Tag: primary health centre

  • ಪ್ರೀತಿಸಿ ಮದ್ವೆಯಾದ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ!

    ಪ್ರೀತಿಸಿ ಮದ್ವೆಯಾದ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ!

    ವಿಜಯನಗರ: ಪ್ರೀತಿಸಿ ಮದ್ವೆಯಾದ (Love Marriage) ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪತಿ ಕೊನೆಗೆ ತಾನೇ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿರುವ ಘಟನೆ ವಿಜಯನಗರ (Vijayanagara) ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ನಡೆದಿದೆ.

    ಮೂಲತಃ ಮೈಸೂರು ಜಿಲ್ಲೆ ಹೆಚ್‌.ಡಿ ಕೋಟೆ ತಾಲೂಕಿನ ಮಾದಾಪುರ ಗ್ರಾಮದ ಡಿಂಪಲ್‌ (36) ಕೊಲೆಯಾದ ಮಹಿಳೆ. ನೆಲ್ಲುಕುದುರಿ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ (Health Officer) ಶ್ರೀಕಾಂತ ಕೊಲೆ ಆರೋಪಿ.

    ಡಿಂಪಲ್‌ ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯಾಧಿಕಾರಿಯಾಗಿದ್ದರು.‌ ಕಳೆದ ವರ್ಷ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡಾದ ನಿವಾಸಿ ಹಾಗೂ ನೆಲ್ಲುಕುದುರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Primary Health Centre) ಸಮುದಾಯ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಕಾಂತನನ್ನ ಪ್ರೀತಿಸಿ ಮದುವೆಯಾಗಿದ್ದರು. ಇದನ್ನೂ ಓದಿ: ಮುಂದುವರಿದ ರೆಡ್ಡಿ ಸಹೋದರರ ಮುನಿಸು – ಸಹೋದರನ ಪುತ್ರನ ಮದುವೆಗೆ ಜನಾರ್ದನ ರೆಡ್ಡಿ ಗೈರು

    ಡಿಂಪಲ್‌ಗೆ ಇದು 3ನೇ ಮದುವೆ, ಶ್ರೀಕಾಂತ್‌ಗೆ 2ನೇ ಮದುವೆ. ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ವಾಸವಾಗಿದ್ದ ದಂಪತಿ ಪರಸ್ಪರ ಅನ್ನೋನ್ಯವಾಗಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಶುಕ್ರವಾರ (ನ.25) ರಾತ್ರಿ ಏಕಾಏಕಿಯಾಗಿ ಇಬ್ಬರ ನಡುವೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿಯನ್ನ ಕೊಲೆ ಮಾಡಿದ ನಂತರ ಶ್ರೀಕಾಂತ ಗ್ರಾಮದ ಪೊಲೀಸ್ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಇಟ್ಟಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Bengaluru HAL – ತೇಜಸ್‌ ಫೈಟರ್‌ಜೆಟ್‌ನಲ್ಲಿ ಹಾರಾಟ ನಡೆಸಿ ಗಮನ ಸೆಳೆದ ಮೋದಿ

  • ವಿಜಯಪುರ‌ದ 40 ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ ಪ್ರಶಸ್ತಿ – ಡಿಸಿ ಮೆಚ್ಚುಗೆ

    ವಿಜಯಪುರ‌ದ 40 ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ ಪ್ರಶಸ್ತಿ – ಡಿಸಿ ಮೆಚ್ಚುಗೆ

    ವಿಜಯಪುರ: ಪ್ರಸಕ್ತ ವರ್ಷದಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯಕ್ಕಾಗಿ ನೀಡುವ ಕಾಯಕಲ್ಪ ಪ್ರಶಸ್ತಿಯು ವಿಜಯಪುರ (Vijayapura) ಜಿಲ್ಲೆಯ 40 ಸರ್ಕಾರಿ ಆಸ್ಪತ್ರೆಗಳಿಗೆ (Government Hospitals) ಲಭಿಸಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

    ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡುವ ಆಸ್ಪತ್ರೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ 2015 ರಿಂದ ಕಾಯಕಲ್ಪ ಪ್ರಶಸ್ತಿ (Kayakalp Award) ನೀಡಲು ಪ್ರಾರಂಭಿಸಿದೆ. 2019-20ನೇ ಸಾಲಿನಲ್ಲಿ ಜಿಲ್ಲೆಯ 15 ಆಸ್ಪತ್ರೆಗಳಿಗೆ, 2020-21ನೇ ಸಾಲಿನಲ್ಲಿ 20 ಆರೋಗ್ಯ ಸಂಸ್ಥೆಗಳಿಗೆ ಪ್ರಶಸ್ತಿ ದೊರಕಿದ್ದು, ಪ್ರಸಕ್ತ 2023ನೇ ಸಾಲಿನಲ್ಲಿ ಜಿಲ್ಲೆಯ 40 ಆರೋಗ್ಯ ಸಂಸ್ಥೆಗಳಿಗೆ ಕಾಯಕಲ್ಪ ಪ್ರಶಸ್ತಿ ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ

    ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳ ವಿಭಾಗದಲ್ಲಿ ತಾಲೂಕಿನ ಬ.ಬಾಗೇವಾಡಿ ಆಸ್ಪತ್ರೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರೆ, ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ತಿಕೋಟಾ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಶಸ್ತಿಗೆ ಭಾಜನವಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ಬಾಗಲಕೋಟೆ ಮತ್ತು ವಿಜಯಪುರ ಕ್ಲಸ್ಟರ್ ಮಟ್ಟದಲ್ಲಿ ದರ್ಗಾ ಅತ್ಯುತ್ತಮ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಶಸ್ತಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ವಿಭಾಗದಲ್ಲಿ SC-HWC ಕಗ್ಗೋಡ ಜಿಲ್ಲೆಗೆ ಪ್ರಥಮ ಸ್ಥಾನ, ಯಂಬತ್ನಾಳ ದ್ವಿತೀಯ ಸ್ಥಾನ (ರನ್ನರ್‌ಅಪ್) ಕಾಯಕಲ್ಪ ಪ್ರಶಸ್ತಿ ಪಡೆದಿದೆ. ಇದನ್ನೂ ಓದಿ: World Cup 2023: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್‌

    ಜಿಲ್ಲಾ ಆಸ್ಪತ್ರೆ ವಿಭಾಗದಲ್ಲಿ ವಿಜಯಪುರ ಆಸ್ಪತ್ರೆ ಸಮಾಧಾನಕರ ಪ್ರಶಸ್ತಿ ಪಡೆದಿದೆ. ತಾಲೂಕು ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರ ವಿಭಾಗದಲ್ಲಿ ಬ.ಬಾಗೇವಾಡಿ ಆಸ್ಪತ್ರೆಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರೆ, ಸಮುದಾಯ ಆರೋಗ್ಯ ಕೇಂದ್ರಗಳಾದ ಚಡಚಣ, ಕಾಳಗಿ, ತಡವಲಗಾ, ನಾಲತವಾಡ ಮತ್ತು ನಿಡಗುಂದಿ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿವೆ. ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ತಿಕೋಟಾ ಪ್ರಥಮ ಸ್ಥಾನ ಪಡೆದರೆ, ಹೂ.ಹಿಪ್ಪರಗಿ, ಮುಳವಾಡ, ರೋಣಿಹಾಳ, ತೆಲಗಿ, ಗೊಳಸಂಗಿ, ಹೊರ್ತಿ, ಇಂಚಗೇರಿ, ಲಚ್ಯಾಣ, ಚಿಕ್ಕಬೇವನೂರು, ಹೊನವಾಡ, ಹೊನ್ನೂಟಗಿ, ನಾಗಠಾಣ, ಶಿವಣಗಿ ಮತ್ತು ಇನಚಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮಾಧಾನಕರ ಕಾಯಕಲ್ಪ ಪ್ರಶಸ್ತಿಯನ್ನು ಪಡೆದಿರುತ್ತವೆ ಎಂದು ಹೇಳಿದ್ದಾರೆ.

    ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ಬಾಗಲಕೋಟೆ, ವಿಜಯಪುರ ಕ್ಲಸ್ಟರ್ ಮಟ್ಟದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ದರ್ಗಾ ಅತ್ಯುತ್ತಮ ನ.ಪ್ರಾ.ಆ.ಕೇಂದ್ರ ಮತ್ತು ಶಾಂತಿನಗರ ಸಮಾಧಾನಕರ ಪ್ರಶಸ್ತಿ ಪಡೆದಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವಿಭಾಗದಲ್ಲಿ SC-HWC ಕಗ್ಗೋಡ ಜಿಲ್ಲೆಗೆ ಪ್ರಥಮ ಸ್ಥಾನ, ಯಂಬತ್ನಾಳ, ಇಂಗಳಗೇರಿ ಮತ್ತು ಹಿತ್ನಳ್ಳಿ ಎಲ್.ಟಿ ಕೇಂದ್ರಗಳು ರನ್ನರ್‍ಅಪ್ ಪ್ರಶಸ್ತಿ ಪಡೆದಿವೆ. ಡೋಣೂರ, ಹೆಬ್ಬಾಳ, ಯಾರನಾಳ, ಶಿರನಾಳ, ಜುಮನಾಳ, ಮಖನಾಪುರ, ಐನಾಪುರ, ಯಲಗುರ್, ರೂಡಗಿ, ಹುಳ್ಳುರ್, ಬಳಬಟ್ಟಿ ಮತ್ತು ಗಂಗನಳ್ಳಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಸಮಾಧಾನಕರ ಪ್ರಶಸ್ತಿಯನ್ನು ಪಡೆದಿವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 23ನೇ ವಯಸ್ಸಿಗೆ ಸಚಿನ್‌ ದಾಖಲೆ ಸರಿಗಟ್ಟಿದ ಬೆಂಗಳೂರು ಯುವಕ ರಚಿನ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈದ್ಯರ ನಿರ್ಲಕ್ಷ್ಯ, ಹೊಟ್ಟೆಯಲ್ಲೇ ಮಗು ಸಾವು – ಗ್ರಾಮಸ್ಥರಿಂದ ವೈದ್ಯರ ತರಾಟೆ

    ವೈದ್ಯರ ನಿರ್ಲಕ್ಷ್ಯ, ಹೊಟ್ಟೆಯಲ್ಲೇ ಮಗು ಸಾವು – ಗ್ರಾಮಸ್ಥರಿಂದ ವೈದ್ಯರ ತರಾಟೆ

    ಯಾದಗಿರಿ: ಯಾದಗಿರಿ (Yadgiri) ತಾಲೂಕಿನ ಹೊನಗೇರಾದಲ್ಲಿನ ಪ್ರಾಥಮಿಕ ಆಸ್ಪತ್ರೆಗೆ ಹೆರಿಗೆಗೆಂದು ತೆರಳಿದ್ದ ಗರ್ಭಿಣಿಗೆ (Pregnant) ಸೂಕ್ತ ಚಿಕಿತ್ಸೆ ದೊರೆಯದ ಹಿನ್ನೆಲೆ ಹೊಟ್ಟೆಯಲ್ಲಿಯೇ ಶಿಶು (Infant) ಮೃತಪಟ್ಟಿರುವ ಘಟನೆ ನಡೆದಿದೆ.

    ಆಶನಾಳ ಗ್ರಾಮದ ಗರ್ಭಿಣಿ ಲಕ್ಷ್ಮಿ ಎಂಬುವವರಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ವೈದ್ಯರ (Doctor) ನಿರ್ಲಕ್ಷ್ಯದಿಂದಲೇ ಹೀಗೆ ಆಗಿದೆ ಎಂದು ಆರೋಪ ಮಾಡಲಾಗಿದೆ. ಮೊದಲಿಗೆ ಆಶಾ ಕಾರ್ಯಕರ್ತೆಯು ಇವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (Primary Health Centre) ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಇರದ ಹಿನ್ನೆಲೆಯಲ್ಲಿ ಯಾದಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸೋಮವಾರ ರಾತ್ರಿ ಗರ್ಭಿಣಿ ಲಕ್ಷ್ಮಿಯ ಸ್ಕ್ಯಾನಿಂಗ್ (Scanning) ಮಾಡಿಸಿದಾಗ ಹೊಟ್ಟೆಯಲ್ಲಿ ಶಿಶು ಮೃತಪಟ್ಟಿದ್ದ ಬಗ್ಗೆ ತಿಳಿದುಬಂದಿದೆ. ಕೊನೆಗೆ ಮೃತ ಶಿಶುವನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೊರ ತೆಗೆದಿದ್ದಾರೆ. ಬಳಿಕ ಬಾಣಂತಿ ಲಕ್ಷ್ಮಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ: ಸ್ಲೀಪರ್ ಕೋಚ್ ಬಸ್‍ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು- ಯುವತಿ ಸಾವು

    ವೈದ್ಯರ ನಿರ್ಲಕ್ಷ್ಯತನದಿಂದ ಶಿಶು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬಾರದೆ ನಿರ್ಲಕ್ಷ್ಯ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆರೋಗ್ಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಕುಟುಂಬಸ್ಥರು, ಸೂಕ್ತ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ತಪ್ಪಿತಸ್ಥ ವೈದ್ಯರ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು (Villagers) ಯಾದಗಿರಿ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ (Protest) ನಡೆಸಿ, ಸೂಕ್ತ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಿಯಕರನಿಂದ ಪ್ರಿಯತಮೆ ಮರ್ಡರ್!

    ವಿಷಯ ತಿಳಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು (Channareddy Patil Tunnur) ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಶಾಸಕರ ಮುಂದೆ ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ. ಇದನ್ನೂ ಓದಿ: ಮೈ-ಬೆಂ. ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ- ಇಬ್ಬರು ಗಂಭೀರ

  • ಪ್ರಧಾನಿ ಹುಟ್ಟುಹಬ್ಬದಂದು ಹುಟ್ಟಿದ ಮಗುವಿಗೆ ಸಿಕ್ತು ಗಿಫ್ಟ್!

    ಪ್ರಧಾನಿ ಹುಟ್ಟುಹಬ್ಬದಂದು ಹುಟ್ಟಿದ ಮಗುವಿಗೆ ಸಿಕ್ತು ಗಿಫ್ಟ್!

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರ 68ನೇ ಹುಟ್ಟುಹಬ್ಬದಂದು ಹುಟ್ಟಿದ ಮಗುವಿಗೆ ಬಿಜೆಪಿ ಚಿನ್ನದ ಉಂಗುರವನ್ನು ಗಿಫ್ಟ್ ಮಾಡಿದೆ.

    ತಮಿಳುನಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥೆ ತಮಿಳಿಸಾಯಿ ಸೌಂದರರಾಜನರ್ ಅವರು ಮಗುವಿಗೆ ಉಂಗುರ ನೀಡಿದ್ದಾರೆ. ಈ ಮೂಲಕ ಬಿಜೆಪಿ ಪ್ರಧಾನಿಯವರನ್ನು ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದ್ದಾರೆ.

    ಸೌಂದರರಾಜನ್ ಅವರು ಆರೋಗ್ಯ ಕೇಂದ್ರದಲ್ಲಿ ಹುಟ್ಟಿದ ಉಳಿದ ಮಕ್ಕಳಿಗೂ ಬಹುಮಾನವನ್ನು ನೀಡಿದ್ದಾರೆ. ಮುಂದಿನ ಸೋಮವಾರ(ಮೋದಿ ಹುಟ್ಟುಹಬ್ಬ)ದಂದು ಹುಟ್ಟಿದ ಮಕ್ಕಳಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವುದಾಗಿ ರಾಜ್ಯ ಬಿಜೆಪಿ ಘಟಕ ಮೊದಲೇ ಘೋಷಣೆ ಮಾಡಿತ್ತು. ಆದ್ರೆ ಸೋಮವಾರ ಒಂದು ಮಗು ಮಾತ್ರ ಹುಟ್ಟಿತ್ತು. ಹೀಗಾಗಿ ಆ ಮಗುವಿಗೆ ಚಿನ್ನದ ಉಂಗುರವನ್ನು ಗಿಫ್ಟ್ ಮಾಡಿದೆ.

