Tag: priest

  • ಬೀದಿಗೆ ಬಂದ ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇವಾಲಯದ ಅರ್ಚಕರ ಜಗಳ

    ಬೀದಿಗೆ ಬಂದ ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇವಾಲಯದ ಅರ್ಚಕರ ಜಗಳ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಪ್ರಸಿದ್ಧ ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ದೇವಾಲಯದ ಅರ್ಚಕರ ಜಗಳ ಬೀದಿಗೆ ಬಂದಿದೆ.

    ಸರ್ಕಾರ ಬೆಟ್ಟದ ಯೋಗಾನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಲು ಅರ್ಚಕ ನಾರಾಯಣ ಭಟ್ ಅವರನ್ನ ನೇಮಿಸಿತ್ತು. ಆದರೆ ನಾರಾಯಣ ಭಟ್ ತಮ್ಮ ಅನುಪಸ್ಥಿತಿಯಲ್ಲಿ ರಾಮಪ್ರಿಯ ಅವರಿಂದ ಪೂಜೆ ಮಾಡಿಸುತ್ತಿದ್ದರು. ರಾಮಪ್ರಿಯ ಪೂಜೆ ಮಾಡುವುದಕ್ಕೆ ತೀವ್ರವಾಗಿ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಸರ್ಕಾರ ನಾರಾಯಣ ಭಟ್ ಅರ್ಚಕರ ಅನುಪಸ್ಥಿತಿಯಲ್ಲಿ ಭಾಷ್ಯಂ ಸ್ವಾಮೀಜಿಗೆ ಪೂಜೆ ಸಲ್ಲಿಸಲು ಆದೇಶ ಹೊರಡಿಸಿತ್ತು.

    ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಸೋಮವಾರ ಸಂಜೆ ಪೂಜೆ ಸಲ್ಲಿಸಲು ಭಾಷ್ಯಂ ಸ್ವಾಮೀಜಿ ಬಂದಿದ್ದರು. ಆದರೆ ನಾರಾಯಣ ಭಟ್ ಅರ್ಚಕರ ಸಾಂಕೇತಿಕ ಪೂಜೆಗೆ ಅವಕಾಶ ನೀಡಲಿಲ್ಲ. ಸರ್ಕಾರ ನನ್ನ ಅನುಪಸ್ಥಿತಿಯಲ್ಲಿ ಪೂಜೆ ಸಲ್ಲಿಸಲು ಆದೇಶ ನೀಡಿದೆ. ಆದರೆ ನಾನಿರುವಾಗಲೇ ಪೂಜೆ ಸಲ್ಲಿಸಲು ಅವಕಾಶ ನೀಡುವುದಿಲ್ಲವೆಂದು ಅರ್ಚಕ ನಾರಾಯಣ ಭಟ್ ಪಟ್ಟು ಹಿಡಿದಿದ್ದಾರೆ. ದೇವಾಲಯದ ಮುಖ್ಯ ಗುಮಾಸ್ಥರು, ಪಾರುಪತ್ತೆದಾರು ಭಾಷ್ಯಂ ಸ್ವಾಮೀಜಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಲು ಅವಕಾಶ ಕೊಡಲು ಮನವಿ ಸಲ್ಲಿಸಿದ್ದಾರೆ. ಆದರೆ ಅರ್ಚಕ ನಾರಾಯಣ ಭಟ್ ಅವಕಾಶ ನೀಡಲು ನಿರಾಕರಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ಮುಂದೆಯೇ ಹೈಡ್ರಾಮಾ ನಡೆದಿದ್ದು, ಗರ್ಭಗುಡಿಯ ತೆರೆ ಎಳೆದು ಅರ್ಚಕರ ನಡುವೆ ವಾದ ವಿವಾದ ನಡೆದಿದೆ.ಇದರಿಂದ ಪೂಜೆಗೆ ಆಗಮಿಸಿದ ಭಕ್ತಾದಿಗಳಿಗೂ ತೊಂದರೆ ಆಗಿದೆ. ಹೀಗಾಗಿ ಭಾಷ್ಯಂ ಸ್ವಾಮೀಜಿ ಇಂದು ಪೊಲೀಸ್ ಭದ್ರತೆಯಲ್ಲಿ ಪೂಜೆ ಸಲ್ಲಿಸಲು ಆಗಮಿಸುತ್ತಿದ್ದಾರೆ.

