ಇದೇ ಮೊದಲ ಬಾರಿಗೆ ಜೈನ ಮಂದಿರಗಳ ವೇತನ ನಿಗದಿ ಸಂಬಂಧ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ವೇತನಕ್ಕಾಗಿ ಇದುವರೆಗೂ ಜಿಲ್ಲೆಗಳಿಂದ 1,043 ಪ್ರಸ್ತಾವನೆ ಬಂದಿದ್ದು, ಸಚಿವ ಜಮೀರ್ ಅಹಮದ್ ಖಾನ್ ಅವರು ಎಲ್ಲ ಪ್ರಸ್ತಾವನೆಗೆ ಒಪ್ಪಿಗೆ ನೀಡಿ ಆದೇಶ ಹೊರಡಿಸಲು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ದಸರಾ ವಿಶೇಷ | ಮೈಸೂರು ಸಿಂಗರಿಸಿದ ದೀಪಾಲಂಕಾರ, ಆಹಾರ ಮೇಳಕ್ಕೆ ಚಾಲನೆ
ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ‘ಓ ಮೈ ಗಾಡ್’ ಸಿನಿಮಾಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಿದೆ. ಈವರೆಗೂ ಸೆನ್ಸಾರ್ ಮಂಡಳಿಯಿಂದ ನಾನಾ ರೀತಿಯ ತೊಂದರೆಗಳನ್ನು ಅನುಭವಿಸಿದ್ದ ಚಿತ್ರತಂಡ, ಇದೀಗ ಉಜ್ಜಯಿನಿಯ ಮಹಾಕಾಳೇಶ್ವರ (Ujjain Mahakaleshwar) ದೇವಾಲಯದ ಅರ್ಚಕರ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ವಯಸ್ಕರ ಚಿತ್ರದ ಪ್ರಮಾಣ ಪತ್ರ ನೀಡಿರುವುದರಿಂದ ಅರ್ಚಕರು ಸಿಡಿದೆದ್ದಿದ್ದಾರೆ.
ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಶಿವನ (Shiva) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಶಿವತಾಂಡವ ನೃತ್ಯ ಕೂಡ ಮಾಡುತ್ತಾರಂತೆ. ಆ ದೃಶ್ಯಗಳನ್ನು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಆ ದೃಶ್ಯಗಳನ್ನು ಚಿತ್ರದಿಂದ ಕೈ ಬಿಡಬೇಕು ಎಂದು ಅರ್ಚಕರು (Priests) ಆಗ್ರಹ ಮಾಡಿದ್ದಾರೆ. ಒಂದು ವೇಳೆ ದೃಶ್ಯಗಳನ್ನು ಡಿಲೀಟ್ ಮಾಡದೇ ಇದ್ದರೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಓ ಮೈ ಗಾಡ್ ವಯಸ್ಕರ ಸಿನಿಮಾ
ಬಾಲಿವುಡ್ (Bollywood) ಹೆಸರಾಂತ ನಟ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಡ್ 2’ (Oh My God 2) ಸಿನಿಮಾ ವಿವಾದಿತ ಅಂಶಗಳು ಇರುವ ಕಾರಣದಿಂದಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ (ಸಿ.ಬಿ.ಎಫ್.ಸಿ) ಸೆನ್ಸಾರ್ ಪತ್ರವನ್ನು (Censor) ಕೊಡಲು ನಿರಾಕರಿಸಿತ್ತು (Denial). ಜೊತೆಗೆ ಈ ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಡಲಾಗಿತ್ತು. ಪರಿಶೀಲನಾ ಸಮಿತಿಯು ಕೊನೆಗೂ ಚಿತ್ರಕ್ಕೆ ಪ್ರಮಾಣ ಪತ್ರ ದಯಪಾಲಿಸಿದೆ.
ಸಿಬಿಎಫ್ಸಿ ಸಿನಿಮಾದ ಒಟ್ಟು 20 ಕಡೆ ದೃಶ್ಯಗಳನ್ನು ಕತ್ತರಿಸಲು ತಿಳಿಸಲಾಗಿತ್ತು. ಕೆಲವು ಕಡೆ ಮಾತುಗಳನ್ನು ಮ್ಯೂಟ್ ಮಾಡಲು ಹೇಳಲಾಗಿತ್ತು. ಇಷ್ಟೆಲ್ಲ ಮಾಡಿದರೂ ಚಿತ್ರಕ್ಕೆ ವಯಸ್ಕರು ನೋಡಬಹುದಾದ ಸಿನಿಮಾ ಎಂದು ‘ಎ’ ಸರ್ಟಿಫಿಕೇಟ್ ನೀಡಲಾಗಿತ್ತು. ಇದೀಗ ಒಂದಷ್ಟು ಬದಲಾವಣೆಯನ್ನು ಮಾಡಿಕೊಳ್ಳಲು ಹೇಳುವ ಮೂಲಕ ಪರಿಶೀಲನಾ ಸಮಿತಿಯೂ ‘ಎ’ ಪ್ರಮಾಣ ಪತ್ರ ನೀಡಿದೆ. ಹಾಗಾಗಿ 18 ವರ್ಷ ತುಂಬಿದವರು ಮಾತ್ರ ಈ ಸಿನಿಮಾ ನೋಡಬಹುದಾಗಿದೆ.
ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸೆನ್ಸಾರ್ ಪತ್ರವನ್ನು ನೀಡಲು ನಿರಾಕರಿಸಿತ್ತು. ಲೈಂಗಿಕ ಶಿಕ್ಷಣದ ಕುರಿತಾಗಿ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಇಂತಹ ವಿಷಯವನ್ನು ಶಿವನ ಮೂಲಕ ಹೇಳಲು ಹೊರಟಿರುವುದು ಸೆನ್ಸಾರ್ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.
ಪ್ರಭಾಸ್ ನಟಿಸಿರುವ ‘ಆದಿಪುರುಷ್’ (Adipurush) ಸಿನಿಮಾದಲ್ಲಿ ರಾಮಾಯಣಕ್ಕೆ ಅಪಮಾನ ಮಾಡಿದ್ದಾರೆಂದು ಈ ಹಿಂದೆ ಹಿಂದೂ ಪರ ಸಂಘಟನೆಗಳು ಆರೋಪಿಸಿದ್ದವು. ರಾಮಾಯಣದ ಪಾತ್ರಗಳನ್ನು ತಮಗಿಷ್ಟ ಬಂದಂತೆ ಪ್ರೆಸೆಂಟ್ ಮಾಡಿರುವುದಕ್ಕಾಗಿ ಭಾರೀ ಆಕ್ರೋಶ ವ್ಯಕ್ಯವಾಗಿತ್ತು. ಇದೀಗ ಪ್ರತಿಭಟನೆಯ (Protest) ಅಖಾಡಕ್ಕೆ ಅಯೋಧ್ಯ (Ayodhya) ಅರ್ಚಕರು ಇಳಿದಿದ್ದು, ಈ ಸಿನಿಮಾವನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಮನಿಗೆ ಅಪಮಾನ ಮಾಡಿದವರ ವಿರುದ್ಧ ಕ್ರಮಕ್ಕೂ ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಟೀಸರ್ ಕೂಡ ಕಳಪೆ ಮಟ್ಟದ್ದಾಗಿದೆ ಎಂದು ಟ್ರೋಲಿಗರು ಸಿನಿಮಾ ಬೆನ್ನು ಬಿದ್ದಿದ್ದು, ಈ ನಡುವೆ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಆದ ಪ್ರಮಾದಗಳನ್ನು ಪಟ್ಟಿ ಮಾಡಿರುವ ಅವರು, ತಪ್ಪುಗಳನ್ನು ತಿದ್ದಿಕೊಳ್ಳಲು ಸೂಚಿಸಿದ್ದಾರೆ.
ಆದಿಪುರುಷ್ ಸಿನಿಮಾದಲ್ಲಿ ಹಿಂದೂಗಳ ಭಾವನೆ ಧಕ್ಕೆ ಮಾಡಲಾಗಿದೆ ಎಂದು ಗೃಹ ಸಚಿವರು ಆರೋಪಿಸಿದ್ದು, ಈಗಾಗಲೇ ಬಿಡುಗಡೆಗೊಂಡ ಟೀಸರ್ ನಲ್ಲಿ ಹನುಮಂತ ಪಾತ್ರಧಾರಿಗೆ ಲೆದರ್ ಬಟ್ಟೆಗಳನ್ನು ತೊಡಿಸಲಾಗಿದೆ. ಹನುಮನ ಸೈನಕ್ಕೂ ಲೆದರ್ ಬಟ್ಟೆ ಇದೆ. ಹೀಗಾಗಿ ಹನುಮ ದೇವರಿಗೆ ಅಪಮಾನ ಮಾಡಲಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅದನ್ನು ಸರಿ ಮಾಡದೇ ಇದ್ದರೆ ಪರಿಣಾಮ ಸರಿ ಇರಲ್ಲ ಎಂದು ಚಿತ್ರತಂಡಕ್ಕೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಿಶ್ರಾ, ಲೆದರ್ ಬಟ್ಟೆಗಳನ್ನು ಹಾಕಿರುವ ಕುರಿತು ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಪತ್ರ ಬರೆಯುವುದಾಗಿ ತಿಳಿಸಿರುವ ಅವರು, ಒಂದು ವೇಳೆ ಆ ದೃಶ್ಯಗಳನ್ನು ತಗೆದು ಹಾಕದೇ ಇದ್ದರೆ ಕಾನೂನು ಕ್ರಮಕ್ಕೂ ತಾವು ಹಿಂಜರಿಯುವುದಿಲ್ಲ ಎನ್ನುತ್ತಾರೆ. ಇಂತಹ ಅಪಮಾನಗಳನ್ನು ಯಾವತ್ತಿಗೂ ಹಿಂದೂಗಳ ಸಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಟಿ ಕೀರ್ತಿ ಸುರೇಶ್
