Tag: prime minister modi

  • ಸತ್ಯ ಹೇಳಲಾಗದಂತಹ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ: ಮಾಜಿ ಸಿಎಂ

    ಸತ್ಯ ಹೇಳಲಾಗದಂತಹ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ: ಮಾಜಿ ಸಿಎಂ

    ಮೈಸೂರು: ಐದು ವರ್ಷದ ಸರ್ಕಾರದಲ್ಲಿ ರೈತರ, ನಿರುದ್ಯೋಗಿಗಳ ಸಮಸ್ಯೆ ಬಗೆಹರಿದಿಲ್ಲ. ಇನ್ನೂ ದೇಶದ ಆರ್ಥಿಕ ಮಟ್ಟವೂ ಕುಸಿದಿದೆ. ಆದರೆ ಈ ಬಗ್ಗೆ ನಾನು ಸತ್ಯ ಹೇಳಲಾಗದಂತಹ ಪರಿಸ್ಥಿತಿಯಲ್ಲಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿದ್ದರಾಮಯ್ಯ ಅವರು, ಐದು ವರ್ಷದ ಪ್ರಧಾನಿ ಮೋದಿ ಅವರ ಸರ್ಕಾರವನ್ನು ದೇಶದ ಜನರು ಹಾಡಿ ಹೊಗಳಿದ್ದಾರೆ. ಆದರೆ ಜಿಡಿಪಿ ಐದು ವರ್ಷದಲ್ಲಿ ಪಾತಾಳಕ್ಕೆ ಹೋಗಿದೆ. ನಿರುದ್ಯೋಗ ಸಮಸ್ಯೆ, ರೂಪಾಯಿ ಮೌಲ್ಯ ಕುಸಿದಿದೆ. ಆದರೆ ಮೋದಿ ಮೋದಿ ಎನ್ನುತ್ತಾರೆ. ಐದು ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿಯನ್ನು ಸುಧಾರಿಸಿಲ್ಲ. ಬರೀ ಭಾಷಣ, ಸುಳ್ಳು, ನಾಟಕ ಇವುಗಳಿಂದ ಕಾಲಕಳೆದಿದ್ದಾರೆ ಎಂದು ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.

    ನರೇಂದ್ರ ಮೋದಿ ಒಬ್ಬನೇ ದೇಶಭಕ್ತ. ಅವನಿಂದಲೇ ದೇಶ ಉಳಿಯುವುದು ಎಂದು ಜನರಲ್ಲಿ ಬಿಂಬಿಸಲಾಗಿದೆ. ಆದರೆ ಈಗ ನೋಡಿ ದೇಶದ ಜಿಡಿಪಿ ಎಷ್ಟು ಕುಸಿದಿದೆ ಅಂತ. ಸತ್ಯ ಹೇಳಲಾಗದಂತ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿಚಾರದಲ್ಲಿ ಸತ್ಯ ಹೇಳುವಂತಿಲ್ಲ. ಪುಲ್ವಾಮಾ ಘಟನೆ ಬಗ್ಗೆ ಪ್ರಶ್ನೆ ಕೇಳುವಂತಿಲ್ಲ. ನೋಡಿ ನಮ್ಮ ಪರಿಸ್ಥಿತಿ ಹೇಗಿದೆ. ಇದನ್ನು ಕೂಡ ನಾವು ಪ್ರಶ್ನೆ ಮಾಡಬಾರದಾ? ಸಂವಿಧಾನದಲ್ಲಿ ನಮಗೆ ಪ್ರಶ್ನೆ ಮಾಡುವ ಹಕ್ಕಿಲ್ಲವೇ? ಅವರಿಂದ ಆರ್ಥಿಕ ಸ್ಥಿತಿ ಸುಧಾರಣೆ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಗರಂ ಆಗಿ ಹೇಳಿದರು.

    ಐಎಂಎ ವಿಚಾರದಲ್ಲಿ ನನ್ನನ್ನು ಸಿಲುಕಿಸಿದ್ದಾರೆ ಎಂಬ ರೋಷನ್ ಬೇಗ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅದನ್ನು ಮಾಧ್ಯಮದ ಮುಂದೆ ಯಾಕೆ ಹೇಳ್ತಿಯಾ? ಹೋಗಿ ಎಸ್‍ಐಟಿ ಮುಂದೆ ಹೇಳಪ್ಪ ಎಂದು ರೋಷನ್ ಬೇಗ್‍ಗೆ ತಿರುಗೇಟು ಕೊಟ್ಟರು. ಇನ್ನೂ ಐಎಂಎ ವಿಚಾರದಲ್ಲಿ ಎಸ್‍ಐಟಿ ರಚನೆ ಆಗಿದೆ. ಹೀಗಾಗಿ ಎಸ್‍ಐಟಿ ಸಂಪೂರ್ಣವಾಗಿ ತನಿಖೆ ನಡೆಸಲಿದೆ. ಈ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂದರು.

  • ಮಂಡ್ಯ ಬಸ್ ದುರಂತ- ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ರೂ. ಪರಿಹಾರ

    ಮಂಡ್ಯ ಬಸ್ ದುರಂತ- ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ರೂ. ಪರಿಹಾರ

    – ಸಿಎಂ, ಸಂಸದೆಯಿಂದ ಮೋದಿಗೆ ಧನ್ಯವಾದ

    ಮಂಡ್ಯ: ಜಿಲ್ಲೆಯ ಪಾಂಡವಪುರ ಕನಗನಮರಡಿನಲ್ಲಿ ಸಂಭವಿಸಿದ್ದ ಭೀಕರ ಬಸ್ ದುರಂತದಲ್ಲಿ 30 ಜನರು ಮೃತಪಟ್ಟಿದ್ದರು. ಇದೀಗ ಮೃತಪಟ್ಟ 30 ಮಂದಿಯ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದೆ.

    ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ಘೋಷಿಸಿರುವುದಕ್ಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

    “ಕರ್ನಾಟಕ ಸರ್ಕಾರ ಮಂಡ್ಯ ಕನಗನಮರಡಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರ ನೀಡಿತ್ತು. ಈಗ ಭಾರತ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ನೀಡಿದೆ. ಹೀಗಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು” ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

    ಸುಮಲತಾ ಅವರು, “ಮೃತ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಿರುವುದು ವೈಯಕ್ತಿಕವಾಗಿ ನನಗೆ ಸಂತಸ ತಂದಿದೆ. ಅಂದಿನ ದುರ್ಘಟನೆ ಎಲ್ಲರಿಗೂ ನೋವುಂಟು ಮಾಡಿತ್ತು. ಒಟ್ಟಿನಲ್ಲಿ ಮಂಡ್ಯ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಿದಕ್ಕಾಗಿ ಮೋದಿಜೀ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    ಕನಗನಮರಡಿ ಬಳಿ ಖಾಸಗಿ ಬಸ್ ಸುಮಾರು 15 ಅಡಿ ಆಳದ ವಿಸಿ ನಾಲೆಗೆ ಉರುಳಿದ ಪರಿಣಾಮ ಮಕ್ಕಳು ಸೇರಿದಂತೆ 30 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಆಗ ಕರ್ನಾಟಕ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಈಗ ಕೇಂದ್ರ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಇದೀಗ ಸಂತ್ರಸ್ತೆ ಕುಟುಂಬದವರಿಗೆ ಒಟ್ಟು 7 ಲಕ್ಷ ರೂ. ಪರಿಹಾರ ಸಿಕ್ಕಿದಂತಾಗಿದೆ.

  • ಮೋದಿ ವಿದೇಶಿ ಪ್ರವಾಸ – ಮಾಲ್ಡೀವ್ಸ್, ಶ್ರೀಲಂಕಾಗೆ ಭೇಟಿ

    ಮೋದಿ ವಿದೇಶಿ ಪ್ರವಾಸ – ಮಾಲ್ಡೀವ್ಸ್, ಶ್ರೀಲಂಕಾಗೆ ಭೇಟಿ

    ನವದೆಹಲಿ: ಸತತ 2ನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾದ ನರೇಂದ್ರ ಮೋದಿ ಶನಿವಾರ ತಮ್ಮ ಮೊದಲ ವಿದೇಶ ಪ್ರವಾಸ ಆರಂಭಿಸಲಿದ್ದಾರೆ.

    2ನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದು, ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಗೆ ಮೊದಲು ಭೇಟಿ ನೀಡಲಿದ್ದಾರೆ. ಆ ಬಳಿಕ ಚರ್ಚ್ ಮೇಲಿನ ಉಗ್ರರ ದಾಳಿಗೆ ನಲುಗಿದ ಶ್ರೀಲಂಕಾಗೆ ಮೋದಿ ಭಾನುವಾರ ಭೇಟಿ ನೀಡಲಿದ್ದಾರೆ. ತಮ್ಮ ವಿದೇಶಿ ಪ್ರವಾಸ ಬಗ್ಗೆ ಮಾತನಾಡಿರುವ ಮೋದಿ ಅವರು ಈ ಭೇಟಿಯಿಂದ ನೆರೆ ರಾಷ್ಟ್ರಗಳೊಂದಿಗೆ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ.

    ವಿದೇಶಿ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಕೇರಳದ ಗುರುವಾಯೂರು ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಇತ್ತ ಭಾನುವಾರ ಬೆಳಗ್ಗೆ ಶ್ರೀಲಂಕಾಗೆ ತೆರಳಿರುವ ಮೋದಿ ಅವರು ಸಂಜೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ.

    ಮೇ 30ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ಮೋದಿ ಅವರು ಅಂದು ಬಿಮ್ ಸ್ಟೆಕ್ ರಾಷ್ಟ್ರಗಳಿಗೆ ಆಹ್ವಾನ ನೀಡಿದ್ದರು. ಈ ಬಿಮ್ಸ್ ಸ್ಟೆಕ್ಸ್ ದೇಶಗಳಲ್ಲಿ ಮಾಲ್ಡೀವ್ಸ್ ಇಲ್ಲದ ಕಾರಣ ಮೋದಿ ಮೊದಲ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ. ಉಳಿದಂತೆ ಮೇ 30 ರಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಸೇನಾ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ‘ಭಾರತ ರತ್ನ’ ನೀಡಿ – ಪ್ರಧಾನಿಗಳಿಗೆ ಸಿಎಂ ಎಚ್‍ಡಿಕೆ ಪತ್ರ

    ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ‘ಭಾರತ ರತ್ನ’ ನೀಡಿ – ಪ್ರಧಾನಿಗಳಿಗೆ ಸಿಎಂ ಎಚ್‍ಡಿಕೆ ಪತ್ರ

