Tag: price hike

  • ಏರ್‌ಟೆಲ್‌ ಪ್ಯಾಕ್‌ ದರ ಏರಿಕೆ: ಶೀಘ್ರವೇ ಮೊಬೈಲ್‌ ರಿಚಾರ್ಜ್‌ ದುಬಾರಿ

    ಏರ್‌ಟೆಲ್‌ ಪ್ಯಾಕ್‌ ದರ ಏರಿಕೆ: ಶೀಘ್ರವೇ ಮೊಬೈಲ್‌ ರಿಚಾರ್ಜ್‌ ದುಬಾರಿ

    ನವದೆಹಲಿ: ಶೀಘ್ರವೇ ಟೆಲಿಕಾಂ(Telecom) ಕಂಪನಿಗಳು ತಮ್ಮ ಪ್ಯಾಕ್‌ಗಳ ದರಗಳನ್ನು ಏರಿಸುವ ಸಾಧ್ಯತೆಯಿದೆ.

    ಈಗಾಗಲೇ ಏರ್‌ಟೆಲ್‌(Airtel) ಕಂಪನಿ ಎರಡು ಸರ್ಕಲ್‌ನಲ್ಲಿ ಶೇ.57ರಷ್ಟು ದರವನ್ನು ಏರಿಸಿದ್ದು ಉಳಿದ ಕಂಪನಿಗಳು ಏರ್‌ಟೆಲ್‌ ಕ್ರಮವನ್ನು ಅನುಸರಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಶೀಘ್ರವೇ ಭಾರತದ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಏಕರೂಪದ ಚಾರ್ಜರ್

    ಹರ್ಯಾಣ ಮತ್ತು ಒಡಿಶಾ ಸರ್ಕಲ್‌ನಲ್ಲಿ ಏರ್‌ಟೆಲ್‌ ಕನಿಷ್ಟ ರಿಚಾರ್ಚ್‌ ದರವನ್ನು ಶೇ.57ರಷ್ಟು ಏರಿಕೆ ಮಾಡಿದೆ. ಈ ಮೊದಲು 99 ರೂ. ರಿಚಾರ್ಜ್‌ ಮಾಡಿದರೆ 28 ದಿನಗಳ ವ್ಯಾಲಿಡಿಟಿ, 99 ರೂ. ಟಾಕ್‌ ಟೈಂ ಮತ್ತು 200 ಎಂಬಿ ಡೇಟಾ ಸಿಗುತ್ತಿತ್ತು. ಈಗ ಈ ಪ್ಯಾಕ್‌ ದರವನ್ನು155 ರೂ.ಗೆ ಏರಿಕೆ ಮಾಡಲಾಗಿದೆ.  28 ದಿನಗಳ ವ್ಯಾಲಿಡಿಟಿಯ ಜೊತೆಗೆ ಹೆಚ್ಚುವರಿಯಾಗಿ ಅನ್‌ಲಿಮಿಟೆಡ್‌ ಕಾಲ್‌ ಮತ್ತು 1 ಜಿಬಿ ಡೇಟಾ ಮತ್ತು 300 ಉಚಿತ ಎಸ್‌ಎಂಎಸ್‌ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಜಿಎಸ್‌ಟಿ ಶಾಕ್ – ಯಾವ ಯಾವ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆ?

    ಜಿಎಸ್‌ಟಿ ಶಾಕ್ – ಯಾವ ಯಾವ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆ?

    ನವದೆಹಲಿ: ಉಪ್ಪಿನಿಂದ ಹಿಡಿದು ಬೇಳೆಯವರೆಗೂ, ತರಕಾರಿಯಿಂದ ಹಿಡಿದು ಹಾಲಿನ ಪ್ಯಾಕೆಟ್‌ವರೆಗೂ ಆನೇಕ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಲಾಗಿದ್ದಾರೆ. ಇದು ಸಾಲದು ಎಂದು ಸೋಮವಾರದಿಂದ ನಿತ್ಯದ ಅಗತ್ಯ ವಸ್ತುಗಳ ಮೇಲೆ ಗೂಡ್ಸ್ ಆಂಡ್ ಸರ್ವೀಸ್ ಟ್ಯಾಕ್ಸ್ ಹೇರಿ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ.

    ಕಳೆದ ತಿಂಗಳು ನಡೆದ ಜಿಎಸ್‌ಟಿಯ 47ನೇ ಸಮಾವೇಶದಲ್ಲಿ ಹಲವು ರೀತಿಯ ದೈನಂದಿನ ಬಳಕೆಯ ಸರಕುಗಳ ಮೇಲೆ ಜಿಎಸ್‌ಟಿ ವಿಧಿಸಿ ತೀರ್ಮಾನ ತೆಗೆದುಕೊಂಡಿದೆ. ಇದು ನಾಳೆಯಿಂದ ಜಾರಿಗೆ ಬರಲಿದ್ದು, ನೇರವಾಗಿ ಮತ್ತು ಪರೋಕ್ಷವಾಗಿ ಹತ್ತು ಹಲವು ರೀತಿಯಲ್ಲಿ ಜನಸಾಮಾನ್ಯರಿಗೆ ಇನ್ನಷ್ಟು ಕರಭಾರ ಹೇರಲಿದೆ.

