ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು (Press Club Of Bangalore) ನೀಡುವ 2023ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಯ (PUBLiC TV) ಕಾರು ಚಾಲಕ ವಿಜಯ್ ಕುಮಾರ್ (Vijay Kumar) ಅವರನ್ನು ಸನ್ಮಾನಿಸಲಾಗಿದೆ.
ಬೆಂಗಳೂರು ಮಳೆ ಪ್ರವಾಹದ ವೇಳೆ ಅಂಡರ್‌ಪಾಸ್‌ನಲ್ಲಿ ಸಿಲುಕಿದ್ದ ಕಾರಲ್ಲಿದ್ದವರನ್ನು ಜೀವದ ಹಂಗು ತೆರೆದು ರಕ್ಷಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಅವರು ವಿಜಯ್ ಕುಮಾರ್ ಅವರನ್ನು ಗೌರವಿಸಿದ್ದಾರೆ.
ವಿಜಯ್ ಕುಮಾರ್ ನೀರಿಗೆ ಇಳಿದು ಐವರನ್ನು ರಕ್ಷಣೆ ಮಾಡಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಕ್ವಿಕ್ ರೆಸ್ಕ್ಯೂ ಟೀಂ ವಾಹನವನ್ನು ತಡೆದ ನಮ್ಮ ಪ್ರತಿನಿಧಿ ನಾಗೇಶ್ ಸಹಾಯಕ್ಕೆ ನೆರವಾಗುವಂತೆ ಮನವಿ ಮಾಡಿದ್ದರು. ಆದರೆ ಅದನ್ನು ನಂಬದ ಸಿಬ್ಬಂದಿಗೆ ಲೋಗೋ ತೋರಿಸಿ, ಕೂಡಲೇ ಬನ್ನಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಆಗ ನೆರವಿಗೆ ಬಂದ ಕ್ವಿಕ್ ರೆಸ್ಕ್ಯೂ ಟೀಂ ರಕ್ಷಣಾ ಕಾರ್ಯ ನಡೆಸಿತು. ಕೆಳಗಿದ್ದವರನ್ನು ರಕ್ಷಿಸಲು ಮಹಿಳೆಯೊಬ್ಬರು ತಾವು ಧರಿಸಿದ್ದ ತಮ್ಮ ಸೀರೆಯನ್ನು ಬಿಚ್ಚಿ ಹಗ್ಗದಂತೆ ಬಳಸಲು ನೀಡಿದ್ದರು.
ಇದಕ್ಕೆ ಸಂಬಂಧಿಸಿದ ದೃಶ್ಯಗಳು ವೈರಲ್ ಆಗುತ್ತಲೇ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು. ಪಬ್ಲಿಕ್ ಟಿವಿ ವತಿಯಿಂದ ಸನ್ಮಾನ ಮಾಡಲಾಗಿತ್ತು. ವಿಜಯ್ ಕುಮಾರ್ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸಂಚಾರಿ ಇಲಾಖೆ ಜಂಟಿ ಆಯುಕ್ತ ಅನುಚೇತ್ ಸನ್ಮಾನಿಸಿ, 10 ಸಾವಿರ ರೂ. ನಗದು ಪುರಸ್ಕಾರ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದರು.
ಬೆಂಗಳೂರು: ಟೀಕೆಗಳು ಮಾಡುವುದಷ್ಟೇ ಮಾಧ್ಯಮಗಳ(Media) ಕೆಲಸವೆಂದು ಪರಿಭಾವಿಸದೇ ಆಡಳಿತ ವ್ಯವಸ್ಥೆಗೆ ಸೂಕ್ತ ಸಲಹೆ-ಸೂಚನೆಗಳು, ಮಾರ್ಗದರ್ಶನ ಕೊಡುವ ಕೆಲಸಗಳು ಮಾಧ್ಯಮಗಳಿಂದಾಗಬೇಕು. ಇದು ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಕಾನೂನು ಮತ್ತು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ(JC Madhuswamy) ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ “ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ” ವಿಚಾರಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಗಳು ಮತ್ತು ಆಡಳಿತ ವ್ಯವಸ್ಥೆ ತಪ್ಪು ಮಾಡಿದಲ್ಲಿ ಅವಹೇಳನ ಮಾಡದೇ ಅದನ್ನು ಅತ್ಯಂತ ನವೀರಾಗಿ ತಿದ್ದಿ ಹೇಳುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಇದುವರೆಗೆ ಏನಾಗಿದೆ? ಏನಾಗಬೇಕಾಗಿತ್ತು ಎನ್ನುವುದರ ಕುರಿತು ವಿಶ್ಲೇಷಣೆ ಮಾಡಿ ಸರ್ಕಾರಗಳಿಗೆ ಚಾಟಿ ಬಿಸಿ ಎಚ್ಚರಿಸುವ ಕೆಲಸಗಳನ್ನು ಮಾಡಬೇಕು ಎಂದು ಹೇಳಿದ ಸಚಿವ ಮಾಧುಸ್ವಾಮಿ ಅವರು ರಾಷ್ಟ್ರನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂಬ ಅಂಶವನ್ನು ವಿವಿಧ ರೀತಿಯ ಉದಾರಣೆಗಳ ಮೂಲಕ ತಿಳಿಯಪಡಿಸಿದರು.
ರಾಷ್ಟ್ರ ನಿರ್ಮಾಣವೆಂದರೇ ಕೇವಲ ದೊಡ್ಡ ದೊಡ್ಡ ಕೈಗಾರಿಗಳ ಅಭಿವೃದ್ಧಿಯಲ್ಲ. ಜಾತಿ-ಮತ, ಪಂಥ, ಸಂಸ್ಕೃತಿ ಸೇರಿದಂತೆ ವೈವಿಧ್ಯತೆಯನ್ನೇ ಜೀವಾಳವಾಗಿಸಿಕೊಂಡಿರುವ ಎಲ್ಲವನ್ನು ಮತ್ತು ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಮುನ್ನಡೆಯುತ್ತಾ ಎಲ್ಲ ರಂಗಗಳಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವುದಾಗಿದೆ ಎಂದು ಅವರು ವಿವರಿಸಿದರು. ನಿಷ್ಪಕ್ಷಪಾತ ವರದಿಗಾರಿಕೆ ಮತ್ತು ಮಾಧ್ಯಮಗಳ ವರದಿ ಹಾಗೂ ನಿರೀಕ್ಷೆಗಳ ಕುರಿತು ಸಹ ಅವರು ಮಾತನಾಡಿದರು.
ಹಿರಿಯ ಪತ್ರಕರ್ತರಾದ ರಾಜಾ ಶೈಲೇಶಚಂದ್ರಗುಪ್ತ ಅವರು ಮಾತನಾಡಿ, ಜನರ ಭಾವನೆಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಧ್ಯಮಗಳು ಮಾಡಬೇಕು. ಮಾಧ್ಯಮಗಳ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು, ಅವುಗಳು ಈಡೇರಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಲೋಪಗಳಾಗದೇ ನಿರೀಕ್ಷೆಗಳು ನಿಜವಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ಮಾಧ್ಯಮಗಳು ಇರುವ ಅವಕಾಶಗಳನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ರಾಷ್ಟ್ರವನ್ನು ಕಟ್ಟುವ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ಪೋಲೆಂಡ್‌ಗೆ ಕ್ಷಿಪಣಿ ಹಾರಿಸಿ ಉಕ್ರೇನ್ ಎಡವಟ್ಟು
ಹಿರಿಯ ಪತ್ರಕರ್ತರಾದ ಡಾ.ಆರ್.ಪೂರ್ಣಿಮಾ ಅವರು ಮಾತನಾಡಿ, ಭಾರತದಲ್ಲಿ ಪತ್ರಿಕಾರಂಗ ಹುಟ್ಟಿದ್ದೇ ರಾಷ್ಟ್ರೀಯ ಚಳವಳಿ ಸಂದರ್ಭದಲ್ಲಿ. ಸ್ವಾತಂತ್ರ್ಯ ಚಳವಳಿಯಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಮತ್ತು ಬ್ರಿಟೀಷರ ವಿರುದ್ಧ ಜನರು ಸಂಘಟಿತರಾಗಿ ಹೋರಾಟಕ್ಕಿಳಿಯುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವದ್ದು. ಪತ್ರಿಕಾರಂಗವನ್ನು ರಾಷ್ಟ್ರೀಯ ಚಳವಳಿ ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಿತು ಎಂದರು.
ಜರ್ನಲಿಸ್ಟ್ ಆ್ಯಕ್ಟಿವಿಸ್ಟ್ ಕೂಡ ಹೌದು ಎಂದು ಹೇಳಿದ ಅವರು ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವ ಕೆಲಸವನ್ನು ಮಾಧ್ಯಮ ಪ್ರತಿನಿಧಿಗಳು ಮಾಡಬೇಕು ಎಂದರು.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅನಿಷ್ಠಗಳ ಕುರಿತು ಆಡಳಿತ ವ್ಯವಸ್ಥೆ ಎಚ್ಚರಿಸುವುದು ಮತ್ತು ಲಿಂಗ ಸಮಾನತೆ ಕುರಿತು ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಜನಪರ ದೃಷ್ಟಿಕೋನವನ್ನಿಟ್ಟುಕೊಂಡು ಕಾರ್ಯನಿರ್ವಹಿಸುವುದು ನಮ್ಮ ಆದ್ಯತೆಯಾಗಬೇಕು ಎಂದರು.
ಗೌರವ ಉಪಸ್ಥಿತರಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು ಮಾತನಾಡಿ, ನೈತಿಕತೆ, ಮೌಲ್ಯಗಳನ್ನು ಉಳಿಸಿ ಬೆಳೆಸುವ ಮತ್ತು ಮುಂದಿನ ಪೀಳಿಗೆಗೆ ತಿಳಿಸುವ ಮಹತ್ತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದರು.
ಸದೃಢ ರಾಷ್ಟ್ರನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದ ಅವರು ಮಾಧ್ಯಮಗಳ ಜವಾಬ್ದಾರಿ ಮತ್ತು ಅಲ್ಲಿನ ಒತ್ತಡದ ಕುರಿತು ತಿಳಿಸುವುದರ ಜೊತೆಗೆ ಇಲಾಖೆಯ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಮಾಸಿಕ ಪತ್ರಿಕೆಗಳ ಸಂಪಾದಕರಾಗಿ ಗುಣಮಟ್ಟದ ಮಾಸಿಕ ಪತ್ರಿಕೆ ಹೊರತರುವಲ್ಲಿ ವಹಿಸುವ ಶ್ರಮ ಮತ್ತು ಅನುಭವಗಳನ್ನು ಬಿಚ್ಚಿಟ್ಟರು. ಇದನ್ನೂ ಓದಿ: ‘ನಾನು ಮೋದಿ ಭಕ್ತ’ ಎಂದು ಬಹಿರಂಗವಾಗಿ ಘೋಷಿಸಿದ ನಟ ಅನಂತ್ ನಾಗ್
ಖ್ಯಾತ ಚಲನಚಿತ್ರ ನಟ ಅನಂತನಾಗ್ ಅವರು ಪ್ರಧಾನ ಭಾಷಣ ಮಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಕೆ. ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿಗಳಾದ ಸಿ.ರೂಪಾ, ಸದಸ್ಯರಾದ ಶಿವಾನಂದ ತಗಡೂರು, ಕೆ.ಕೆ.ಮೂರ್ತಿ, ಶಿವಕುಮಾರ್ ಬೆಳ್ಳಿತಟ್ಟೆ, ಕೂಡ್ಲಿ ಗುರುರಾಜ್, ಗೋಪಾಲ್ ಯಡಗೆರೆ, ಸಿ.ಕೆ.ಮಹೇಂದ್ರ, ಜಗನ್ನಾಥ ಬಾಳ, ಕೆ.ವಿ.ಶಿವಕುಮಾರ, ದೇವಿಂದ್ರಪ್ಪ ಕಪನೂರು, ನಾಗಾರ್ಜುನ ದ್ವಾರಕನಾಥ, ಲಕ್ಷ್ಮೀನಾರಾಯಣ ಎಸ್., ಬದ್ರುದ್ದೀನ್ ಕೆ., ಕೆ.ಎಂ.ಶಿವರಾಜು ಸೇರಿದಂತೆ ಹಿರಿಯ ಪತ್ರಕರ್ತರು ಇದ್ದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅಜೀಂ ಪ್ರೇಮ್‍ಜಿ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೆಸ್‍ಕ್ಲಬ್ ವರ್ಷದ ವ್ಯಕ್ತಿಯಾಗಿ ಅಜೀಂ ಪ್ರೇಮ್‍ಜಿ ಹಾಗೂ ಪ್ರೆಸ್ ಕ್ಲಬ್ 2021 ವರ್ಷದ ವ್ಯಕ್ತಿಯಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.
ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್‍ಆರ್ ರಂಗನಾಥ್, ಸಚಿವ ಅಶ್ವಥನಾರಾಯಣ್, ನಟ ರಮೇಶ್ ಅರವಿಂದ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!
ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರತಿ ವರ್ಷ ಪ್ರೆಸ್ ಕ್ಲಬ್ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತರಿಗೆ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನ ನೆರವೇರಿಸಲಾಗುತ್ತಿದ್ದು, ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಹಿರಿತನ, ಸೇವಾವಧಿಯನ್ನು ಪರಿಗಣಿಸಿ ಮಂಗಳೂರು ಪ್ರೆಸ್ ಕ್ಲಬ್ ಸಮಿತಿ ಗೌರವ ಸನ್ಮಾನಕ್ಕೆ ಪತ್ರಕರ್ತರನ್ನು ಆಯ್ಕೆ ಮಾಡಿದೆ.
2021ನೇ ಸಾಲಿನಲ್ಲಿ ಹಿರಿಯ ಪತ್ರಕರ್ತರಾದ ಕೇಶವ ಕುಂದರ್, ಹಿಲರಿ ಕ್ರಾಸ್ತಾ(ಉದಯವಾಣಿ), ಕೆ.ಆನಂದ ಶೆಟ್ಟಿ, ಗುರುವಪ್ಪ.ಎನ್.ಟಿ.ಬಾಳೆಪುಣಿ (ಹೊಸ ದಿಗಂತ), ಯು.ಕೆ.ಕುಮಾರ್‍ನಾಥ್, ಸುಧಾಕರ ಎರ್ಮಾಳ್ (ವಿಜಯ ಕರ್ನಾಟಕ), ಜಗನ್ನಾಥ ಶೆಟ್ಟಿ ಬಾಳ (ಜಯಕಿರಣ), ಪಿ.ಬಿ.ಹರೀಶ್ ರೈ(ವಿಜಯವಾಣಿ), ಎಸ್.ಜಯರಾಮ್ (ಪಿಟಿಐ) ಅವರು ಗೌರವ ಸನ್ಮಾನಕ್ಕೆ
ಆಯ್ಕೆಯಾಗಿದ್ದಾರೆ.
ಮಾ.21ರಂದು ಬೆಳಗ್ಗೆ 11ಕ್ಕೆ ರಾಣಿ ಅಬ್ಬಕ್ಕ ಕ್ರೂಸ್‍ನಲ್ಲಿ ನಡೆಯಲಿರುವ ಪ್ರೆಸ್‍ಕ್ಲಬ್ ದಿನಾಚರಣೆಯಲ್ಲಿ ಡಾ.ಎಂ.ಮೋಹನ ಅಳ್ವ ