Tag: Pretham Gowda

  • ಹಾಸನದಲ್ಲಿ ಜೆಡಿಎಸ್‌ಗೆ ಒಳ ಏಟಿನ ಭಯ – ರಾಜ್ಯ ನಾಯಕರ ಮನವೊಲಿಕೆಗೆ ಬಗ್ಗದ ಪ್ರೀತಂ ಗೌಡ

    ಹಾಸನದಲ್ಲಿ ಜೆಡಿಎಸ್‌ಗೆ ಒಳ ಏಟಿನ ಭಯ – ರಾಜ್ಯ ನಾಯಕರ ಮನವೊಲಿಕೆಗೆ ಬಗ್ಗದ ಪ್ರೀತಂ ಗೌಡ

    ಹಾಸನ : ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ (Prajwal Revanna) ಗುರುವಾರ ಜೆಡಿಎಸ್-ಬಿಜೆಪಿ (JDS-BJP) ನಾಯಕರೊಂದಿಗೆ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ನಂತರ ಹಾಸನ ನಗರದಲ್ಲಿ ಸಹಸ್ರಾರು ಜೆಡಿಎಸ್-ಬಿಜೆಪಿ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijeandra) ಬಂದರೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ (Preetham Gowda) ಗೈರಾಗಿದ್ದು ಮೈತ್ರಿಗೆ ಬೆಂಬಲ ಸಿಗುವುದು ಬಹುತೇಕ ಅನುಮಾನವಾಗಿದೆ. ಇದರಿಂದಾಗಿ ಜೆಡಿಎಸ್‌ಗೆ ಒಳಏಟಿನ ಭಯ ಶುರುವಾಗಿದೆ.

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹೆಚ್.ಡಿ ರೇವಣ್ಣ ನೇತೃತ್ವದಲ್ಲಿ ಪ್ರಜ್ವಲ್ ನಾಮಪತ್ರ ಸಲ್ಲಿಸಿ ನಗರದ ಜಿಲ್ಲಾ ಕ್ರೀಡಾಂಗಣದಿಂದ ಹೇಮಾವತಿ ಪ್ರತಿಮೆವರೆಗೂ ಬೃಹತ್ ಶೋ ನಡೆಸಿದರು. ಆದರೆ ಮಾಜಿ ಶಾಸಕ ಪ್ರೀತಂಗೌಡ ದೂರ ಉಳಿದಿದ್ದು ಮೈತ್ರಿಗೆ ಇನ್ನೂ ವಿರೋಧ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್‌ನಿಂದ ಅಖಾಡದಲ್ಲಿ ಗುಪ್ತ್ ರಿಪೋರ್ಟ್ ಟೀಂ!

    ಹಾಸನ ನಗರದ ಅಶೋಕ ಹೋಟೆಲ್‌ನಲ್ಲಿ ಮೊದಲ ಜೆಡಿಎಸ್-ಬಿಜೆಪಿ ಸಮನ್ವಯ ಸಭೆ ನಡೆಸಲಾಯಿತು. ಈ ಸಭೆಗೂ ಪ್ರೀತಂಗೌಡ ಗೈರಾಗಿದ್ದರು. ಮಾಜಿ ಸಚಿವ ಸಿ.ಟಿ.ರವಿ, ಬಿಜೆಪಿ ಶಾಸಕರಾದ ಸಿಮೆಂಟ್ ಮಂಜು ಸೇರಿ ಎರಡು ಪಕ್ಷದ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಮೈತ್ರಿ ಧರ್ಮ ಪಾಲಿಸುವಂತೆ ಬಿಜೆಪಿ ನಾಯಕರು ಕರೆ ನೀಡಿದರಲ್ಲದೇ, ಪ್ರೀತಂಗೌಡ ಬೆಂಬಲಿಗರ ಮನವೊಲಿಸಿದರು. ಸಭೆ ಬಳಿಕ ಮಾತನಾಡಿದ ಸಿ.ಟಿ ರವಿ ಹಾಗೂ ಹೆಚ್.ಡಿ ರೇವಣ್ಣ ಯಾವುದೇ ಅಪಸ್ವರ ಇಲ್ಲ ಎಂದು ಮತ್ತೆ ಉಲ್ಲೇಖಿಸಿದರು. ಇದನ್ನೂ ಓದಿ: ರಾತ್ರಿ ಆಪರೇಷನ್, ಹೆಚ್‍ಡಿಕೆಗೆ ಶಾಕ್ ಕೊಟ್ಟ ಡಿಕೆ ಬ್ರದರ್ಸ್ – ʻಕೈʼ ಹಿಡಿದ ಚನ್ನಪಟ್ಟಣದ 9 ಜೆಡಿಎಸ್‌ ಸದಸ್ಯರು