    ಜಿಎಸ್‌ಟಿಯಿಂದಾಗಿ ಜನಸಾಮಾನ್ಯರು, ಹೋಟೆಲ್ ಉದ್ಯಮದವರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಇದನ್ನು ಕೇಳಿಸಿಕೊಳ್ಳುವ ವ್ಯವಧಾನ ಕೇಂದ್ರ ಸರ್ಕಾರಕ್ಕೆ ಇಲ್ಲವಾಗಿದೆ. ಯಾವ್ಯಾವ ವಸ್ತುಗಳು ನಾಳೆಯಿಂದ ದುಬಾರಿ ಆಗಲಿವೆ ಎನ್ನುವ ಮಾಹಿತಿ ಇಲ್ಲಿದೆ.

    ಯಾವುದಕ್ಕೆ ಎಷ್ಟೆಷ್ಟು ಜಿಎಸ್‌ಟಿ?
    ಪ್ಯಾಕೆಟ್ ಹಾಲು, ಮೊಸರು, ಪ್ಯಾಕೆಟ್ ಲಸ್ಸಿ, ಮಜ್ಜಿಗೆ, ಉಪ್ಪಿನಕಾಯಿ, ತರಕಾರಿ, ಪ್ಯಾಕ್ ಮಾಡಿದ ಹಪ್ಪಳ, ಪ್ಯಾಕ್ ಮಾಡಿದ ಜೇನುತುಪ್ಪ, ಪ್ಯಾಕ್ ಮಾಡಿದ ಬೆಲ್ಲ, ಪ್ಯಾಕ್ ಮಾಡಿದ ಗೋಧಿ ಹಿಟ್ಟು, ಪ್ಯಾಕ್ ಮಾಡಿದ ಅಕ್ಕಿ, ಸಾವಯವ ಆಹಾರ, ಕಾಂಪೋಸ್ಟ್ ಗೊಬ್ಬರ, ಮೀನು ಇವಿಷ್ಟಕ್ಕೆ ಶೇ.5 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಇದನ್ನೂ ಓದಿ: ಸೋಮವಾರ ದೇಶದ 15ನೇ ರಾಷ್ಟ್ರಪತಿ ಚುನಾವಣೆ – ಜೂನ್ 21ಕ್ಕೆ ಮತ ಎಣಿಕೆ

    ಹೋಟೆಲ್ ರೂಮ್ಸ್(1,000 ರೂ. ಒಳಗಿನ ಬಾಡಿಗೆ) – ಶೇ.12, ಹಾಸ್ಪಿಟಲ್ ರೂಮ್ಸ್(5,000 ರೂ. ಮೇಲ್ಪಟ್ಟ ಬಾಡಿಗೆ) – ಶೇ.5, ಸೋಲಾರ್ ವಾಟರ್ ಹೀಟರ್ – ಶೇ.5 ರಿಂದ ಶೇ.12ಕ್ಕೆ ಹೆಚ್ಚಳವಾಗಿದೆ. ಚರ್ಮದ ಉತ್ಪನ್ನಗಳು – ಶೇ.5 ರಿಂದ ಶೇ.12ಕ್ಕೆ ಜಿಎಸ್‌ಟಿ ಹೆಚ್ಚಳವಾಗಿದೆ.

    ಭೂಪಟ, ಅಟ್ಲಾಸ್ – ಶೇ.12, ಪ್ರಿಂಟಿಂಗ್, ಇಂಕ್, ಪೆನ್ಸಿಲ್, ಮೆಂಡರ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಡ್ರಾಯಿಂಗ್‌ಗೆ ಬಳಸುವ ಉಪಕರಣಗಳು – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಬ್ಲೇಡ್, ಸ್ಪೂನ್, ಫೋರ್ಕ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ 944 ಪಾಸಿಟಿವ್ ಕೇಸ್ – 3 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಎಲ್‌ಇಡಿ ಬಲ್ಬ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಮೋಟಾರ್ ಪಂಪ್, ಸೈಕಲ್ ಪಂಪ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ರುಬ್ಬವ ಯಂತ್ರ, ಡೈರಿ ಮೆಷಿನ್ – ಶೇ.12 ರಿಂದ ಶೇ.18ಕ್ಕೆ ಜಿಎಸ್‌ಟಿ ಹೆಚ್ಚಳವಾಗಿದೆ.

    ಜಿಎಸ್‌ಟಿ ಇಳಿಕೆ:
    ಆರ್ಥೋಪೆಡಿಕ್ ಉಪಕರಣ – ಶೇ.12 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಟ್ರಾನ್ಸ್‌ಪೋರ್ಟ್ ಗೂಡ್ಸ್ – ಶೇ.18 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಬಾಡಿಗೆ ಟ್ರಕ್, ಇತರೆ ವಾಹನಗಳ ಬಾಡಿಗೆ ಮೇಲಿನ ಸುಂಕ ಇಳಿಕೆಯಾಗಿದೆ.

    ಜಿಎಸ್‌ಟಿ ಹೇರಿಕೆ ಬೆನ್ನಲ್ಲೇ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ತನ್ನ ಉತ್ಪನ್ನಗಳ ಬೆಲೆಯನ್ನು ಸಹಜವಾಗಿಯೇ ಏರಿಕೆ ಮಾಡಿದೆ. ಸದ್ಯ ಹಾಲಿನ ದರವನ್ನು ಹೆಚ್ಚಳ ಮಾಡಿಲ್ಲ. ಉಳಿದಂತೆ ಯಾವ ಯಾವ ಉತ್ಪನ್ನಗಳ ಬೆಲೆ ಎಷ್ಟೆಷ್ಟು ಏರಿಕೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.

