಕ್ಷಗಳ ಗೆಲುವಿನಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಪಶ್ಚಿಮ ಬಂಗಾಳದ ಒಟ್ಟು ಮತಗಳ ಪೈಕಿ ಶೇ.30ರಷ್ಟು ಮುಸ್ಲಿಮರಿದ್ದಾರೆ. ಸರಿ ಸುಮಾರು 100 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ಅಭ್ಯರ್ಥಿಗಳ ಗೆಲುವನ್ನ ನಿರ್ಣಯಿಸಲಿವೆ. ಇದನ್ನೂ ಓದಿ: ಬಂಗಾಳದಲ್ಲಿ ಗಮನಸೆಳೆದ ‘ಮಾ’ ಕ್ಯಾಂಟೀನ್

    79 ದಲಿತರಿಗೆ ಮತ್ತು 17 ಪರಿಶಿಷ್ಠ ಪಂಗಡದ ನಾಯಕರಿಗೂ ಮಮತಾ ಬ್ಯಾನರ್ಜಿ ಟಿಕೆಟ್ ನೀಡಿದ್ದಾರೆ. ಸಮುದಾಯಗಳ ಪ್ರಾಬಲ್ಯದ ಮೇಲೆ ಆ ಕ್ಷೇತ್ರಗಳಲ್ಲಿ ಕ್ರಮಬದ್ಧವಾಗಿ ಟಿಎಂಸಿ ಟಿಕೆಟ್ ಹಂಚಿಕೆ ಮಾಡಿದೆ. ಈ ಎರಡೂ ಸಮುದಾಯಗಳ ಮತಗಳು ಶೇ.30ರಷ್ಟಿವೆ. ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಮುದಾಯದ ಅಭ್ಯರ್ಥಿಗಳನ್ನ ಟಿಎಂಸಿ ಕಣಕ್ಕಿಳಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ದೊಡ್ಡ ದಂಗೆಕೋರ- ಮಮತಾ ಬ್ಯಾನರ್ಜಿ ವಾಗ್ದಾಳಿ

  • ಪ್ರಧಾನಿ ಮೋದಿ ಆಡಳಿತ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ: ಗುಂಡೂರಾವ್

    ಪ್ರಧಾನಿ ಮೋದಿ ಆಡಳಿತ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ: ಗುಂಡೂರಾವ್

    – ಚೌಕಿದಾರ ಅಲ್ಲ ಜನರ ಪಾಲಿನ ಕೆಟ್ಟ ಗ್ರಹಚಾರ

    ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಬಳಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್, ಪ್ರಧಾನಿ ಮೋದಿಯವರ ಆಡಳಿತ. ಇದೊಂದು ರೀತಿ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ ಎಂದು ವ್ಯಂಗ್ಯ ಮಾಡಿದ್ದಾರೆ.

    ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ದಿನೇಶ್ ಗುಂಡೂರಾವ್, ಚೇಳಿಗೆ ಯಜಮಾನಿಕೆ ನೀಡಿ ಮನೆಯವರೆಲ್ಲಾ ಕುಟುಕಿಸಿಕೊಳ್ಳುವಂತಾಗಿದೆ ಪ್ರಧಾನಿ ಮೋದಿಯವರ ಆಡಳಿತ. ಇದೊಂದು ರೀತಿ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ. ಸ್ವಘೋಷಿತ ‘ಚೌಕಿದಾರ’ ಮೋದಿಯವರು ನಿಜವಾದ ‘ಚೌಕಿದಾರ’ರಲ್ಲ. ಬದಲಿಗೆ ಜನಸಾಮಾನ್ಯರ ಪಾಲಿನ ‘ಕೆಟ್ಟ ಗ್ರಹಚಾರ’ವಾಗಿದ್ದಾರೆ. ಮೋದಿಯವರ ಅಚ್ಚೇದಿನ್‍ನ ಸತ್ಯ ಜನರಿಗೆ ಈಗ ಅರಿವಾಗುತ್ತಿದೆ. ಬೆಲೆಯೇರಿಸಿ ಜನರ ಜೇಬು ಖಾಲಿ ಮಾಡುವುದೇ ಕೇಂದ್ರ ಸರ್ಕಾರದ ಒಂದಂಶದ ಕಾರ್ಯಕ್ರಮವಿದ್ದಂತೆ ಭಾಸವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

