Tag: price hike

  • ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಆಯ್ತು ಈಗ ಸಿಎನ್‌ಜಿ, ಪಿಎನ್‌ಜಿ ದರದಲ್ಲೂ ಏರಿಕೆ

    ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಆಯ್ತು ಈಗ ಸಿಎನ್‌ಜಿ, ಪಿಎನ್‌ಜಿ ದರದಲ್ಲೂ ಏರಿಕೆ

    ನವದೆಹಲಿ: ಪೆಟ್ರೋಲ್‌, ಡೀಸೆಲ್‌, ಗೃಹ ಬಳಕೆಯ ಎಲ್‌ಪಿಜಿ ದರ ಏರಿಕೆ ಬೆನ್ನಲ್ಲೇ ಸಿಎನ್‌ಜಿ ಮತ್ತು ಕೊಳವೆ ಮೂಲಕ ಮನೆಗಳಿಗೆ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್‌ಜಿ) ದರದಲ್ಲೂ ಏರಿಕೆ ಮಾಡಲಾಗಿದೆ. ಇದರಿಂದ ಜನರಿಗೆ ಬೆಲೆ ಏರಿಕೆಯ ಬಿಸಿ ಮತ್ತಷ್ಟು ತಟ್ಟಿದೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಿಎನ್‌ಜಿ ದರ ಪ್ರತಿ ಕೆ.ಜಿ.ಗೆ 1 ರೂ. ಹೆಚ್ಚಳವಾಗಿದೆ. ದೆಹಲಿಯಲ್ಲಿ ಸಿಎನ್‌ಜಿ ಬೆಲೆಯನ್ನು 58.01 ರಿಂದ 59.01 ಕ್ಕೆ ಹೆಚ್ಚಿಸಲಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಬಸ್ಸಿನಲ್ಲೇ ಎಣ್ಣೆ ಹೊಡೆದ ಶಾಲಾ ಹೆಣ್ಮಕ್ಳು: ವಿಡಿಯೋ ವೈರಲ್

    ಅಡುಗೆ ಉದ್ದೇಶಗಳಿಗಾಗಿ ಕುಟುಂಬಗಳು ಪಡೆಯುವ ಪ್ರತಿ ಕ್ಯೂಬಿಕ್‌ ಮೀಟರ್‌ ಪಿಎನ್‌ಜಿ ದರ 36.61 ರೂಪಾಯಿ ತಲುಪಿದೆ. ಕಳೆದ ಎರಡು ದಿನಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ ತಲಾ 1.60 ರೂಪಾಯಿಯಷ್ಟು ಏರಿಕೆಯಾಗಿದೆ. ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ 50 ರೂಪಾಯಿ ಹೆಚ್ಚಳವಾಗಿದೆ.

    ಜಾಗತಿಕವಾಗಿ ನೈಸರ್ಗಿಕ ಅನಿಲ ದರದಲ್ಲಿ ಏರಿಕೆಯಾಗಿರುವುದರಿಂದ ಈ ತಿಂಗಳು ಮೂರನೇ ಬಾರಿಗೆ ಸಿಎನ್‌ಜಿ ದರ ಹೆಚ್ಚಳ ಕಂಡಿದೆ. ಕಳೆದ ಎರಡು ಬಾರಿಯ ದರ ಏರಿಕೆಯಲ್ಲಿ ಪ್ರತಿ ಕೆಜಿ ಸಿಎನ್‌ಜಿಗೆ ಒಟ್ಟು 50 ಪೈಸೆ ಹೆಚ್ಚಳವಾಗಿದೆ. ಈ ವರ್ಷ ಪ್ರತಿ ಕೆ.ಜಿ.ಗೆ ಒಟ್ಟು 5.50ರಷ್ಟು ಏರಿಕೆಯಾಗಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಶಾದಿ ಮಹಲ್ ಯೋಜನೆ ರದ್ದು: ಬೊಮ್ಮಾಯಿ

    ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬೆಲೆ ಏರಿಕೆಯ ವಿಷಯ ಸದ್ದು ಮಾಡಿತ್ತು. ಅಧಿಕ ಹಣದುಬ್ಬರ ಮತ್ತು ಸರಕುಗಳ ಬೆಲೆ ಏರಿಕೆಯ ಮೂಲಕ ಸಾಮಾನ್ಯ ಜನರಿಗೆ ಹೆಚ್ಚಿನ ಹೊರೆ ಹೊರಿಸಲಾಗಿದೆ ಎಂದು ಪ್ರತಿಪಕ್ಷಗಳು ಪ್ರತಿಭಟಿಸಿದವು. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ

  • ಜನರಿಗೆ ಬೆಲೆ ಏರಿಕೆ ಚರ್ಚೆಯ ವಿಷಯ ಅಲ್ಲ, ಮಾತಿನಲ್ಲೇ ಅಭಿವೃದ್ಧಿ ಮಾಡುವವವರು ಇಷ್ಟ: ಹೆಚ್‍ಡಿಕೆ

    ಜನರಿಗೆ ಬೆಲೆ ಏರಿಕೆ ಚರ್ಚೆಯ ವಿಷಯ ಅಲ್ಲ, ಮಾತಿನಲ್ಲೇ ಅಭಿವೃದ್ಧಿ ಮಾಡುವವವರು ಇಷ್ಟ: ಹೆಚ್‍ಡಿಕೆ

    ಬೆಂಗಳೂರು: ಜನ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರು ಸಮೃದ್ಧವಾಗಿದ್ದಾರೆ. ಜನರಿಗೆ ಬೆಲೆ ಏರಿಕೆಗಿಂತ ಭಾವನಾತ್ಮಕ ವಿಷಯಗಳೇ ಹೆಚ್ಚು ಖುಷಿ ನೀಡುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

