Tag: price increase

  • ಸಿದ್ರಾಮಣ್ಣ ಏನೇನು ಬೆಲೆ ಜಾಸ್ತಿ ಮಾಡ್ತಿರೋ ಒಟ್ಟಿಗೆ ಮಾಡಿ ಬಿಡಿ – ಅಶೋಕ್

    ಸಿದ್ರಾಮಣ್ಣ ಏನೇನು ಬೆಲೆ ಜಾಸ್ತಿ ಮಾಡ್ತಿರೋ ಒಟ್ಟಿಗೆ ಮಾಡಿ ಬಿಡಿ – ಅಶೋಕ್

    ಬೆಂಗಳೂರು: ಸಿದ್ರಾಮಣ್ಣ ಏನೇನು ಬೆಲೆ ಜಾಸ್ತಿ ಮಾಡುತ್ತೀರೊ ಒಟ್ಟಿಗೆ ಮಾಡಿ ಬಿಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಸಿಎಂ ಸಿದ್ದರಾಮಯ್ಯಗೆ (CM Siddaramaiah) ಮನವಿ ಮಾಡಿದ್ದಾರೆ.ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರ್ ಇ ವಿಟಾರಾ ಅನಾವರಣ; 500 ಕಿಮೀ ರೇಂಜ್

    ಮೆಟ್ರೋ ಟಿಕೆಟ್ ದರ ಏರಿಕೆಗೆ ಸರ್ಕಾರ ತೀರ್ಮಾನ ಮಾಡಿಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರ ಮೆಟ್ರೋ ಟಿಕೆಟ್ ದರ ಏರಿಕೆ ಹುನ್ನಾರ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯಗೆ ನಾನು ಪ್ರೀತಿಯಿಂದ ಕೇಳುತ್ತೇನೆ. ಸಿದ್ರಾಮಣ್ಣ ಏನೇನು ಬೆಲೆ ಜಾಸ್ತಿ ಮಾಡ್ತಿರೋ ಒಟ್ಟಿಗೆ ಮಾಡಿ ಬಿಡಿ. ಒಂದೇ ಸಾರಿ ಬೆಲೆ ಏರಿಕೆ ಎಂಬ ಇಂಜೆಕ್ಷನ್ ಕೊಟ್ಟು ಬಿಡಿ. ನಿತ್ಯ ಇಂಜೆಕ್ಷನ್ ಚುಚ್ಚಬೇಡಿ ಎಂದು ಕಿಡಿಕಾರಿದರು.

    ಬೆಂಗಳೂರು ಜನರ ಶಾಪ ನಿಮಗೆ ಜಾಸ್ತಿ ಆಗಿದೆ. ರಸ್ತೆ ನೋಡಿ ಜನರು ಗ್ಯಾರಂಟಿ ಮನೆಗೆ ಹೋಗದ ಸ್ಥಿತಿ ಆಗಿದೆ. ಎಷ್ಟು ಬೆಲೆ ಏರಿಕೆ ಮಾಡುತ್ತಿರೋ ಒಟ್ಟಿಗೆ ಮಾಡಿ. ಹಾಲು, ವಿದ್ಯುತ್, ಸ್ಟಾಂಪ್ ಡ್ಯೂಟಿ ಎಲ್ಲ ಬೆಲೆ ಏರಿಕೆ ಆಗುತ್ತಿದೆ. ರಾಜ್ಯದ ಜನರಿಗೆ ನೆಮ್ಮದಿಯಾಗಿ ಬದುಕಲು ಬಿಡಿ. ಈ ಸರ್ಕಾರ ತೆರಿಗೆಗಳ ಬಾಂಬ್ ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರದಿಂದ ಸಮ್ಮತಿ

  • ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆ ಶಾಕ್!

    ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆ ಶಾಕ್!

    ಬೆಂಗಳೂರು: ನಗರದ ನಮ್ಮ ಮೆಟ್ರೋ (Namma Metro) ರೈಲು ಇದೀಗ ದರ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಶೀಘ್ರದಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆಯಿದೆ.