    ಒಂದೇ ತಿಂಗಳ ಅವಧಿಯಲ್ಲಿ 4 ಬಾರಿ ಎಲ್‍ಪಿಜಿ ಬೆಲೆಯೇರಿಕೆಯಾಗಿದೆ. ಒಂದೊಂದು ರೂಪಾಯಿಗೂ ಪರಿತಪಿಸುತ್ತಿರುವ ಬಡಜನತೆ ಈ ಬೆಲೆಯೇರಿಕೆ ತಾಪ ಸಹಿಸಿಕೊಳ್ಳಲು ಹೇಗೆ ಸಾಧ್ಯ? ಈ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತಾದರೂ ಸಂವೇದನೆ ಬೇಡವೆ ಎಂದು ಪ್ರಶ್ನಿಸಿದ್ದಾರೆ.

    ಹೊಟ್ಟೆ-ಬಟ್ಟೆ ಕಟ್ಟಿ ಜೀವನ ನಡೆಸುತ್ತಿರುವ ಜನ ಈ ಸರ್ಕಾರದ ದುಡ್ಡಿನ ದುರಾಸೆಗೆ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಬೆಲೆಯೇರಿಕೆಯಿಂದ ದುಡಿದ ಹಣ ಉಳಿಸುವುದಿರಲಿ,ತಿಂಗಳ ಸಂಸಾರ ನಡೆಸುವುದೂ ಕಷ್ಟವಾಗಿದೆ. ಮಾತಲ್ಲೇ ಮಂಟಪ ಕಟ್ಟುವ ಬಣ್ಣದ ಮಾತುಗಳು ಜನರ ಹೊಟ್ಟೆ ತುಂಬಿಸುವುದಿಲ್ಲ. ಈ ಸತ್ಯವನ್ನು ಮೋದಿಯವರು ಇನ್ನಾದರೂ ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

    ಫೆಬ್ರವರಿಯಲ್ಲಿ 3 ಬಾರಿ ಏರಿಕೆ ಕಂಡಿದ್ದ ಅಡುಗೆ ಅನಿಲ ಸೋಮವಾರ ಕೂಡ 25 ರೂಪಾಯಿ ಏರಿಕೆ ಕಂಡಿದೆ. 14.2 ಕೆಜಿ ಸಿಲಿಂಡರ್ ಬೆಲೆ 822 ರೂಪಾಯಿ ಆಗಿದ್ದರೆ, 19 ಕೆಜಿಯ ವಾಣಿಜ್ಯ ಉದ್ದೇಶಿತ ಗ್ಯಾಸ್ ಸಿಲಿಂಡರ್ ದರ 1,666 ರೂಪಾಯಿ ಆಗಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 7 ಪೈಸೆ ಇಳಿದಿದ್ದು ಲೀಟರ್‍ಗೆ 94.22 ರೂ ಇದೆ. ಡೀಸೆಲ್ ದರ 5 ಪೈಸೆ ಕಡಿಮೆಯೊಂದಿಗೆ 86.37 ರೂಪಾಯಿ ಆಗಿದೆ.

    ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಒತ್ತಾಯ: ತೈಲ ದರ ಹಾಗೂ ಹಾಗೂ ಗ್ಯಾಸ್ ದರ ಏರಿಕೆಗೆ ಆಟೋ ಚಾಲಕರು ತತ್ತರಿಸಿದ್ದು ಆಟೋ ಪ್ರಯಾಣದರ ಏರಿಕೆಗೆ ಚಾಲಕರು ಪಟ್ಟು ಹಿಡಿದಿದ್ದಾರೆ. ಸದ್ಯ ಬೆಂಗಳೂರಲ್ಲಿ 2 ಲಕ್ಷ ಆಟೋಗಳು ಸಂಚರಿಸುತ್ತಿದ್ದು, ಪ್ರಸ್ತುತ ಇರುವ ಪ್ರಯಾಣದರ 25ರೂ.ನಿಂದ 36 ರೂ.ಗೆ ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. 2013ರಲ್ಲಿ 1.9 ಕಿ.ಮೀಗೆ ಕನಿಷ್ಠ ದರ 20ರಿಂದ 25ರೂ.ಗೆ ಹೆಚ್ಚಿಸಲಾಗಿತ್ತು. ಬಳಿಕ 2019ರಲ್ಲೂ ಪ್ರಯಾಣದರ ಹೆಚ್ಚಳಕ್ಕೆ ಮನವಿ ಮಾಡಲಾಗಿತ್ತು. ಆದ್ರೆ ಸರ್ಕಾರ ಅನುಮತಿ ನೀಡಿರಲಿಲ್ಲ, ಆದ್ರೀಗ ತೈಲ ಮತ್ತು ಗ್ಯಾಸ್ ದರ ಏರಿಕೆ ಬೆನ್ನಲ್ಲೇ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ದರ ಪರಿಷ್ಕರಣೆಗೆ ಮನವಿ ಮಾಡಿದ್ದಾರೆ.

