Tag: prime minister

  • ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಬಲಪಂಥೀಯ ನಾಯಕಿ ಸನೆ ತಾಕೈಚಿ ಆಯ್ಕೆ

    ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಬಲಪಂಥೀಯ ನಾಯಕಿ ಸನೆ ತಾಕೈಚಿ ಆಯ್ಕೆ

    ಟೋಕಿಯೊ: ಜಪಾನ್ ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆಯೊಬ್ಬರು ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ. ಬಲಪಂಥೀಯ ನಾಯಕಿ ಸನೆ ತಾಕೈಚಿ (Sanae Takaichi) ಜಪಾನಿನ (Japan) ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

    ಆಡಳಿತರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ (LDP) ಕಟ್ಟಾ ಸಂಪ್ರದಾಯವಾದಿಯಾಗಿರುವ 64 ವರ್ಷದ ಸನೆ ತಾಕೈಚಿ ಅವರನ್ನು ಪ್ರಧಾನಿಯನ್ನಾಗಿ ಸಂಸತ್ತು ಆಯ್ಕೆ ಮಾಡಿದೆ.

    ಶಿಂಜೊ ಅಬೆ ಅವರ ಶಿಷ್ಯೆಯಾಗಿದ್ದ ತಕೈಚಿ, ಅಬೆ ಅವರ ಪ್ರಧಾನಿ ಅವಧಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಅಕ್ಟೋಬರ್‌ 4ರಂದು ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸನೆ ತಾಕೈಚಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ದೇಶದ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯ್ಚುಮಿ ಅವರ ಪುತ್ರ ಹಾಗೂ ಕೃಷಿ ಸಚಿವ ಶಿಂಜಿರೊ ಕೊಯ್ಚುಮಿ ಅವರನ್ನು ಸನೆ ಸೋಲಿಸಿದ್ದರು.

    ಜಪಾನ್ ಮೊದಲು ವಿದೇಶಾಂಗ ನೀತಿಯನ್ನು ಪ್ರತಿಪಾದಿಸುತ್ತಿರುವ ಇವರು ಅಮೆರಿಕದ ವ್ಯಾಪಾರ ನಿಯಮಗಳನ್ನು ಟೀಕಿಸಿದ್ದರು. ತೈವಾನ್ ಪರ ಒಲವು ಹೊಂದಿರುವ ಇವರು ಚೀನಾದ ಗಿಡುಗ ಎಂದು ಪ್ರಖ್ಯಾತಿ ಪಡೆದಿದ್ದಾರೆ.

    ತಮ್ಮ ಪ್ರಚಾರ ಭಾಷಣದಲ್ಲಿ ಇಸ್ಲಾಮಿಸ್ಟ್‌ಗಳು ಅಥವಾ ಅಕ್ರಮ ವಲಸಿಗರನ್ನು ಜಪಾನ್‌ ಸ್ವೀಕರಿಸುವುದಿಲ್ಲ. ಜಪಾನ್‌ ದೇಶವಾಗಿ ಉಳಿಯಬೇಕಾದರೆ ನಕಲಿ ನಿರಾಶ್ರಿತರನ್ನು ಹೊರಗೆ ಕಳುಹಿಸಬೇಕು ಗುಡುಗಿದ್ದರು.

    ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸನೆ ತಾಕೈಚಿ ದೂರದರ್ಶನ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಸಲಿಂಗ ವಿವಾಹ ಮತ್ತು ವಿವಾಹಿತ ದಂಪತಿಗಳಿಗೆ ಪ್ರತ್ಯೇಕ ಉಪನಾಮಗಳನ್ನು ನೀಡುವುದಕ್ಕೆ ದೀರ್ಘಕಾಲೀನ ವಿರೋಧಿಯಾಗಿದ್ದಾರೆ.

    ಸನೆ ತಾಕೈಚಿ ಅಯ್ಕೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

  • ನೇಪಾಳ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿಗೆ ಶುಭ ಕೋರಿದ ಪ್ರಧಾನಿ ಮೋದಿ

    ನೇಪಾಳ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿಗೆ ಶುಭ ಕೋರಿದ ಪ್ರಧಾನಿ ಮೋದಿ

    ನವದೆಹಲಿ: ನೇಪಾಳದ (Nepal) ಹಂಗಾಮಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ (Sushila Karki) ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಭ ಕೋರಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಅಭಿನಂದನೆ ಸಲ್ಲಿಸಿದ ಅವರು, ನೇಪಾಳದ ಮಧ್ಯಂತರ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಸುಶೀಲಾ ಕರ್ಕಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೇಪಾಳದ ಸಹೋದರ, ಸಹೋದರಿಯರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತ ಸಂಪೂರ್ಣವಾಗಿ ಬದ್ಧವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ನೇಪಾಳಕ್ಕೆ ಮೊದಲ ಮಹಿಳಾ ಪ್ರಧಾನಿ – ಪ್ರಮಾಣವಚನ ಸ್ವೀಕರಿಸಿದ ಸುಶೀಲಾ ಕರ್ಕಿ

    ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಮಧ್ಯಂತರ ಪ್ರಧಾನಿಯಾಗಿ ಶುಕ್ರವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಕರ್ಕಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.

    ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ನೇಪಾಳ ಜನತೆ ಸಿಡಿದೆದ್ದು ಭಾರೀ ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಕಚೇರಿಗಳು, ಸಂಸತ್ ಭವನಕ್ಕೆ ನುಗ್ಗಿ ಧ್ವಂಸಗೊಳಿಸಿದರು. ಸಚಿವರನ್ನು ಹಿಡಿದು ಥಳಿಸಿದರು. ಪ್ರತಿಭಟನೆ ತೀವ್ರತೆ ಅರಿತು ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ (KP Sharma Oli)  ರಾಜೀನಾಮೆ ನೀಡಿದರು.

