Tag: pressmeet

  • ಪತ್ನಿಯಿಂದ ಬಹಿರಂಗವಾಯ್ತು ನಟ ಕರಣ್ ಮೆಹ್ರಾ ಅನೈತಿಕ ಸಂಬಂಧ

    ಪತ್ನಿಯಿಂದ ಬಹಿರಂಗವಾಯ್ತು ನಟ ಕರಣ್ ಮೆಹ್ರಾ ಅನೈತಿಕ ಸಂಬಂಧ

    ಮುಂಬೈ: ಹಿಂದಿ ಜನಪ್ರಿಯ ಧಾರಾವಾಹಿ ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ನಟ ಕರಣ್ ಮೆಹ್ರಾರವರ ಪತ್ನಿ ನಿಶಾ ಗಂಡನ ಅನೈತಿಕ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಶಾರವರು, ನಾನು ಕರಣ್ ಮೆಹ್ರಾ 5 ವರ್ಷ ಪ್ರೀತಿಸಿ ನಂತರ ಮದುವೆಯಾಗಿ ಈಗ 9 ವರ್ಷ ಕಳೆದಿದೆ. ಒಂದು ತಿಂಗಳ ಹಿಂದೆ ಕರಣ್ ಚಂಡೀಗಢದಲ್ಲಿದ್ದರು. ಈ ವೇಳೆ ಕರಣ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಬಯಲಾಯಿತು. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಮಾತಿನ ಚಕಮಕಿ ನಡೆದಿತ್ತು. ಅಲ್ಲದೆ ಕರಣ್ ಕೂಡ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಒಪ್ಪಿಕೊಂಡಿದ್ದರು. ಇದನ್ನು ಓದಿ:ಪತ್ನಿಯನ್ನು ಕೊಂದ ಆರೋಪದ ಮೇಲೆ ಯೂಟ್ಯೂಬರ್ ಬಂಧನ

    ಕರಣ್ ಚಂಡೀಗಢಕ್ಕೆ ಚಿತ್ರೀಕರಣಕ್ಕೆ ಹೋದಾಗಲೆಲ್ಲಾ ದೆಹಲಿ ಮೂಲದ ಮಹಿಳೆ ಭೇಟಿ ಮಾಡುತ್ತಿದ್ದಳು. ಹೀಗೆ ಇಬ್ಬರು ಪ್ರೀತಿಸಿ, ದೈಹಿಕ ಸಂಪರ್ಕವನ್ನು ಕೂಡ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಮೊದಲಿಗೆ ಕರಣ್ ಆಫೇರ್ ಇಟ್ಟುಕೊಂಡಿದ್ದ ಬಗ್ಗೆ ಗೊತ್ತಾದಾಗ ನಾನು ಅವರ ಮೇಲೆ ಕೂಗಾಡಲಿಲ್ಲ. ಜಗಳ ಮಾಡಲಿಲ್ಲ. ಬದಲಿಗೆ ಸಮಾಧಾನದಿಂದ ಪ್ರಶ್ನಿಸಿದೆ. ಆಗ ಅವರು ಸತ್ಯ ಒಪ್ಪಿಕೊಂಡರು. ಮೊದಲಿನಂತೆ ಬದಲಾಗಿದ್ದಾರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ ಕರಣ್ ಬದಲಾಗಲಿಲ್ಲ. ಅಲ್ಲದೆ ಕರಣ್ ನನಗೆ ಸದಾ ಹೊಡೆಯುತ್ತಿದ್ದರು. ಇಷ್ಟು ವರ್ಷ ಕರಣ್ ಮೇಲಿನ ಪ್ರೀತಿಗಾಗಿ ಸಹಿಸಿಕೊಂಡಿದ್ದೆ. ಆದರೆ ಈಗ ಏನು ಉಳಿದಿಲ್ಲ ಎಂದು ಹೇಳಿ ಭಾವುಕರಾದರು.

  • ಇಂದು ಸಂಜೆ ಸಿಎಂ ಮಹತ್ವದ ಸುದ್ದಿಗೋಷ್ಠಿ

    ಇಂದು ಸಂಜೆ ಸಿಎಂ ಮಹತ್ವದ ಸುದ್ದಿಗೋಷ್ಠಿ

    ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್ ಚೈನ್ ಲಿಂಕ್ ಕತ್ತರಿಸುವ ಸಲುವಾಗಿ ರಾಜ್ಯಾದ್ಯಂತ ಲಾಕ್ ಡೌನ್ ಹೇರಲಾಗಿದೆ. ಆದರೆ ಈ ಲಾಕ್ ಡೌನ್ ಅವಧಿ ಮುಗಿಯುವ ಮೊದಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಹತ್ವದ ವಿಷಯವನ್ನು ತಿಳಿಸಲಿದ್ದಾರೆ.

    ಹೌದು. ಇಂದು ಸಂಜೆ 5 ಗಂಟೆಗೆ ಬಿಎಸ್‍ವೈ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ತೀವ್ರ ಕುತೂಹಲ ಹುಟ್ಟಿಸಿದೆ. ಯಾಕಂದ್ರೆ ಲಾಕ್ ಡೌನ್ ಅವಧಿ ಪೂರ್ಣಗೊಳ್ಳುವ ಮೊದಲೇ ಸಿಎಂ ಸಚಿವರ ಜೊತೆ ಸಭೆ ನಡೆಸುತ್ತಿದ್ದಾರೆ.

    ಲಾಕ್ ಡೌನ್ ಮುಗಿಯಲು ಇನ್ನೂ 10 ದಿನ ಬಾಕಿ ಇದೆ. ಈ ಮಧ್ಯೆ ಸಚಿವರ ಜೊತೆ ಮೀಟಿಂಗ್ ಕರೆದಿರುವುದು ಕುತೂಹಲ ಹುಟ್ಟಿಸಿದೆ. ಸಭೆಯಲ್ಲಿ ಸಿಎಂ ಏನು ನಿರ್ಧಾರ ಕೈಗೊಳ್ಳುತ್ತಾರೆ..?, ಮತ್ತೆ ಲಾಕ್ ಡೌನ್ ವಿಸ್ತರಣೆ ಬಗ್ಗೆ ಮಾಹಿತಿ ಕೊಡುತ್ತಾರಾ..? ಅಥವಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಆಟೋ ಟ್ಯಾಕ್ಸಿ, ಚಾಲಕರಿಗೆ ವಿಶೇಷ ಪ್ಯಾಕೇಜ್, ಕಟ್ಟಡ ಕಾರ್ಮಿಕರಿಗೆ ನೆರವು ಅಥವಾ ರೈತರಿಗೆ ಹಣಕಾಸು ನೆರವು ಘೋಷಿಸುತ್ತಾರಾ ಎಂಬ ಪ್ರಶ್ನೆಯೂ ಮೂಡಿದೆ. ಒಟ್ಟಿನಲ್ಲಿ ಲಾಕ್ ಡೌನ್ ಅವಧಿ ಮುಗಿಯುವ ಮೊದಲೇ ಸಿಎಂ ಕರೆದಿರುವ ಸುದ್ದಿಗೋಷ್ಠಿ ಕುತೂಹಲ ಹುಟ್ಟಿಸಿದೆ.