    ವಿಧಾನಸೌಧದಲ್ಲಿ ಪಂಚರಾಜ್ಯ ಚುನಾವಣೆಯ ನಂತರ ಬೆಲೆ ಏರಿಕೆ ಆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ಗ್ಯಾಸ್ ಮತ್ತಿತರ ಬೆಲೆ ಏರಿಕೆ ಆಗಿದೆ. ಜನ ಇಂದು ಹಣವಂತರಾಗಿದ್ದಾರೆ. ಮೌನವಾಗಿ ಬೆಂಬಲಿಸಿದ್ದಾರೆ. ಜನರಿಗೆ ಈಗ ಧರ್ಮದ ಅವಶ್ಯಕತೆ ಇದೆ. ಸಮಸ್ಯೆಗಳ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ ಎಂದರು.

    ಭಗವದ್ಗೀತೆ, ದೇಶ, ಭಾಷೆ, ಧರ್ಮ ಜನರಿಗೆ ಬೇಕಾಗಿದೆ. ಜನ ಎಷ್ಟೇ ಬೆಲೆ ಏರಿಕೆ ಆದರೂ ಕೊಡಲು ಸಿದ್ಧರಿದ್ದಾರೆ. ಮೋದಿ ಮಾತಿನಿಂದಲೆ ಅಭಿವೃದ್ಧಿಯಾಗಿದ್ದಾರೆ. ಬೆಲೆ ಏರಿಕೆ ಈಗ ಜನರಿಗೆ ಚರ್ಚೆಯ ವಿಷಯ ಅಲ್ಲ. ಏನಿದ್ದರೂ ಭಾವನಾತ್ಮಕ ಮೋಡಿ ಮಾಡುವ ಮಾತುಗಳೇ ಪ್ರಿಯ. ಮಾತಿನಲ್ಲೇ ಅಭಿವೃದ್ಧಿ ಮಾಡುವವವರೇ ಇಷ್ಟ ಎಂದು ಟೀಕಿಸಿದರು. ಇದನ್ನೂ ಓದಿ:  ತಮಿಳುನಾಡು ವಿಧಾನಸಭೆ ನಿರ್ಣಯಕ್ಕೆ ಬೆಲೆ ಇಲ್ಲ: ಬೊಮ್ಮಾಯಿ

    ಬಿಡಿಎ ಬ್ರೋಕರ್‌ಗಳ ಮೇಲೆ ಎಸಿಬಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಎಸಿಬಿಯಿಂದ ಇತ್ತೀಚಿನ ದಾಳಿ ಪ್ರಕರಣವನ್ನು ನೋಡುತ್ತಿದ್ದೇನೆ ಎಂದ ಅವರು, ಎಷ್ಟು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಎಷ್ಟು ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಆಗಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಶ್ಮೀರ್‌ ಫೈಲ್ಸ್‌ನಲ್ಲಿ ಏನಿದೆ?: ಹೆಚ್‍ಡಿಕೆ ಪ್ರಶ್ನೆ

    ಕೇವಲ ಎಸಿಬಿ ದಾಳಿ ನಡೆಸಿದರೆ ಪರಿಣಾಮ ಸಿಗಲ್ಲ. ಏನು ಕ್ರಮ ಆಗಿದೆ ಅನ್ನೋದು ಯಾರಿಗೂ ಮಾಹಿತಿ ಇಲ್ಲ. ಐ ವಾಷಿಂಗ್‍ಗೋಸ್ಕರ ಎಸಿಬಿ ದಾಳಿ ನಡೆಯುತ್ತಿದೆ. ಎಸಿಬಿ ರೈಡ್ ತೋರ್ಪಡಿಕೆಗೆ ನಡೆಯುತ್ತಿದೆ. ಯಾವುದೇ ಪರಿಣಾಮ ಆಗುತ್ತಿಲ್ಲ. ಬಿಡಿಎಯಂತಹ ಆಯಕಟ್ಟಿನ ಸ್ಥಳಗಳಿಗೆ ಅಂತಹ ಭ್ರಷ್ಟ ಅಧಿಕಾರಿಗಳನ್ನೆ ತಂದು ಕೂರಿಸ್ತಾರೆ. ಮತ್ತೆ ಅಂತವರ ವಿರುದ್ಧ ಏನು ಕ್ರಮ ಆಗುತ್ತೆ. ಯಾರಿಗೆ ಇದುವರೆಗೆ ಶಿಕ್ಷೆ ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೇಕೆದಾಟು ಯೋಜನೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ದೇವೇಗೌಡ್ರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ: ಎಚ್‍ಡಿಕೆ

  • ದಿನ ಬಳಕೆಯ ಸಿಲಿಂಡರ್‌ ಬೆಲೆ 50 ರೂ. ಏರಿಕೆ

    ದಿನ ಬಳಕೆಯ ಸಿಲಿಂಡರ್‌ ಬೆಲೆ 50 ರೂ. ಏರಿಕೆ

    ನವದೆಹಲಿ: ರಷ್ಯಾ ಉಕ್ರೇನ್‌ ಯುದ್ಧ ಈಗ ಜನರ ಮೇಲೆ ನೇರ ಪರಿಣಾಮ ಬೀರಿದ್ದು ಗೃಹ ಬಳಕೆಯ ಸಿಲಿಂಡರ್‌ ದರ 50 ರೂ. ಏರಿಕೆಯಾಗಿದೆ.

