ನವದೆಹಲಿ: ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಕಾಜಲ್ ಅಗರ್ವಾಲ್ ಗೆ ಪ್ರಧಾನಿ ನರೇಂದ್ರ ಮೋದಿ ಪತ್ರವೊಂದನ್ನು ಬರೆದಿದ್ದಾರೆ.
ಮೋದಿ ಮಾರ್ಚ್ 7ರಂದು ಪತ್ರ ಬರೆದಿದ್ದು, ಈ ಬಗ್ಗೆ ಕಾಜಲ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ. ಪತ್ರದಲ್ಲಿ ಕೇಂದ್ರ ಸರ್ಕಾರದ `ಬೇಟಿ ಬಚಾವೋ, ಬೇಟಿ ಪಡಾವೋ’ ಹಾಗೂ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿಗೆ ನ್ಯಾಷನಲ್ ನ್ಯೂಟ್ರಿಷನ್ ಮಿಷನ್ ಯೋಜನೆಗಳ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಕಾಜಲ್ ಅಗರ್ವಾಲ್ ಟ್ವಿಟ್ಟರ್ ನಲ್ಲಿ ಮೋದಿ ಬರೆದ ಪತ್ರವನ್ನು ಶೇರ್ ಮಾಡಿದ್ದಾರೆ. ಮಹಿಳಾ ದಿನಾಚರಣೆಗೆ ಶುಭ ಕೋರಿದ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಮೆಚ್ಚಿಕೊಂಡಿರುವ ನಟಿ, ತಾವು ಕೂಡ ಬೆಂಬಲ ನೀಡುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಬರೆದ ಪತ್ರದ ಜೊತೆ ” ಈ ಮಸೂದೆಗಳು ಮತ್ತು ಯೋಜನೆಗೆಳು ತುಂಬಾ ಪ್ರೋತ್ಸಾಹದಾಯಕವಾಗಿದ್ದು, ನಿಜಕ್ಕೂ ನಮ್ಮ ವ್ಯವಸ್ಥೆಗಳಲ್ಲಿ ಬದಲಾವಣೆ ತರುತ್ತದೆ ಎಂದು ನಾನು ನಂಬಿದ್ದೇನೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಮಾರ್ಚ್ 8ರಂದು ಮಹಿಳಾ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿ ನ್ಯಾಷನಲ್ ನ್ಯೂಟಿಷನ್ ಮಿಷನ್ ಯೋಚನೆಗೆ ಚಾಲನೆ ನೀಡಿದ್ದರು. ನಟಿ ಕಾಜಲ್ ಅಗರ್ವಾಲ್ ಸದ್ಯ ಕ್ವೀನ್ ಚಿತ್ರದ ತಮಿಳು ರಿಮೇಕ್ `ಪ್ಯಾರಿಸ್ ಪ್ಯಾರಿಸ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಬೆಂಗಳೂರು: ಸಂಗೀತ ನಿರ್ದೇಶಕ ರಘು ದೀಕ್ಷಿತ್ ಪತ್ನಿ ನಾಟ್ಯ ಮಯೂರಿ ಎಂದು ಹೆಸರುವಾಸಿಯಾಗಿರುವ ಮಯೂರಿ ಉಪಾಧ್ಯಾಯ ಅವರಿಗೆ ಪ್ರಧಾನಿ ಮೋದಿಯಿಂದ ಒಂದು ವಿಷೇಶವಾದ ಉಡುಗೊರೆ ಸಿಕ್ಕಿದೆ.
ಮಯೂರಿ ಉಪಾಧ್ಯಾಯ ಅವರು ದೇಶದಾದ್ಯಂತ ಮಾತ್ರವಲ್ಲದೆ ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರತೀಯ ನೃತ್ಯವನ್ನು ಪ್ರದರ್ಶನ ಮಾಡಿ ಕಲೆಯ ಕಂಪನ್ನು ಪಸರಿಸುವ ಮೂಲಕ ನಾಟ್ಯ ಮಯೂರಿ ಎಂದು ಫೇಮಸ್ ಆದವರು.
ಮಯೂರಿ ತಮ್ಮದೇ ಆದ ನೃತ್ಯ ತಂಡವನ್ನ ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ನಾಟ್ಯವನ್ನ ಪ್ರದರ್ಶನ ಮಾಡುತ್ತಾರೆ. ಅಷ್ಟೇ ಅಲ್ಲದೆ ಸಿನಿಮಾಗಳಿಗೂ ಕೋರಿಯೋಗ್ರಫಿ ಮಾಡುತ್ತಾರೆ. ಜೊತೆಗೆ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ. ಮಯೂರಿ ಅವರಿಗೆ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಕಡೆಯಿಂದ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ಈ ಬಗ್ಗೆ ಅವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಪ್ರಧಾನಿ ಕಡೆಯಿಂದ ಮೇಕ್ ಇನ್ ಇಂಡಿಯಾ ಥೀಮ್ ನಲ್ಲಿ ಸಿದ್ಧವಾಗುವ ಕೈ ಗಡಿಯಾರವನ್ನ ಮಯೂರಿ ಅವರಿಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಉಡುಗೊರೆಯನ್ನ ಪಡೆದ ಮಯೂರಿ ಈ ಬಗ್ಗೆ ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ.
“ನಮ್ಮ ಪ್ರಧಾನಿ ಮೋದಿ ಅವರ ಅಮೂಲ್ಯ ಕೊಡುಗೆ ಇದು. ಅವರಿಂದ ಉಡುಗೊರೆ ಬಂದಿರುವುದು ಬೆಲೆ ಕಟ್ಟಲು ಸಾಧ್ಯವಾಗದೆ ಇರುವಂತದ್ದು” ಎಂದು ಅವರು ಟ್ವೀಟ್ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಮಯೂರಿ ಅವರ ತಂಡದಿಂದ ನೃತ್ಯವನ್ನ ಪ್ರದರ್ಶನ ಮಾಡಲಾಗಿತ್ತು. ಆದ್ದರಿಂದ ಪ್ರಧಾನಿ ಮೋದಿ ಅವರು ಈ ಉಡುಗೊರೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ 75ನೇ ಜನ್ಮದಿನ. 5 ದಶಕಗಳ ಹೋರಾಟ ರಾಜಕಾರಣ ಮಾಡಿಕೊಂಡು ಬಂದಿರುವ ಬಿಎಸ್ ಯಡಿಯೂರಪ್ಪಗೆ ಈ ಹುಟ್ಟುಹಬ್ಬ ವಿಶೇಷ ಮತ್ತು ಮಹತ್ವದ್ದಾಗಿದೆ.
ಬಿಎಸ್ ಯಡಿಯೂರಪ್ಪರ 75ನೇ ಹುಟ್ಟುಹಬ್ಬವನ್ನು ರೈತ ಸಮಾವೇಶದ ಮೂಲಕ ವಿಶೇಷವಾಗಿ ಆಚರಿಸಲು ರಾಜ್ಯ ಬಿಜೆಪಿ ಮುಂದಾಗಿದೆ. ಮಾಯಕೊಂಡ ಕ್ಷೇತ್ರದ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ರಂಗಸ್ವಾಮಿ ನಿವಾಸಕ್ಕೆ ಬಿಎಸ್‍ವೈ ಇಂದು ಭೇಟಿ ನೀಡಲಿದ್ದಾರೆ. ರಂಗಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಸಮಾವೇಶದ ಸ್ಥಳಕ್ಕೆ ಆಗಮಿಸಲಿದ್ದಾರೆ.