  • ರೈತರ ಪವಿತ್ರ ಹೋರಾಟ ಆಂದೋಲನ ಜೀವಿಗಳಿಂದ ಅಪವಿತ್ರ ಆಗ್ತಿದೆ: ಪ್ರಧಾನಿ ಮೋದಿ

    ರೈತರ ಪವಿತ್ರ ಹೋರಾಟ ಆಂದೋಲನ ಜೀವಿಗಳಿಂದ ಅಪವಿತ್ರ ಆಗ್ತಿದೆ: ಪ್ರಧಾನಿ ಮೋದಿ

    – ಆಂದೋಲನ ಜೀವಿಗಳಿಂದ ದೇಶವನ್ನ ರಕ್ಷಿಸಬೇಕಿದೆ

    ನವದೆಹಲಿ: ರೈತರ ಪವಿತ್ರ ಹೋರಾಟವನ್ನ ಆಂದೋಲನ ಜೀವಿಗಳು ಅಪವಿತ್ರ ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಆಂದೋಲನ ಜೀವಿಗಳಿಂದ ದೇಶವನ್ನ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ವೇಳೆ ಪ್ರಧಾನಿಗಳು ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ಸಮರ್ಥಿಸಿಕೊಂಡು ಆಂದೋಲನ ಜೀವಿಗಳಿಗೆ ಗುದ್ದು ನೀಡಿದರು.

    ರೈತರ ಆಂದೋಲನಗಳು ಪವಿತ್ರ ಮತ್ತು ದೇಶದಲ್ಲಿ ಅದಕ್ಕೆ ಮಹತ್ವ ನೀಡಲಾಗುತ್ತಿದೆ. ಆದ್ರೆ ಕೆಲ ಆಂದೋಲನ ಜೀವಿಗಳ ತಮ್ಮ ವೈಯಕ್ತಿಯ ಲಾಭಕ್ಕಾಗಿ ಹೋರಾಟವನ್ನ ಅಪವಿತ್ರಗೊಳಿಸಲು ಹೊರಟಿದ್ದಾರೆ. ದಂಗೆಕೋರರು, ಸಂಪ್ರದಾಯವಾದಿಗಳು, ನಕ್ಸಲವಾದಿಗಳು ಜೈಲಿನಲ್ಲಿ ಬಂಧಿಗಳಾಗಿದ್ದಾರೆ. ಇಂತಹವರನ್ನ ಬಿಡುಗಡೆಗೊಳಿಸುವಂತೆ ಆಗ್ರಹಿಸುವುದು ಎಷ್ಟು ಸರಿ ಎಂದು ಪ್ರಧಾನಿಗಳು ಪ್ರಶ್ನಿಸಿದ್ರು.

    ಇಂದು ವಿಪಕ್ಷಗಳ ಚರ್ಚೆ ವಿಷಯಗಳ ಬದಲಾಗಿವೆ. ನಾವು ವಿಪಕ್ಷದಲ್ಲಿದ್ದಾಗ ಭ್ರಷ್ಟಾಚಾರ ಮತ್ತು ದೇಶದ ಅಭಿವೃದ್ಧಿಗಾಗಿ ಸರ್ಕಾರವನ್ನ ಪ್ರಶ್ನೆ ಮಾಡಲಾಗುತ್ತಿತ್ತು. ಇವತ್ತಿನ ವಿಪಕ್ಷಗಳು ಅಭಿವೃದ್ಧಿ ವಿಷಯದಲ್ಲಿ ಚರ್ಚೆ ನಡೆಸುವ ಆಸಕ್ತಿಯನ್ನ ಕಳೆದುಕೊಂಡಿವೆ. ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ್ರೆ ಉತ್ತರಿಸಲು ನಾವೆಲ್ಲರೂ ಕಾತುರರಾಗಿದ್ದೇವೆ ಎಂದು ವಿಪಕ್ಷಗಳಿಗೆ ತಮ್ಮ ಮಾತುಗಳಿಂದಲೇ ಚಾಟಿ ಬೀಸಿದರು.

