Tag: prime minister modi

  • ಪ್ರಧಾನಿ ಮೋದಿಗಾಗಿ ಬೆಳ್ಳಿ ಗದೆ ಸಿದ್ಧತೆ

    ಪ್ರಧಾನಿ ಮೋದಿಗಾಗಿ ಬೆಳ್ಳಿ ಗದೆ ಸಿದ್ಧತೆ

    ಕೊಪ್ಪಳ: ಇಂದು ಭತ್ತದ ನಾಡು ಗಂಗಾವತಿಗೆ ಪ್ರಧಾನಿ ಮೋದಿ ಅವರು ಭೇಟಿ ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹನುಮ ಮಾಲಾಧಾರಿಗಳು ಅವರಿಗಾಗಿ ಬೆಳ್ಳಿ ಗದೆ ಉಡುಗೊರೆ ಕೊಡುತ್ತಿದ್ದಾರೆ.

    ಪ್ರಧಾನಿ ಮೋದಿ ಅವರಿಗೆ ಕೊಡಲು 1,650 ಗ್ರಾಂ. ಬೆಳ್ಳಿ ಗದೆ ಗಿಫ್ಟ್ ಈಗಾಗಲೇ ಸಿದ್ಧವಾಗಿದೆ. ಈ ಗದೆಯನ್ನು ಕೊಲ್ಲಾಪೂರದಲ್ಲಿ ಸಿದ್ಧಪಡಿಸಲಾಗಿದೆ. ಅಷ್ಟೇ ಅಲ್ಲದೇ ಹನುಮ ಮಾಲಾಧಾರಿಗಳು ಗದೆಗೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಪ್ರಧಾನಿ ಮೋದಿ ಗೆದ್ದು ಬರಲಿ ಎಂದು ವಿಶೇಷ ಪೂಜೆ ಮಾಡಿಸಿದ್ದಾರೆ.

    ಹನುಮ ಹುಟ್ಟಿದ ಸ್ಥಳ ಎಂದು ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಹೆಸರಾಗಿದೆ. ಹೀಗಾಗಿ ಹನುಮ ಹುಟ್ಟಿದ ನಾಡು ಹಿನ್ನೆಲೆಯಲ್ಲಿ ಮೋದಿ ಅವರಿಗೆ ಬೆಳ್ಳಿ ಗದೆ ಗಿಫ್ಟ್ ಕೊಡಲಾಗುತ್ತಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ಹನುಮ ಮಾಲಾಧಾರಿಗಳು ವಿಶೇಷ ಪೂಜೆ ಮಾಡಿಸಿದ್ದಾರೆ.

    ಇಂದು ಮಧ್ಯಾಹ್ನ ಮೂರು ಗಂಟೆಗೆ ಗಂಗಾವತಿಯ ಕನಕಗಿರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. ಸಂಸದ ಸಂಗಣ್ಣ ಕರಡಿ ಪರ ಮತಯಾಚನೆ ಮಾಡಲಿದ್ದಾರೆ. ಸುಮಾರು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಗಳಿವೆ. ಹೀಗಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ಆಯೋಜನೆ ಮಾಡಲಾಗಿದೆ.

    ಈ ಹಿಂದೆ ಕೇಂದ್ರ ಹಣಕಾಸು ರಾಜ್ಯ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಅನೇಕ  ರಾಜಕೀಯ ಮುಖಂಡರು ಈ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ್ದರು.

