Tag: priest

  • ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಬಂಧನ

    ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಬಂಧನ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ಹುಲಿ ಉಗುರು (Tiger Claw) ಕಾರ್ಯಚರಣೆ ಮುಂದುವರೆದಿದ್ದು, ಹುಲಿ ಉಗುರಿನ ಡಾಲರ್ (Dollar) ಹಾಕಿಕೊಂಡಿದ್ದ ಇಬ್ಬರು ಅರ್ಚಕರನ್ನು ಬಂಧಿಸಲಾಗಿದೆ.

    ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಇಬ್ಬರು ಅರ್ಚಕರನ್ನು (Priest) ಬಾಳೆಹೊನ್ನೂರು ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಅರ್ಚಕರನ್ನು ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು ಮೂರು ಹುಲಿ ಉಗುರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ – 12 ಸಾವು, ಇಬ್ಬರು ಗಂಭೀರ

    ಅರಣ್ಯ ಇಲಾಖೆಯ ಸಿಬ್ಬಂದಿ ಇಬ್ಬರು ಅರ್ಚಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ಅರ್ಚಕರ ವಿರುದ್ಧ ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರು ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದನ್ನೂ ಓದಿ: ಸ್ನೇಹಿತರ ಮನೆಗೆ ಹಬ್ಬಕ್ಕೆ ಬಂದಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೇಯಸಿಯನ್ನು ಕೊಲೆಗೈದು ಮ್ಯಾನ್‍ಹೋಲ್‍ಗೆ ಬಿಸಾಕಿದ ಅರ್ಚಕ!

    ಪ್ರೇಯಸಿಯನ್ನು ಕೊಲೆಗೈದು ಮ್ಯಾನ್‍ಹೋಲ್‍ಗೆ ಬಿಸಾಕಿದ ಅರ್ಚಕ!

    ಹೈದರಾಬಾದ್: ವಿವಾಹೇತರ ಸಂಬಂಧ ಹೊಂದಿದ್ದ ಅರ್ಚಕ (Priest) ರೊಬ್ಬರು ತನ್ನ ಪ್ರೇಯಸಿಯನ್ನು ಕೊಂದು ಮ್ಯಾನ್‌ಹೋಲ್ (Manhole) ಗೆ ಎಸೆದಿರುವ ಘಟನೆ ಹೈದರಾಬಾದ್‌ ಬಳಿಯ ಸರೂರ್‌ನಗರದಲ್ಲಿ ನಡೆದಿದೆ‌. ಆರೋಪಿಯನ್ನುಆರೋಪಿಯನ್ನು ಅರ್ಚಕ ಅಯ್ಯಗಾರಿ ಸಾಯಿಕೃಷ್ಣ ಎಂದು ಗುರುತಿಸಲಾಗಿದ್ದು ಪೊಲೀಸರು ಬಂಧಿಸಿದ್ದಾರೆ.

    ಮೃತಳನ್ನು ಕುರುಗಂಟಿ ಅಪ್ಸರಾ (Kuruganti Apsara) ಎಂದು ಗುರುತಿಸಲಾಗಿದೆ. ಅಪ್ಸರಾ ಜೊತೆಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದ ಅರ್ಚಕ ಅಯ್ಯಗಾರಿ ಸಾಯಿಕೃಷ್ಣ (Ayyagari Saikrishna) ವಿವಾಹೇತರ ಸಂಬಂಧ ಹೊಂದಿದ್ದರು. ಯುವತಿ ಮದುವೆಯಾಗುವಂತೆ ಒತ್ತಡ ಹಾಕಿದ ಹಿನ್ನೆಲೆ  ತಾನು ಆಕೆಯನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

    ಹತ್ಯೆ ಮಾಡಿ ಪೊಲೀಸರಿಗೆ ದೂರು: ಅಪ್ಸರಾಳನ್ನ ಹತ್ಯೆ ಮಾಡಿದ್ದ ಅರ್ಚಕ ಅಯ್ಯಗಾರಿ ಸಾಯಿಕೃಷ್ಣ ಪೊಲೀಸರಿಗೆ ದೂರು ನೀಡಿದ್ದ, ತನ್ನ ಸೋದರ ಸೊಸೆ ಅಪ್ಸರಾ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಸಾಯಿಕೃಷ್ಣ ಮೇಲೆಯೇ ಅನುಮಾನ ಬಂದಿದೆ.

    ಸಾಯಿಕೃಷ್ಣ ಕರೆಸಿ ಪೊಲೀಸರು ವಿಚಾರಣೆ ನಡೆಸಿದಾಗ ಹತ್ಯೆ ಮಾಡಿರುವುದಾಗಿ ತಪ್ಲೊಪ್ಪಿಕೊಂಡಿದ್ದಾನೆ. ಆರೋಪಿ ಸಾಯಿಕೃಷ್ಣ ಶಂಶಾಬಾದ್‌ನಲ್ಲಿ ಅಪ್ಸರಾಳನ್ನು ಕೊಂದು, ಸರೂರ್‌ ನಗರಕ್ಕೆ ಸಾಗಿಸುವ ಮೊದಲು ಶವವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿದ್ದನು. ಬಳಿಕ ತಾನು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ದೇವಸ್ಥಾನದ ಸಮೀಪವಿರುವ ಎಂಆರ್‌ಒ ಕಚೇರಿಯ ಹಿಂಭಾಗದ ಮ್ಯಾನ್‌ಹೋಲ್‌ಗೆ ಶವವನ್ನು ಎಸೆದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಸಾಯಿಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಮದ್ವೆ ಖುಷಿಯಲ್ಲಿ ಊರಿಗೆ ಬರ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ದುರ್ಮರಣ

      

  • ನಮಗೆ ರಿಟೈರ್‌ಮೆಂಟ್‌ ಬೇಡ- ರಾಮಲಿಂಗಾ ರೆಡ್ಡಿಗೆ ಅರ್ಚಕರು ಮನವಿ

    ನಮಗೆ ರಿಟೈರ್‌ಮೆಂಟ್‌ ಬೇಡ- ರಾಮಲಿಂಗಾ ರೆಡ್ಡಿಗೆ ಅರ್ಚಕರು ಮನವಿ

    ಬೆಂಗಳೂರು: ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದಿಂದ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಗೆ ಹಲವು ಬೇಡಿಕೆಗಳ ಈಡೇರಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದೆ.

    ಬಳಿಕ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಮಾತನಾಡಿ, ಸರ್ಕಾರದಿಂದ ಧಾರ್ಮಿಕ ಪರಿಷತ್ ಮಾಡಿದ್ದಾರೆ ಅದು ರದ್ದಾಗಬೇಕು. ಧಾರ್ಮಿಕ ಪರಿಷತ್ ನಿಂದ ಸಚಿವರು, ಎಕ್ಸಿಕ್ಯೂಟಿವ್ ಆಫೀಸರ್, ಕಮೀಷನರ್‍ಗೆ ಪವರ್ ಇರಲಿಲ್ಲ. ಆದ್ದರಿಂದ ಈ ಧಾರ್ಮಿಕ ಪರಿಷತ್ ಅನ್ನು ತೆಗೆಯಬೇಕು ಎಂದಿದ್ದಾರೆ.

    ಅರ್ಚಕರಿಗೆ 60 ವರ್ಷಕ್ಕೆ ರಿಟೈರ್‌ ಮೆಂಟ್‌ (Priest Retirement) ತಂದಿದ್ದಾರೆ. ನಮಗೆ ರಿಟೈರ್‌ ಮೆಂಟ್‌ ಬೇಡ. ನಾವು ಸರ್ಕಾರಿ ನೌಕರರಲ್ಲ. ಗ್ರಾಮೀಣ ಭಾಗದ ದೇವಾಲಯಗಳ ಅರ್ಚಕರಿಗೆ ಎಲ್ಲಾ ಸಾಮಗ್ರಿಗಳನ್ನು ತಂದು ಪೂಜೆ ಮಾಡಲು ತಿಂಗಳಿಗೆ 5 ಸಾವಿರ ಕೊಡುತ್ತಿದ್ದಾರೆ. ಅದನ್ನು 10 ಸಾವಿರಕ್ಕೆ ಸಂಬಳ ಏರಿಸಬೇಕು ಎಂದು ಸಚಿವರ ಮುಂದೆ ಮನವಿ ಮಾಡಿದ್ದಾರೆ.

    ಈ ವೇಳೆ ಸಚಿವರು ಕೂಡಲೇ ತಮ್ಮ ಬೇಡಿಕೆಗಳನ್ನು ಸಭೆ ಕರೆದು ಪೂರೈಸತ್ತೇವೆ ಅಂತಾ ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕಷ್ಟ ಕಾಲದಲ್ಲಿ ಸವದಿ, ಶೆಟ್ಟರ್ ನಮ್ಮ ಪಕ್ಷಕ್ಕೆ ಬಂದು ಶಕ್ತಿ ತುಂಬಿದ್ದಾರೆ: ಡಿಕೆ ಶಿವಕುಮಾರ್