  • ನೆಲಮಂಗಲದಲ್ಲಿ ಭೀಕರ ಅಪಘಾತ- ಅರ್ಚಕ ಸ್ಥಳದಲ್ಲೇ ಸಾವು

    ನೆಲಮಂಗಲದಲ್ಲಿ ಭೀಕರ ಅಪಘಾತ- ಅರ್ಚಕ ಸ್ಥಳದಲ್ಲೇ ಸಾವು

    ಬೆಂಗಳೂರು: ನಗರದ ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಘಟನೆಯಲ್ಲಿ ಅರ್ಚಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಘಟನೆ ನೆಲಮಂಗಲ ಸಮೀಪದ ದೇವಣ್ಣನಪಾಳ್ಯದಲ್ಲಿ ನಡೆದಿದೆ. ಮೃತ ಅರ್ಚಕರನ್ನು ಗೋಪಿನಾಥ್ (46) ಎಂದು ಗುರುತಿಸಲಾಗಿದ್ದು, ಇವರು ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯ ಚಿಕ್ಕ ಮಧುರೆ ಶನೈಶ್ವರ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.

    ಇವರು ಇಂದು ಬೆಳಗ್ಗೆ ನಗರದಿಂದ ಮಧುರೆಗೆ ತೆರಳುವಾಗ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ, ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅರ್ಚಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಹಿಳಾ ಭಕ್ತರಿಗೆ ಅಂಜನಾದ್ರಿ ಪರ್ವತದ ಪ್ರಧಾನ ಅರ್ಚಕರಿಂದ ಲೈಂಗಿಕ ಕಿರುಕುಳ?

    ಮಹಿಳಾ ಭಕ್ತರಿಗೆ ಅಂಜನಾದ್ರಿ ಪರ್ವತದ ಪ್ರಧಾನ ಅರ್ಚಕರಿಂದ ಲೈಂಗಿಕ ಕಿರುಕುಳ?

    ಕೊಪ್ಪಳ: ವಿಶ್ವ ಪ್ರಸಿದ್ಧ ಅಂಜನಾದ್ರಿ ಪರ್ವತದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

    ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಾಬಾರನ್ನು ಈಗ ಅರ್ಚಕ ಸ್ಥಾನದಿಂದ ಕೆಳಗಿಳಿಸಲು ಟ್ರಸ್ಟ್ ನಿರ್ಣಯ ಕೈಗೊಂಡಿದೆ.

    ಕೊಪ್ಪಳದ ಗಂಗಾವತಿ ಅಂಜನಾದ್ರಿ ಪರ್ವತಕ್ಕೆ ಇತ್ತೀಚೆಗೆ ದೇಶ ವಿದೇಶದಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಿದ್ದು, ದೇವಾಲಯಕ್ಕೆ ಆಗಮಿಸುವ ಮಹಿಳಾ ಭಕ್ತರ ಜೊತೆ ವಿದ್ಯಾದಾಸ ಬಾಬಾ ಅಸಭ್ಯವಾಗಿ ವರ್ತಿಸ್ತಿದ್ದಾರೆ. ಜೊತೆಗೆ ಅನೈತಿಕ ಚಟುವಟಿಕೆ ಗಳಿಗೆ ಅರ್ಚಕರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೇ ದೇವಾಲಯದ ಸುತ್ತಮುತ್ತಲಿನ ಭಕ್ತರೊಂದಿಗೂ ಅಸಭ್ಯ ವರ್ತಿಸುತ್ತಿದ್ದು, ವಿನಾಕಾರಣ ಜಗಳವಾಡುತ್ತಾರೆ ಎಂದು ಆರೋಪಿಸಲಾಗಿದೆ.

    ಭಕ್ತರಿಂದ ದೇವಾಲಯಕ್ಕೆ ಇಲ್ಲಿಯವರೆಗೆ ಲಕ್ಷಾಂತರ ರೂ. ಹಣ ದೇಣಿಗೆಯಾಗಿ ಬಂದಿದೆ. ಆದರೆ ವಿದ್ಯಾದಾಸ ಬಾಬಾ ಲೆಕ್ಕ ನೀಡುತ್ತಿಲ್ಲ. ಇದರಿಂದ ಅಂಜನಾದ್ರಿ ಪರ್ವತ ಚಾರಿಟೇಬಲ್ ರಿಲಿಜಿಯಿಸ್ ಟ್ರಸ್ಟ್ ಸದಸ್ಯರು ಸಭೆ ಸೇರಿ ಅರ್ಚಕರ ನಡೆಯನ್ನು ಖಂಡಿಸಿದ್ದಾರೆ. ಇದೀಗ ವಿದ್ಯಾದಾಸ ಬಾಬಾರನ್ನು ಅರ್ಚಕ ಹುದ್ದೆಯಿಂದ ಕೆಳಗಿಳಿಸಿ ಬ್ರಾಹ್ಮಣ ಪಂಡಿತರೊಬ್ಬರನ್ನು ಅರ್ಚಕರನ್ನಾಗಿ ನೇಮಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.

    ವಿದ್ಯಾದಾಸ ಬಾಬಾ 2009 ರಲ್ಲಿ ಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದರು. ಈಗಾಗಲೇ ದೇವಾಲಯದ ಪೂಜಾ ವಿಷಯವಾಗಿ ತುಳಸಿದಾಸಬಾಬಾ, ವಿದ್ಯಾದಾಸಬಾಬಾ ನಡುವೆ ಕಲಹ ಏರ್ಪಟಿದ್ದು, ಈ ಕುರಿತು ಕೋರ್ಟ್‍ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಪ್ರಸ್ತುತ ವಿದ್ಯಾದಾಸಬಾಬಾರನ್ನು ಪ್ರಧಾನ ಅರ್ಚಕ ಹುದ್ದೆಯಿಂದ ಕೆಳಗಿಳಿಸಿದ್ದರಿಂದ ಪೂಜಾ ವಿವಾದ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿದೆ.

     

    https://www.youtube.com/watch?v=6ddrM4Fje_M

     

  • ದೇವಸ್ಥಾನದ ಪೂಜಾರಿ ಮೇಲೆ ಮಚ್ಚಿನಿಂದ ಹಲ್ಲೆಗೈದು ಕೊಲೆ

    ದೇವಸ್ಥಾನದ ಪೂಜಾರಿ ಮೇಲೆ ಮಚ್ಚಿನಿಂದ ಹಲ್ಲೆಗೈದು ಕೊಲೆ

    ಯಾದಗಿರಿ: ದೇವಸ್ಥಾನದ ಪೂಜಾರಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದಲ್ಲಿ ನಡೆದಿದೆ.

    55 ವರ್ಷದ ಹನುಮಂತರಾಯ ನಾಯಕೋಡಿ ಕೊಲೆಯಾದವರು. ಇವರು ಯಮನೂರೇಶ್ವರ ದೇವಾಲಯದ ಪೂಜಾರಿಯಾಗಿದ್ದರು. ಅದೇ ಗ್ರಾಮದ ನಿಂಗಪ್ಪ ಎಂಬವನಿಂದ ಕೊಲೆ ನಡೆದಿದೆ. ಸದ್ಯ ಆರೋಪಿ ನಿಂಗಪ್ಪ ಪರಾರಿಯಾಗಿದ್ದಾನೆ.

    ಹನುಮಂತರಾಯ ಅವರು ಬಹಿರ್ದೆಸೆಗೆ ಹೋಗಿ ವಾಪಸ್ ಬರುತ್ತಿದ್ದಾಗ ಮಚ್ಚಿನಿಂದ ಹಲ್ಲೆ ನಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಹನುಮಂತರಾಯ ಅವರನ್ನ ಚಿಕಿತ್ಸೆಗೆ ಕಲಬುರಗಿಗೆ ರವಾನೆ ಮಾಡಲಾಗ್ತಿತ್ತು. ಆದ್ರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಜೇವರ್ಗಿ ಬಳಿ ಸಾವನ್ನಪ್ಪಿದ್ದಾರೆ.

    ಕೊಲೆ ಹಿನ್ನೆಲೆಯಲ್ಲಿ ಕೋಲಿ ಸಮಾಜದವರು ಬಸವೇಶ್ವರ ವೃತ್ತದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.

    ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

     

  • ಹಂಪಿ ಉತ್ಸವದ ವೇಳೆ ರಷ್ಯಾ ಯುವತಿಯೊಂದಿಗೆ ಪೂಜಾರಿಯ ಸೆಕ್ಸ್- ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ

    ಹಂಪಿ ಉತ್ಸವದ ವೇಳೆ ರಷ್ಯಾ ಯುವತಿಯೊಂದಿಗೆ ಪೂಜಾರಿಯ ಸೆಕ್ಸ್- ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ

    – ಉತ್ಸವದಲ್ಲಿ ಎಸಿ ಮೇಲೆ ಜೆಡಿಎಸ್ ಶಾಸಕನ ದರ್ಪ
    – ಕಾರ್ಯಕ್ರಮ ತಡವಾಗಿದ್ದನ್ನು ಪ್ರಶ್ನಿಸಿದ ಮಂಗಳಮುಖಿಗೆ ಲಾಠಿ ಏಟು

    ಬಳ್ಳಾರಿ: ಮೂರು ದಿನಗಳ ಹಂಪಿ ಉತ್ಸವದ ಉದ್ಘಾಟನೆ ದಿನವೇ ಮೂರು ವಿಭಿನ್ನ ಅವಾಂತರ ಸೃಷ್ಠಿಯಾದ ಘಟನೆ ನಡೆದಿದೆ. ಹಂಪಿ ಉತ್ಸವದ ವೇಳೆಯೇ ರಷ್ಯಾ ಯುವತಿ ಜೊತೆ ಪೂಜಾರಿ ಸೆಕ್ಸ್ ಮಾಡಿದ್ದು, ಇದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ  ಹಲ್ಲೆ ನಡೆಸಿದ್ದಾರೆ.