    ಬೆಂಗಳೂರು: ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪುರಸ್ಕಾರ ನೀಡಲು ಪ್ರಧಾನಿ ಮೋದಿ ಅವರಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಶಿವಕುಮಾರ ಸ್ವಾಮೀಜಿಗಳ ಕುರಿತು ಸವಿವರವಾಗಿ ತಿಳಿಸಿರುವ ಸಿಎಂ ಎಚ್‍ಡಿಕೆ, ಮರಣೋತ್ತರವಾಗಿ ಭಾರತರತ್ನ ನೀಡುವಂತೆ ಮನವಿ ಮಾಡಿದ್ದಾರೆ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಸ್ವಾಮೀಜಿಗಳು ಲಿಂಗೈಕ್ಯರಾದ ವೇಳೆ ಸಿಎಂ ಸ್ವತಃ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದರು. ಅಲ್ಲದೇ ರಾಜ್ಯ ಬಿಜೆಪಿ ನಾಯಕರು ಕೂಡ ಈ ಪ್ರಯತ್ನದಲ್ಲಿ ಸದನದಲ್ಲಿ ಒತ್ತಾಯಿಸುವುದಾಗಿ ತಿಳಿಸಿದ್ದರು.

    ಪತ್ರದಲ್ಲಿ ಏನಿದೆ?
    ಐತಿಹಾಸಿಕ ಹಿನ್ನೆಲೆಯನ್ನ ಹೊಂದಿರುವ ತುಮಕೂರು ಸಿದ್ದಗಂಗಾ ಮಠ ಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. 1941ರಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಠದ ಜವಾಬ್ದಾರಿಯನ್ನ ಸ್ವೀಕಾರ ಮಾಡಿದ್ದರು. 1908ರ ಏಪ್ರಿಲ್ 1 ರಂದು ಶಿವಕುಮಾರಸ್ವಾಮೀಜಿಗಳು ಜನಿಸಿದ್ದು, ಅವರು ಲಿಂಗೈಕ್ಯರಾಗುವವರೆಗೂ ಮಠವನ್ನ ಮುನ್ನಡೆಸಿ, ಸಾಮಾಜಿಕ ಸೇವೆಯಲ್ಲಿ ಮಾದರಿ ಎನಿಸುವ ಕಾರ್ಯ ಮಾಡಿದ್ದಾರೆ.

    ಶ್ರೀ ಸಿದ್ದಗಂಗಾ ಎಜುಕೇಷನ್ ಸೊಸೈಟಿ ಸ್ಥಾಪಿಸಿ ದೇಶದ ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಸುಮಾರು 130ಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳನ್ನು ತೆರೆದು ಬಡ ಜನರಿಗೆ ಶಿಕ್ಷಣ ಸೇವೆಯನ್ನು ನೀಡಿದ್ದಾರೆ. ಈ ಸಂಸ್ಥೆಗಳು ಸಂಸ್ಕೃತ, ಇಂಜಿನಿಯರಿಂಗ್, ತಂತ್ರಜ್ಞಾನ ಸೇರಿದಂತೆ ಎಲ್ಲಾ ಶಿಕ್ಷಣ ನೀಡಿ ಬಹುದೊಡ್ಡ ಕೊಡುಗೆ ನೀಡಿವೆ. ಅಲ್ಲದೇ ಸಿದ್ದಗಂಗಾ ಮಠ ಕೂಡ ಸುಮಾರು 9 ಸಾವಿರ ಮಕ್ಕಳಿಗೆ ಶಿಕ್ಷಣ, ವಸತಿ, ಊಟ ಸೌಲಭ್ಯವನ್ನು ನೀಡಿದೆ.

    ಏಳು ದಶಕಗಳ ಕಾಲ ಶಿವಕುಮಾರಸ್ವಾಮೀಜಿಗಳು ತ್ರಿವಿಧ ದಾಸೋಹಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಸಮಾಜಕ್ಕೆ ಲೋಕೋಪಕಾರ, ಶಿಕ್ಷಣ, ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣಕ್ಕೆ ಅವರು ನೀಡಿರುವ ಬೆಲೆ ಕಟ್ಟಲಾಗದ ಕೊಡುಗೆ ಜೀವನದ ವಿವಿಧ ಹಂತಗಳಲ್ಲಿ ಸಮಾಜಕ್ಕೆ ಅಗಾಧ ಕೊಡುಗೆ ನೀಡುವ ಬಹುದೊಡ್ಡ ವರ್ಗವನ್ನು ಸೃಷ್ಟಿಸಿದೆ.

    ಜನರಿಗೆ ಸ್ವಾಮೀಜಿಗಳು ನೀಡಿರುವ ಸೇವೆಯಿಂದ ದೇಶದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಎಲ್ಲಾ ರಾಜಕೀಯ ಮತ್ತು ನಾಗರೀಕರು, ಸಂಸ್ಥೆಗಳು ಮತ್ತು ಸಂಘಟಗಳಿಂದ ಭಾರತ ರತ್ನ ನೀಡುವ ಸಲುವಾಗಿ ಹಲವು ಜ್ಞಾಪನೆಗಳನ್ನು ಸ್ವೀಕರಿಸಲಾಗಿದೆ. 2019ರ ಜನವರಿ 21 ರಂದು ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಮರಣೋತ್ತರ ಭಾರತ ಪ್ರಶಸ್ತಿಗೆ ಪರಿಗಣಿಸ ಬೇಕು ಎಂದು ಸಿಎಂ ಕುಮಾರಸ್ವಾಮಿ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