    ಇದಕ್ಕೂ ಮುಂಚೆ ಹಲವಾರು ಬಾರಿ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್‌ಸಿಎಲ್ (Bengaluru Metro Rail Corporation Limited)  ಪ್ರಸ್ತಾಪಿಸಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ದರ ಏರಿಕೆ ಮಾಡಿರಲಿಲ್ಲ. ಸದ್ಯ ಈ ಬಾರಿ ದರ ಏರಿಕೆ ಮಾಡಲು ಮುಂದಾಗಿದೆ.ಇದನ್ನೂ ಓದಿ:

    ಟಿಕೆಟ್ ದರ ಏರಿಕೆಗೆ ಈಗಾಗಲೇ ಮೆಟ್ರೋ ದರ ನಿಗದಿ ಸಮಿತಿಯನ್ನು ರಚಿಸಿದ್ದು 15% ರಿಂದ 20% ರಷ್ಟು ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

    ಈ ಕುರಿತು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾನ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡು ದರ ಏರಿಕೆ ಬಗ್ಗೆ ಕಮಿಟಿ ಆಗಿದೆ. ಇದೊಂದು ಸ್ವತಂತ್ರ ಸಮಿತಿಯಾಗಿದ್ದು, ಒಂದು ಸಭೆ ಕೂಡಾ ಆಗಿದೆ. ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದ್ದು, ವರದಿ ಆಧಾರದ ಮೇಲೆ ದರ ಏರಿಕೆ ಆಗಲಿದೆ. ಕಮಿಟಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಲಿದೆ. ನಮ್ಮ ಖರ್ಚು ವೆಚ್ಚ ನೋಡಿಕೊಂಡು ದರ ಏರಿಕೆ ಮಾಡಲಿದ್ದೇವೆ. ಇನ್ನೂ ಮೂರು ತಿಂಗಳ ಒಳಗಾಗಿ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಅ.21 ರೊಳಗೆ ಪ್ರಯಾಣಿಕರು ಬಿಎಂಆರ್ಸಿಎಲ್‌ಗೆ ತಮ್ಮ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಿದ್ದು, ಸಲಹೆಯನ್ನ ffc@bmrc.co.in ಇಮೇಲ್‌ಗೆ ಕಳಿಸುವಂತೆ ತಿಳಿಸಿದೆ.ಇದನ್ನೂ ಓದಿ:

  • ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ 105ರೂ.ಗೆ ಏರಿಕೆ – ಇಂದಿನ ಪರಿಷ್ಕೃತ ದರ ಎಷ್ಟು ಗೊತ್ತಾ?

    ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ 105ರೂ.ಗೆ ಏರಿಕೆ – ಇಂದಿನ ಪರಿಷ್ಕೃತ ದರ ಎಷ್ಟು ಗೊತ್ತಾ?

    ನವದೆಹಲಿ: ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಮಾರ್ಚ್ 1 ರಿಂದ ದೆಹಲಿಯಲ್ಲಿ 105 ರೂ. ಮತ್ತು ಕೋಲ್ಕತ್ತಾದಲ್ಲಿ 108 ರೂ. ಹೆಚ್ಚಿಸಿದೆ. ಈ ಮೂಲಕ ಮಂಗಳವಾರದಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,012 ರೂ. ಆಗಿದೆ.

    BRIBE

    5 ಕೆಜಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆಯೂ 27ರೂ. ಏರಿಕೆಯಾಗಿದೆ. ಈಗ ದೆಹಲಿಯಲ್ಲಿ 5 ಕೆಜಿ ಸಿಲಿಂಡರ್ ಬೆಲೆ 569 ರೂ. ಆಗಿದೆ. ಆದರೆ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಇದನ್ನೂ ಓದಿ: ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!

    ಫೆಬ್ರವರಿ 1 ರಂದು ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು 91.50 ರೂ.ಗಳಷ್ಟು ಕಡಿತಗೊಳಿಸಿತ್ತು. ಆದರೆ ಇದೀಗ ದಿಢೀರ್ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿರುವುದು ಜನರಿಗೆ ಶಾಕ್ ನೀಡಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಸಂಘರ್ಷ ಕೃಷಿ ರಫ್ತಿನ ಮೇಲೆ ಪರಿಣಾಮ ಬೀರುತ್ತೆ: ನಿರ್ಮಲಾ

  • ನಂದಿನಿ ಹಾಲಿನ ದರ ಏರಿಕೆ – ಈಗ ಯಾವ ಹಾಲಿನ ದರ ಎಷ್ಟಿದೆ? ಎಷ್ಟು ಏರಿಕೆ ಆಗುತ್ತೆ?

    ನಂದಿನಿ ಹಾಲಿನ ದರ ಏರಿಕೆ – ಈಗ ಯಾವ ಹಾಲಿನ ದರ ಎಷ್ಟಿದೆ? ಎಷ್ಟು ಏರಿಕೆ ಆಗುತ್ತೆ?