ಬಳಿಕ ದಾವಣಗೆರೆಯ ರೈತ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಪಾಲ್ಗೊಳ್ಳಲಿದ್ದು, ಈ ವೇಳೆ ಲಕ್ಷಾಂತರ ರೈತರೊಂದಿಗೆ ಬಿಎಸ್‍ವೈ ತಮ್ಮ 75ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಲ್ಲದೇ ಹುಟ್ಟು ಹಬ್ಬದ ಪ್ರಯುಕ್ತ ಬಿಎಸ್ ಯಡಿಯೂರಪ್ಪರಿಗೆ ಪ್ರಧಾನಿ ನರೇಂದ್ರ ಮೋದಿ 4 ಕೆಜಿ ತೂಕದ ತೇಗದ ನೇಗಿಲು ನೀಡಿ ಸನ್ಮಾನ ಮಾಡಲಿದ್ದಾರೆ. ಹಾಗಾಗಿ ಬಿಎಸ್‍ವೈ 75 ನೇ ಹುಟ್ಟುಹಬ್ಬ ವಿಶೇಷವಾದದ್ದು ಎಂದು ಆಪ್ತರು ಹೇಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯದ 6028 ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ಕಾರ್ಯಕರ್ತರು ಮುಷ್ಠಿ ಅಕ್ಕಿ ಅಭಿಯಾನ ನಡೆಸಲಿದ್ದಾರೆ. ಪ್ರಧಾನಿ ಮೋದಿಯ ಇಂದಿನ ಭಾಷಣ ಕುತೂಹಲ ಕೆರಳಿಸಿದ್ದು, ರೈತರ ಸಮಸ್ಯೆ, ಮಹದಾಯಿ ವಿವಾದ, ರೈತರ ಸಾಲಮನ್ನಾದ ಬಗ್ಗೆ ಮಾತನಾಡ್ತಾರಾ ಕಾದು ನೋಡಬೇಕಿದೆ. ಇನ್ನು ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾವೇರಿ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಇತರೆ ಜಿಲ್ಲೆಗಳ ರೈತರನ್ನ ದೃಷ್ಟಿಯಲ್ಲಿಟ್ಟುಕೊಂಡು ಮಧ್ಯ ಕರ್ನಾಟಕದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಇದನ್ನು ಓದಿ: ಮತ್ತೆ ರಾಜ್ಯಕ್ಕೆ ಮೋದಿ ಆಗಮನ, ದಾವಣಗೆರೆಯ ರೈತ ಸಮಾವೇಶದಲ್ಲಿ ಪ್ರಧಾನಿ ಭಾಗಿ
ಬೆಂಗಳೂರು,ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದು, ದಾವಣಗೆರೆಯಲ್ಲಿ ನಡೆಯುವ ರೈತ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಮೋದಿ ಅವರು ಇಂದು ಸಂಜೆ 4 ಗಂಟೆಗೆ ದಾವಣಗೆರೆಗೆ ಆಗಮಿಸಲಿದ್ದಾರೆ. ಬಳಿಕ ಸುಮಾರು ಒಂದು ಗಂಟೆ ಕಾಲ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ರೈತ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಹುಟ್ಟು ಹಬ್ಬದ ಪ್ರಯುಕ್ತ ಬಿಎಸ್ ಯಡಿಯೂರಪ್ಪರಿಗೆ 4 ಕೆಜಿ ತೂಕದ ತೇಗದ ನೇಗಿಲು ನೀಡಿ ಸನ್ಮಾನ ಮಾಡಲಿದ್ದಾರೆ. ಜೊತೆಗೆ ಮುಷ್ಠಿ ಅಕ್ಕಿ ಅಭಿಯಾನಕ್ಕೂ ಚಾಲನೆ ನೀಡಲಿದ್ದಾರೆ.
ರಾಜ್ಯದ ರೈತರಿಂದ ಮುಷ್ಠಿ ಅಕ್ಕಿ ಸಂಗ್ರಹಿಸಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಬಿಜೆಪಿ ನಾಯಕರು ಪ್ರತಿಜ್ಞೆ ಮಾಡಲಿದ್ದು, 15 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ರಾಜ್ಯದ 6028 ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ಕಾರ್ಯಕರ್ತರು ಮುಷ್ಠಿ ಅಕ್ಕಿ ಅಭಿಯಾನ ನಡೆಸಲಿದ್ದಾರೆ.
ಪ್ರಧಾನಿ ಮೋದಿಯ ಇಂದಿನ ಭಾಷಣ ತೀವ್ರ ಕುತೂಹಲ ಕೆರಳಿಸಿದ್ದು, ರೈತರ ಸಮಸ್ಯೆ, ಮಹದಾಯಿ ವಿವಾದ, ರೈತರ ಸಾಲಮನ್ನಾದ ಬಗ್ಗೆ ಮಾತನಾಡ್ತಾರಾ ಎಂದು ಕಾದು ನೋಡಬೇಕಿದೆ. ಇನ್ನು ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾವೇರಿ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಇತರೆ ಜಿಲ್ಲೆಗಳ ರೈತರನ್ನ ದೃಷ್ಟಿಯಲ್ಲಿಟ್ಟುಕೊಂಡು ಮಧ್ಯ ಕರ್ನಾಟಕದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನು ಓದಿ: Commission ಸರ್ಕಾರವನ್ನು ತೊಲಗಿಸಿ Mission ಸರ್ಕಾರವನ್ನು ತನ್ನಿ: ಪ್ರಧಾನಿ ಮೋದಿ
ಪ್ರಧಾನಿ ಮೋದಿ ವೇಳಾಪಟ್ಟಿ
* ಮಧ್ಯಾಹ್ನ 12.30ಕ್ಕೆ ದೆಹಲಿಯ ವಿಮಾನ ನಿಲ್ದಾಣದಿಂದ ಬಿಬಿಜೆ ಏರ್‍ಕ್ರಾಫ್ಟ್‍ನಲ್ಲಿ ಪ್ರಯಾಣ (ವಿಮಾನದಲ್ಲಿ ಊಟ)
* ಮಧ್ಯಾಹ್ನ 2.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
* ಮಧ್ಯಾಹ್ನ 3.00ಕ್ಕೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಹೊರಟು 3.55ಕ್ಕೆ ದಾವಣಗೆರೆಗೆ ಆಗಮನ
* ಸಂಜೆ 4.00ಕ್ಕೆ ರಸ್ತೆ ಮೂಲಕವೇ ರೈತ ಸಮಾವೇಶಕ್ಕೆ ಆಗಮನ
* ಸಂಜೆ 5.05ಕ್ಕೆ ಸಮಾವೇಶದ ವೇದಿಕೆಯಿಂದ ನಿರ್ಗಮಿಸಿ, ಹೆಲಿಪ್ಯಾಡ್‍ನತ್ತ
* ಸಂಜೆ 5.15ಕ್ಕೆ ದಾವಣಗೆರೆಯಿಂದ ಹೊರಟು ಸಂಜೆ 6.05ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
* ಸಂಜೆ 6.10ಕ್ಕೆ ಹುಬ್ಬಳ್ಳಿಯಿಂದ ನಿರ್ಗಮಿಸಿ, 8.35ಕ್ಕೆ ದೆಹಲಿ ತಲುಪಲಿರುವ ಪ್ರಧಾನಿ ಮೋದಿ (ವಿಮಾನದಲ್ಲೇ ಊಟ)
ಬಾಗಲಕೋಟೆ: ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆಯ ಎರಡನೇಯ ದಿನವು ಮುಂದುವರೆದಿದ್ದು ಇಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು.