    ಹೊಸ ಕಾನೂನುಗಳಿಂದ ರೈತರಿಗೆ ಲಾಭವೇ ಹೊರತು, ನಷ್ಟವಲ್ಲ. ಯಾವ ರೈತರು ಹಣ ಕೊಡಿ ಎಂದು ಕೇಳಿರಲಿಲ್ಲ. ನಾವು ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಹಣ ಕೊಡುತ್ತಿದ್ದೇವೆ. ಕೃಷಿ ಕಾಯ್ದೆಗಳು ಆಯ್ಕೆಯಷ್ಟೇ, ಕಡ್ಡಾಯವಲ್ಲ ಅಂತಾ ಸ್ಪಷ್ಟಪಡಿಸಿದ್ರು. ಕಾಂಗ್ರೆಸ್ಸಿಗರು ಮತ್ತು ಇತರೆ ಪಕ್ಷಗಳ ನಾಯಕರು ಸುಳ್ಳು ಹಬ್ಬಿಸುವ ಮೂಲಕ ರೈತರಲ್ಲಿ ಅಭದ್ರತೆ ಉಂಟು ಮಾಡುತ್ತಿದ್ದಾರೆ. ಕೃಷಿ ಕಾಯ್ದೆಗಳ ಉಪಯೋಗದ ಬಗ್ಗೆ ಮಾತಾಡಿ ಅಂದ್ರೆ ಕಾಂಗ್ರೆಸ್ಸಿಗರು ಅದರ ಬಣ್ಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ರು.

    ರೈತ ಹೋರಾಟದ ಹಿಂದೆ ಆಂದೋಲನಜೀವಿಗಳಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ರು. ಮೋದಿ ಮಾತುಗಳನ್ನು ಆಕ್ಷೇಪಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿ ಪ್ರತಿಭಟನೆ ಮಾಡಿದ್ವು. ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿದರು. ಆದ್ರೆ ಕಾಂಗ್ರೆಸ್ ಪಕ್ಷವೇ ಒಂದು ಗೊಂದಲದ ಪಕ್ಷ, ಅದೂ ಉದ್ಧಾರವಾಗಲ್ಲ. ದೇಶವನ್ನು ಉದ್ಧಾರ ಮಾಡಲು ಬಿಡಲ್ಲ ಎಂದು ಪ್ರಧಾನಿ ತಿರುಗೇಟು ಕೊಟ್ಟರು. ಈ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿದರು.

  • ಎರಡನೇ ಹಂತದಲ್ಲಿ ಪ್ರಧಾನಿ ಮೋದಿ, ಎಲ್ಲ ರಾಜ್ಯಗಳ ಸಿಎಂಗಳಿಗೆ ಲಸಿಕೆ

    ಎರಡನೇ ಹಂತದಲ್ಲಿ ಪ್ರಧಾನಿ ಮೋದಿ, ಎಲ್ಲ ರಾಜ್ಯಗಳ ಸಿಎಂಗಳಿಗೆ ಲಸಿಕೆ

    – 50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್

    ನವದೆಹಲಿ: ಬಹು ದಿನಗಳಿಂದ ಕಾಯುತ್ತಿದ್ದ ಕೊರೊನಾ ಲಸಿಕೆ ಹಂಚಿಕೆ ಕಳೆದ ವಾರ ಆರಂಭವಾಗಿದ್ದು, ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗೆ ನೀಡಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ಹಾಗೂ ಜನಪ್ರತಿನಿಧಿಗಳು ಯಾವಾಗ ವ್ಯಾಕ್ಸಿನ್ ಪಡೆಯುತ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ.

    ಎರಡನೇ ಹಂತದ ಲಸಿಕೆ ವಿತರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಲಸಿಕೆ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜನವರಿ 16 ರಂದು ಲಸಿಕೆ ಹಂಚಿಕೆಯನ್ನು ಆರಂಭಿಸಲಾಗಿದೆ. ಆದರೆ ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಲಸಿಕೆ ಪಡೆದಿದ್ದಾರೆ. ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಸೇರಿ 50 ವರ್ಷ ಮೇಲ್ಪಟ್ಟ ಎಲ್ಲ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಕೊರೊನಾ ಲಸಿಕೆ ಪಡೆಯಲಿದ್ದಾರೆ.