  • ರಾಗಿಣಿಗೆ ಬೆನ್ನು ನೋವು, ಆರೋಗ್ಯ ಸಮಸ್ಯೆ – ತಂದೆ ರಾಕೇಶ್

    ರಾಗಿಣಿಗೆ ಬೆನ್ನು ನೋವು, ಆರೋಗ್ಯ ಸಮಸ್ಯೆ – ತಂದೆ ರಾಕೇಶ್

    ಬೆಂಗಳೂರು: ಸದ್ಯ ಆರೋಗ್ಯ ಸಮಸ್ಯೆ ನಟಿ ರಾಗಿಣಿ ದ್ವಿವೇದಿಯನ್ನು ಕಾಡುತ್ತಿದ್ದು, ಚೇತರಿಕೆ ನಂತರ ಸುದ್ದಿಗೋಷ್ಠಿ ನಡೆಸುತ್ತಾರೆ ಎಂದು ತಂದೆ ರಾಕೇಶ್ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಗಿಣಿಗೆ ಬೆನ್ನು ನೋವು ಮತ್ತು ಆರೋಗ್ಯ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಮನೆಯಲ್ಲಿಯೇ ಅವರು ರೆಸ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

    ಮೊದಲು ವೈದ್ಯರನ್ನು ಭೇಟಿ ಮಾಡಿ ರಾಗಿಣಿ ಚಿಕಿತ್ಸೆ ಪಡೆಯಬೇಕಿದೆ. ಎರಡು ಮೂರು ದಿನಗಳ ನಂತರ ವಕೀಲರ ಜೊತೆ ಮಾತುಕತೆ ನಡೆಸಬೇಕಾಗಿದೆ. ವಕೀಲರು ಮತ್ತು ವೈದ್ಯರ ಸಲಹೆ ಮೇರೆಗೆ ನಂತರ ರಾಗಿಣಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಅಷ್ಟೇ ಅಲ್ಲದೇ ನಮ್ಮ ಕಷ್ಟದ ಸಮಯದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳುವ ಮೂಲಕ ಕೃತಜ್ಞತೆ ಸಲ್ಲಿಸಿದರು.

    ಸ್ಯಾಂಡಲ್‍ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ಸೋಮವಾರ ಪರಪ್ಪನ ಅಗ್ರಹಾರದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

  • ಕೇಂದ್ರದಿಂದ ನಾಲ್ಕನೇ ಹಂತದಲ್ಲಿ ಆರ್ಥಿಕ ಪ್ಯಾಕೇಜ್ ಹಂಚಿಕೆ – ಸಂಜೆ 4 ಗಂಟೆಗೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

    ಕೇಂದ್ರದಿಂದ ನಾಲ್ಕನೇ ಹಂತದಲ್ಲಿ ಆರ್ಥಿಕ ಪ್ಯಾಕೇಜ್ ಹಂಚಿಕೆ – ಸಂಜೆ 4 ಗಂಟೆಗೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

    – ಇಂದು ಪ್ರವಾಸೋದ್ಯಮ, ಸೇವಾವಲಯಕ್ಕೆ ನೆರವು ನೀಡುವ ಸಾಧ್ಯತೆ

    ನವದೆಹಲಿ: ಕೊರೊನಾ ವೈರಸ್‍ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಮಂದಿಗೆ ಆರ್ಥಿಕತೆ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕನೇ ಹಂತದಲ್ಲಿ ಪ್ಯಾಕೇಜ್ ಹಂಚಿಕೆ ಮಾಡಲಿದ್ದಾರೆ.

    ಸಂಜೆ 4 ಗಂಟೆಗೆ ಈಗಾಗಲೇ ಸುದ್ದಿಗೋಷ್ಠಿಗೆ ಸಮಯ ನಿಗಧಿ ಮಾಡಿದ್ದು, ಇಂದು ಸುಮಾರು 2 ಲಕ್ಷ ಕೋಟಿ ಮೌಲ್ಯದ ಪ್ಯಾಕೇಜ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇಂದು ದೇಶದ ಪ್ರವಾಸೋದ್ಯಮ, ಸೇವಾವಲಯ ಕೇಂದ್ರಿಕರಿಸಿ ಪ್ಯಾಕೇಜ್ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ. ಹೋಟೆಲ್, ರೆಸ್ಟೋರೆಂಟ್, ಹೋಂ ಸ್ಟೇ, ಲಾಡ್ಜ್, ಅತಿಥಿ ಗೃಹಗಳು ಸೇರಿಸಂತೆ ಆತಿಥ್ಯ ವಲಯ, ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಆಗಲಿದೆ.

    ಸಾರಿಗೆ ವ್ಯವಸ್ಥೆ ವಲಯದಡಿ ವಿಮಾನಯಾನ, ಖಾಸಗಿ ಸಾರಿಗೆ ಸಂಸ್ಥೆಗಳಿಗೆ ನೆರವು, ಚಿಲ್ಲರೆ ಮಾರುಕಟ್ಟೆ, ಶಿಕ್ಷಣ, ಸಿನಿಮಾದಂತಹ ಮನರಂಜನಾ ವಲಯಕ್ಕೂ ರಿಲೀಫ್ ಸಾಧ್ಯತೆ ಇದೆ. ಶುಕ್ರವಾರ ಸುಮಾರು 1.5 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿರುವ ಹಣಕಾಸು ಸಚಿವಲಾಯ, ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಹಿಂದಿನ 1.75 ಲಕ್ಷ ಕೋಟಿ ಹಾಗೂ ಆರ್‌ಬಿಐ ಘೋಷಿಸಿದ್ದ ಆರ್ಥಿಕ ನೆರವುಗಳು ಒಳಗೊಂಡು 16.5 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿತ್ತು.

  • ಪೇಜಾವರಶ್ರೀ ಆರೋಗ್ಯದಲ್ಲಿ ಚೇತರಿಕೆ – ನ್ಯುಮೋನಿಯಾ ಸಮಸ್ಯೆಯಿದೆ: ಕೆಎಂಸಿ ವೈದ್ಯರು

    ಪೇಜಾವರಶ್ರೀ ಆರೋಗ್ಯದಲ್ಲಿ ಚೇತರಿಕೆ – ನ್ಯುಮೋನಿಯಾ ಸಮಸ್ಯೆಯಿದೆ: ಕೆಎಂಸಿ ವೈದ್ಯರು

    ಉಡುಪಿ: ಪೇಜಾವರಶ್ರೀ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಐದು ದಿನ ಆಗಿದೆ. ಇಂದು ಒಂಬತ್ತನೇ ಹೆಲ್ತ್ ಬುಲೆಟಿನನ್ನು ಕೆಎಂಸಿ ತಜ್ಞ ವೈದ್ಯರ ತಂಡವೇ ಪ್ರೆಸ್‍ಮೀಟ್ ಮಾಡಿ ರಿಲೀಸ್ ಮಾಡಿದೆ.