ಜಿಲ್ಲೆಯ ಮುಳವಾಡದಲ್ಲಿ ಬೃಹತ್ ಜನಾಶೀರ್ವಾದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಮತ್ತೊಮ್ಮೆ ವಚನ ಹೇಳುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು. ಎಲ್ಲರಿಗು ಶರಣು ಶರಣಾರ್ಥಿ ಎಂದ ಅವರು, ಸಾವಿರಾರು ವರ್ಷದ ಇತಿಹಾಸವಿರುವ ಭಾರತ ದೇಶದಲ್ಲಿ ಕಾಂಗ್ರೆಸ್‍ಗೆ ನೂರು ವರ್ಷ ಪೂರ್ಣಗೊಳಿಸಿದೆ. ಇಂತಹ ಪಕ್ಷ ಇದೀಗ ಹೊಸದಾಗಿ ಕಾಣಿಸುತ್ತಿದೆ. ಪಕ್ಷಕ್ಕೆ ಹೊಸ ಚೈತನ್ಯ ಮೂಡಿದೆ. ಬಸವಣ್ಣನ ತತ್ವಗಳನ್ನ ನಾವು ಪಾಲಿಸುತ್ತಿದ್ದೇವೆ ಎಂದರು.
ಮೋದಿ ವಿರುದ್ಧ ವಾಗ್ದಾಳಿ: ರಾಹುಲ್ ಗಾಂಧಿ ತಮ್ಮ ಭಾಷಣದ ಉದ್ದಕ್ಕೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಆರೋಪಗಳ ಸುರಿಮಳೆಗೈದರು. ಪ್ರಧಾನಿಗಳ ಬಳಿ ನಾನು ದೇಶದ ರೈತರ ಸಾಲಮನ್ನಾ ಮಾಡಿ ಎಂದು ಕೇಳಿದೆ. ಆದರೆ ಅವರು ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಯುಪಿಎ ಸರ್ಕಾರದ ಕಾಲದಲ್ಲಿ 70 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿತ್ತು. ಆದರೆ ಮೋದಿ ಸರ್ಕಾರ ಇದಕ್ಕಿಂತ ಎರಡು, ಮೂರು ಪಟ್ಟು ಹಣವನ್ನ ಕೇವಲ ಹತ್ತು ಉದ್ಯಮಿಗಳಿಗೆ ನೀಡಿದೆ. ಪ್ರಧಾನಿ ಮೋದಿ ಅವರೇ ಹೀಗೆ ಏಕೆ ಮಾಡಿದ್ದೀರಾ ಎಂದು ಪ್ರಶ್ನಿಸಿದರೆ ಮೌನವನ್ನು ಉತ್ತರವಾಗಿ ನೀಡಿದರು ಎಂದು ರಾಹುಲ್ 30 ಸೆಕೆಂಡ್ ಮೌನವಾಗಿ ನಿಂತರು.
ರಾಹುಲ್ ಅವರು ತಮ್ಮ ಭಾಷಣ ವೇಳೆ ಬಸವಣ್ಣನವರ ವಚನವನ್ನು ಹೇಳಿ ಕೇಂದ್ರ ಸರ್ಕಾರದ ಕಾರ್ಯವನ್ನು ಟೀಕಿಸಿದರು. ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದಾರೆ. ಬಸವಣ್ಣ ನವರು ಕೆಲಸದಲ್ಲಿ ದೇವರನ್ನು ಕಾಣಿ ಎಂದು ಹೇಳಿದ್ದರು. ಆದರೆ ನೀವು ನುಡಿದಂತೆ ನಡೆದುಕೊಂಡಿದ್ದಿರಾ ಎಂದರು. ಪದೇ ಪದೇ ಬಸವಣ್ಣನವರ ವಚನವನ್ನು ಪ್ರಸ್ತಾಪಿಸಿ ಮೋದಿ ಜೀ ನೀವು ನುಡಿದಂತೆ ನಡೆದುಕೊಳ್ಳಿ ಎಂದರು.
ಪ್ರಧಾನಿ ಮೋದಿ ಅವರು ನೋಟ್ ಬ್ಯಾನ್ ಮಾಡಿದರು. ನೋಟ್ ಬ್ಯಾನ್ ಮಾಡುವ ಮೂಲಕ ಕಪ್ಪು ಹಣ ಹೊಂದಿದ್ದ ಕುಳಗಳು ವೈಟ್ ಮನಿ ಮಾಡಲು ಅವಕಾಶ ನೀಡಿದರು. ನೀರವ್ ಮೋದಿ 11,000 ಸಾವಿರ ಕೋಟಿ ರೂ. ತೆಗದುಕೊಂಡು ದೇಶ ಬಿಟ್ಟು ಓಡಿ ಹೋಗಿದ್ದಾನೆ. ಈ ಬಗ್ಗೆ ಇದುವರೆಗೂ ಮೋದಿ ನೀರವ್ ಮೋದಿ ಬಗ್ಗೆ ಮಾತನಾಡಿಲ್ಲ. ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದ ಅವರು ನಾಲ್ಕು ವರ್ಷದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದಾರೆ. ನುಡಿದಂತೆ ನಡೆಯಿರಿ ಎಂದು ಟಾಂಗ್ ನೀಡಿದರು.
ಇದಕ್ಕೂ ಮುನ್ನ ವಿಜಯಪುರದಲ್ಲಿ ಆಯೋಜಿಸಿರುವ “ವೃಕ್ಷಥಾನ್ 2018” ಹಾಫ್ ಮ್ಯಾರಥಾನ್‍ಗೆ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಬಳಿಕ ಬಾಗಲಕೋಟೆಯಲ್ಲಿ ಜಮಖಂಡಿ ಸಮೀಪದ ಚಿಕ್ಕಪಡಸಲಗಿ ಬ್ಯಾರೇಜ್ ವೀಕ್ಷಣೆ ಮಾಡಿ ಸಂವಾದ ನಡೆಸಿದರು. ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ದೇಶದಲ್ಲಿ ಕರ್ನಾಟಕ ನೀರಾವರಿಗೆ ಮೀಸಲಿಟ್ಟ ಹಣದಲ್ಲಿ ಮೂರನೇ ಸ್ಥಾನ ಪಡೆದಿದೆ. ಬಿಜೆಪಿ ಸರ್ಕಾರ ನೀಡಿದ ಹಣಕ್ಕಿಂತಲೂ ನಮ್ಮ ಸರ್ಕಾರ ಮೂರು ಪಟ್ಟು ಹೆಚ್ಚು ನೀಡಿದೆ ಎಂದರು. ನಂತರ ಬೀಳಗಿಯಲ್ಲಿ ಎಸ್.