  • ಎನ್‍ಎಸ್‍ಎ ಹುದ್ದೆಯಲ್ಲಿ ದೋವಲ್ ಮುಂದುವರಿಕೆ – ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ

    ಎನ್‍ಎಸ್‍ಎ ಹುದ್ದೆಯಲ್ಲಿ ದೋವಲ್ ಮುಂದುವರಿಕೆ – ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ

    ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‍ಎಸ್‍ಎ) ಅಜಿತ್ ದೋವಲ್ ಅವರ ಕಾರ್ಯವನ್ನು 5 ವರ್ಷಗಳ ಕಾಲ ಮುಂದುವರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಕ್ಯಾಬಿನೆಟ್ ದರ್ಜೆಯ ಸಚಿವರ ಸ್ಥಾನಮಾನವನ್ನು ನೀಡಲಾಗಿದೆ.

    2014ರ ಮೇ 30 ರಂದು ಎನ್‍ಎಸ್‍ಎಗೆ ಅಜಿತ್ ದೋವಲ್‍ರನ್ನು ನೇಮಕ ಮಾಡಲಾಗಿತ್ತು. ಕಳೆದ ವರ್ಷ ನವೆಂಬರ್ ನಲ್ಲಿ ಅವರನ್ನು ಭಾರತದ ಸರ್ಕಾರದ ಚೀನಾದೊಂದಿನ ಗಡಿ ವಿವಾದ ಕುರಿತಂತೆ ವಿಶೇಷ ಪ್ರತಿನಿಧಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

    ಸದ್ಯ ಮೋದಿ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರ ಖಾತೆ ನಿರ್ವಹಿಸುತ್ತಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿಯಾಗಿರುವ ಎಸ್ ಜೈಶಂಕರ್ ಅವರೊಂದಿಗೆ ದೋವಲ್ ಕಾರ್ಯನಿರ್ವಹಿಸಿದ್ದರು. ಮುಖ್ಯವಾಗಿ ಡೋಕ್ಲಾಮ್ ಗಡಿ ವಿಚಾರದಲ್ಲಿ ಎರಡು ದೇಶಗಳ ನಡುವಿನ ಸಮಸ್ಯೆ ನಿವಾರಿಸಲು ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು.

    1968ರ ಬ್ಯಾಚ್‍ನ ಐಎಎಸ್ ಅಧಿಕಾರಿ ಆಗಿರುವ ದೋವಲ್ ಅವರು ಐಬಿ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ರು. ಅಲ್ಲದೇ 20196 ಉರಿ ದಾಳಿಗೆ ಪ್ರತಿಯಾಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮುಂದಾಳತ್ವ ವಹಿಸಿ, ಯಶಸ್ವಿಯಾಗಿ ಮುನ್ನಡೆಸಿದ್ದರು. ಅಲ್ಲದೇ ಪುಲ್ವಾಮಾ ದಾಳಿಯ ಬಳಿಕ ಬಾಲಕೋಟ್ ಏರ್ ಸ್ಟ್ರೈಕ್ ಕಾರ್ಯಾಚರಣೆಯ ಜವಾಬ್ದಾರಿ ವಹಿಸಿದ್ದರು.

  • ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

    ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

    ನವದೆಹಲಿ: ಬಿಜೆಪಿಯ ಚಾಣಕ್ಯ ಅಮಿತ್ ಶಾ ಅವರಿಗೆ ಮೋದಿ 2 ಸರ್ಕಾರದಲ್ಲಿ ಗೃಹ ಇಲಾಖೆ ಸಿಕ್ಕಿದೆ. ಈ ಹಿಂದೆ ಗೃಹ ಇಲಾಖೆ ನಿರ್ವಹಿಸಿದ್ದ ರಾಜನಾಥ್ ಸಿಂಗ್ ಅವರಿಗೆ ಈ ಬಾರಿ ರಕ್ಷಣಾ ಇಲಾಖೆಯನ್ನು ಮೋದಿ ನೀಡಿದ್ದಾರೆ.

    ರಫೇಲ್ ವಿವಾವದವನ್ನು ಸಮರ್ಥವಾಗಿ ನಿರ್ವಹಿಸಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಇಲಾಖೆ ಸಿಕ್ಕಿದೆ. ಕಳೆದ ಬಾರಿ ನಿರ್ವಹಿಸಿದ್ದ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆಯನ್ನೇ ಮೋದಿ ಮತ್ತೊಮ್ಮೆ ನಿತಿನ್ ಗಡ್ಕರಿ ಅವರಿಗೆ ನೀಡಿದ್ದಾರೆ. ಧರ್ಮೆಂದ್ರ ಪ್ರಧಾನ್ ಪೆಟ್ರೋಲಿಯಂ, ಪಿಯೂಶ್ ಗೋಯಲ್ ರೈಲ್ವೇ, ಜೈ ಶಂಕರ್ ಅವರಿಗೆ ವಿದೇಶಾಂಗ ಇಲಾಖೆ ಸಿಕ್ಕಿದೆ.