    ಬಳಿಕ ಮಾಧ್ಯಮಕ್ಕೆ ಪತ್ರಿಕ್ರಿಯಿಸಿದ ಅವರು, ಸೋಮವಾರ ಹುಟ್ಟಿದ ಮಗುವಿಗೆ ನಾನು ಚಿನ್ನದ ಉಂಗುರವನ್ನು ಈಗಾಗಲೇ ಉಡುಗೊರೆಯಾಗಿ ನೀಡಿದ್ದೇನೆ. ಅಲ್ಲದೇ ಇದರ ಜೊತೆ 17-18 ದಿನಗಳ ಹಿಂದೆ ಹುಟ್ಟಿದ ಮಕ್ಕಳಿಗೂ ಗಿಫ್ಟ್ ಪ್ಯಾಕ್ ಕೊಟ್ಟಿದ್ದೇವೆ ಅಂತ ಹೇಳಿದ್ರು.

    ಅಸ್ಸಾಂನಲ್ಲೂ ಮೋದಿ ಜೀ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗಿದ್ದು, ಬಿಜೆಪಿ ವಕ್ತಾರ ಪ್ರಮೋದ್ ಸ್ವಾಮಿ ಅವರು ಗುವಾಹಟಿಯ ಹೈಸ್ಕೂಲ್ ನಲ್ಲಿ 8ನೇ ತರಗತಿಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸನ್ಮಾನ ಮಾಡುವ ಮೂಲಕ ಆಚರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿದ್ಯುತ್ ಸಮಸ್ಯೆಗೆ ಗುಡ್‍ಬೈ: ರಾಯಚೂರಿನಲ್ಲಿ ತಲೆಎತ್ತಿದೆ ಸೋಲಾರ್ ಆಸ್ಪತ್ರೆ

    ವಿದ್ಯುತ್ ಸಮಸ್ಯೆಗೆ ಗುಡ್‍ಬೈ: ರಾಯಚೂರಿನಲ್ಲಿ ತಲೆಎತ್ತಿದೆ ಸೋಲಾರ್ ಆಸ್ಪತ್ರೆ

    – ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಲಾರ್ ವ್ಯವಸ್ಥೆ
    – ಸಂಪೂರ್ಣ ಸೋಲಾರ್ ವ್ಯವಸ್ಥೆ ಅಳವಡಿಸಿಕೊಂಡ ರಾಜ್ಯದ ಮೊದಲ ಆಸ್ಪತ್ರೆ

    ರಾಯಚೂರು: ರಾಜ್ಯದ ಎಲ್ಲೆಡೆ ಬೇಸಿಗೆ ಹಾಗೂ ಬರಗಾಲ ಹಿನ್ನೆಲೆಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಉಂಟಾಗಿ ಜನ ಬೆವರುತ್ತಿದ್ದಾರೆ. ಆದ್ರೆ ಬಿರು ಬಿಸಿಲನಾಡು ರಾಯಚೂರಿನ ಈ ಆಸ್ಪತ್ರೆ ಮಾತ್ರ ತುಂಬಾನೆ ಕೂಲಾಗಿದೆ. ದಿನದ 24 ಗಂಟೆ ಸೇವೆಯ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆಯೂ ವಿದ್ಯುತ್ ಇರುತ್ತೆ. ಇದೆಲ್ಲಾ ಬೇಸಿಗೆ ಸೂರ್ಯನ ಮಹಿಮೆ.

    ರಾಯಚೂರು ತಾಲೂಕಿನ ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪೂರ್ಣ ಸೋಲಾರ್ ವ್ಯವಸ್ಥೆಯ ಸರ್ಕಾರಿ ಆಸ್ಪತ್ರೆಯಾಗಿ ರೂಪಗೊಂಡಿದೆ. ದಿನದ 24 ಗಂಟೆಯೂ ಇಲ್ಲಿ ವಿದ್ಯುತ್ ಇರುತ್ತೆ. ಈ ಮೊದಲು ಗರ್ಭಿಣಿಯರ ಸ್ಕ್ಯಾನಿಂಗ್, ನವಜಾತ ಶಿಶುಗಳ ಫೋಟೋಥೆರಪಿ, ಬೇಬಿ ವಾರ್ಮಿಂಗ್ ಹಾಗೂ ಪ್ರಯೋಗಾಲಯದ ಪರೀಕ್ಷೆಗಳಿಗೆ ಲೋಡ್ ಶೆಡ್ಡಿಂಗ್ ದೊಡ್ಡ ಶತ್ರುವಾಗಿತ್ತು. ಹತ್ತು ಗ್ರಾಮಗಳ ಕೇಂದ್ರವಾಗಿರುವ ಈ ಆಸ್ಪತ್ರೆಗೆ ಬರುವ ರೋಗಿಗಳು ವಿದ್ಯುತ್ ಇಲ್ಲದೆ ಸುಮಾರು 30 ಕಿ.ಮೀ ದೂರದ ರಾಯಚೂರು ನಗರಕ್ಕೆ ಬರಬೇಕಾಗಿತ್ತು. ಆದ್ರೆ ಜಿಲ್ಲಾ ಪಂಚಾಯ್ತಿ ಸಹಯೋಗದೊಂದಿಗೆ ಸೆಲ್ಕೋ ಸೋಲಾರ್ ಲೈಟ್ ಪವರ್ ಲಿಮಿಟೆಡ್ ಕಂಪನಿ ಈ ಆಸ್ಪತ್ರೆಗೆ ಸೌರ ವ್ಯವಸ್ಥೆ ಅಳವಡಿಸಿದ ಮೇಲೆ ವಿದ್ಯುತ್ ಸಮಸ್ಯೆ ಅನ್ನೋದನ್ನೇ ರೋಗಿಗಳು ಮರೆತಿದ್ದಾರೆ.