ಆರ್. ಪಾಟೀಲ್ ಒಡೆತನದ ಗಾಂಧಿ ವಸತಿ ಶಾಲೆಯನ್ನು ಉದ್ಘಾಟಿಸಿದರು. ವೇದಿಕೆ ಮೇಲೆ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೈಸೂರು: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಾರ್ಯವೈಖರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಮಹಾರಾಜ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಕ್ಷೇತ್ರದ ಸಂಸದರಾದ ಪ್ರತಾಪ ಸಿಂಹ ನಮ್ಮ ಬಳಿಗೆ ಯಾವಾಗಲೂ ಯಾವುದಾದರೂ ಯೋಜನೆ ಹಿಡಿದು ಬರುತ್ತಾರೆ. ನಮ್ಮನ್ನು ನೆಮ್ಮದಿಯಿಂದ ಕೂರಲು ಬಿಡಲ್ಲ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರು ಮೈಸೂರು ನಡುವೆ ಅಷ್ಟಪಥಗಳ ರಾಷ್ಟ್ರೀಯ ಹೆದ್ದಾರಿ ರಚನೆಗೆ ಕೇಂದ್ರ ಸರ್ಕಾರ ಅನುಮತಿಸಿದೆ ನೀಡಿರುವ ಬಗ್ಗೆ ತಿಳಿಸಿದರು. ಅಲ್ಲದೆ ಮೈಸೂರಿಗೆ ಹೊಸ ವಿಶ್ವದರ್ಜೆಯ ಸ್ಯಾಟಲೈಟ್ ರೈಲ್ವೆ ಸ್ಟೇಷನ್ ಅನ್ನು ನಾಗನಹಳ್ಳಿ ಬಳಿ ನಿರ್ಮಾಣ ಮಾಡಲಾಗುತ್ತದೆ. ಇದರಿಂದ 76 ರೈಲುಗಳು ಮೈಸೂರಿಗೆ ಆಗಮಿಸಲು ಹಾಗೂ ನಿರ್ಗಮಿಸಲು ಸಾಧ್ಯವಾಗುತ್ತದೆ ಎಂದರು. ಇದನ್ನೂ ಓದಿ: Commission ಸರ್ಕಾರವನ್ನು ತೊಲಗಿಸಿ Mission ಸರ್ಕಾರವನ್ನು ತನ್ನಿ: ಪ್ರಧಾನಿ ಮೋದಿ
ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕದಲ್ಲಿ ಬಂಡಲ್ ಬಂಡಲ್ ನೋಟುಗಳು ಸಿಗುತ್ತವೆ. ಡೈರಿಗಳು ಸಿಗುತ್ತವೆ. ಅವುಗಳಲ್ಲಿ ಏನೇನು ಬರೆದಿದೆ. ಎಷ್ಟೆಷ್ಟು ಹಂಚಿಕೆಯ ವಿವರಗಳಿವೆ ಎಂಬುವುದು ಯಾರಿಗೆ ಗೊತ್ತು. ಅಂತಹ ವ್ಯಕ್ತಿಗಳಿಗೆ ಬೆಂಬಲ ನೀಡಿದರೆ ಮೈಸೂರಿಗೆ ಕೆಟ್ಟ ಹೆಸರು ಬರುತ್ತದೆ. ಮೈಸೂರಿನಲ್ಲಿ ಹುಟ್ಟಿದ ವ್ಯಕ್ತಿ ಕೆಟ್ಟ ಕೆಲಸ ಮಾಡುವುದಿಲ್ಲ. ಆದರೆ ಆ ವ್ಯಕ್ತಿ ಇಲ್ಲಿ ಹುಟ್ಟಿ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ನೈತಿಕತೆ ಬಿಟ್ಟಿದ್ದಾರೆ. ಹಗರಣಗಳ ಮೇಲೆ ಹಗರಣ ಹೊರ ಬರುತ್ತಿದೆ. ಕೇಂದ್ರ ಸರ್ಕಾರ ಕೊಟ್ಟ ಅನುದಾನವನ್ನು ಬಳಕೆ ಮಾಡಿಕೊಳ್ಳದೇ ರಾಜಕಾರಣಕ್ಕಾಗಿ ಹಾಗೂ ಹೈಕಮಾಂಡ್ ನಾಯಕರನ್ನು ಖುಷಿ ಪಡಿಸಲು, ಅವರಿಗೆ ಕಾಣಿಕೆ ಸಲ್ಲಿಸಲು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೈಸೂರು: ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೋ ಅಷ್ಟು ದಿನ ಕರ್ನಾಟಕವನ್ನು ದಿವಾಳಿ ಮಾಡುತ್ತಿರುತ್ತದೆ. ಹೀಗಾಗಿ ಕಮೀಷನ್ ಸರ್ಕಾರವನ್ನು ತೊಲಗಿಸಿ ಮಿಷನ್ ಸರ್ಕಾರವನ್ನು ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ.
ಮಹಾರಾಜ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನದ ಅನುಸಾರ ನಡೆಯುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಇಲ್ಲಿ ಬೇರೆ ರೀತಿಯಲ್ಲಿ ಆಗುತ್ತದೆ. ನಾನು ಇಲ್ಲಿನ ಮುಖ್ಯಮಂತ್ರಿ ಹಾಗೂ ಅವರ ಪಕ್ಷವನ್ನು ಕೇಳಲು ಬಯಸುತ್ತೇನೆ. ಕಳೆದ 60 ವರ್ಷಗಳಿಂದ ನಿಮ್ಮ ಪಕ್ಷವೇ ಅಧಿಕಾರದಲ್ಲಿತ್ತು. ಜನರನ್ನು ಉದ್ರೇಕಿಸುವ ದಾರಿ ತಪ್ಪಿಸುವ ಕೆಲಸವನ್ನು ನೀವು ಈಗ ಮಾಡುತ್ತಿದ್ದಿರಲ್ಲ. ಐವತ್ತು ವರ್ಷಗಳಿಂದ ನಿಮ್ಮ ಬಾಯಿಗೆ ಬೀಗ ಹಾಕಿ ಕೂತಿದ್ದು ಏಕೆ? ಕರ್ನಾಟಕದಲ್ಲಿ ಸಣ್ಣ ಮನಸ್ಸಿನ ಜನ ಅಧಿಕಾರದಲ್ಲಿದ್ದಾರೆ. ಅವರಿಗೆ ಅಧಿಕಾರ ಮುಖ್ಯವೇ ಹೊರತು ಕರ್ನಾಟಕದ ಅಭಿವೃದ್ಧಿಯಲ್ಲ. ಇಂತಹಾ ಪಕ್ಷವನ್ನು ನಂಬಬಹುದೇ ಎಂದು ಪ್ರಶ್ನಿಸಿದರು.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರ 10% ಕಮಿಷನ್ ಸರ್ಕಾರ ಎಂದು ಹೇಳಿದ್ದಕ್ಕೆ ಬಹಳಷ್ಟು ಮಂದಿ ಕೋಪಗೊಂಡು ನನಗೆ ಪ್ರತಿಕ್ರಿಯಿಸಿದ್ದಾರೆ. ಈ ಕರ್ನಾಟಕ ಸರ್ಕಾರ ಹತ್ತು ಪರ್ಸೆಂಟ್ ಅಲ್ಲ ಅದಕ್ಕಿಂತ ಹೆಚ್ಚಿನ ಕಮಿಷನ್ ಸರ್ಕಾರ ಎಂದು ಹೇಳಿದ್ದರು. ಹೀಗಾಗಿ ನಿಮಗೆ ಕಮಿಷನ್ ಸರ್ಕಾರ ಬೇಕೆ ಅಥವಾ ಮಿಷನ್ ಸರ್ಕಾರ ಬೇಕೆ? ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದರೆ ರಾಜ್ಯದ ಅಭಿವೃದ್ಧಿಯ ಗುರಿ ಹೊಂದಿರುವ ಸರ್ಕಾರವಾಗಿ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರು.