    2021ರ ಅಕ್ಟೋಬರ್‌ 6 ರ ಬಳಿಕ ಮೊದಲ ಬಾರಿಗೆ ದರ ಏರಿಕೆಯಾಗಿದೆ. 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ಮಾ.22ರ ಮಧ್ಯರಾತ್ರಿಯಿಂದಲೇ ಏರಿಕೆ ಕಂಡಿದೆ.

    ಬೆಂಗಳೂರಿನಲ್ಲಿ ಈ ಮೊದಲು 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 902.50 ರೂ. ಇದ್ದರೆ ಈಗ ಬೆಲೆ 952.50 ರೂ.ಗೆ ಏರಿಕೆಯಾಗಿದೆ.

    ಯಾವ ನಗರದಲ್ಲಿ ಎಷ್ಟು?
    ಮುಂಬೈ – 949.50 ರೂ.
    ಕೋಲ್ಕತ್ತಾ – 965.50 ರೂ.
    ಲಕ್ನೋ – 987.50 ರೂ.
    ಪಾಟ್ನಾ – 1039.50 ರೂ.

  • 2 ನಿಮಿಷದಲ್ಲಿ ಮಾಡುವ ಮ್ಯಾಗಿ ಇನ್ಮುಂದೆ ಸಖತ್ ದುಬಾರಿ!

    2 ನಿಮಿಷದಲ್ಲಿ ಮಾಡುವ ಮ್ಯಾಗಿ ಇನ್ಮುಂದೆ ಸಖತ್ ದುಬಾರಿ!

    ನವದೆಹಲಿ: ಈಗಾಗಲೇ ದಿನ ನಿತ್ಯ ಬಳಕೆಯಾಗುವ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಈಗ ಮ್ಯಾಗಿ ಸರದಿಯಾಗಿದೆ. ಮ್ಯಾಗಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಫಟಾಫಟ್ ಅಂತಾ ಮಾಡುವ ಈ ಮ್ಯಾಗಿಯ (Maggi) ಬೆಲೆ ಹೆಚ್ಚಳವಾಗಲಿದೆ ಎನ್ನುವ ಸುದ್ದಿಯೊಂದು ಹೊರ ಬಿದ್ದಿದೆ.

    ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮ್ಯಾಗಿ ಬೆಲೆ ಕೂಡ ಹೆಚ್ಚಳವಾಗಿದೆ. ನೆಸ್ಲೆ (Nestle) ಇಂಡಿಯಾ ಮ್ಯಾಗಿ ಬೆಲೆಯನ್ನು ಶೇ.9ರಿಂದ 16ರಷ್ಟು ಹೆಚ್ಚಿಸಿದೆ. ನೆಸ್ಲೆ ಕಂಪನಿಯು ಹಾಲು ಮತ್ತು ಕಾಫಿ ಪುಡಿಯ ಬೆಲೆಗಳನ್ನು ಕೂಡ ಹೆಚ್ಚಿಸಿದೆ. ಇಷ್ಟು ದಿನ 70 ಗ್ರಾಂ ಮ್ಯಾಗಿ ಪ್ಯಾಕೆಟ್‍ಗೆ 12 ರೂ. ಇದ್ದುದು ಇನ್ನು ಮುಂದೆ 14 ರೂ. ಆಗಲಿದೆ. 140 ಗ್ರಾಂ ಮ್ಯಾಗಿ ಮಸಾಲಾ ನೂಡಲ್ಸ್ ಬೆಲೆ 3 ರೂ. ಹೆಚ್ಚಳವಾಗಲಿದೆ. 560 ಗ್ರಾಂ ಮ್ಯಾಗಿ ಪ್ಯಾಕ್‍ಗೆ 96 ರೂ. ಇದ್ದುದು 105 ರೂ. ಆಗಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಇದನ್ನೂ ಓದಿ: ಮಗು ಹುಟ್ಟಿದ ಸಂಭ್ರಮದ ಮಧ್ಯೆ ಬೇರ್ಪಟ್ಟ ಎಲೋನ್ ಮಸ್ಕ್ ಜೋಡಿ

    ಹೆಚ್‍ಯುಎಲ್ ಬ್ರೂ ಕಾಫಿಯ ಬೆಲೆಯನ್ನು ಶೇ. 3ರಿಂದ 7ರಷ್ಟು ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್‍ನ ಬೆಲೆಯನ್ನು ಶೇ. 3ರಿಂದ 4ರಷ್ಟು ಹೆಚ್ಚಿಸಿದೆ. ನೆಸ್‍ಕೆಫೆ ಕ್ಲಾಸಿಕ್ ಕಾಫಿ ಪುಡಿಯ ಬೆಲೆ ಶೇ. 3.7ರಷ್ಟು ಏರಿಕೆಯಾಗಿದೆ. ಬ್ರೂ ಸಣ್ಣ ಕಾಫಿ ಪ್ಯಾಕೆಟ್‍ಗಳ ಬೆಲೆಯೂ ಶೇ.3ರಿಂದ ಶೇ.6.66ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ತಾಜ್ ಮಹಲ್ ಚಹಾದ ಬೆಲೆ ಶೇ.3.7ರಿಂದ ಶೇ.5.8ಕ್ಕೆ ಏರಿಕೆಯಾಗಿದೆ. ಬ್ರೂಕ್ ಬಾಂಡ್‍ನ ಚಹಾ ಪುಡಿಯ ಬೆಲೆಗಳು ಶೇ. 1.5ರಿಂದ 14ಕ್ಕೆ ಏರಿಕೆಯಾಗಿವೆ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಕಂಪನಿಗಳು ಕಾಫಿ, ಟೀ ಪುಡಿಯ ಬೆಲೆಯನ್ನು ಹೆಚ್ಚಿಸಿವೆ. ಇದನ್ನೂ ಓದಿ: ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಮಾಡಿ- ನೆಟ್ಟಿಗರ ಆಗ್ರಹ