  • ಮುಂದಿನ ಬಾರಿ ರಾಹುಲ್ ಗಾಂಧಿಯನ್ನ ಪ್ರಧಾನಿ ಮಾಡುತ್ತೇವೆ – ಮತದಾರ ಅಧಿಕಾರ್ ರ‍್ಯಾಲಿಯಲ್ಲಿ ತೇಜಸ್ವಿ ಯಾದವ್ ಘೋಷಣೆ

    ಮುಂದಿನ ಬಾರಿ ರಾಹುಲ್ ಗಾಂಧಿಯನ್ನ ಪ್ರಧಾನಿ ಮಾಡುತ್ತೇವೆ – ಮತದಾರ ಅಧಿಕಾರ್ ರ‍್ಯಾಲಿಯಲ್ಲಿ ತೇಜಸ್ವಿ ಯಾದವ್ ಘೋಷಣೆ

    ಪಾಟ್ನಾ: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ರಾಹುಲ್ ಗಾಂಧಿ (Rahul Gandhi) ಅವರನ್ನು ಪ್ರಧಾನಿಯನ್ನಾಗಿ ಮಾಡಲು ವಿರೋಧ ಪಕ್ಷಗಳು ಕೆಲಸ ಮಾಡುತ್ತವೆ ಎಂದು ಆರ್‌ಜೆಡಿ ನಾಯಕ, ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಸುಳಿವು ನೀಡಿದ್ದಾರೆ.

    ಬಿಹಾರದ (Bihar) ನವಾಡದಲ್ಲಿ ನಡೆದ ‘ಮತದಾರ ಅಧಿಕಾರ್’ ರ‍್ಯಾಲಿಯಲ್ಲಿ (Voter Adhikar Rally) ಮಾತನಾಡಿದ ಅವರು, ಮುಂದಿನ ಬಾರಿ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ ಸಸಿಕಾಂತ್‌ ಸೆಂಥಿಲ್: ಜನಾರ್ದನ ರೆಡ್ಡಿ

    ಬಿಹಾರದ ಜನರನ್ನು ಮೂರ್ಖರನ್ನಾಗಿಸಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆಯನ್ನು ರಚಿಸಿಕೊಂಡಿವೆ. ಮತದಾನದ ಹಕ್ಕನ್ನು ಬಿಜೆಪಿ ಕಸಿದುಕೊಳ್ಳಲು ಬಯಸುತ್ತಿದೆ, ನಾವು ಬಿಹಾರಿಗಳು. ಒಬ್ಬ ಬಿಹಾರಿ ಎಲ್ಲರಿಗಿಂತ ಮೇಲು. ನಾವು ಚುನಾವಣೆಗಳನ್ನು ಖೈನಿನಂತೆ (ತಂಬಾಕು ಜಗಿಯುವುದು) ಪರಿಗಣಿಸುತ್ತೇವೆ. ನಾವು ಅದನ್ನು ಉಜ್ಜಿ ಎಸೆಯುತ್ತೇವೆ ಎಂದರು. ಇದನ್ನೂ ಓದಿ: ನಿಗದಿತ ಸಮಯದಲ್ಲಿ ಕಲಬುರಗಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ: ಶಿವಾನಂದ ಪಾಟೀಲ್

    ಚುನಾವಣಾ ಅಯೋಗ ಬಿಜೆಪಿಯ ಆದೇಶದಂತೆ ಜೀವಂತ ಮತದಾರರ ಹೆಸರುಗಳನ್ನು ಅಳಿಸಿಹಾಕಿ ಅವರನ್ನು ಸತ್ತಿದ್ದಾರೆಂದು ಘೋಷಿಸುತ್ತಿದೆ. ಚುನಾವಣಾ ಆಯೋಗ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 65 ಲಕ್ಷಕ್ಕೂ ಹೆಚ್ಚು ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ತೋರಿಸಲಾಗಿದೆ. ಎಸ್‌ಐಆರ್ ಮತಗಳ ದರೋಡೆಕೋರ. ನಾವು ಹಾಗೆ ಆಗಲು ಬಿಡುವುದಿಲ್ಲ. ಹಳೆಯ ಮತ್ತು ದುರ್ಬಲ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಕಿತ್ತೊಗೆಯುವಂತೆ ಆರ್‌ಜೆಡಿ ನಾಯಕ ಯುವಕರನ್ನು ಒತ್ತಾಯಿಸಿದರು. ಇದನ್ನೂ ಓದಿ: ಮತಗಳ್ಳತನ ಆರೋಪ; ಆಯೋಗದ ಕ್ರಮವನ್ನು ಸದನ ಖಂಡಿಸಬೇಕು: ಬಿ.ಕೆ ಹರಿಪ್ರಸಾದ್

  • ಪ್ರಧಾನಿ ಮೋದಿಗೆ `ಧರ್ಮ ಚಕ್ರವರ್ತಿ’ ಬಿರುದು ಪ್ರದಾನ

    ಪ್ರಧಾನಿ ಮೋದಿಗೆ `ಧರ್ಮ ಚಕ್ರವರ್ತಿ’ ಬಿರುದು ಪ್ರದಾನ

    ನವದೆಹಲಿ: ಜೈನ ಸಂತ ಆಚಾರ್ಯ ಶ್ರೀ 108 ವಿದ್ಯಾನಂದ (Jain saint Vidyanand) ಜಿ ಮಹಾರಾಜ್ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ `ಧರ್ಮ ಚಕ್ರವರ್ತಿ’ (Dharma Chakravarti) ಎಂಬ ಬಿರುದನ್ನು ಪ್ರದಾನ ಮಾಡಲಾಯಿತು.

    ಈ ಗೌರವವನ್ನು ನಮ್ರತೆಯಿಂದ ಸ್ವೀಕರಿಸಿದ ಪ್ರಧಾನಿ ಮೋದಿ (Narendra Modi), ನಾನು ಇದಕ್ಕೆ ಸೂಕ್ತನೆಂದು ಭಾವಿಸುವುದಿಲ್ಲ. ಆದರೆ ನಾವು ಸಂತರಿಂದ ಏನೇ ಸ್ವೀಕರಿಸಿದರೂ ಅದನ್ನು ಪ್ರಸಾದ ಎಂದು ಸ್ವೀಕರಿಸುವುದು ನಮ್ಮ ಸಂಸ್ಕೃತಿ. ಆದ್ದರಿಂದ, ನಾನು ಈ ಪ್ರಸಾದವನ್ನು ವಿನಮ್ರವಾಗಿ ಸ್ವೀಕರಿಸಿ ಭಾರತ ಮಾತೆಗೆ ಅರ್ಪಿಸುತ್ತೇನೆ ಎಂದು ಹೇಳಿದರು.

    ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಪ್ರಧಾನಿ ಮೋದಿ ಅವರು 1987ರ ಜೂನ್ 28 ರಂದು ಆಚಾರ್ಯ ವಿದ್ಯಾನಂದರಿಗೆ ‘ಆಚಾರ್ಯ’ ಎಂಬ ಬಿರುದು ದೊರೆತಿತ್ತು ಎಂದು ಹೇಳಿದರು. ಇದು ಕೇವಲ ಗೌರವವಲ್ಲ, ಬದಲಾಗಿ ಜೈನ ಸಂಸ್ಕೃತಿಯನ್ನು ಸಂಯಮ ಮತ್ತು ಕರುಣೆಗೆ ಸಂಪರ್ಕಿಸುವ ಪವಿತ್ರ ಧಾರ ಎಂದು ಅವರು ಹೇಳಿದರು. ಈ ಆಚರಣೆಗಳು ಶಿಸ್ತುಬದ್ಧ, ತಪಸ್ವಿ ಜೀವನದ ಜ್ಞಾಪನೆ ಎಂದು ಬಣ್ಣಿಸುತ್ತಾ ಪ್ರಧಾನಿ ಆಚಾರ್ಯರಿಗೆ ಗೌರವ ಸಲ್ಲಿಸಿದರು.

    ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತಾ ಭಾರತವು ವಿಶ್ವದ ಅತ್ಯಂತ ಹಳೆಯ ಜೀವಂತ ಸಂಸ್ಕೃತಿಯಾಗಿದೆ. ನಮ್ಮ ವಿಚಾರಗಳು, ಆಲೋಚನೆಗಳು ಮತ್ತು ತತ್ವಶಾಸ್ತ್ರವು ಅಮರವಾಗಿರುವುದರಿಂದ ನಾವು ಸಾವಿರಾರು ವರ್ಷಗಳಿಂದ ಅಮರರಾಗಿದ್ದೇವೆ ಎಂದರು.

    ಶತಮಾನೋತ್ಸವದ ಗೌರವದ ಭಾಗವಾಗಿ, ಪ್ರಧಾನಿ ಮೋದಿ ಮತ್ತು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರನ್ನು ಗೌರವಿಸುವ ಸ್ಮರಣಾರ್ಥ ಅಂಚೆ ಚೀಟಿಗಳ ಸರಣಿಯನ್ನು ಬಿಡುಗಡೆ ಮಾಡಿದರು.

  • ಶನಿವಾರ ಬೆಳಗ್ಗೆ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಶನಿವಾರ ಬೆಳಗ್ಗೆ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    – ಬೆಳಗ್ಗೆ 9.30ರ ಬಳಿಕ ಅಂತಿಮ ಯಾತ್ರೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

    ನವದೆಹಲಿ: ದೇಶದ ಅಭಿವೃದ್ಧಿಯ ಹರಿಕಾರ, ಆರ್ಥಿಕತೆಯ ವಾಸ್ತುಶಿಲ್ಪಿ, ರಾಜಕಾರಣಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Manmohan Singh) ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ನಿವಾಸದಲ್ಲೇ ಚಿಕಿತ್ಸೆ ಕೊಡಲಾಗ್ತಿತ್ತು. ಆದರೆ, ಗುರುವಾರ ರಾತ್ರಿ 8 ಗಂಟೆ 06 ನಿಮಿಷದ ಸುಮಾರಿನಲ್ಲಿ ಪ್ರಜ್ಞಾಹೀನರಾದರು.

    ತಕ್ಷಣವೇ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ರಾತ್ರಿ 9:51ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಅಂತ ಏಮ್ಸ್ ಆಸ್ಪತ್ರೆ ತಿಳಿಸಿದೆ. ಪತ್ನಿ ಗುರ್ಶನ್ ಕೌರ್, ಮೂವರು ಪುತ್ರಿಯರನ್ನು ಸಿಂಗ್ ಅಗಲಿದ್ದಾರೆ. ಅಮೆರಿಕದಲ್ಲಿರುವ ಪುತ್ರಿ ಆಗಮನಕ್ಕಾಗಿ ಕಾಯಲಾಗ್ತಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಅವಮಾನ – ಸಿಂಗ್‌ ಬೆಂಬಲಿಸಿ ಪಾಕ್‌ ಪ್ರಧಾನಿ ಷರೀಫ್‌ ವಿರುದ್ಧ ಗುಡುಗಿದ್ದ ಮೋದಿ

    ನಾಳೆ (ಶನಿವಾರ) ಬೆಳಗ್ಗೆ 8 ಗಂಟೆಗೆ ದೆಹಲಿ ಎಐಸಿಸಿ ಕಚೇರಿಗೆ ಪಾರ್ಥಿವ ಶರೀರವನ್ನ ರವಾನೆ ಮಾಡಿ ಬೆಳಗ್ಗೆ 9:30ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 9:30ರ ಬಳಿಕ ಅಂತಿಮ ಯಾತ್ರೆ ಆರಂಭವಾಗಲಿದ್ದು, ಸುಮಾರು 11:45ಕ್ಕೆ ನಿಗಮ್‌ ಬೋಧ ಘಾಟ್‌ನಲ್ಲಿ ಸರ್ಕಾರಿ ಮತ್ತು ಸೇನಾಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಅಂತ ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಇದನ್ನೂ ಓದಿ: 2 ಬಾರಿ ಪ್ರಧಾನಿಯಾಗಿ ದೇಶ ಮುನ್ನಡೆಸಿದ್ದ ಸಿಂಗ್‌ ಎಂದೂ ಲೋಕಸಭೆ ಚುನಾವಣೆ ಗೆದ್ದಿಲ್ಲ

    ಸೇನಾಗೌರವಗಳಿಗೆ ಸೇನಾ ಇಲಾಖೆ ಕೂಡ ಸನ್ನದ್ಧವಾಗಿದೆ. 7 ದಿನ ದೇಶಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಇನ್ನು, ಜಾಗತಿಕ ಮಟ್ಟದಲ್ಲೂ ರಾಷ್ಟ್ರಗಳ ಮಧ್ಯೆ ಒಮ್ಮತ ಮೂಡಿಸ್ತಿದ್ದ ಚತುರನಾಗಿದ್ದ ಸಿಂಗ್ ಅಗಲಿಕೆಗೆ ಅಮೆರಿಕ, ರಷ್ಯಾ, ಚೀನಾ, ಪಾಕಿಸ್ತಾನ, ಮಲೇಷಿಯಾ, ಕೆನಡಾ ಕೂಡ ಸಂತಾಪ ಸೂಚಿಸಿವೆ. ಸಿನಿಗಣ್ಯರಾದ ರಜನಿಕಾಂತ್, ಚಿರಂಜೀವಿ, ಕಮಲ್‌ಹಾಸನ್ ಕೂಡ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ಗೆ ಅಂತಿಮ ನಮನ ಸಲ್ಲಿಸಿದ ಮೋದಿ