    ದೇಶದಲ್ಲಿ ಈಗಾಗಲೇ ಸೀರಂ ಸಂಸ್ಥೆಯ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಕೊರೊನಾ ವಾರಿಯರ್ಸ್ ಈಗಾಗಲೇ ಲಸಿಕೆ ಪಡೆಯುತ್ತಿದ್ದಾರೆ. ಆದರೆ ನಿಗದಿತ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಎಲ್ಲ ರಾಜ್ಯಗಳಲ್ಲಿ ನಿಗದಿತ ಗುರಿ ತಲುಪಲು ಹರಸಾಹಸ ಮಾಡುತ್ತಿದ್ದಾರೆ.

    ಇದೀಗ ಎರಡನೇ ಸುತ್ತಿನಲ್ಲಿ 50 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲಿದ್ದಾರೆ. ಲಸಿಕೆ ಹಂಚಿಕೆ ಆರಂಭಕ್ಕೂ ಮುನ್ನ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಯಾರೂ ಹೆದರುವ ಹಾಗೂ ವ್ಯಾಕ್ಸಿನ್ ಪಡೆಯಲು ಹರಸಾಹಸ ಪಡುವ ಅಗತ್ಯವಿಲ್ಲ. ಎರಡನೇ ಸುತ್ತಿನಲ್ಲಿ ನಮ್ಮ ಸರದಿ ಬರಲಿದೆ ಎಂದು ತಿಳಿಸಿದ್ದರು.

    ಸಂಸದರು, ಶಾಸಕರು ಹಾಗೂ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಇತರರನ್ನು ಫ್ರಂಟ್ ಲೈನ್ ವರ್ಕರ್ಸ್ ಎಂದು ಪರಿಗಣಿಸಿ ಲಸಿಕೆ ನೀಡಬೇಕು ಎಂದು ಹರಿಯಾಣ, ಬಿಹಾರ ಹಾಗೂ ತೆಲಂಗಾಣ ಸೇರಿದಂತೆ ಇತರೆ ರಾಜ್ಯದ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು. ಯಾವುದೇ ಕಾರಣಕ್ಕೂ ಸರತಿಯನ್ನು ಜಂಪ್ ಮಾಡಬಾರದು ಎಂದು ಪ್ರಧಾನಿ ಮೋದಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹೀಗಾಗಿ ಮೊದಲ ಹಂತದಲ್ಲಿ ಕೇವಲ ಕೊರೊನಾ ವಾರಿಯರ್ಸ್ ಗೆ ಮಾತ್ರ ಲಸಿಕೆ ನೀಡಲಾಗಿದೆ.

  • ಲಸಿಕೆ ಪಡೆದ ನಂತರ ಕೊರೊನಾ ನಿಯಮಗಳನ್ನ ಮರೀಯಬೇಡಿ: ಪ್ರಧಾನಿ ಮೋದಿ

    ಲಸಿಕೆ ಪಡೆದ ನಂತರ ಕೊರೊನಾ ನಿಯಮಗಳನ್ನ ಮರೀಯಬೇಡಿ: ಪ್ರಧಾನಿ ಮೋದಿ

    – ಕೊರೊನಾ ವಾರಿಯರ್ಸ್ ನೆನೆದು ಮೋದಿ ಭಾವುಕ
    – ನಮ್ಮ ಲಸಿಕೆ ಸುರಕ್ಷಿತ, ಕಡಿಮೆ ಬೆಲೆ

    ನವದೆಹಲಿ: ಕೊರೊನಾ ಲಸಿಕೆ ಕಂಡು ಹಿಡಿಯಲು ನಮ್ಮ ವಿಜ್ಞಾನಿಗಳು ಸತತ ಪರಿಶ್ರಮ ಪಟ್ಟಿದ್ದಾರೆ. ವಿಜ್ಞಾನಿಗಳು ಹಬ್ಬ, ಸಂತೋಷಕೂಟದಲ್ಲಿ ಭಾಗಿಯಾಗದೇ ಲಸಿಕೆಗಾಗಿ ಶ್ರಮ ವಹಿಸಿದ್ದರು ಎಂದು ಲಸಿಕೆ ಸಂಶೋಧಕರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದರು.