  • ಅಯೋಧ್ಯೆ ಅರ್ಚಕ ನೇಣುಬಿಗಿದು ಆತ್ಮಹತ್ಯೆ – ಸಾಯುವ ಮೊದಲು ಫೇಸ್‌ಬುಕ್ ಲೈವ್

    ಅಯೋಧ್ಯೆ ಅರ್ಚಕ ನೇಣುಬಿಗಿದು ಆತ್ಮಹತ್ಯೆ – ಸಾಯುವ ಮೊದಲು ಫೇಸ್‌ಬುಕ್ ಲೈವ್

    ಲಕ್ನೋ: ದೇವಸ್ಥಾನದ ಕೊಠಡಿಯೊಂದರಲ್ಲಿ ಅರ್ಚಕ (Priest) ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಅಯೋಧ್ಯೆಯಲ್ಲಿ (Ayodhya) ಸೋಮವಾರ ನಡೆದಿದೆ.

    28 ರಿಂದ 30 ವರ್ಷದ ಒಳಗಿನ ರಾಮ್‌ಶಂಕರ್ ದಾಸ್ ಆತ್ಮಹತ್ಯೆ ಮಾಡಿಕೊಂಡಿರುವ ಅರ್ಚಕ. ಇವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಫೇಸ್‌ಬುಕ್ ಲೈವ್ (Facebook Live) ಬಂದಿದ್ದು, ಇಬ್ಬರು ಪೊಲೀಸರು ತನಗೆ 2 ಲಕ್ಷ ರೂ. ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಲೈವ್ ಮಾಡಿದ್ದಾರೆ. ಅರ್ಚಕ ಮಾದಕವ್ಯಸನಿ ಆಗಿದ್ದು, ಆರೋಪಗಳು ಆಧಾರರಹಿತ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಕೋರ್ಟ್‌ನಲ್ಲಿ ಗುಂಡು ಹಾರಿಸಿದ್ದ ಆರೋಪಿ ತಿಹಾರ್ ಜೈಲಿನಲ್ಲಿ ಹತ್ಯೆ

    ಕಿರುಕುಳದಿಂದ ಮನನೊಂದ ನರಸಿಂಗ್ ದೇವಸ್ಥಾನದ ಅರ್ಚಕ ತನ್ನ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನವರಿಯಲ್ಲಿ ಮುಖ್ಯ ಅರ್ಚಕ ರಾಮ್ ಸರಣ್ ದಾಸ್ ನಾಪತ್ತೆಯಾದ ಬಳಿಕ ಇವರೊಬ್ಬರೇ ದೇವಸ್ಥಾನದಲ್ಲಿ ಉಳಿದುಕೊಂಡಿದ್ದರು. ಎಷ್ಟು ಬಡಿದರೂ ಬಾಗಿಲು ತೆರೆಯುತ್ತಿಲ್ಲ ಎಂಬ ಮಾಹಿತಿ ತಿಳಿದ ಕೂಡಲೇ ಪೊಲೀಸರು ಬಾಗಿಲು ಒಡೆದು ಒಳಗೆ ನುಗ್ಗಿದ್ದಾರೆ. ಈ ವೇಳೆ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಯೋಧ್ಯೆಯ ಎಸ್‌ಹೆಚ್‌ಒ (SHO) ಮನೋಜ್ ಕುಮಾರ್ ಶರ್ಮ ತಿಳಿಸಿದ್ದಾರೆ. ಇದನ್ನೂ ಓದಿ: ಮಳೆ, ಹಿಮಪಾತ – ತಂಗಿರುವ ಸ್ಥಳದಲ್ಲಿಯೇ ಇರಿ: ಕೇದಾರನಾಥ ಯಾತ್ರಾರ್ಥಿಗಳಿಗೆ ಎಚ್ಚರಿಕೆ

    ರಾಮ್‌ಶಂಕರ್ ದೇವಸ್ಥಾನದ ಒಳಗೆ ವಾಸಿಸುತ್ತಿದ್ದು, ದೇವಸ್ಥಾನದ ಭದ್ರತೆಗಾಗಿ ಕೆಲವು ಪೊಲೀಸರನ್ನು ಸಹಾ ನಿಯೋಜಿಸಲಾಗಿತ್ತು. ಆದರೆ ಅರ್ಚಕರಿಗೆ ದೇವಸ್ಥಾನಕ್ಕೆ ಸಂಬಂಧಪಟ್ಟ ಬೆಳ್ಳಿ ಹಾಗೂ ತಾಮ್ರದ ಸಾಮಾನುಗಳನ್ನು ಮಾರಾಟ ಮಾಡುವಲ್ಲಿ ಪೊಲೀಸರೊಂದಿಗೆ ಸಮಸ್ಯೆಗಳನ್ನು ಹೊಂದಿದ್ದರು. ಪೊಲೀಸರನ್ನು ದೇವಸ್ಥಾನದ ಒಳಗೆ ನಿಯೋಜಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದರಿಂದ ಅವರನ್ನು ದೇವಸ್ಥಾನದ ಹೊರಗೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ

    ತೀವ್ರ ಮಾದಕವ್ಯಸನಿಯಾಗಿದ್ದ ಅರ್ಚಕರು ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದ ಬಳಿಕ ಮಾದಕವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಕೆಲವು ಗಂಟೆಗಳ ಬಳಿಕ ಇವರ ಫೇಸ್‌ಬುಕ್ ಲೈವ್ ಬಗ್ಗೆ ಮಾಹಿತಿ ಬಂದಿದೆ. ಇದನ್ನು ಅವರು ಆತ್ಮಹತ್ಯೆ ಮಾಡಿಕೊಳ್ಳುವ 10 ಗಂಟೆಗಳ ಮೊದಲು ಚಿತ್ರೀಕರಿಸಿದ್ದಾರೆ. ರಾಯ್‌ಗಂಜ್ ಪೊಲೀಸ್ ಹೊರಠಾಣೆ ಪ್ರಭಾರ ಉಪನೀರಿಕ್ಷಕರಾಗಿದ್ದ ಸ್ವತಂತ್ರ ಕುಮಾರ್ ಮೌರ್ಯ ಹಾಗೂ ಕಾನ್ಸ್ಟೇಬಲ್‌ ಸುಭಾಷ್ ಸಿಂಗ್ ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಅರ್ಚಕ ವಿಡಿಯೋದಲ್ಲಿ ಆರೋಪಿಸಿದ್ದಾರೆ ಎಂದು ಶರ್ಮ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನ ನೇಣಿಗಾದ್ರೂ ಹಾಕಿ, ಆದ್ರೆ ಕುಸ್ತಿ ನಿಲ್ಲಿಸಿದ್ರೆ ನಿಮ್ಮ ಭವಿಷ್ಯಕ್ಕೆ ಹಾನಿ – ಬ್ರಿಜ್‌ಭೂಷಣ್ ಭಾವುಕ ಹೇಳಿಕೆ

    ಅರ್ಚಕರ ಶವಸಂಶ್ಕಾರ ಮಂಗಳವಾರ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲಿಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ 830 ಕೋಟಿ ಖರ್ಚಾಗಿದೆ ಎಂದ ಆಪ್ ಮುಖ್ಯಸ್ಥನ ವಿರುದ್ಧ ಕೇಸ್

  • ಸಿಸಿ ಕ್ಯಾಮೆರಾಗೆ ಬಟ್ಟೆ ಮುಚ್ಚಿ ಹುಂಡಿ ಕಳ್ಳತನ- ಅರ್ಚಕರಿಂದಲೇ ಕೃತ್ಯ ಆರೋಪ

    ಸಿಸಿ ಕ್ಯಾಮೆರಾಗೆ ಬಟ್ಟೆ ಮುಚ್ಚಿ ಹುಂಡಿ ಕಳ್ಳತನ- ಅರ್ಚಕರಿಂದಲೇ ಕೃತ್ಯ ಆರೋಪ

    ರಾಮನಗರ: ದೇವಾಲಯದ (Temple) ಸಿಸಿ ಕ್ಯಾಮೆರಾಗೆ ಬಟ್ಟೆ ಮುಚ್ಚಿ ಹುಂಡಿಯಲ್ಲಿದ್ದ ಹಣ ಕಳ್ಳತನ (Theft) ಮಾಡಿರುವ ಘಟನೆ ಚನ್ನಪಟ್ಟಣ (Channapatna) ತಾಲೂಕಿನ ನೀಲಸಂದ್ರ ಗ್ರಾಮದ ಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.