  • ಮೋದಿ ಟೀಕಿಸೋ ಭರದಲ್ಲಿ ಪಾಕ್ ಮೇಲೆ ಪ್ರೀತಿ ತೋರಿದ ಕಾಂಗ್ರೆಸ್ ಶಾಸಕ

    ಮೋದಿ ಟೀಕಿಸೋ ಭರದಲ್ಲಿ ಪಾಕ್ ಮೇಲೆ ಪ್ರೀತಿ ತೋರಿದ ಕಾಂಗ್ರೆಸ್ ಶಾಸಕ

    ಚಿಕ್ಕಮಗಳೂರು: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಜ್ಜನ, ಸೌಮ್ಯ ವ್ಯಕ್ತಿತ್ವ ಹೊಂದಿರುವವನು. ಪಾಕ್‍ನೊಳಗೆ ಬಿದ್ದ ಭಾರತದ ಪೈಲಟ್‍ನನ್ನ ವಾಪಸ್ ಕಳಿಸಿದ್ದಾರೆ ಎಂದರೆ ಅದು ಅವರ ಸೌಜನ್ಯ, ಭಯಕ್ಕಲ್ಲ ಎಂದು ಪಾಕಿಸ್ತಾನ ಪರ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮೃದು ಧೋರಣೆ ತೋರಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಎನ್.ಆರ್.ಪುರ ತಾಲೂಕಿನ ಮೆಣಸೂರಿನಲ್ಲಿ ಮತಯಾಚನೆ ಮಾಡುವ ವೇಳೆ ಪ್ರಧಾನಿ ಮೋದಿಯನ್ನ ಟೀಕಿಸುವ ಭರದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರನ್ನ ಹಾಡಿ ಹೊಗಳಿದ್ದಾರೆ. ಆದ್ದರಿಂದ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಇದೇ ಆಡಿಯೋದಲ್ಲಿ ಗೋವಾದಿಂದ 2 ಬಾಟಲಿ ವಿಸ್ಕಿ ತಂದರೆ ದಂಡ ಹಾಕುತ್ತಾರೆ. 350 ಕೆ.ಜಿ. ಆರ್.ಡಿ.ಎಕ್ಸ್ ನ ಜೀಪಿನಲ್ಲಿ ತಂದು ಸೈನಿಕರ ಬಸ್ಸಿಗೆ ಗುದ್ದಿ ಸೈನಿಕರ ಹತ್ಯೆ ಮಾಡುತ್ತಾರೆ. ಮೋದಿಯವರೆ ಆಗ ಎಲ್ಲೋಗಿತ್ತು ನಿಮ್ಮ ಭದ್ರತೆ, 56 ಇಂಚಿನ ಎದೆ, ನಿಮ್ಮ ಶೌರ್ಯ ಎಂದು ಮೋದಿಯನ್ನ ಟೀಕಿಸುವಾಗ ಪಾಕಿಸ್ತಾನದ ಅಭಿಮಾನಿಯಾಗಿದ್ದಾರೆ. ಮೋದಿ ನೋಡಿ ಪಾಕಿಸ್ತಾನ ಹೆದರಲ್ಲ. ನಮ್ಮ ದೇಶದ ಜನ, ಸೈನಿಕರು ಹಾಗೂ ಭಾವನೆಗಳಿಗೆ ಬೇರೆ ದೇಶಗಳು ಬೆಲೆ ಕೊಡುತ್ತಿವೆ ಎಂದು ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನೀವು ಅಧಿಕಾರದಲ್ಲಿದ್ದಾಗಲೇ ಹಲವು ದಾಳಿಗಳಾಗಿದ್ವು. ಆಗ ಎಲ್ಲೋಗಿತ್ತು ನಿಮ್ಮ ಪೌರುಷ, 56 ಇಂಚಿನ ಎದೆಗಾರಿಕೆ. ನಮ್ಮ ದೇಶದ ಭದ್ರತೆ ಹಾಗೂ ಸೈನಿಕರ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ. ಪ್ರಧಾನಿ ಕುರ್ಚಿ ಅಂದರೆ ಮಹಾರಾಜನಿದ್ದಂತೆ, ನೀವು ಮಹಾರಾಜನಂತೆ ನಡೆದುಕೊಳ್ಳಬೇಕಿತ್ತು. ನಿಮ್ಮ ಸರ್ಕಾರ ಮಸೀದಿ ಹಾಗೂ ಚರ್ಚ್ ಕಟ್ಟಲಿಲ್ಲ. ನಮ್ಮ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಸರ್ಕಾರ ಮಸೀದಿ ಹಾಗೂ ಕ್ರೈಸ್ತ ದೇವಾಲಯಗಳನ್ನ ನಿರ್ಮಾಣ ಮಾಡಿಕೊಟ್ಟಿದ್ದೇವೆ ಎಂದು ಮೋದಿ ಟೀಕಿಸುವ ಭರದಲ್ಲಿ ಪಾಕಿಸ್ತಾನವನ್ನ ಹೊಗಳಿ ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿದ್ದಾರೆ.

    ಸ್ಥಳೀಯ ಮಟ್ಟದಲ್ಲಿ ಆಡಿಯೋ ವೈರಲ್ ಆಗಿದ್ದು, ಇದೂವರೆಗೂ ಶಾಸಕರು ಯಾವುದೇ ಸ್ಪಷ್ಟನೆ ನೀಡಿಲ್ಲ.

  • ಮೋದಿ ಸುನಾಮಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್!

    ಮೋದಿ ಸುನಾಮಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್!

    ಬಾಗಲಕೋಟೆ/ಕೊಪ್ಪಳ: ಟಿಕೆಟ್ ಸಿಕ್ಕ ದಿನದಿಂದಲೇ ಬಾಗಲಕೋಟೆ, ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೈ ಮುಖಂಡರು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಕೈ ಅಭ್ಯರ್ಥಿ ಹಾಗೂ ಮುಖಂಡರಿಗೆ ಪ್ರಧಾನಿ ಮೋದಿ ಭಯ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋದರಿ ಪ್ರಿಯಾಂಕ ಗಾಂಧಿ ಕರೆತರುವ ಪ್ಲಾನ್ ಮಾಡಲಾಗಿದೆ.