    ಡಾ. ಮನಮೋಹನ್ ಸಿಂಗ್ ಜೀವನಪಥ ಹೇಗಿದೆ?
    * ಸೆ. 16ರಂದು 1932 ರಂದು ಜನನ
    * ಪಶ್ಚಿಮ ಪಂಜಾಬ್‌ನ ಗಹ್‌ನಲ್ಲಿ ಜನನ – (ಈಗಿನ ಪಾಕಿಸ್ತಾನ. 2004ರಲ್ಲಿ ಪ್ರಧಾನಿಯಾದಾಗ ಈ ಗ್ರಾಮಸ್ಥರು ಸಂಭ್ರಮಿಸಿದ್ದರು. ಅಲ್ಲಿನ ಶಾಲೆಗೆ ಮನಮೋಹನ್ ಸಿಂಗ್ ಹೆಸರಿಡಲಾಗಿದೆ)
    * ದೇಶ ವಿಭಜನೆ ಬಳಿಕ ಭಾರತಕ್ಕೆ ವಲಸೆ
    * ಉರ್ದು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ (ಅಮೃತಸರ, ಹೋಶಿಯಾರ್‌ಪುರದಲ್ಲಿ ಕಾಲೇಜು ಶಿಕ್ಷಣ, ಕೇಂಬ್ರಿಡ್ಜ್ ವಿವಿಯಲ್ಲಿ ಪದವಿ, ಆಕ್ಸ್‌ಫರ್ಡ್‌ ವಿವಿಯಲ್ಲಿ ಡಾಕ್ಟರೇಟ್)
    * 1966-69ಲ್ಲಿ ವಿಶ್ವಸಂಸ್ಥೆಯ ವಾಣಿಜ್ಯ, ಕೈಗಾರಿಕೆ ಇಲಾಖೆಯ ಸಲಹೆಗಾರರಾಗಿ ಸೇವೆ
    * 1972-76- ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ
    * 1982-85 – ಆರ್‌ಬಿಐ ಗೌರ್ನರ್ ಆಗಿ ಸೇವೆ
    * 1985-87 – ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ
    * 1996-2004- ರಾಜ್ಯಸಭೆ ವಿಪಕ್ಷ ನಾಯಕರಾಗಿ ಸೇವೆ
    * 1999ರಲ್ಲಿ ದಕ್ಷಿಣ ದೆಹಲಿ ಲೋಕಸಭೆ ಕ್ಷೇತ್ರದಿಂದ ಸೋಲು
    * 2004-2014ರವರೆಗೆ ಪ್ರಧಾನ ಮಂತ್ರಿ (ಭಾರತದ 13ನೇ ಪ್ರಧಾನಿಯಾಗಿ ನೇಮಕ)
    * ನೆಹರೂ, ಇಂದಿರಾ ಬಳಿಕ ದೀರ್ಘಕಾಲದ ಪ್ರಧಾನಿ
    * ಸಿಖ್ ಸಮುದಾಯದ ಮೊದಲ ಪಿಎಂ ಎಂಬ ಗರಿಮೆ
    * ಯುಪಿಎ2 ಅವಧಿಯಲ್ಲಿ ಹಲವು ಹಗರಣ ಆರೋಪ (ಕಾಮನ್‌ವೆಲ್ತ್ ಗೇಮ್ಸ್, 2ಜಿ ಸ್ಪೆಕ್ಟ್ರಮ್‌, ಕಲ್ಲಿದ್ದಲು ಗಣಿ ಹಂಚಿಕೆ)
    * 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು
    * 1991-2019ರವರೆಗೆ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆ
    * 2019-2024ರವರೆಗೂ ರಾಜಸ್ಥಾನದಿಂದ ರಾಜ್ಯಸಭೆ ಸದಸ್ಯ

  • ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ

    ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ

    ಇಸ್ಲಾಮಾಬಾದ್:‌ ನಾವು ಭಾರತದ ಜೊತೆಗಿದ್ದೇವೆ. ಪಾಕಿಸ್ತಾನ ಯಾವಾಗಲೂ ಉತ್ತಮ ನೆರೆಹೊರೆ ಸಂಬಂಧಗಳನ್ನು ಬಯಸುತ್ತದೆ ಎಂದು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ (Ishaq Dar) ಹೇಳಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಶಾಕ್ ದಾರ್, ಭಾರತದೊಂದಿಗಿನ ಸಂಬಂಧದ ಬಗ್ಗೆ ತಮ್ಮ ಹಿಂದಿನ ಹೇಳಿಕೆಗಳನ್ನು ಪುನರುಚ್ಚರಿಸಿದರು. ಪಾಕಿಸ್ತಾನವು ಯಾವಾಗಲೂ ಭಾರತದೊಂದಿಗೆ (India) ಉತ್ತಮ ಸಂಬಂಧವನ್ನು ಹೊಂದಲು ಉತ್ಸುಕವಾಗಿದೆ ಎಂದು ಹೇಳಿದರು.

    ಭಾರತದೊಂದಿಗಿನ ನಮ್ಮ ಸಂಬಂಧವು ಐತಿಹಾಸಿಕವಾಗಿ ಕಳಪೆಯಾಗಿದೆ. ಆದರೆ ಪಾಕಿಸ್ತಾನವು ಶಾಶ್ವತ ಹಗೆತನವನ್ನು ಬಯಸುವುದಿಲ್ಲ. ಪರಸ್ಪರ ಗೌರವ, ಸಾರ್ವಭೌಮ ಸಮಾನತೆ ಮತ್ತು ದೀರ್ಘಕಾಲದ ಜಮ್ಮು ಮತ್ತು ಕಾಶ್ಮೀರ ವಿವಾದದ ನ್ಯಾಯಯುತ ಮತ್ತು ಶಾಂತಿಯುತ ಪರಿಹಾರದ ಆಧಾರದ ಮೇಲೆ ನಾವು ಭಾರತದೊಂದಿಗೆ ಉತ್ತಮ ನೆರೆಯ ಸಂಬಂಧಗಳನ್ನು ಬಯಸುತ್ತೇವೆ ಎಂದಿದ್ದಾರೆ.