    ಮೊನ್ನೆಯಷ್ಟೇ ಶ್ರೀಭೈರವೇಶ್ವರ ಸ್ವಾಮಿ ದೇವರ ಜಾತ್ರೆ ಅದ್ದೂರಿಯಾಗಿ ನೆರವೇರಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ಹಿನ್ನೆಲೆ ದೇವಾಲಯದ ಹುಂಡಿಯಲ್ಲಿ ಹೆಚ್ಚು ಹಣ ಸಂಗ್ರಹವಾಗಿತ್ತು ಎನ್ನಲಾಗಿದೆ. ಇದನ್ನು ಗಮನಿಸಿದ್ದ ದೇವಾಲಯದ ಅರ್ಚಕರು (Priest) ಮಂಗಳವಾರ ರಾತ್ರಿ ಸಿಸಿಟಿವಿಗೆ (CCTV) ಬಟ್ಟೆ ಮುಚ್ಚಿ ಹುಂಡಿಯಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಹಣ ದೋಚಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ

    ದೇವಾಲಯದ ಒಳಗಡೆ ಅರ್ಚಕರು ಓಡಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಅರ್ಚಕರ ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮುಸ್ಲಿಮರನ್ನ ಟಾರ್ಗೆಟ್‌ ಮಾಡಿ ಹಿಂಸಾಚಾರ – ಇಸ್ಲಾಮಿಕ್‌ ರಾಷ್ಟ್ರಗಳ ಆರೋಪಕ್ಕೆ ಭಾರತ ಕಿಡಿ

  • ಪೂಜೆ ವಿಷಯಕ್ಕೆ ಗಲಾಟೆ – ದೇವಾಲಯದಲ್ಲೇ ಗ್ರಾಮಸ್ಥರಿಂದ ಅರ್ಚಕನಿಗೆ ಹಿಗ್ಗಾಮುಗ್ಗಾ ಥಳಿತ

    ಪೂಜೆ ವಿಷಯಕ್ಕೆ ಗಲಾಟೆ – ದೇವಾಲಯದಲ್ಲೇ ಗ್ರಾಮಸ್ಥರಿಂದ ಅರ್ಚಕನಿಗೆ ಹಿಗ್ಗಾಮುಗ್ಗಾ ಥಳಿತ

    ಹುಬ್ಬಳ್ಳಿ: ಪೂಜೆ ವಿಷಯಕ್ಕೆ ಗಲಾಟೆ ನಡೆದು ದೇವಸ್ಥಾನದಲ್ಲಿಯೇ (Temple) ಗ್ರಾಮಸ್ಥರು (Villagers) ಅರ್ಚಕನನ್ನು (Priest) ಥಳಿಸಿದ ಘಟನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.

    ಹುಬ್ಬಳ್ಳಿ (Hubballi) ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿರುವ ಬಸವಣ್ಣ ದೇವಸ್ಥಾನದ ಅರ್ಚಕ ಪ್ರಕಾಶ್ ಕುಂದಗೋಳಮಠ ಮತ್ತು ಗ್ರಾಮಸ್ಥರ ನಡುವೆ ಪೂಜೆಯ ವಿಚಾರವಾಗಿ ಗಲಾಟೆ ನಡೆದಿದೆ. ಗ್ರಾಮದ ಪ್ರಕಾಶ್ ಕುಂದಗೋಳಮಠ ಬಸವಣ್ಣ ದೇವಸ್ಥಾನದ ಅರ್ಚಕರಾಗಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಅರ್ಚಕನ ನಡವಳಿಕೆಯಲ್ಲಿ ಬದಲಾವಣೆಯಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟು ಹೊಸ ಅರ್ಚಕರ ನೇಮಕಕ್ಕೆ ಚಿಂತನೆ ನಡೆಸಿದ್ದರು.

    ಗ್ರಾಮಸ್ಥರ ಈ ನಿರ್ಧಾರಕ್ಕೆ ಪ್ರಕಾಶ್ ಒಪ್ಪಿಗೆ ನೀಡಿರಲಿಲ್ಲ. ಈ ವಿಚಾರಕ್ಕೆ ದೇವಸ್ಥಾನ ಆವರಣದಲ್ಲಿ ಗಲಾಟೆ ಆರಂಭವಾಗಿ, ಜಗಳ ತಾರಕಕ್ಕೇರಿ ಅರ್ಚಕ ಪ್ರಕಾಶ್‌ಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತಮ್ಮ ತಂದೆಯನ್ನು ಬಿಡಿಸಲು ಮುಂದಾದ ಅರ್ಚಕನ ಮಗನಿಗೂ ಗ್ರಾಮಸ್ಥರು ಥಳಿಸಿದ್ದಾರೆ. ಇದನ್ನೂ ಓದಿ: 10 ವರ್ಷದ ಫೀಸ್ ಕಟ್ಟೋಕೆ ಶಾಲೆಗಳಿಂದ ಆಫರ್ – ನಯಾ ಪ್ಲ್ಯಾನ್‍ಗೆ ಪೋಷಕರು ಕಂಗಾಲು