    ನಂದಿನಿ ಹಾಲಿನ ಬೆಲೆ ಸದ್ಯಕ್ಕೆ ಏರಿಕೆಯಾಗಿಲ್ಲ. ಲೀಟರ್ ಮೊಸರಿನ ಬೆಲೆ 43 ರೂ.ನಿಂದ 46 ರೂ.ಗೆ ಏರಿಕೆಯಾಗಿದೆ. ಅರ್ಧ ಲೀಟರ್ ಮೊಸರು – 22 ರೂ.ನಿಂದ 24 ರೂ.ಗೆ ಏರಿಕೆಯಾಗಿದೆ. ಮಜ್ಜಿಗೆ 200 ಎಂಎಲ್ – 7 ರೂ.ನಿಂದ 8 ರೂ.ಗೆ ಏರಿಕೆಯಾಗಿದೆ. ಪ್ಯಾಕೆಟ್ ಲಸ್ಸಿ – 10 ರೂ.ನಿಂದ 11ರೂ.ಗೆ ಏರಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತಾಜ್‍ ಮಹಲ್ ನಿರ್ಮಾಣದಿಂದ ಪೆಟ್ರೋಲ್ ಬೆಲೆ ಏರಿಕೆ: ಓವೈಸಿ ವ್ಯಂಗ್ಯ

    ತಾಜ್‍ ಮಹಲ್ ನಿರ್ಮಾಣದಿಂದ ಪೆಟ್ರೋಲ್ ಬೆಲೆ ಏರಿಕೆ: ಓವೈಸಿ ವ್ಯಂಗ್ಯ

    ನವದೆಹಲಿ: ಶಹಜಹಾನ್ ತಾಜ್ ಮಹಲ್ ನಿರ್ಮಿಸದಿದ್ದರೆ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 40 ರೂ. ಆಗುತ್ತಿತ್ತು ಎಂದು ಸಂಸದ ಅಸಾದುದ್ದೀನ್ ಓವೈಸಿ ವ್ಯಂಗ್ಯವಾಡಿದರು.

    ದೇಶದ ಎಲ್ಲಾ ಸಮಸ್ಯೆಗಳಿಗೆ ಮೊಘಲರು ಮತ್ತು ಮುಸ್ಲಿಮರನ್ನು ಕಾರಣವೆಂದು ಬಿಜೆಪಿ ದೂಷಿಸುತ್ತಿದೆ ಎಂದು ಆರೋಪಿಸಿ ಮಾತನಾಡಿದ ಅವರು, ದೇಶದಲ್ಲಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಜೊತೆಗೆ ಹಣದುಬ್ಬರವು ಹೆಚ್ಚುತ್ತಿದೆ. ಡೀಸೆಲ್ ದರ 102 ರೂ.ಗೆ ಮಾರಾಟವಾಗುತ್ತಿದೆ. ಇದಕ್ಕೆಲ್ಲಾ ನಿಜವಾದ ಹೊಣೆ ಪ್ರಧಾನಿ ಮೋದಿಯಲ್ಲ. ಬದಲಿಗೆ ಔರಂಗಜೇಬ್ ಆಗಿದ್ದಾನೆ ಎಂದು ಟೀಕಿಸಿದರು. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಡಿಕೆಶಿ ಕೆಂಪೇಗೌಡ ಉತ್ಸವ ಟಕ್ಕರ್

    ಯುವಜನರು ನಿರುದ್ಯೋಗಿಗಳು ಆಗಲು ಅಕ್ಬರ್ ಕಾರಣವಾದರೆ, ಪೆಟ್ರೋಲ್ ಬೆಲೆ ಲೀಟರ್‌ಗೆ 115 ರೂ. ಏರಿಕೆ ಆಗಿರುವುದಕ್ಕೆ ತಾಜ್‍ಮಹಲ್ ಕಟ್ಟಿದ ಶಹಜಹಾನ್ ಕಾರಣ ಎಂದರು. ಶಹಜಹಾನ್ ತಾಜ್‍ಮಹಲ್ ಅನ್ನು ಕಟ್ಟದಿದ್ದರೆ ಇಂದು ಪೆಟ್ರೊಲ್ 40ಕ್ಕೆ ಮಾರಾಟವಾಗುತ್ತಿತ್ತು. ತಾಜ್ ಮಹಲ್ ಹಾಗೂ ಕೆಂಪುಕೊಟೆಯನ್ನು ಕಟ್ಟುವ ಮೂಲಕ ಅವರು ತಪ್ಪು ಮಾಡಿದ್ದಾರೆ. ಅದರ ಬದಲು ಆ ಹಣವನ್ನು ಉಳಿಸಿ 2014ರಲ್ಲಿ ಮೋದಿ ಅವರಿಗೆ ತಲುಪಿಸಬೇಕಾಗಿತ್ತು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಹವಾಮಾನ ವೈಪರೀತ್ಯ – ಅಮರನಾಥ ಯಾತ್ರಾ ತಾತ್ಕಾಲಿಕ ಸ್ಥಗಿತ

    Live Tv
    [brid partner=56869869 player=32851 video=960834 autoplay=true]

  • ಪಾಕ್‍ನಲ್ಲಿ ದಾಖಲೆ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಏರಿಕೆ

    ಪಾಕ್‍ನಲ್ಲಿ ದಾಖಲೆ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಏರಿಕೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 24.03 ರೂ. ಏರಿಕೆ ಆಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ಪ್ರತಿ ಲೀಟರ್‌ಗೆ 233.89 ರೂ. ಹೆಚ್ಚಳವಾಗಿದೆ.