    ಒಟ್ಟು 3 ಲಕ್ಷ 60 ಸಾವಿರ ರೂಪಾಯಿ ಯೋಜನೆಯಲ್ಲಿ ಜಿಲ್ಲಾ ಪಂಚಾಯ್ತಿ 95 ಸಾವಿರ ರೂಪಾಯಿ ನೀಡಿದ್ದು, ಉಳಿದ 2 ಲಕ್ಷ 65 ಸಾವಿರ ರೂಪಾಯಿಯನ್ನ ಸೆಲ್ಕೋ ಸೋಲಾರ್ ಕಂಪನಿ ಭರಿಸಿದೆ. 2500 ವ್ಯಾಸ್ ಪೀಕ್‍ನ ಸೋಲಾರ್ ಪ್ಯಾನಲ್, 960 ಎಎಚ್ ಬ್ಯಾಟರಿ, 3 ಕೆ.ವಿ ಇನ್‍ವರ್ಟರ್ ಅಳವಡಿಸಿರುವುದರಿಂದ ಸದಾ ವಿದ್ಯುತ್ ಇರುತ್ತದೆ. ಆಸ್ಪತ್ರೆಯ 10 ಫ್ಯಾನ್, 10 ಟ್ಯೂಬ್ ಲೈಟ್, ಓಟಿ ಲೈಟ್, ರೆಫ್ರಿಜೆಟರ್ ಸೇರಿ ಪ್ರತಿಯೊಂದು ಉಪಕರಣಗಳು ಸದಾ ಕೆಲಸ ಮಾಡುತ್ತಿವೆ. ಇದರಿಂದ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯುತ್ತಿದೆ ಅಂತ ಸೆಲ್ಕೋ ಸೋಲಾರ್ ಕಂಪನಿ ಪ್ರಾಜೆಕ್ಟ್ ಮ್ಯಾನೇಜರ್ ಸುಬ್ರಾಯ್ ಹೆಗ್ಡೆ ತಿಳಿಸಿದ್ದಾರೆ.

    ಇಡಪನೂರು ಆಸ್ಪತ್ರೆಯಲ್ಲಿ ಸೋಲಾರ ವ್ಯವಸ್ಥೆ ಯಶಸ್ವಿಯಾಗಿರುವುದರಿಂದ ಜಿಲ್ಲೆಯ ಇನ್ನೂ 9 ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ಜಿಲ್ಲಾ ಪಂಚಾಯ್ತಿ ಹಾಗೂ ಸೆಲ್ಕೋ ಸೋಲಾರ್ ಕಂಪನಿ ಮುಂದಾಗಿವೆ. ಈಗಲಾದ್ರೂ ಗ್ರಾಮೀಣ ಭಾಗದಲ್ಲಿ ಸೋಲಾರ್ ವ್ಯವಸ್ಥೆಯಿಂದ ಉತ್ತಮ ಆರೋಗ್ಯ ಸೌಲಭ್ಯ ಸಿಗುತ್ತಿದೆ ಅನ್ನೋದು ನಿಜಕ್ಕೂ ಖುಷಿಯ ಸಂಗತಿ.