    ಬೆಂಗಳೂರು: ಈರುಳ್ಳಿ, ತರಕಾರಿ, ಗ್ಯಾಸ್, ಪೆಟ್ರೋಲ್ ಆಯ್ತು ಈಗ ಹಾಲು, ಮೊಸರು, ತುಪ್ಪದ ಬೆಲೆ ಏರಿಕೆಯಾಗಿದೆ. ಹೊಸ ವರ್ಷದಂದು ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಹಾಲು ಮೊಸರಿನ ದರ ಫೆಬ್ರವರಿ ಒಂದರಿಂದಲ್ಲೇ ಏರಿಕೆ ಆಗಲಿದೆ. ನಷ್ಟದ ನೆಪವೊಡ್ಡಿ ರೈತರಿಗೆ ಲಾಭ ನೀಡುತ್ತೇವೆ ಎಂಬ ಉದ್ದೇಶದಿಂದ ಕೆ.ಎಂ.ಎಫ್ ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿದೆ.

    ಪ್ರಸ್ತುತ ಪ್ರತಿ ಲೀಟರ್ ದರ ಎಷ್ಟಿದೆ?
    ನೀಲಿ ಪ್ಯಾಕೆಟ್ – 35 ರೂ.
    ಹಸಿರು ಪ್ಯಾಕೆಟ್ – 40 ರೂ.
    ಸ್ಪೆಷಲ್ ಪ್ಯಾಕೆಟ್ – 41 ರೂ.
    ಶುಭಂ ಪ್ಯಾಕೆಟ್- 41 ರೂ.

    ಫೆ. 1 ರಿಂದ 2 ರೂ ದರ ಏರಿಕೆ
    ನೀಲಿ ಪ್ಯಾಕೆಟ್ – 37 ರೂ.
    ಹಸಿರು ಪ್ಯಾಕೆಟ್ – 42 ರೂ.
    ಸ್ಪೇಷಲ್ ಪ್ಯಾಕೆಟ್ – 43 ರೂ.
    ಶುಭಂ ಪ್ಯಾಕೆಟ್ – 43 ರೂ.

    ಹಾಲು ಸೇರಿದಂತೆ ಹಾಲಿನ ಉತ್ಪನಗಳ ದರ ಪರಿಷ್ಕರಣೆಗೆ ಕೆಎಂಎಫ್ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತ್ತು. ಇವತ್ತು ಅವರ ಮೌಖಿಕ ಅನುಮೋದನೆ ನೀಡಿದ್ದಾರೆ. 2 ರೂ. ಏರಿಕೆಯಿಂದ ಬರುವ ಹಣದಲ್ಲಿ ಒಂದು ರೂ. ರೈತರಿಗೆ ಉಳಿದ ಒಂದು ರೂ ಆಯಾ ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲಾಗುತ್ತೆ. ಒಂದು ರೂ. ನಲ್ಲಿ 40 ಪೈಸೆ ಹಸುಗಳಿಗೆ ಇನ್ಶುರೆನ್ಸ್, 40 ಪೈಸೆ ಹಾಲು ಮಾರಾಟಗಾರರ ಏಜೆಂಟ್ ಗಳಿಗೆ ಕಮಿಷನ್ ನೀಡಲಿದ್ದು, ಉಳಿದ 20 ಪೈಸೆ ಒಕ್ಕೂಟಗಳ ಸೆಕ್ರೇಟರಿಗಳಿಗೆ ಕಮಿಷನ್ ನೀಡಲು ಕೆಎಂಎಫ್ ನಿರ್ಧಾರ ಮಾಡಿದೆ.

    ರೈತರಿಗೆ ಅನುಕೂಲವಾಗೋ ನಿಟ್ಟಿನಲ್ಲಿ ದರವನ್ನು ವಿಗಂಡನೆ ಮಾಡಿದ್ದೇವೆ. 2 ರೂ. ಗಳಲ್ಲಿ 1 ರೂ. 40 ಪೈಸೆ ರೈತರಿಗೆ ಸಲ್ಲುತ್ತದೆ. ಕಳೆದ ಮೂರು ವರ್ಷಗಳಿಂದ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿಲ್ಲ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