    ದಿನದಿಂದ ದಿನಕ್ಕೆ ರಾಜ್ಯದಲ್ಲಿ ಲೋಕಸಭೆಯ ಕಾವು ಹೆಚ್ಚಾಗುತ್ತಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ಈ ಮುಂಚೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಕಳೆದ ಎರಡು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಈ ಚುನಾವಣೆಯಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಮತ್ತಷ್ಟು ಸರಳ ಮಾಡಲು ಇಂದು ಗಂಗಾವತಿ ನಗರಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನೀರಿಕ್ಷೆ ಇದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಎಫೆಕ್ಟ್ ಆಗಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಇನ್ನು ಮೋದಿ ಕಾರ್ಯಕ್ರಮ ಗಂಗಾವತಿಯಲ್ಲಿ ನಡೆಯುವುದು ನಿರ್ಧಾರವಾಗುತ್ತಲೇ ಇತ್ತ ಕಾಂಗ್ರೆಸ್ ನಾಯಕರಿಗೆ ಟೆನ್ಶನ್ ಶುರುವಾಗಿದೆ. ಮೋದಿ ಕಾರ್ಯಕ್ರಮಕ್ಕೆ ಕೌಂಟರ್ ಆಗಿ ಕೊಪ್ಪಳ ಕ್ಷೇತ್ರಕ್ಕೆ ಪ್ರಿಯಾಂಕ ಗಾಂಧಿ ಅಥವಾ ರಾಹುಲ್ ಗಾಂಧಿ ಅವರನ್ನು ಕರೆಸುವ ಕಸರತ್ತು ನಡೆಸಿದ್ದಾರೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯರ ಮುಂದೆ ಈ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರ ಕೂಡ ಈ ಬಾರಿಯ ಪ್ರತಿಷ್ಠಿತ ಚುನಾವಣಾ ಅಖಾಡ. ಯಾಕೆಂದರೆ ಜಿಲ್ಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕ. ಅಲ್ಲದೇ ಸಮನ್ವಯ ಸಮಿತಿ ಅಧ್ಯಕ್ಷ. ಆದ್ದರಿಂದ ಈ ಚುನಾವಣೆಯಲ್ಲಿ ಕೈ ಅಭ್ಯರ್ಥಿ ವೀಣಾ ಕಾಶಪ್ಪನವರನ್ನು ಗೆಲ್ಲಿಸುವ ಜವಾಬ್ದಾರಿ ಸಿದ್ದರಾಮಯ್ಯನವರ ಹೆಗಲ ಮೇಲಿದೆ. ಇದಕ್ಕಾಗಿ ಬಾಗಲಕೋಟೆ ಹಾಗೂ ಬಾದಾಮಿಯಲ್ಲಿ ಸಿದ್ದರಾಮಯ್ಯ ಸಮಾವೇಶ ಮಾಡುವ ಮೂಲಕ ಮತಬೇಟೆ ಶುರು ಮಾಡಿದ್ದಾರೆ.

    ಇದೇ 18ಕ್ಕೆ ಪ್ರಧಾನಿ ಮೋದಿ ಆಗಮಿಸುವ ಸಾಧ್ಯತೆಯಿದ್ದು, ವೀಣಾ ಕಾಶಪ್ಪನವರ ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಮೋದಿ ಭಯ ಶುರುವಾಗಿದೆ ಎನ್ನಲಾಗುತ್ತಿದೆ. ಮೋದಿ ಭಯ ನಮಗಿಲ್ಲ ಎಂದು ಮೇಲ್ಮಾತಿನಲ್ಲಿ ಹೇಳುತ್ತಿರುವ ವೀಣಾ ಕಾಶಪ್ಪನವರ ಹಾಗೂ ಮುಖಂಡರು, ಮೋದಿ ಪ್ರಚಾರಕ್ಕೆ ಠಕ್ಕರ್ ಕೊಡಲು ಪ್ರಿಯಾಂಕ ಗಾಂಧಿ ಇಲ್ಲವೇ ಇತರೆ ಮುಖಂಡರನ್ನು ಜಿಲ್ಲೆಗೆ ಕರೆತರಲು ಚಿಂತನೆ ನಡೆಸಿದ್ದಾರೆ.

  • ಮೋದಿ ಅಭಿಮಾನಿಗಳಿಂದ ಸಿಎಂ ಫೋಟೋಗೆ ಮೇಕಪ್!

    ಮೋದಿ ಅಭಿಮಾನಿಗಳಿಂದ ಸಿಎಂ ಫೋಟೋಗೆ ಮೇಕಪ್!

    ಬೆಂಗಳೂರು: ಪ್ರಧಾನಿ ಮೋದಿ ಅವರು ವ್ಯಾಕ್ಸು ಪಾಕ್ಸು ಹಾಕಿಕೊಂಡು ಮಾಧ್ಯಮದ ಮುಂದೆ ಬರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರ ಫೋಟೋಗೆ ಮೇಕಪ್ ಮಾಡಿ ಮೋದಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಕುಮಾರಸ್ವಾಮಿಯವರು ಬೆಳ್ಳಗೆ ಕಾಣುವಂತೆ ಹಾಗೂ ಅವರ ತುಟಿಗೆ ಲಿಪ್‍ಸ್ಟಿಕ್ ಹಾಕಿದಂತೆ ಫೋಟೋಶಾಪ್ ಮಾಡಲಾಗಿದೆ. ಬಳಿಕ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಈ ಮೂಲಕ ಮೋದಿಯವರನ್ನು ಟೀಕಿಸಿದ್ದ ಸಿಎಂಗೆ ಅಭಿಮಾನಿಗಳು ಈ ರೀತಿ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.

    ಸಿಎಂ ಹೇಳಿದ್ದೇನು?
    ಇತ್ತೀಗಷ್ಟೆ ಸಿಎಂ ಕುಮಾರಸ್ವಾಮಿ ಉಡುಪಿಯ ಕಾರ್ಕಳದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬಿಟ್ಟರೆ ಬೇರೆಯವರು ಯಾರು ದೇಶಕ್ಕೆ ರಕ್ಷಣೆ ಕೊಡಲು ಸಾಧ್ಯವಿಲ್ವಾ? ದೇಶದಲ್ಲೇ ಕರಾವಳಿ ಜನ ಪ್ರಜ್ಞಾವಂತರು ಆದರೆ ತಿಳುವಳಿಕೆ ಇರುವ ಕರಾವಳಿಗರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸೋದ್ಯಾಕೆ? ಮೋದಿ ಎಂದು ಕೂಗುವ ಟ್ರೆಂಡ್ ಶುರುವಾಗಿದೆ.

