ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ತನಿಖೆಯಲ್ಲಿ ನಮ್ಮ ಸರ್ಕಾರದ ವೈಫಲ್ಯ ಇಲ್ಲ. ಒಂದು ಸುಳ್ಳು ಸಾವಿರ ಬಾರಿ ಹೇಳುವುದು ಕಾಂಗ್ರೆಸ್ ಸಂಸ್ಕೃತಿ. ಇಡೀ ದೇಶದಲ್ಲಿ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ ಎಂದು ಸಚಿವ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸೋಮಣ್ಣ, ಗೋಪಾಲಯ್ಯ ಶಾಸಕ ಪ್ರೀತಂ ಗೌಡ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್, ಮುಂದಿನ ಚುನಾವಣೆ ಎದುರಿಸಲು ಸೃಷ್ಟಿ ಮಾಡಿಕೊಂಡಿರುವ ವಿಚಾರವೇ ಬಿಟ್ ಕಾಯಿನ್. ನಿತ್ಯ ಏನು ಸುಳ್ಳು ಹೇಳಬೇಕು ಎಂಬುದು ಕಾಂಗ್ರೆಸ್ ಚಿಂತೆಯಾಗಿದೆ. ಹಾವು ಬಿಡುತ್ತೇವೆ, ಹಾವು ಬಿಡುತ್ತೇವೆ ಅಂತ ಖಾಲಿ ಬುಟ್ಟಿ ಇಟ್ಟುಕೊಂಡು ಸೌಂಡ್ ಮಾಡುತ್ತಿದ್ದಾರೆ. ಇವರ ಹಣೆಬರಹವೇ ಇಷ್ಟು ಎಂದು ಟೀಕಿಸಿದರು. ಇದನ್ನೂ ಓದಿ: ಹುಬ್ಬಳ್ಳಿ ಆಹಾರ ನಿಗಮದ ವಿಭಾಗೀಯ ಕೇಂದ್ರ ಕಚೇರಿಗೆ ಪಿಯೂಷ್ ಗೋಯಲ್ ಚಾಲನೆ
ಜವಾಬ್ದಾರಿಯುತ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಇಬ್ಬರು ಹೆಸರು ಹೇಳಲಿ. ಹಾವು ಇಲ್ಲದ ಬುಟ್ಟಿ ಇಟ್ಟುಕೊಂಡು ನಗೆ ಪಾಟಲು ಆಗುವುದು ಬೇಡ ಎಂದು ಸವಾಲು ಹಾಕಿದರು. 2ಜಿ 3ಜಿ ಕಲ್ಲಿದ್ದಲು ಹೀಗೆ ಸಾವಿರಾರು ಕೋಟಿ ರೂ. ಹಗರಣ ಮಾಡಿದ್ದು ಕಾಂಗ್ರೆಸ್. ಇವತ್ತು ದೇಶ ನಡೆಸುತ್ತಿರುವುದು ದೇಶಭಕ್ತ ನರೇಂದ್ರ ಮೋದಿ ಸರ್ಕಾರ ಎಂಬುದು ನೆನಪಿರಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104ರ ವೃದ್ಧೆಯ ಸ್ಫೂರ್ತಿದಾಯಕ ಕಥೆ
ರಫೆಲ್ ವಿಚಾರದಲ್ಲಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದರು. ಅದರಲ್ಲಿ ಲಂಚ ತಿಂದವರು ಇದೇ ಕಾಂಗ್ರೆಸ್‍ನವರು. ಬಿಟ್ ಕಾಯಿನ್ 4,500 ಕೋಟಿ ರೂ. ಅಂತಾರೆ ದಾಖಲೆ ಕೊಡಲಿ. ಇವರಿಗೆ ತಾಕತ್ತು ಇದ್ದರೆ. 2016 ರಲ್ಲೇ ಈ ವ್ಯವಹಾರ ನಡೆದಿದೆ. ವಿದ್ವತ್ ಹಲ್ಲೆ ಪ್ರಕರಣದಲ್ಲಿ ಶ್ರೀಕಿ ಬಂಧಿಸದೇ ಬಿಟ್ಟು ಕಳುಹಿಸಿದರು ಕಾಂಗ್ರೆಸ್‍ನವರು. ಆಗ ಯಾವ ಒತ್ತಡ ಇತ್ತು. ಸುರ್ಜೆವಾಲ ದೆಹಲಿಯಲ್ಲಿ ಹೇಳುವ ಸಂಸ್ಥೆ ಅಸ್ತಿತ್ವದಲ್ಲೇ ಇಲ್ಲ. ಒಂದು ರಾಷ್ಟ್ರೀಯ ಪಕ್ಷದ ಉಸ್ತುವಾರಿ ಮಾಹಿತಿ ಇಲ್ಲದೆ ಮಾತನಾಡುವುದು ಅವರ ದಿವಾಳಿತನಕ್ಕೆ ಸಾಕ್ಷಿ ಎಂದು ಲೇವಡಿ ಮಾಡಿದರು.
ಸದ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರು ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದೇ ವೇಳೆ ನಾನು ಪತ್ರಿಕೋದ್ಯಮದಿಂದ ಬಂದಂತಹ ವ್ಯಕ್ತಿ. ನಾನು ಪತ್ರಿಕೆ ಮೂಲಕವೇ ಘರ್ಜಿಸಿದ್ದಂತವನು. ಪೇಪರ್ ಸಿಂಹ ಅಂದರೆ ನನಗೆ ಯಾವುದೇ ಬೇಸರ ಇಲ್ಲ. ಪ್ರತ್ರಿಕೋದ್ಯಮದ ಮೂಖಾಂತರ ಇಂದು ನಾನು ಮೈಸೂರು ಮತ್ತು ಕೊಡಗಿನಂತಹ ಕಷ್ಟದ ಎರಡು ಕ್ಷೇತ್ರಗಳಲ್ಲಿ ಸಂಸದನಾಗಿದ್ದೇನೆ. ನನ್ನ ಪ್ರಾಮಾಣಿಕ ಬರವಣಿಗೆ ಮೂಲಕ ನಾನು ಇಂದು ಈ ಸ್ಥಾನದಲ್ಲಿ ಕುಳಿತುಕೊಂಡಿದ್ದೇನೆ. ಆದ್ರೆ ನನ್ನನ್ನು ಪೇಪರ್ ಸಿಂಹ ಎಂದು ಹೇಳುತ್ತಿರುವ ಮರಿ ಖರ್ಗೆ ಹೆಸರು ಗಂಡೋ, ಹೆಣ್ಣೋ ಯಾರಿಗೂ ಗೊತ್ತೆ ಆಗುವುದಿಲ್ಲ. ಏಕೆಂದರೆ ಅವರು ರಾಜೀವ್ ಗಾಂಧಿ ಮಗಳ ಹೆಸರು ಇಟ್ಟುಕೊಂಡಿದ್ದಾರೆ. ಹೆಸರಲ್ಲೂ ಕೂಡ ಸ್ವಂತತೆ ಇಲ್ಲ ಎಂದು ಅಣುಕಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು
ಸ್ವಂತತೆ ಇಲ್ಲದಂತಹ ವ್ಯಕ್ತಿಯನ್ನು ಚುನಾವಣೆಯಲ್ಲಿ ನಿಲ್ಲಿಸಿ ಸೋತು. ಮತ್ತೆ ಎರಡನೇ ಭಾರೀ ಅವರನ್ನು ಗೆಲ್ಲಿಸಿ. ನಾನು ಬದುಕಿದ್ದಾಗಲೇ ಅವರನ್ನು ಮಂತ್ರಿ ಮಾಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಅವರು ಬಾಬು ರಾವ್ ಚಿಂತನ್ ಸುಳಿ, ಜಾಧವ್ ಅವರನ್ನೆಲ್ಲಾ ಬದಿಗೊತ್ತಿ ಮಗನಿಗೆ ಮಂತ್ರಿ ಸ್ಥಾನ ಕೊಡಿಸಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಸರದಾರ ಅಂತ ಅನಿಸಿಕೊಂಡು ಖರ್ಗೆ ಅವರು ಮೂಲೆ ಕುಳಿತುಕೊಳ್ಳಬೇಕಾಯಿತು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವ್ರೆ ಯಾರೋ ಬರೆದ್ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು: ಪ್ರತಾಪ್ ಸಿಂಹ
ಬಡವ, ನಿರ್ಗತಿಕ ಶೋಷಿತ ವರ್ಗದವರು ತುಳಿತಕ್ಕೊಳಗದವರು ಅಂತ ಅನಿಸಿಕೊಂಡು ಡಾಲರ್ಸ್ ಕಾಲೋನಿ, ಸದಾ ಶಿವನಗರದಲ್ಲಿ ನಾಲ್ಕು-ನಾಲ್ಕು ಮನೆ ಕಟ್ಟಿಕೊಂಡು, ಕಾಲಿಗೊಂದು, ಕೈಗೊಂದು ಬಿಎಂಡಬ್ಲೂ, ಆಡಿ ಕಾರುಗಳನ್ನು ಇಟ್ಟುಕೊಂಡು ಓಡಾಡುವಂತಹ ವ್ಯಕ್ತಿಗಳ ಬಾಯಿಂದ ಹಳೆಯ ಕಾಲದ ಕುರ್ತಾ ಹಾಕಿಕೊಂಡು ಓಡಾಡುವಂತಹ ನಮ್ಮ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಆರೋಪಗಳನ್ನು ಕೇಳುವಂತಹದು ಅಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದು ಪ್ರಿಯಾಂಕ ಖರ್ಗೆಗೆ ತಿರುಗೇಟು ನೀಡಿದ್ದಾರೆ.
ಮೈಸೂರು: ಸಿದ್ದರಾಮಯ್ಯ ಅವರೇ ಯಾರೋ ಬರೆದು ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು ವಿವರಿಸುವುದು ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ, ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ ಅವರು, ಬಿಟ್ ಕಾಯಿನ್ ಬಗ್ಗೆ ಆರೋಪ ಮಾಡುವವರಿಗೂ ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ಮಾಹಿತಿ ಇಲ್ಲ. ಕಾಂಗ್ರೆಸ್‍ನವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಸುರ್ಜೆವಲಾಗೆ ಸಿದ್ದರಾಮಯ್ಯ – ಡಿಕೆಶಿ ನಡುವಿನ ಗಲಾಟೆ ಬಿಡಿಸಲು ಆಗುತ್ತಿಲ್ಲ. ಹೀಗಾಗಿ, ಸುರ್ಜೆವಲಾ ದೆಹಲಿಯಲ್ಲೇ ಕೂತು ಸುದ್ದಿಗೋಷ್ಠಿ ನಡೆಸಿ ಊಹಾಪೋಹ ಹಬ್ಬಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ದಯವಿಟ್ಟು ಹೇಳಿ ಈ ಬಿಟ್ ಕಾಯಿನ್ ಅಂದರೇ ಏನೂ ಅಂತ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ
ರಾಜಕಾರಣದಲ್ಲಿ ಕೆಲವರು ಮಾಧ್ಯಮಗಳ ಕೂಡ ಸುದ್ದಿಗಳನ್ನು ಪ್ಲಾಂಟ್ ಮಾಡಿಸುತ್ತಿದ್ದಾರೆ. ಸಿಎಂ ಬದಲಾಗುತ್ತಾರೆ, ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುತ್ತಾರೆ ಎಂದು ಕೆಲವರು ಸುದ್ದಿ ಪ್ಲಾಂಟ್ ಮಾಡಿಸುತ್ತಿದ್ದಾರೆ. ಕಾಲು, ಬಾಲ ಇಲ್ಲದ ಸುದ್ದಿಗಳನ್ನು ಕಾಂಗ್ರೆಸ್ ಹರಡಿಸುತ್ತಿದೆ. ಶ್ರೀಕಿಯನ್ನು ಬಂಧಿಸಿದವರ ಮೇಲೆ ಯಾಕೆ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಶ್ರೀಕಿಗೆ ವ್ಯವಹಾರ ಇರೋದು ಕಾಂಗ್ರೆಸ್ ಮುಖಂಡರ ಮಕ್ಕಳ ಜೊತೆ ಮರಿ ಖರ್ಗೆ ಹಾಗಾಗ ಮಾಧ್ಯಮಗಳ ಮುಂದೆ ಬಂದು ಕಾಕಾ ಎನ್ನುತ್ತಿದ್ದಾರೆ. ದಿನವೂ ರಂಗು ರಂಗಾದ ಕಥೆಗಳನ್ನು ಕಾಂಗ್ರೆಸ್ ಸೃಷ್ಟಿಸುತ್ತಿದೆ. ಯಾವ ಜನಧನ್ ಅಕೌಂಟ್ ಹ್ಯಾಕ್ ಆಗಿದೆ? ಯಾರ ಅಕೌಂಟ್‍ನಿಂದ ಹಣ ಕದಿಯಲಾಗಿದೆ. ಒಂದು ಫ್ರೂಪ್ ಕೊಡಿ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಕೆಲವರು ಭ್ರಷ್ಟಾಚಾರ ಮಾಡಿ ಅಕೌಂಟ್‍ಗೆ ಹಾಕಿಕೊಂಡಿರಬೇಕು. ಶ್ರೀಕಿ ಇಂತಹ ಅಕೌಂಟ್‍ಗಳನ್ನು ಹ್ಯಾಕ್ ಮಾಡಿ ಹಣ ಕದ್ದಿರಬೇಕು. ಹೀಗಾಗಿ, ಸಿದ್ದರಾಮಯ್ಯ ಬಾಯಿ ಬಡಿದುಕೊಳ್ಳುತ್ತಿರಬೇಕು. ಸಿದ್ದರಾಮಯ್ಯನವರದು ಉಗಿದು ಓಡಿ ಹೋಗುವ ಪ್ರವೃತಿ ಎಂದಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು
ಸಿದ್ದರಾಮಯ್ಯ ಅವರೇ ಯಾರೋ ಬರೆದು ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು ವಿವರಿಸೋದು. ಬರೀ ಉಗಿದು ಓಡಿ ಹೋಗುವ ರಾಜಕಾರಣ ಮಾಡಿ, ಬೊಮ್ಮಾಯಿ ವಿರುದ್ಧ ಬಾಹ್ಯ, ಆಂತರಿಕ ಶತೃಗಳು ಕಾಲ್ಪನಿಕ ಭ್ರಷ್ಟಾಚಾರ ಸೃಷ್ಟಿ ಮಾಡಿ ಆರೋಪ ಮಾಡಲಾಗುತ್ತಿದೆ. ಬೊಮ್ಮಾಯಿ ನೆಮ್ಮದಿಯಾಗಿ ಆಡಳಿತ ನಡೆಸಬಾರದು ಎಂಬುದು ಕೆಲವರ ಷಡ್ಯಂತ್ರ. ಸಿದ್ದರಾಮಯ್ಯ ಅವರೇ ನೀವು ಭ್ರಷ್ಟಾಚಾರ ದಲ್ಲಿ ಮಾಡಿದ ಹಣ ಕಳೆದುಕೊಂಡು ಈಗ ಸಂಕಟ ಪಡುತ್ತಿದ್ದಾರೆ. ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿ ಅವರಿವರ ಹೆಸರಿನಲ್ಲಿ ಇಟ್ಟ ಹಣವನ್ನು ಶ್ರೀಕಿ ಕದ್ದಿರಬೇಕು. ಹೀಗಾಗಿ, ಸಿದ್ದರಾಮಯ್ಯ ಸಂಕಟದಲ್ಲಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಭವಿಷ್ಯದ ಚಿಂತೆ ನಿಮಗೆ ಬೇಡ. ನಿಮ್ಮ, ನಿಮ್ಮ ಭವಿಷ್ಯ ನೀವು ಮೊದಲು ನೋಡಿಕೊಳ್ಳಿ. ನಮ್ಮ ಪಕ್ಷದವರೇ ಈ ಪ್ರಕರಣದಲ್ಲಿ ಇದ್ದಿದ್ದರೆ ಶ್ರೀಕಿಯನ್ನು ನಾವು ಯಾಕೆ ಬಂಧಿಸುತ್ತಿದ್ವಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದ ಹಿಂದೆ ಯಾರ‍್ಯಾರಿದ್ದಾರೆ ಖಂಡಿತವಾಗಿಯೂ ಬಲಿ ಹಾಕ್ತೇವೆ: ಬಸವರಾಜ ಬೊಮ್ಮಾಯಿ
Siddaramaiah, Pratap simha, Bit Coin, pressmeet, Mysuru
ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ. ಅತ್ಯಂತ ಜವಾಬ್ದಾರಿಯಿಂದ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಪಾರದರ್ಶಕವಾಗಿ ತನಿಖೆಯನ್ನು ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಕ್ಕೆ ಆರೋಗ್ಯ ಸಚಿವ ಸುಧಾಕರ್ ತೀರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಸಂಚಲನ ಸೃಷ್ಟಿಸಿದೆ. ಶನಿವಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಸವರಾಜ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ. ಬಹುಕೋಟಿ ಹಗರಣದಲ್ಲಿ ಕರ್ನಾಟಕ ಸರ್ಕಾರವೇ ಭಾಗಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ
ಈ ಕುರಿತಂತೆ ಸುಧಾಕರ್ ಅವರು, ಅನೇಕ ವರ್ಷಗಳಿಂದ ಡ್ರಗ್ ಮೇನಸ್ ಏನಾಗುತ್ತಿದೆ ಎಂದು ಕಂಡು ಹಿಡಿಯಬೇಕೆಂದು ನಮ್ಮ ಆಡಳಿತದಲ್ಲಿಯೇ ಇದನ್ನು ಮಟ್ಟ ಹಾಕಬೇಕೆಂದು ಅಂದಿನ ಸರ್ಕಾರದಲ್ಲಿದ್ದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ತೀರ್ಮಾನಿಸಿದರು. ಇಂದು ತನಿಖೆಗೆ ಆದೇಶ ಸೂಚಿಸಿ, ಅದರಲ್ಲಿ ಶ್ರೀಕಿ ಸಿಕ್ಕಿಹಾಕಿಕೊಂಡು ಇನ್ನಷ್ಟು ತೀವ್ರವಾಗಿ ತನಿಖೆ ಮಾಡಿಸುತ್ತಿದ್ದಾರೆ. ಇವತ್ತು ಅವರು ನಟರಾ? ಇದರಲ್ಲಿ ಯಾರು ಕೂಡ ನಟರಿಲ್ಲ. ಅತ್ಯಂತ ಜವಾಬ್ದಾರಿಯಿಂದ ಅಂದಿನ ಗೃಹಸಚಿವರಾಗಿದ್ದವರು ಇಂದು ಪಾರದರ್ಶಕವಾಗಿ ತನಿಖೆಯನ್ನು ಮಾಡಿಸಿದ್ದಾರೆ ಎಂದಿದ್ದಾರೆ.