    ಗುಜರಾತ್ ನಲ್ಲಿ ಮೋದಿ ಸಿಎಂ ಆಗಿದ್ದಾಗ ಅಮಿತ್ ಶಾ ಗೃಹ ಖಾತೆಯನ್ನು ನೋಡಿಕೊಳ್ಳುತ್ತಿದ್ದರು. ಈಗ ಮತ್ತೊಮ್ಮೆ ಅಮಿತ್ ಶಾ ಮೋದಿ ಕ್ಯಾಬಿನೆಟ್‍ನಲ್ಲಿ ಗೃಹ ಖಾತೆಯನ್ನು ನಿರ್ವಹಿಸಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ – ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಹಂಚಿಕೆಯಾಗದ ಎಲ್ಲ ಖಾತೆಗಳು.

    ಸಂಪುಟ ದರ್ಜೆ ಸಚಿವರು:
    ರಾಜನಾಥ್ ಸಿಂಗ್ – ರಕ್ಷಣೆ
    ಅಮಿತ್ ಶಾ – ಗೃಹ, ಸಣ್ಣ ಮತ್ತು ಮಧ್ಯಮ ಉದ್ಯಮ
    ನಿತಿನ್ ಗಡ್ಕರಿ – ಸಾರಿಗೆ ಮತ್ತು ರಾಷ್ಟ್ರಿಯ ಹೆದ್ದಾರಿ
    ಸದಾನಂದ ಗೌಡ – ರಾಸಾಯನಿಕ ಮತ್ತು ರಸಗೊಬ್ಬರ
    ನಿರ್ಮಲಾ ಸೀತಾರಾಮನ್ – ಹಣಕಾಸು, ಕಾರ್ಪೋರೆಟ್ ವ್ಯವಹಾರ
    ರಾಮ್ ವಿಲಾಸ್ ಪಾಸ್ವಾನ್ – ಆಹಾರ ಮತ್ತು ಸಾರ್ವಜನಿಕ ವಿತರಣೆ

    ನರೇಂದ್ರ ಸಿಂಗ್ ತೋಮರ್ – ಕೃಷಿ, ಗ್ರಾಮೀಣ ಅಭಿವೃದ್ಧಿ, ರೈತ ಕಲ್ಯಾಣ, ಪಂಚಾಯತ್ ರಾಜ್
    ರವಿಶಂಕರ್ ಪ್ರಸಾದ್ – ಕಾನೂನು ಮತ್ತು ನ್ಯಾಯ, ಸಂವಹನ ಮತ್ತು ಮಾಹಿತಿ, ತಂತ್ರಜ್ಞಾನ
    ಹರ್ಸಿಮ್ರತ್ ಕೌರ್ – ಆಹಾರ ಸಂಸ್ಕರಣಾ ಕೈಗಾರಿಕೆ
    ತಾವರ್ ಚಂದ್ ಗೆಹ್ಲೋಟ್ – ಸಾಮಾಜಿಕ ಕಲ್ಯಾಣ ಮತ್ತು ಸಬಲೀಕರಣ
    ಎಸ್.ಜೈಶಂಕರ್ – ವಿದೇಶಾಂಗ ಇಲಾಖೆ
    ರಮೇಶ್ ಪೋಖ್ರಿಯಾಲ್ – ಮಾನವ ಸಂಪನ್ಮೂಲ
    ಅರ್ಜುನ್ ಮುಂಡಾ – ಬುಡಕಟ್ಟು ಅಭಿವೃದ್ಧಿ

    ಸ್ಮೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
    ಡಾ.ಹರ್ಷವರ್ಧನ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ
    ಪ್ರಕಾಶ್ ಜಾವ್ಡೇಕರ್ – ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಮತ್ತು ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ
    ಪಿಯುಷ್ ಗೋಯಲ್ – ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕೆ
    ಧರ್ಮೇಂದ್ರ ಪ್ರಧಾನ್ – ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಉಕ್ಕು

    ಮುಕ್ತಾರ್ ಅಬ್ಬಾಸ್ ನಖ್ವಿ – ಅಲ್ಪ ಸಂಖ್ಯಾತ ಕಲ್ಯಾಣ
    ಪ್ರಹ್ಲಾದ್ ಜೋಷಿ – ಸಂಸದೀಯ ವ್ಯವಹಾರ, ಕಲಿದ್ದಲು ಮತ್ತು ಗಣಿಗಾರಿಕೆ
    ಮಹೇಂದ್ರನಾಥ್ ಪಾಂಡೆ – ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ
    ಅರವಿಂದ್ ಸಾವಂತ್ – ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
    ಗಿರಿರಾಜ್ ಸಿಂಗ್ – ಪಶು ಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮೀನುಗಾರಿಕೆ
    ಗಜೇಂದ್ರ ಸಿಂಗ್ ಶೇಖಾವತ್‌ – ಜಲ ಶಕ್ತಿ

    ರಾಜ್ಯ ಖಾತೆ ಸಚಿವರು:
    ಫಗನ್ ಸಿಂಗ್ ಕುಲಸ್ತೆ – ಉಕ್ಕು
    ಅಶ್ವಿನಿ ಚೌಬೆ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
    ಬಿಕನೇರ್ ಅರ್ಜುನ್ ರಾಮ್ ಮೇಘವಾಲ್ – ಸಂಸದೀಯ ವ್ಯವಹಾರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
    ವಿ.ಕೆ.ಸಿಂಗ್ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
    ಕೃಷ್ಣಪಾಲ್ ಗುರ್ಜರ್ – ಸಾಮಾಜಿಕ ನ್ಯಾಯ ಸಬಲೀಕರಣ
    ರಾವ್ ಸಾಹೇಬ್ ದಾನವೆ ರಾವ್ – ಗ್ರಾಹಕ ವ್ಯವಹಾರ ಮತ್ತು ಆಹಾರ ಮತ್ತು ಸಾರ್ವಜನಿಕರ ವಿತರಣೆ
    ಕಿಶಾನ್ ರೆಡ್ಡಿ- ಗೃಹ ಇಲಾಖೆ

