Tag: Prime Minister Imran Khan

  • ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ದೊಡ್ಡಣ್ಣ – ಮತ್ತೆ ವಿವಾದ ಸೃಷ್ಟಿಸಿದ ನವಜೋತ್ ಸಿಂಗ್

    ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ದೊಡ್ಡಣ್ಣ – ಮತ್ತೆ ವಿವಾದ ಸೃಷ್ಟಿಸಿದ ನವಜೋತ್ ಸಿಂಗ್

    ನವದೆಹಲಿ: ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪ್ರಧಾನಿಯನ್ನು ನನ್ನ ಹಿರಿಯ ಸಹೋದರ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

    ಶನಿವಾರ ಗುರುದ್ವಾರ ಕರ್ತಾರ್‌ಪುರ ಸಾಹಿಬ್‍ಗೆ ಭೇಟಿ ನೀಡಿದ ನವಜೋತ್ ಸಿಂಗ್ ಸಿಧು ಅವರು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಡಾ ಭಾಯ್ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇದನ್ನೂ ಓದಿ:  ರಸ್ತೆಯಲ್ಲಿದ್ದ ಸಸಿ ಕಿತ್ತುಕೊಂಡು ನೆಟ್ಟಿಗರ ಕಣ್ಣಿಗೆ ಗುರಿಯಾದ ಮಹಿಳೆಯರು – ವೀಡಿಯೋ ವೈರಲ್

    ಇನ್ನೂ ಈ ವೀಡಿಯೋವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಮಿತ್ ಮಾಳವಿಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ರಾಹುಲ್ ಗಾಂಧಿಯವರ ನೆಚ್ಚಿನ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು “ಬಡಾ ಭಾಯ್” ಎಂದು ಕರೆಯುತ್ತಿದ್ದಾರೆ. ಕಳೆದ ಬಾರಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನು ತಬ್ಬಿಕೊಂಡಿದ್ದರು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಕರ್ತಾರ್‌ಪುರ ಗುರುದ್ವಾರಕ್ಕೆ ಭೇಟಿ ನೀಡಿದ ನವಜೋತ್ ಸಿಂಗ್ ಅವರು, ಕರ್ತಾರ್‌ಪುರ ಅಧಿಕಾರಿಯೊಬ್ಬರನ್ನು ಭೇಟಿಯಾಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ನವಜೋತ್ ಸಿಂಗ್ ಸಿಧು ಅವರನ್ನು ಅಧಿಕಾರಿಗಳು ಹೂಮಾಲೆ ಹಾಕಿ ಸ್ವಾಗತಿಸುವ ವೇಳೆ, ಈ ದಿನಕ್ಕಾಗಿ ನಾವು ಇಷ್ಟು ದಿನ ಕಾಯುತ್ತಿದ್ದೇವು. ನನಗೆ ನಿಮ್ಮ ಮೇಲೆ ಗೌರವವಿದೆ. ಇಮ್ರಾನ್ ಖಾನ್ ಅವರು ನನ್ನ ಹಿರಿಯ ಸಹೋದರ. ತುಂಬಾ ಧನ್ಯವಾದ ಎಂದು ಹೇಳುವುದನ್ನು ವೀಡಿಯೋದಲ್ಲಿ ಹೆಳಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ:  ನೀನು ನನ್ನ ಮಗ ಎಂದು ಹೇಳಲು ಹೆಮ್ಮೆ ಪಡುತ್ತೇನೆ: ಬಿಗ್ ಬಿ

    ಈ ಮುನ್ನ 2018ರಲ್ಲಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ನವಜೋತ್ ಸಿಂಗ್ ಸಿಧು ಅವರು ಜನರಲ್ ಬಾಜ್ವಾ ಅವರನ್ನು ತಬ್ಬಿಕೊಂಡು ವಿವಾದದಲ್ಲಿ ಸಿಲುಕಿಕೊಂಡಿದ್ದರು.