    ನಂದಿನಿ ಹಾಲಿನದರ ಏರಕೆ ಮಾಡಿರೋದ್ದನ್ನು ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ್ ಸ್ವಾಗತಿಸಿದ್ದಾರೆ. ಹಾಲಿನದರ 100 ರೂ ಮಾಡಿದ್ರು ಗ್ರಾಹಕರು ಹೊರೆ ಎಂದು ಪರಿಗಣಿಸಬಾರದು. ರೈತರಿಗೆ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿ ಲಾಭವೇ ಇಲ್ಲದಂತಾಗಿದೆ. ಕೇಂದ್ರ ಸರ್ಕಾರದ ನೌಕರರಿಗೆ ಶೇ.23 ರಷ್ಟು ವೇತನ ಹೆಚ್ಚಿಸಿದ್ರು. ಇದರಿಂದ ದೇಶದ ಖಜಾನೆಗೆ ತೊಂದರೆಯಾಗಿದೆ. ಈ ಬಗ್ಗೆ ಜನ ಕೇಳುವುದಿಲ್ಲ. ಹಾಲು ತರಕಾರಿ ಹಣ್ಣು ಹಂಪಲು ದರ ಏರಿಕೆಯಾದರೆ ಜನ ಕೇಳುತ್ತಾರೆ. ಇದರಿಂದ ಗ್ರಾಹಕರಿಗೇನು ಅಷ್ಟು ಹೊರೆಯಾಗಲ್ಲ. ಇನ್ನೂ ಹೆಚ್ಚಿನ ಅನುದಾನ ರೈತರಿಗೆ ನೀಡಬೇಕು ಅಂತಾ ಚಂದ್ರಶೇಖರ್ ಹೇಳಿದ್ದಾರೆ.

  • ರಾಜ್ಯದ ಜನರಿಗೆ ಸಮ್ಮಿಶ್ರ ಸರ್ಕಾರದಿಂದ ಶಾಕ್- ಇಂದಿನಿಂದಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ

    ರಾಜ್ಯದ ಜನರಿಗೆ ಸಮ್ಮಿಶ್ರ ಸರ್ಕಾರದಿಂದ ಶಾಕ್- ಇಂದಿನಿಂದಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ

    ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂತೋಷದಲ್ಲಿರುವ ರಾಜ್ಯದ ಜನತೆಗೆ ಕುಮಾರಸ್ವಾಮಿ ಸರ್ಕಾರ ಶಾಕ್ ನೀಡಿದೆ. ಇಂದಿನಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯನ್ನು ಹೆಚ್ಚಿಸಲು ಸರ್ಕಾರ ಆದೇಶ ಪ್ರಕಟಿಸಿದೆ.

    ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಶೇ.32 ಮತ್ತು ಡೀಸೆಲ್ ಮೆಲೆ ಶೇ.21 ತೆರಿಗೆ ಹೆಚ್ಚಳಕ್ಕೆ ಸರ್ಕಾರ ಆದೇಶ ಪ್ರಕಟಿಸಿದೆ. ತೆರಿಗೆ ಹೆಚ್ಚಳದಿಂದ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ಒಂದು ರೂ. ಏರಿಕೆಯಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆರಿಗೆಯನ್ನು ಏರಿಸುತ್ತಿದ್ದೇವೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

    ತೆರಿಗೆ ಏರಿಸಿದ ಪರಿಣಾಮ ಕರ್ನಾಟಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.84 ರೂ. ಆಗಿದ್ದರೆ ಡೀಸೆಲ್ ಬೆಲೆ 64.66 ರೂ.ಗೆ ಏರಿಕೆಯಾಗಲಿದೆ.

    ಸಮ್ಮಿಶ್ರ ಸರ್ಕಾರ ರಚನೆ ಬಳಿಕ 40 ಸಾವಿರ ಕೋಟಿ ರೂ. ಮೊತ್ತದಷ್ಟು ರೈತರ ಸಾಲ ಮನ್ನಾ ಘೋಷಿಸಿದ್ದ ಎಚ್‍ಡಿಕೆ, ಅದಕ್ಕಾಗಿ ಹಣ ಹೊಂದಿಸಲು ಸೆಸ್ ಹೆಚ್ಚಿಸಿದ್ದರು. ಬಜೆಟ್ ನಲ್ಲಿ ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು ಶೇ.30 ರಿಂದ ಶೇ.32ಕ್ಕೆ ಹೆಚ್ಚಿಸಿದ್ದರೆ ಡೀಸೆಲ್ ಮೇಲಿನ ಸುಂಕವನ್ನು ಶೇ.19 ರಿಂದ ಶೇ.21ಕ್ಕೆ ಏರಿಸಿದ್ದರು.