    ಮೋದಿ ಅಂದರೆ ಅವರು ಬರಲ್ಲ. ಹತ್ತಿರದಲ್ಲಿ ಇರುವ ನಾವು ನಿಮ್ಮ ಕಷ್ಟಕ್ಕೆ ಜೊತೆಯಾಗುತ್ತೇವೆ. ಯುವಕರು ದಾರಿ ತಪ್ಪಿ ಮೋದಿಗೆ ಮತ ಹಾಕ್ತಾರೆ. ನಾವು ಕೆಲಸ ಮಾಡಬೇಕು, ವೋಟು ಮೋದಿಗಾ? ವ್ಯಾಕ್ಸು ಪಾಕ್ಸು ಹಾಕೊಂಡು ಮಿರಿಮಿರಿ ಮಿಂಚುವ ಮುಖ ನಿಮಗೆ ಇಷ್ಟವಾಗುತ್ತೆ. ಆದರೆ ದಿನಕ್ಕೊಮ್ಮೆ ಮುಖ ತೊಳೆದುಕೊಂಡು, ಬಿಸಿಲಲ್ಲಿ ಓಡಾಡುವ ನಾವು ಇಷ್ಟವಾಗಲ್ವಾ? ಎಂದು ಟೀಕಿಸಿದ್ದರು.

  • ಕೊಪ್ಪಳಕ್ಕೆ ಮೋದಿ : ನಗರಕ್ಕೆ ಆಗಮಿಸಿತು 2 ವಿಶೇಷ ಕಾರು

    ಕೊಪ್ಪಳಕ್ಕೆ ಮೋದಿ : ನಗರಕ್ಕೆ ಆಗಮಿಸಿತು 2 ವಿಶೇಷ ಕಾರು

    ಕೊಪ್ಪಳ: ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೊಪ್ಪಳದ ಭತ್ತದ ನಾಡು ಗಂಗಾವತಿ ನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಸಿದ್ಧಗೊಂಡಿರುವ ಎರಡು ಕಾರುಗಳು ಈಗಾಗಲೇ ನಗರಕ್ಕೆ ಆಗಮಿಸಿದೆ.

    ದೆಹಲಿ ಪಾಸಿಂಗ್ ಹೊಂದಿರುವ ಕಪ್ಪು ಬಣ್ಣದ ಫಾರ್ಚುನರ್ ಮತ್ತು ಟಾಟಾ ಸಫಾರಿ ಕಾರುಗಳು ನಗರಕ್ಕೆ ಬಂದಿವೆ. ಈ ಎರಡು ಕಾರುಗಳು ನಗರ ಪೊಲೀಸ್ ಠಾಣೆ ಆವರಣದಲ್ಲಿದೆ.

    ಕನಕಗಿರಿ ರಸ್ತೆಯ ಕೃಷಿ ವಿಜ್ಞಾನ ಕೇಂದ್ರದ ಬಳಿ ಪ್ರಧಾನಿ ಮೋದಿ ಸಮಾವೇಶ ನಡೆಯಲಿದ್ದು, ಪ್ರಧಾನಿ ಮೋದಿ ಅವರು ಹೆಲಿಪ್ಯಾಡ್ ನಿಂದ ಕಾರ್ಯಕ್ರಮದ ವೇದಿಕೆಗೆ ಈ ಕಾರುಗಳಲ್ಲಿ ಆಗಮಿಸಿ ಅಭ್ಯರ್ಥಿ ಸಂಗಣ್ಣ ಕರಡಿ ಅವರ ಪರ ಪ್ರಚಾರ ನಡೆಸಲಿದ್ದಾರೆ.

    ಮಂಗಳವಾರ ಮೋದಿ ಚಿತ್ರದುರ್ಗ ಮತ್ತು ಮೈಸೂರಿಗೆ ಆಗಮಿಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಇದೇ ವೇಳೆ ಅಂಬರೀಶ್ ಬಗ್ಗೆಯೂ ಮಾತನಾಡಿದ್ದರು. ಜೊತೆ ಸುಮಲತಾ ಅಂಬರೀಶ್ ಅವರಿಗೆ ಆಶೀರ್ವಾದ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದರು.

  • ಸಹೋದರನ ಪರ ಗೀತಾ ಶಿವರಾಜ್ ಕುಮಾರ್ ಬ್ಯಾಟಿಂಗ್

    ಸಹೋದರನ ಪರ ಗೀತಾ ಶಿವರಾಜ್ ಕುಮಾರ್ ಬ್ಯಾಟಿಂಗ್

    ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ಮಧು ಬಂಗಾರಪ್ಪ ಪರವಾಗಿ ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ಆರಂಭಿಸಿದ್ದಾರೆ.

    ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಪ್ರಚಾರ ಮಾಡಲಿರುವ ಗೀತಾ ಇಂದು ಪುರದಾಳು, ಮಲೆಶಂಕರ ಇನ್ನಿತರ ಪ್ರದೇಶಗಳಲ್ಲಿ ಪ್ರಚಾರ ಮಾಡಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಗಿ ಸೋಲುಂಡ ಗೀತಾ ಅವರು ಈ ಬಾರಿ ತಮ್ಮನ ಪರವಾಗಿ ಪ್ರಚಾರ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿ ಗೀತಾ ಶಿವರಾಜ್ ಕುಮಾರ್, ಮೊದಲ ಹಂತವಾಗಿ ಮೂರು ದಿನಗಳ ಕಾರ್ಯ ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ. ಈ ಬಾರಿ ಮೈತ್ರಿ ಸರ್ಕಾರದಿಂದ ಸಹೋದರ ಚುನಾವಣೆಗೆ ನಿಂತಿದ್ದಾರೆ. ಕಾಂಗ್ರೆಸ್ ಅವರು ಬೆಂಬಲ ನೀಡಿದ್ದು, ಗೆಲ್ಲುವ ವಿಶ್ವಾಸ ಇದೆ. ಕಳೆದ ವಿಧಾನಸಭಾ ಚುನಾವಣೆ ಅಲ್ಪ ಅಂತರದಲ್ಲಿ ಸೋಲುಂಟಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ನೀಡಿದ್ದ ಆಶ್ವಾಸನೆ ಈಡೇರಿಸಿಲ್ಲ. ಮೈತ್ರಿ ಸರ್ಕಾರದ ಸಾಧನೆಯನ್ನು ಪ್ರಮುಖ ವಿಷಯವಾಗಿ ಪ್ರಚಾರ ಮಾಡಿ ಮತಯಾಚನೆ ಮಾಡುತ್ತೇನೆ. ತಂದೆ ಬಂಗಾರಪ್ಪನವರ ಕೊನೆಯ ಚುನಾವಣೆಯ ಸೋಲನ್ನು ಈ ಬಾರಿ ಗೆಲುವಾಗಿ ಪರಿವರ್ತನೆ ಮಾಡುತ್ತೇವೆ ಎಂದು ಹೇಳಿದರು.

    ಮೊದಲ ಹಂತದಲ್ಲಿ ಮೂರು ದಿನಗಳ ಪ್ರಚಾರ ಕಾರ್ಯ ಶಿವಮೊಗ್ಗ, ಸಾಗರ ಸೇರಿದಂತೆ ಹಲವು ಪ್ರದೇಶದಲ್ಲಿ ನಡೆಯಲಿದೆ ಎಂದರು. ಇದೇ ವೇಳೆ ಶಿವಣ್ಣ ಅವರು ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಮೊದಲೇ ಕವಚ ಸಿನಿಮಾದ ಪ್ರಚಾರ ಸಭೆ ನಿಗದಿಯಾಗಿತ್ತು. ಸಿನಿಮಾ ಪ್ರಚಾರಕ್ಕೆ ಮಾತ್ರ ಅವರು ಆಗಮಿಸಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ತಿಳಿಸಿದರು.

  • ಬಿಜೆಪಿಗೆ ತಲೆನೋವಾಗಿದ್ದ ಪ್ರಧಾನಿ ಮೋದಿ ಸಮಾವೇಶದ ಸ್ಥಳ ಫೈನಲ್

    ಬಿಜೆಪಿಗೆ ತಲೆನೋವಾಗಿದ್ದ ಪ್ರಧಾನಿ ಮೋದಿ ಸಮಾವೇಶದ ಸ್ಥಳ ಫೈನಲ್

    ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಇದೆ 12 ರಂದು ನೆಡೆಯಲಿರುವ ಪ್ರಧಾನಿ ಮೋದಿ ಸಮಾವೇಶಕ್ಕೆ ಕೊನೆಗೂ ಸ್ಥಳ ಫೈನಲ್ ಆಗಿದೆ.

    ಕಳೆದ 2 ದಿನದಿಂದ ಮೋದಿ ಕಾರ್ಯಕ್ರಮಕ್ಕೆ ಜಾಗದ ವಿಚಾರವಾಗಿ ಬಿಜೆಪಿಗರಿಗೆ ತಲೆನೋವಾಗಿತ್ತು. ಮೊದಲು ಗುರುತಿಸಿರುವ ಜಾಗದಲ್ಲಿ ಟ್ರಾಫಿಕ್ ಸಮಸ್ಯೆಯ ಕಾರಣದಿಂದ ಡಿಸಿ ಮತ್ತು ಎಸ್‍ಪಿ ಪರಿಶೀಲನೆ ನಡೆಸಿ ಬದಲಾವಣೆ ಮಾಡಿ ಎಂದು ಬಿಜೆಪಿಯ ಶಾಸಕರಿಗೆ ಸೂಚನೆ ನೀಡಿದ್ದರು.