    ಮೊದಲ ಡೋಸ್ ತೆಗೆದುಕೊಂಡವರು ಎರಡನೇ ಡೋಸ್ ಪಡೆದುಕೊಳ್ಳುವದನ್ನ ಮರೀಯಬೇಡಿ. ಎರಡನೇ ಡೋಸ್ ಪಡೆದ ನಂತರವೇ ನಿಮ್ಮ ದೇಹದಲ್ಲಿ ಕೊರೊನಾ ವಿರುದ್ಧದ ಶಕ್ತಿ ಹೆಚ್ಚಾಗಲಿದೆ. ಕೊರೊನಾ ಪಡೆದು ನಂತರ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕೊರೊನಾ ನಿಯಮಗಳನ್ನ ಮರೆಯಬೇಡಿ. ಭಾರತ ಸರ್ಕಾರ ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಈ ಸಂಖ್ಯೆ 30ಕೋಟಿ ತಲುಪುವ ಗುರಿಯನ್ನ ಭಾರತ ಹೊಂದಿದೆ. ಎರಡನೇ ಹಂತದಲ್ಲಿ ವೃದ್ಧರು, ರೋಗಿಗಳಿಗೆ ಆದ್ಯತೆ ನೀಡಲಾಗುವುದು.

    ಆತ್ಮನಿರ್ಭರ ಭಾರತದಡಿಯಲ್ಲಿ ಲಸಿಕೆ: ಈ ದೊಡ್ಡ ಅಭಿಯಾನ ಇಡೀ ವಿಶ್ವದ ಗಮನ ಸೆಳೆಯುವ ಮೂಲಕ ನಮ್ಮ ಶಕ್ತಿ ಪ್ರದರ್ಶನವಾಗುತ್ತಿದೆ. ಲಸಿಕೆಗೆ ಸಂಬಂಧಿಸಿದ ಸುಳ್ಳು ಸುದ್ದಿಗಳಿಂದ ದೂರ ಉಳಿದುಕೊಳ್ಳಿ. ನಮ್ಮ ಲಸಿಕೆಯ ವಿಶ್ವಾಸದಿಂದಲೇ ಇತರೆ ದೇಶಗಳು ನಮಗೆ ಬೇಡಿಕೆ ಇಡುತ್ತಿವೆ. ಎರಡು ಲಸಿಕೆಗಳು ಸದ್ಯಕ್ಕೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಸಿಕೆಗಳನ್ನ ನಮ್ಮ ವಿಕ್ಞಾನಿಗಳು ಕಂಡು ಹಿಡಿಯಲಿದ್ದಾರೆ. ಆತ್ಮನಿರ್ಭರ ಭಾರತದಡಿಯಲ್ಲಿ ಸಂಶೋಧನೆ ಆಗುತ್ತಿರುವ ಲಸಿಕೆಗಳ ಕ್ಷಮತೆ ಗುಣಮಟ್ಟವಾದಗಿದ್ದು, ಕಡಿಮೆ ಬೆಲೆಯನ್ನ ಹೊಂದಿವೆ ಎಂದರು.

    ಕೊರೊನಾ ವಿರುದ್ಧ ಹೋರಾಟದಲ್ಲಿ ಆತ್ಮವಿಶ್ವಾಸ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕೊರೊನಾ ಬಂದಾಗ ದೇಶದಲ್ಲಿ ಒಂದೇ ಟೆಸ್ಟಿಂಗ್ ಲ್ಯಾಬ್ ಇತ್ತು. ಇಂದು 23 ಸಾವಿರಕ್ಕೂ ಅಧಿಕ ಲ್ಯಾಬ್ ಗಳಿವೆ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಇನ್ನಿತರ ವೈದ್ಯಕೀಯ ವಸ್ತುಗಳಿಗಾಗಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಇಂದು ಆತ್ಮನಿರ್ಭರ ಭಾರತದಡಿಯಲ್ಲಿ ಸ್ವಾವಲಂಬನೆ ಹೊಂದಿದ್ದು, ನಿರ್ಯಾತ ಸಹ ಮಾಡಲಾಗುತ್ತಿದೆ. ಇದಕ್ಕೆಲ್ಲ ಭಾರತೀಯರ ಆತ್ಮನಿರ್ಭರದ ಆತ್ಮವಿಶ್ವಾಸ ಕಾರಣ.