ಆದಿ ಪುರುಷ್ ಟೀಸರ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಸ್ವತಃ ಪ್ರಭಾಸ್ (Prabhas) ಕೂಡ ಕೋಪ ಮಾಡಿಕೊಂಡಿದ್ದಾರೆ. ಟೀಸರ್ ಬಿಡುಗಡೆ ಸಮಾರಂಭ ಮುಗಿದ ನಂತರ ನಿರ್ದೇಶಕರನ್ನು ತಮ್ಮ ರೂಮ್ ಗೆ ಕರೆದು ಬೈದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಸೈಫ್ ಅಲಿ ಖಾನ್ ಅವರಿಗೆ ರಾವಣನ ಪಾತ್ರ ಕೊಟ್ಟಿದ್ದಕ್ಕೂ ಹಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾವಣನ ರೀತಿಯಲ್ಲಿ ಅವರು ಕಾಣುತ್ತಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ನವರಾತ್ರಿ ಹಬ್ಬ ಆರಂಭವಾಗುವ ಮುನ್ನ ಸಮಾಧಿ ತೋಡಿಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಪುರೋಹಿತರೊಬ್ಬರು ಹೇಳಿದರು ಎಂಬ ಕಾರಣಕ್ಕೆ ಆರು ಅಡಿ ಆಳದಲ್ಲಿ ಹೂತಿದ್ದ ವ್ಯಕ್ತಿಯನ್ನು ಉತ್ತರಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.
ಲಕ್ನೋದಿಂದ 45 ಕಿ.ಮೀ ದೂರದಲ್ಲಿರುವ ಉನ್ನಾವೋ ಜಿಲ್ಲೆಯ ತಾಜ್‍ಪುರ ಗ್ರಾಮದ ಮೂವರು ಪುರೋಹಿತರು ಹಣ ಗಳಿಸುವ ದುರುದ್ದೇಶದಿಂದ ಯುವಕನೊಬ್ಬನಿಗೆ ಐಕ್ಯವಾಗುವಂತೆ ತಿಳಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ಸಮಾಧಿಯಿಂದ ಹೊರ ಕರೆತಂದಿದ್ದಾರೆ. ವೀಡಿಯೋದಲ್ಲಿ ವ್ಯಕ್ತಿಯನ್ನು ಸಮಾಧಿ ಮಾಡಿರುವ ಮಣ್ಣು ಮತ್ತು ಬಿದಿರಿನ ಹೊದಿಕೆಯನ್ನು ತೆಗೆದುಹಾಕುವುದನ್ನು ಕಾಣಬಹುದಾಗಿದೆ.
ಹಿಂದೂಗಳು ಆಚರಿಸುವ ಅದ್ದೂರಿ ಹಬ್ಬಗಳಲ್ಲಿ ನವರಾತ್ರಿ ಹಬ್ಬ ಕೂಡ ಒಂದು. ಈ ಹಬ್ಬದ ಸಮಯದಲ್ಲಿ ಹಣ ಗಳಿಸುವ ದುರಾಸೆಯಿಂದ ಈ ರೀತಿಯ ಸಂಚುಗಳನ್ನು ರೂಪಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ಸಮಾಧಿಯಾಗಿದ್ದ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಆರು ಅಡಿ ಆಳದ ಹೊಂಡದಲ್ಲಿ ಸಮಾಧಿಯಾಗಿದ್ದ ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‍ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿಯನ್ನು ಇದೀಗ ಪೊಲೀಸರು ಹೊರ ಕರೆತಂದಿದ್ದಾರೆ. ಗೋಸ್ವಾಮಿ ಅವರ ತಂದೆ ವಿನೀತ್ ಗೋಸ್ವಾಮಿ ಕೂಡ ಈ ಕೃತ್ಯದಲ್ಲಿ ಪಾಲುದಾರರಾಗಿದ್ದಾರೆ. ಇದನ್ನೂ ಓದಿ : ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ: ಖಾದರ್
ಸುಮಾರು ಐದು ವರ್ಷಗಳಿಂದ ಗ್ರಾಮದ ಹೊರಗಿದ್ದ ಗುಡಿಸಲಿನಲ್ಲಿ ಶುಭಂ ಗೋಸ್ವಾಮಿ ವಾಸವಾಗಿದ್ದ. ನಂತರ ಪುರೋಹಿತರೊಂದಿಗೆ ಸಂಪರ್ಕ ಬೆಳೆದ ಬಳಿಕ ತಮ್ಮನ್ನು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಆದರೆ ಶುಭಂ ಗೋಸ್ವಾಮಿ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಪುರೋಹಿತರಾದ ಮುನ್ನಾಲಾಲ್ ಮತ್ತು ಶಿವಕೇಶ್ ದೀಕ್ಷಿತ್ ಹಣ ಗಳಿಸಲು ಪ್ರಯತ್ನಿಸಿದರು. ಹೀಗಾಗಿ ಭೂ ಸಮಾಧಿ ಮಾಡಿಕೊಳ್ಳುವಂತೆ ತಿಳಿಸಿದರು.