ಕರ್ನಾಟಕದಲ್ಲಿ ಬಂಡಲ್ ಬಂಡಲ್ ನೋಟುಗಳು ಸಿಗುತ್ತವೆ. ಡೈರಿಗಳು ಸಿಗುತ್ತವೆ. ಅವುಗಳಲ್ಲಿ ಏನೇನು ಬರೆದಿದೆ. ಎಷ್ಟೆಷ್ಟು ಹಂಚಿಕೆಯ ವಿವರಗಳಿವೆ ಎಂಬುವುದು ಯಾರಿಗೆ ಗೊತ್ತು. ಅಂತಹ ವ್ಯಕ್ತಿಗಳಿಗೆ ಬೆಂಬಲ ನೀಡಿದರೆ ಮೈಸೂರಿಗೆ ಕೆಟ್ಟ ಹೆಸರು ಬರುತ್ತದೆ. ಮೈಸೂರಿನಲ್ಲಿ ಹುಟ್ಟಿದ ವ್ಯಕ್ತಿ ಕೆಟ್ಟ ಕೆಲಸ ಮಾಡುವುದಿಲ್ಲ. ಆದರೆ ಆ ವ್ಯಕ್ತಿ ಇಲ್ಲಿ ಹುಟ್ಟಿ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ನೈತಿಕತೆ ಬಿಟ್ಟಿದ್ದಾರೆ. ಹಗರಣಗಳ ಮೇಲೆ ಹಗರಣ ಹೊರ ಬರುತ್ತಿದೆ. ಕೇಂದ್ರ ಸರ್ಕಾರ ಕೊಟ್ಟ ಅನುದಾನವನ್ನು ಬಳಕೆ ಮಾಡಿಕೊಳ್ಳದೇ ರಾಜಕಾರಣಕ್ಕಾಗಿ ಹಾಗೂ ಹೈಕಮಾಂಡ್ ನಾಯಕರನ್ನು ಖುಷಿ ಪಡಿಸಲು, ಅವರಿಗೆ ಕಾಣಿಕೆ ಸಲ್ಲಿಸಲು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮುದ್ರಾ ಬ್ಯಾಂಕ್ ಯೋಜನೆ, ಯುವ ಜನತೆಗೆ ಯಾವುದೇ ಗ್ಯಾರಂಟಿ ಕೇಳದೆ ಸ್ವಯಂ ಉದ್ಯೋಗಕ್ಕೆ ಸಾಲ ನೀಡಲಾಗಿದೆ. ಆದರೆ ಕರ್ನಾಟಕ ಸರ್ಕಾರಕ್ಕೆ ಇದರ ಬಗ್ಗೆ ಗಮನವೇ ಇಲ್ಲ. 2022 ರ ವೇಳೆಗೆ ಎಲ್ಲಾ ನಿರಾಶ್ರಿತರಿಗೂ ಸ್ವಂತ ಮನೆ ಸಿಗಬೇಕು ಎನ್ನುವ ಗುರಿ ನಮ್ಮದು. ಸೂರಿಲ್ಲದವರಿಗೆ ಸೂರು, ಉದ್ಯೋಗ ನಿರ್ಮಾಣದ ಕನಸಿನೊಂದಿಗೆ ನಾವು ಹೊರಟಿದ್ದೇವೆ. ಮನೆಯಿಲ್ಲದವರಿಗೆ ಮನೆ ಕಟ್ಟಿಕೊಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರ ಅದಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಕರ್ನಾಟಕದಲ್ಲಿ ಸ್ವಂತ ಮನೆಯಿಲ್ಲದ ಬಡವರು, ಮಧ್ಯಮ ವರ್ಗದವರು ಇರದ ಪರಿಸ್ಥಿತಿ ನಿರ್ಮಾಣವಾಗಬೇಕು. ಅದಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತನ್ನಿ ಎಂದರು.
ನಾಲ್ಕು ಕೋಟಿ ಜನರು ಇಂದಿಗೂ 18ನೇ ಶತಮಾನದಲ್ಲಿ ಇರುವಂತೆ ಜೀವಿಸುತ್ತಿದ್ದಾರೆ. ಕಳೆದ ಅರವತ್ತು ವರ್ಷಗಳಿಂದ ನಿರಂತರ ಆಡಳಿತ ನಡೆಸಿದವರ ಕಾರಣ ಇಂದಿಗೂ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲ. ಹಿಂದೆ 2 ಕಿ.ಮೀ ದೂರದಲ್ಲಿ ವಿದ್ಯುತ್ ತಂತಿ ಇದ್ದರೂ ಮನೆಗೆ ಬರುತ್ತಿರಲಿಲ್ಲ. ಆದರೆ ಇಗ ಬದಲಾಗಿದೆ. ಈಗ ಮನೆ ದೂರದಲ್ಲಿದ್ದರೂ ಮನೆ ಮನೆಗೆ ವಿದ್ಯುತ್ ಸಂಪರ್ಕ ನೀಡುತ್ತೇವೆ. ಇದರಿಂದಾಗಿ ಈಗ ಆ ಮನೆಯ ಮಕ್ಕಳು ವಿದ್ಯುತ್ ದೀಪದ ಅಡಿ ಓದುತ್ತಿದ್ದಾರೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ವಿವರಿಸಿದರು.
ಸಂಸದರನ್ನು ಹೊಗಳಿದ್ರು: ನಿಮ್ಮ ಕ್ಷೇತ್ರದ ಸಂಸದರಾದ ಪ್ರತಾಪ ಸಿಂಹ ನಮ್ಮ ಬಳಿಗೆ ಯಾವಾಗಲೂ ಯಾವುದಾದರೂ ಯೋಜನೆ ಹಿಡಿದು ಬರುತ್ತಾರೆ. ನಮ್ಮನ್ನು ನೆಮ್ಮದಿಯಿಂದ ಕೂರಲು ಬಿಡಲ್ಲ. ಬೆಂಗಳೂರು ಮೈಸೂರು ನಡುವೆ ಅಷ್ಟಪಥಗಳ ರಾಷ್ಟ್ರೀಯ ಹೆದ್ದಾರಿ ರಚನೆಗೆ ಕೇಂದ್ರ ಸರ್ಕಾರ ಅನುಮತಿಸಿದೆ. ಅಲ್ಲದೆ ಮೈಸೂರಿಗೆ ಹೊಸ ವಿಶ್ವದರ್ಜೆಯ ಸ್ಯಾಟಲೈಟ್ ರೈಲ್ವೆ ಸ್ಟೇಷನ್ ಅನ್ನು ನಾಗನಹಳ್ಳಿ ಬಳಿ ನಿರ್ಮಾಣ ಮಾಡಲಾಗುತ್ತದೆ. ಇದರಿಂದ 76 ರೈಲುಗಳು ಮೈಸೂರಿಗೆ ಆಗಮಿಸಲು ಹಾಗೂ ನಿರ್ಗಮಿಸಲು ಸಾಧ್ಯವಾಗುತ್ತದೆ ಎಂದರು.
ಹಿಂದಿನ ಸರ್ಕಾರಗಳು ಜನರ ಕಣ್ಣಿಗೆ ಮಣ್ಣೆರೆಚಿವೆ. ಹಿಂದೆ ಇಷ್ಟೊಂದು ಮಾಧ್ಯಮಗಳು ಮೊದಲಾದವು ಇರಲಿಲ್ಲ. ಅವರನ್ನು ಹೇಳುವವರು ಕೇಳುವವರು ಇರಲಿಲ್ಲ. ರೈಲ್ವೆ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಹಲವು ಯೋಜನೆಗಳು ಜಾರಿಯೇ ಆಗಿರಲಿಲ್ಲ. ಹಾಗಾಗಿಯೇ ಪ್ರತ್ಯೇಕ ರೈಲ್ವೆ ಬಜೆಟ್ ರದ್ದು ಮಾಡಿ. ಅಂದು ಘೋಷಣೆಯಾಗಿದ್ದ ರೈಲ್ವೆ ಯೋಜನೆಗಳನ್ನು ಹುಡುಕಿ ಈಗ ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದರು.
ಇಂದು ಬೆಂಗಳೂರು-ಮೈಸೂರು ರೈಲ್ವೇ ವಿದ್ಯುದ್ದೀಕರಣ ಯೋಜನೆ ಪೂರ್ಣಗೊಂಡು ಯೋಜನೆಗೆ ಚಾಲನೆ ನೀಡಲಾಗಿದೆ. ಮೈಸೂರು-ಉದಯಪುರ ಮೈಸೂರು ಕ್ವೀನ್ ರೈಲು ಲೋಕಾರ್ಪಣೆ ಮಾಡಿದ್ದೇವೆ. ರೈಲ್ವೇ ಆಧುನೀಕರಣ ಹಾಗೂ ಪ್ರಗತಿಯ ತೀವ್ರಗತಿಗೆ ಆದ್ಯತೆ ನೀಡಲಾಗಿದೆ. ರೈಲ್ವೇ ಲೈನ್ ಡಬ್ಲಿಂಗ್ ಅದರಲ್ಲಿ ಒಂದು ಭಾಗ. ಬಡವರ ಅಭ್ಯುದಯಕ್ಕೆ ರೈಲ್ವೇ ಪ್ರಗತಿ ಅಗತ್ಯ. ನಾಲ್ಕು ವರ್ಷದಿಂದ ರೈಲ್ವೇ ಯೋಜನೆಗಳು ತೀವ್ರಗತಿ ಪಡೆದುಕೊಂಡಿದೆ ಎಂದರು.