    ಹಂಪಿಯ ಆಂಜನೇಯ ದೇವಾಲಯದ ಬಳಿ ರಷ್ಯಾ ಯುವತಿಯೊಬ್ಬಳು ದೇವಾಲಯದ ಪೂಜಾರಿ ರಾಜಮೋಹನ್ ಜೊತೆ ಸೆಕ್ಸ್ ನಲ್ಲಿ ತೊಡಗಿದ್ದಳು. ಇದನ್ನು ಕಂಡ ಸ್ಥಳೀಯರು ಇಬ್ಬರನ್ನು ಹಿಡಿಯಲು ಯತ್ನಿಸಿದರು.

    ಈ ವೇಳೆ ರತಿಕ್ರೀಡೆಯಲ್ಲಿ ತೊಡಗಿದ್ದ ವಿದೇಶಿ ಮಹಿಳೆ ಹಾಗೂ ಪೂಜಾರಿ ಸ್ಥಳೀಯ ಯುವಕ ರಾಜಶೇಖರ್ ಎಂಬಾತನ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದರು. ಆದ್ರೆ ಸ್ಥಳೀಯರು ವಿದೇಶಿ ಮಹಿಳೆಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಹಂಪಿ ಉತ್ಸವದ ಉದ್ಘಾಟನೆ ದಿನವೇ ಮತ್ತೊಂದು ಅವಾಂತರ ನಡೆದಿದೆ. ಹಂಪಿ ಉತ್ಸವದಲ್ಲಿ ಎಸಿ ಮೇಲೆ ಜೆಡಿಎಸ್ ಶಾಸಕ ದರ್ಪ ತೋರಿದ್ದಾರೆ. ಪುತ್ರನನ್ನು ವೇದಿಕೆಯ ಮೇಲೆ ಬಿಡದಿದ್ದಕ್ಕೆ ಗರಂ ಆದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್, ಹೊಸಪೇಟೆ ಎಸಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೊನೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕ ಆನಂದ್ ಸಿಂಗ್ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ರು. ಶಾಸಕರು ಅಧಿಕಾರಿಯನ್ನು ಎಲ್ಲಾ ಜನರ ಮುಂದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನ್ನು ಕಂಡ ಸಚಿವರು, ಮಾಧ್ಯಮವರಿಗೆ ಸುದ್ದಿ ಮಾಡದಂತೆ ಮನವಿ ಮಾಡಿ ಕಾರ್ಯಕ್ರಮದ ಹೆಸರು ಕೆಡಿಸದಂತೆ ಹೇಳಿದ್ರು.

    ಟಿಪ್ಪು ಗಾಯನ ಕಾರ್ಯಕ್ರಮ ತಡವಾಗಿದ್ದನ್ನು ಪ್ರಶ್ನಿಸಿದ ಮಂಗಳಮುಖಿಯೊಬ್ಬರನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಕರೆದೊಯ್ದುರು. ಹೀಗಾಗಿ ಹಂಪಿ ಉತ್ಸವದ ಮೊದಲ ದಿನವೇ ಮೂರು ಅವಘಡಗಳು ಸಂಭವಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.

    ಈ ಎಲ್ಲಾ ಅವಾಂತರ ಅನಾಚಾರಗಳ ನಡುವೆ ಹಂಪಿ ಉತ್ಸವ ಸಾಂಸ್ಕೃತಿಕ ಕಾರಣಕ್ಕೆ ಕಳೆಗಟ್ಟಿತ್ತು. ಬಸವಣ್ಣ ವೇದಿಕೆಯಲ್ಲಿ ಸ್ಯಾಂಡಲ್‍ವುಡ್ ಗಾಯಕ ಟಿಪ್ಪು ಹಾಗೂ ಸಂಗಡಿಗರು, ಗಾಯತ್ರಿ ಪೀಠ ಮೈದಾನ ವೇದಿಕೆಯಲ್ಲಿ ಬಾಲಿವುಡ್ ಗಾಯಕ ಕುನಾಲ್ ಗಾಂಜಾವಾಲ ಹಾಡುಗಳನ್ನು ಹಾಡಿ ಪೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು.