ಹೀಗಾಗಿ ಭಾನುವಾರ ಸಂಜೆ 6 ಅಡಿ ಸಮಾಧಿಗೆ ಶುಭಂ ಗೋಸ್ವಾಮಿ ಪ್ರವೇಶಿಸಿದರು. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಗಾಬರಿಗೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಾಧಿಯಿಂದ ವ್ಯಕ್ತಿಯನ್ನು ಹೊರ ಕರೆ ತಂದಿದ್ದಾರೆ. ನಂತರ ಈ ವಿಚಾರವಾಗಿ ಯುವಕನನ್ನು ವಿಚಾರಣೆ ನಡೆಸಿದ ಬಳಿಕ ಆರ್ಚಕರ ಕೃತ್ಯ ಬೆಳಕಿಗೆ ಬಂದಿದೆ.
Live Tv
[brid partner=56869869 player=32851 video=960834 autoplay=true]
ಡೆಹ್ರಾಡೂನ್: ಉತ್ತರಾಖಂಡದ(Uttarakhand) ಜಗತ್ಪ್ರಸಿದ್ಧ ಕೇದಾರನಾಥ ದೇವಾಲಯದ(Kedarnath Temple) ಗರ್ಭಗುಡಿಯೊಳಗಿನ ಗೋಡೆಗೆ ಚಿನ್ನದ ಲೇಪನ(Gold Plating) ಮಾಡುವುದಕ್ಕೆ ಕೆಲ ಅರ್ಚಕರು(Priests) ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಹಾಳು ಮಾಡುತ್ತಿದೆ ಎಂದು ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೇದಾರನಾಥ ದೇವಾಲಯದ ಗರ್ಭಗುಡಿಯಲ್ಲಿ ಗೋಡೆಯ ನಾಲ್ಕೂ ಬದಿಗಳಲ್ಲಿ ಬೆಳ್ಳಿಯ ತಟ್ಟೆಗಳಿಂದ ಮುಚ್ಚಲಾಗಿದೆ. ಇದೀಗ ಚಿನ್ನದ ಲೇಪವನ್ನು ಅಳವಡಿಸಲು ಈ ಬೆಳ್ಳಿಯ ತಟ್ಟೆಗಳನ್ನು ತೆಗೆಯಬೇಕಾಗುತ್ತದೆ. ಚಿನ್ನದ ಲೇಪವನ್ನು ಹಾಕುವ ಪ್ರಕ್ರಿಯೆಯಲ್ಲಿ ದೊಡ್ಡ ಕೊರೆಯುವ ಯಂತ್ರಗಳನ್ನು ಬಳಸಲಾಗುತ್ತದೆ. ಇವುಗಳಿಂದ ದೇವಾಲಯದ ಗೋಡೆಗೆ ಹಾನಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಶಿವಭಕ್ತರೊಬ್ಬರು ದೇವಾಲಯದ ಗರ್ಭಗುಡಿಯ ಗೋಡೆಗೆ ಚಿನ್ನದ ಲೇಪಕ್ಕೆ ಚಿನ್ನವನ್ನು ಅರ್ಪಣೆ ಮಾಡಿದ್ದಾರೆ. ಈ ಪ್ರಸ್ತಾಪವನ್ನು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಅಂಗೀಕರಿಸಿದ್ದು, ದೇವಾಲಯದ ಗೋಡೆಗೆ ಚಿನ್ನದ ಲೇಪ ಮಾಡಲಾಗುತ್ತಿದೆ. ಇದನ್ನೂ ಓದಿ: ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ
ಆದರೆ ಈ ಚಿನ್ನದ ಲೇಪದಿಂದ ದೇವಾಲಯದ ಗೋಡೆಗೆ ಹಾನಿಯಾಗುತ್ತಿದೆ. ಈ ಉದ್ದೇಶಕ್ಕಾಗಿ ದೊಡ್ಡ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ದೇವಾಲಯದ ಶತಮಾನಗಳ ಹಳೆಯ ಸಂಪ್ರದಾಯವನ್ನು ಈ ರೀತಿಯಾಗಿ ಹಾಳು ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಯಾತ್ರಾರ್ಥಿ ಸಂತೋಷ್ ತ್ರಿವೇದಿ ಕೇದಾರನಾಥದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಹಿರಿಯ ಅರ್ಚಕ ಶ್ರೀನಿವಾಸ್ ಪೋಸ್ತಿ ಹಾಗೂ ಕೇದಾರಸಭಾ ಮಾಜಿ ಅಧ್ಯಕ್ಷ ಮಹೇಶ್ ಬಗ್ವಾಡಿ, ದೇವಾಲಯವು ಸನಾತನ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ಅದರ ಗೋಡೆಗಳಿಗೆ ಚಿನ್ನದ ಲೇಪವನ್ನು ಅಳವಡಿಸುತ್ತಿರುವುದು ಹಿಂದೂ ನಂಬಿಕೆ ಹಾಗೂ ಸಂಪ್ರದಾಯಗಳಿಗೆ ಅನುಗುಣವಾಗಿದೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರನ್ನ (Siddaramaiah) ಆಶೀರ್ವದಿಸಲು ಆಗಮಿಸಿದ್ದ ಅರ್ಚಕರು ಮತ್ತೆ ಮುಖ್ಯಂತ್ರಿಯಾಗುವಂತೆ (Chief Minister) ಆಶೀರ್ವಾದಿಸಿದ್ದಾರೆ.
ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ (Congress), ಬಿಜೆಪಿ (BJP), ಜೆಡಿಎಸ್ (JDS)ನಿಂದ ಭರ್ಜರಿ ತಯಾರಿ ನಡೆಯುತ್ತಿವೆ. ಬರುವ ದಿನಗಳಲ್ಲಿ ರಾಜ್ಯದಲ್ಲಿ ಸಮಾವೇಶಗಳ ಪರ್ವ ಆರಂಭವಾಗಿದೆ. ಎಲ್ಲ ಪಕ್ಷಗಳು ರಾಜಕೀಯ ಘಟಾನುಘಟಿಗಳಿಗೆ ಸಂಘಟನೆಯ ಉಸ್ತುವಾರಿ ನೀಡಿದ್ದು ಪಕ್ಷ ಸಂಘಟನೆಯ ತಯಾರಿ ನಡೆಸಿವೆ. ಇದೇ ಸಂದರ್ಭದಲ್ಲಿ ಅರ್ಚಕರು ಸಿದ್ದರಾಮಯ್ಯರನ್ನ ಬೆಂಬಲಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಶ್ರೀಮಂತ ದೇಗುಲಗಳಲ್ಲಿ ಬನಶಂಕರಿ ದೇವಾಲಯ ಕೂಡ ಒಂದಾಗಿದೆ. ಇದೀಗ ಬನಶಂಕರಿ ದೇಗುಲದಲ್ಲಿ ಆಂತರಿಕ ಕಲಹ ಎದ್ದಿದೆ. ದೇವಿಯ ಅಭಿಷೇಕಕ್ಕೆ ಭಕ್ತರು ತಂದ ಹಾಲು ಹೂವಿನ ಹಾರ ನಿಂಬೆಹಣ್ಣು ದೇವಿಗೆ ಸಮರ್ಪಣೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬನಶಂಕರಿ ದೇಗುಲದ ಅಂಗಳದಲ್ಲಿ ದೇವಿಗಾಗಿ ಭಕ್ತರು ತಂದಿದ್ದ ಹೂವಿನ ದೊಡ್ಡ ದೊಡ್ಡ ಹಾರ, ಜೊತೆಗೆ ನಿಂಬೆಹಣ್ಣಿನ ಹಾರ ಹೀಗೆ ಎಲ್ಲವನ್ನು ಹೆಗಲ ಮೇಲೆ ಹೊತ್ತೊಯ್ದು ಚಾಲಕನೋರ್ವ ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾನೆ. ಮತ್ತೊಂದೆಡೆ ದೇವಿಗಾಗಿ ತಂದ ಹಾಲು ಕೂಡ ಸಾಗಾಟ ಮಾಡಲಾಗುತ್ತಿದೆ. ಜೊತೆಗೆ ಸೆಕ್ಯೂರಿಟಿಗಳ ಸಹಾಯದಿಂದ ಅರ್ಚಕರು ದೇವಿಗೆ ಭಕ್ತರು ಅರ್ಪಿಸಿದ ಹೂವಿನ ಹಾರ ಮಡಿಲಕ್ಕಿ, ಸೀರೆಯನ್ನು ಕದ್ದು ಮನೆಗೆ ಸಾಗಿಸುತ್ತಾರೆ ಎಂದು ಧಾರ್ಮಿಕ ಪರಿಷತ್ ಸದಸ್ಯ ವೆಂಕಟೇಶ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಮುಜರಾಯಿ ಇಲಾಖೆ ಹಾಗೂ ಡಿಸಿಗೆ ಕೂಡ ದೂರು ನೀಡಲಾಗಿದೆ. ಇದನ್ನೂ ಓದಿ: ಏಕೆ ಗುರಾಯಿಸ್ತಿದ್ಯಾ ಅಂದಿದ್ದಕ್ಕೆ ಯುವಕನಿಗೆ ಚಾಕು ಇರಿತ
ಕಲಬುರಗಿ: ದೇವರು ಎಂದರೆ ಭಯಭಕ್ತಿ ಹೆಚ್ಚು. ಆದರೆ ಇಲ್ಲಿ ಕೆಲ ವಂಚಕರು ಭಯಭಕ್ತಿ ಎಲ್ಲವನ್ನು ಬಿಟ್ಟು ದೇವರ ಹೆಸರಿನಲ್ಲಿಯೇ ಭಕ್ತರಿಗೆ ಪಂಗನಾಮ ಹಾಕಿದ್ದಾರೆ. ದೇವರ ಹೆಸರಿನಲ್ಲಿ ಭಕ್ತರಿಗೆ ವಂಚಿಸಿರುವುದು ಸ್ವತಃ ಅರ್ಚಕರು ಎನ್ನುವುದು ಇಲ್ಲಿ ಬೆಚ್ಚಿಬೀಳಿಸುವ ಸಂಗತಿ.