    ಇದೇ ವೇಳೆ ಎರಡು ಪರಮಾಣು ಸಶಸ್ತ್ರ ನೆರೆಹೊರೆಯವರ ನಡುವಿನ ದ್ವಿಪಕ್ಷೀಯ ಸಂಬಂಧಗಳ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮೋದಿ ಸರ್ಕಾರಕ್ಕೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಮದುವೆಯಾಗಿ ಹಣ, ಚಿನ್ನದೊಂದಿಗೆ ಎಸ್ಕೇಪ್‌ ಆಗ್ತಿದ್ದ ಮಹಿಳೆಗೆ ಹೆಚ್‌ಐವಿ – ಆಕೆ ದೈಹಿಕ ಸಂಪರ್ಕಕ್ಕೆ ಬಂದ ಪುರುಷರಿಗಾಗಿ ಹುಡುಕಾಟ

    ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಸಂಪೂರ್ಣ ಬಹುಮತ ಪಡೆಯುವ ಮೂಲಕ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿದ್ದಾರೆ. ಈ ಹಿನ್ನೆಲೆ ಮೋದಿಯವರಿಗೆ ವಿಶ್ವಾದ್ಯಂತ ನಾಯಕರಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿತ್ತು. ಅಲ್ಲದೆ ಹಲವು ದೇಶಗಳು ಕೂಡ ಭಾರತದೊಂದಿಗೆ ಉತ್ತಮ ಬಾಂಧವ್ಯಕ್ಕೆ ಒತ್ತು ನೀಡುತ್ತಿವೆ. ಈ ನಡುವೆ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಸಂಬಂಧಿಸಿದಂತೆ ನೆರೆಯ ರಾಷ್ಟ್ರ ಪಾಕಿಸ್ತಾನ ಈ ಮಹತ್ವದ ಹೇಳಿಕೆಯೊಂದನ್ನು ನೀಡಿದೆ.

  • ಮೋದಿ 3.0 ಯುಗಾರಂಭಕ್ಕೆ ಕ್ಷಣಗಣನೆ – ರಾಷ್ಟ್ರಪತಿ ಭವನಕ್ಕೆ ಮೂರು ಹಂತದ ಭದ್ರತೆ!

    ಮೋದಿ 3.0 ಯುಗಾರಂಭಕ್ಕೆ ಕ್ಷಣಗಣನೆ – ರಾಷ್ಟ್ರಪತಿ ಭವನಕ್ಕೆ ಮೂರು ಹಂತದ ಭದ್ರತೆ!

    ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರ ರಚನೆ ಆಗುವುದಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಇಂದು (ಭಾನುವಾರ) ಸಂಜೆ 7:15ಕ್ಕೆ ಸರಿಯಾಗಿ ರಾಷ್ಟ್ರಪತಿ ಭವನದಲ್ಲಿ ಮೋದಿ (Narendra Modi) ದೇಶದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪದಗ್ರಹಣ ಮಾಡಲಿದ್ದಾರೆ.

    ಪ್ರಮಾಣವಚನ ಸಮಾರಂಭಕ್ಕೆ ರಾಜ್ಯ, ದೇಶ ಹಾಗೂ ವಿದೇಶಿ ಗಣ್ಯರೂ ಸೇರಿದಂತೆ ಸುಮಾರು 9 ಸಾವಿರ ಗಣ್ಯಮಾನ್ಯರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನಕ್ಕೆ (Rashtrapati Bhavan) 3 ಹಂತಗಳಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

    ದೆಹಲಿ ಈಗ ಭದ್ರಕೋಟೆ – 3 ಹಂತದಲ್ಲಿ ಭದ್ರತೆ:
    ಪ್ರಮಾಣವಚನ ಸ್ವೀಕಾರ ಸಮಾರಂಭ ಹಿನ್ನೆಲೆ ವಿಶ್ವನಾಯಕರೂ ಸಮಾರಂಭಕ್ಕೆ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನಕ್ಕೆ ಮೂರು ಹಂತಗಳಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದೆ. ವಿದೇಶಿ ಗಣ್ಯರು ತಂಗುವ ತಾಜ್, ಮೌರ್ಯ, ಲೀಲಾ ಮತ್ತು ಒಬೆರಾಯ್ ಸೇರಿದಂತೆ ಪ್ರಮುಖ ಹೋಟೆಲ್‌ಗಳ ಸುತ್ತ ಪೊಲೀಸ್‌ ಸರ್ಪಗಾವಲು ಇರಲಿದೆ. ಇದರೊಂದಿಗೆ ದೆಹಲಿ ಉನ್ನತ ಪೊಲೀಸ್‌ ಪಡೆ, ರಾಷ್ಟ್ರೀಯ ಭದ್ರತಾ ಪಡೆ (NSG) ನಿಯೋಜಿಸಲಾಗಿದೆ. ಗಣ್ಯರು ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

    ರಾಜಧಾನಿ ವಲಯದ ಮೇಲೆ ವಿಮಾನ, ಡ್ರೋನ್‌, ಹಾಟ್‌ ಬಲೂನ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ. ಗುಪ್ತಚರ ಘಟಕಗಳನ್ನು ಸಜ್ಜುಗೊಳಿಸಲಾಗಿದ್ದು, ಟ್ರಾಫಿಕ್‌ ಚೆಕ್‌ಪೋಸ್ಟ್‌ಗಳಲ್ಲಿಯೂ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ರಾಷ್ಟ್ರ ರಾಜಧಾನಿ ಪ್ರವೇಶಿಸುವ ಗಡಿಗಳನ್ನು ಬಂದ್‌ ಮಾಡಲಾಗಿದೆ. ಜೂನ್‌ 10ರ ವರೆಗೂ ಈ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಿಯಮ ಉಲ್ಲಂಘಿಸಿದರೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188ರ ಅಡಿಯಲ್ಲಿ ಭಾರೀ ಪ್ರಮಾಣದ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಮೋದಿಗೆ ಪಾಕಿಸ್ತಾನ ಅಭಿನಂದನೆ ಸಲ್ಲಿಸಿದೆಯೇ – ಮಾಧ್ಯಮಗಳ ಪ್ರಶ್ನೆಗೆ ಪಾಕ್‌ ಕೊಟ್ಟ ಉತ್ತರ ಏನು?