    ಗ್ರಾಮಸ್ಥರು ಅರ್ಚಕನ ಮೇಲೆ ನಡೆಸಿರುವ ಹಲ್ಲೆಯನ್ನು ನೆರೆದಿದ್ದವರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾಜಿ ಸಂಸದನ ಮೇಲೆ ಅರ್ಚಕನ ವೇಷ ಧರಿಸಿದ್ದ ವ್ಯಕ್ತಿಯಿಂದ ಹಲ್ಲೆ

    ಮಾಜಿ ಸಂಸದನ ಮೇಲೆ ಅರ್ಚಕನ ವೇಷ ಧರಿಸಿದ್ದ ವ್ಯಕ್ತಿಯಿಂದ ಹಲ್ಲೆ

    ಅಮರಾವತಿ: ಅರ್ಚಕನ (Priest) ವೇಷ ಧರಿಸಿದ್ದ ವ್ಯಕ್ತಿಯೊಬ್ಬ ತೆಲಗು ದೇಶಂ ಪಕ್ಷದ ಮುಖಂಡ (TDP leader) ಹಾಗೂ ಮಾಜಿ ಸಂಸದ ಶೇಷಗಿರಿ ರಾವ್ ಪೋಲ್ನಾಟಿ (Seshagiri Rao Polnati) ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಆಂಧ್ರ ಪ್ರದೇಶದಲ್ಲಿ (Andhra Pradesh) ನಡೆದಿದೆ.

    ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ತುನಿ ನಗರದ ಶೇಷಗಿರಿ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ದಾಳಿಕೋರನ ಗುರುತು ಪತ್ತೆ ಹಚ್ಚಿಲ್ಲ. ಹಾಗೂ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮತ ಕನ್ನ ಆರೋಪ- ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾದ ಬಿಬಿಎಂಪಿ

    crime

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಅರ್ಚಕನ ವೇಷ ಧರಿಸಿದ್ದ ವ್ಯಕ್ತಿಯೊಬ್ಬರು ಟಿಡಿಪಿ ಮುಖಂಡ ಮತ್ತು ಮಾಜಿ ಸಂಸದ ಶೇಷಗಿರಿರಾವ್ ಪೋಲ್ನಾಟಿ ಅವರ ಮನೆಗೆ ನುಗ್ಗಿ ಹರಿತವಾದ ಕತ್ತಿಯಿಂದ ದಾಳಿ ನಡೆಸಿ ಗಾಯಗೊಳಿಸಿದ್ದಾರೆ. ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ತಲೆಮರೆಸಿಕೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಅವರಿಂದ್ಲೆ ಬೆನ್ನು ತಟ್ಟಿಸಿಕೊಂಡಿರುವ ರಾಮದಾಸ್‌ಗೆ ಕಿರುಕುಳ ಕೊಡುವಷ್ಟು ಶಕ್ತಿ ನನಗಿಲ್ಲ – ಪ್ರತಾಪ್‌ ಸಿಂಹ

    Live Tv
    [brid partner=56869869 player=32851 video=960834 autoplay=true]

  • ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡಿದ ಅರ್ಚಕ – ಸಾರ್ವಜನಿಕ ವಲಯದಲ್ಲಿ ಆಕ್ರೋಶ

    ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡಿದ ಅರ್ಚಕ – ಸಾರ್ವಜನಿಕ ವಲಯದಲ್ಲಿ ಆಕ್ರೋಶ

    ದಾವಣಗೆರೆ: ದೇವರನ್ನು ಒಲಿಸಿಕೊಳ್ಳಲು ನಾನಾ ರೀತಿಯ ಪೂಜೆ ಮಾಡುವುದನ್ನು ನಾವು ನೋಡೇ ಇರುತ್ತೇವೆ. ಆದರೆ ಇಲ್ಲೊಬ್ಬ ಬೇಡರ ಕಣ್ಣಪ್ಪನ ರೀತಿಯಲ್ಲಿ ದೇವರ ಮೂರ್ತಿ ಮೇಲೆ ಕಾಲಿಟ್ಟು ತನ್ನ ಭಕ್ತಿಯನ್ನು ಸಮರ್ಪಿಸಿದ ಹಾಗೇ ಪೂಜಾರಿಯೊಬ್ಬ (Priest) ಆಂಜನೇಯನ (Anjaneya) ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ದಾವಣಗೆರೆ (Davanagere) ಜಿಲ್ಲೆಯಲ್ಲಿ ಇಂತಹ ವಿಚಿತ್ರ ಅರ್ಚಕನೋರ್ವ ದೇವರ ತಲೆ ಮೇಲೆ ಕಾಲಿಟ್ಟು ಪೂಜೆ ಮಾಡುವ ವಿಚಿತ್ರ ಆಚರಣೆ ಮಾಡಲಾಗಿದೆ. ಇನ್ನೂ ಈ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಆರ್ಚಕನ ವರ್ತನೆಯಿಂದ ಶ್ರೀರಾಮ ದೂತನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಮೋದಿ ಚಾಲನೆ – ರಾಮ ಜನ್ಮಭೂಮಿಯಲ್ಲಿ ಬೆಳಗಿದವು 18 ಲಕ್ಷ ದೀಪ