    ವಿಶ್ವೇಶತೀರ್ಥ ಸ್ವಾಮೀಜಿಗೆ ಸದ್ಯ ಶ್ವಾಸಕೋಶ ನ್ಯುಮೋನಿಯಾ ಸಮಸ್ಯೆ ಮಾತ್ರ ಬಾಧಿಸಿದೆ. ಪರಿಸ್ಥಿತಿ ಕಂಟ್ರೋಲ್ ಗೆ ಬರಲು ಸಾಕಷ್ಟು ಕಾಲಾವಕಾಶ ಬೇಕು. ಶ್ರೀಗಳ ಆರೋಗ್ಯದಲ್ಲಿ ಬಹಳ ಚೇತರಿಕೆ ಇದೆ ಎಂದು ಹೇಳಿದ್ದಾರೆ. ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ದಾಖಲಾದಾಗ ಇದ್ದ ಆರೋಗ್ಯಕ್ಕಿಂತ ಈಗ ಸುಧಾರಿಸಿದೆ ಎಂದರು.

    ವಯಸ್ಸಿನ ಕಾರಣಕ್ಕೆ ಸುಧಾರಣೆ ನಿಧಾನಕ್ಕೆ ಆಗ್ತಾಯಿದೆ. ಶ್ವಾಸಕೋಶದ ಇನ್ಫೆಕ್ಷನ್ ಆಗಿದೆ. ವಯಸ್ಸು 90 ಆಗಿರೋದ್ರಿಂದ ಬಹಳ ನಿಧಾನವಾಗಿ ಚಿಕಿತ್ಸೆ ಕೊಡಬೇಕಾಗಿದೆ ಎಂದು ಹೇಳಿದರು. ಬೆಂಗಳೂರು ಮಣಿಪಾಲ ಆಸ್ಪತ್ರೆಯ ತಜ್ಞರಾದ ಡಾ. ರಾಜೇಶ್ ಶೆಟ್ಟಿ ಮತ್ತು ಡಾ ಸತ್ಯ ನಾರಾಯಣ ಮಾತನಾಡಿ, ಚಿಕಿತ್ಸೆ ನಿರಂತರವಾಗಿ ಕೊಡಬೇಕಾಗುತ್ತದೆ. ಸಂಪೂರ್ಣ ಚೇತರಿಸುವವರೆಗೆ ಕೃತಕ ಉಸಿರಾಟವನ್ನು ಮುಂದುವರಿಸುತ್ತೇವೆ. ಏಮ್ಸ್ ಪ್ರತಿ ಗಂಟೆಗೊಮ್ಮೆ ಕರೆ ಮಾಡುತ್ತದೆ. ಏಲ್ಲಾ ಪರೀಕ್ಷೆಗಳ ಮಾಹಿತಿ ಅವರಿಗೆ ಕೊಟ್ಟಿದ್ದೇವೆ. ಏಮ್ಸ್‍ನ ಕೆಲ ಸಲಹೆಗಳನ್ನು ಎಂದು ವಿವರಿಸಿದರು.

    ಆರಂಭದಲ್ಲಿ ಆವರಿಸಿದ್ದ ನ್ಯುಮೋನಿಯಾ ಕಡಿಮೆ ಆಗಿದೆ. ಪೇಜಾವರಶ್ರೀ ಚಿಕಿತ್ಸೆಗೆ ಸ್ಪಂದನೆ ಮಾಡುತ್ತಿದ್ದಾರೆ. ದೇಹ ಸ್ವಲ್ಪ ನಿತ್ರಾಣಗೊಂಡಿದೆ. ನಿತ್ರಾಣದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಸ್ವಾಮೀಜಿಯ ಬಿಪಿ ಸಂಪೂರ್ಣ ಕಂಟ್ರೋಲ್ ನಲ್ಲಿದೆ. ಸ್ವಾಮೀಜಿ ಸ್ವತಃ ಅವರೇ ಬಿಪಿ ಕಂಟ್ರೋಲ್ ಇಟ್ಟುಕೊಂಡಿದ್ದಾರೆ. ಐಸಿಯುನಲ್ಲಿ ಬಿಪಿಗೆ ನಾವು ಚಿಕಿತ್ಸೆ ಕೊಡುತ್ತಿಲ್ಲ ಎಂದು ಹೇಳಿದರು. ಡಾ. ಶರತ್ ರಾವ್, ಡಾ. ರಾಜೇಶ್ ಶೆಟ್ಟಿ, ಡಾ. ಮಂಜುನಾಥ, ಡಾ. ವಿಶಾಲ್ ಶಾನುಭಾಗ್ ವೈದ್ಯರ ಪ್ರೆಸ್ ಮೀಟ್ ನಲ್ಲಿ ಮಾಹಿತಿ ನೀಡಿದರು.

  • ಇಬ್ಬರು ಮಕ್ಕಳು ನನ್ನ ಥರನೇ – ಈಗ ನಮ್ಮ ಕನಸು ನನಸಾಗಿದೆ ಎಂದ ಯಶ್

    ಇಬ್ಬರು ಮಕ್ಕಳು ನನ್ನ ಥರನೇ – ಈಗ ನಮ್ಮ ಕನಸು ನನಸಾಗಿದೆ ಎಂದ ಯಶ್

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅಕ್ಟೋಬರ್ 30 ರಂದು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದರು. ಅಂದಿನಿಂದ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ರಾಧಿಕಾ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಗನ ಆಗಮನದಿಂದ ದಂಪತಿ ಇಬ್ಬರೂ ತುಂಬಾ ಸಂತಸದಿಂದ ಮಾತನಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಯಶ್ ಮೊದಲಿಗೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ತುಂಬಾ ಖುಷಿಯಿದೆ, ದೇವರ ದಯೆ ಈಗ ಕಂಪ್ಲೀಟ್ ಫ್ಯಾಮಿಲಿ ಆಗಿದೆ. ಗಂಡು, ಹೆಣ್ಣು ಎರಡು ಖುಷಿಯನ್ನು ಅನುಭವಿಸುವ ಭಾಗ್ಯ ನನಗೆ ರಾಧಿಕಾಗೂ ಸಿಕ್ಕಿದೆ. ಹಿರಿಯರು ಹಾಗೂ  ಜನರ ಆಶೀರ್ವಾದ ನಮ್ಮ ಮನೆಯಲ್ಲಿ ಸಂತೋಷದ ಸುದ್ದಿಯೇ ಬರುತ್ತಿದೆ. ತುಂಬಾ ಖುಷಿಯಾಗುತ್ತಿದೆ ಎಂದು ಸಂತಸದಿಂದ ಹೇಳಿದರು.