    ಪುರುಷೋತ್ತಮ ರುಪಾಲಾ – ಕೃಷಿ ಮತ್ತು ರೈತರ ಕಲ್ಯಾಣ
    ರಾಮದಾಸ್ ಅಠಾವಳೆ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
    ಸಾಧ್ವಿ ನಿರಂಜನ್ ಜ್ಯೋತಿ – ಗ್ರಾಮೀಣ ಅಭಿವೃದ್ಧಿ
    ಬಾಬುಲ್ ಸುಪ್ರಿಯೋ – ಪರಿಸರ, ಅರಣ್ಯ, ಹವಾಮಾನ ಬದಲಾವಣೆ

    ಸಂಜೀವ್ ಬಲಿಯಾನ್ – ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ
    ಸಂಜಯ್ ಧೋತ್ರೆ – ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಂವಹನ, ಮಾಹಿತಿ ತಂತ್ರಜ್ಞಾನ
    ಅನುರಾಗ್ ಠಾಕೂರ್ – ಹಣಕಾಸು ಮತ್ತು ಕಾರ್ಪೋರೆಟ್ ವ್ಯವಹಾರ
    ಸುರೇಶ್ ಅಂಗಡಿ – ರೈಲ್ವೇ ಖಾತೆ
    ನಿತ್ಯಾನಂದ್ ರಾಯ್ – ಗೃಹ ವ್ಯವಹಾರ ಖಾತೆ

    ರತನ್ ಲಾಲ್ ಕಟಾರಿಯಾ – ಜಲ ಶಕ್ತಿ, ಸಾಮಾಜಿಕ ನ್ಯಾಯ, ಸಬಲೀಕರಣ,
    ವಿ.ಮುರಳೀಧರನ್ – ವಿದೇಶಾಂಗ ಮತ್ತು ಸಂಸದೀಯ ವ್ಯವಹಾರ,
    ರೇಣುಕಾ ಸಿಂಗ್ – ಬುಡಕಟ್ಟು ವ್ಯವಹಾರ,
    ಸೋಮ್ ಪ್ರಕಾಶ್ – ವಾಣಿಜ್ಯ ಮತ್ತು ವ್ಯವಹಾರ

    ರಾಮೇಶ್ವರ್ ತೇಲಿ – ಆಹಾರ ಸಂಸ್ಕರಣ ಉದ್ಯಮ
    ಸಾರಂಗಿ – ಸಣ್ಣ ಮತ್ತು ಮಧ್ಯಮ ಉದ್ಯಮ, ಪಶು ಸಂಗೋಪನೆ, ಮೀನುಗಾರಿಕೆ,
    ಕೈಲಾಶ್ ಚೌಧರಿ – ಕೃಷಿ ಮತ್ತು ರೈತರ ಕಲ್ಯಾಣ
    ದೆಬೊಶ್ರೀ ಚೌಧರಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

    ಸ್ವತಂತ್ರ ಖಾತೆ ಸಚಿವರು:
    ಸಂತೋಷ್ ಕುಮಾರ್ ಗಂಗ್ವಾರ್ – ಕಾರ್ಮಿಕ ಮತ್ತು ಉದ್ಯೋಗ
    ಇಂದ್ರಜಿತ್ ಸಿಂಗ್ – ಸಾಂಖ್ಯಿಕ ಅಭಿವೃದ್ಧಿ ಮತ್ತು ಅನುಷ್ಠಾನ ಖಾತೆ
    ಶ್ರೀಪಾದ್ ಎಸ್ ನಾಯಕ್- ಆಯುಶ್, ರಕ್ಷಣಾ
    ಜಿತೇಂದ್ರ ಸಿಂಗ್- ಈಶಾನ್ಯ ಅಭಿವೃದ್ಧಿ ಮತ್ತು ಬಾಹ್ಯಾಕಾಶ, ಪರಮಾಣು ಶಕ್ತಿ

    ಕಿರಣ್ ರಿಜಿಜು- ಕ್ರೀಡಾ ಮತ್ತು ಯುವ ಸಬಲೀಕರಣ – ಅಲ್ಪ ಸಂಖ್ಯಾತ
    ಪ್ರಹ್ಲಾದ್ ಸಿಂಗ್ ಪಟೇಲ್ – ಸಂಸ್ಕ್ರತಿ ಮತ್ತು ಪ್ರವಾಸ್ಯೋದಮ
    ರಾಜ್‍ಕುಮಾರ್ ಸಿಂಗ್ – ಇಂಧನ, ನವೀಕರಿಸಬಹುದಾದ ಶಕ್ತಿ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ
    ಹರ್ದೀಪ್ ಸಿಂಗ್ ಪುರಿ – ವಸತಿ ಮತ್ತು ನಗರಾಭಿವೃದ್ಧಿ, ನಾಗರೀಕ ವಿಮಾನಯಾನ, ವಾಣಿಜ್ಯ ಮತ್ತು ಕೈಗಾರಿಕೆ
    ಮನಸುಖ್ ಮಾಂಡವ್ಯ – ಹಡಗು, ರಾಸಾಯನಿಕ ಮತ್ತು ರಸಗೊಬ್ಬರ

  • ರಾಜೀನಾಮೆ ನೀಡದಂತೆ ರಾಹುಲ್‍ಗೆ ಸಿಎಂ ಎಚ್‍ಡಿಕೆ ಮನವಿ

    ರಾಜೀನಾಮೆ ನೀಡದಂತೆ ರಾಹುಲ್‍ಗೆ ಸಿಎಂ ಎಚ್‍ಡಿಕೆ ಮನವಿ

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸೋತು ತೀವ್ರ ನಿರಾಸೆ ಅನುಭವಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಇಂದು ಭೇಟಿ ಮಾಡಿದರು.