    ಈ ನಡುವೆ ಸಿಎಂ ಸಿದ್ದರಾಮಯ್ಯ ಬಿಜೆಪಿ ಶಾಸಕ ಆನಂದ್ ಸಿಂಗ್ ಕಾಲೆಳೆದರು. ಹಂಪಿ ಉತ್ಸವಕ್ಕೂ ಮುನ್ನ ಕಮಲಾಪುರ ವನ್ಯಮೃಗಾಲಯ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಶಾಸಕ ಆನಂದ್‍ಸಿಂಗ್ ಹೆಸರು ಕೂಗಿ “ಏ ಆನಂದ್ ಸಿಂಗ್ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ” ಅಂತಾ ಟಾಂಗ್ ಕೊಟ್ರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕ ಆನಂದಸಿಂಗ್, ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಬಿಡಿ ಅಂತಾ ಸಿಎಂಗೆ ಕಿಚಾಯಿಸಿದ್ರು.

  • ಅರ್ಚಕ ಯುವಕರನನ್ನು ಮದ್ವೆಯಾದ್ರೆ ಸರ್ಕಾರದಿಂದ 3 ಲಕ್ಷ ರೂ. ಗಿಫ್ಟ್

    ಅರ್ಚಕ ಯುವಕರನನ್ನು ಮದ್ವೆಯಾದ್ರೆ ಸರ್ಕಾರದಿಂದ 3 ಲಕ್ಷ ರೂ. ಗಿಫ್ಟ್

    ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರವು ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರವ ಯುವಕರನ್ನು ಮದುವೆಯಾದರೆ ಮೂರು ಲಕ್ಷ ರೂ. ಹಣವನ್ನು ನೀಡುವ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

    ದೇವಾಲಯಗಳಲ್ಲಿ ಅರ್ಚರಕಾಗಿ ಸೇವೆ ಸಲ್ಲಿಸುತ್ತಿರುವ ಯುವಕರ ಆದಾಯ ಅತ್ಯಂತ ಕಡಿಮೆ ಎಂಬ ಕಾರಣದಿಂದ ಅವರನ್ನು ಮದುವೆಯಾಗಲು ಯಾರು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ `ಕಲ್ಯಾಣ ಮಸ್ತು’ ಯೋಜನೆಯನ್ನು ಮುಂದಿನ ತಿಂಗಳಿಂನಿಂದ ಆರಂಭಿಸುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸರ್ಕಾರ ಮೊದಲು ಒಂದು ಲಕ್ಷ ರೂ.ಯನ್ನು ಮದುವೆಯ ಖರ್ಚಿಗಾಗಿ ನೀಡುತ್ತದೆ. ಮದುವೆ ಬಳಿಕ  ಉಳಿದ ಹಣವನ್ನು ದಂಪತಿಯ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸ್ಥಿರ ಠೇವಣಿಯನ್ನು ಇಡುತ್ತದೆ. ಈ ಹಣವು ಮೂರು ವರ್ಷಗಳ ನಂತರ ದಂಪತಿಗಳಿಗೆ ಕೈಸೇರುತ್ತದೆ.

    ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಮದುವೆಯ ವಿಚಾರದಲ್ಲಿ ಸ್ವತಂತ್ರರಾಗಿದ್ದು ತಮ್ಮ ಸಂಗತಿಯ ಆಯ್ಕೆಯಲ್ಲಿ ಹೆಚ್ಚು ಜಾಗೃತರಾಗಿದ್ದಾರೆ. ಸಾಪ್ಟ್ವೇರ್ ಇಂಜಿನಿಯರ್ ಯುವಕರ ಉದ್ಯೋಗದಲ್ಲೂ ಸ್ಥಿರತೆ ಇಲ್ಲದ ಕಾರಣ ಅವರ ಮದುವೆಯಾಗಲು ಕಷ್ಟವಾಗುತ್ತಿದೆ. ಇನ್ನೂ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಯುವಕರ ಆದಾಯ ಕಡಿಮೆ ಇರುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ ಎಂದು ಸಿಎಂ ಸಲಹೆಗಾರರಾದ ಕೆ.ವಿ ರಮಣಚಾರಿ ಹೇಳಿದ್ದಾರೆ.