    ಇಬ್ಬರ ಆರೋಗ್ಯವೂ ಚೆನ್ನಾಗಿದೆ. ಈ ಸಲ ನಾನು ರಜೆ ತೆಗೆದುಕೊಂಡು ರಾಧಿಕಾ ಜೊತೆಯೇ ಕಾಲ ಕಳೆದಿದ್ದೇನೆ. ಇದುವರೆಗೂ ನಾನು ಶೂಟಿಂಗ್‌ಗೆ ಹೋಗಿಲ್ಲ. ನಾನು ಎರಡು ಮಕ್ಕಳು ಹುಟ್ಟಿದಾಗಲೂ ಆಸ್ಪತ್ರೆಯ ಥಿಯೇಟರ್‌ನಲ್ಲಿಯೇ ಇದ್ದೆ. ಜೀವನದಲ್ಲಿ ಮಕ್ಕಳು ಎಂದರೆ ಸಂತೋಷ. ನನಗೆ ಹೆಣ್ಣು ಮಗುವಾಗಬೇಕೆಂಬ ಆಸೆಯಿತ್ತು. ರಾಧಿಕಾಗೆ ಗಂಡು ಮಗುವಾಗಬೇಕೆಂಬ ಆಸೆಯಿತ್ತು. ಈಗ ಇಬ್ಬರ ಕನಸು ನನಸಾಗಿದೆ ಎಂದರು.

    ರಾಧಿಕಾ ನಾನು ಜನ್ಮ ಕೊಟ್ಟಿದ್ದು, ಆದರೆ ಯಾರು ನನ್ನ ತರ ಕಾಣಿಸುತ್ತಿಲ್ಲ ಎಂದು ಹೇಳುತ್ತಿದ್ದರು. ಆದರೆ ಎರಡು ಮಕ್ಕಳು ನನ್ನ ಥರನೇ ಇದ್ದಾರೆ. ಮಕ್ಕಳಾಗುವುದೇ ಭಾಗ್ಯ, ಗಂಡಾಗಲಿ-ಹೆಣ್ಣಾಗಲಿ ಮಕ್ಕಳು ಎಂದರೆ ಸಂತಸ ಎಂದು ಯಶ್ ಖುಷಿಯನ್ನು ಹಂಚಿಕೊಂಡರು.

    ಈ ವೇಳೆ ರಾಧಿಕಾ ಮಾತನಾಡಿ, ನನ್ನ ಜೀವನದಲ್ಲಿ ತಾಯಿ ಎನ್ನುವುದು ಮುಖ್ಯವಾದ ಪಾತ್ರವಾಗಿದೆ. ಅದರಲ್ಲೂ ನನಗೆ ಎರಡನೇ ಬಾರಿ ಅವಕಾಶ ಸಿಕ್ಕಿದೆ. ನಿಜಕ್ಕೂ ತುಂಬಾ ಖುಷಿಯಾಗಿದೆ ಎಂದರು ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದರು.

  • ನಾನು ದೇವೇಗೌಡ್ರ ಬಳಿ ಕ್ಷಮೆ ಕೇಳುತ್ತೇನೆ- ಎಚ್ ವಿಶ್ವನಾಥ್

    ನಾನು ದೇವೇಗೌಡ್ರ ಬಳಿ ಕ್ಷಮೆ ಕೇಳುತ್ತೇನೆ- ಎಚ್ ವಿಶ್ವನಾಥ್

    – ಸಾರಾ ಮಹೇಶ್ ವಿರುದ್ಧ ವಾಗ್ದಾಳಿ

    ಮೈಸೂರು: ನಾನು ದೇವೇಗೌಡರ ಬಳಿ ಕ್ಷಮೆ ಕೇಳುತ್ತೇನೆ. ದೋಸ್ತಿ ಸರ್ಕಾರ ಪತನಕ್ಕೆ ಸರ್ಕಾರ ನಡೆಸಿದವರೇ ಕಾರಣ. ದೋಸ್ತಿ ಸರ್ಕಾರದ ಪತನಕ್ಕೆ ನಾವು 20 ಶಾಸಕರಾಗಲಿ, ಬಿಜೆಪಿ ಆಗಲಿ ಕಾರಣವಲ್ಲ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ಪತನಕ್ಕೆ ಸರ್ಕಾರ ನಡೆಸಿದವರೇ ಕಾರಣವಾಗಿದ್ದಾರೆ. ಸರ್ಕಾರ ನಡೆಸುವವರು ನಾಯಕರ ಥರ ಇರಲಿಲ್ಲ, ಮಾಲೀಕರ ರೀತಿ ಇದ್ದರು. ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಕ್ಷಮೆ ಕೇಳುತ್ತೇನೆ. ಸನ್ನಿವೇಶದ ಒತ್ತಡ, ನನಗೆ ಆದ ಅವಮಾನ, ನನ್ನ ನಿರ್ಲಕ್ಷಿಸಿದ ರೀತಿಯಿಂದ ರಾಜೀನಾಮೆ ಕೊಟ್ಟಿದ್ದೇನೆ. ದೇವೇಗೌಡರ ಮಗಳು ಕೆ.ಆರ್. ಪೇಟೆ ಕ್ಷೇತ್ರಕ್ಕೆ ಬರಲಿದ್ದಾರೆ. ಇದಕ್ಕೆ ಕೆ.ಆರ್. ಪೇಟೆ ಶಾಸಕರಿಗೆ ಅವಮಾನ ಮಾಡಿದರು ಎಂದರು.

    ನನ್ನನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ದೂರ ಮಾಡಿದ್ದೇ ಜೆಡಿಎಸ್ ಎಂದು ಗಂಭೀರ ಆರೋಪ ಮಾಡಿದ ಅವರು, ನಾವು ಅತೃಪ್ತರಲ್ಲ. ನಾವು ತೃಪ್ತರು. ದೋಸ್ತಿ ಸರ್ಕಾರ ನಡೆಸಿದವರು ಅತೃಪ್ತರಾಗಿದ್ದಾರೆ. ದೋಸ್ತಿಗಳ ನಡುವಿನ ಅತೃಪ್ತಿ, ಅಸಮಾಧಾನ, ಅನುಮಾನ ಇದರಿಂದ ಸರ್ಕಾರ ಬೀಳಿಸಿ ಕೊಂಡ್ರಿ. ಇದು ಆಪರೇಷನ್ ಕಮಲ ಅಲ್ಲ. ಸಾರಾ ಮಹೇಶ್ ಎಂಬ ಅಪ್ರಬುದ್ಧ ಬಾಯಿಗೆ ಬಂದಂತೆ ಹೇಳುತ್ತಾನೆ. 20 ಜನ ಶಾಸಕರು ದುಡ್ಡಿಗಾಗಿ ಮಾರಿಕೊಂಡಿಲ್ಲ. ಪದವಿಗಾಗಿ ಪದವಿ ತ್ಯಾಗ ಮಾಡಿಲ್ಲ. ರಾಜೀನಾಮೆ ಕೊಟ್ಟ ಶಾಸಕರು ದುಡ್ಡಿನ ಕುಳಗಳು ಎಂದರು.