    ನವದೆಹಲಿಯ ತುಘಲಕ್ ಲೇನ್‍ನಲ್ಲಿ ಇರುವ ರಾಹುಲ್ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ ಕುಮಾರಸ್ವಾಮಿ ಸುಮಾರು 20 ನಿಮಿಷಗಳ ಕಾಲ ರಾಹುಲ್ ಜೊತೆ ಚರ್ಚೆ ನಡೆಸಿದರು. ಇದೇ ವೇಳೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಮನವೊಲಿಸುವ ಪ್ರಯತ್ನ ನಡೆಸಿದರು. ಅಲ್ಲದೇ ರಾಜ್ಯ ರಾಜಕಾರಣದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿ ಮಾತುಕತೆ ನಡೆಸಿದರು.

    ರಾಹುಲ್ ಭೇಟಿ ಬಳಿಕ ಸಿಎಂ ಕುಮಾರಸ್ವಾಮಿ ಅವರು ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವದಲ್ಲಿ ಭಾಗವಹಿಸಲಿದ್ದು, ಸಂಜೆ ಏಳು ಗಂಟೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿಯೇ ಸಿಎಂ ಕುಮಾರಸ್ವಾಮಿ ಅವರು ದೆಹಲಿಗೆ ಆಗಮಿಸಿದ್ದರು.

    ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರೆ. ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್ ವಿಶ್ವನಾಥ್ ಅವರು ಮೋದಿರನ್ನ ಹಾಡಿಹೊಗಳಿದ್ದರು. ಭಾರತದ ಎಲ್ಲಾ ಜಾತಿ ಜನಾಂಗ ಧರ್ಮ ಭಾಷಿಕರಣ ಆಶಯಗಳಂತೆ ಒಂದಾಗಿ ಎಲ್ಲರ ಭವಿಷ್ಯದ ಬಲ ಭೀಮನಾಗಿ ಪ್ರಧಾನಿ ಮೋದಿಯವರು ಹೆಜ್ಜೆ ಹಾಕಲಿ ಎಂದು ಆಶಿಸುತ್ತೇನೆ. ಜಾಗತಿಕ ಜಗತ್ತಿನ ಅತ್ಯಂತ ಎತ್ತರದ ಜನತಂತ್ರ ವ್ಯವಸ್ಥೆಯನ್ನ ಒಪ್ಪಿ ಅಪ್ಪಿ ಆಡಳಿತ ನಡಿಸುತ್ತಿರುವ 71 ವರ್ಷಗಳ ಕಾಲದಿಂದಲೂ ಸ್ವಂತಂತ್ರವನ್ನು ಸಂರಕ್ಷಿಸಿ ಮುನ್ನುಗುತ್ತಿರುವ ಭಾರತದ ಪ್ರಧಾನಮಂತ್ರಿಯಾಗಿ 2ನೇ ಬಾರಿಗೆ ಅಧಿಕಾರ ಸ್ವೀಕಾರ ಮಾಡುತ್ತಿರುವ ನಿಮಗೆ ಭಾರತದ ಸಮಸ್ತ ಜನಕೋಟಿಯ ಶುಭಾಶಯದ ಶುಭಕಾಮನೆಗಳು ಎಂದು ಬರೆದು ಟ್ವೀಟ್ ಮಾಡಿದ್ದರು.

  • ಡಿವಿಎಸ್‍ಗೆ ಆಶೀರ್ವಾದ ಮಾಡಿ ಷರತ್ತು ವಿಧಿಸಿದ ಬಿಎಸ್‍ವೈ

    ಡಿವಿಎಸ್‍ಗೆ ಆಶೀರ್ವಾದ ಮಾಡಿ ಷರತ್ತು ವಿಧಿಸಿದ ಬಿಎಸ್‍ವೈ

    ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ಎರಡನೇ ಬಾರಿ ಸಚಿವರಾಗುತ್ತಿರುವ ಹಿನ್ನೆಲೆಯಲ್ಲಿ ಡಿವಿ ಸದಾನಂದ ಗೌಡರಿಗೆ ಬಿಎಸ್ ಯಡಿಯೂರಪ್ಪ ಷರತ್ತು ವಿಧಿಸಿ ಆಶೀರ್ವಾದಿಸಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಂಸದರಾದ ಸದಾನಂದ ಗೌಡ ಅವರಿಗೆ ಕರೆ ಮಾಡಿ ಸಂಜೆ 5 ಗಂಟೆಗೆ ಮಾನ್ಯ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ 7 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸದಾನಂದಗೌಡರು ಆರ್ಶೀವಾದ ಪಡೆದರು.