    ಮೋದಿಗೆ ಪಾಕಿಸ್ತಾನ ಅಭಿನಂದನೆ ಸಲ್ಲಿಸಿದೆಯೇ – ಮಾಧ್ಯಮಗಳ ಪ್ರಶ್ನೆಗೆ ಪಾಕ್‌ ಕೊಟ್ಟ ಉತ್ತರ ಏನು?

    – ಮಾತುಕತೆ ಮೂಲಕ ಎಲ್ಲಾ ವಿವಾದ ಬಗೆಹರಿಸಲು ಪಾಕ್‌ ಸಿದ್ಧವಾಗಿದೆ ಎಂದ ವಕ್ತಾರೆ

    ಇಸ್ಲಾಮಾಬಾದ್/ನವದೆಹಲಿ: ನರೇಂದ್ರ ಮೋದಿ (Narendra Modi) ಅವರು 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಇನ್ನೊಂದು ದಿನ ಬಾಕಿಯಿದೆ. ಭಾನುವಾರ ಸಂಜೆ 7:15ಕ್ಕೆ ಮೋದಿಯವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರಿಂದ ಹಿಡಿದು ವಿದೇಶಿ ಗಣ್ಯರು ಕೂಡ ಸಾಕ್ಷಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ 5 ಹಂತದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಈ ಹೊತ್ತಿನಲ್ಲೇ ಮೋದಿ ಅವರ ಪ್ರಮಾಣವಚನ ಸ್ವೀಕಾರದ ಬಗ್ಗೆ ಪಾಕಿಸ್ತಾನ (Pakistan) ಪ್ರತಿಕ್ರಿಯೆ ನೀಡಿದೆ.

    ಚುನಾವಣೆಯಲ್ಲಿ ಗೆದ್ದಿರುವ ಮೋದಿ ಅವರಿಗೆ ಪಾಕಿಸ್ತಾನ ಅಭಿನಂದನೆ ಸಲ್ಲಿಸಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್‌ (Mumtaz Zahra Baloch), ತಮ್ಮ ನಾಯಕನನ್ನು ಮತ್ತು ನಾಯಕತ್ವದ ಬಗ್ಗೆ ನಿರ್ಧರಿಸುವುದು ಭಾರತೀಯ ನಾಗರಿಕರ ಹಕ್ಕು. ಮೋದಿ ಆಯ್ಕೆಯಾದ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ಪಾಕ್‌ ಹೊಂದಿಲ್ಲ. ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸದ ಕಾರಣ, ಭಾರತದ ಪ್ರಧಾನಿಯನ್ನು (Prime Minister) ಅಭಿನಂದಿಸುವ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

    ಮುಂದುವರಿದು ಮಾತನಾಡಿದ ಬಲೋಚ್‌, ಪಾಕಿಸ್ತಾನವು ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳೊಂದಿಗೆ ಪರಸ್ಪರ ಸಹಕಾರ ಹಾಗೂ ಸೌಹಾರ್ಧಯುತ ಬಾಂಧವ್ಯದಿಂದಿರಲು ಬಯಸುತ್ತದೆ. ಎಲ್ಲಾ ವಿವಾದಗಳನ್ನು ರಚನಾತ್ಮಕ ಮಾತು-ಕತೆಯ ಮೂಲಕ ಪರಿಹರಿಸಲು ಪ್ರಯತ್ನಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲ ವಿವಾಗಳನ್ನು ಮಾತುಕತೆಯೊಂದಿಗೆ ಬಗೆಹರಿಸಲು ಪಾಕ್‌ ಸಿದ್ಧವಾಗಿದೆ. ಈ ವಿಷಯವನ್ನು ಪಾಕ್‌ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ ಎಂದು ಒತ್ತಿ ಹೇಳಿದ್ದಾರೆ.

    ಪಾಕ್‌ಗೆ ಎಚ್ಚರಿಕೆ ನೀಡಿದ್ದ ಜೈಶಂಕರ್‌:
    ಎರಡು ತಿಂಗಳ ಹಿಂದೆಯಷ್ಟೇ ಪಾಕ್‌ ಉಗ್ರರಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಖಡಕ್‌ ಎಚ್ಚರಿಕೆ ನೀಡಿದ್ದರು. ಗಡಿಯಾಚೆಯಿಂದ ನಡೆಯುವ ಯಾವುದೇ ಭಯೋತ್ಪಾದನಾ ಕೃತ್ಯಕ್ಕೆ ಪ್ರತ್ಯುತ್ತರ ನೀಡಲು ಭಾರತ ಬದ್ಧವಾಗಿದೆ ಎಂದಿದ್ದರು.

    2008 ರಲ್ಲಿ ಮುಂಬೈನಲ್ಲಿ ದಾಳಿ ನಡೆಯಿತು. ಈ ದಾಳಿಯ ನಂತರ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕಾ ಬೇಡವೇ ಎಂಬುದರ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಕೊನೆಗೆ ಪಾಕಿಸ್ತಾನದ ಮೇಲೆ ದಾಳಿ ಮಾಡದೇ ಇರುವುದಕ್ಕಿಂತ ಮೇಲೆ ದಾಳಿ ಮಾಡುವ ವೆಚ್ಚ ಹೆಚ್ಚು ಎಂದು ಆ ಸಮಯದಲ್ಲಿ ತೀರ್ಮಾನಕ್ಕೆ ಬರಲಾಯಿತು. ನರೇಂದ್ರ ಮೋದಿ (Narendra Modi) ಅವರು 2014 ರಲ್ಲಿ ಪ್ರಧಾನಿಯಾಗಿ ಬಂದರು. ಈ ಸಮಸ್ಯೆ 2014ರಿಂದ ಆರಂಭವಾಗಿಲ್ಲ. ಇದು 1947 ರಿಂದ ಆರಂಭವಾಗಿದೆ. ಮೊದಲು ಪಾಕಿಸ್ತಾನದಿಂದ ಬಂದು ಕಾಶ್ಮೀರದ ಮೇಲೆ ದಾಳಿ ಮಾಡಿದರು. ಇದು ಭಯೋತ್ಪಾದನೆ. ಪಟ್ಟಣಗಳಿಗೆ ಬೆಂಕಿ ಹಚ್ಚಿ ಜರನ್ನು ಕೊಲ್ಲುತ್ತಿದ್ದರು. ಉಗ್ರರಲ್ಲಿ ಮೊದಲು ನೀವು ಹೋಗಿ ನಂತರ ನಾವು ಬರುತ್ತೇವೆ ಎಂದು ಪಾಕ್‌ ಸೇನೆ ಹೇಳಿತ್ತು ಎಂಬುದಾಗಿಯೂ ತಿಳಿಸಿದ್ದರು.