    ಸೆಪ್ಟೆಂಬರ್ ತಿಂಗಳಿನಲ್ಲಿ ತೈಲ ಬೆಲೆ ಏರಿಕೆ ಆಗುತ್ತಿದ್ದಂತೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಅಬಕಾರಿ ಸುಂಕವನ್ನು 1.50 ರೂಪಾಯಿ ಕಡಿಮೆ ಮಾಡಿದ್ದರೆ, ತೈಲ ಕಂಪನಿಗಳು 1 ರೂಪಾಯಿ ಕಡಿಮೆ ಮಾಡಿತ್ತು. ಹೀಗಾಗಿ ಒಟ್ಟು 2.50 ರೂ ಕಡಿತವಾಗಿತ್ತು.

    ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಸರ್ಕಾರಕ್ಕೆ 10,500 ಕೋಟಿ ರೂ. ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ಕಡಿಮೆ ಮಾಡಿದಂತೆ ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಲಿ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ರಾಜ್ಯದಲ್ಲೂ ಪ್ರತಿ ಲೀಟರ್, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿಯಾಗಿ ವಿಧಿಸಿದ್ದ ಸೆಸ್ ಇಳಿಕೆ ಮಾಡಿದ್ದರು.

    ಬೆಲೆ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರಲ್ಲಿ ತರಕಾರಿ ರೇಟ್ ಗಗನಮುಖಿ

    – ಹಣ್ಣು, ತರಕಾರಿ ಆರ್ಡರ್‍ಗೆ ಹಾಪ್‍ಕಾಮ್ಸ್ ನಿಂದ ಆನ್‍ಲೈನ್ ಸೇವೆ

    ಬೆಂಗಳೂರು: ಬೇಸಿಗೆಯ ಬಿಸಿಯ ಜೊತೆ ಈ ಬಾರಿ ತರಕಾರಿಯೂ ಕೈಸುಡಲಿದೆ. ಫೆಬ್ರವರಿ ಮೊದಲ ವಾರದಲ್ಲಿಯೇ ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ದರ ಏರಿಕೆ ಆಗಲಿದೆ ಅಂತಾರೆ ಹಾಪ್ ಕಾಮ್ಸ್ ಅಧಿಕಾರಿಗಳು.

    ಹಾಗಿದ್ರೆ ಈ ಹಿಂದೆ ಎಷ್ಟಿತ್ತು ಈಗ ಎಷ್ಟು ಏರಿಕೆ ಆಗಿದೆ ಅಂತಾ ನೋಡೋದಾದ್ರೆ: ಬೀನ್ಸ್‍ಗೆ ಈ ಹಿಂದೆ ಕೆಜಿಗೆ 25 ರೂಪಾಯಿ ಇತ್ತು. ಈಗ 60 ರೂಪಾಯಿ ಆಗಿದೆ. ಇನ್ನು ಬೆಂಡೆಕಾಯಿ 28 ರೂಪಾಯಿ ಇದ್ದಿದ್ದು, ಈಗ 47ರೂಪಾಯಿ ಆಗಿದೆ. ಇನ್ನು ನುಗ್ಗೇಕಾಯಿ 30 ರೂಪಾಯಿ ಇದ್ದಿದ್ದು, 58 ರೂಪಾಯಿ ಆಗಿದೆ. ಟೊಮ್ಯಾಟೋ 10 ರೂಪಾಯಿ ಇದ್ದಿದ್ದು, 25 ರೂ ಆಗಿದೆ. ಇನ್ನು ಸೌತೆಕಾಯಿ 20 ರೂಪಾಯಿ ಇದ್ದಿದ್ದು, 35 ರೂ ಗೆ ಏರಿಕೆ ಆಗಿದೆ.

    ಇನ್ನು ತರಕಾರಿ ದರ ಏರಿಕೆಯ ಮಧ್ಯೆ ಹಾಪ್ ಕಾಮ್ಸ್ ಜನರಿಗಾಗಿ ಆನ್‍ಲೈನ್ ಸೇವೆ ನೀಡಿದೆ. ತಾಜಾ ತರಕಾರಿಗಳನ್ನು ಹಾಪ್ ಕಾಮ್ಸ್ ವೆಬ್‍ಸೈಟ್‍ನಲ್ಲಿ ಅರ್ಡರ್ ಮಾಡಿದ್ರೆ, ಮನೆಬಾಗಿಲಿಗೆ ತರಕಾರಿ ಬರಲಿದೆ. ಈ ಸೇವೆ ಮುಂದಿನ ವಾರದಲ್ಲಿ ಲಭ್ಯವಾಗಲಿದೆ.