ನಮ್ಮ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಅಧಿಕಾರಿಗಳು ಚಾರ್ಜ್‍ಶೀಟ್‍ನಲ್ಲಿ ಏನು ತಿಳಿಸಿದ್ದರೋ ಅದನ್ನೇ ನಿಮ್ಮ ಮುಂದೆ ಓದಿದ್ದಾರೆ. ಬೇರೆ ಏನನ್ನೋ ಕಂಡು ಹಿಡಿದು ಯಾವುದೋ ಸ್ಪಷ್ಟವಾಗಿರುವ ಸಾಕ್ಷಿ ಇಟ್ಟುಕೊಂಡು ಅದನ್ನು ತೋರಿಸುವಂತಹ ಕೆಲಸವನ್ನು ಅವರು ಮಾಡಿಲ್ಲ. ಪೊಲೀಸಿನವರು, ಪೊಲೀಸ್ ಇಲಾಖೆ ಅವರು ಅತ್ಯಂತ ಪಾರಾದರ್ಶಕತೆಯಿಂದ ಇಂದು ನಡೆದುಕೊಂಡಿದ್ದಾರೆ. ಯಾರನ್ನು ರಕ್ಷಣೆಯಾಗಲಿ, ಮಾಹಿತಿಯನ್ನು ಬಚ್ಚಿಡುವ ಪ್ರಯತ್ನವನ್ನು ಎಲ್ಲೂ ಕೂಡ ಮಾಡಿಲ್ಲ. ಈ ಎಲ್ಲಾ ಅಪಾಧನೆ, ಸ್ಪೀಕರ್ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿರುವ ಮಾತುಗಳಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ನಾಪತ್ತೆಯಾಗಿಲ್ಲ – ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ
ಸುಳ್ಳನ್ನು ನಿಜ ಮಾಡಲು ಹೊರಟಿದ್ದೀರಾ. ಅದು ಸಾಧ್ಯವಾಗುವುದಿಲ್ಲ. ಇದರಿಂದ ನೀವೆ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಾ. ನಮ್ಮ ಸರ್ಕಾರ ಸ್ಪಷ್ಟವಾಗಿದ್ದು, ನಾವು ಯಾರನ್ನು ರಕ್ಷಿಸುವುದಿಲ್ಲ. ನಾವೇ ಇದನ್ನು ಬೆಳಕಿಗೆ ತಂದಿದ್ದೇವೆ. ಹಾಗಾಗಿ ಈ ಕುರಿತಂತೆ ಯಾವ ಹಂತದಲ್ಲಿ ತನಿಖೆ ಮಾಡಿಸಬೇಕು ಎಂಬುವುದನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ಸತ್ಯವನ್ನು ಜನರ ಮುಂದಿಡುವ ಕೆಲಸವನ್ನು ಮಾಡಿತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಇದರ ನಡುವೆ ಇಂದು ಕೂಡ ರಣದೀಪ್ ಸಿಂಗ್ ಸುರ್ಜೆವಾಲಾ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೂಡ ಭಾಗವಹಿಸಲಿದ್ದಾರೆ. ಈ ವೇಳೆ ಮಹತ್ವದ ದಾಖಲೆ ಏನಾದರು ಬಿಡುಗಡೆ ಮಾಡುತ್ತಾರಾ ಎಂದು ಕುತೂಹಲ ಮೂಡಿಸಿದೆ.
ಮೈಸೂರು: ಸಿದ್ದರಾಮಯ್ಯ ಮಾತಾನಾಡುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಇವರನ್ನು ಒಂದು ತಿಂಗಳು ತಾಲಿಬಾನಿಗೆ ಕಳಿಸಬೇಕು ಎಂದು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಜನಗೂಡಿನ ಉಪಚುನಾವಣೆ ನನ್ನ ಸದಾ ಚುಚ್ಚುತ್ತಿರುತ್ತದೆ. ಹಾನಗಲ್, ಸಿಂದಗಿ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ. ಆದರೆ ನಂಜನಗೂಡು ಉಪಚುನಾವಣೆ ವೇಳೆ ಸಿದ್ದರಾಮಯ್ಯ ಎಷ್ಟು ಅಧಿಕಾರ ದುರುಪಯೋಗ ಮಾಡಿಕೊಂಡರು. ಆಗ ನನ್ನ ಬಳಿ ಹಣ ಇರಲಿಲ್ಲ. ಪೊಲೀಸರ ಎದುರೇ ಕಾಂಗ್ರೆಸ್‍ನವರು ಅವತ್ತು ಹಣ ಹಂಚಿದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‍ನವರು ನನಗೆ ತುಂಬಾ ನೋವು ಕೊಟ್ಟರು. ಇಂತಹವರು ಈಗ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ಆರೋಪಿಸುತ್ತಾರೆ. ಅವರಿಗೆ ನಾಚಿಕೆ ಆಗಬೇಕು ಎಂದಿದ್ದಾರೆ. ಇದನ್ನೂ ಓದಿ: ಯುಪಿ ಜನತೆಗೆ 10 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ – ಪ್ರಿಯಾಂಕಾ ಗಾಂಧಿ ಭರವಸೆ
ಸಿದ್ದರಾಮಯ್ಯ ಎರಡು ಕಡೆ ಚುನಾವಣೆಗೆ ನಿಲ್ಲದೇ ಇದ್ದಿದ್ದರೆ ಕಾಟೂರು ತೋಟದ ಮನೆ ಸೇರಿ ಕೊಳ್ಳಬೇಕಿತ್ತು. ಇದನ್ನೆಲ್ಲಾ ಮರೆತು ಸಿದ್ದರಾಮಯ್ಯ ಇವತ್ತು ಬಾಯಿಗೆ ಬಂದ ರೀತಿ ಮಾತಾಡುವುದನ್ನು ಕಲಿತಿದ್ದಾರೆ. ಸಿದ್ದರಾಮಯ್ಯ ಮಾತಾಡುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಇವರನ್ನು ಒಂದು ತಿಂಗಳು ತಾಲಿಬಾನಿಗೆ ಕಳಿಸಬೇಕು. ಪ್ರಧಾನಿ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವುದನ್ನು ಮೊದಲು ನಿಲ್ಲಿಸಲಿ. ಲೋಕಸಭಾ ಚುನಾವಣೆಯಲ್ಲಿ ಏನೇನಾಯ್ತು ಗೊತ್ತಿಲ್ವಾ? ಒಂದು ಸೀಟ್ ಗೆದ್ದು ಉಳಿದ ಕಡೆ ನೆಗೆದು ಬಿದ್ದು ಹೋದ್ರಿ. ಇದೆಲ್ಲಾ ಮರೆತು ಹೋಯ್ತಾ ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸೋದೇ ಸಿದ್ದು & ಟೀಂನ ಉದ್ದೇಶ: ಹೆಚ್‍ಡಿಕೆ ಕಿಡಿ
ಇನ್ನೂ ಜೆಡಿಎಸ್ ಪಾರ್ಟಿಯಲ್ಲ. ಅದೊಂದು ಕಂಪನಿಯಷ್ಟೇ ಬೆಂಕಿ ಹಾಕಿದ ಕಡೆ ಕೈ ಕಾಯಿಸಿಕೊಳ್ಳಿ ಅಷ್ಟೇ. ಯಾರಿಗೂ ಬಹುಮತ ಬಾರದೇ ಇದ್ದರೆ ಸಾಕು ಎನ್ನುವುದೇ ನಿಮ್ಮ ಲೆಕ್ಕಾಚಾರ. ನಿಮ್ಮ ಇತಿಮಿತಿ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.