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೇ ಗ್ರಾಮದ ಮಹೇಶ್ವರಯ್ಯ ಎಂಬ ಅರ್ಚಕ ವಿಚಿತ್ರ ಪೂಜೆ ನಡೆಸಿದ್ದಾನೆ. ಕತ್ತಿಗೆ ಗ್ರಾಮದ ಆಂಜನೇಯ ಸ್ವಾಮಿ ಮೂರ್ತಿಯ ಮೇಲೆ ಕಾಲಿಟ್ಟು ಪೂಜೆ ಮಾಡಿದ ಅರ್ಚಕನ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಬೇಡರ ಕಣ್ಣಪ್ಪ ಶಿವನಿಗೆ ಒಂದು ಕಣ್ಣು ದಾನ ಕೊಟ್ಟು ಇನ್ನೊಂದು ಕಣ್ಣು ಕೊಡಲು ಶಿವಲಿಂಗದ ಮೇಲೆ ಕಾಲಿಡುವ ಮಾದರಿಯಲ್ಲಿ ಅರ್ಚಕ ಮಹೇಶ್ವರಯ್ಯ ಆಂಜನೇಯ ಸ್ವಾಮೀ ತಲೆ ಮೇಲೆ ಕಾಲಿಟ್ಟು ಮೂರ್ತಿಯನ್ನು ಶುದ್ಧ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇದರಿಂದ ಅರ್ಚಕ ಮಹೇಶ್ವರಯ್ಯನ ವಿರುದ್ಧ ಸ್ವಗ್ರಾಮದವರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸ್ಥಳೀಯರಿಂದ ತಿಳಿದುಬಂದಿದೆ. ಇದನ್ನೂ ಓದಿ: ಪೊಲೀಸರ ಮನೆಗೇ ಕನ್ನ ಹಾಕಿದ ಕಳ್ಳರು – ಚಿನ್ನ, ಹಣ, ಪೆಟ್ರೋಲ್‌ ಕಳ್ಳತನ

    Live Tv
    [brid partner=56869869 player=32851 video=960834 autoplay=true]

  • ಮದ್ವೆಯಾಗಲು ಹುಡುಗಿ ಸಿಗಲೆಂದು ಮಾಡಿದ ಪೂಜೆ ವಿಫಲ- ಅರ್ಚಕನ ಕಿವಿಯನ್ನೇ ಕಚ್ಚಿದ!

    ಮದ್ವೆಯಾಗಲು ಹುಡುಗಿ ಸಿಗಲೆಂದು ಮಾಡಿದ ಪೂಜೆ ವಿಫಲ- ಅರ್ಚಕನ ಕಿವಿಯನ್ನೇ ಕಚ್ಚಿದ!

    ಭೋಪಾಲ್: ಸತ್ಯನಾರಾಯಣ ಪೂಜೆ ಮಾಡಿದರೂ ಹುಡುಗಿ ಸಿಗಲಿಲ್ಲ ಎಂದು ಪೂಜಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