    2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಮೋದಿ ಸಂಪುಟದಲ್ಲಿ ಸಚಿವರಾಗುತ್ತಿರುವುದು ಖಚಿತವಾಗುತ್ತಿದಂತೆ ಸದಾನಂದ ಗೌಡರು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಬಿಎಸ್‍ವೈರನ್ನ ಭೇಟಿ ಮಾಡಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಇತ್ತ ಬಿಎಸ್‍ವೈ, ಸದಾನಂದಗೌಡರಿಗೆ ಸಿಹಿ ತಿನಿಸಿ ಶುಭಕೋರಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‍ವೈ, ಸದಾನಂದಗೌಡರೇ ನಿಮಗೆ ಸಿಹಿ ತಿನಿಸುವ ಮೊದಲು ಒಂದು ಷರತ್ತು ಇದೆ. ನೀವು ದೆಹಲಿಯಲ್ಲಿ ದಿವಂಗತ ಅನಂತಕುಮಾರ್ ಅವರ ಸ್ಥಾನವನ್ನು ತುಂಬಬೇಕು. ಅನಂತಕುಮಾರ್ ಅವರ ರೀತಿಯಲ್ಲೇ ಕೆಲಸ ಮಾಡಬೇಕು. ರಾಜ್ಯದ ಜನರಿಗೆ ದೆಹಲಿಯಲ್ಲಿ ಸ್ಪಂದಿಸಬೇಕು ಎಂದು ಷರತ್ತುಗಳನ್ನು ವಿಧಿಸಿದರು. ಬಿಎಸ್‍ವೈರ ಷರತ್ತುಗಳಿಗೆ ಒಪ್ಪಿಕೊಂಡ ಸದಾನಂದ ಗೌಡರು ಬಳಿಕ ಸಿಹಿ ತಿನ್ನಿಸಿದರು.

  • ಕರ್ನಾಟಕದಲ್ಲಿ ಪೊಲಿಟಿಕಲ್ ಸರ್ಜಿಕಲ್ ಸ್ಟ್ರೈಕ್- ಸುಮಲತಾಗೆ ಕೇಂದ್ರ ಸಚಿವೆ ಸ್ಥಾನ?

    ಕರ್ನಾಟಕದಲ್ಲಿ ಪೊಲಿಟಿಕಲ್ ಸರ್ಜಿಕಲ್ ಸ್ಟ್ರೈಕ್- ಸುಮಲತಾಗೆ ಕೇಂದ್ರ ಸಚಿವೆ ಸ್ಥಾನ?

    ಬೆಂಗಳೂರು: ಲೋಕಸಭಾ ಚುನಾವಣೆಯಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಇದೀಗ ನೂತನ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ.

    ಸಂಸದೆ ಸುಮಲತಾರನ್ನ ಮಂತ್ರಿ ಮಾಡುವ ಮೂಲಕ ನರೆಂದ್ರ ಮೋದಿ ಅವರು ಪೊಲಿಟಿಕಲ್ ಸರ್ಜಿಕಲ್ ಸ್ಟ್ರೈಕ್ ಮಾಡಲು ಮುಂದಾಗಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಸಚಿವರಾಗುತ್ತಾರ ಎಂಬ ಕುತೂಹಲ ಮೂಡಿದೆ. ಜೊತಗೆ ಪಕ್ಷೇತರ ಸಂಸದೆ ಸುಮಲತಾ ಅವರಿಂದ ಮೋದಿ ಅವರು ಬಾಹ್ಯ ಬೆಂಬಲ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಸುಮಲತಾ ಅವರಿಗೆ ಸಚಿವ ಸ್ಥಾನ ಕೊಡುವ ಯೋಚನೆ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿದ್ದು, ಸುಮಲತಾ ಮಂತ್ರಿ ಮಾಡುವುದರ ಮೂಲಕ ದೇವೇಗೌಡರಿಗೆ ಟಾಂಗ್ ಕೊಡುವ ಲೆಕ್ಕಾಚಾರವನ್ನು ಮೋದಿ ಮಾಡಿದ್ದಾರೆ ಎನ್ನಲಾಗಿದೆ. ಸುಮಲತಾರಿಗೆ ಸಚಿವ ಸ್ಥಾನ ಕೊಟ್ಟು ಜೆಡಿಎಸ್ ಪ್ರಭಾವ ಕಡಿಮೆ ಮಾಡುವ ತಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.

    ಮಂಡ್ಯ, ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಭಾವ ಅಧಿಕವಾಗಿದೆ. ಹೀಗಾಗಿ ಅಲ್ಲಿ ಜೆಡಿಎಸ್‍ನ ಪ್ರಭಾವನ್ನು ಕುಗ್ಗಿಸಲು ಮತ್ತು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸುವ ಮೋದಿ ಈ ರೀತಿ ಐಡಿಯಾ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

    ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದರು. ಹೀಗಾಗಿ ಮೋದಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದರು, ಹಾಗಾಗಿ ಮಂತ್ರಿ ಸ್ಥಾನದ ಕೊಡುತ್ತಾರೆ ಎಂದು ಜನರು ಹೇಳುತ್ತಿದ್ದಾರೆ. ಒಂದು ವೇಳೆ ಸುಮಲತಾ ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಬಿಜೆಪಿ ಮೇಲೆ ಅನುಕಂಪದಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಜನತೆ ಸಂಪೂರ್ಟ್ ಮಾಡುತ್ತಾರೆ ಎಂಬುದು ಮೋದಿ ಅವರ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.