– ಮೈಸೂರು ಜಿಲ್ಲೆಯ ಈ ಹಿಂದಿನ ಡಿಸಿ-ಶಾಸಕರ ಕಿತ್ತಾಟ ಪ್ರಕರಣದ ಹಿನ್ನೆಲೆಯಲ್ಲಿ ಸುತ್ತೋಲೆ ಪ್ರಕಟ
– ವೈಯಕ್ತಿಕ ಸೋಷಿಯಲ್ ಮೀಡಿಯಾ handle ಬಳಸುವ ಅಧಿಕಾರಿಗಳಿಗೂ ಎಚ್ಚರಿಕೆ
ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಖಡಕ್ ಸುತ್ತೋಲೆ ಹೊರಡಿಸಿದೆ. ಇನ್ಮುಂದೆ ರಾಜ್ಯದ ಅಧಿಕಾರಿಯು ನಂಬಿಕಾರ್ಹ (Bonafide) ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ, ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದಕ್ಕೆ ಕಡಿವಾಣ ಹಾಕಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹತ್ವದ ಸುತ್ತೋಲೆ ಹೊರಡಿಸಿ ಖಡಕ್ ಆದೇಶ ನೀಡಿದ್ದಾರೆ.
ಸುತ್ತೋಲೆ ಯಾಕೆ?: ಶಾಸಕ ಸಾ.ರಾ.ಮಹೇಶ್ ವರ್ಸಸ್ ಐಎಎಸ್ ರೋಹಿಣಿ ಸಿಂಧೂರಿ ಬಹಿರಂಗ ಕಿತ್ತಾಟ ವಿಚಾರ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಇದಲ್ಲದೇ ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಸಾ.ರಾ.ಮಹೇಶ್ ಅವರು ರೋಹಿಣಿ ಸಿಂಧೂರಿ ಹೆಸರು ಹೇಳದೇ ಮೈಸೂರಿನ ಹಿಂದಿನ ಡಿಸಿ ಎಂದು ವಿಷಯ ಪ್ರಸ್ತಾಪಿಸಿದ್ದರು.
ಆ ಬಗ್ಗೆ ಕಟ್ಟುನಿಟ್ಟಾಗಿ ಸೂಚನೆ ಕೊಡಲು ಮುಖ್ಯಕಾರ್ಯದರ್ಶಿಗೆ ಸೂಚಿಸುವುದಾಗಿ ಕಂದಾಯ ಸಚಿವ ಅಶೋಕ್ ಹೇಳಿದ್ದರು. ಈ ಬೆನ್ನಲ್ಲೇ ಮುಖ್ಯಕಾರ್ಯದರ್ಶಿಯಿಂದ ಮಹತ್ವದ ಸುತ್ತೋಲೆ ಹೊರಡಿಸಿ ಖಡಕ್ ಆದೇಶ ಹೊರಡಿಸಿದ್ದಾರೆ.
ಸುತ್ತೋಲೆಯಲ್ಲೇನಿದೆ?: ಸರ್ಕಾರಿ ಅಧಿಕಾರಿಗಳು ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇಂತಹ ಪ್ರಸಂಗಗಳು ಸರ್ಕಾರದ ಆಡಳಿತ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತವೆ ಹಾಗೂ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡುವಂತದ್ದಾಗಿರುವುದರಿಂದ ಅಧಿಕಾರಿಗಳು ಇಂತಹ ನಡೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಆದುದರಿಂದ ಅಧಿಕಾರಿಯು ನಂಬಿಕಾರ್ಹ (Bonafide) ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ, ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ನಿಯಮಗಳನ್ನು ಗಮನಕ್ಕೆ ತಂದ ಮುಖ್ಯಕಾರ್ಯದರ್ಶಿ: ಅಖಿಲ ಭಾರತ ಸೇವೆಗಳು (ನಡತೆ) ನಿಯಮಗಳು, 1968ರ ನಿಯಮ 17ರಲ್ಲಿನ ಅವಕಾಶ ಹಾಗೂ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ನ್ನು ಈ ಸುತ್ತೋಲೆಯಲ್ಲಿ ಮುಖ್ಯಕಾರ್ಯದರ್ಶಿಗಳು ಉಲ್ಲೇಖಿಸಿದ್ದಾರೆ.
ಏನು ಮಾಡಬಾರದು?: ಕರ್ನಾಟಕ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಕಾರ್ಯನೀತಿ ಅಥವಾ ಕ್ರಮವನ್ನು ಟೀಕಿಸುವುದು, ಯಾರೇ ಸರ್ಕಾರಿ ನೌಕರನು ಆಕಾಶವಾಣಿ ಪ್ರಸಾರದಲ್ಲಾಗಲಿ ಅಥವಾ ದೂರದರ್ಶನದ ಕಾರ್ಯಕ್ರಮದಲಾಗಲೀ ಅಥವಾ ಯಾವುದೇ ಸಾರ್ವಜನಿಕ ಮಾಧ್ಯಮದಲ್ಲಿ ವಾಸ್ತವ ಹೇಳಿಕ ಅಥವಾ ಅಭಿಪ್ರಾಯ ನೀಡುವುದಾಗಲೀ ಅವನ ಹೆಸರಿನಲ್ಲಿ ಅಥವಾ ಅನಾಮಧೇಯವಾಗಿ ಗುಪ್ತನಾಮದಲ್ಲಿ ಅಥವಾ ಬೇರೊಬ್ಬನ ಹೆಸರಿನಲ್ಲಿ ಪ್ರಕಟಿಸಲಾದ ಇತರ ಯಾವುದೇ ದಸ್ತಾವೇಜಿನಲ್ಲಿ ಅಥವಾ ಪತ್ರಿಕೆಗೆ ಬರೆದ ಯಾವುದೇ ಪತ್ರದಲ್ಲಿ ಅಥವಾ ಯಾವುದೇ ಸಾರ್ವಜನಿಕ ಹೇಳಿಕೆಯಲ್ಲಿ ಮಾಡುವಂತಿಲ್ಲ.
ಕರ್ನಾಟಕ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಪ್ರಸ್ತುತ ಅಥವಾ ಇತ್ತೀಚಿನ ಯಾವುದೇ ನೀತಿಯ ಅಥವಾ ಕ್ರಮದ ಬಗ್ಗೆ ಪ್ರತಿಕೂಲ ಟೀಕೆಯ ಪರಿಣಾಮ ಹೊಂದಿರುವಂತಹ ಯಾವುದೇ ಸಂಗತಿಗಳ ನಿರೂಪಣೆಯನ್ನು ಮಾಡತಕ್ಕದ್ದಲ್ಲ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸತಕ್ಕದಲ್ಲ.