    ಭಾವುಕರಾದ ಪ್ರಧಾನಿ ಮೋದಿ: ಕೊರೊನಾ ಲಸಿಕೆ ಕಾರ್ಯಕ್ರಮ ಮಾನವೀಯ ಮತ್ತು ಮಹತ್ವದ ಸಿದ್ಧಾಂತಗಳಡಿಯಲ್ಲಿದೆ. ಈ ಕೊರೊನಾ ಎಷ್ಟೋ ಜನರನ್ನ ಏಕಾಂಗಿಯನ್ನಾಗಿ ಮಾಡಿತು. ಮಗುವನ್ನ ತಾಯಿಯಿಂದ ದೂರು ಮಾಡಿತು. ವೃದ್ಧರು ಒಂಟಿಯಾಗಿ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದರು. ಈ ವೈರಸ್ ನಿಂದ ಅಗಲಿದೆ ಜನರಿಗೆ ಸಂಪ್ರದಾಯಬದ್ಧವಾಗಿ ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ. ಇದನ್ನೆಲ್ಲ ನೋಡಿದ ಮನಸ್ಸು ಭಾರವಾಗುತ್ತೆ ಎಂದು ಭಾವುಕರಾದರು.

    ಸರಿಯಾದ ಸಮಯಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರಗಳನ್ನ ತೆಗೆದುಕೊಂಡಿತು. ಜನತಾ ಕಫ್ರ್ಯೂ ಜನರನ್ನ ಲಾಕ್‍ಡೌನ್ ಗೆ ಸಿದ್ಧಗೊಳಿಸಿತು. ಕೊರೊನಾ ಆಕ್ರಮಣ ತಡೆಯಲು ದೊಡ್ಡ ಅಸ್ತ್ರವೇ ಲಾಕ್‍ಡೌನ್ ಆಗಿತ್ತು. ಈ ನಿರ್ಧಾರ ಅಷ್ಟು ಸರಳವಾಗಿರಲಿಲ್ಲ. ಆದರೂ ಭಾರತ ಸರ್ಕಾರ ಕೊರೊನಾ ತಡೆಗಾಗಿ ಲಾಕ್‍ಡೌನ್ ಸೇರಿದಂತೆ ಕಟ್ಟು ನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿತು. ಮೂಲಭೂತ ಸೇವೆಗಳು, ರೇಷನ್, ಔಷಧಿ, ಗ್ಯಾಸ್ ನೀಡುವ ಕೆಲಸ ಮಾಡಲಾಯ್ತು. ವಿದೇಶದಲ್ಲಿ ಸಿಲುಕಿದ ಭಾರತೀಯರನ್ನ ನಾವು ಕರೆ ತಂದಿದ್ದೇವೆ. ವಂದೇ ಭಾರತ್ ಮಿಷನ್ ಅಡಿ ಸುಮಾರು 35 ಲಕ್ಷ ಭಾರತೀಯರು ತಾಯ್ನಾಡಿಗೆ ಮರಳಿದರು. ಭಾರತ ತೆಗೆದುಕೊಂಡ ನಿರ್ಧಾರಗಳನ್ನ ಇಂದು ಇಡೀ ವಿಶ್ವ ಪಾಲನೆ ಮಾಡುತ್ತಿದೆ.

    ಮಾನವ ಸಂಕುಲಕ್ಕೆ ಒಳ್ಳೆಯದಾಗಲಿದೆ: ಕೊರೊನಾ ತಡೆಗಾಗಿ ದೇಶ ಹೇಗೆ ಒಗ್ಗಟ್ಟಾಗಿ ನಿಂತಿತು ಅನ್ನೋದನ್ನ ಇಡೀ ವಿಶ್ವ ಆಶ್ಚರ್ಯಚಕಿತದಿಂದ ನೋಡುತ್ತಿದ್ದೇವೆ. ಕೊರೊನಾ ಮರಣ ಪ್ರಮಾಣ ದರ ಸಹ ಕಡಿಮೆಯಾಗಿದ್ದು, ಸೋಂಕಿತರು ಗುಣಮುಖರಾಗಿ ಮನೆ ಸೇರುತ್ತಿದ್ದಾರೆ. ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರೆವು ನೀಡಿದೆ. ಇಂದು ನಾವು ನನ್ನ ಲಸಿಕೆಯನ್ನ ಕಂಡು ಹಿಡಿದಿದ್ದೇವೆ. ನಮ್ಮ ಲಸಿಕೆ ಇಡೀ ಮಾನವ ಕುಲಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು.