    ಮ್ಯಾಗಿ, ಕಾಫಿ, ಟೀ (ಚಹಾ) ಬೆಲೆ ಕೂಡ ಹೆಚ್ಚಳವಾಗಲಿದೆ. ಹಿಂದೂಸ್ತಾನ್ ಯೂನಿಲಿವರ್ (ಹೆಚ್‍ಯುಎಲ್) ಮತ್ತು ನೆಸ್ಲೆ ತಮ್ಮ ಅನೇಕ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿವೆ. ಇದರಿಂದಾಗಿ ಮ್ಯಾಗಿ, ಕಾಫಿ, ಟೀ ಪುಡಿಯ ಬೆಲೆಯೂ ಶೇ. 9ರಿಂದ 16ರಷ್ಟು ಹೆಚ್ಚಳವಾಗಲಿದೆ.

  • ಸುಝುಕಿ ಕಾರುಗಳ ಬೆಲೆ ಮತ್ತೆ ದುಬಾರಿ

    ಸುಝುಕಿ ಕಾರುಗಳ ಬೆಲೆ ಮತ್ತೆ ದುಬಾರಿ

    ನವದೆಹಲಿ: ಭಾರತದಲ್ಲಿ ಅತೀ ಜನಪ್ರಿಯ ಅಟೋಮೊಬೈಲ್ ಕಂಪನಿಗಳಾದ ಮಾರುತಿ, ಮಹಿಂದ್ರಾ ಕಾರುಗಳ ಬೆಲೆ ಹೆಚ್ಚಾಗಿದೆ. ಕಾರು ತಯಾರಿಕೆಯಲ್ಲಿ ಬಳಸಲಾಗುವ ಕಚ್ಛಾವಸ್ತುಗಳ ಬೆಲೆ ಏರಿಕೆಯ ಜೊತೆಗೆ ಕಾರುಗಳ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಕಂಪನಿಯು ಹೊಂದಿದೆ.

    ಕಂಪನಿ ತನ್ನ ವಿವಿಧ ಮಾದರಿಗಳ ಕಾರ್‌ಗಳ ಬೆಲೆಯನ್ನು ಶೇ.0.1 ರಿಂದ ಶೇ. 4.3ರ ವರೆಗೆ ಹೆಚ್ಚಿಸಿದೆ. ಕಳೆದ ವರ್ಷ ಜನವರಿಯಲ್ಲಿ ಶೇ.1.4, ಏಪ್ರಿಲ್‌ನಲ್ಲಿ ಶೇ.1.6, ಸೆಪ್ಟೆಂಬರ್‌ನಲ್ಲಿ ಶೇ.1.9ರಷ್ಟು ಏರಿಕೆಯಾಗಿತ್ತು. ಇದೀಗ ಮತ್ತೆ ಕಂಪನಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಇದನ್ನೂ ಓದಿ: ಟೆಸ್ಲಾ ಕಾರಿನ ಬಗ್ಗೆ ಅಪ್‌ಡೇಟ್ ಮಾಡಿ – ಮಸ್ಕ್ ಒತ್ತಡ ತಂತ್ರಗಳಿಗೆ ಬಗ್ಗಲ್ಲ ಎಂದ ಕೇಂದ್ರ

    ಕಳೆದ ವರ್ಷ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದ್ದ ಕಾರು ಎಕ್ಸ್ಯುವಿ 700 ರ ಬೆಲೆ 12.99 ಲಕ್ಷ ರೂ. ಇದ್ದು, 13.47 ಲಕ್ಷಕ್ಕೆ ಏರಿಕೆಯಾಗಿದೆ. ಥಾರ್ ಡೀಸೆಲ್ ಕಾರುಗಳ ಬೆಲೆ 12.99 ಲಕ್ಷ ಇದ್ದು, 13.38 ಲಕ್ಷಕ್ಕೆ ಏರಿದೆ. ಸ್ಕಾರ್ಪಿಯೋ ಕಾರುಗಳ ಬೆಲೆ 41 ಸಾವಿರದಿಂದ 53 ಸಾವಿರ ರೂ. ವರೆಗೆ. ಇದನ್ನೂ ಓದಿ: ಬಟನ್ ಒತ್ತಿದ್ರೆ ಕಾರಿನ ಬಣ್ಣವೇ ಬದಲಾಗುತ್ತೆ

  • ಕಜಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ ಪ್ರತಿಭಟನೆಗೆ 18 ಅಧಿಕಾರಿಗಳು ಬಲಿ

    ಕಜಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ ಪ್ರತಿಭಟನೆಗೆ 18 ಅಧಿಕಾರಿಗಳು ಬಲಿ

    ಕಜಕಿಸ್ತಾನ: ಇಂಧನ ಬೆಲೆ ಏರಿಕೆ ಹಿನ್ನೆಲೆ ಕಜಕಿಸ್ತಾನಲ್ಲಿ ಜನ ನಡೆಸುತ್ತಿರುವ ಪ್ರತಿಭಟನೆಗೆ 18 ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

    ರಸ್ತೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಅಧಿಕಾರಿಗಳ ಮೇಲೆಯೇ ಹಲ್ಲೆ ಮಾಡಿದ್ದಾರೆ.