ಕಲಬುರಗಿ ಜಿಲ್ಲೆ ದೇವಲಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ದೇಶದ ಮೂಲೆಮೂಲೆಗಳಲ್ಲಿ ಭಕ್ತರಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಗಾಣಗಾಪುರದ ಕೆಲ ಅರ್ಚಕರು ದೇವಸ್ಥಾನ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು, ದೇವರ ಜೊತೆಗೆ ಭಕ್ತರಿಗೆ ಪಂಗನಾಮ ಹಾಕಿದ್ದಾರೆ. ದತ್ತಾತ್ರೇಯ ದೇವಸ್ಥಾನಕ್ಕೆ ಕಲಬುರಗಿ ಡಿಸಿ ಯಶವಂತ್ ಗುರುಕರ್ ಭೇಟಿ ನೀಡಿದ್ದಾಗ ಈ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಇದನ್ನೂ ಓದಿ: ಮೈಸೂರು ಆಯ್ತು ಈಗ ಹೈದರಾಬಾದ್ ಕರ್ನಾಟಕದತ್ತ ಕಣ್ಣು – ಬಿಜೆಪಿಯಿಂದ ಟಾರ್ಗೆಟ್ 25 ಫಿಕ್ಸ್
ದೇವಸ್ಥಾನದ ಅಧಿಕೃತ ವೆಬ್‌ಸೈಟ್ www.devalgangapur.com (Shri dattatreya temple.ghanagapur) ಎಂದಿದೆ. ಆದರೆ ಅಧಿಕೃತ ವೆಬ್‌ಸೈಟ್ ಹೊರತುಪಡಿಸಿ ಅರ್ಚಕರೇ 7-8 ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿ ಮಾಡಿದ್ದಾರೆ. ದರ್ಶನ, ವಿಶೇಷ ಪೂಜೆ, ಅರ್ಚನೆ ಸೇರಿ ದೂರದ ಊರಿನಲ್ಲಿಯೇ ಕುಳಿತು ಆನ್‌ಲೈನ್ ಬುಕ್ ಮಾಡುವ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ದೇವಸ್ಥಾನಕ್ಕೆ ಸಲ್ಲಿಸುವ ದಾನವನ್ನು ಕೂಡಾ ವಂಚಕರು ತಮ್ಮ ಖಾತೆಗಳಿಗೆ ಹಾಕಿಸಿಕೊಂಡು ಸರ್ಕಾರ ಬೊಕ್ಕಸಕ್ಕೆ ಕೋಟಿ ಕೋಟಿ ವಂಚಿಸಿದ್ದಾರೆ. ದೇವಸ್ಥಾನದ ಹುಂಡಿ ಎಣಿಕೆ ವೇಳೆಯೂ ಮೋಸ ಮಾಡಿರುವಂತೆ ಕಂಡುಬಂದಿದೆ. ಎಣಿಕೆ ವೇಳೆ ಸಿಸಿ ಕ್ಯಾಮೆರಾ ಕಣ್ಣುಗಳನ್ನು ಮುಚ್ಚಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ.