  • ಧಾರವಾಡ ಅಪಘಾತ, ಸಾವಿನ ಸಂಖ್ಯೆ 11ಕ್ಕೆ ಏರಿಕೆ- ಪ್ರಧಾನಿ ಮೋದಿ ಸಂತಾಪ

    ಧಾರವಾಡ ಅಪಘಾತ, ಸಾವಿನ ಸಂಖ್ಯೆ 11ಕ್ಕೆ ಏರಿಕೆ- ಪ್ರಧಾನಿ ಮೋದಿ ಸಂತಾಪ

    ಧಾರವಾಡ: ಟೆಂಪೋ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ.

    ಈ ಕುರಿತು ಕನ್ನಡದಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ ಎಂದು ತಿಳಿಸಿದ್ದಾರೆ.

    ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಘಟನೆ ನಡೆದಿದ್ದು, ಒಟ್ಟು 11 ಜನ ಸಾವನ್ನಪ್ಪಿದ್ದಾರೆ. 5 ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, 6 ಜನ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಬಸ್ ದಾವಣಗೆರೆಯಿಂದ ಗೋವಾಗೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಮೃತರನ್ನು ಡಾ.ವೀಣಾ ಪ್ರಕಾಶ ಮಟ್ಟಿಹಳ್ಳಿ(47), ವರ್ಷೀತಾ ವಿರೇಶ ಬಿರಾದಾರ (45), ಮಂಜುಳಾ ನಟೇಶ (47), ರಾಜೇಶ್ವರಿ ಶಿವಕುಮಾರ ಬಂಡೆಮ್ಮನವರ(40) ಎಲ್ಲರೂ ದಾವಣಗೆರೆಯವರಾಗಿದ್ದಾರೆ. ಟೆಂಪೋ ಚಾಲಕ ಮಲ್ಲಿಕಾರ್ಜುನ ತಿಮ್ಮಪ್ಪ ವಡಗಟ್ಟಿ(26) ರಾಣೇಬೆನ್ನೂರಿನವರೆಂದು ಗುರುತಿಸಲಾಗಿದೆ.

    ಒಟ್ಟು 16 ಜನ ಟೆಂಪೋದಲ್ಲಿ ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ 11 ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತರೆಲ್ಲರೂ ದಾವಣಗೆರೆಯ ಸೇಂಟ್ ಪಾಲ್ ಸ್ಕೂಲ್ ನ ಬ್ಯಾಚ್‍ಮೇಟ್‍ಗಳಾಗಿದ್ದು, ಎಲ್ಲರೂ ಸೇರಿ ಗೋವಾ ಟ್ರಿಪ್ ಗೆ ಹೊರಟಿದ್ದರು. ಡಿಐಜಿ ಡಿ.ರೂಪಾ ಸಹ ಇದೇ ಬ್ಯಾಚ್ ನವರು ಆಗಿದ್ದರು ಎನ್ನಲಾಗುತ್ತಿದೆ. ಅಲ್ಲದೆ ಡಿಕ್ಕಿ ರಭಸಕ್ಕೆ ಲಾರಿಯಲ್ಲಿದ್ದ ಕ್ಲೀನರ್ ಸಹ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಲಾರಿ ಚಾಲಕ ಪಾರಾಗಿದ್ದಾನೆ.

    ಈ ಘಟನೆಯಲ್ಲಿ ದಾವಣಗೆರೆ ಮಾಜಿ ಶಾಸಕ ಗುರುಸಿದ್ದನಗೌಡ ಸೊಸೆ ಕೂಡ ಸಾವನ್ನಪ್ಪಿದ್ದಾಳೆ. ಸದ್ಯ ಘಟನೆಯಲ್ಲಿ ಸಾವನ್ನಪ್ಪಿದ ಕೆಲವರನ್ನು ಗುರುತಿಸಲಾಗಿದೆ. ಇನ್ನುಳಿದವರನ್ನು ಸಂಬಂಧಿಕರು ದಾವಣಗೆರೆಯಿಂದ ಬಂದು ಗುರುತಿಸುತ್ತಿದ್ದಾರೆ. ಘಟನೆ ಬಗ್ಗೆ ಪ್ರಧಾನಿ ಮೋದಿ ಟ್ವಿಟ್ ಮಾಡಿ ಸಂತಾಪ ಸೂಚಿಸಿದ್ದಾರೆ.