    ಈ ಪರಿಣಾಮ ಪ್ರತಿಭಟನೆಯನ್ನು ನಿಯಂತ್ರಿಸಲಾಗದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿ ವಿಫಲವಾಗಿದೆ. ಪರಿಣಾಮ ಗಲಾಟೆ ಉಲ್ಬಣಗೊಂಡಿದ್ದು, ಈ ಘರ್ಷಣೆಯಲ್ಲಿ 18 ಅಧಿಕಾರಿಗಳು ಸಾವನ್ನಪ್ಪಿದ್ದು, 748 ಮಂದಿಗೆ ಗಾಯಗೊಂಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 2,298 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:  ‘RRR’ ಸಿನಿಮಾ ಬಿಡುಗಡೆಯಾಗಬಾರದು: ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ

    2021ರಲ್ಲಿ ಎಲ್‍ಪಿಜಿ ಬೆಲೆ 1 ಲೀಟರ್‌ಗೆ 50 ಟೆಂಗೆ (ಅಂದಾಜು 8.53 ರೂಪಾಯಿ) ಇತ್ತು. ಈ ಬೆಲೆಯು ವರ್ಷದ ಕೊನೆಯಲ್ಲಿ 79-80 ಟೆಂಗೆಗೆ (ಅಂದಾಜು 13.64 ರೂಪಾಯಿ) ಏರಿಕೆಯಾಗಿದೆ. ನಂತರ 2022ರ ಆರಂಭದಲ್ಲಿ ಈ ಬೆಲೆ ಏಕಾಏಕಿ 120 ಟೆಂಗೆ (ಅಂದಾಜು 20.47 ರೂಪಾಯಿ)ಗೆ ಏರಿಕೆಯಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

  • ಹೊಸ ವರ್ಷಕ್ಕೆ ಬೆಲೆ ಏರಿಕೆಯ ಬಿಸಿ – ಯಾವ ವಸ್ತುಗಳು ಎಷ್ಟು ಏರಿಕೆ?

    ಹೊಸ ವರ್ಷಕ್ಕೆ ಬೆಲೆ ಏರಿಕೆಯ ಬಿಸಿ – ಯಾವ ವಸ್ತುಗಳು ಎಷ್ಟು ಏರಿಕೆ?

    ಹೊಸ ವರ್ಷದ ಸಂಭ್ರಮದಲ್ಲಿ ಬೆಲೆಏರಿಕೆ ಯೊಂದು ಜನರು ತಲೆ ಕೆಡಿಸಿಕೊಳ್ಳುವ ವಿಚಾರ. ಕೊರೋನಾ ಸಂಕಷ್ಟದ ನಡುವೆ ಜನರು ಹೊಸ ವರ್ಷದ ಆಚರಣೆಯಲ್ಲಿ ಬೆಲೆ ಏರಿಕೆಯ ಬಿಸಿಯನ್ನು ಎದುರಿಸಲೇ ಬೇಕಾಗಿದೆ. ಈ ಬಾರಿ ಯಾವೆಲ್ಲಾ ವಸ್ತುಗಳ ಬೆಲೆ ದುಬಾರಿಯಾಗಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

    ನಮಗೆ ದಿನನಿತ್ಯ ಸಾಕಷ್ಟು ಉಪಯುಕ್ತವಾಗಿರುವ ಸೇವೆಗಳು ಓಲಾ ಉಬರ್ ಸೇರಿದಂತೆ ಫುಡ್ ಡೆಲಿವರಿಗಳಾದ ಸ್ವಿಗ್ಗಿ, ಝೊಮ್ಯಾಟೊ ಕೂಡಾ ದುಬಾರಿಯಾಗಿದೆ. ಇದರೊಂದಿಗೆ ಪಾದರಕ್ಷೆ, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ವಸ್ತುಗಳ ಬೆಲೆಯೂ ಏರಿಕೆ ಯಾಗಿದ್ದು, ಜನರು ಹೊಸ ವರ್ಷದ ಸಂಭ್ರಮದಲ್ಲಿ ಈ ಎಲ್ಲಾ ಬೆಲೆ ಏರಿಕೆಗಳನ್ನು ಎದುರಿಸಬೇಕಾಗಿದೆ.  ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ

    ಆನ್‍ಲೈನ್ ಆಟೋ, ಕಾರು ಸೇವೆಗಳು ದುಬಾರಿ:
    ಜನವರಿ 1ರಿಂದ ಓಲಾ, ಉಬರ್, ರ್ಯಾಪಿಡೋಗಳಂತಹ ಅಪ್ಲಿಕೇಶನ್‍ಗಳ ಮೂಲಕ ಆನ್‍ಲೈನ್‍ನಲ್ಲಿ ವಾಹನಗಳನ್ನು ಬುಕ್ ಮಾಡಿ ಪ್ರಯಾಣಿಸಿತ್ತಿದ್ದ ಸೇವೆಗಳು ದುಬಾರಿಯಾಗಿದೆ. ಶೇ.5 ರಷ್ಟು ಜಿಎಸ್‍ಟಿ ಯನ್ನು ಈ ಸೇವೆಗಳ ಮೇಲೆ ವಿಧಿಸಲಾಗಿದೆ. ಆದರೆ ಗ್ರಾಹಕರು ನೇರವಾಗಿ ಆ್ಯಪ್ ರಹಿತವಾಗಿ ರಿಕ್ಷಾ, ಕಾರುಗಳನ್ನು ಬುಕ್ ಮಾಡಿದರೆ ಶೇ.5ರ ತೆರಿಗೆ ಇರುವುದಿಲ್ಲ.