ದೇವಸ್ಥಾನದ ಅಧ್ಯಕ್ಷ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರ ಸೂಚನೆ ಮೇರೆಗೆ ದೇವಲಗಾಣಗಾಪುರ ಠಾಣೆಯಲ್ಲಿ ಗಂಗಾಧರ್ ಪೂಜಾರಿ, ಶರತ್ ಭಟ್ ಪೂಜಾರಿ, ವಲ್ಲಭ ಪೂಜಾರಿ, ಅಂಕುರ ಪೂಜಾರಿ, ಪ್ರತಿಕ್ ಪೂಜಾರಿ ಸೇರಿದಂತೆ ಒಟ್ಟು 7 ವಂಚಕರ ಮೇಲೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ವಿದ್ಯಾಪೀಠಕ್ಕೆ ಇಂದು ಚಾಲನೆ – 3 ದಿನಗಳ ಶೈಕ್ಷಣಿಕ ಮೇಳಕ್ಕೆ ಬನ್ನಿ
ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕೇವಲ ಅರ್ಧ ಗಂಟೆಯಲ್ಲೇ ನಕಲಿ ವೆಬ್‌ಸೈಟ್‌ಗಳು ಬಂದ್ ಆಗಿದೆ. ಸುಮಾರು 3-4 ವರ್ಷಗಳಿಂದ ವಂಚನೆ ನಡೆದಿದ್ದು, ದೇವಸ್ಥಾನದಿಂದ ಮುಜರಾಯಿ ಇಲಾಖೆಗೆ ಬರಬೇಕಾದ ಕೋಟ್ಯಂತರ ರೂ. ಆದಾಯ ಖದೀಮರು ನುಂಗಿಹಾಕಿದ್ದಾರೆ. ನಷ್ಟದ ಹಣವನ್ನು ಇವರಿಂದಲೇ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ.
ಜೈಪುರ: ರಾಜ್ಯದ ಬುಂದಿ ಜಿಲ್ಲೆಯ ದೇವಸ್ಥಾನವೊಂದರೊಳಗೆ 40 ವರ್ಷ ವಯಸ್ಸಿನ ಅರ್ಚಕರೊಬ್ಬರು ಶವವಾಗಿ ಪತ್ತೆಯಾಗಿದ್ದು, ದೇವರ ವಿಗ್ರಹ ಕಾಣೆಯಾಗಿದೆ.
ತಾರಾಗಢ ಬೆಟ್ಟದ ಮೇಲಿರುವ ದೋಬ್ರಾ ಮಹಾದೇವ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ವಿವೇಕಾನಂದ ಶರ್ಮಾ ಅವರು ಸೋಮವಾರ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸ್ಥಳೀಯರು ಇದನ್ನು ನೋಡಿದ್ದು, ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: 348 ಹೊಸ ಪ್ರಕರಣ ದಾಖಲು – 311 ಮಂದಿ ಡಿಸ್ಚಾರ್ಜ್
ವಿಗ್ರಹವನ್ನು ರಕ್ಷಿಸುವ ಸಂದರ್ಭದಲ್ಲಿ ಅರ್ಚಕನನ್ನು ಕೊಂದಿರುವ ಸಾಧ್ಯತೆಯಿದೆ. ಅರ್ಚಕರ ದೇಹದ ಮೇಲಿನ ಗಾಯಗಳನ್ನು ಪರಿಶೀಲಿಸಿದಾಗ, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ದಾಳಿಕೋರರು ಹಲ್ಲೆ ಮಾಡಿ ಕೊಂದಿರುವ ಸಾಧ್ಯತೆ ಇದೆ ಎಂದು ಬುಂಡಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಿ ಲಾಲ್ ಹೇಳಿದ್ದಾರೆ.
ಪ್ರತಿಭಟನೆ
ಅರ್ಚಕರ ಕುಟುಂಬಕ್ಕೆ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಗುತ್ತಿಗೆ ಉದ್ಯೋಗವನ್ನು ಘೋಷಿಸುವವರೆಗೂ ಶವದ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲು ನಿರಾಕರಿಸಿ ಕೆಲವು ಸಮುದಾಯದವರು ಪ್ರತಿಭಟನೆ ನಡೆಸಿದರು. ಇವರ ಬೇಡಿಕೆಗಳಿಗೆ ಜಿಲ್ಲಾಡಳಿತ ಸಮ್ಮತಿಸಿದ ಹಿನ್ನೆಲೆ ಶವ ಪರೀಕ್ಷೆ ನಡೆಸಲಾಗಿದೆ. ಇದನ್ನೂ ಓದಿ: ಮದುವೆಗೆ ಹೋಗುತ್ತಿದ್ದವರು ಮಸಣಕ್ಕೆ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ದುರ್ಮರಣ
ಅಪರಿಚಿತ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಮೃತದೇಹವನ್ನು ಮಂಗಳವಾರ ಬೆಳಗ್ಗೆ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ದಾಂಧಲೆ ನಡೆಸುತ್ತಿದ್ದಾರೆ. ಆದರೆ ದೇವಸ್ಥಾನದ ಅರ್ಚಕರೊಬ್ಬರು ನಾನು ಕಾಬೂಲ್ ಬಿಟ್ಟು ಹೋಗುವುದಿಲ್ಲ ಎಂದು ಹೇಳುವ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.