    ಹೆಣ್ಣು ಮಕ್ಕಳ ಪೋಷಕರು ಸಹ ಇಂತಹ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಲು ಇಷ್ಟಪಡುವುದಿಲ್ಲ, ಇದರಿಂದ ಹಲವು ಯುವಕರು ಮದುವೆಯಾಗದೆ ಉಳಿಯುತ್ತಿದ್ದಾರೆ. ಸರ್ಕಾರದ ಯೋಜನೆಯಿಂದ ಇಂತಹ ಯುವಕರ ಆರ್ಥಿಕ ಜೀವನ ಉತ್ತಮಗೊಳ್ಳಲಿದೆ. ಅಲ್ಲದೇ ಹೆಣ್ಣು ಮಕ್ಕಳ ಪೋಷಕರಿಗೆ ಉತ್ತಮ ಭಾವನೆ ಮೂಡಲಿದೆ ಎಂದು ತಿಳಿಸಿದರು.

    ತೆಲಂಗಾಣ ಸರ್ಕಾರವು ಈ ಯೋಜನೆಗೆ `ಕಲ್ಯಾಣ ಮಸ್ತು’ ಎಂಬ ಹೆಸರನ್ನು ಇಟ್ಟಿದ್ದು, ನವೆಂಬರ್ ತಿಂಗಳಿನಿಂದ ಅನುಷ್ಠಾನಗೊಳಿಸುತ್ತಿದೆ. ದಂಪತಿಯ ಮದುವೆಯಾದ ಮೂರು ವರ್ಷಗಳ ನಂತರ ಸ್ಥಿರ ಠೇವಣಿ ಹಣವು ಅವರ ಕೈಸೇರಲಿದ್ದು, ಅವರ ಮಕ್ಕಳ ಉತ್ತಮ ಜೀವನಕ್ಕೆ ಸಹಾಯಕವಾಗಲಿದೆ ಎಂಬುವುದೇ ಸರ್ಕಾರ ಉದ್ದೇಶವಾಗಿದೆ ಎಂದರು.

    ಅರ್ಚಕ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡವು ಪೋಷಕರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ವಧು-ವರರ ಸ್ವ ವಿವರಗಳನ್ನು ಅರ್ಜಿಯೊಂದಿಗೆ ನೀಡಬೇಕಿದೆ. ಸರ್ಕಾರವು ಈ ಯೋಜನೆಗೆ ವಾರ್ಷಿಕವಾಗಿ ಇಷ್ಟೇ ದಂಪತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಯಾವುದೇ ನಿಯಮವನ್ನು ವಿಧಿಸಿಲ್ಲ. ಅರ್ಹ ಎಲ್ಲಾ ದಂಪತಿಗಳೂ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

  • ಸತ್ತು 7 ದಿನಗಳಾದ್ರೂ ಗುರುವಿನ ಆತ್ಮ ಜೀವಂತ, ಅನುಯಾಯಿಗಳಿಂದ ಶವವಿಟ್ಟು ಪೂಜೆ!

    ಸತ್ತು 7 ದಿನಗಳಾದ್ರೂ ಗುರುವಿನ ಆತ್ಮ ಜೀವಂತ, ಅನುಯಾಯಿಗಳಿಂದ ಶವವಿಟ್ಟು ಪೂಜೆ!

    ಕಾರವಾರ: ಧರ್ಮಗುರುಗಳು ಸಾವನ್ನಪ್ಪಿ ಏಳು ದಿನಗಳು ಕಳೆದ್ರೂ, ಅವರ ಆತ್ಮವಿನ್ನೂ ಜಾಗೃತವಾಗಿದೆ ಎಂಬ ಕಾರಣಕ್ಕೆ ಶವ ಸಂಸ್ಕಾರ ಮಾಡದೇ ಕೊಠಡಿಯೊಂದರಲ್ಲಿಟ್ಟು ಪೂಜೆ ಮಾಡಲಾಗ್ತಿತ್ತು.

    ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಗೆಲುಕ್ಪಾ ಪಂಗಡದ ಪ್ರಮುಖ ನಾಯಕ ಗೆಶೆ ಲೋಬ್ಸಂಗ್ ತೆಂಜಿನ್ (90) ಅವರು ಇದೇ ತಿಂಗಳು 21ರಂದು ಸಾವನ್ನಪ್ಪಿದ್ದರು. ಆದರೆ ಅವರ ಆತ್ಮ ದೇಹದಲ್ಲಿ ಜಾಗೃತವಾಗಿದೆ ಎಂಬ ಕಾರಣಕ್ಕೆ ಇಂದು ಅಂತ್ಯಸಂಸ್ಕಾರ ಮಾಡಲಾಗಿದೆ.