  • ಆತ್ಮಾಹುತಿ ಬಾಂಬ್ ದಾಳಿ- ಮೂವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಆತ್ಮಾಹುತಿ ಬಾಂಬ್ ದಾಳಿ- ಮೂವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಇಸ್ಲಾಮಾಬಾದ್: ಮೋಟಾರ್ ಬೈಕ್‍ನಲ್ಲಿ ಬಂದ ವ್ಯಕ್ತಿಯ ಆತ್ಮಾಹುತಿ ಬಾಂಬ್ ದಾಳಿಗೆ ಮೂವರು ಮೃತಪಟ್ಟು, 20 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದಿದೆ.

    ಬೈಕ್‍ನಲ್ಲಿ ಬಂದ ಸೂಸೈಡ್ ಬಾಂಬರ್ ಚೆಕ್​ಪೋಸ್ಟ್ ಬಳಿ ಕಾನೂನು ಜಾರಿ ಸಂಸ್ಥೆಗೆ ಸೇರಿದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ದಾಳಿಯಲ್ಲಿ ಮೃತಪಟ್ಟ ಮೂರೂ ಮಂದಿ ಈ ಪ್ಯಾರಾಮಿಲಿಟರಿ ಸಿಬ್ಬಂದಿಯೇ ಆಗಿದ್ದಾರೆ. ಐಟಿಪಿ ನಡೆಸಿದ ಈ ಸೂಸೈಡ್ ಬಾಂಬ್ ದಾಳಿಯನ್ನು ಪ್ರಧಾನಿ ಇಮ್ರಾನ್ ಖಾನ್ ಖಂಡಿಸಿದ್ದಾರೆ. ದಾಳಿಯಲ್ಲಿ ಹುತಾತ್ಮರಾದವರ ಕುಟುಂಬಕ್ಕೆ ಸಾಂತ್ವನಗಳು ಹಾಗೂ ಗಾಯಗೊಂಡವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ವಿದೇಶಿ ಬೆಂಬಲಿತ ಉಗ್ರರಿಂದ ನಮ್ಮನ್ನು ಸದಾಕಾಲ ಸುರಕ್ಷಿತವಾಗಿಡುವ ರಕ್ಷಣಾ ಸಿಬ್ಬಂದಿಗೆ ಸೆಲ್ಯೂಟ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ

    ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ದಕ್ಷಿಣ ಭಾಗದಿಂದ ಸುಮಾರು 25 ಕಿಮೀ ದೂರದಲ್ಲಿ, ಕ್ವೆಟ್ಟಾ ಮಸ್ತುಂಗ್ ರಸ್ತೆಯ ಅರೆ ಮಿಲಿಟರಿ ಫ್ರಂಟಿಯರ್ ಕಾಪ್ರ್ಸ್ ಇರುವ ಚೆಕ್‍ಪಾಯಿಂಟ್ ಸಮೀಪ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಶೇಖ್ ಜೈದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಟಿಟಿಪಿ ಸಂಘಟನೆಯ ಸಮಸ್ಯೆಗಳನ್ನು ಇಮ್ರಾನ್ ಖಾನ್ ಸರ್ಕಾರ ಶೀಘ್ರವೇ ಬಗೆಹರಿಸಬೇಕು. ಅದನ್ನು ಬಗೆಹರಿಸಬೇಕಾಗಿದ್ದು ಅಫ್ಘಾನಿಸ್ತಾನವಲ್ಲ. ಸಂಘಟನೆಯ ಕಷ್ಟ ಆಲಿಸಿ ಪರಿಹಾರ ಕೊಡುವ ಜವಾಬ್ದಾರಿ ಪಾಕಿಸ್ತಾನಿ ಸರ್ಕಾರ, ಧಾರ್ಮಿಕ ಗುಂಪುಗಳದ್ದೇ ಹೊರತು, ಅಫ್ಘಾನಿಸ್ತಾನದ ತಾಲಿಬಾನಿಗಳದ್ದಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದರು. ಈ ಮೂಲಕ ಟಿಟಿಪಿಗೂ ತಮಗೂ ಸಂಬಂಧವಿಲ್ಲ ಎಂದಿದ್ದರು. ಇತ್ತೀಚೆಗೆ ಈ ಬಲೂಚಿಸ್ತಾನ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಉಗ್ರರ ದಾಳಿಗಳು ಪದೇಪದೆ ನಡೆಯುತ್ತಿವೆ.