    ಶಾಸಕ ಪರಣ್ಣ ಅದಾಗಲೇ ಗುರುತಿಸಿದ್ದ ಸ್ಥಳದಲ್ಲಿ ಪೂಜಾ ಕಾರ್ಯಕ್ರಮ ನಡೆಸಿ ವೇದಿಕೆ ನಿರ್ಮಾಣ ಕಾರ್ಯ ನಡೆಸಿದ್ದರು. ಆದರೆ ಟ್ರಾಫಿಕ್ ಸಮಸ್ಯೆಯ ಕಾರಣ ಜಾಗವನ್ನು ಸ್ಥಳಾಂತರ ಮಾಡಿ ಎನ್ನುವ ಸೂಚನೆ ಮೇರೆಗೆ ಇದೀಗ ಕನಕಗಿರಿ ರಸ್ತೆ ಕೃಷಿ ವಿಜ್ಞಾನ ಕೇಂದ್ರ ಬಳಿಯಿರುವ ಕಾಂಗ್ರೆಸ್ ಮುಖಂಡರ ಜಮೀನನ್ನು ಅಂತಿಮ ಗೊಳಿಸಿದೆ.

    ಇದಕ್ಕೂ ಮುನ್ನ ಮೊದಲು ಇದೇ ಜಾಗವನ್ನು ಗುರುತಿಸಿದ್ದು, ಅದು ಕಾಂಗ್ರೆಸ್ ಮುಖಂಡ ಎಂ.ನಾಗಪ್ಪ ಅವರ ಸಂಬಂಧಿಯ ಜಾಗವಾಗಿದ್ದರಿಂದ ಮೋದಿ ಸಮಾವೇಶಕ್ಕೆ ಜಾಗ ಕೊಡದಿರಲು ನಿರಾಕರಿಸಿದ್ದರು. ಈ ಕಾರಣದಿಂದಾಗಿ ಶಾಸಕ ಪರಣ್ಣ ರಾಜ್ಯ ಹೆದ್ದಾರಿಯ ರೈಲ್ವೆ ನಿಲ್ದಾಣ ಬಳಿ ಇರುವ ಜಾಗವನ್ನು ಫಿಕ್ಸ್ ಮಾಡಿದ್ದರು. ಡಿಸಿ ಮತ್ತು ಎಸ್‍ಪಿ ಪರಿಶೀಲನೆ ನಂತರ ಶಾಸಕರು ಗುರುತಿಸಿದ್ದ ಜಾಗ ಬದಲಾವಣೆ ಮಾಡಿದ್ದಾರೆ.

    ಎಂ.ನಾಗಪ್ಪ ಅವರನ್ನು ಮನವೊಲಿಸಿ ಕೊನೆಗೂ ಕನಕಗಿರಿ ರಸ್ತೆಯ ಕೃಷಿ ವಿಜ್ಞಾನ ಕೇಂದ್ರದ ಬಳಿ ಇರುವ 30 ಎಕರೆ ಪ್ರದೇಶದಲ್ಲಿ ಸಮಾವೇಶ ಮಾಡಲು ಸ್ಥಳ ಅಂತಿಮಗೊಳಿಸಿದೆ. ಇನ್ನೂ ಈ ಬೃಹತ್ ಸಮಾವೇಶಕ್ಕೆ ಸುಮಾರು 3 ಲಕ್ಷ ಜನ ಸೇರುವ ಸಾದ್ಯತೆ ಇದ್ದು, ಅಂದಿನ ಕಾರ್ಯಕ್ರಮದಲ್ಲಿ ಮೋದಿ ಕೊಪ್ಪಳ, ಬಳ್ಳಾರಿ, ರಾಯಚೂರು ಅಭ್ಯರ್ಥಿಗಳ ಪರವಾಗಿ ಪ್ರಚಾರ ನೆಡಸಲಿದ್ದಾರೆ.

  • ಜೆಡಿಎಸ್ ಮತ ಸೆಳೆಯಲು ಪ್ರತಾಪ್ ಸಿಂಹ ರೆಬೆಲ್ ಸ್ಟ್ರಾಟಜಿ!

    ಜೆಡಿಎಸ್ ಮತ ಸೆಳೆಯಲು ಪ್ರತಾಪ್ ಸಿಂಹ ರೆಬೆಲ್ ಸ್ಟ್ರಾಟಜಿ!

    ಮೈಸೂರು: ಲೋಕಸಭಾ ಚುನಾವಣೆಗೆ ಅರಮನೆ ನಗರಿಯಲ್ಲಿ ಪ್ರಚಾರ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಜೆಡಿಎಸ್ ಮತ ಸೆಳೆಯಲು ರೆಬೆಲ್ ಸ್ಟ್ರಾಟಜಿ ಉಪಯೋಗಿಸುತ್ತಿದ್ದಾರೆ.

    ಪ್ರಚಾರದ ವೇಳೆ ಮಾತನಾಡಿದ ಪ್ರತಾಪ್ ಸಿಂಹ, ಜಂಟಿಯಾಗಿ ಪ್ರಚಾರ ಮಾಡುತ್ತಿದ್ದಕ್ಕೆ ಪ್ರಶ್ನೆ ಮಾಡುತ್ತಿದ್ದರು. ಆದರೆ ಜೆಡಿಎಸ್ ಅವರಿಗೆ ಮಂಡ್ಯದಲ್ಲಿ ರೆಬೆಲ್ ಕ್ಯಾಂಡಿಡೇಟ್ ಹಾಕಿ ಬೆನ್ನಿಗೆ ಚೂರಿ ಹಾಕುತ್ತಿರುವುದು ಯಾವ ಪಕ್ಷ?, ತುಮಕೂರು ಹಾಗೂ ಹಾಸನದಲ್ಲಿ ಮೈತ್ರಿ, ಮೈತ್ರಿ ಎಂದು ಜೆಡಿಎಸ್‍ಗೆ ಚೂರಿ ಹಾಕುತ್ತಿರುವುದು ಯಾವ ಪಕ್ಷ ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್‍ಗೆ ಎಚ್ಚರಿಸುತ್ತಾ ಮತ ಬೇಟೆಗೆ ಇಳಿದಿದ್ದಾರೆ.