    ಇದೇ ತಿಂಗಳ 21 ರಂದು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ವಯೋ ಸಹಜತೆಯಿಂದ ತೆಂಜಿನ್ ಮೃತಪಟ್ಟಿದ್ದರು. ನಂತರ ದೆಹಲಿಯಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಬಳಿ ಇರುವ ಟಿಬೇಟಿಯನ್ ನಿರಾಶ್ರಿತರ ಕಾಲೋನಿಗೆ ಮೃತದೇಹವನ್ನು ತರಲಾಗಿದ್ದು, ಧಾರ್ಮಿಕ ವಿಧಿ ಪೂರೈಸಲು ಅನುಯಾಯಿಗಳು ಮುಂದಾಗಿದ್ರು. ಆದ್ರೆ ಅವರ ದೇಹದಲ್ಲಿ ಆತ್ಮ ಜಾಗೃತವಾಗಿದೆ ಎಂದು ಹಿರಿಯ ಧರ್ಮ ಗುರುಗಳು ಹೇಳಿದ್ದರಿಂದ ಅಂತ್ಯಸಂಸ್ಕಾರವನ್ನು ಮುಂದೂಡಲಾಯ್ತು. ಇನ್ನು ಅವರ ದೇಹಕ್ಕೆ ಪೂಜೆ ಸಲ್ಲಿಸುವ ಮೂಲಕ ಆತ್ಮ ದೇಹದಿಂದ ಸಂಪೂರ್ಣ ಹೋದ ನಂತರವೇ ಶವ ಸಂಸ್ಕಾರದ ವಿಧಿಯನ್ನು ಪೂರೈಸಲು ತೀರ್ಮಾನಿಸಿ ಲಾಮಾ ಕ್ಯಾಂಪ್ ನ ನಂ.2 ಲೋಸಲಿಂಗ್ ಬೌದ್ಧ ಮಂದಿರದಲ್ಲಿ ಇಟ್ಟು ಪೂಜೆಗೈಯಲಾಗುತಿದ್ದು, ಇಂದು ದೇಹದಿಂದ ಆತ್ಮ ಹೊರಹೋಗಿರುವುದು ದೃಢಪಟ್ಟಿದ್ದರಿಂದಾಗಿ ಅಂತ್ಯಸಂಸ್ಕಾರದ ವಿಧಿ ಪೂರೈಸಲಾಯ್ತು ಎನ್ನಲಾಗಿದೆ.

    ಸಾಂದರ್ಭಿಕ ಚಿತ್ರ

    ಆತ್ಮವಿರುವುದು ತಿಳಿಯುವುದು ಹೇಗೆ?: ಟಿಬೇಟಿಯನ್‍ರಲ್ಲಿ ಯಾವುದೇ ಧರ್ಮ ಗುರುಗಳು ನಿಧನ ಹೊಂದಿದ್ರೆ ಅವರ ಮೈ ಬೆಚ್ಚಗಿದ್ದರೇ ಆಗ ಆತ್ಮ ಜಾಗೃತವಾಗಿರುತ್ತೆ ಅನ್ನೂ ನಂಬಿಕೆ ಇದೆ. ಹೀಗಾಗಿ ಯಾವುದೇ ಧರ್ಮಗುರುಗಳು ನಿಧನ ಹೊಂದಿದಾಗ ಅದನ್ನು ದೃಢಪಡಿಸಿಕೊಳ್ಳಲಾಗುತ್ತೆ. ಹೀಗೆ ದೃಢಪಡಿಸಿಕೊಳ್ಳುವ ಸಂದರ್ಭದಲ್ಲಿ ಗೆಶೆ ಲೋಬ್ಸಂಗ್ ತೆಂಜಿನ್ ರವರ ದೇಹ ಬಿಸಿಯಾಗಿತ್ತು. ಆದ್ದರಿಂದ ಕಾಲೋನಿಯ ಒಂದು ಕೋಣೆಯಲ್ಲಿ ಅವರ ಶವವನ್ನ ಮಲಗಿದ ಸ್ಥಿತಿಯಲ್ಲಿಟ್ಟು ದಿನಂಪ್ರತಿ ಪೂಜೆ ಸಲ್ಲಿಸಲಾಗುತಿತ್ತು. ಇಂದು ಅವರ ದೇಹದಲ್ಲಿ ತಣ್ಣಗಿನ ಅನುಭವವಾಗಿದ್ದು ದೇಹದಿಂದ ಆತ್ಮ ಹೊರಹೋಗಿರುವುದನ್ನ ಟಿಬೇಟಿಯನ್ ಕಾಲೋನಿಯ ದಲಾಯಿ ಲಾಮಾ ಕಚೇರಿಯ ಸ್ಥಳೀಯ ಪ್ರತಿನಿಧಿ ಕರ್ಮಾರವರು ದೃಢಪಡಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಟಿಬೇಟಿಯನ್‍ನ ಗೆಲುಕ್ಪಾ ಪಂಗಡದ ಗೆಶೆ ಲೋಬ್ಸಂಗ್‍ರವರು ಈ ಹಿಂದೆ ಇಂದಿರಾ ಗಾಂಧಿ ಸರ್ಕಾರದ ಕಾಲದಲ್ಲಿ ಟಿಬೇಟ್‍ನಿಂದ ಆಶ್ರಯ ಬಯಸಿ ಭಾರತಕ್ಕೆ ಬಂದು ಮುಂಡಗೋಡಿನ ನಿರಾಶ್ರಿತರ ಕಾಲೋನಿಯಲ್ಲಿ ವಾಸವಾಗಿದ್ದರು. ಅಪ್ಪಟ ದಲಾಯಿ ಲಾಮಾ ರವರ ಅನುಯಾಯಿಯಾಗಿರುವ ಇವರು ದೇಶ ವಿದೇಶಗಳನ್ನು ಸುತ್ತಿ ಬೌದ್ಧ ಧರ್ಮ ಪ್ರಚಾರದ ಜೊತೆಗೆ ಟಿಬೇಟಿಯನ್ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಹೀಗಾಗಿ ಟಿಬೇಟಿಯನ್‍ಗಳ ಅಚ್ಚುಮೆಚ್ಚಿನ ನಾಯಕರಾಗಿ, ಧರ್ಮಗುರುಗಳಾಗಿ ಅನೇಕ ಅನುಯಾಯಿಗಳನ್ನ ಸಂಪಾದಿಸಿದ್ದರು.