  • ರಿಕ್ಷಾ ಸವಾರಿ ಮಾಡಿದ್ರಾ ಪಾಕ್ ಪ್ರಧಾನಿ..?- ವೈರಲಾದ ವೀಡಿಯೋ ನೋಡಿ

    ರಿಕ್ಷಾ ಸವಾರಿ ಮಾಡಿದ್ರಾ ಪಾಕ್ ಪ್ರಧಾನಿ..?- ವೈರಲಾದ ವೀಡಿಯೋ ನೋಡಿ

    ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕುರಿತಾದ ಸುದ್ದಿಯೊಂದು ಇದೀಗ ಸೋಶಿಯಲ್ ಮೀಡಿಯಾನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಹೌದು. ವ್ಯಕ್ತಿಯೊಬ್ಬ ಆಟೋರಿಕ್ಷಾ ಸವಾರಿಯನ್ನು ಆನಂದಿಸುತ್ತಾ ಹೋಗುತ್ತಿರುವ ವೀಡಿಯೋವೊಂದು ಕೆಲವು ಗಂಟೆಗಳಿಂದ ಸೋಶಿಯಲ್ ಮೀಡಿಯಾನಲ್ಲಿ ವೈರಲ್ ಆಗಿದ್ದು, ಆತ ಈ ವೀಡಿಯೋ ಮೂಲಕ ಈಗ ಬಾರಿ ಪ್ರಸಿದ್ಧಿ ಪಡೆದುಕೊಳ್ಳುತ್ತಿದ್ದಾನೆ.

    ಈ ವಿಡಿಯೋದಲ್ಲಿರುವ ವ್ಯಕ್ತಿ ನೋಡುವುದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯುವಕರಾಗಿದ್ದಾಗ ಹೇಗಿದ್ದರೂ ಅದೇ ಹೋಲಿಕೆಯನ್ನು ಈತ ಹೊಂದಿದ್ದಾನೆ ಎಂದು ಹಲವು ಅಭಿಮಾನಿಗಳು ಮತ್ತು ಪಾಕ್ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಸೆಲೆಬ್ರಿಟಿ ಹೋಲಿಕೆ ಹೊಂದಿರುವಂತಹ ಹಲವು ಮಂದಿಗಳನ್ನು ಗಮನಿಸಿರಬಹುದು. ಈ ಹಿಂದೆ ಫೇಮಸ್ ನೀಲಿ ಕಣ್ಣಿನ ಚೈವಾಲಾ ಹೋಲಿಕೆ ಹೊಂದುವ ಮತ್ತೊಬ್ಬ ವ್ಯಕ್ತಿ ಕಂಡು ಬಂದಿದ್ದ, ಅದರಂತೆ ಒಬ್ಬರ ಹೋಲಿಕೆಯನ್ನು ಹೊಂದುವಂತೆ ಮತ್ತೊಬ್ಬರು ಇರುವುದು ಹೊಸ ವಿಚಾರವೇನಲ್ಲ ಎಂದು ಸೋಶಿಯಲ್ ಮೀಡಿಯಾ ವರದಿಯಲ್ಲಿ ತಿಳಿಸಲಾಗಿದೆ.

    ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋ ಇಮ್ರಾನ್ ಖಾನ್ ಯುವಕರಾಗಿದ್ದಾಗ ಕ್ರಿಕೆಟ್ ಆಟದ ದಿನಗಳನ್ನು ನೆನಪಿಸುತ್ತಿದೆ.
    ಇಮ್ರಾನ್ ಖಾನ್ 2018ರ ಆಗಸ್ಟ್ 17 ರಂದು 176 ಮತಗಳನ್ನು ಗಳಿಸಿ, 2018ರ ಆಗಸ್ಟ್ 18ರಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಪಾಕಿಸ್ತಾನದ 22ನೇ ಪ್ರಧಾನ ಮಂತ್ರಿಯಾದರು.