    ರಾಜಸ್ಥಾನದ ಕೋಟಾ ನಿವಾಸಿ ಕುಂಜ್‌ಬಿಹಾರಿ ಶರ್ಮಾ ಹಲ್ಲೆಗೊಳಗಾದ ಅರ್ಚಕ. ಸತ್ಯನಾರಾಯಣ ಪೂಜೆ ವೇಳೆ ಕೆಲವು ತಪ್ಪುಗಳು ನಡೆದಿದೆ ಎಂಬ ಶಂಕೆಯ ಮೇಲೆ ಲಕ್ಷ್ಮಿಕಾಂತ್ ಶರ್ಮಾ (60) ಹಾಗೂ ಮಕ್ಕಳಾದ ವಿಪುಲ್ ಹಾಗೂ ಅರುಣ್ ಸೇರಿ ಥಳಿಸಿ ಅರ್ಚಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಲಕ್ಷ್ಮಿಕಾಂತ್ ಶರ್ಮಾ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ನಡೆಸಲು ಅರ್ಚಕ ಕುಂಜ್ ಬಿಹಾರಿ ಶರ್ಮಾರನ್ನು ಆಹ್ವಾನಿಸಿದ್ದರು. ಆ ಪ್ರಕಾರವಾಗಿಯೇ ಅರ್ಚಕರು ಪೂಜೆ ಮಾಡಿ ಮನೆಗೆ ತೆರಳಿದ್ದಾರೆ. ಆದರೆ ತಡರಾತ್ರಿ ಲಕ್ಷ್ಮಿಕಾಂತ್ ಶರ್ಮಾ ಹಾಗೂ ಆತನ ಮಗ ವಿಪುಲ್ ಹಾಗೂ ಅರುಣ್ ಅರ್ಚಕನ ಮನೆಗೆ ಬಂದಿದ್ದಾರೆ. ಪೂಜೆ ಸರಿಯಾಗಿಲ್ಲ ಎಂದು ಕೋಪಿಸಿಕೊಂಡು ಆ ಮೂವರು ಸೇರಿ ಅರ್ಚಕರಿಗೆ ಹೊಡೆದಿದ್ದಾರೆ. ಈ ವೇಳೆ ವಿಪುಲ್ ಅರ್ಚಕನ ಕಿವಿಯನ್ನು ಕಚ್ಚಿ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ

    ಘಟನೆಗೆ ಸಂಬಂಧಿಸಿ ಅರ್ಚಕನನ್ನು ನೆರೆಹೊರೆಯವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಕುರಿತು ಅರ್ಚಕ ಶರ್ಮಾ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಲಕ್ಷ್ಮಿಕಾಂತ್ ಶರ್ಮಾ ಹಾಗೂ ಆತನ ಮಕ್ಕಳಾದ ವಿಪುಲ್, ಅರುಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಈಗ ಭಾರತಕ್ಕೆ 2ನೇ ಅತಿ ದೊಡ್ಡ ತೈಲ ಪೂರೈಕೆದಾರ

    Live Tv
    [brid partner=56869869 player=32851 video=960834 autoplay=true]

  • ದೇಗುಲದಲ್ಲಿ ಪ್ರಸಾದ ನಿರಾಕರಿಸಿದ ಸಚಿವ – ಹಿಂದೂ ಭಾವನೆಗೆ ಧಕ್ಕೆ ಎಂದು ಅರ್ಚಕ ಅಸಮಾಧಾನ

    ದೇಗುಲದಲ್ಲಿ ಪ್ರಸಾದ ನಿರಾಕರಿಸಿದ ಸಚಿವ – ಹಿಂದೂ ಭಾವನೆಗೆ ಧಕ್ಕೆ ಎಂದು ಅರ್ಚಕ ಅಸಮಾಧಾನ

    ಪಾಟ್ನಾ: ಬಿಹಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಇಸ್ರೇಲ್ ಮನ್ಸೂರ್ ಅವರು ಇಂದು ಗಯಾದ ವಿಷ್ಣುಪಾದ್ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಈ ವೇಳೆ ಅವರು ಪ್ರಾರ್ಥನೆ ಸಲ್ಲಿಸಲಿಲ್ಲ ಹಾಗೂ ಪ್ರಸಾದವನ್ನು ಸ್ವೀಕರಿಸಲಿಲ್ಲ ಎಂದು ದೇವಾಲಯದ ಅರ್ಚಕ ತಿಳಿಸಿದ್ದಾರೆ.

    ವಿಷ್ಣುಪಾದ್ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶಂಭುಲಾಲ್ ವಿಠ್ಠಲ್ ಈ ಬಗ್ಗೆ ತಿಳಿಸಿ, ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸಚಿವರು ಪ್ರಸಾದವನ್ನು ಸ್ವೀಕರಿಸದೇ ಹೋಗಿದ್ದು, ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: 400 ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಚಿರತೆ ಸೆರೆಗೆ ಹೈ ಡೆಫೆನೆಶನ್ ಡ್ರೋನ್ ಬಳಕೆ

    ಸಚಿವರು ದೇವಾಲಯಕ್ಕೆ ಭೇಟಿ ನೀಡಿದ್ದರೂ ಅವರ ಉದ್ದೇಶ ಬೇರೆಯೇ ಆಗಿತ್ತು ಎಂಬುದು ಸ್ಪಷ್ಟವಾಗಿ ತೋರುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಶಂಭುಲಾಲ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕರ ಪರೀಕ್ಷೆಯಲ್ಲಿ ಅಕ್ರಮ ಆಗಿಲ್ಲ: ಬಿ.ಸಿ ನಾಗೇಶ್

    Live Tv
    [brid partner=56869869 player=32851 video=960834 autoplay=true]