    ಉಗ್ರ ನಾಯಕನ್ನ ಹಸ್ತಾಂತರಿಸಲ್ಲ ಎಂದಿದ್ದ ಬಲೋಚ್‌:
    ಈ ಹಿಂದೆ ಬಲೂಚ್‌, 2008ರ ನವೆಂಬರ್‌ 26ರಂದು ನಡೆದ ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್‌ ಮೈಂಡ್‌, ಲಷ್ಕರ್-ಎ-ತೈಬಾ ಉಗ್ರ ಸಂಘಟನೆ (Lashkar-e-Taiba) ಸಂಸ್ಥಾಪಕ ಹಫೀಜ್‌ ಸಯೀದ್‌ನನ್ನ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದರು.

  • 50ಕ್ಕೂ ಹೆಚ್ಚು ವಿಶ್ವನಾಯಕರಿಂದ ಮೋದಿಗೆ ಅಭಿನಂದನೆಗಳ ಮಹಾಪೂರ!

    50ಕ್ಕೂ ಹೆಚ್ಚು ವಿಶ್ವನಾಯಕರಿಂದ ಮೋದಿಗೆ ಅಭಿನಂದನೆಗಳ ಮಹಾಪೂರ!

    ನವದೆಹಲಿ:‌ ಲೋಕಸಭಾ ಚುನಾವಣೆಯಲ್ಲಿ (Parliamentary elections) ಸತತ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ನಿರ್ಗಮಿತ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಬಹುಮತದೊಂದಿಗೆ 3ನೇ ಅವಧಿಗೆ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದಾರೆ. ಈ ನಡುವೆ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಮೋದಿ ಅವರಿಗೆ 50ಕ್ಕೂ ಹೆಚ್ಚು ವಿಶ್ವನಾಯಕರಿಂದ (World Leaders) ಅಭಿನಂದನಾ ಮಹಾಪೂರವೇ ಹರಿದುಬಂದಿದೆ.

    ಶ್ರೀಲಂಕಾ, ಮಾಲ್ಡೀವ್ಸ್‌, ಇರಾನ್‌, ಸೆಶೆಲ್ಸ್‌, ನೈಜೀರಿಯಾ, ಕೀನ್ಯಾ ಮತ್ತು ಕೊಮೊರೊಸ್‌ ಅಧ್ಯಕ್ಷರು, ನೇಪಾಳ, ಬಾಂಗ್ಲಾದೇಶ, ಭೂತಾನ್‌, ಮ್ಯಾನ್ಮಾರ್‌, ಮಾರಿಷಸ್‌ನ ಪ್ರಧಾನಿಗಳು, ಕೆರಿಬಿಯನ್ ರಾಷ್ಟ್ರಗಳಾದ ಜಮೈಕಾ, ಬಾರ್ಬಡೋಸ್ ಮತ್ತು ದಕ್ಷಿಣ ಅಮೆರಿಕದ ಗಯಾನಾ ನಾಯಕರು ನರೇಂದ್ರ ಮೋದಿ (Narendra Modi) ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರೊಂದಿಗೆ ಇಟಲಿ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷರು, ಜಿ20 ರಾಷ್ಟ್ರಗಳ ನಾಯಕರು, ಆಗ್ನೇಯ ಏಷ್ಯಾದಿಂದ, ಸಿಂಗಾಪುರ ಮತ್ತು ಮಲೇಷ್ಯಾದ ಪ್ರಧಾನ ಮಂತ್ರಿಗಳು ಮೋದಿಗೆ ಶುಭಸಂದೇಶಗಳನ್ನ ಕಳುಹಿಸಿದ್ದಾರೆ.

    543 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಪಡೆದು 2019ರ ಚುನಾವಣೆಗಿಂತಲೂ 63 ಸ್ಥಾನಗಳಲ್ಲಿ ಕುಸಿತ ಕಂಡಿದ್ದರೆ, ಕಾಂಗ್ರೆಸ್‌ ಕಳೆದ ಬಾರಿಗಿಂತಲೂ 47 ಹೆಚ್ಚಿನ ಸ್ಥಾನಗಳನ್ನ ಗೆದ್ದುಕೊಂಡಿದ್ದು, 99 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಒಟ್ಟಾರೆಯಾಗಿ ಎನ್‌ಡಿಎ ಕೂಟ 291, ಇಂಡಿಯಾ ಒಕ್ಕೂಟ 234 ಹಾಗೂ ಇತರ ಪಕ್ಷಗಳು 18 ಸ್ಥಾನಗಳನ್ನ ಗೆದ್ದಿವೆ.  

    ಜೂ.8ರಂದು ಮೋದಿ ಪ್ರಮಾಣವಚನ:
    ಬುಧವಾರ (ಜೂ.5) ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನರೇಂದ್ರ ಮೋದಿ ಅವರು, ಜೂನ್ 8ರ ಶನಿವಾರ ಸಂಜೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ರಾಜೀನಾಮೆ

    ಈ ಮೂಲಕ ನರೇಂದ್ರ ಮೋದಿಯವರು 3 ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇಂದು (ಬುಧವಾರ) ಸಂಜೆ ರಾಷ್ಟ್ರಪತಿಗಳಿಗೆ ಎನ್‌ಡಿಎ ಮೈತ್ರಿಕೂಟದ ಬೆಂಬಲ ಪತ್ರ ನೀಡುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಕೊನೆಯದಾಗಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಸಿದರು. ಇಂದಿಗೆ 17 ನೇ ಲೋಕಸಭೆ (17th Lok Sabha) ವಿಸರ್ಜನೆಗೆ ಶಿಫಾರಸು ಮಾಡಲಾಗಿದೆ. ಇದನ್ನೂ ಓದಿ: ನಿತೀಶ್‌, ಯಾದವ್‌ ಒಂದೇ ವಿಮಾನದಲ್ಲಿ ಪ್ರಯಾಣ- ಊಹಾಪೋಹ ಅಲ್ಲಗೆಳೆದ ಜೆಡಿಯು