    ಕಾಂಗ್ರೆಸ್ ಬಗ್ಗೆ ಜೆಡಿಎಸ್ ಕಾರ್ಯಕರ್ತರಿಗೆ ಮತ್ತು ದೇಶಭಕ್ತರಿಗೆ ಗೊತ್ತಿದೆ. ಜಂಟಿಯಾಗಿ ಪ್ರಚಾರ ಮಾಡಿದಾಕ್ಷಣ ಕಾರ್ಯಕರ್ತರು ಪ್ರಭಾವಿತರಾಗಲ್ಲ. ಕಾರ್ಯಕರ್ತರು ಮನಸ್ಸು ಮಾಡಿದರೆ ಈ ಬಾರಿ ದೇಶಕ್ಕೆ ಮೋದಿ ಬೇಕು ಎಂದು ಎಲ್ಲರೂ ನಮಗೆ ಸಪೋರ್ಟ್ ಮಾಡುತ್ತಾರೆ. ದೋಖಾ ಮಾಡುವ ಕಾಂಗ್ರೆಸ್‍ಗೆ ಜೆಡಿಎಸ್ ಕಾರ್ಯಕರ್ತರು ಸಪೋರ್ಟ್ ಮಾಡಲ್ಲ ಎಂದು ಹೇಳಿದ್ರು.

  • ಭಾರತ, ಪಾಕ್ ನಡ್ವೆ ಸಂಘರ್ಷ ಆಗಲಿದೆ ಅನ್ನೋದು 2 ವರ್ಷದ ಹಿಂದೆಯೇ ಗೊತ್ತಿತ್ತು- ಸಿಎಂ

    ಭಾರತ, ಪಾಕ್ ನಡ್ವೆ ಸಂಘರ್ಷ ಆಗಲಿದೆ ಅನ್ನೋದು 2 ವರ್ಷದ ಹಿಂದೆಯೇ ಗೊತ್ತಿತ್ತು- ಸಿಎಂ

    – ಎಚ್‍ಡಿಡಿ ಪ್ರಧಾನಿಯಾಗಿದ್ದಾಗ ದಾಳಿ ನಡೆದಿತ್ತಾ?
    – ಬಡ ಕುಟುಂಬದ ಸೈನಿಕರ ಜೊತೆ ಚೆಲ್ಲಾಟ

    ಚಿಕ್ಕಮಗಳೂರು: ಎರಡು ವರ್ಷದ ಹಿಂದೆಯೇ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ನಡೆಯಲಿದೆ ಎನ್ನುವ ಮಾಹಿತಿ ನನಗೆ ಸಿಕ್ಕಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಚಿಕ್ಕಮಗಳೂರಿನ ಕೊಪ್ಪದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಪ್ರಧಾನಿ ಮೋದಿ ಅವರ ಬಣ್ಣಬಣ್ಣದ ಮಾತುಗಳಿಗೆ ಮರುಳಾಗಬೇಡಿ. ನನಗೆ ಎರಡು ವರ್ಷದ ಹಿಂದೆಯೇ ನಿವೃತ ಸೈನ್ಯಾಧಿಕಾರಿಯೊಬ್ಬರು ಲೋಕಸಭಾ ಚುನಾವಣೆ ಮುನ್ನ ಭಾರತ-ಪಾಕ್ ನಡುವೆ ಸಂಘರ್ಷ ನಡೆಯುತ್ತದೆ ಎಂದು ತಿಳಿಸಿದ್ದರು. ಸಂಘರ್ಷದ ಏನಾದರೂ ಕಥೆ ಸೃಷ್ಟಿ ಮಾಡಿ ಮೋದಿ ಮತ ಕೇಳುತ್ತಾರೆ ಎಂದು ಅಂದೇ ಅಧಿಕಾರಿ ತಿಳಿಸಿದ್ದರು ಎಂಬುದಾಗಿ ಹೇಳಿದರು.

    ಎರಡು ವರ್ಷದ ಹಿಂದೆಯೇ ನನ್ನ ಬಳಿ ಚರ್ಚೆ ಮಾಡಿದ್ದರು. ಇವತ್ತು ಅದೇ ರೀತಿಯಲ್ಲಿ ಆಗಿದೆ. ಅಭಿವೃದ್ಧಿ ಹೆಸರಿನಲ್ಲಿ ಅವರು ನಿಮ್ಮ ಬಳಿ ಮತ ಕೇಳುತ್ತಿಲ್ಲ. ದೇಶವನ್ನು ಸುಭದ್ರವಾಗಿ ನಡೆಸುವ ಪ್ರಧಾನ ಮಂತ್ರಿಬೇಕಂತೆ. ಹಾಗಾದರೆ ಸ್ವತಂತ್ರ ಬಂದ 70 ವರ್ಷಗಳಲ್ಲಿ ಈ ದೇಶವನ್ನು ಆಳಿರುವವರೆಲ್ಲಾ ಅಭದ್ರತೆಯಲ್ಲಿ ಆಡಳಿತ ನಡೆಸಿದ್ದಾರಾ? ನಾನು ನಿಮ್ಮನ್ನು ಕೈ ಜೋಡಿಸಿ ಮನವಿ ಮಾಡುತ್ತೇನೆ ದಯವಿಟ್ಟು ಅವರನ್ನು ನಂಬಬೇಡಿ ಎಂದು ಮನವಿ ಮಾಡಿದರು.