  • ಉಗ್ರ ಒಸಾಮಾ ಬಿನ್ ಲಾಡೆನ್‍ನನ್ನು ಹುತಾತ್ಮ ಎಂದ ಇಮ್ರಾನ್ ಖಾನ್

    ಉಗ್ರ ಒಸಾಮಾ ಬಿನ್ ಲಾಡೆನ್‍ನನ್ನು ಹುತಾತ್ಮ ಎಂದ ಇಮ್ರಾನ್ ಖಾನ್

    ನವದೆಹಲಿ: ಪಾಕಿಸ್ತಾನಿಗಳು ಉಗ್ರರನ್ನು ಎಷ್ಟು ಗೌರವಿಸುತ್ತಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಲಭ್ಯವಾಗಿದ್ದು, ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್‍ನಲ್ಲೇ ಅಮೆರಿಕ ಸೈನಿಕರು ಹತ್ಯೆ ಮಾಡಿದ ಅಲ್ ಖೈದಾ ಮುಖ್ಯಸ್ಥ, ಉಗ್ರ ಒಸಾಮಾ ಬಿನ್ ಲಾಡೆನ್‍ಗೆ ಹುತಾತ್ಮ ಪಟ್ಟವನ್ನು ನೀಡಿ ಗೌರವಿಸಿದ್ದಾರೆ.

    ಇಮ್ರಾನ್ ಖಾನ್ ಪಾಕಿಸ್ತಾನದ ಪಾರ್ಲಿಮೆಂಟ್‍ನಲ್ಲಿ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಮೂಲಕ ಪಾಕಿಸ್ತಾನ ಉಗ್ರರಿಗೆ ಎಷ್ಟು ಗೌರವ ಕೊಡುತ್ತದೆ ಎಂಬುದು ಬಯಲಾಗಿದೆ. ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡದೆ ಅಮೆರಿಕ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ಒಸಾಮಾ ಬಿನ್ ಲಾಡೆನ್‍ನನ್ನು ಹತ್ಯೆ ಮಾಡಿದರು. ಬಳಿಕ ವಿಶ್ವದ ಪ್ರತಿಯೊಬ್ಬರೂ ಪಾಕಿಸ್ತಾನವನ್ನು ನಿಂದಿಸಲು ಪ್ರಾರಂಭಿಸಿದರು. ಈ ಮೂಲಕ ಮುಜುಗರಕ್ಕೀಡು ಮಾಡಿದರು ಎಂದು ದೂರಿದ್ದಾರೆ.

    ಭಯೋತ್ಪಾದನೆ ವಿರುದ್ಧ ಯುಎಸ್ ನಡೆಸಿದ ಯುದ್ಧದಲ್ಲಿ 70 ಸಾವಿರ ಪಾಕಿಸ್ತಾನಿಗಳು ಸಾವನ್ನಪ್ಪಿದರು ಎಂದು ಖಾನ್ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಸಾಮಾ ಬಿನ್ ಲಾಡೆನ್ ಹುತಾತ್ಮನೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