    ಈ ಬಗ್ಗೆ ಪಾಕಿಸ್ತಾನದ ಫೆಡರಲ್ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಮಾತನಾಡಿ, ಇನ್ನು ಮುಂದೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಗಳನ್ನು ಭರಿಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ ಎಂದು ತಿಳಿಸಿದರು.

    ಇಂದಿನಿಂದ ಪ್ರತಿ ಲೀಟರ್ ಪೆಟ್ರೋಲ್ 233.89 ರೂ., ಡೀಸೆಲ್ 263.31 ರೂ., ಸೀಮೆ ಎಣ್ಣೆ 211.43 ರೂ., ಲೈಟ್ ಡೀಸೆಲ್ ಆಯಿಲ್‌ 207.47 ರೂ. ಏರಿಕೆ ಆಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‍ಗೆ ಹೋಗಿದ್ದ ಇಬ್ಬರು US ಪ್ರಜೆಗಳು ನಾಪತ್ತೆ

    ಇದೇ ವೇಳೆ ಸಚಿವರು ಹಿಂದಿನ ಸರ್ಕಾರದ ನೀತಿಗಳನ್ನು ಟೀಕಿಸಿ, ಈ ನೀತಿಗಳಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ ಎಂದು ಕಿಡಿಕಾರಿದರು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಸಬ್ಸಿಡಿಗಳನ್ನು ನೀಡುವ ಮೂಲಕ ಉದ್ದೇಶಪೂರ್ವಕವಾಗಿ ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಿದ್ದಾರೆ. ಅಧಿಕಾರದಲ್ಲಿರುವ ಸರ್ಕಾರವು ಆ ನಿರ್ಧಾರಗಳ ಭಾರವನ್ನು ಭರಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಯುಪಿಯಲ್ಲಿ ಬುಲ್ಡೋಜರ್ ಘರ್ಜನೆ- ಇಂದು ಸುಪ್ರೀಂ ಕೋರ್ಟ್ ವಿಚಾರಣೆ

    Live Tv

  • ಇಂಧನ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಏರಿ ಬಂದ ವರ

    ಇಂಧನ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಏರಿ ಬಂದ ವರ

    ಭುವನೇಶ್ವರ್: ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳ ವಿರುದ್ಧ ಪ್ರತಿಭಟನೆಗಾಗಿ ವರನೊಬ್ಬ ಮದುವೆಗೆ ಸೈಕಲ್‍ನಲ್ಲಿ ಬಂದ ಘಟನೆ ಒಡಿಶಾದ ಭುವನೇಶ್ವರ್‌ದಲ್ಲಿ ನಡೆದಿದೆ.

    ಸುಭ್ರಾಂಶು ಸಮಲ್ ಸೈಕಲ್ ಮೇಲೆ ಬಂದ ವರ. ಈತನ ಕುಟುಂಬವು ಮದುವೆ ಮರವಣಿಗೆಗೆ ಭಾರೀ ವ್ಯವಸ್ಥೆ ಮಾಡಿತ್ತು. ಆದರೆ ದೇಶದಲ್ಲಿ ಹೆಚ್ಚುತ್ತಿರವ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟಿಸಲು ಸುಭ್ರಾಂಶು ಸೈಕಲ್‍ನ್ನು ಬಳಸುವ ನಿರ್ಧಾರವನ್ನು ಮಾಡಿದ್ದಾನೆ.

    ಇದರಂತೆ ಮದುವೆ ಬಟ್ಟೆಯನ್ನು ಧರಿಸಿ ಸೈಕಲ್‍ನಲ್ಲಿ ಸುಮಾರು ಒಂದು ಕಿ.ಮೀ ವರೆಗೆ ಸೈಕಲ್‍ನ್ನು ತುಳಿದು ಮಂಟಪಕ್ಕೆ ಬಂದಿದ್ದಾನೆ. ಅವನ ಜೊತೆಗೆ ಮದುವೆಗೆ ಆಗಮಿಸಿದ್ದ ಆತನ ಕುಟುಂಬ ಮತ್ತು ಸ್ನೇಹಿತರು ಕಾಲ್ನಡಿಗೆಯಲ್ಲೇ ಮದುವೆ ಮಂಟಪಕ್ಕೆ ತಲುಪಿದರು. ಇದನ್ನೂ ಓದಿ: ಸ್ಪಷ್ಟವಾಗಿ ಹೇಳ್ತೇನೆ ನಾರಾಯಣಗುರು ಪಠ್ಯ ಕೈಬಿಡುವ ಪ್ರಶ್ನೆಯೇ ಇಲ್ಲ: ಶ್ರೀನಿವಾಸ್ ಪೂಜಾರಿ