    ಜೂನ್‌ 7 ರ ಶುಕ್ರವಾರ ಮಧ್ಯಾಹ್ನ 2.30 ಕ್ಕೆ ಸಂಸತ್ ಭವನದಲ್ಲಿ ಎನ್‌ಡಿಎ ಸಂಸದರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ವಿವಿಧ ಪಕ್ಷಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಮರುದಿನ ಅಂದರೆ ಜೂನ್ 8 ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಪ್ರಮಾಣ ವಚನ ಕಾರ್ಯಕ್ರಮ ಸಂಜೆ 7 ರಿಂದ 8 ಗಂಟೆಯವರೆಗೆ ನಡೆಯಬಹುದು ಎಂಬುದಾಗಿ ಮೂಲಗಳಿಂದ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರ ಸೋಲಿಗೆ ನಾನೇ ಹೊಣೆ – ಡಿಸಿಎಂ ಹುದ್ದೆಗೆ ದೇವೇಂದ್ರ ಫಡ್ನವಿಸ್‌ ರಾಜೀನಾಮೆ

  • ಪ್ರಧಾನಿ ಹುದ್ದೆಗೆ ನನ್ನ ಆಯ್ಕೆ ರಾಹುಲ್‌ ಗಾಂಧಿ – ಬೆಂಬಲಿಸಿದ ಮಲ್ಲಿಕಾರ್ಜುನ ಖರ್ಗೆ

    ಪ್ರಧಾನಿ ಹುದ್ದೆಗೆ ನನ್ನ ಆಯ್ಕೆ ರಾಹುಲ್‌ ಗಾಂಧಿ – ಬೆಂಬಲಿಸಿದ ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ಈ ಬಾರಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಉತ್ತರಾಧಿಕಾರಿಯಾಗಲು ರಾಹುಲ್‌ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬೆಂಬಲಿಸಿದ್ದಾರೆ.

    ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಇಂಡಿಯಾ ಒಕ್ಕೂಟ ((INDIA Block)) ಅಧಿಕಾರಕ್ಕೆ ಬಂದ್ರೆ ಪ್ರಧಾನಿಯಾಗಿ ಯಾರು ಆಯ್ಕೆಯಾಗಬೇಕು ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಗಾಂಧಿ ಅವರ ಚುನಾವಣಾ ಸ್ಪರ್ಧೆಗೂ ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 76 ದಿನ, 206 ಕಾರ್ಯಕ್ರಮ – ಪ್ರಚಾರ ಆರಂಭಿಸಿದ ಕನ್ಯಾಕುಮಾರಿಯಲ್ಲೇ ಮೋದಿ ಧ್ಯಾನ

    ಏಕೆಂದರೆ ಈ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಹೈವೋಲ್ಟೇಜ್‌ ಕ್ಷೇತ್ರಗಳಾಗಿದ್ದ ಅಮೇಥಿಯಿಂದ ರಾಹುಲ್‌ ಗಾಂಧಿ (Rahul Gandhi) ಹಾಗೂ ರಾಯ್‌ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದ್ರೆ ಪ್ರಿಯಾಂಕಾ ಗಾಂಧಿ ಚುನಾವಣಾ ಕಣದಿಂದ ಹೊರಗುಳಿದರು. ಆದರೂ ರಾಯ್‌ ಬರೇಲಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಪರ ಬಿರುಸಿನ ಪ್ರಚಾರ ನಡೆಸಿದ್ದರು.

    ಪ್ರಮುಖ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಖರ್ಗೆ ಅವರು, ರಾಹುಲ್‌ ಗಾಂಧಿ ಅವರು ಚುನಾವಣೆಗೆ ಮುನ್ನ ಎರಡು ಭಾರತ್‌ ಜೋಡೋ ಯಾತ್ರೆಗಳನ್ನ ನಡೆಸಿದ್ದಾರೆ. ಮಿತ್ರ ಪಕ್ಷಗಳೊಂದಿಗೆ ಸಮನ್ವಯತೆ ಕಾಯ್ದುಕೊಂಡಿದ್ದಾರೆ. ಮೋದಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸುತ್ತಾರೆ. ಆದ್ದರಿಂದ ಪ್ರಧಾನಿ ಹುದ್ದೆಗೆ ಜನಪ್ರಿಯ ಆಯ್ಕೆ ಎಂದರೆ ರಾಹುಲ್‌ ಗಾಂಧಿ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ- ಜನರಲ್ಲಿ ಕೇಜ್ರಿವಾಲ್‌ ಭಾವನಾತ್ಮಕ ಮನವಿ

    ಪ್ರಧಾನಿ ಹುದ್ದೆಗೆ ರಾಹುಲ್‌ ಗಾಂಧಿ ನನ್ನ ಆಯ್ಕೆಯಾಗಿದ್ದಾರೆ. ಏಕೆಂದರೆ ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಬಾಸ್‌. ಯುವಸಮೂಹವನ್ನ ಪ್ರತಿನಿಧಿಸುತ್ತಾರೆ. ದೇಶದ ಆಳ-ಅಗಲ ಅರಿತಿದ್ದಾರೆ. ಅಲ್ಲದೇ ಇಂಡಿಯಾ ಕೂಟದ ಅನೇಕ ಮಂದಿ ರಾಹುಲ್‌ ಗಾಂಧಿ ಅವರನ್ನ ಒಮ್ಮತದ ಅಭ್ಯರ್ಥಿಯಾಗಿ ನೋಡುತ್ತಾರೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಇಂಡಿಯಾ ಕೂಟ ಚುನಾವಣೆಯಲ್ಲಿ ಗೆದ್ದ ಬಳಿಕ ಒಟ್ಟಾಗಿ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರ್ತೀವಿ ಎಂದು ಖರ್ಗೆ ಹೇಳಿದ್ದಾರೆ.