    ಸಾಂದರ್ಭಿಕ ಚಿತ್ರ

    ಹಿಂದೆಯೂ ನಡೆದಿತ್ತು: ಇನ್ನು ಈ ರೀತಿಯ ಘಟನೆ ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಲಾಮಾ ಕ್ಯಾಂಪ್ ನಂ.2 ರ ಲೋಸಲಿಂಗ ಬೌದ್ಧ ಮಠದ ಪಂಡಿತರಾದ ತಿಸುರ ರಿನಪೋಜೆ ಲೋಬಸಾಂಗ್ ನ್ಯೀಮಾ ರವರು ಮೃತಪಟ್ಟು 18 ದಿನ ಕಳೆದಿದ್ದರೂ ಸಹ ಅವರ ಮೃತದೇಹವನ್ನು ಇಡಲಾಗಿತ್ತು. ಆದರೆ ದೇಹದಿಂದ ಮಾತ್ರ ಯಾವುದೇ ವಾಸನೆ ಬಂದಿರಲಿಲ್ಲ. ನಂತರ ಹಿಮಾಚಲ ಪ್ರದೇಶದ ವೈದ್ಯರ ತಂಡ ಆಗಮಿಸಿ ಪರೀಕ್ಷೆ ನೆಡೆಸಿ 21 ದಿನದ ನಂತರ ಅಂತ್ಯ ಸಂಸ್ಕಾರ ಮಾಡಲಾಯ್ತು. ಹೀಗೆ ಬಹಳಷ್ಟು ವರ್ಷಗಳಿಂದ ಈ ರೀತಿಯ ಧರ್ಮ ಗುರುಗಳು ಸತ್ತಾಗ ಮೂರು ತಿಂಗಳವರೆಗೂ ಶವವನ್ನ ಇಟ್ಟು ಪೂಜಿಸಿದ ಘಟನೆಗಳಿವೆ ಎಂದು ಟಿಬೇಟೆಯನ್ನರು ಹೇಳುತ್ತಾರೆ.

    ಇನ್ನು ಈಗ ಮೃತಪಟ್ಟ ಧರ್ಮಗುರುಗಳ ಶವ ಕೆಡದೇ ಬಿಸಿಯಾಗಿದ್ದು ಮುಖದ ಮೇಲೆ ಬೆವರು ಕಾಣಿಸಿತಿತ್ತು. ಹೀಗಾಗಿ ಆತ್ಮ ದೇಹದಿಂದ ಹೊರಹೋಗಿಲ್ಲ ಎಂಬುದು ದೃಢಪಟ್ಟಿದ್ದು ಈ ಕಾರಣದಿಂದಾಗಿ ನಾವು ಅವರ ದೇಹವನ್ನು ಇರಿಸಿ ಏಳು ದಿನಗಳಿಂದ ಪೂಜೆಗೈದು ಇಂದು ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ ಎಂದು ಪಬ್ಲಿಕ್ ಟಿ.ವಿಗೆ ಟಿಬೇಟಿಯನ್ ಕಾಲೋನಿಯ ಬೌದ್ಧ ಸನ್ಯಾಸಿ ತುಪ್ತಿನ್ ಸಿರಿಂಗ್ ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