ಮೈಸೂರು-ಉದಯಪುರ ನಡುವಿನ ರೈಲ್ವೇ ಯೋಜನೆ ಜಾರಿ ಎಂದರೆ ಕರ್ನಾಟಕ ಮತ್ತು ರಾಜಸ್ಥಾನ ನಡುವೆ ನೇರ ಸಂಪರ್ಕ ಕಲ್ಪಿಸಿದಂತೆ ಆಗುತ್ತದೆ. ಇದರಿಂದ ಎರಡೂ ಕಡೆಯ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ಅಲ್ಲದೇ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ಆಗುವುದರಿಂದ ಆಟೋ ರಿಕ್ಷಾ, ಟ್ಯಾಕ್ಸಿ, ಹೊಟೇಲ್ ನಿರ್ವಾಹಕ, ದೇವಸ್ಥಾನದ ಹೊರಗೆ ಪೂಜಾ ಸಾಮಾಗ್ರಿ ಮಾರುವವರು ಸೇರಿದಂತೆ ಸಣ್ಣಪುಟ್ಟ ಉದ್ಯೋಗ ಮಾಡುವವರ ಆದಾಯ ಹೆಚ್ಚಿಸುತ್ತದೆ ಎಂದರು.
ಹಿಂದೆಲ್ಲಾ ನೌಕರಿಗೆ ಸಂದರ್ಶನ ಮಾಡುವುದು ಎಂದರೆ ಹಣ ಹೊಡೆಯುವ ಮಾರ್ಗವಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿಫಾರಸ್ಸಿನ ಮೇಲೆ ಕೆಲಸಗಳು ಸಿಗುತ್ತಿತ್ತು. ಆದರೆ ನಮ್ಮ ಸರ್ಕಾರದಲ್ಲಿ ಮೆರಿಟ್ ಇದ್ದವರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಎಂದು ಹೇಳಿದರು.
ಮೋದಿ ತಮ್ಮ ಭಾಷಣದಲ್ಲಿ ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದ ಶಾಸಕ, ರೈತ ಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಸಂತಾಪ ವ್ಯಕ್ತಪಡಿಸಿದರು.
ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ರವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ.
ಭಾಷಣ ಆರಂಭದಲ್ಲಿ ಮೈಸೂರು ವಿಶೇಷತೆಗಳನ್ನು ಪ್ರಸ್ತಾಪಿಸಿದ ಮೋದಿ, ಮೈಸೂರಿನ ನನ್ನ ಪ್ರೀತಿಯ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು. ಚಾಮುಂಡೇಶ್ವರಿ ಮಾತೆಗೆ ಪ್ರಣಾಮಗಳು. ಮೈಸೂರಿನ ಅರಸರು, ಕುವೆಂಪು, ಸರ್.ಎಂ.ವಿಶ್ವೇಶ್ವರಯ್ಯ, ಸುತ್ತೂರು ಶ್ರೀಗಳು, ಬಾಲಗಂಗಾಧರಸ್ವಾಮಿಗಳಿಗೆ ನೆನೆದು ವಂದನೆ ತಿಳಿಸಿದರು. ಈ ವೇಳೆ ಮೈಸೂರು ರೇಷ್ಮೆ, ಶ್ರೀಗಂಧ, ಮೈಸೂರು ಮಲ್ಲಿಗೆ, ಮೈಸೂರುಪಾಕ್ ಇವೆಲ್ಲಾ ಜಗತ್ ಪ್ರಸಿದ್ಧವೋ ಹಾಗೇ ಮೈಸೂರು ಜನರು ಎಂದು ಹೊಗಳಿದರು.
PM @NarendraModi dedicates the electrified Mysuru-Bengaluru railway line to the nation & flagged off Palace Queen Humsafar Express between Mysuru & Udaipur. It will promote fast & environment-friendly rail service and will benefit passengers travelling to western states. pic.twitter.com/6ZjpeHbdlg
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಜೆಪಿ ಪಕ್ಷದ ನೂತನ ಕಚೇರಿಯನ್ನು ದೆಹಲಿಯಲ್ಲಿ ಉದ್ಘಾಟನೆ ಮಾಡಿದ್ದಾರೆ.
ನವದೆಹಲಿಯ ದೀನ್ ದಿಯಾಳ್ ಉಪಾಧ್ಯಾಯ ಮಾರ್ಗ್ 6ರಲ್ಲಿ ಬಿಜೆಪಿಯ ನೂತನ ಮುಖ್ಯ ಕಚೇರಿ ನಿರ್ಮಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷ ಪ್ರಮುಖ ನಾಯಕರು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ಸೂಚನೆಯಂತೆ ರಾಷ್ಟ್ರ ರಾಜಧಾನಿ ಕೇಂದ್ರ ಭಾಗದಲ್ಲಿರುವ ರಾಜಕೀಯ ಕಚೇರಿಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಇದರಂತೆ ಬಿಜೆಪಿ ಪಕ್ಷ ತನ್ನ ಕೇಂದ್ರ ಕಚೇರಿಯನ್ನು ಬದಲಾಯಿಸಿದೆ. 2016 ಆಗಸ್ಟ್ ನಲ್ಲಿ ಪ್ರಧಾನಿ ಮೋದಿ ನೂತನ ಕಚೇರಿಗೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಕೇವಲ 18 ತಿಂಗಳುಗಳಲ್ಲಿ ಭವ್ಯ ಕಚೇರಿ ನಿರ್ಮಾಣವಾಗಿದೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಪಕ್ಷದ ಕಚೇರಿ ನಿರ್ಮಾಣದಲ್ಲಿ ಶ್ರಮವಹಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ನಾಯಕರಿಗೆ ಧನ್ಯವಾದ ತಿಳಿಸಿದರು. ಅಲ್ಲದೇ ಪಕ್ಷದ ಬೆಳವಣಿಗೆಗೆ ತಮ್ಮ ಜೀವನವನ್ನು ಆರ್ಪಿಸಿದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರನ್ನು ಸ್ಮರಿಸಿದರು.
ವಿಶೇಷತೆಗಳು: ಕಟ್ಟದದಲ್ಲಿ ಪ್ರಮುಖವಾಗಿ ಎರಡು ವಿಭಾಗಗಳಿವೆ. ಮೊದಲ ಭಾಗದಲ್ಲಿ 3 ಮಹಡಿ, ಎರಡನೇ ಭಾಗದಲ್ಲಿ 7 ಅಂತಸ್ತಿನ ಸಂಕೀರ್ಣ ಕಟ್ಟಡ ಹೊಂದಿದೆ. ಇಲ್ಲಿ ಪ್ರಮುಖವಾಗಿ ಪಕ್ಷ ಮುಖಂಡರು ಸಭೆ ನಡೆಸಲು ಬೇಕಾದ ಸಭಾಂಗಣ, ಸಭಾ ಕೊಠಡಿ ಮತ್ತು ಟಿವಿ ಸ್ಟುಡಿಯೋ ಹೊಂದಿದೆ. ಕಚೇರಿಯಲ್ಲಿ ಆಧುನಿಕ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದೆ.