    ನೀವೇ ಬೆಳೆಸಿದಂತಹ ಕನ್ನಡಿಗನಾಗಿ ದೇಶದಲ್ಲಿ ಪ್ರಧಾನ ಮಂತ್ರಿಯಾಗಿ 10 ತಿಂಗಳು ಕೆಲಸ ಮಾಡಿದ್ದಾರೆ. ಆಗ ಎಲ್ಲಾದರೂ ಬಾಂಬ್ ದಾಳಿ, ಅಮಾಯಕರ ಬಲಿ ನಡೆದಿತ್ತಾ? ಯೋಧರನ್ನು ಗುಂಡಿಕ್ಕಿ ಕೊಲ್ಲುವ ಘಟನೆ ಆಗ ನಡೆದಿತ್ತಾ? ಆದರೆ ಈಗ ಅವರ ಉಳಿವಿಗೆ ದೇಶದ ಬಡ ಕುಟುಂಬದ ಸೈನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನಿಮ್ಮನ್ನು ದಾರಿ ತಪ್ಪಿಸುವ ಇಂತಹ ಪ್ರಧಾನ ಮಂತ್ರಿ ಬೇಕಾ? ದೇಶದಲ್ಲಿ ಶಾಂತಿ, ನೆಮ್ಮದಿ ಕಾಪಾಡುವಂತಹ ಪ್ರಧಾನಿ ಬೇಕಾ? ನೀವೇ ಯೋಚನೆ ಮಾಡಿ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

    ಇವರಿಗೆ ಅಭಿವೃದ್ಧಿ ಬೇಕಿಲ್ಲ. ಬದಲಿಗೆ ಧರ್ಮದ ರಾಜಕಾರಣ ಬೇಕಾಗಿದೆ. ನಮ್ಮ ಕುಟುಂಬದವರು ಶೃಂಗೇರಿಯ ಪರಮ ಭಕ್ತರು. ಧರ್ಮದ ರಕ್ಷಣೆಯಲ್ಲಿ ನಾವು ಅವರಿಗಿಂತ ಮುಂದಿದ್ದೇವೆ. ನಾವು ಯಾವ ಧರ್ಮದಲ್ಲಿ ಹುಟ್ಟಬೇಕು ಎಂದು ಕೇಳಿಕೊಂಡು ಹುಟ್ಟೋದಿಲ್ಲ ಎಂದರು.

  • ಬಿಂದಿ ಮೇಲೂ ಮೋದಿ ಚಿತ್ರದ ಫೋಟೋ ವೈರಲ್!

    ಬಿಂದಿ ಮೇಲೂ ಮೋದಿ ಚಿತ್ರದ ಫೋಟೋ ವೈರಲ್!

    ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆ ಆದ ಬಳಿಕ ಮೋದಿ ಪರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದು, ಇತ್ತೀಚೆಗೆ ಮದುವೆ ಅಮಂತ್ರಣದಲ್ಲಿ ಮೋದಿ ಚಿತ್ರ ಹಾಕಿ ಮತ್ತೊಮ್ಮೆ ಮೋದಿ ಎಂದಿದ್ದರು. ಸದ್ಯ ಬಿಂದಿ ಪ್ಯಾಕೆಟ್ ಮೇಲೆ ಮೋದಿ ಭಾವಚಿತ್ರವಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಾರಸ್ ಕಂಪೆನಿ ತನ್ನ ಬಿಂದಿ ಉತ್ಪನ್ನದ ಪ್ಯಾಕೆಟ್ ಮೇಲೆ ಮೋದಿ ಅವರ ಫೋಟೋ ಇದ್ದು, ‘ಫಿರ್ ಸೆ ಮೋದಿ ಸರ್ಕಾರ್’ ಎಂಬ ಘೋಷಣೆಯೊಂದಿಗೆ ಕಮಲದ ಚಿಹ್ನೆಯನ್ನು ನೀಡಿದೆ.

    ಈ ಫೋಟೋವನ್ನ ಪಶ್ಚಿಮ ಬಂಗಾಳದ ಎಂಪಿ ಮೊಹಮ್ಮದ್ ಸಲೀಮ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಹಿಂದೆ ಮೋದಿ ಪೇಟಿಎಂ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಈಗ ಪಾರಸ್ ಫ್ಯಾನ್ಸಿ ಅಂಬಾಸಿಡರ್ ಆಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

    ಇತ್ತ ಟ್ವಿಟ್ಟಗರು ಕೂಡ ಮೊಹಮ್ಮದ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದು, ಕೆಲ ಮಂದಿ ಮೊಹಮ್ಮದ್ ಸಲೀಮ್ ಪರ ವಾದ ಮಾಡಿದ್ದರೆ, ಕೆಲವರು ಮೋದಿ ಪರ ಅಭಿಪ್ರಾಯ ಮಂಡಿಸಿ ಮರು ಟ್ವೀಟ್ ಮಾಡಿದ್ದಾರೆ.