    petrol

    ನಿರಂತರವಾಗಿ ಪೆಟ್ರೋಲ್ ಹಾಗೂ ಡಿಸೇಲ್‍ಗಳ ಬೆಲೆ ಏರಿಕೆ ಆಗುತ್ತಿರುವುದರಿಂದ ಹಲವಾರು ಜನರು ಹತಾಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಕಡೆ ಪ್ರತಿಭಟನೆ ನಡೆಯುತ್ತಿರುವುದು ಸಾಮಾನ್ಯ ಪ್ರತಿಕ್ರಿಯೆ ಆಗಿದೆ. ಆದರೆ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರವನ್ನು ಗಮನ ಸೆಳೆಯುವುದು ಉದ್ದೇಶವಾಗಿದೆ ಎಂದು ಸುಭ್ರಾಂಶು ತಿಳಿಸಿದರು. ಇದನ್ನೂ ಓದಿ: ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿದ ಪಾದಚಾರಿಗಳು – ಓರ್ವ ಸಾವು, ನಿರ್ದೇಶಕ ವಶಕ್ಕೆ

  • ಬಡ ವರ್ಗಗಳ ಏಳಿಗೆ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ: ರಾಹುಲ್ ಗಾಂಧಿ

    ಬಡ ವರ್ಗಗಳ ಏಳಿಗೆ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ: ರಾಹುಲ್ ಗಾಂಧಿ

    ನವದೆಹಲಿ: ಕಾಂಗ್ರೆಸ್ ಪಕ್ಷವೊಂದೇ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದರು.

    ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‌ನ ಬೆಲೆ ಏರಿಕೆ ಕುರಿತು ವಾಗ್ದಾಳಿ ನಡೆಸಿದ ಅವರು, ಅಡುಗೆ ಅನಿಲ ಎಲ್‍ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‍ಗೆ 50 ರೂ. ಹೆಚ್ಚಿಸಲಾಗಿದೆ. ಅಂತಾರಾಷ್ಟ್ರೀಯ ಇಂಧನ ದರಗಳನ್ನು ದೃಢಪಡಿಸಿದ ನಂತರ ದೇಶದಲ್ಲಿ ಕೇವಲ ಆರು ವಾರಗಳಲ್ಲಿ ಎರಡನೇ ಬಾರಿಗೆ ಬೆಲೆ ಏರಿಕೆಯಾಗಿದೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಅಂದರೆ 2014ರಲ್ಲಿ 827ರೂ. ಸಬ್ಸಿಡಿಯೊಂದಿಗೆ 410 ರೂ. ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‌ನ ಬೆಲೆಯಿತ್ತು. ಆದರೆ 2022ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಶೂನ್ಯ ಸಬ್ಸಿಡಿಯೊಂದಿಗೆ 999 ರೂ. ಕ್ಕಿಂತ ಹೆಚ್ಚು ಬೆಲೆಗೆ ಹೆಚ್ಚಿಸಿದ್ದಾರೆ ಎಂದು ಟ್ವೀಟ್‍ನಲ್ಲಿ ಟೀಕಿಸಿದರು.

    ಮುಂಚೆ 2 ಸಿಲಿಂಡರ್‌ಗಿದ್ದ ಬೆಲೆಯಷ್ಟು 1 ಸಿಲಿಂಡರ್ ಬೆಲೆ ಆಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಭಾರತೀಯ ಕುಟುಂಬಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಮಾತ್ರ ಆಡಳಿತ ನಡೆಸುತ್ತದೆ ಎಂದರು. ಇದನ್ನೂ ಓದಿ: ಹುತಾತ್ಮ ಯೋಧ ಹರ್ದೀಪ್ ಸಿಂಗ್ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಭಗವಂತ್ ಮಾನ್

    ಬೆಲೆ ಏರಿಕೆಯಿಂದಾಗಿ ಲಕ್ಷಾಂತರ ಭಾರತೀಯ ಕುಟುಂಬಗಳು ತೀವ್ರ ಹಣದುಬ್ಬರ, ನಿರುದ್ಯೋಗ ಮತ್ತು ಕಳಪೆ ಆಡಳಿತದ ವಿರುದ್ಧ ಕಠಿಣ ಹೋರಾಟವನ್ನು ನಡೆಸುತ್ತಿವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹುತಾತ್ಮ ಯೋಧ ಹರ್ದೀಪ್ ಸಿಂಗ್ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಭಗವಂತ್ ಮಾನ್

  • ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ

    ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ

    ನವದೆಹಲಿ: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 102.50 ರೂಪಾಯಿ ಹೆಚ್ಚಳ ಮಾಡಿದ್ದು, 2,355.50ರೂ. ಏರಿಕೆ ಕಂಡಿದೆ. ಆದರೆ ಗೃಹ ಉಪಯೋಗಿ ಸಿಲಿಂಡರ್ ಮೇಲೆ ಯಾವುದೇ ದರ ಏರಿಕೆ ಆಗಿಲ್ಲ.