ಕೇಂದ್ರ ಕಚೇರಿಯಿಂದ ದೇಶದ ಎಲ್ಲಾ ರಾಜ್ಯಗಳ ಪಕ್ಷದ ಕಚೇರಿಗಳು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸುವ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಆಯಾ ರಾಜ್ಯಗಳ ಆರ್ಟ್ ಲೈಬ್ರೆರಿಯಲ್ಲಿ ಸಾಹಿತ್ಯ ಪುಸ್ತಕ ಹಾಗೂ ನೂತನ ಪತ್ರಿಕೆಗಳು ಹೊಂದಿರುತ್ತದೆ. ದೇಶದ ಎಲ್ಲಾ ರಾಜಕೀಯ ಪಕ್ಷಗಳ ಕೇಂದ್ರ ಕಚೇರಿಗಳಿಗಿಂತ ದೊಡ್ಡ ಕಚೇರಿಯನ್ನು ಬಿಜೆಪಿ ಈಗ ಹೊಂದಿದೆ. ಕೇಂದ್ರ ಕಚೇರಿಯೂ ಕಾರ್ಪೋರೆಟ್ ಕಂಪನಿಯ ಶೈಲಿಯಲ್ಲಿ ನಿರ್ಮಾಣವಾಗಿದೆ.
I want to thank Amit Bhai and his entire team, that worked hard to complete the work on the BJP HQ within the desired time frame: PM Modi at inauguration of BJP's new headquarters at Delhi's Deen Dayal Upadhyaya Marg pic.twitter.com/fASPNufHUt
Ours was a journey that began with greats such as Dr Shyama Prasad Mookerjee and Pandit Deendayal Upadhyaya. Generations of Karyakartas have given their life for the party: PM Modi pic.twitter.com/ii8wjxpSaP
PM Modi, along with BJP veteran LK Advani, inaugurates BJP's new headquarters at #Delhi's Deen Dayal Upadhyaya Marg. Amit Shah, Rajnath Singh, Sushma Swaraj & Murli Manohar Joshi also present, among others. pic.twitter.com/eCcXbWJq0g
ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಕೋಡಾ ಮಾಡುವುದನ್ನು ಉದ್ಯೋಗ ಎನ್ನುತ್ತಿದೆ. ಏಕೆಂದರೆ ಅವರು ರೈತರ ಸಮಸ್ಯೆ ಎಂದರೆ ಟೊಮೆಟೊ, ಪೊಟ್ಯಾಟೋ, ಆನಿಯನ್ ಅಷ್ಟೇ ಎಂದು ತಿಳಿದುಕೊಂಡಿದ್ದಾರೆ. ಅವರ ತಲೆಯಲ್ಲಿ ಅಷ್ಟೇ ಇದೇ ಎಂದು ಮತ್ತೊಮ್ಮೆ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡದ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರಕ್ಕೆ ನಮ್ಮನ್ನು ಆಳುವ ಶಕ್ತಿ ಇಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ದೇಶವನ್ನು ಆಳುವಷ್ಟು ಯೋಗ್ಯರಲ್ಲ. ಅವರ ತಲೆಯಲ್ಲಿ ಏನು ಇಲ್ಲ ಎನ್ನಲು ನಮ್ಮ ಬಳಿ ಪುರಾವೆ ಇವೆ. ದೇಶದ ಆರ್ಥಿಕ ಸ್ಥಿತಿ ಬಗ್ಗೆ ನಯ್ಯಾ ಪೈಸೆ ಬುದ್ಧಿ ಇಲ್ಲದಂತ ಇವರು ನಮ್ಮ ನಾಯಕರಾ? ಚುನಾವಣೆಯಲ್ಲಿ ಗೆದ್ದ ಬಳಿಕ ಅವರು ದೇಶದ ಸರ್ಕಾರ ಭಾಗವಾಗಬೇಕು. ಆದರೆ ಅವರು ತಮ್ಮ ಸಿದ್ಧಾಂತವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಧರ್ಮದ ಹೆಸರಿನಲ್ಲಿ ನಮ್ಮನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಂದು ಜಾತಿಯನ್ನು ಭೂಮಿಯಿಂದ ನಾಶ ಮಾಡಬೇಕು. ಜಾತ್ಯಾತೀತರಿಗೆ ಅಪ್ಪ ಅಮ್ಮ ಇಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳುತ್ತಾರೆ. ಅವರು ರಾಕ್ಷಸರಂತೆ ವರ್ತಿಸಿದರೂ ಅವರನ್ನು ಪಕ್ಷದಿಂದ ಉಚ್ಛಾಟಿಸಲ್ಲ. ಅದ್ದರಿಂದ ಅವರೂ ಕೂಡಾ ರಾಕ್ಷಸರೇ ಎಂದರು.
ನನ್ನ ತಾಯಿಯದ್ದು ಕ್ರೈಸ್ತ ಧರ್ಮ. ನನ್ನ ಪತ್ನಿ ಹಿಂದೂ. ಆದರೆ ನನಗೆ ಧರ್ಮದ ಬಗ್ಗೆ ಯೋಚನೆ ಮಾಡಲು ಸಮಯವಿಲ್ಲ. ಆದರೆ ಇವರು ಹೇಳಿದ ತಕ್ಷಣ ನಾನು ನನ್ನ ತಾಯಿಯನ್ನು ಪಾಕಿಸ್ತಾನಕ್ಕೆ ಕಳಿಸ್ಲಾ? ನಾನು ಜಾತ್ಯಾತೀತ. ನನ್ನ ರಕ್ತದ ಬಗ್ಗೆ ಮಾತನಾಡುತ್ತಿರಾ? ಮೊದಲು ನೀವು ಮೊದಲು ಹೊರಗೆ ಹೋಗಿ ಎಂದು ಹರಿಹಾಯ್ದರು.
ಸೊಂಟದ ಕೆಳಗಿನ ಭಾಷೆ ಮಾತನಾಡುವ ಸಂಸದ ಪ್ರತಾಪ ಸಿಂಹನ ಕೈಯಲ್ಲಿ ನಮ್ಮ ದೇಶ ಹೇಗೆ ಕೊಡಲಿ ಎಂದು ಪ್ರಶ್ನೆ ಬರುತ್ತೆ. ಅನಂತಕುಮಾರ ಹೆಗಡೆ ಅವರ ವಿರುದ್ಧ `ಅಂಬಾ..ಅಂಬಾ..ಹುಂಬಾ ಹುಂಬಾ’ ಚಳುವಳಿ ಮಾಡಿ ಎಂದು ಈ ವೇಳೇ ಯುವಕರಿಗೆ ಕರೆ ನೀಡಿದರು.
ಆರ್ ಎಸ್‍ಎಸ್ ನಂತಹ ಚಡ್ಡಿ ಹಾಕಿಕೊಂಡ ಒಂದು ಸಂಸ್ಥೆ ಮೂರು ದಿನದಲ್ಲಿ ಸೇನೆ ಕಟ್ಟುತ್ತಾರೆ ಅಂತೆ. ಪಾಕಿಸ್ತಾನದ ಜೊತೆ ಹೋರಾಟ ಮಾಡುತ್ತಾರೆ ಅಂತೆ. ಸಂವಿಧಾನ, ನ್ಯಾಯಾಲಯ ಹಾಗೂ ಆರ್ಮಿ ಬೇಕಾಗಿಲ್ಲ, ನಾವು ಹೇಳಿದ್ದೇ ನಿಜ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನನ್ನ ದೇಶಕ್ಕೆ ಕ್ಯಾನ್ಸರ್ ಬಂದಾಗ ನಾವು ಅದಕ್ಕೆ ಮೊದಲು ಚಿಕಿತ್ಸೆ ನೀಡಬೇಕು, ಹೊರತು ಕೆಮ್ಮಿಗೆ ಅಲ್ಲ. ಪಕೋಡಾ ಮಾರಿ 200 ರೂ. ಸಂಪಾದನೆ ಮಾರುವುದು ಉದ್ಯೋಗ ಎಂದಾದರೆ, ನನ್ನ ದೇಶದ ಹೆಣ್ಣು ಮಗಳು ಮೈಮಾರಿ ಸಂಪಾದನೆ ಮಾಡಿದರೆ ಉದ್ಯೋಗ ಎನ್ನುತ್ತೀರಾ ಎಂದು ಕಿಡಿಕಾರಿದರು.