    ದಿನಬಳಕೆಯ ವಸ್ತುಗಳ ಬೆಲೆ ತುಟ್ಟಿ:
    ಗೃಹಬಳಕೆಯಲ್ಲಿ ಅತೀ ಮುಖ್ಯವಾದ ವಸ್ತುಗಳು ಹಾಲು, ಹಣ್ಣು, ಕಾಫಿ, ಟೀ, ತಪು ಪಾನೀಯಗಳೊಂದಿಗೆ, ಸೋಪ್, ಪೇಸ್ಟ್‍ಗಳ ಬೆಲೆಯೂ ಮುಂದಿನ 2-3 ತಿಂಗಳುಗಳಲ್ಲಿ ಶೇ.4 ರಿಂದ ಶೇ.10ಕ್ಕೆ ಏರಿಕೆಯಾಗಲಿದೆ. ಈ ಹಿಂದೆ 2020ರ ಡಿಸೆಂಬರ್‍ನಲ್ಲಿ ಇವುಗಳ ಬೆಲೆ ಶೇ.5 ರಿಂದ ಶೇ.12 ರಷ್ಟು ಏರಿಕೆಯಾಗಿತ್ತು. ಇದನ್ನೂ ಓದಿ: ಗುಡ್‍ನ್ಯೂಸ್ – ಜವಳಿ ಮೇಲಿನ ಜಿಎಸ್‍ಟಿ ಏರಿಕೆ ಇಲ್ಲ

    ಆನ್‍ಲೈನ್ ಫುಡ್ ಡೆಲಿವರಿ ದುಬಾರಿ:
    ಸ್ವಿಗ್ಗಿ, ಝೊಮ್ಯಾಟೋಗಳಂತಹ ಆನ್‍ಲೈನ್ ಆಹಾರ ವಿತರಣಾ ಸೇವೆಗಳ ಮೇಲೆ ಶೇ.5 ರಷ್ಟು ಜಿಎಸ್‍ಟಿ ಹೇರಲಾಗಿದೆ. ಈ ಸೇವೆಗಳೂ ಜನವರಿ 1ರಿಂದಲೇ ದುಬಾರಿಯಾಗಿವೆ.

    ಪಾದರಕ್ಷೆಗಳ ಮೇಲೆ ಜಿಎಸ್‍ಟಿ:
    1,000 ರೂ.ಗೂ ಅಧಿಕ ಬೆಲೆಯ ಪಾದರಕ್ಷೆಗಳ ಮೇಲೆ ಶೇ.12ರಷ್ಟು ಜಿಎಸ್‍ಟಿ ದರವನ್ನು ವಿಧಿಸಲಾಗಿದೆ. ಇದರ ಬೆಲೆ ಏರಿಕೆಯೂ ಜನವರಿ 1 ರಿಂದಲೇ ಅನುಷ್ಠಾನವಾಗಿದೆ. ಇದನ್ನೂ ಓದಿ: ಎಲ್‌ಪಿಜಿ ಬಳಕೆದಾರರಿಗೆ ಶುಭಸುದ್ದಿ – ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 102.5 ರೂ. ಕಡಿತ

    ಆಟೋಮೊಬೈಲ್ ಇನ್ನೂ ಕಾಸ್ಟ್ಲಿ:
    ಸಾಮಾನ್ಯ ಜನರು ವಾಹನಗಳನ್ನು ಖರೀದಿ ಮಾಡುವುದೇ ದೊಡ್ಡ ವಿಚಾರ ಹೀಗಿರುವಾಗಲೂ ಆಟೋಮೊಬೈಲ್‍ಗಳ ದರವನ್ನು ದುಬಾರಿ ಮಾಡುವ ಬಗ್ಗೆ ಕಂಪನಿಗಳು ನಿರ್ಧರಿಸಿವೆ. ಶೇ.4 ರಿಂದ ಶೇ.5ಕ್ಕೆ ಏರಿಕೆ ಮಾಡುವ ಬಗ್ಗೆ ಕಂಪನಿಗಳು ಯೋಜಿಸಿದ್ದು,

    ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯ ಓಟ:
    ಎಲೆಕ್ಟ್ರಾನಿಕ್ ಕಂಪನಿಗಳು ಈಗಾಗಲೇ ತಮ್ಮ ಉತ್ಪನ್ನಗಳ ಬೆಲೆಯನ್ನು ಶೇ.4ರಿಂದ ಶೇ.10 ರ ವರೆಗೆ ಏರಿಕೆ ಮಾಡುವ ಬಗ್ಗೆ ಯೋಜಿಸಿವೆ. ಕೇವಲ 2-3 ತಿಂಗಳುಗಳಲ್ಲೇ ಬೆಲೆ ಏರಿಕೆಯಾಗುವ ಸುಳಿವು ನೀಡಿದೆ. ಇದನ್ನೂ ಓದಿ: ಯೋಗ ಸಂದೇಶದ ಮೂಲಕ ಹೊಸ ವರ್ಷ ಬರಮಾಡಿಕೊಂಡ ವಿದ್ಯಾರ್ಥಿಗಳು

    ಎಟಿಎಂ ವಿತ್‍ಡ್ರಾ ಶುಲ್ಕ ಹೆಚ್ಚಳ:
    ಈ ಹಿಂದೆ ಎಟಿಎಂನಲ್ಲಿ ಉಚಿತ ವಿತ್‍ಡ್ರಾದ ಮಿತಿಯನ್ನು ದಾಟಿದ ಬಳಿಕ ಪ್ರತಿ ವಿತ್‍ಡ್ರಾಗೂ 20 ರೂ. ಕಡಿತವಾಗುತ್ತಿತ್ತು. ಇದೀಗ ಇದರ ಬೆಲೆಯೂ 21 ರೂ.ಗೆ ಏರಿಕೆಯಾಗಿದೆ.