    ಒಂದು ತಿಂಗಳ ಹಿಂದೆ ವಾಣಿಜ್ಯ ಹಾಗೂ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಪರಿಷ್ಕರಿಸಿತ್ತು. ಏಪ್ರಿಲ್ 1ರಂದು ಎಲ್‍ಪಿಜಿ ಬೆಲೆಯು 250ರೂ. ಏರಿಕೆಯಾಗಿ 2,253ರೂ. ಹೆಚ್ಚಳವಾಗಿತ್ತು. ಎಲ್‍ಪಿಜಿ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸುವ ಶಿಷ್ಟಾಚಾರವನ್ನು ಅನುಸರಿಸಲಾಗುತ್ತಿದೆ. ಸದ್ಯ 14.2 ಕೆ.ಜಿ ತೂಕದ ಸಿಲಿಂಡರ್‌ ದರವು ಬೆಂಗಳೂರಿನಲ್ಲಿ 952 ರೂ. ಇದೆ.

    ಗೃಹ ಬಳಕೆ ಸಿಲಿಂಡರ್ ದರವನ್ನು ಮಾರ್ಚ್ 22ರಂದು 50ರೂ. ಹೆಚ್ಚಿಸಲಾಗಿತ್ತು. ಇದೀಗ ಇಂದಿನಿಂದ ಕಮರ್ಷಿಯಲ್ ಸಿಲಿಂಡರ್ ಮೇಲೆ 102 ರೂಪಾಯಿ ಹೆಚ್ಚಳ ಮಾಡಲಾಗಿದೆ. 19 ಕೆಜಿ ತೂಕದ ಕಮರ್ಷಿಯಲ್ ಸಿಲಿಂಡರ್‌ಗೆ ಮೇ 1 ರಿಂದ 102 ರೂಪಾಯಿ ದರ ಏರಿಕೆ ಆಗಿದೆ. ಇದು ಇಂದಿನಿಂದಲೇ ಜಾರಿಯಾಗಿದ್ದು, ಸದ್ಯ ಕಮರ್ಷಿಯಲ್ ಸಿಲಿಂಡರ್ ಬೆಲೆ 2,355.50 ರೂಪಾಯಿ ಇದೆ. ಜೊತೆಗೆ ಗೃಹ ಉಪಯೋಗಿ ಸಿಲಿಂಡರ್ ಮೇಲೆ ಯಾವುದೇ ದರ ಏರಿಕೆ ಆಗಿಲ್ಲ. ಇದನ್ನೂ ಓದಿ: ಹಿಮಾಲಯ, ಹಿಂದೂ ಮಹಾಸಾಗರದ ನಡುವೆ ವಾಸಿಸುವವರೆಲ್ರೂ ಹಿಂದೂಗಳು: ಕೇಂದ್ರ ಸಚಿವ

  • ಕೆಜಿಗೆ 350ರೂ. ದಾಟಿದ ನಿಂಬೆಹಣ್ಣಿನ  ಬೆಲೆ – ಜನ ಸಾಮಾನ್ಯರು ತತ್ತರ

    ಕೆಜಿಗೆ 350ರೂ. ದಾಟಿದ ನಿಂಬೆಹಣ್ಣಿನ ಬೆಲೆ – ಜನ ಸಾಮಾನ್ಯರು ತತ್ತರ

    ಲಕ್ನೋ: ದಿನೇ ದಿನೇ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರುತ್ತಿದೆ. ಗಾಜಿಯಾಬಾದ್‍ನ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಲ್ಲಿ ಕೆಜಿಗೆ ನಿಂಬೆ ಹಣ್ಣಿನ ಬೆಲೆ 350ರೂ.ಗೆ ಏರಿಕೆಯಾಗಿದೆ. ಇದರಿಂದಾಗಿ ವ್ಯಾಪಾರಿಗಳು ಕೂಡ ಆಶ್ಚರ್ಯಗೊಂಡಿದ್ದಾರೆ.

    ಹೈದರಾಬಾದ್‍ನಲ್ಲಿ ಒಂದು ಕೆಜಿ ನಿಂಬೆ ಹಣ್ಣು 10 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಗುಜರಾತ್‍ನಲ್ಲಿ ಒಂದು ಕೆಜಿ ನಿಂಬೆ ಹಣ್ಣು 200 ರೂಪಾಯಿಗೆ ಮಾರಾಟವಾಗುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ವ್ಯಾಪಾರಿಯೊಬ್ಬರು, ಬೆಲೆಗಳು ಏರಿಕೆಯಾಗುತ್ತಿದೆ. ನಾವು ಮೊದಲು 700ರೂ.ಗೆ ಒಂದು ಗೋಣಿ ಚೀಲ ತುಂಬಾ ನಿಂಬೆಹಣ್ಣನ್ನು ಖರೀಸುತ್ತಿದ್ದೇವು. ಆದರೀಗ 3,500ರೂ. ಆಗಿದೆ. ನಾವು ಒಂದು ನಿಂಬೆ ಹಣ್ಣನ್ನು 10ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಆದರೂ ನಿಂಬೆ ಹಣ್ಣನ್ನು ಖರೀದಿಸಲು ಯಾರು ಸಿದ್ಧರಿಲ್ಲ ಮತ್ತು ಅದನ್ನು ಒಪ್ಪಿಕೊಳ್ಳಲು ಕೂಡ ಯಾರು ತಯಾರಿಲ್ಲ. ಇದರಿಂದಾಗಿ ನಿಂಬೆಹಣ್ಣು ಕೊಳೆತು ಹಾಳಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ

    ಮತ್ತೋರ್ವ ವ್ಯಾಪಾರಿ ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ನಿಂಬೆಹಣ್ಣಿನ ಬೆಲೆ ಗರಿಷ್ಠವೆಂದರೆ 150ರೂ.ಗೆ ಮಾರಾಟವಾಗಿದ್ದರೂ, 300ರೂ. ಅಷ್ಟು ಆಗಿರಲಿಲ್ಲ. ಆದರೆ ಡೀಸೆಲ್ ಬೆಲೆ ಏರಿಯಿಂದ ಟ್ರಕ್ ಸಾಗಾಟನೆ ವೆಚ್ಚ 24,000ರೂ. ಆಗಿದೆ. ಹದಿನೈದು ದಿನಗಳ ಹಿಂದೆಯಷ್ಟೇ ನಿಂಬೆಹಣ್ಣು ಕೆ.ಜಿ.ಗೆ 50 ರಿಂದ 100ರೂ.ಗೆ ಮಾರಾಟವಾಗುತ್ತಿತ್ತು ಎಂದು ತಿಳಿಸಿದ್ದಾರೆ. ನಿಂಬೆ ಹಣ್ಣಿನ ಜೊತೆಗೆ ಹಸಿ ಮೆಣಸಿನಕಾಯಿ, ಹಾಗಲಕಾಯಿ ಸೇರಿದಂತೆ ಇತರೆ ತರಕಾರಿಗಳ ಬೆಲೆ ಎರಡು ವಾರಗಳಲ್ಲಿ ದುಪ್ಪಟ್ಟಾಗಿದೆ. ಇದನ್ನೂ ಓದಿ:  ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

  • ಬಿಜೆಪಿ ಸರ್ಕಾರ ಜನರ ಗಮನ ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ: AAP

    ಬಿಜೆಪಿ ಸರ್ಕಾರ ಜನರ ಗಮನ ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ: AAP

    ಬೆಂಗಳೂರು: ಕಳ್ಳರು ಜನರ ಗಮನವನ್ನು ಬೇರೆಡೆ ಸೆಳೆದು ಪಿಕ್‍ಪಾಕೆಟ್ ಮಾಡುವಂತೆ, ಬಿಜೆಪಿ ಸರ್ಕಾರವು ಜನರ ಗಮನಗಳನ್ನು ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ ಎಂದು ಎಎಪಿಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ದುರಾಡಳಿತದಿಂದಾಗಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರವು ಅಡುಗೆ ಅನಿಲ, ಇಂಧನ ತೈಲ ಮುಂತಾದವುಗಳ ಬೆಲೆ ಏರಿಕೆ ಮಾಡುತ್ತಿದ್ದರೆ, ರಾಜ್ಯ ಸರ್ಕಾರವು ವಿದ್ಯುತ್, ಹಾಲಿನ ಬೆಲೆಯನ್ನು ಏರಿಸುತ್ತಿದೆ. ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟು ಅವರಿಂದ ಪಕ್ಷಕ್ಕೆ ದೇಣಿಗೆ ಪಡೆಯುವ ದುರುದ್ದೇಶದಿಂದ ಸರ್ಕಾರಗಳು ಈ ರೀತಿ ಮಾಡುತ್ತಿವೆ. ಇದರ ಪರಿಣಾಮವಾಗಿ ಸಾಮಾನ್ಯ ಜನರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಿಜಬ್, ಹಲಾಲ್‍ನಿಂದಾಗಿ ಬೆಲೆ ಏರಿಕೆಯ ಗಮನ ದೂರವಾಗಿದೆ: ಶಶಿ ತರೂರ್

    ಕಳ್ಳರು ಜನರ ಗಮನವನ್ನು ಬೇರೆಡೆ ಸೆಳೆದು ಪಿಕ್‍ಪಾಕೆಟ್ ಮಾಡುವಂತೆ, ಬಿಜೆಪಿ ಸರ್ಕಾರವು ಜನರ ಗಮನಗಳನ್ನು ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ. ಇದನ್ನು ಸೂಕ್ತ ರೀತಿಯಲ್ಲಿ ಪ್ರಶ್ನಿಸುವುದರಲ್ಲಿ ಪ್ರತಿಪಕ್ಷಗಳ ಕಾಂಗ್ರೆಸ್, ಜೆಡಿಎಸ್ ವಿಫಲವಾಗಿದೆ. ಆಮ್ ಆದ್ಮಿ ಪಾರ್ಟಿಯು ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿರುವ ಏಕೈಕ ಪಕ್ಷವಾಗಿದ್ದು, ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರವನ್ನು ಪ್ರಶ್ನಿಸಲಿದ್ದೇವೆ ಎಂದು ಕುಶಲಸ್ವಾಮಿ ಹೇಳಿದ್ದಾರೆ.

    ಆಮ್ ಆದ್ಮಿ ಪಾರ್ಟಿ ವಕ್ತಾರರಾದ ಉಷಾ ಮೋಹನ್ ಮಾತನಾಡಿ, ದೆಹಲಿಯ ಎಎಪಿ ಸರ್ಕಾರವು ರಿಯಾಯಿತಿ ದರ ಅಥವಾ ಉಚಿತವಾಗಿ ಮೂಲ ಸೌಕರ್ಯಗಳನ್ನು ನೀಡಿ ಜನಸಾಮಾನ್ಯರಿಗೆ ನೆರವಾಗುತ್ತಿದೆ. ಅದಕ್ಕೆ ವಿರುದ್ಧವಾಗಿ, ಬಿಜೆಪಿ ಸರ್ಕಾರಗಳು ಜನರ ಬದುಕನ್ನು ಹೈರಾಣಾಗಿಸುತ್ತಿದೆ. ಒಂದೆಡೆ ಭ್ರಷ್ಟಾಚಾರದ ಮೂಲಕ ಜನರ ತೆರಿಗೆ ಹಣವನ್ನು ಲೂಟಿ ಮಾಡಿ, ಮತ್ತೊಂಡೆದೆ ಬೆಲೆ ಏರಿಕೆ ಮೂಲಕ ಜನರ ಉಳಿತಾಯದ ಹಣಕ್ಕೂ ಬಿಜೆಪಿ ಸರ್ಕಾರ ಕನ್ನ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಲ್ಲ PIL ಗಳನ್ನು ನಾವೇ ವಿಚಾರಣೆ ನಡೆಸುವುದಾದರೆ ಜನ ಸರ್ಕಾರವನ್ನು ಆಯ್ಕೆ ಮಾಡಿರುವುದ್ಯಾಕೆ? – ಸುಪ್ರೀಂಕೋರ್ಟ್ ಗರಂ

    ಅಡುಗೆ ಅನಿಲ, ಖಾದ್ಯ ತೈಲ, ಇಂಧನ ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಏಪ್ರಿಲ್ 9ರ ಶನಿವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ.

    ಪಕ್ಷದ ಮಹಿಳಾ ಮುಖಂಡರಾದ ಸುಹಾಸಿನಿ ಫಣಿರಾಜ್ ಹಾಗೂ ಪಲ್ಲವಿ ಚಿದಂಬರ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

  • ಬೆಲೆ ಏರಿಕೆ ಪ್ರಧಾನ ಮಂತ್ರಿ ಜನ್ ಧನ್ ಲೂಟ್ ಯೋಜನೆಯ ಭಾಗ: ರಾಹುಲ್ ಗಾಂಧಿ

    ಬೆಲೆ ಏರಿಕೆ ಪ್ರಧಾನ ಮಂತ್ರಿ ಜನ್ ಧನ್ ಲೂಟ್ ಯೋಜನೆಯ ಭಾಗ: ರಾಹುಲ್ ಗಾಂಧಿ

    ನವದೆಹಲಿ: ಎರಡು ವಾರಗಳಲ್ಲಿ 12ನೇ ಬಾರಿ ಏರಿಕೆ ಆಗುತ್ತಿರುವ ತೈಲ ಬೆಲೆಯು ಪ್ರಧಾನ ಮಂತ್ರಿ ಜನ್ ಧನ್ ಲೂಟ್ ಯೋಜನೆಯ ಭಾಗವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

    ಸತತವಾಗಿ 2 ವಾರಗಳಿಂದ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಬೈಕ್, ಕಾರು, ಟ್ರಾಕ್ಟರ್ ಮತ್ತು ಟ್ರಕ್‍ಗಳಿಗೆ ಫುಲ್ ಟ್ಯಾಂಕ್ ಇಂಧನದ ಪ್ರಸ್ತುತ ವೆಚ್ಚವನ್ನು 2014ರಲ್ಲಿ ಹೋಲಿಸುವ ಗ್ರಾಫಿಕ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರಧಾನ ಮಂತ್ರಿ ಜನ್ ಧನ್ ಲೂಟ್ ಯೋಜನೆ ಎಂದು ಅವರು ಶೀರ್ಷಿಕೆ ನೀಡಿದ್ದಾರೆ.

    ತೈಲ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಮುಖ್ಯವಕ್ತಾರ ರಣದೀಪ್ ಸುರ್ಜೇವಾಲಾ ಟ್ವೀಟ್‌ ಮಾಡಿ, ಮೋದಿ ಸರ್ಕಾರದ ಅಡಿಯಲ್ಲಿ ಪ್ರತಿದಿನ ಬೆಳಗ್ಗೆ ಉತ್ಸಾಹಕ್ಕಿಂತ ಹಣದುಬ್ಬರದ ದುಃಖವನ್ನು ತರುತ್ತದೆ. ಇಂದು ಹೊಸ ಕಂತು ಇಂಧನ ಲೂಟಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪ್ರತಿ ಲೀಟರ್‍ಗೆ 40ಪೈಸೆ ಹೆಚ್ಚಿಸಲಾಗಿದೆ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹೆಚ್.ಡಿ ಕುಮಾರಸ್ವಾಮಿ ಇತಿಹಾಸ ಅರ್ಥ ಮಾಡಿಕೊಳ್ಳಬೇಕು: ಡಾ.ಕೆ. ಸುಧಾಕರ್

    ಕಳೆದ 14 ದಿನದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಸೋಮವಾರವೂ ಸಹ ಪ್ರತಿ ಲೀಟರ್ ಪೆಟ್ರೋಲ್‍ಗೆ 42 ಪೈಸೆ, ಡಿಸೇಲ್‍ಗೆ 39 ಪೈಸೆ ಏರಿಕೆಯಾಗಿದೆ. ಇದನ್ನೂ ಓದಿ: ಯಾವುದೇ ಧರ್ಮದವರನ್ನು ಹತ್ತಿಕ್ಕುವ ಉದ್ದೇಶ ಸರ್ಕಾರಕ್ಕಿಲ್ಲ: ಸುಧಾಕರ್