    ವಿಶ್ವ ವಾಣಿಜ್ಯ ಕೇಂದ್ರದ ದಾಳಿಯ ರೂವಾರಿ, ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‍ನನ್ನು 2011ರ ಮೇ 2 ರಂದು ಅಮೆರಿಕ ನೌಕಾಪಡೆ ಹತ್ಯೆ ಮಾಡಿದೆ. ಒಸಾಮಾ ತಂಗಿದ್ದ ಪಾಕಿಸ್ತಾನದ ಅಬೋಟಾಬಾದ್ ನಿವಾಸದ ಮೇಲೆ ಅಮೆರಿಕ ನೌಕಾಪಡೆಯ ಸೀಲ್ ಕಮಾಂಡೊಗಳು ದಾಳಿ ನಡೆಸಿ ಹತ್ಯೆ ಮಾಡಿತ್ತು. ನಂತರ ಈ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ಈತ ಉಗ್ರ ಎಂಬುದು ವಿಶ್ವಕ್ಕೆ ತಿಳಿದಿದ್ದರಿಂದ ಈತನ ಹತ್ಯೆಯಾದರೂ ಪಾಕಿಸ್ತಾನ ತುಟಿ ಬಿಚ್ಚಿರಲಿಲ್ಲ. ಇದೀಗ ಇಮ್ರಾನ್ ಖಾನ್ ಒಸಾಮಾ ಹುತಾತ್ಮ ಎಂದು ಹೇಳಿದ್ದಾರೆ.

  • ರಾಷ್ಟ್ರೀಯ ಸಮಾರಂಭದಲ್ಲಿ ತಂಬಾಕು ಸೇವಿಸಿ ಸಿಕ್ಕಿಬಿದ್ದ ಅಫ್ರಿದಿ

    ರಾಷ್ಟ್ರೀಯ ಸಮಾರಂಭದಲ್ಲಿ ತಂಬಾಕು ಸೇವಿಸಿ ಸಿಕ್ಕಿಬಿದ್ದ ಅಫ್ರಿದಿ

    ಇಸ್ಲಾಮಾಬಾದ್: ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವು ಬಾರಿ ವಿವಾದಕ್ಕೆ ಗುರಿಯಾಗಿದ್ದ ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ನಿವೃತ್ತಿಯ ಬಳಿಕವೂ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ.

    ಪಾಕಿಸ್ತಾನದ ರಕ್ಷಣಾ ದಿವಸ್ ಕಾರ್ಯಕ್ರಮ ಸೆ.6 ರ ಗುರುವಾರದಂದು ರಾವಲ್ಪಿಂಡಿಯಲ್ಲಿ ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಅಫ್ರಿದಿ ಯಾರಿಗೂ ತಿಳಿದಂತೆ ತಂಬಾಕು ಸೇವನೆ ಮಾಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಕಾರ್ಯಕ್ರಮದಲ್ಲಿ ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

    https://twitter.com/babarbinatta/status/1037726413959450624

    ಅಫ್ರಿದಿ ತಂಬಾಕು ಸೇವಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಗಣ್ಯರೊಂದಿಗೆ ಕುಳಿತಿದ್ದ ಅಫ್ರಿದಿ ತಮ್ಮ ಜೇಬಿನಿಂದ ತಂಬಾಕು ತಗೆದು ಯಾರಿಗೂ ತಿಳಿಯದಂತೆ ಸೇವಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದಂತೆ ಟ್ವೀಟಿಗರು ಅಫ್ರಿದಿಯನ್ನು ಟ್ರೋಲ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಪಾಕಿಸ್ತಾನದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅಫ್ರಿದಿಯ ವಿಡಿಯೋ ನೋಡಿದವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಕ್ಷಣಾ ಕಾರ್ಯಕ್ರಮದಲ್ಲಿ ಉನ್ನತ ರಕ್ಷಣಾ ಅಧಿಕಾರಿಗಳು ಹಾಗೂ ಪೊಲೀಸರ ಪಕ್ಕದಲ್ಲೇ ಕುಳಿತು ಅಫ್ರಿದಿ ಈ ರೀತಿ ವರ್ತಿಸಿದ್ದ ವಿರುದ್ಧ ಬೇಸರ ವ್ಯಕ್ತಪಡಿಸಿ ಕಿಡಿಕಾರಿದ್ದಾರೆ. ಕೆಲವರು ಅಫ್ರಿದಿ ಕಾಲೆಳೆದು ರೀ ಟ್ವೀಟ್ ಮಾಡಿದ್ದಾರೆ.