    ನಾನು ಸತ್ಯವಂತ, ಸಂತ, ಮಹಾತ್ಮಗಾಂಧಿ ಎಂದೆಲ್ಲ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳುತ್ತಿದ್ದರು. ಆದರೆ, ಅವರು ಮಾಡಿದ್ದೇನು ಎಂದು ಪ್ರಶ್ನಿಸಿದ ವಿಶ್ವನಾಥ್, ಸದನದಲ್ಲಿ ಇಲ್ಲದ ವ್ಯಕ್ತಿ ವಿರುದ್ಧ ಮಾತನಾಡಲು ಬಿಟ್ಟರು ಎಂದು ವಾಗ್ದಾಳಿ ನಡೆಸಿದರು.

    ಸುದ್ದಿಗೋಷ್ಠಿಗೂ ಮುನ್ನ ಮೈಸೂರು ಪತ್ರಕರ್ತರ ಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಸುದ್ದಿಗೋಷ್ಠಿ ವೇಳೆ ಗಲಾಟೆಯಾಗುವ ಸಂಭವದಿಂದಾಗಿ ಎರಡು ತುಕಡಿ ಸಿಆರ್, ಕೆಎಸ್‍ಆರ್ ಪಿ ಹಾಗೂ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.

    ಈ ಮಧ್ಯೆ ಮೈಸೂರು ಪತ್ರಕರ್ತರ ಭವನದ ಬಳಿ ಜೆಡಿಎಸ್ ಕಾರ್ಯಕರ್ತರು ಲಗ್ಗೆಯಿಟ್ಟಿದ್ದು. ಕಾರ್ಯಕರ್ತರನ್ನ ಭವನಕ್ಕೆ ಬರದಂತೆ ಪೊಲೀಸರು ತಡೆದಿದ್ದರು. ಅಲ್ಲದೆ ಸುದ್ದಿಗೋಷ್ಠಿ ಮುಗಿಯುವವೆರೆಗೂ ಬರದಂತೆ ಸೂಚನೆ ನೀಡಿದ್ದರು.

  • ಇಂದು ತುರ್ತು ಸುದ್ದಿಗೋಷ್ಠಿ ಕರೆದ ಸ್ಪೀಕರ್ ರಮೇಶ್ ಕುಮಾರ್

    ಇಂದು ತುರ್ತು ಸುದ್ದಿಗೋಷ್ಠಿ ಕರೆದ ಸ್ಪೀಕರ್ ರಮೇಶ್ ಕುಮಾರ್

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ತುರ್ತು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ.

    ಸ್ಪೀಕರ್ ರಮೇಶ್ ಅವರು ಇಂದು ಬೆಳಗ್ಗೆ 11.30ಕ್ಕೆ ತುರ್ತು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಈ ಮೂಲಕ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಶಾಕ್ ಕೊಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಅಥವಾ ಕೆಲ ಅತೃಪ್ತರ ರಾಜೀನಾಮೆ ಅಂಗೀಕಾರ ಮಾಡುತ್ತಾರಾ, ಉಳಿದ ಅತೃಪ್ತರನ್ನು ಅನರ್ಹತೆ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಸದ್ಯಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಏನು ಹೇಳಬಹುದು ಎಂಬುದು ಕುತೂಹಲಕಾರಿಯಾಗಿದೆ.

    ಈ ಹಿಂದೆ ಅಂದರೆ ಬುಧವಾರ ಸ್ಪೀಕರ್ ಅವರು ಸಂಜೆ ವೇಳೆ ಸುದ್ದಿಗೋಷ್ಠಿ ನಡೆಸಿದ್ದರು. ಆಗ ಅತೃಪ್ತ ಶಾಸಕರಲ್ಲಿ ಪಕ್ಷೇತರ ಶಾಸಕರ ಆರ್. ಶಂಕರ್, ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಹಳ್ಳಿ ಮೂವರು ಶಾಸಕರನ್ನು ಅನರ್ಹ ಮಾಡಿದ್ದರು. ಮೂವರು ಶಾಸಕರನ್ನು ಅನರ್ಹ ಮಾಡಿದ್ದಕ್ಕೆ ಕಾರಣಗಳ ವಿವರಗಳನ್ನು ನೀಡಿದ್ದರು. ಆದರೆ ಈ ಬಾರಿ ಸುದ್ದಿಗೋಷ್ಠಿಯಲ್ಲಿ ಏನು ಹೇಳುತ್ತಾರೆ ಎಂದು ಅತೃಪ್ತ ಶಾಸಕರಲ್ಲಿ ಅನರ್ಹ ಭೀತಿ ಶುರುವಾಗಿದೆ. ಇದನ್ನೂ ಓದಿ: ಅನರ್ಹಗೊಂಡ ಶಾಸಕರು ಮತ್ತೆ ಎಲೆಕ್ಷನ್‍ಗೆ ನಿಲ್ಲುವಂತಿಲ್ಲ- ಸ್ಪೀಕರ್ ಸ್ಪಷ್ಟನೆ

    ಇನ್ನೊಂದೆಡೆ ಸೋಮವಾರ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತು ಮಾಡಲಿದ್ದಾರೆ. ಆದರೆ ಇದಕ್ಕೂ ಮೊದಲೇ ಸ್ಪೀಕರ್ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಆದರೆ ಇಂದಿನ ಸುದ್ದಿಗೋಷ್ಠಿಯಲ್ಲಿ ತಮ್ಮ ವೈಯಕ್ತಿಯ ವಿಚಾರವನ್ನು ಮಾತನಾಡುತ್ತಾರಾ ಅಥವಾ ಅತೃಪ್ತ ಶಾಸಕರ ಭವಿಷ್ಯವನ್ನು ನಿರ್ಧರಿಸಲಿದ್ದಾರಾ ಎಂದು ಪ್ರಶ್ನೆ ಮೂಡಿದೆ.

  • ಮತ್ತೊಮ್ಮೆ ವಿಶ್ವನಾಥ್‍ರ ಮನ ಓಲೈಸುವ ಪ್ರಯತ್ನ ಮಾಡ್ತೇವೆ: ಎಚ್‍ಡಿಡಿ

    ಮತ್ತೊಮ್ಮೆ ವಿಶ್ವನಾಥ್‍ರ ಮನ ಓಲೈಸುವ ಪ್ರಯತ್ನ ಮಾಡ್ತೇವೆ: ಎಚ್‍ಡಿಡಿ

    -ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಮೈತ್ರಿ ರಚನೆ
    -ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ನೀಡದಕ್ಕೆ ನೋವಿದೆ

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್. ವಿಶ್ವನಾಥ್ ಅವರು ರಾಜೀನಾಮೆ ನೀಡಿರುವ ವಿಚಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರವರು ಪ್ರತಿಕ್ರಿಯಿಸಿ ನಾವು ಮತ್ತೊಮ್ಮೆ ಅವರ ಮನವೊಲಿಸಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶುಕ್ರವಾರ ನಮ್ಮ ಪಕ್ಷದಲ್ಲಿ ಸೋತ ಅಭ್ಯರ್ಥಿಗಳ ಸಭೆ ನಡೆಯಲಿದೆ. ಅಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನ ಮಾಡಲಾಗುತ್ತೆ, ಈ ಹಿಂದೆ ಹೇಳಿದಂತೆ ನಾನು ಸೋತವರನ್ನು ಕಡೆಗಾಣಿಸದೇ ಅವರಿಗೂ ನಾಳೆ ಗೌರವ ಕೊಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

    ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ಅವರು ರಾಜೀನಾಮೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಶ್ವನಾಥ್ ರಾಜೀನಾಮೆ ಕೊಟ್ಟಿದ್ದಾರೆ. ಹಿಂದುಳಿದ ವರ್ಗದ ಮುಖಂಡರ ಸಭೆ ಇಂದು ಮಾಡುತ್ತೇನೆ. ಈ ಸಭೆಗೆ ವಿಶ್ವನಾಥ್ ಕೂಡ ಬರುತ್ತಾರೆ. ಅಲ್ಲಿ ಮುಖಂಡರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಹಾಗೆಯೇ ಮತ್ತೊಮ್ಮ ಹಿಂದುಳಿದ ವರ್ಗದ ನಾಯಕರ ಜೊತೆ ಸೇರಿ ವಿಶ್ವನಾಥ್ ಅವರ ಮನವೊಲಿಕೆಗೆ ಪ್ರಯತ್ನ ಮಾಡುತ್ತೇವೆ. ಪಕ್ಷದ ಅಧ್ಯಕ್ಷರು ಪಕ್ಷ ಬಿಡಲ್ಲ, ಆದರೆ ಅಧ್ಯಕ್ಷ ಸ್ಥಾನದಲ್ಲಿ ಇರಲ್ಲ ಎಂದಿದ್ದಾರೆ. ಈಗ ನಾನು ಅದಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಎರಡು ದಿನಗಳ ಹಿಂದೆ ಸುದೀರ್ಘವಾದ ಚರ್ಚೆ ಆಯ್ತು. ಗುರುವಾರ ಬಂದು ಹೇಳುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ ಎಂದು ತಿಳಿಸಿದರು.

    ಸಂಪುಟ ವಿಸ್ತರಣೆಯಲ್ಲಿ ಮುಸ್ಲಿಮರಿಗೆ ಅವಕಾಶ ಕೊಡಲಿಲ್ಲ ಅನ್ನೋ ವಿಚಾರದ ಬಗ್ಗೆ ಮಾತನಾಡಿ, ಸಿಎಂ ಮತ್ತು ದೇವೇಗೌಡರ ನಡುವೆ ಭಿನ್ನಾಭಿಪ್ರಾಯ ಇದೆ ಅನ್ನೋದು ಮಾಧ್ಯಮಗಳ ಕಲ್ಪನೆ ಅಷ್ಟೇ. ಬುಧವಾರ ಎರಡು ನಿಗಮಗಳ ಅಧ್ಯಕ್ಷರ ನೇಮಕ ಮಾಡುವಾಗಲೂ ನನ್ನ ಸಲಹೆ ಕೇಳಲು ಸಿಎಂ ಬಂದಿದ್ದರು. ಅವರಿಗೆ ನಾನು ಸಲಹೆ ನೀಡಿದ್ದೇನೆ. ಆರು ತಿಂಗಳು ಅಥವಾ ಒಂದು ವರ್ಷಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ಬರಲಿದೆ. ಈ ಬಾರಿಯ ಸ್ಥಳೀಯ ಸಂಸ್ಥೆಯಲ್ಲಿ ನಾವು ಎಂಎಲ್‍ಎ ಕ್ಷೇತ್ರದಲ್ಲಿ ಗೆಲ್ಲದ ಜಾಗದಲ್ಲಿ 3-4 ಜನ ಗೆದ್ದಿದ್ದಾರೆ. ಮುಸ್ಲಿಮರಿಗೆ ಅನ್ಯಾಯ ಮಾಡಿದ್ದೇವೆ ಎಂದಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 50% ಅಲ್ಪಸಂಖ್ಯಾತ ಸಮುದಾಯದವರು ಗೆದ್ದಿದ್ದಾರೆ. ಆದರೂ ಸಚಿವ ಸ್ಥಾನ ಕೊಡಲಿಲ್ಲ ಅನ್ನೋ ನೋವಿದೆ ಅವರಿಗೆ. ಅದಕ್ಕೆ ಕ್ಷಮೆ ಕೇಳುತ್ತೇನೆ. ಅನೇಕ ಕೆಲಸ ಅವರಿಗಾಗಿ ಮಾಡಿದ್ದೇವೆ. ಆದರೆ ನಾನು ಅಲ್ಪಸಂಖ್ಯಾತರಿಗೆ ಏನು ಮಾಡಿಲ್ಲ ಅನ್ನೋದು ತಪ್ಪು ಎಂದು ಕಿಡಿಕಾರಿದರು.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ನೀವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಿರಿ ಎಂದು ಹೇಳಿದ್ದೇನೆ. ಮೊನ್ನೆ ರಾಹುಲ್ ಅವರನ್ನು ಭೇಟಿಯಾದಾಗ ರಾಜಕೀಯದ ಬಗ್ಗೆ ಮಾತಾಡಿಲ್ಲ. ನಾವು ಒಂದು ಸಚಿವ ಸ್ಥಾನ ಪಕ್ಷೇತರಿಗೆ ನೀಡಿದ್ದೇವೆ ಎಂದು ಹೇಳಿದ್ದೇನೆ. ನಾಯಕರು ಬಹಿರಂಗ ಹೇಳಿಕೆ ಕೊಡದಂತೆ ಸೂಚನೆ ನೀಡಲು ರಾಹುಲ್‍ರಿಗೆ ತಿಳಿಸಿದ್ದೇನೆ. ಪಕ್ಷದ ಬಗ್ಗೆ ಯಾರು ಮಾತಾಡದಂತೆ ಕ್ರಮವಹಿಸಲು ಹೇಳಿದ್ದೇನೆ. ಇದು ಬಿಟ್ಟು ಏನನ್ನು ಅವರ ಜೊತೆ ಮಾತಾಡಿಲ್ಲ ಎಂದರು.

    ನಾಯಕರು ಬಹಿರಂಗವಾಗಿ ಮಾತಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ. ಹೀಗಾಗಿ ಅದನ್ನ ಕಂಟ್ರೋಲ್ ಮಾಡಲು ಹೇಳಿದ್ದೇನೆ. ಒಂದು ಸ್ಥಾನ ಹೋಯ್ತು ಅಂತ ನಾನು ಚಿಂತೆ ಮಾಡೊಲ್ಲ. ಸಿದ್ದರಾಮಯ್ಯ ಸಲಹೆ ಮೇರೆಗೆ ಒಂದು ಸ್ಥಾನ ಕಾಂಗ್ರೆಸ್ ಅವರಿಗೆ ನೀಡಿದ್ದೇವೆ. ಒಳ್ಳೆ ಕೆಲಸ ಮಾಡಿದರು ಮಾಧ್ಯಮಗಳು ಹೇಳುತ್ತಿಲ್ಲ. ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗದಂತೆ ನಡೆಯಬೇಡಿ ಅಂತ ರಾಹುಲ್‍ಗೆ ಮನವಿ ಮಾಡಿದ್ದೇವೆ. ರಾಹುಲ್ ಬಿಟ್ಟು ನಾನು ಯಾರನ್ನು ಭೇಟಿಯಾಗಿಲ್ಲ ಎಂದು ಹೇಳಿದರು.

    ಸರ್ಕಾರದ ಬಗ್ಗೆ ಜಾಹೀರಾತು ನೀಡಿದ್ದೇವೆ. ಸಿಎಂ ನಾಳೆಯಿಂದ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಇದೊಂದು ವಿಶೇಷ ಕಾರ್ಯಕ್ರಮ. ಹಿಂದೆ ಕಾಮರಾಜರು ಸಿಎಂ ಆದಾಗ ಹೀಗೆ ಮಾಡಿದ್ದರು. ಗ್ರಾಮಗಳಲ್ಲಿ ಇರುವ ಸಮಸ್ಯೆ ಪರಿಹಾರ ನೀಡುವ ಕಾರ್ಯಕ್ರಮ ಇದು. ಸಿಎಂ ಗ್ರಾಮ ವಾಸ್ತವ್ಯ ವಿಚಾರ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಎಂದು ವಿಭಾಗ ಬೇಡ. 30 ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿ ಅಂತ ಸಿಎಂಗೆ ಸಲಹೆ ಕೊಟ್ಟಿದ್ದೇನೆ ಎಂದರು.

    ಮಾಧ್ಯಮಗಳಲ್ಲಿ ಮೈತ್ರಿ ಸರ್ಕಾರ ನಡೆಸಿದರೆ ಕಾಂಗ್ರೆಸ್‍ಗೆ ಡ್ಯಾಮೇಜ್ ಆಗುತ್ತೆ ಎಂದು ಕೆಲವು ನಾಯಕರು ಹೇಳಿದ್ದಾರೆ. ಈ ಬಗ್ಗೆ ನಾನೇನು ಹೇಳೊಲ್ಲ. ಮೈತ್ರಿ ಸರ್ಕಾರ ನಾನು ಮಾಡಿದ್ದಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಸರ್ಕಾರ ರಚನೆ ಆಗಿದ್ದು, ನಾನು ಅವತ್ತೆ ಕಾಂಗ್ರೆಸ್ ನಾಯಕರಿಗೆ ಸರ್ಕಾರ ರಚನೆ ಬೇಡ ಎಂದು ಹೇಳಿದ್ದೆ. ಆದರೆ ಕಾಂಗ್ರೆಸ್ ನಾಯಕ ಗುಲಾಂನಬಿ ಅಜಾದ್ ಕೈ ಹಿಡಿದು ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಮನವಿ ಮಾಡಿದರು. ನಾನು ಆಗೋಲ್ಲ ಎಂದಿದ್ದೆ ಆದರೆ ಬೆಳಗ್ಗೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂದರು ಅಲ್ಲಿಂದ ಇಲ್ಲಿಯವರೆಗೂ ಸರ್ಕಾರ ಬಂದಿದೆ ಎಂದು ತಿಳಿಸಿದರು.

    ನಮ್ಮಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗೋ ರೀತಿ ನಾನು, ನಮ್ಮ ಪಕ್ಷದವರು ಮಾತಾಡೊಲ್ಲ. ನಾನು ಪಕ್ಷ ಸಂಘಟನೆ ಬಗ್ಗೆ ಕೆಲಸ ಮಾಡುತ್ತೇನೆ. ನಮ್ಮಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲದಂತೆ ನಡೆದುಕೊಳ್ತೀವಿ. ಮುಂದಿನ ಚುನಾವಣೆಗಳಿಗೆ ಪಕ್ಷವನ್ನು ತಯಾರಿ ಮಾಡೋ ಕೆಲಸ ನಾನು ಮಾಡ್ತೀನಿ ಅಷ್ಟೆ. ಇನ್ಯಾವುದೇ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಸ್ಪಷ್ಟಪಡಿಸಿದರು.

    ಒಂದು ದೇಶ ಒಂದು ಚುನಾವಣೆ ವಿಚಾರವಾಗಿ ಮಾತನಾಡಿ, ಪ್ರಾದೇಶಿಕ ಪಕ್ಷಗಳಲ್ಲಿ ಇದಕ್ಕೆ ಭಿನ್ನ ಭಿನ್ನ ಅಭಿಪ್ರಾಯ ಇದೆ. ಒಂದೇ ಬೂತಲ್ಲಿ ಎರಡೆರಡು ಇವಿಎಂ ಇಟ್ಟು ಮತದಾನ ಆಗುತ್ತೆ. ಅಷ್ಟು ದೂರಕ್ಕೆ ನಾವಿನ್ನೂ ಮುಂದುವರೆದಿಲ್ಲ. ಸದ್ಯಕ್ಕೆ ಒಂದು ದೇಶ ಒಂದು ಚುನಾವಣೆ ವಿಚಾರ ಕಷ್ಟ ಎಂದ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೆಯೇ ಕಾಂಗ್ರೆಸ್ ಒಂದೇ ಲೋಕಸಭೆಯಲ್ಲಿ ಹೋಗಿದ್ದರೆ 10 ಸ್ಥಾನ ಬರುತ್ತಿತ್ತು ಎಂದು ರಾಹುಲ್ ಗಾಂಧಿಗೆ ಸಿದ್ದರಾಮಯ್ಯರಿಂದ ದೂರು ಹೋಗಿರುವ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸಿದ್ದರಾಮಯ್ಯ ಒತ್ತಡವೇ ಅಮಾನತಿಗೆ ಕಾರಣವಿರಬಹುದು: ರೋಷನ್ ಬೇಗ್

    ಸಿದ್ದರಾಮಯ್ಯ ಒತ್ತಡವೇ ಅಮಾನತಿಗೆ ಕಾರಣವಿರಬಹುದು: ರೋಷನ್ ಬೇಗ್

    -ಸತ್ಯ ಹೇಳಿದರೆ ಅವರಿಗೆ ತಡೆದುಕೊಳ್ಳೋಕೆ ಆಗಲ್ವಾ?
    – ಕಾಂಗ್ರೆಸ್‍ನಲ್ಲೇ ಇರುತ್ತೇನೆ

    ಬೆಂಗಳೂರು: ನಾನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿಯಾಗಿದ್ದೇನೆ. ಸಿದ್ದರಾಮಯ್ಯ ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿ ಅಲ್ಲ. ಸಿದ್ದರಾಮಯ್ಯ ಒತ್ತಡವೂ ನನ್ನ ಅಮಾನತಿಗೆ ಕಾರಣವಿರಬಹುದು ಎಂದು ಶಿವಾಜಿನಗರ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

    ಕಾಂಗ್ರೆಸ್ ಪಕ್ಷದಿಂದ ಅನಾನತುಗೊಂಡ ವಿಚಾರವಾಗಿ ಶಾಸಕ ರೋಷನ್ ಬೇಗ್ ತಮ್ಮ ಫ್ರೇಜರ್ ಟೌನ್ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ನಾನು ಇವತ್ತು ಪಕ್ಷದ ಬಗ್ಗೆ ಮಾತ್ರ ಮಾತಾನಾಡುತ್ತೇನೆ. ಮಂಗಳವಾರ ರಾತ್ರಿ ನನ್ನನ್ನು ಪಕ್ಷದಿಂದ ಅಮಾನತು ಮಾಡಿರುವ ಸುದ್ದಿ ತಿಳಿಯಿತು. ಸಿದ್ದರಾಮಯ್ಯ ಒತ್ತಡವೂ ನನ್ನ ಅಮಾನತಿಗೆ ಕಾರಣವಿರಬಹುದು. ನಾನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಸಿಪಾಯಿ. ಸಿದ್ದರಾಮಯ್ಯ ಕಾಂಗ್ರೆಸ್ಸಿನ ಸಿಪಾಯಿ ಅಲ್ಲ. ಅವರೇ ಕಾಂಗ್ರೆಸ್ಸನ್ನು ಈ ದುರ್ಗತಿಗೆ ತಂದಿದ್ದಾರೆ. ನಾನು ಸತ್ಯ ಹೇಳಿದ್ದೀನಿ. ಸತ್ಯ ಹೇಳೋದು ಅಪರಾಧಾನಾ? ನಾನು ಸತ್ಯ ಹೇಳಿದರೆ ಅವರಿಗೆ ತಡ್ಕೊಳ್ಳೋಕಾಗಲ್ಲವಾ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

    ನಾನು ರಾಹುಲ್ ಗಾಂಧಿಯವರನ್ನು ಟೀಕಿಸಿಲ್ಲ. ನಾನು ಈ ಕ್ಷಣದವರೆಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿಯೇ ಇದ್ದೇನೆ. ನಾನು ರಾಜ್ಯ ನಾಯಕರ ಬಗ್ಗೆ ಸತ್ಯ ಮಾತನಾಡಿದ್ದೀನಿ. ಹಿರಿಯ ಕಾಂಗ್ರೆಸ್ ನಾಯಕರಾದ ಮುನಿಯಪ್ಪ, ರಾಮಲಿಂಗಾರೆಡ್ಡಿ ಜೊತೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್ ಕಾರ್ಯಕರ್ತರ ಮನದ ಅಭಿಪ್ರಾಯವನ್ನು ನಾನು ಮಾತಾಡಿದ್ದು ಅಷ್ಟೇ. ರಮೇಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ ಅವರ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು. ನಾನು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಚಿಂತನೆ ಇಲ್ಲ. ಅಮಾನತುಗೊಂಡಿರುವ ವಿಚಾರವನ್ನು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ರಾಮಲಿಂಗಾರೆಡ್ಡಿ, ಎಚ್.ಕೆ ಪಾಟೀಲ್ ಅವರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

    ರಾಜ್ಯದಲ್ಲಿ ಕಾಂಗ್ರೆಸ್ ಒಂದೇ ಒಂದು ಸೀಟು ಗೆದ್ದಿದೆ. ಮುನಿಯಪ್ಪರನ್ನ ಸೋಲಿಸುತ್ತೇವೆ ಎಂದು ಬಹಿರಂಗವಾಗಿ ಕೆಲವರು ಹೇಳಿದ್ದರು. ಅವರ ವಿರುದ್ಧ ಯಾಕೆ ಪಕ್ಷ ಕ್ರಮ ತೆಗೆದುಕೊಂಡಿಲ್ಲ. ಮಂಡ್ಯದಲ್ಲಿ ಸುಮಲತಾ ಅವರ ಪರ ಕೈ ಪಕ್ಷದವರು ಕೆಲಸ ಮಾಡಿದ್ದರು. ಮಂಡ್ಯದ ಕಾಂಗ್ರೆಸಿಗರ ವಿರುದ್ಧ ಯಾಕೆ ಕ್ರಮ ಇಲ್ಲ ಎಂದು ಹರಿಹಾಯ್ದರು.

    ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ನಮ್ಮನ್ನೆಲ್ಲ ಕರೆದು ಚರ್ಚೆ ಮಾಡಬೇಕಿತ್ತು. ಕ್ಲೋಸ್ಡ್ ಡೋರ್ ನಲ್ಲಿ ಗುಸು ಗುಸು ಎಂದು ಪಕ್ಷದ ಬಗ್ಗೆ ಚರ್ಚೆ ಮಾಡಕ್ಕಾಗಲ್ಲ. ಎಲ್ಲರೂ ಒಟ್ಟಾಗಿ ಚರ್ಚೆ ಮಾಡಬೇಕು. ನಾನು ಪಕ್ಷದ ರಾಜ್ಯ ನಾಯಕರ ಬಗ್ಗೆ ಮಾತಾಡಿದ್ದಕ್ಕೆ ಹಲವರಿಂದ ಬೆಂಬಲ ಬಂತು. ತುಮಕೂರಲ್ಲಿ ಮುದ್ದಹನುಮೇಗೌಡರನ್ನು ಬಲಿಕೊಟ್ಟರು. ಅವರೇನು ತಪ್ಪು ಮಾಡಿದ್ದರು? ಮೈತ್ರಿ ಎಂದು ಹೇಳುತ್ತಲೇ ಮಾಜಿ ಪ್ರಧಾನಿ ದೇವೇಗೌಡರನ್ನೂ ಸೋಲಿಸಿದ್ರಲ್ಲ ಎಂದು ಕೆಲ ಕೈ ನಾಯಕರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

    ನಂತರ ಐಎಂಎ ಪ್ರಕರಣದ ಬಗ್ಗೆ ನಾನು ಮಾತಾಡಲ್ಲ. ಅದರ ತನಿಖೆ ನಡೀತಿದೆ ಎಂದು ಹೇಳಿದರು. ಇಂದು ರಾಹುಲ್ ಗಾಂಧಿ ಅವರ ಜನ್ಮದಿನ. ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಬೇಕು ಎನ್ನುತ್ತಾ ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ತಮ್ಮ ನಿರ್ಧಾರವನ್ನು ತಿಳಿಸಿದರು.

    ಅವರೊಂದಿಗೆ ಗುಣಶೇಖರ್, ನೇತ್ರಾವತಿ ಕೃಷ್ಣೇಗೌಡ, ಮುರುಗಾ ಅವರು ಸೇರಿ ನಾಲ್ವರು ಕಾರ್ಪೊರೇಟರ್ ಗಳು ಸಾಥ್ ನೀಡಿದ್ದರು