    ಜಿಎಸ್‍ಟಿ ಪಾವತಿಗೆ ಆಧಾರ್ ಕಡ್ಡಾಯ:
    ಜಿಎಸ್‍ಟಿ ಪಾವತಿಗಳಲ್ಲಿ ನಡೆಯುತ್ತಿದ್ದ ವಂಚನೆಗಳನ್ನು ತಡೆಯಲು ಆಧಾರ್ ಕಡ್ಡಾಯಗೊಳಿಸಿದೆ. ಜಿಎಸ್‍ಟಿ ಪಾವತಿಯ ಬಳಿಕ ರೀಫಂಡ್ ಮಾಡುವ ಅವಕಾಶದಿಂದ ಈ ವಂಚನೆಗಳು ನಡೆಯುತ್ತಿದ್ದು, ಇದೀಗ ಜಿಎಸ್‍ಟಿ ರೀಫಂಡ್ ಕ್ಲೇಮ್‍ಗೆ ಆಧಾರ್ ಕಡ್ಡಾಯವಾಗಲಿದೆ.

  • ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ

    ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ

    ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ (ಜಿಎಸ್‍ಟಿ) ದರಗಳ ಬದಲಾವಣೆಯಾಗಿದ್ದು, ಹೊಸ ನಿಯಮಗಳು 2022ರ ಜನವರಿ 1ರಿಂದ ಜಾರಿಯಾಗಲಿದೆ. ಹೊಸ ದರಗಳಲ್ಲಿ ಯಾವುದರ ಬೆಲೆ ಹೆಚ್ಚಾಗಲಿದೆ ಎಂಬ ಮಾಹಿತಿ ಇಲ್ಲಿದೆ.

    ಜಿಎಸ್‍ಟಿ ಕೌಂಸಿಲ್‍ನ ಶಿಫಾರಸುಗಳ ಆಧಾರದ ಮೇಲೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಐಸಿ) ಉಡುಪು, ಜವಳಿ ಹಾಗೂ ಪಾದರಕ್ಷೆಗಳಿಗೆ ಅನ್ವಯವಾಗುವ ಜಿಎಸ್‍ಟಿ ದರವನ್ನು ಹೆಚ್ಚಿಸಿದೆ. ಇವುಗಳ ಮೇಲಿನ ದರಗಳು ಜನವರಿ 1ರಿಂದ ಶೇ.5ರಿಂದ ಶೇ.12ಕ್ಕೆ ಏರಿಕೆಯಾಗಲಿದೆ.

    1000 ರೂ.ಗೂ ಹೆಚ್ಚಿನ ಬೆಲೆಯ ಉಡುಪುಗಳ ಮೇಲಿನ ಜಿಎಸ್‍ಟಿ ಹೆಚ್ಚಾಗಲಿದ್ದು, ಇದರೊಂದಿಗೆ ಬಟ್ಟೆಗಳು, ಸಿಂಥೆಟಿಕ್ ನೂಲು, ಹೊದಿಕೆಗಳು, ಟೆಂಟ್‍ಗಳು ಹಾಗೂ ಇತರ ರೀತಿಯ ಜವಳಿ ವಸ್ತುಗಳ ದರಗಳು ಹೆಚ್ಚಾಗಲಿದೆ. 1000 ರೂ.ಗೂ ಹೆಚ್ಚು ದರದ ಪಾದರಕ್ಷೆಗಳ ಮೇಲಿನ ಜಿಎಸ್‍ಟಿ ಕೂಡಾ ಶೇ. 5ರಿಂದ ಶೇ. 12ಕ್ಕೆ ಏರಿಕೆಯಾಗಲಿದೆ. ಇದನ್ನೂ ಓದಿ: ದೇಶದಲ್ಲಿ 2021ರಲ್ಲಿ 126 ಹುಲಿಗಳು ಸಾವು – ಹತ್ತು ವರ್ಷಗಳಲ್ಲೇ ಹೆಚ್ಚು

    ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡುವ ಆಟೋ ರೈಡ್‍ಗಳಿಗೂ ಶೇ. 5ರಷ್ಟು ಜಿಎಸ್‍ಟಿ ವಿಧಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಇದರಿಂದ ಓಲಾ ಹಾಗೂ ಉಬರ್ ನಂತಹ ಆನ್‍ಲೈನ್ ಅಪ್ಲಿಕೇಶನ್‍ಗಳ ಮೂಲಕ ಬುಕ್ ಮಾಡುವ ಆಟೋ ರಿಕ್ಷಾದ ದರವೂ ದುಬಾರಿಯಾಗಲಿದೆ. ಆನ್‍ಲೈನ್‍ನಲ್ಲಿ ಬುಕ್ ಮಾಡದೇ ರಸ್ತೆಗಳಲ್ಲಿ ಸಿಗುವ ಆಟೋ ರಿಕ್ಷಾಗಳು ಮಾತ್ರ ಜಿಎಸ್‍ಟಿ ಮುಕ್ತವಾಗಿರುತ್ತದೆ. ಇದನ್ನೂ ಓದಿ: ಚುನಾವಣಾ ಫಲಿತಾಂಶದಲ್ಲಿ ಅತ್ತೆ ಎದುರು ಗೆದ್ದು ಬೀಗಿದ ಸೊಸೆ!

    ಫುಡ್ ಡೆಲಿವರಿಗಳಂತಹ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಲಾಗುವ ಆಹಾರಗಳಿಗೂ ಜಿಎಸ್‍ಟಿ ನಿಯಮ ಬದಲಾಗಲಿದೆ. ಸ್ವಿಗ್ಗಿ, ಝೊಮೆಟೋಗಳಂತಹ ಆನ್‍ಲೈನ್ ಫುಡ್ ಡೆಲಿವರಿ ಅಪ್ಲಿಕೇಶನ್‍ಗಳಿಗೂ ಶೇ. 5ರಷ್ಟು ಜಿಎಸ್‍ಟಿ ವಿಧಿಸಲಾಗಿದೆ. ಆದರೆ ಈ ನಿಯಮ ಫುಡ್ ಡೆಲಿವರಿ ಕಂಪನಿ ಹಾಗೂ ಹೊಟೇಲ್‍ಗಳ ನಡುವಿನ ವ್ಯವಹಾರಕ್ಕೆ ಪರಿಣಾಮ ಬೀರಲಿದ್ದು, ಇದರ ಬಗ್ಗೆ ಗ್ರಾಹಕರು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ.

  • ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ?

    ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ?

    ಬೆಂಗಳೂರು: ಬೇಸಿಗೆಗೂ ಮುನ್ನವೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಬಿಸಿ ಎದುರಾಗಿದ್ದು, ವಿದ್ಯುತ್ ದರ ಹೆಚ್ಚಳಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ.

    ಪ್ರತಿ ಯೂನಿಟ್‌ಗೆ 1.50 ಪೈಸೆ ಹೆಚ್ಚಳ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಪ್ರತಿ ಯುನಿಟ್‌ಗೆ 1 ರೂ. 50 ಪೈಸೆ ಹೆಚ್ಚಳ ಮಾಡುವಂತೆ ಕೆಇಆರ್‌ಸಿಗೆ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರವೇ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ನಷ್ಟದ ನೆಪ ಹೇಳಿ ವಿದ್ಯುತ್ ದರ ಪ್ರತಿ ಯುನಿಟ್‌ಗೆ 1.50 ರೂ. ಹೆಚ್ಚಳ ಮಾಡುವಂತೆ ಕೆಇಆರ್‌ಸಿಗೆ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ. ಇದನ್ನೂ ಓದಿ: ಮಕ್ಕಳಿಗೂ ವಕ್ಕರಿಸಿತು ಹೊಸ ತಳಿ- ಮಹಾರಾಷ್ಟ್ರದಲ್ಲಿ 3 ವರ್ಷದ ಮಗುವಿನಲ್ಲಿ ಓಮಿಕ್ರಾನ್‌ ಪತ್ತೆ

    ಈಗಾಗಲೇ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಬೆಸ್ಕಾಂ ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ಶೀಘ್ರವೇ ವಿದ್ಯುತ್ ದರವೂ ಹೆಚ್ಚಳವಾಗುವ ಸಾಧ್ಯತೆ ಇದೆ.

  • ಅಡುಗೆ ಎಣ್ಣೆ ಇನ್ನಷ್ಟು ದುಬಾರಿ

    ಅಡುಗೆ ಎಣ್ಣೆ ಇನ್ನಷ್ಟು ದುಬಾರಿ

    – ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಬೆಂಗಳೂರು: ಕೊರೊನಾದಿಂದಾಗಿ ಜನ ಕಂಗಾಲಾಗಿದ್ದಾರೆ. ಇದರ ಮಧ್ಯೆ ಬೆಲೆ ಏರಿಕೆ ಮುಂದುವರಿದಿದ್ದು, ಪೆಟ್ರೋಲ್, ಡೀಸೆಲ್ ಜೊತೆಗೆ ಅಡುಗೆ ಎಣ್ಣೆ ಸಹ ಇದೀಗ ಇನ್ನಷ್ಟು ದುಬಾರಿಯಾಗಿದೆ.

    ವಿವಿಧ ಬಗೆಯ ಅಡುಗೆ ಎಣ್ಣೆ ದರಗಳಲ್ಲಿ 15- 20 ರೂಪಾಯಿ ಹೆಚ್ಚಾಗಿದೆ. 140ರೂ. ಇದ್ದ ಒಂದು ಲೀಟರ್ ಸನ್‍ಪ್ಯೂರ್ ಇದೀಗ 155 ರೂ. ಆಗಿದೆ. ಅದೇ ರೀತಿ ಗೋಲ್ಡ್ ವಿನ್ನರ್ 150 ರೂ.ನಿಂದ 160 ರೂ., ಸಫೋಲಾ 180 ರೂ.ನಿಂದ 200 ರೂ., ಫ್ರೀಡಂ 150 ರೂ.ನಿಂದ 160 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಇನ್ನು ಪೆಟ್ರೋಲ್, ಡೀಸೆಲ್ ದರ ಸಹ ಸತತ ನಾಲ್ಕು ದಿನಗಳಿಂದ ಏರಿಕೆ ಕಾಣುತ್ತಿದ್ದು, ಬಹುತೇಕ ಪ್ರಮುಖ ನಗರಗಳಲ್ಲಿ 100 ರೂ. ಗಡಿ ದಾಟಿದೆ. ಇಂದು ಸಹ ಪೆಟ್ರೋಲ್ ಬೆಲೆ 25 ಪೈಸೆ ಹಾಗೂ ಡೀಸೆಲ್ ಬೆಲೆ 30 ಪೈಸೆ ಹೆಚ್ಚಳವಾಗಿದೆ.

    ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಜಾಗತಿಕ ಉತ್ಪಾದನೆಯಲ್ಲಿ ಅಡಚಣೆ ಹಿನ್ನೆಲೆ ಇಂಧನ ಕಂಪನಿಗಳು ತಮ್ಮ ಸಂಗ್ರಹ ಸಾಮಥ್ರ್ಯಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಹೊರತೆಗೆಯುತ್ತಿವೆ. ಹೀಗಾಗಿ ಕಚ್ಚಾ ತೈಲದ ಬೆಲೆ ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಟ ಮಟ್ಟ ತಲುಪಿದೆ. ಕಳೆದ ಕೆಲವು ದಿನಗಳಿಂದ ಪ್ರತಿ ಬ್ಯಾರಲ್‍ಗೆ 78 ಡಾಲರ್ ನೀಡಿ ಭಾರತ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದೆ.