– ನಾನು ದುರ್ಬಲನಾಗಿದ್ದೇನೆ ಎಂಬ ಸಂದೇಶವನ್ನ ಮೋದಿ ಮಹಿಳೆಯರಿಗೆ ರವಾನಿಸಿದ್ದೀರಿ ಎಂದು ಟೀಕಿಸಿದ್ದಾರೆ
ನವದೆಹಲಿ: ಅಫ್ಘಾನ್ ವಿದೇಶಾಂಗ ಸಚಿವ (Taliban Minister) ಅಮೀರ್ ಖಾನ್ ಮುತ್ತಕಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ ವಿಧಿಸಿದ ಕ್ರಮದ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ವಿಪಕ್ಷಗಳಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ, ಸುದ್ದಿಗೋಷ್ಠಿಯಲ್ಲಿ ನಮ್ಮದು ಯಾವುದೇ ಪಾತ್ರವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಕುರಿತು ಸ್ಪಷ್ಟನೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ ಶುಕ್ರವಾರ ಅಫ್ಘಾನ್ ವಿದೇಶಾಂಗ ಸಚಿವರು ದೆಹಲಿಯಲ್ಲಿ ನಡೆಸಿದ ಮಾಧ್ಯಮ ಸಂವಾದದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಯಾವುದೇ ಪಾತ್ರವಿಲ್ಲ ಎಂದು ಹೇಳಿದೆ.
ಮುತ್ತಕಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಯಾವುದೇ ಮಹಿಳಾ ಪತ್ರಕರ್ತರು ಉಪಸ್ಥಿತರಿರದಿದ್ದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ತಾಲಿಬಾನ್ ಸಚಿವರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಕೇವಲ ಪುರುಷ ಪತ್ರಕರ್ತರು ಉಪಸ್ಥಿತರಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಈ ಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್ ಗಾಂಧಿ, ಮೋದಿಯವರೆ, ಸಾರ್ವಜನಿಕ ವೇದಿಕೆಯಿಂದ ಮಹಿಳಾ ಪತ್ರಕರ್ತರನ್ನ ಹೊರಗಿಡಲು ಅವಕಾಶ ನೀಡುವ ಮೂಲಕ, ನಾನು ನಿಮ್ಮ ಬೆಂಬಲಕ್ಕೆ ನಿಲ್ಲಲಾರದಷ್ಟು ದುರ್ಬಲನಾಗಿದ್ದೇನೆ ಎಂಬ ಸಂದೇಶವನ್ನು ಭಾರತೀಯ ಮಹಿಳೆಯರಿಗೆ ರವಾನಿಸಿದ್ದೀರಿ ಎಂದು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ನಾರಿ ಶಕ್ತಿ ಘೋಷಣೆಯನ್ನೂ ವ್ಯಂಗ್ಯವಾಡಿದ್ದ ರಾಹುಲ್ ಗಾಂಧಿ, ನಮ್ಮ ದೇಶದಲ್ಲಿ ಪ್ರತಿಯೊಬ್ಬ ಮಹಿಳೆಗೂ ಎಲ್ಲ ಸ್ಥಳಗಳಲ್ಲೂ ಭಾಗವಹಿಸುವ ಸಮಾನ ಹಕ್ಕಿದೆ. ಆದ್ರೆ, ಇಂತಹ ತಾರತಮ್ಯದ ಕುರಿತ ನಿಮ್ಮ ಮೌನವು, ನಿಮ್ಮ ನಾರಿ ಶಕ್ತಿ ಘೋಷಣೆಯ ಖಾಲಿತನವನ್ನ ಬಯಲುಮಾಡಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಅಪಘಾತದ (Car Accident) ಬಳಿಕ ನಟ ನಾಗಭೂಷಣ್ (Nagabhushan) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ನಿನ್ನೆ ಸುದ್ಧಿಗೋಷ್ಠಿ ಆಯೋಜಿಸಿದ್ದು ಘಟನೆ ಬಗ್ಗೆ ವಿವರಿಸಿದರು. ಆ ಕುಟುಂಬಕ್ಕೆ ಆದ ನೋವು ಎನ್ನುವುದು ನನಗೆ ಅರಿವಿದೆ. ಅವರ ಕುಟುಂಬದ ಹತ್ತಿರದವರ ಜೊತೆ ಮಾತನಾಡಿದ್ದೇವೆ. ಆ ಕುಟುಂಬಕ್ಕೆ ಏನು ಸಹಾಯ ಬೇಕಿದ್ದರೂ ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ನಾಗಭೂಷಣ್ ಜೊತೆ ಅವರ ಪರ ವಕೀಲರಾದ ದಿಲೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು. ನಾಗಭೂಷಣ್ ಮಾತನಾಡಿ, ಹಿಟ್ ಅಂಡ್ ರನ್ ಅಂತ ಹೇಳಬೇಡಿ, ಅಪಘಾತ ಬಳಿಕ ನಾನೇ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದು ಎಂದು ಭಾವುಕರಾದರು. ಘಟನೆ ನಡೆದು ಅನೇಕ ದಿನಗಳ ಬಳಿಕ ನಿಮ್ಮ ಮುಂದೆ ಬಂದಿದ್ದೀನಿ, ನನಗೆ ಆ ಘಟನೆ ಅರಗಿಸಿಕೊಳ್ಳಲು ಇನ್ನೂ ಸಮಯ ಬೇಕು. ಹಾಗಾಗಿ ನಾನು ತಡವಾಗಿ ಮಾತನಾಡುತ್ತಿದ್ದೀನಿ ಎಂದು ಹೇಳಿದರು.
‘ಕೋಣನಕುಂಟೆ ಕ್ರಾಸ್ ಬಳಿ ಘಟನೆ ನಡೆದಿದ್ದು, ಅವರು ನನ್ನ ಕಾರಿಗೆ ದಿಢೀರ್ ಅಂತ ಅಡ್ಡ ಬಂದರು ಅಪಘಾತವಾಯಿತು ಬಳಿಕ ನಾನೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದೆ. ಆಸ್ಪತ್ರೆಗೆ ಹೋಗುವಾಗ ಪೋಲಿಸರಿಗೆ ನಾನೆ ಫೋನ್ ಮಾಡಿ ಘಟನೆ ಬಗ್ಗೆ ವಿವರಿಸಿದೆ’ ಎಂದು ಹೇಳಿದರು. ಪೊಲೀಸರು ಗಾಯಾಳುಗಳ ಸಂಬಂಧಿಗಳ ಮುಂದೆಯೇ ಆಲ್ಕೋಹಾಲ್ ಪರೀಕ್ಷೆ ಹಾಗೂ ರಕ್ತ ಪರೀಕ್ಷೆ ಮಾಡಿಸಿದರು ನಂತರ ನಾನು ಆಸ್ಪತ್ರೆಯಿಂದ ಪೊಲೀಸ್ ಸ್ಟೇಷನ್‌ಗೆ ಹೋದೆ ಬೆಳಗ್ಗೆ ಸ್ಟೇಷನ್ ಬೇಲ್ ಮೂಲಕ ಹೊರಬಂದೆ’ ಎಂದು ಘಟನೆ ವಿವರಿಸಿದರು.
ದುರಂತ ಎಂದರೆ ನಾಗಭೂಷಣ್ ತಂದೆ ಕೂಡ ಹಿಟ್ ಅಂಡ್ ರನ್ ಪ್ರಕರಣಲ್ಲಿಯೇ ನಿಧನಹೊಂದಿದ್ದು. ತಂದೆಯ ಸಾವನ್ನು ನೆನಪಿಸಿಕೊಂಡ ನಾಗಭೂಷಣ್ ‘ಕಳೆದುಕೊಂಡ ನೋವು ಏನು ಅಂತ ನನಗೆ ಗೊತ್ತಿದೆ. ನನ್ನ ತಂದೆ ಕೂಡ ಅಪಘಾತದಲ್ಲಿಯೇ ನಿಧನರಾಗಿದ್ದು. ಅವರನ್ನು ಸಾಯಿಸಿದ್ದು ಯಾರು ಅಂತ ಇವತ್ತಿಗೂ ನಮಗೆ ಗೊತ್ತಿಲ್ಲ. ಆದರೀಗ ನಾನು ಅವರ ನೋವಿನಲ್ಲಿ ಭಾಗಿಯಾಗಿದ್ದೀನಿ’ ಎಂದು ಭಾವುಕರಾದರು.
ಅವರ ಕುಟುಂಬದ ಜೊತೆ ಸಂಪರ್ಕದಲ್ಲಿದ್ದೇವೆ. ನನ್ನ ಕೈಯಲ್ಲಿ ಏನು ಸಹಾಯ ಮಾಡಲು ಸಾಧ್ಯವಾಗುತ್ತೊ ನಾನು ಖಂಡಿತ ಮಾಡುತ್ತೇನೆ. ಈ ಸಮಯದಲ್ಲಿ ನಾನು ಇನ್ನೇನು ಮಾಡಲು ಸಾಧ್ಯ ಎಂದು ನಾಗಭೂಷಣ್ ಭಾವುಕರಾದರು. ಇದೇ ಸಮಯದಲ್ಲಿ ಅಪಘಾತ ಮಾಡಿದರೆ ದಯವಿಟ್ಟು ಯಾರು ಓಡಿ ಹೋಗಬೇಡಿ ಎಂದು ಮನವಿಮಾಡಿದರು. ಇದರಿಂದ ಹೊರಬರಲು ನನಗೆ ಸಮಯ ಬೇಕು . ನಂತರ ಮತ್ತೆ ನಿಮಗೆ ಸಿಗುತ್ತೇನೆ ಎಂದರು
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಗ್ಗೆ ಕುರುಬ ಸಮುದಾಯದ ಮುಖಂಡರು ಕೆಟ್ಟಪದಗಳಲ್ಲಿ ಅವಹೇಳನ ಮಾಡಿ ಈಗ ಸುದ್ದಿಯಾಗಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಕುರುಬರಿಗೆ ರಾಜಕೀಯ ಅಧಿಕಾರ ನೀಡಲು ಆಗ್ರಹಿಸಿ ಕುರುಬ ಸಮಾಜದ ಮುಖಂಡರು ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ (Press Meet) ನಡೆದಿತ್ತು. ಈ ವೇಳೆ ಸುದ್ದಿಗೋಷ್ಠಿ ಮಾಡಲು ಬಂದಿದ್ದ ಕುರುಬ ಸಮುದಾಯದ ಮುಖಂಡರಾದ ಮುಕುಡಪ್ಪ, ಪುಟ್ಟಸ್ವಾಮಿ ಅವರು ಗೋಷ್ಠಿಗೂ ಮುನ್ನ ಮಾತನಾಡುತ್ತ ಕುಳಿತಿದ್ದರು. ಆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಟ್ಟ ಶಬ್ದವನ್ನು ಬಳಸಿ ಅವಮಾನ ಮಾಡಿದ್ದಾರೆ.
ವೀಡಿಯೋದಲ್ಲಿ ಏನಿದೆ?:
ಮುಕುಡಪ್ಪ ಹಾಗೂ ಪುಟ್ಟಸ್ವಾಮಿ ಇಬ್ಬರು 20 ಕುರಿಗಳ ಮೇಲೆ ಒಂದು ಟಗರು ಎಗರಿ ಬೀಳುತ್ತೆ ಎಂದು ಮಾತನಾಡುತ್ತಿದ್ದರು. ಆ ವೇಳೆ ಮುಕುಡಪ್ಪ, ಯಾರು ಅಂತಾ ಅಲ್ಲ ಎಲ್ಲರೂ ಹೇಳುತ್ತಾರೆ. ಆಗ ಮುಕುಡಪ್ಪ, ಎಲ್ಲರದ್ದೂ ಅಷ್ಟೇ, ಕೆಲವರದ್ದು ಹೊರಗೆ ಬರುತ್ತೆ, ಕೆಲವರದ್ದು ಹೊರಗೆ ಬರಲ್ಲ ಅಷ್ಟೇ ಎಂದು ಹೇಳುತ್ತಾರೆ.
ಆಗ ಸಿದ್ದರಾಮಯ್ಯ ಅವರನ್ನು ಹೆಸರನ್ನು ಪ್ರಸ್ತಾಪಿಸಿ ಅವಹೇಳನ ಮಾಡುತ್ತಾರೆ. ಸಿದ್ದರಾಮಯ್ಯನ ಬಗ್ಗೆ ಮಾತನಾಡುವಾಗ ಹುಷಾರು.. ಸೂ.. ಮಗಾ ಎಂದು ಹೇಳಿ ಮುಕ್ಕಡಪ್ಪ ನಗುತ್ತಾನೆ. ಅದಕ್ಕೆ ಪುಟ್ಟಸ್ವಾಮಿ ಪ್ರತಿಕ್ರಿಯಿಸಿ, ಹೌದು, ಅವನು ಬುದ್ಧಿವಂತ.. ಮನೆ ಒಳಗೆ ಸೇರಿಕೊಂಡುಬಿಡ್ತಾನೆ ಎಂದು ಹೇಳುತ್ತಾರೆ. ಇದನ್ನೂ ಓದಿ:ಶೋಕಿಗೆ ಕಾರು, ಕದಿಯೋದು ಮಾತ್ರ ಬಲ್ಬ್ – ಕಿರಾತಕರ ಕೈಚಳ ಕ್ಯಾಮೆರಾದಲ್ಲಿ ಸೆರೆ
ಅಹಿಂದ ಮುಖಂಡ ಮುಕ್ಕಡಪ್ಪ ಹಾಗೂ ಪುಟ್ಟಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ಈ ವೀಡಿಯೋಕ್ಕೆ (Video) ಸಿದ್ದರಾಮಯ್ಯನ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್ – ಸಂಜಯ್ ರಾವತ್‌ಗೆ ಜಾಮೀನು
Live Tv
[brid partner=56869869 player=32851 video=960834 autoplay=true]
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹೊಸ ಹೊಸ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಕಂಗನಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆಯವರ ಸಿನಿಮಾ ಪ್ರಚಾರ ಮಾಡಲು ಬಂದಿಲ್ಲ ಎಂದು ಪತ್ರಕರ್ತರಿಗೆ ತಿರುಗೇಟು ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಹೊಸ ರಿಯಾಲಿಟಿ ಶೋ ಲಾಕ್ ಅಪ್ ಪ್ರಚಾರ ಕಾರ್ಯಕ್ರಮದಲ್ಲಿ ಕಂಗನಾ ಪತ್ರಕರ್ತೆಯ ಮೇಲೆ ಕಿಡಿಕಾರಿದ್ದಾರೆ. ಪ್ರಭಾವಿ ಫ್ರೆಡ್ಡಿ ಬರ್ಡಿಯವರು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಗೆಹ್ರೈಯಾನ್ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ದೀಪಿಕಾ ಅವರ ಬಟ್ಟೆಗಳು ಚಿಕ್ಕದಾಗುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದರು. ಈ ಕುರಿತು ಕಂಗನಾ ಒಬ್ಬ ಮಹಿಳಾ ಸಬಲೀಕರಣ ಪ್ರತಿಪಾದಕರಾಗಿರುವುದನ್ನು ಪರಿಗಣಿಸಿ ಪತ್ರಕರ್ತೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ:ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್
ಈ ಪ್ರಶ್ನೆಗೆ ಕಂಗನಾ, ದೀಪಿಕಾ ಪಡುಕೋಣೆ ತನ್ನನ್ನು ತಾನು ಸಮರ್ಥಿಸಿಕೊಳ್ಳಬಲ್ಲಳು. ನಾನು ಇಲ್ಲಿ ಗೆಹ್ರೈಯಾನ್ ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.
ದೀಪಿಕಾ ಮುಗ್ಧಳಲ್ಲ ಅಂತ ಹೇಳಿ ಪತ್ರಕರ್ತೆಗೆ ನೀವು ನನ್ನ ಜೊತೆಗೆ ಹೊರಗೆ 45 ನಿಮಿಷಗಳ ಕಾಲ ಸಿಗಿ ಈ ವಿಷಯದ ಬಗ್ಗೆ ಮಾತನಾಡುತ್ತೇನೆ. ಆದರೆ ಈವೆಂಟ್‍ನಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದರು.
ನೋಡಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದವರನ್ನು ರಕ್ಷಿಸಲು ನಾನು ಇಲ್ಲಿದ್ದೇನೆ ಸರಿ? ಅವಳು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲಳು. ದೀಪಿಕಾಗೆ ಅವಳದ್ದೇ ಆದ ಸವಲತ್ತು, ವೇದಿಕೆ ಇದೆ. ನಾನು ಅವರ ಚಲನಚಿತ್ರವನ್ನು ಇಲ್ಲಿ ಪ್ರಚಾರ ಮಾಡಲು ಬಂದಿಲ್ಲ ಕುಳಿತುಕೊಳ್ಳಿ ಎಂದು ಕಂಗನಾ ಪತ್ರಕರ್ತೆಗೆ ಉತ್ತರಿಸಿದ್ದಾರೆ. ಇದನ್ನೂ ಓದಿ: ‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ
ಮುಂಬೈನ ಹೋಟೆಲ್‍ನಲ್ಲಿ ಕಂಗನಾ ರಣಾವತ್ ಮತ್ತು ಏಕ್ತಾ ಕಪೂರ್ ತಮ್ಮ ಹೊಸ ಶೋ ‘ಲಾಕ್ ಅಪ್’ ಅನ್ನು ಪ್ರಚಾರ ಮಾಡಲು ಬಂದಾಗ ಈ ಘಟನೆ ನಡೆದಿದೆ.
ಬೆಂಗಳೂರು: ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರಗಿ ಮೂರು ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಚುನಾವಣೆಯು ಯಡಿಯೂರಪ್ಪನವರ ಆಶೀರ್ವಾದ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಿದೆ. ಈ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದಿದ್ದು, ಮೂರು ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತದಾನ ಆಗಿದೆ. ಅದಕ್ಕಾಗಿ ನಾನು ಮತದಾರರಿಗೆ ಕೃತಜ್ಞತೆ ಆರ್ಪಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ?:ಆರ್. ಅಶೋಕ್
25 ವರ್ಷಗಳ ಹಿನ್ನೆಲೆ ನೋಡಿದಾಗ ಬೆಳಗಾವಿಯಲ್ಲಿ ಪಾರ್ಟಿ ಹೆಸರಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಈಗ ಪಕ್ಷದ ಚಿನ್ಹೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇವು, ಗೆಲುವು ಸಿಕ್ಕಿದೆ. ಮೂರು ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಲಿಕೆ ಚುನಾವಣಾ ಫಲಿತಾಂಶ- ಮತದಾರರಿಗೆ, ಪಕ್ಷದ ಹಿರಿಯ ನಾಯಕರಿಗೆ ಸಿಎಂ ಧನ್ಯವಾದ
ಇದೇ ವೇಳೆ, ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ನಾನು, ನಾನು ಎಂದು ಟವೆಲ್ ಹಾಕುವ ಕೆಲಸ ಮಾಡಿದ್ದರು. ಆದರೀಗ ಜನ ಟವೆಲ್ ತೆಗೆದು ಹಾಕ್ಬಿಡಿ ಎಂದು ಹೇಳುತ್ತಿದ್ದಾರೆ. ಡಿಕೆಶಿ ಫೇಲ್ಯೂರ್ ಅಧ್ಯಕ್ಷ ಅಂತಾ ಬಿಂಬಿಸುವಲ್ಲಿ ಸಿದ್ದರಾಮಯ್ಯ ಕೂಡ ಸಕ್ಸಸ್ ಆಗಿದ್ದಾರೆ. ಕಾಂಗ್ರೆಸ್ ನ ಒಳ ಜಗಳ ಹೊರಗೆ ಬಂದಿದೆ. ಪಾಲಿಕೆ ಚುನಾವಣೆಯಿಂದ ದೂರ ಸರಿದ್ದ ಸಿದ್ದರಾಮಯ್ಯ ಅವರ ತಂತ್ರ ಈಗ ಫಲಿಸಿದೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉಪಸ್ಥಿತರಿದ್ದರು.
ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾರಾಜ್ ಪ್ರೀತಿಯ ಪುತ್ರನ ನಾಮಕರಣ ಇಂದು ಅದ್ದೂರಿಯಾಗಿ ನಗರದ ಖಾಸಗಿ ಹೋಟೆಲ್‍ನಲ್ಲಿ ನೆರವೇರಿತು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಮೇಘನಾ ರಾಜ್, ಮಗು ಹುಟ್ಟಿದಾಗಲಿಂದಲೂ ನಾಮಕರಣ ಯಾವಾಗ ಮಾಡುತ್ತೀರಾ ಎಂದು ಎಲ್ಲರನ್ನು ಕೇಳುತ್ತಿದ್ದೆ. ಇದೀಗ 11 ತಿಂಗಳ ನಂತರ ಕುಟುಂಬದವರೆಲ್ಲ ಸೇರಿ ಒಂದು ಹೆಸರನ್ನು ತೀರ್ಮಾನಿಸಿದ್ದೇವೆ. ನನ್ನ ಮನಸ್ಸಿನಲ್ಲಿ ಮೊದಲಿನಿಂದಲೂ ರಾಯನ್ ಎಂಬ ಹೆಸರಿತ್ತು. ಚಿರು ಯಾವತ್ತು ನಮ್ಮೆಲ್ಲರಿಗೂ ರಾಯನ್. ಅವನಿಗೆ ಹುಟ್ಟಿರುವ ಯುವರಾಜನೇ ರಾಯನ್ ಎಂದು ಸಂಭ್ರಮ ವ್ಯಕ್ತಪಡಿಸಿದರು. ಇದನ್ನೂ ಓದಿ:ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್
ನಮ್ಮ ಜೀವನದಲ್ಲಿ ನಡೆದ ಎಲ್ಲ ಘಟನೆಯನ್ನು ನೀವು ಮನೆಯ ಸದಸ್ಯರಾಗಿ ನೋಡಿ ಕೊಂಡು ನಿಮ್ಮ ಭಾವನೆಗಳಂತೆ ಅದನ್ನು ಗೌರವಿಸಿದ್ದೀರಾ. ನಮ್ಮ ಜೀವನದಲ್ಲಿ ಕತ್ತಲೆ ತುಂಬಿದ್ದ ಸಮಯದಲ್ಲಿ ಬೆಳಕು ನೀಡಿದ್ದು ನಮ್ಮ ರಾಯನ್. ಅದಕ್ಕೆ ರಾಯನ್ ಎಂದು ಹೆಸರಿಟ್ಟಿದ್ದೇವೆ ಎಂದರು.
ರಾಯನ್ ಎಂಬ ಹೆಸರಿನ ಅರ್ಥ ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜ. ಅದು ನಮ್ಮ ರಾಯನ್. ಹಾಗಾಗಿ ಅವನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ದೇವೆ. ಈ ಹೆಸರನ್ನು ಎಲ್ಲರೂ ಇಷ್ಟಪಟ್ಟಿದ್ದು, ನೀವು ಕೂಡ ಇಷ್ಟಪಡುತ್ತೀರಾ ಎಂದು ಭಾವಿಸುತ್ತೇನೆ. ರಾಯನ್ ಹಾಗೂ ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದಿದ್ದಾರೆ. ಇದನ್ನೂ ಓದಿ: ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’
ಈ ಸಂದರ್ಭದಲ್ಲಿ ಸುಂದರ್ ರಾಜ್‍ರವರು, ಚಿರು ಮೊದಲಿನಿಂದಲೂ ಸ್ನೇಹ ಜೀವಿ. ಚಿರು ಅಗಲಿದ ನಂತರ ಸದಾ ನಮ್ಮ ಜೊತೆಯಾಗಿ ನಿಂತಿದ್ದು, ಚಿರು ಸ್ನೇಹಿತ ಪನ್ನಾಗಭರಣ ಹಾಗೂ ಅವರ ತಂಡ. ಎಷ್ಟೋ ಕಷ್ಟದ ಸಮಯದಲ್ಲಿ ಹೇಗೆ ಅದನ್ನು ನಿಭಾಯಿಸಬೇಕು ಎಂದು ಗೊತ್ತಿಲ್ಲದೇ ಇರುವ ಸಂದರ್ಭದಲ್ಲಿ ಅವರು ಬಂದು ನಮ್ಮ ಕುಟುಂಬಕ್ಕೆ ಬೆಂಬಲವಾಗಿ ನಿಂತರು. ಚಿರು ಒಬ್ಬ ಒಳ್ಳೆಯ ಸ್ನೇಹಿತರನ್ನು ನೀಡಿ ಹೋಗಿದ್ದಾರೆ ಎಂದು ಭಾವುಕರಾಗಿದ್ದಾರೆ.
ನವದೆಹಲಿ: ಡೋಂಟ್ ವರಿ, ನಿಮ್ಮ ಹಣ ಸೇಫ್ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೆಸ್ ಬ್ಯಾಂಕ್ ಠೇವಣಿದಾರರಲ್ಲಿ ಧೈರ್ಯ ತುಂಬಲು ಯತ್ನಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಆರ್‌ಬಿಐ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಯೆಸ್ ಬ್ಯಾಂಕ್‍ನಲ್ಲಿ ಎಸ್‍ಬಿಐ 5 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದು, ಅಲ್ಲಿನ ಉದ್ಯೋಗಿಗಳಿಗೆ ಒಂದು ವರ್ಷ ಯಾವುದೇ ಭಯ ಇರಲ್ಲ ಎಂದು ಸ್ಪಷ್ಟಪಡಿಸಿದರು.
FM Nirmala Sitharaman on #YesBank: Our govt is committed to ensuring that depositors' interests are safeguarded. I want RBI to ensure that due process of law is set to roll with a sense of urgency so that we should find out as to who led to the problem of this size & magnitude. https://t.co/o4nrozhSvZ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಿದ ಸಾಲಗಳೇ ಯೆಸ್ ಬ್ಯಾಂಕ್‍ಗೆ ಮುಳುವಾಗಿವೆ. ಯಶ್ ಬ್ಯಾಂಕ್ ಬಿಕ್ಕಟ್ಟು ದಿಢೀರ್ ಸಂಭವಿಸಿದ್ದಲ್ಲ. 2017ರಿಂದಲೇ ಬ್ಯಾಂಕ್ ಮೇಲೆ ನಾವು ನಿಗಾ ಇಟ್ಟಿದ್ದೇವು. ಈ ನಿಟ್ಟಿನಲ್ಲಿ ಆರ್‌ಬಿಐ ಯೆಸ್ ಬ್ಯಾಂಕ್‍ನ ವ್ಯವಸ್ಥಾಪ ನಿರ್ದೇಶಕ ಹಾಗೂ ಸಿಇಒ ಅವರನ್ನು ಬದಲಿಸಲು ಶಿಫಾರಸು ಮಾಡಿತ್ತು. ಅದರಂತೆ 2018ರ ಸೆಪ್ಟೆಂಬರ್ ನಲ್ಲಿ ಹೊಸದಾಗಿ ಸಿಇಒ ಅವರನ್ನು ನೇಮಕ ಮಾಡಲಾಗಿತ್ತು. ಅಂದಿನಿಂದ ಬ್ಯಾಂಕಿನ ಬಿಕ್ಕಟ್ಟು ಸುಧಾರಣಗೆ ಕೆಲಸ ನಡೆದಿತ್ತು ಎಂದು ತಿಳಿಸಿದರು.
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾತನಾಡಿ, ಆರ್ಥಿಕತೆಯನ್ನು ಕಾಪಾಡುವ ದೃಷ್ಟಿಯಿಂದಲೇ ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಈ ತಿಂಗಳ ಒಳಗೆ ಯೆಸ್ ಬ್ಯಾಂಕ್ ಪುನರುಜ್ಜೀವನಕ್ಕೆ ಯೋಜನೆ ರೂಪಿಸಲಾಗುವುದು. ಗ್ರಾಹಕರು ಆತಂಕ ಪಡುವುದು ಬೇಡ ಎಂದಿದ್ದಾರೆ.
Finance Minister Nirmala Sitharaman: Since 2017, RBI has been continuously monitoring & scrutinizing Yes Bank. It noticed that there were governance issues and weak compliance in the bank. There was a wrong asset classification together with risky credit decisions. pic.twitter.com/fttfPgSGZ2
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. 2014ರಲ್ಲಿ 15 ಲಕ್ಷ ತೆಗೆದುಕೊಳ್ಳಿ ಎಂದ ಮೋದಿ, 2018ರಲ್ಲಿ ಪಕೋಡಾ ತೆಗೆದುಕೊಳ್ಳಿ ಎಂದಿದೆ. ಇದೀಗ ಬ್ಯಾಂಕ್‍ಗಳನ್ನು ಬಂದ್ ಮಾಡಲು ಚಾವಿ ಲೋ ಎನ್ನುತ್ತಿದೆ ಎಂದು ವ್ಯಂಗ್ಯವಾಡಿದೆ. ಇದು ಯೆಸ್ ಬ್ಯಾಂಕ್ ಅಲ್ಲ ನೋ ಬ್ಯಾಂಕ್.. ಮೋದಿ ಸರ್ಕಾರ ದೇಶದ ಆರ್ಥಿಕ ಸ್ಥಿತಿಯನ್ನು ಹೇಗೆ ಸರ್ವನಾಶ ಮಾಡಿದೆ ಎಂಬುದಕ್ಕೆ ಯೆಸ್ ಬ್ಯಾಂಕ್ ತಾಜಾ ಉದಾಹರಣೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಜೊತೆಗೆ ನಿರ್ಮಲಾ ಸೀತಾರಾಮನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಿನ್ನೆಲೆ ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್ ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಆ್ಯಂಟಿ ಫ್ಯಾಸಿಸ್ಟ್ ಪೀಪಲ್ಸ್ ಫ್ರಂಟ್‍ನ ಸಂಚಾಲಕ ವಕೀಲ ಬಾಲನ್ ಅವರು ಪೊಲೀಸರ ಗೋಲಿಬಾರ್ ವಿರುದ್ಧ ಹರಿಹಾಯ್ದರು. ಮಂಗಳೂರಿನ ಗೋಲಿಬಾರ್ ಹತ್ಯೆಯಲ್ಲಿ ಪೊಲೀಸರ ಕೈವಾಡ ಇದೆ. ಎನ್‍ಆರ್‍ಸಿ(ರಾಷ್ಟ್ರೀಯ ನಾಗರಿಕ ನೊಂದಣಿ), ಸಿಎಎ(ಪೌರತ್ವ ತಿದ್ದುಪಡಿ ಕಾಯ್ದೆ) ಇವುಗಳು ಬಿಜೆಪಿಯ ಆರ್‍ಎಸ್‍ಎಸ್‍ನಿಂದ ಜಾರಿಗೆ ಬಂದಿರುವಂತಹದ್ದು. ಈ ಕಾಯ್ದೆಗಳು ದೇಶ ವಿರೋಧಿಯಾಗಿವೆ. ಇವುಗಳ ವಿರುದ್ಧ ಹೋರಾಟ ಮಾಡೋದು ನಮ್ಮ ಅಭಿಪ್ರಾಯವಾಗಿದೆ. ಆದರೆ ಅದನ್ನು ಈ ಬಿಜೆಪಿ ಸಂಘಪರಿವಾರದವರು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ಯಾವ ಪೊಲೀಸ್ ಸಿಬ್ಬಂದಿ ಫೈರಿಂಗ್ ಮಾಡಿದ್ದಾರೋ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಷ್ಟು ಸುತ್ತು ಫೈರಿಂಗ್ ಮಾಡಿದರೂ ಯಾವುದೇ ಹೆಣ ಬಿದ್ದಿಲ್ಲವೇ ಎಂದು ಅಲ್ಲಿನ ಕಮೀಷನರ್ ಪ್ರಶ್ನೆ ಮಾಡುತ್ತಾರೆ. ಎಲ್ಲವೂ ಪೂರ್ವಯೋಜಿತ ಕ್ರಮ. ಲಾಠಿ ಜಾರ್ಜ್ ಸಹ ಮಾಡುವ ಪರಿಸ್ಥಿತಿ ಇಲ್ಲದ ಕಡೆ ಪೊಲೀಸರು ಗೋಲಿಬಾರ್ ಮಾಡಿದ್ದಾರೆ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು. ಪೊಲೀಸರ ಪ್ರೀಪ್ಲಾನ್‍ನಿಂದಾಗಿಯೇ ಗೋಲಿಬಾರ್ ಆಗಿದೆ. ದೇಶದಲ್ಲಿ 25 ಕೋಟಿ ಮುಸಲ್ಮಾನರು ಭಯದಲ್ಲಿ ಬದುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
– ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
– ದೇವೇಗೌಡರು ಯಾರನ್ನೂ ಬೆಳೆಸಲ್ಲ
– ಧರ್ಮಸಿಂಗ್, ಬೊಮ್ಮಾಯಿ ಸರ್ಕಾರ ಬೀಳಿಸಿದ್ದು ಯಾರು?
– ಯಾರನ್ನು ಬೆಳೆಸಲ್ಲ, ಬರೀ ಕುಟುಂಬದವರನ್ನೇ ಬೆಳೆಸುತ್ತಾರೆ
ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನವಾಗಲೂ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಅವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರಾನೇರವಾಗಿ ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಇತ್ತೀಚೆಗೆ ದೇವೇಗೌಡರು ಸಂದರ್ಶನವೊಂದನ್ನು ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಪ್ರತಿಕ್ರಿಯಿಸಬಾರದು ಅಂದುಕೊಂಡಿದ್ದೆ. ಆದರೆ ನನ್ನ ಮೇಲೆ ಅವರು ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ. ಇದರಿಂದ ನಾನು ಮೌನವಾಗಿದ್ದರೆ ಜನರಲ್ಲಿ ಬೇರೆ ಭಾವನೆ ಮೂಡಬಹುದು ಎಂದು ಪ್ರತಿಕ್ರಿಯೆಗೆ ಮುಂದಾಗಿದ್ದೇನೆ ಎಂದು ಹೇಳಿ ಗೌಡರ ಕುಟುಂಬದ ವಿರುದ್ಧ ಒಂದೊಂದೆ ಆರೋಪ ಮಾಡಿ ಕಿಡಿಕಾರತೊಡಗಿದರು. ಇದನ್ನೂ ಓದಿ: ದೋಸ್ತಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ – ಬಹಿರಂಗವಾಗಿಯೇ ಎಚ್‍ಡಿಡಿ ಕಿಡಿ
ದೇವೇಗೌಡರು ನನ್ನ ಮೇಲೆ ಮಾಡಿರುವ ಗುರುತರ ಆರೋಪ ಆಧಾರ ರಹಿತವಾಗಿದೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದಿದ್ದಾರೆ. ಸಿದ್ದರಾಮಯ್ಯನಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದನ್ನು ನೋಡುವುದಕ್ಕೆ ಆಗಲಿಲ್ಲ ಎಂದಿದ್ದಾರೆ. ಈ ಮೂಲಕ ನನಗೂ ಅವರಿಗೂ ರಾಜಕೀಯ ವೈರತ್ವ ಇದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ನನಗೆ ಬಿಜೆಪಿ ಅಧಿಕಾರ ಬರಬಾರದು ಎಂದು ವಿರೋಧವಿತ್ತು. ಆದರೆ ಹೈಕಮಾಂಡ್ ಜೆಡಿಎಸ್ ಬೆಂಬಲ ಪಡೆದು ಅವರಿಗೆ ಸಿಎಂ ಸ್ಥಾನ ಕೊಡಿ ಎಂದು ಹೇಳಿತ್ತು. ಆಗ ನಾನು ಮರುಮಾತನಾಡದೇ ಸಮ್ಮಿಶ್ರ ಸರ್ಕಾರಕ್ಕೆ ಒಪ್ಪಿಕೊಂಡೆ. ಅದರಂತೆಯೇ 14 ತಿಂಗಳು ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ಯಾವತ್ತು ಹಸ್ತಕ್ಷೇಪ ಮಾಡಿಲ್ಲ. ಸಮ್ಮಿಶ್ರ ಸರ್ಕಾರದ ಪತನಕ್ಕೆ ದೇವೇಗೌಡರು, ಕುಮಾರಸ್ವಾಮಿ ಮತ್ತು ರೇವಣ್ಣ ಕಾರಣ ಎಂದು ಎಲ್ಲಾ ಶಾಸಕರು ಮಾತನಾಡುತ್ತಿದ್ದಾರೆ. ಶಾಸಕರ ಎಲ್ಲಾ ಕೆಲಸವನ್ನು ಮಾಡಿಕೊಟ್ಟು ಕ್ಷೇತ್ರದ ಸಮಸ್ಯೆ ಆಲಿಸಿದ್ದರೆ ಹೀಗಾಗುತ್ತಿರಲಿಲ್ಲ. ಶಾಸಕರಷ್ಟೇ ಅಲ್ಲಾ ಸಚಿವರುಗಳು ಆರೋಪಿಸಿದ್ದಾರೆ. ಯಾರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೆ ಏಕಪಕ್ಷಿಯ ನಿರ್ಧಾರ ತೆಗೆದುಕೊಂಡಿದ್ದೆ ಸರ್ಕಾರ ಪತನಕ್ಕೆ ಕಾರಣ ಎಂದು ಆರೋಪಿಸಿದರು.
ನಾನು 5 ವರ್ಷ ಸಿಎಂ ಆಗಿದ್ದಾಗ ಯಾಕೆ ಒಬ್ಬ ಶಾಸಕ ಮಾತನಾಡಲಿಲ್ಲ. ಸುಮ್ಮನೆ ನನ್ನ ಮೇಲೆ ಗೂಬೆ ಕೂರಿಸಿದರೆ, ನನಗೆ ಅರ್ಥ ಆಗಲ್ಲ ಅಂದುಕೊಂಡಿದ್ದಾರೆ. ನಾನು ಸಿಎಲ್‍ಪಿ ನಾಯಕನಾಗಿ ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೆ. ಆಗ 5-6 ಸಮನ್ವಯ ಸಮಿತಿ ಸಭೆ ಮಾಡಿದ್ದೆವು. ಆದರೆ ಸಮನ್ವಯ ಸಮಿತಿಯ ಯಾವ ನಿರ್ಧಾರವನ್ನು ಅವರು ಜಾರಿಗೆ ತರಲಿಲ್ಲ. ಬರಿ ಆಯ್ತು ಆಯ್ತು ಎಂದು ಸಭೆಯಲ್ಲಿ ಒಪ್ಪಿಕೊಂಡು ಹೋಗುತ್ತಿದ್ದರು ಅಷ್ಟೇ. ಇವರ ನಡವಳಿಕೆಯಿಂದ ಸರ್ಕಾರ ಪತನವಾಗಿದೆ. ಸರ್ಕಾರ ಉಳಿಸುವುದಕ್ಕೆ ಎಲ್ಲಾ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದು ತಿಳಿಸಿದರು.
ನನ್ನ ಮೇಲೆ ಸುಳ್ಳು ಆರೋಪ ಮಾಡಿ ಯಾವ ಪಕ್ಷ ಖುಷಿ ಪಡಿಸುತ್ತಾರೋ ಗೊತ್ತಿಲ್ಲ. ಇದು ಕಪೋಲ ಕಲ್ಪಿತ ಆರೋಪವಾಗಿದೆ. ವಿರೋಧ ಪಕ್ಷದ ನಾಯಕನಾಗಲು ಸರ್ಕಾರ ಉರುಳಿಸಿದ್ದು ದೇಶದ ಇತಿಹಾಸದಲ್ಲೇ ಇಲ್ಲ. ದೇವೇಗೌಡರು ಅದೆಲ್ಲಿ ಕಂಡಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಬೀಳಿಸುವಂತಹ ನೀಚ ರಾಜಕಾರಣ ನಾನು ಮಾಡಲ್ಲ. ಅದು ಏನಿದ್ದರೂ ದೇವೇಗೌಡರು ಹಾಗೂ ಅವರ ಮಕ್ಕಳ ಹುಟ್ಟುಗುಣವಾಗಿದೆ. ಧರ್ಮಸಿಂಗ್ ಸರ್ಕಾರ ಬೀಳಿಸಿದ್ದು ಯಾರು? ಬೊಮ್ಮಾಯಿ ಸರ್ಕಾರ ಬೀಳಿಸಿದ್ದು ಯಾರು ಎಂದು ಪ್ರಶ್ನೆ ಮಾಡಿ ತಿರುಗೇಟು ನೀಡಿದರು.
ಸಿದ್ದರಾಮಯ್ಯನವರಿಂದ ಬಿಜೆಪಿ ರಾಜ್ಯದಲ್ಲಿ ಬೆಳೆಯುತ್ತಿದೆ ಎನ್ನುವ ದೇವೇಗೌಡರ ಆರೋಪಕ್ಕೆ, ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರೆ ಅದಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಕಾರಣ. ಬಿಜೆಪಿ ಜೊತೆ ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ಮಾಡಬೇಕು ಅಂದಿದ್ದರು. ಆದರೆ ದೇವೇಗೌಡರು ಅನುಮತಿ ಕೊಡದೆ ಕುಮಾರಸ್ವಾಮಿ ಸರ್ಕಾರ ಮಾಡಿದ್ರಾ? ಎಲ್ಲಾ ನಾಟಕ ಮಾಡುತ್ತಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದೆ ಬಿಜೆಪಿ ಬೆಳೆಯಲು ಕಾರಣವಾಗಿದೆ. ಅಸಂಬದ್ಧವಾದ ಅಸತ್ಯವಾದ ಆರೋಪ ನನ್ನ ಮೇಲೆ ಮಾಡುತ್ತಿದ್ದಾರೆ. ಅವರ ಸೇಡಿನ ಆಕ್ರೋಶ ಸಾಮಾನ್ಯ ಜನರಿಗೆ ಅರ್ಥ ಆಗುತ್ತೆ. ದೇವೇಗೌಡರು ಯಾವ ಪಕ್ಷಕ್ಕೆ ಬೆಂಬಲ ಕೊಡುತ್ತಾರೋ ಅವರಿಗೆ ಮೋಸ ಮಾಡುತ್ತಾರೆ ಎಂದರು.
ನನಗೆ ಸಿಎಂ ಸ್ಥಾನ ತಪ್ಪಿಸಿದ್ದರು ಅನ್ನೋ ಸಿಟ್ಟಿದೆ ಅಂದಿದ್ದಾರೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಇವರೆ ಅದನ್ನ ಹೇಳುತ್ತಾರೆ. ನಾನೆ ಸಿಎಂ ಸ್ಥಾನ ತಪ್ಪಿಸಿದೆ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಬೇಡ ಎಂದು ಹೇಳಿದ್ದೆ. ಆದರೆ ಹೈಕಮಾಂಡ್ ಕೊನೆಗೆ ತೀರ್ಮಾನ ಮಾಡಿತ್ತು. ಹೀಗಾಗಿ ಒಟ್ಟಾಗಿ ಪ್ರಚಾರ ಮಾಡಿದ್ದೇವೆ. ಆದರೆ ನಾನು ಮತ್ತು ನನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಹೇಳಿದ್ದಾರೆ. ಹಾಗಾದರೆ ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ ಸೋಲಿಗೆ ಕಾರಣ ಯಾರು? ಹಾಸನದಲ್ಲಿ ಮೊಮ್ಮಗ ಗೆದ್ದಿದ್ದಾರೆ. ಅಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡಿಲ್ವಾ ಎಂದು ಪ್ರಶ್ನಿಸಿದರು.
ಗೌಡರ ಕುಟುಂಬದವರೆಲ್ಲರೂ ಚುನಾವಣೆಗೆ ನಿಂತುಕೊಂಡಿದ್ದರು. ಹೀಗಾಗಿ ನಾವು ಬೇಸತ್ತು ವೋಟು ಹಾಕಿಲ್ಲ ಎಂದು ಜನರು ನನಗೆ ಹೇಳಿದ್ದಾರೆ. ದೇವೇಗೌಡರು ಯಾರನ್ನು ಬೆಳೆಸಲ್ಲ. ಅವರ ಮಕ್ಕಳು, ಅವರ ಕುಟುಂಬದವರನ್ನೇ ಬೆಳೆಸುತ್ತಾರೆ. ಸ್ವಜಾತಿಯವರನ್ನೇ ಬೆಳೆಸಲ್ಲ. ನಾಗೇಗೌಡ, ಬೈರೇಗೌಡ, ಗೋವಿಂದೇಗೌಡ ಅವರನ್ನೆಲ್ಲಾ ಯಾರು ತುಳಿದಿದ್ದು? ಬಚ್ಚೆಗೌಡರನ್ನು ಕೇಳಿ ಜಾಸ್ತಿ ಹೇಳುತ್ತಾರೆ ಎಂದರು.
ದೇವೇಗೌಡರಿಗೆ ಮೊದಲಿನಿಂದಲು ನನ್ನ ಕಂಡರೆ ಆಗಲ್ಲ. ಒಕ್ಕಲಿಗ ವಿರೋಧಿ, ಲಿಂಗಾಯತ ವಿರೋಧಿ ಎಂದು ಅಪಪ್ರಚಾರ ಮಾಡುತ್ತಾರೆ. ನನಗೆ ಎಲ್ಲ ಜಾತಿ, ಧರ್ಮದಲ್ಲೂ ಸ್ನೇಹಿತರಿದ್ದಾರೆ. ಆದರೆ ಸುಮ್ಮನೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸಬಾರದು. ಇದರಿಂದ ರಾಜಕೀಯ ಲಾಭ, ಅನುಕಂಪ ಬರುತ್ತದೆ ಎಂದುಕೊಂಡದ್ದರೆ ತಪ್ಪು. ಅವರಿಗೆ ಬೇರೆಯವರ ಮೇಲೆ ಆರೋಪ ಮಾಡುವುದೇ ಕೆಲಸ. ಇವೆಲ್ಲ ದೇವೇಗೌಡರ ಹಳೆಯ ಗಿಮಿಕ್ಸ್, ದೇವೇಗೌಡರು ಮಾಡಿರುವ ಆರೋಪಗಳು ಸುಳ್ಳು. ರಾಜ್ಯದ ಜನರು ಬುದ್ಧಿವಂತರು ನನ್ನ ಮತ್ತು ಅವರ ರಾಜಕೀಯ ಜೀವನವನ್ನು ನೋಡಿದ್ದಾರೆ. ಹೀಗಾಗಿ ಅವರಿಗೆ ಎಲ್ಲವನ್ನು ತಿಳಿಸಿದೆ ಎಂದು ಸಿದ್ದರಾಮಯ್ಯ ಗುಡುಗಿದರು.
ದೇಶದಲ್ಲಿ ಕೋಮುವಾದಿ ಬಿಜೆಪಿ ಅಧಿಕಾರದಲ್ಲಿದೆ. ಕಳೆದು 5 ವರ್ಷದಿಂದ ಅಧಿಕಾರಕ್ಕೆ ಬಂದ ಮೇಲೆ ವಿಪಕ್ಷಗಳನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇಂತಹ ರಾಜಕೀಯ ಸನ್ನಿವೇಶದಲ್ಲಿ ಎಲ್ಲಾ ಜಾತ್ಯಾತೀತ ಪಕ್ಷಗಳು ಒಗ್ಗಟ್ಟಾಗಿ ಅವರನ್ನ ಹಿಮ್ಮೆಟ್ಟಿಸಲು ಹೋರಾಟ ಮಾಡಬೇಕು. ನಾನು ಅದರಲ್ಲಿ ನಂಬಿಕೆ ಇಟ್ಟವನು ನಾನು. ಪ್ರಧಾನಿ ಮೋದಿ ಐಟಿ, ಇಡಿ ಸಿಬಿಐ ಎಲ್ಲಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಂಡು ಸರ್ವಾಧಿಕಾರಿ ದೋರಣೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್‍ವೈ, ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಮತ್ತು ನಮ್ಮ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಆಸ್ತಿ- ಪಾಸ್ತಿ ಸೇರಿದಂತೆ ಸಾಕಷ್ಟು ನಷ್ಟವಾಗಿದೆ. ರಾಜ್ಯದ ಸುಮಾರು ಅರ್ಧ ಭಾಗ ವರುಣನ ರುದ್ರನರ್ತನಕ್ಕೆ ಬಲಿಯಾಗಿದೆ. ಕಳೆದ 45 ವರ್ಷದಲ್ಲಿ ಇಷ್ಟು ದೊಡ್ಡ ಭೀಕರ ಪ್ರವಾಹವನ್ನು ರಾಜ್ಯ ಕಂಡಿರಲಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ @BSYBJP ಅವರನ್ನು ಸರ್ಕಾರಿ ನೌಕರರ ಸಂಘದ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಭೇಟಿ ಮಾಡಿದರು. ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ,ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡ ಪಾಟೀಲ್, ಖಜಾಂಚಿ ಶ್ರೀನಿವಾಸ,ಗೌರವಾಧ್ಯಕ್ಷ ಶಿವರುದ್ರಯ್ಯ ಮತ್ತು ಪದಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ್ ಉಪಸ್ಥಿತರಿದ್ದರು. pic.twitter.com/nSWS8OxPDa
ಪ್ರವಾಹದ ಮಾಹಿತಿ:
ಈವರೆಗೆ 16 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಇದರಿಂದ 24 ಜನ ಮೃತಪಟ್ಡಿದ್ದಾರೆ. ಈಗಾಗಲೇ ಮೃತ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ 80 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿದ್ದೇವೆ. ಒಟ್ಟು 1,024 ಗ್ರಾಮಗಳು ಮಳೆ ಮತ್ತು ಪ್ರವಾಹದ ಭೀಕರತೆಯನ್ನು ಎದುರಿಸುತ್ತಿವೆ. 2.35 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. 220 ಜಾನುವಾರುಗಳ ಸಾನ್ನಪ್ಪಿದ್ದು, 44 ಸಾವಿರ ಜಾನುವಾರಗಳನ್ನು ಸ್ಥಳಾಂತರ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 624 ಪರಿಹಾರ ಕೇಂದ್ರಗಳ ತೆರೆಯಲಾಗಿದೆ ಎಂದರು. ಪರಿಹಾರ ಕೇಂದ್ರದಲ್ಲಿ 1.57 ಲಕ್ಷಕ್ಕೂ ಹೆಚ್ಚ ಜನ ಆಶ್ರಯ ಮಾಡುತ್ತಿದ್ದಾರೆ. ಅವರಿಗೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗಿದೆ. 3.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 12,651 ಮನೆಗಳು ಸಂಪೂರ್ಣ ಹಾನಿಯಾಗಿದೆ ಎಂದು ಸಿಎಂ ಬಿಎಸ್‍ವೈ ಅವರು ತಿಳಿಸಿದರು.
ಮಂಗಳೂರಿಗೆ ರೈಲು ಮತ್ತು ರಸ್ತೆ ಸಂಪರ್ಕ ಕಡಿದುಹೋಗಿದೆ. ಇತ್ತ ಕೊಡಗಿನಲ್ಲಿ ಭೂಕುಸಿತ ಉಂಟಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಮೂರು ತಂಡಗಳಾಗಿ ಶಾಸಕರು ತೆರಳಿದ್ದಾರೆ. ಬೆಳಗಾವಿ, ಧಾರವಾಡ, ಗದಗ, ಚಿಕ್ಕೋಡಿ, ಬಾಗಲಕೋಟೆ, ಕೂಡಲಸಂಗಮ, ಬಾದಾಮಿ ಸೇರಿದಂತೆ ಅನೇಕ ಕಡೆ ಭೇಟಿ ನೀಡಿದ್ದೇನೆ. ಈಗಾಗಲೇ ನದಿ ತೀರದ ಜನರಿಗೆ ಎಚ್ಚರಿಕೆ ಕೊಡಲಾಗಿದೆ. ಹೇಮಾವತಿ ಮತ್ತು ತುಂಗಭದ್ರಾ ನದಿಗಳಲ್ಲೂ ಹೆಚ್ಚುವರಿ ನೀರು ಹರಿಸಲು ನಿರ್ಧಾರ ಆಗಿದೆ. ಜಲಾಶಯಗಳಿಗೆ ಹೆಚ್ವುವರಿ ಒಳಹರಿವು ಬರುತ್ತಿದೆ. ಆದ್ದರಿಂದ ಹೊರ ಹರಿವು ಹೆಚ್ಚಿಸಲಾಗಿದೆ ಎಂದರು.
ಮುಖ್ಯಮಂತ್ರಿ @BSYBJP ಅವರು ಇಂದು ರಾಜ್ಯದ ಪ್ರವಾಹ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/3m7Byu7cUu
ಕೇಂದ್ರ ಸರ್ಕಾರ ಸಕಾಲಕ್ಕೆ ಸ್ಪಂದಿಸಿದೆ. ವಾಯು, ಭೂ, ನೌಕಾ ಪಡೆಗಳ ಸಿಬ್ಬಂದಿ ತುರ್ತು ಕಾರ್ಯಾಚರಣೆಗೆ ಇಳಿದಿವೆ. ವಾಯುಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು, ಅಗ್ನಿಶಾಮಕ ದಳ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಪಕ್ಷಾತೀತವಾಗಿ ಶಾಸಕರು, ಸಂಸದರ ತಂಡಗಳು ವಾಸ್ತವ ಸ್ಥಿತಿ ಅರಿತುಕೊಂಡು ಕಾರ್ಯಾಚರಣೆ ಮಾಡುತ್ತಿದ್ದಾರೆ. ಯಾರೂ ಧೈರ್ಯಗುಂದುವ ಅಗತ್ಯ ಇಲ್ಲ. ರಾಜ್ಯ, ಕೇಂದ್ರ ಸರ್ಕಾರಗಳ ನೆರವು ಕೊಡಲು ಸಿದ್ಧ ಇವೆ. ಎಷ್ಟೇ ಖರ್ಚಾದರೂ ಸಂತ್ರಸ್ತರಿಗೆ ಸುರಕ್ಷತೆ ಮತ್ತು ಪುನರ್ವಸತಿ ಕಲ್ಪಿಸಿ ಕೊಡುತ್ತೇವೆ ಎಂದರು.
ಪರಿಹಾರ ನಿಧಿ:
ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ 150 ಕೋಟಿ ರೂ. ಕೊಡುವುದಾಗಿ ಫೋಷಿಸಿದ್ದಾರೆ. ಬೇರೆ ಬೇರೆ ನಿಗಮ ಮಂಡಳಿಯಿಂದ 50 ಕೋಟಿ ಕೊಡುತ್ತೇವೆ ಎಂದಿದ್ದಾರೆ. ಸುಧಾಮೂರ್ತಿ ಅವರು 10 ಕೋಟಿ ರೂ. ಕೊಟ್ಟಿದ್ದಾರೆ. ಪೊಲೀಸ್ ಮತ್ತು ಸಾರಿಗೆ ಇಲಾಖೆ ಒಂದು ದಿನ ಸಂಬಳವನ್ನು ಕೊಡಲು ಒಪ್ಪಿದ್ದಾರೆ. ಹಾಲು ಉತ್ಪಾದಕ ಘಟಕದಿಂದ 1 ಕೋಟಿ ರೂ. ಕೊಟ್ಟಿದ್ದಾರೆ. ಶಾಸಕರ ಕ್ಷೇಮಾಭಿವೃದ್ದಿ ನಿಧಿಯಿಂದ 2 ಕೋಟಿ ರೂ. ಕೊಡಲಾಗಿದೆ. ಹೀಗೆ ಅನೇಕರು ಅವರ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ ಎಂದು ಸಿಎಂ ಬಿಎಸ್‍ವೈ ಅವರು ತಿಳಿಸಿದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗಾವಿ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು ಹಾಗೂ ಪ್ರವಾಹ ಸಂತ್ರಸ್ತರೊಡನೆ ಮಾತನಾಡಿ ಸಾಂತ್ವನ ಹೇಳಿದರು. pic.twitter.com/zf2hAzwrmk