ಸರ್ಕಾರಿ ನೌಕರರ ಕೃತ್ಯಗಳ ಮತ್ತು ನಡತೆಯ ಸಮರ್ಥನೆಗಾಗಿ ನಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದ ಹೊರತು ಯಾರೇ ಸರ್ಕಾರಿ ನೌಕರನು ಸರ್ಕಾರದ ಯಾವ ಅಧಿಕೃತ ಕೃತ್ಯವು ಪ್ರತಿಕೂಲ ಟೀಕೆಯ ಅಥವಾ ಮಾನಹಾನಿ ಸ್ವರೂಪದ ನಿಂದನೆಯ ವಸ್ತು ವಿಷಯವಾಗಿರುವುದೋ ಆ ಯಾವುದೇ ಅಧಿಕೃತ ಕೃತ್ಯದ ಸಮರ್ಥನೆಗಾಗಿ ಯಾವುದೇ ನ್ಯಾಯಾಲಯಕ್ಕೆ ಅಥವಾ ಪತ್ರಿಕೆಗೆ ಮೊರ ಹೋಗತಕ್ಕದ್ದಲ್ಲ.
ಎಚ್ಚರ ತಪ್ಪಿದರೆ ಕ್ರಮ ಖಚಿತ: ಮೇಲಿನ ನಿಯಮಗಳಲ್ಲಿನ ಅವಕಾಶಗಳಿಗೆ ವ್ಯತಿರಿಕ್ತವಾಗಿ ಯಾವುದೇ ಅಧಿಕಾರಿ ಸರ್ಕಾರದ ಕಾರ್ಯನೀತಿಗೆ ವ್ಯತಿರಿಕ್ತವಾಗಿ ಅನಪೇಕ್ಷಿತ ವೇದಿಕೆಗಳಲ್ಲಿ ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ಎಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಸರ್ಕಾರಿ ಯೋಜನೆಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಯನ್ನು ಪ್ರಸಾರ ಮಾಡುವುದು ಸೇರಿದಂತೆ ಇತರ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿದ್ದಲ್ಲಿ ಮಾತ್ರ ಅಧಿಕಾರಿಗಳು ಮಾಧ್ಯಮಗಳನ್ನು ಬಳಸಬಹುದಾಗಿದೆ. ಆದರೆ, ಕುಂದು ಕೊರತೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.
ನಿಮ್ಮ ಖಾತೆ ಬೇಡ, ಸರ್ಕಾರದ ಸೋಷಿಯಲ್ ಮೀಡಿಯಾ ಖಾತೆ ಬಳಸಿ!: ಸಾಮಾಜಿಕ ಮಾಧ್ಯಮಗಳನ್ನು ವೇದಿಕೆಗಳನ್ನಾಗಿರಿಸಿಕೊಂಡು ಇಲಾಖೆಯ/ಸರ್ಕಾರದ ಸಾಧನೆಗಳನ್ನು ಅಧಿಕಾರಿಗಳ ವ್ಯಯಕ್ತಿಕ ಸಾಧನಗಳಂಬಂತೆ ಪುದರ್ಶಿಸಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಸಾಧನೆಗಳ ಬಗ್ಗೆ ಅಥವಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಬೇಕಾದ ಸಂದರ್ಭದಲ್ಲಿ, ಅಧಿಕಾರಿಗಳು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸದೇ ಸರ್ಕಾರದ ಆಡಳಿತ ಹೆಸರಿನಲ್ಲಿ ತೆರೆಯಲಾದ ಖಾತೆಗಳನ್ನು (handles) ಮಾತ್ರ ಬಳಸಿಕೊಳ್ಳಬೇಕು ಎಂದು ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಸುತ್ತೋಲೆ ಹೊರಡಿಸಿ ಖಡಕ್ ಆದೇಶ ನೀಡಿದ್ದಾರೆ.
ಮೈಸೂರು: ಹೆಣ್ಣು ಬಳೆ ತೊಟ್ಟಿದ್ದಾಳೆ ಅಂದರೆ ಅಬಲೆ ಎಂದು ಅರ್ಥನಾ? ಹೆಣ್ಣನ್ನು ಯಾವುದೇ ಕಾರಣಕ್ಕೂ ತಾತ್ಸಾರ ಮಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹರವರು ತನ್ವೀರ್ ಸೇಠ್ ವಿರುದ್ಧ ಕಿಡಿಕಾರಿದ್ದಾರೆ.
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ, ನಿಮ್ಮ ಧಮ್ಕಿಗೆಲ್ಲ ನಾವು ಹೆದರಲ್ಲ ಎಂಬ ತನ್ವೀರ್ ಸೇಠ್ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿದ್ದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಫ್ ಸಿಂಹರವರು, ತನ್ವೀರ್ ಸೇಠ್‍ರವರು ಇತರ ಅಲ್ಪಸಂಖ್ಯಾತರ ನಾಯಕರ ರೀತಿ ಅಲ್ಲ ಅಂದುಕೋಂಡಿದ್ದೆ. ಅವರಿಂದ ನಾನು ಇಂತಹ ಮಾತು ನಿರೀಕ್ಷಿಸಿರಲಿಲ್ಲ. ನಾವೆಲ್ಲ ಬಳೆ ತೊಟ್ಟಿಲ್ಲ ಎಂದರೆ ಅರ್ಥ ಏನು? ನಾವು ಹೆಣ್ಣಿಗೆ ಚೆಂದವಾದ ಸೀರೆ, ಬಳೆ ತೊಡಿಸಿ ನಮ್ಮ ದೇವ, ದೇವತೆಗಳನ್ನು ಆರಾಧಿಸುತ್ತೇವೆ. ನಮ್ಮ ಧರ್ಮದ ಅತ್ಯುನ್ನತವಾದಂತಹ ದೇವತೆಗಳಾದ ತಾಯಿ ಚಾಮುಂಡಿ, ಭುವನೇಶ್ವರಿ ಕೂಡ ಹೆಣ್ಣು. ನಮ್ಮ ಸಮಾಜದಲ್ಲಿ ಹೆಣ್ಣಿಗೆ ಅತೀ ಹೆಚ್ಚು ಗೌರವ ಕೊಡುತ್ತೇವೆ. ಹೆಣ್ಣು ಬಳೆ ತೊಟ್ಟಿದ್ದಾಳೆ ಎಂದರೆ ಅಬಲೆ ಎಂದು ಅರ್ಥನಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ
ಒಂದು ಹೆಣ್ಣಿನ ಬಗ್ಗೆ ನಿಮಗೇಕೆ ತಾತ್ಸಾರ? ನೀವು ಬಹಳ ಪ್ರೀತಿಸುವಂತಹ ಹೈದರಾಲಿ ಇದ್ದಾರಲ್ಲ ಅವರನ್ನು ಹೊಡೆದ ಓನಕೆ ಒಬ್ವವ ಕೂಡ ಒಂದು ಹೆಣ್ಣು. ನಮ್ಮ ಕರ್ನಾಟಕದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಕಿತ್ತೂರು ರಾಣಿ ಚೆನ್ನಮ್ಮ, ಡಚ್ಚರ ವಿರುದ್ಧ ಹೋರಾಟ ಮಾಡಿದ ರಾಣಿ ಅಬ್ಬಕ್ಕ, ದೇಶಕ್ಕೆ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಜಾನ್ಸಿ ರಾಣಿ ಲಕ್ಷ್ಮೀ ಭಾಯಿ ಕೂಡ ಒಬ್ಬ ಹೆಣ್ಣು. ಅವರು ಕೂಡ ಕೈಗೆ ಬಳೆಯನ್ನೇ ತೊಟ್ಟುಕೊಂಡಿದ್ದಾರೆ. ನಾವು ಮಹಿಳೆಯರನ್ನು ಆರಾಧಿಸುತ್ತೇವೆ. ಮಹಿಳೆಯರು ನಮ್ಮನ್ನು ರಕ್ಷಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು
ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಕೂಡ ಒಂದು ಹೆಣ್ಣು. ನಾವು ಪೂಜಿಸಿ, ಪುಷ್ಪರ್ಚನೆ ಮಾಡುವ ತಾಯಿ ಭುವನೇಶ್ವರಿ ಕೂಡ ಒಂದು ಹೆಣ್ಣು. ಹೆಣ್ಣನ್ನು ತಾತ್ಸಾರದಿಂದ ಕಾಣಬೇಡಿ. ನಿಮ್ಮ ಪೌರುಷ, ಹುಸಿ ಧೈರ್ಯವನ್ನು ತೋರಿಸುವ ಸಲುವಾಗಿ ಹೆಣ್ಣನ್ನು ಕಡಿಮೆಯಂತೆ ನೋಡಬೇಡಿ. ನಮ್ಮಲ್ಲಿ ಹೆಣ್ಣನ್ನು ಆರಾಧ್ಯ ಸ್ಥಾನದಲ್ಲಿಟ್ಟಿದ್ದೇವೆ. ನಿಮ್ಮ ಧರ್ಮದಲ್ಲಿ ನೀವು ಬೇಕಾದರೆ ಹೆಣ್ಣನ್ನು ಬುರ್ಕಾ ಒಳಗಡೆ ಕಟ್ಟಿಟ್ಟು, ಅಡುಗೆ ಕೋಣೆಗೆ ಸೀಮಿತವಾಗಿಸಿ, ಭೋಗದ ವಸ್ತುವಾಗಿ ನೀವು ನೋಡಬಹುದು. ಆದರೆ ನಮ್ಮ ಧರ್ಮ, ಸಂಸ್ಕೃತಿಯಲ್ಲಿ ನಾವು ಅವಳಿಗೆ ಪೂಜ್ಯ ಸ್ಥಾನವನ್ನು ನೀಡಿದ್ದೇವೆ. ನೀವು ಒಬ್ಬ ವಿದ್ಯಾವಂತರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಅದೆಲ್ಲದಕ್ಕೂ ಮುನ್ನ ನಿಮ್ಮ ಪಕ್ಷವನ್ನು ಮುನ್ನಡೆಸಿದಂತಹ ಇಂದಿರಾ ಗಾಂಧಿ ಕೂಡ ಒಂದು ಹೆಣ್ಣೆ ಆಗಿದ್ದರು. ಇಂದು ನಿಮ್ಮೆಲ್ಲರ ಅಧಿನಾಯಕಿ ಎಂದು ಒಪ್ಪಿಕೊಂಡಿರುವ ಸೋನಿಯಾ ಗಾಂಧಿ ಕೂಡ ಒಬ್ಬರು ಹೆಣ್ಣೆ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಮಾಂತ್ರಿಕನಿಂದ ಕೃಷ್ಣಾ ಕಿತ್ತೂರಿನಲ್ಲಿ ವಾಮಾಚಾರ..!
ಬೆಳಗಾವಿ: ನಮ್ಮ ಪಾಲಿನ ನೀರನ್ನು ಉಪಯೋಗ ಮಾಡಿಕೊಳ್ಳಲು ಯೋಜನೆ ಮಾಡಲು ಯಾವುದೇ ರೀತಿ ಹಿಂದೆ, ಮುಂದೆ ನೋಡುವುದಿಲ್ಲ. ನಮ್ಮ ಸರ್ಕಾರದಲ್ಲಿ ಮಾಫಿಯಾಗಳಿಗೆ ಯಾವುದೇ ರೀತಿ ಅವಕಾಶ ಇಲ್ಲ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀರಾವರಿ ಮಂತ್ರಿಯಾಗಿ ನಾನು ಒಂದು ತಿಂಗಳಾಗಿದೆ. ಈ ಅವಧಿಯಲ್ಲಿ ಸಿಎಂ ಜೊತೆ ಎರಡು ಬಾರಿ ದೆಹಲಿಗೆ ಹೋಗಿ ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರಸಿಂಗ್ ಶೇಖಾವತ್ ಜೊತೆಗೆ ರಾಜ್ಯದ ನೀರಾವರಿ ಯೋಜನೆಗಳ ಸಂಬಂಧ ಸಭೆ ನಡೆಸಿದ್ದೇನೆ. ಅದೇ ರೀತಿ ಕಾನೂನು ತಜ್ಞರ ಜೊತೆಗಿನ ಸಭೆಯಲ್ಲಿ ಅಂತರರಾಜ್ಯ ಜಲವಿವಾದಗಳಲ್ಲಿ ನಮ್ಮ ಪರವಾಗಿ ತೀರ್ಪು ಬರುವಂತೆ ವಾದ ಮಾಡುವಂತೆ ಮುಖ್ಯಮಂತ್ರಿಗಳು ಕೂಡ ಖಡಕ್ಕಾಗಿಯೇ ಸೂಚನೆ ಕೊಟ್ಟಿದ್ದಾರೆ. ಅಲ್ಲದೇ ಸಿಡಬ್ಲೂಸಿ ಅಧಿಕಾರಿಗಳ ಜೊತೆಗೆ ಮೀಟಿಂಗ್ ಮಾಡಿದ್ದೇವೆ. ಎತ್ತಿನಹೊಳೆ ಯೋಜನೆಯಲ್ಲಿ ನಮಗೆ 24 ಟಿಎಂಸಿ ನೀರು ಬರಲಿದೆ. ಅಲ್ಲದೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಖಂಡಿತವಾಗಲೂ ನಮ್ಮ ಪಾಲಿನ ನೀರನ್ನು ಉಪಯೋಗಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಶಿಷ್ಯ ಸಂತೋಷ್ ಲಾಡ್ ಅಸಮಾಧಾನ
ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಬೊಮ್ಮಾಯಿಯವರು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಐತಿಹಾಸಿಕ ನಗರ ಎನ್ನುವುದು ಸಾಬೀತು ಮಾಡಬೇಕು ಎಂದು ನಿರ್ಧರಿಸಿದ್ದೇವೆ. ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳು ಆಗಬೇಕು ಎಂಬ ಬಗ್ಗೆ ಶಾಸಕರು, ಸಂಸದರು ತೀರ್ಮಾನಿಸುತ್ತಾರೆ. ಅದೆಲ್ಲವನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಅದೇ ರೀತಿ ಬೆಳಗಾವಿಯ ಬೈಪಾಸ್ ರಸ್ತೆಗೆ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದೇವೆ. ಕಾಮಗಾರಿ ಪ್ರಕ್ರಿಯೆ ಶುರುವಾಗಿದ್ದು, ಆದಷ್ಟು ಬೇಗನೆ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಹುಮಹಡಿ ಕಟ್ಟಡದಿಂದ ಬಿದ್ದು ವ್ಯಕ್ತಿ ದುರ್ಮರಣ
ಬೆಳಗಾವಿ ಜಿಲ್ಲೆಯ ಕೆಲ ಶಾಸಕರ ಒಗ್ಗಟ್ಟಿನ ಪ್ರಯತ್ನದ ಪ್ರತಿಫಲವಾಗಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಹುತೇಕ ಮೂರು ಮಹಾನಗರ ಪಾಲಿಕೆ ಬಿಜೆಪಿ ಅಧಿಕಾರ ವಹಿಸಲಿದೆ. ಅದೇ ರೀತಿ ಕಲಬುರ್ಗಿ ಪಾಲಿಕೆಯಲ್ಲಿಯೂ ನೂರಕ್ಕೆ ನೂರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿ ವೇಳೆ ಸಂಸದೆ ಮಂಗಲ ಅಂಗಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ನಗರ ಬಿಜೆಪಿ ಜಿಲ್ಲಾಧ್ಯಕ್ಷ ಶಶಿಕಾಂತ ಪಾಟೀಲ್, ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜೀರಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೆಂಗಳೂರು: ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ನಟ ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಇಂದು ಬಹಿರಂಗ ಪಡಿಸುವ ಮೂಲಕ ಮೇಘನಾ ರಾಜ್ ಸಿಹಿಸುದ್ದಿ ನೀಡಿದ್ದಾರೆ. ಈ ವೇಳೆ ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ, ಸುಂದರ್ ರಾಜ್ ಹಾಗೂ ಸರ್ಜಾ ಕುಟುಂಬ ಯಾವಾಗಲೂ ಒಂದಾಗಿರುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕುಟುಂಬಸ್ಥರೆಲ್ಲಾ ಸೇರಿ ಜ್ಯೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣಮಾಡಿದ್ದು, ಇದೇ ವೇಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಧ್ರುವ ಸರ್ಜಾ, ನಮ್ಮ ಅಣ್ಣನ ಮಗನ ಹೆಸರು ರಾಯನ್ ರಾಜ್ ಸರ್ಜಾ. ಆ ಒಂದು ಹೆಸರಿನಲ್ಲಿಯೇ ಸುಂದರ್ ರಾಜ್ ಅವರ ಫ್ಯಾಮಿಲಿ ಹಾಗೂ ಸರ್ಜಾ ಕುಟುಂಬ ಯಾವಾಗಲೂ ಒಂದಾಗಿಯೇ ಇರುತ್ತದೆ. ಕೆಲವು ಯೂಟ್ಯೂಬ್ ಅಥವಾ ಬೇರೆ ಯಾವುದಾದರ ಮೂಲಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ದಯವಿಟ್ಟು ಮಾಡಬೇಡಿ. ನಾವು ಯಾವತ್ತಿಗೂ ಭಿನ್ನಾಭಿಪ್ರಾಯಗಳನ್ನು ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’
ನಂತರ ಈ ಸಮಯದಲ್ಲಿ ನಾನು ನನ್ನ ಚಿಕ್ಕಪ್ಪ, ನನ್ನ ಅಣ್ಣನನ್ನು ನೆನಪಿಸಿಕೊಳ್ಳಲಿ ಇಚ್ಛಿಸುತ್ತೇನೆ. ಸುಂದರ್ ರಾಜ್, ಪ್ರಮೀಳಾ ಜೋಷಾಯ್ ಅವರು ಹಾಗೂ ನನ್ನ ಅತ್ತಿಗೆ ಎಲ್ಲರೂ ಸಂತಸದಿಂದ ಇದ್ದಾರೆ. ನಾನು ಕೂಡ ಖುಷಿಯಾಗಿದ್ದೇನೆ. ದಿನ ದಿನ ನಾವು ಎಲ್ಲವನ್ನು ಸುಧಾರಿಸಿಕೊಳ್ಳುತ್ತಿದ್ದೇವೆ. ರಾಯನ್‍ಗೆ ಎಲ್ಲರೂ ಆಶೀರ್ವಾದಮಾಡಿ. ರಾಯನ್ ಎಂದರೆ ಸಂಸ್ಕೃತದಲ್ಲಿ ಯುವರಾಜ ಎಂದರ್ಥ. ಅವನು ಯುವರಾಜ ಎಂದು ಹೆಸರಿಟ್ಟಿರುವುದಲ್ಲ. ಅವನು ಯುವರಾಜನಂತೆಯೇ ಇರುತ್ತಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜನೇ ರಾಯನ್: ಮೇಘನಾ ರಾಜ್
ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷ ಬಾಕಿ ಇದೆ. ಅಷ್ಟರಲ್ಲಿ ಕೊರೊನಾ ಮೂರನೇ ಅಲೆ ಬಂದು ಯಾರು ಇರುತ್ತಾರೋ ಯಾರು ಹೋಗುತ್ತಾರೋ ಗೊತ್ತಿಲ್ಲ. ಈ ನಡುವೆ ಕಾಂಗ್ರೆಸ್ ನಲ್ಲಿ ಸಿಎಂ ಗಾದಿ ಚರ್ಚೆ ಸದ್ಯಕ್ಕೆ ಅಪ್ರಸ್ತುತ ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮಲ್ಲಿ ಈಗ ಸಿಎಂ ಯಾರು ಎಂಬ ಪ್ರಶ್ನೆ ಅಪ್ರಸ್ತುತ. 2023ರಲ್ಲಿ 125ಕ್ಕೂ ಹೆಚ್ಚು ಸ್ಥಾನ ಪಡೆದರೆ ಆಗ ಅಂದು ಆಯ್ಕೆಯಾದ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಅಷ್ಟರಲ್ಲಿ ಸಿಎಂ ಅಭ್ಯರ್ಥಿ ಯಾರೂ ಅನ್ನುವ ಚರ್ಚೆ ಬೇಡ ಎಂದಿದ್ದಾರೆ.