    ಒಟ್ಟಿನಲ್ಲಿ ಹಾಸನ ಲೋಕಸಭಾ ಕ್ಷೇತ್ರದ (Hassan Lok Sabha Election) ಚುನಾವಣೆ ಅಖಾಡ ರಂಗೇರಿದ್ದು ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇದರ ನಡುವೆ ಪ್ರೀತಂಗೌಡ ನಡೆಯಿಂದ ಜೆಡಿಎಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದ್ದರೆ, ಕಾಂಗ್ರೆಸ್ ಅದರ ಲಾಭ ಪಡೆಯಲು ಹವಣಿಸುತ್ತಿದೆ. ಆದರೆ ಡ್ಯಾಮೇಜ್ ಕಂಟ್ರೋಲ್‌ಗೆ ಜೆಡಿಎಸ್-ಬಿಜೆಪಿ ನಾಯಕರು ಮುಂದಾಗಿದ್ದು ಇದು ಎಷ್ಟರಮಟ್ಟಿಗೆ ವರ್ಕೌಟ್ ಆಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

  • ಪಕ್ಷ ಸೇರುವಂತೆ ಬಿವೈವಿ ಆಹ್ವಾನ – ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ ಎಂದ ಸುಮಲತಾ

    ಪಕ್ಷ ಸೇರುವಂತೆ ಬಿವೈವಿ ಆಹ್ವಾನ – ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ ಎಂದ ಸುಮಲತಾ

    ಬೆಂಗಳೂರು: ಶನಿವಾರ ಬೆಂಬಲಿಗರ ಸಭೆ ಕರೆದು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಹೇಳಿದ್ದಾರೆ.

    ಇಂದು ಬಿಜೆಪಿ ರಾಜ್ಯಾಧಕ್ಷ ವಿಜಯೇಂದ್ರ (BY Vijayendra) ಮತ್ತು ಪ್ರೀತಂ ಗೌಡ (Pretham Gowda) ಸುಮಲತಾ ನಿವಾಸಕ್ಕೆ ಆಗಮಿಸಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಬೇಕು ಎಂದು ಮನವಿ ಮಾಡಿದರು.  ಇದನ್ನೂ ಓದಿ: ದೋಸ್ತಿಗಳ ಮೊದಲ ಸಮ್ಮಿಲನ ಸಭೆ – ದೇಶದಲ್ಲಿ ಮೋದಿಯಂತ ನಾಯಕರು ಮತ್ತೊಬ್ಬರಿಲ್ಲ ಎಂದ ಹೆಚ್‌ಡಿಡಿ

     

    ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ,  ವಿಜಯೇಂದ್ರ, ಪ್ರೀತಂಗೌಡ ಒಂದು ಗಂಟೆಗಳ ಕಾಲ ಬಂದು ಮಾತನಾಡಿ ಅವರ ಭಾವನೆಯನ್ನು ಹೇಳಿ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಕೇಳಿದರು. ನಾಳೆ ಬೆಂಬಲಿಗರು ಬರುತ್ತಿದ್ದಾರೆ. ಅವರ ಭಾವನೆಯನ್ನು ಕೇಳಬೇಕಾದ ಕರ್ತವ್ಯವಿದೆ. ನಾನು ಕಾರ್ಯಕರ್ತರ ಭಾವನೆ ಕೇಳಿ ಮಂಡ್ಯದಲ್ಲಿ ನಿಲುವನ್ನು ತಿಳಿಸುತ್ತೇನೆ ಎಂದರು.

    ಬಿಜೆಪಿಯನ್ನು ಬೆಂಬಲಿಸಬೇಕು ಎನ್ನುವುದು ಒಂದು ಕಡೆ. ಬೆಂಬಲಿಗರು ಏನು ಹೇಳುತ್ತಾರೆ ಎನ್ನುವುದನ್ನು ಕೇಳಬೇಕು. ಮಂಡ್ಯಗೆ (Mandya) ಹೋಗಿ ಅವರ ಮುಂದೆಯೇ ನಿಲುವನ್ನು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕೋಲಾರದಲ್ಲಿ ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುತ್ತೇನೆ: ಸಚಿವ ಮುನಿಯಪ್ಪ

     

    ಸುಲಭವಾಗಿ ಗೆಲ್ಲುವ ಕ್ಷೇತ್ರದ ಆಫರ್ ಇತ್ತು. ಬೇರೆ ಪಕ್ಷದಿಂದಲೂ ಆಫರ್ ಇತ್ತು. ಆದರೆ ನಾನು ಮಂಡ್ಯ ಬಿಟ್ಟರೇ ಮತ್ತೆಲ್ಲೂ ಹೋಗುತ್ತಿಲ್ಲ. ನನ್ನ ಅಸ್ತಿತ್ವ ಅಂದ್ರೆ ಮಂಡ್ಯ. ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡಿದ್ದಕ್ಕೆ ಮಾತನಾಡುವುದಿಲ್ಲ ಎಂದು ತಿಳಿಸಿದರು.

    ಭೇಟಿ ವೇಳೆ ಏನಾದ್ರೂ ಆಫರ್‌ ನೀಡಿದ್ರಾ ಎಂಬ ಪ್ರಶ್ನೆಗೆ, ಬೇರೆ ಏನು ಅಫರ್ ಕೊಟ್ಟಿಲ್ಲ. ಆ ರೀತಿ ಕೇಳಿ ಪಡೆಯುವ ಅಭ್ಯಾಸ ಇಲ್ಲ. ಇದ್ದಿದ್ದರೆ ನಾವು ಮುಂದೆ ಇರುತ್ತಿರಲಿಲ್ಲ ಎಂದು ಸುಮಲತಾ ಹೇಳಿದರು.