1. Pandit Rajesh Kumar, the priest of the last Hindu temple of Kabul refuses to flee, saying that if the Taliban kills him it will be his seva to the temple where his ancestors have always served. This is what it takes to be a priest. You can’t just take an exam and become that. pic.twitter.com/OAwWvfu4mZ
ಉಗ್ರರ ದುಷ್ಕೃತ್ಯಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿರುವ ಅಲ್ಪಸಂಖ್ಯಾತರ ಪರಿಸ್ಥಿತಿ ಮಾತ್ರ ಹೇಳ ತೀರದು. ಇಂತಹ ಕಠೋರ ಸ್ಥಿತಿಯಲ್ಲೂ ಅಲ್ಲಿರುವ ಹಿಂದೂ ದೇವಾಲಯ ಒಂದರ ಅರ್ಚಕರೊಬ್ಬರು ತಾವುದೇವರ ಮೇಲೆ ಇಟ್ಟಿರುವ ಸೇವೆ ಹಾಗೂ ನಂಬಿಕೆಯ ಕಾರಣಕ್ಕೆ ಸಖತ್ ಸುದ್ದಿಯಾಗುತ್ತಿದ್ದಾರೆ. ಇದನ್ನೂ ಓದಿ: ಒಂದು ಕೊರೊನಾ ಪ್ರಕರಣ ಪತ್ತೆ- ಮೂರು ದಿನ ಲಾಕ್‍ಡೌನ್
Pandit Rajesh Kumar, the priest of Rattan Nath Temple in Kabul:
“Some Hindus have urged me to leave Kabul & offered to arrange for my travel and stay.
But my ancestors served this Mandir for hundreds of years. I will not abandon it. If Taliban kiIIs me, I consider it my Seva”
ರಾಜೇಶ್ ಕುಮಾರ್ ಕಾಬೂಲ್‍ನಲ್ಲಿರುವ ದೇಗುಲದ ಒಂದರ ಅರ್ಚಕರಾಗಿ ಸೇವೆ ಅಲ್ಲಿಸುತ್ತಿದ್ದಾರೆ. ಉಗ್ರರ ಕಾಟ ಜೋರಾಗಿದ್ದರೂ ನಾನು ಯಾವುದೇ ಕಾರಣಕ್ಕೂ ಅಫ್ಘಾನಿಸ್ತಾನವನ್ನು ತೊರೆಯಲ್ಲಿ ಎಂದಿದ್ದಾರೆ. ದೇವರಲ್ಲಿ ನಂಬಿಕೆಯಿಟ್ಟು ಪೂಜೆಯಲ್ಲಿ ನಿಷ್ಠೆಯನ್ನ ಕಂಡಿರುವ ಅವರು ಉಗ್ರರ ದಾಂಧಲೆ ಮಧ್ಯೆಯೂ ಪೂಜೆ ಮಾಡೋದನ್ನ ಮಾತ್ರ ನಿಲ್ಲಿಸಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಫ್ಘಾನ್‍ನಲ್ಲಿ ಹಸುವಿನ ವೇಷ ತೊಟ್ಟ ತಾಲಿಬಾನ್ ರಾಕ್ಷಸರು – ಷರಿಯತ್ ಕಾನೂನು ಪಾಲಿಸಲು ಕಟ್ಟಪ್ಪಣೆ
This is a video of Rattan Nath temple of Kabul and Pandit Rajesh Kumar from 2019.
The temple looks like any normal residential house from outside so as to not draw any undue attentionhttps://t.co/gAOasKVv84
ಪಂಡಿತ್ ರಾಜೇಶ್ ಕುಮಾರ್ ಕಾಬೂಲ್‍ನಲ್ಲಿರುವ ದೇವಾಲಯದ ಅರ್ಚಕರಾರಿಗಿದ್ದಾರೆ. ಕೆಲ ಹಿಂದೂಗಳು ಕಾಬೂಲ್ ತೊರೆಯುವಂತೆ ನನ್ನ ಒತ್ತಾಯಿಸಿದ್ದರೆ. ನನ್ನ ಪ್ರಯಾಣ ಮತ್ತು ವಾಸ್ತವ್ಯಕ್ಕೆ ಎಲ್ಲಾ ರೀತಿಯ ವ್ಯವೆಸ್ಥೆ ಮಾಡಲು ಮುಂದಾಗಿದ್ದಾರೆ. ಆದರೆ ನಾನು ತಾಲಿಬಾನ್ ತೊರೆಯುವುದಿಲ್ಲ, ನನ್ನ ಕೊಂದರೆ ನಾನು ಅದನ್ನ ನನ್ನ ಸೇವೆಗ ಎಂದು ಪರಿಗಣಿಸುತ್ತೇನೆ ಎನ್ನುತ್ತಿದ್ದಾರೆ ಎಂದು ಟ್ವೀಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.