ಮೇಕಪ್ ಹಾಕಿಕೊಂಡು ಬಂದ ನಟರನ್ನು ರಾಮ ಸೀತೆ ಎಂತಾ ಹೇಳುತ್ತೀರಾ, ಇದು ನಾನ್ ಸೆನ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನದಲ್ಲಿ ಪೂಜೆ ಮಾಡುವವರು ನಮ್ಮನ್ನ ಮನುಷ್ಯನ ಪೂಜೆ ಮಾಡಲು ಹೇಳುತ್ತಾರೆ. ನಮ್ಮನ್ನ ಮೋಸ ಮಾಡುತ್ತಿದ್ದಿರಾ. ಅನಂತಕುಮಾರ ಹೆಗ್ಡೆ ಸಂವಿಧಾನ ಬದಲಿಸುವ ಮಾತನ್ನು ಹೇಳುತ್ತಾರೆ ಅವರನ್ನು `ಶಟಪ್’ ಎಂದು ಹೇಳಲು ಇಂದಿನ ಯುವಕರಿಗೆ ಆಗುವುದಿಲ್ಲವಾ ಎಂದು ಪ್ರಶ್ನಿಸಿ ಹರಿಹಾಯ್ದರು.
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ ವಂಚನೆ ಬಯಲಿಗೆ ಬಂದ ಬೆನ್ನಲ್ಲೇ, ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಖ್ಯಾತ ಉದ್ಯಮಿ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿ ಅವರ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಗುರಿ ಮಾಡಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ತಮ್ಮ ಟ್ವೀಟ್ ನಲ್ಲಿ ಭಾರತವನ್ನು ಲೂಟಿ ಮಾಡಲು ಮಾರ್ಗದರ್ಶನ ನೀಡಿ ಎಂದು ನೀರವ್ ಮೋದಿ ಎಂದು ಬರೆದಿದ್ದು, ಇತ್ತೀಚೆಗೆ ಪ್ರಧಾನಿ ಮೋದಿ ಅವರು ಸ್ವಿಜರ್‍ಲ್ಯೆಂಡ್ ದಾವೋಸ್ ನಲ್ಲಿ ಭಾಗವಹಿಸಿದ್ದ ವಿಶ್ವ ಆರ್ಥಿಕ ಒಕ್ಕೂಟ ಶೃಂಗ ಸಭೆಯಲ್ಲಿ ನೀರವ್ ಭಾಗವಹಿಸಿದ್ದ ವಿಚಾರವನ್ನು ಉಲ್ಲೇಖಿಸಿದ್ದಾರೆ.
ರಾಹುಲ್ ಟ್ವೀಟ್ ಗೂ ಕೆಲ ಸಮಯದ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನೀರವ್ ಮೋದಿ ಅಥವಾ ವಿಜಯ್ ಮಲ್ಯ ಬಿಜೆಪಿಯ ಸಹಕಾರವಿಲ್ಲದೇ ದೇಶವನ್ನು ತೊರೆದರು ಎಂಬುದನ್ನು ನಂಬಲು ಸಾಧ್ಯವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.
ಮೂಲಗಳ ಪ್ರಕಾರ ಪಿಎನ್‍ಬಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ಕೇಂದ್ರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳು ನೀರವ್ ಹಾಗೂ ಅವರ ಸಹೋದರ, ಪತ್ನಿ ಮತ್ತು ಕೆಲವರು ಬ್ಯಾಂಕ್ ಗೆ ಮೋಸ ಮಾಡಿದ್ದು, ಇದರಿಂದ ನಷ್ಟ ಉಂಟಾಗಿದೆ ಎಂದು ಸಿಬಿಐ ಗೆ ದೂರು ನೀಡಿದೆ. ಪ್ರಸ್ತುತ ಉದ್ಯಮಿ ನೀರವ್ ಮೋದಿ ತಲೆ ಮರೆಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Guide to Looting India by Nirav MODI
1. Hug PM Modi 2. Be seen with him in DAVOS
Use that clout to:
A. Steal 12,000Cr B. Slip out of the country like Mallya, while the Govt looks the other way.
ಪ್ರಸ್ತುತ ಪ್ರಕರಣದಲ್ಲಿ ನೀರಜ್ ಅವರಿಗೆ ಸಂಬಂಧಿಸಿದ ಮುಂಬೈ, ಸೂರತ್ ಕಚೇರಿಗಳು ಸೇರಿದಂತೆ 10 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಅವ್ಯವಹಾರ ಕುರಿತು ಬುಧವಾರವಷ್ಟೇ ಬ್ಯಾಂಕ್ ಮಾಹಿತಿ ಬಹಿರಂಗ ಪಡಿಸಿತ್ತು. ಇನ್ನು ಅಕ್ರಮ ಹಣ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಿಎನ್‍ಬಿ ತನ್ನ 10 ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಮುಂಬೈ ಶಾಖೆಯಲ್ಲಿ 11,300 ಕೋಟಿ ರೂ. ಅಕ್ರಮ ವಹಿವಾಟು ನಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ತಮಗೇ ಬೇಕಾದ ಗ್ರಾಹಕರ ಜೊತೆ ವ್ಯವಹಾರ ನಡೆಸಿ ಈ ಅಕ್ರಮ ಎಸಗಲಾಗಿದೆ ಎಂದು ಪಿಎನ್‍ಬಿ ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿತ್ತು. ಪಿಎನ್‍ಬಿ ಗ್ರಾಹಕರಿಗೆ ಬೃಹತ್ ಪ್ರಮಾಣದಲ್ಲಿ ಸಾಲ ನೀಡುವ ದೇಶದ ಎರಡನೇ ಅತೀ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಅಷ್ಟೇ ಅಲ್ಲದೇ ತನ್ನ ಆಸ್ತಿಯಿಂದಾಗಿ ದೇಶದ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ. ಇದನ್ನೂ ಓದಿ: ಪಿಎನ್‍ಬಿಯಲ್ಲಿ 11,300 ಕೋಟಿ ರೂ. ಭಾರೀ ಅಕ್ರಮ!
ಪಿಎನ್‍ಬಿ 2016-17ರ ಅವಧಿಯಲ್ಲಿ ವಸೂಲಾಗದ 9,205 ಕೋಟಿ ರೂ. ಸಾಲದ ಮೊತ್ತವನ್ನು ವಜಾ ಮಾಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳಿಕ ಅತಿ ಹೆಚ್ಚು ಸಾಲದ ಮೊತ್ತವನ್ನು ವಜಾಗೊಳಿಸಿದ ಎರಡನೇ ಬ್ಯಾಂಕ್ ಪಿಎನ್‍ಬಿ ಆಗಿದೆ. ಎಸ್‍ಬಿಐ ವಸೂಲಾಗದ 20,339 ಕೋಟಿ ರೂ. ಸಾಲದ ಮೊತ್ತವನ್ನು ವಜಾಗೊಳಿಸಿತ್ತು.
Is it possible to believe that he or vijay mallya left the country without active connivance of BJP govt? https://t.co/6iMFf9VAkF
Govt has taken note of it, certain steps are being taken. It is not in my domain and it is not right for me to comment on it further : Lok Ranjan, Joint Secretary, DFS on PNB- Nirav Modi fraud case pic.twitter.com/Yx0kSmy01m
No official business delegation travelled with PM Modi. There was no meeting between #NiravModi and PM Narendra Modi in Davos, it was just a photo opportunity at an event: Sources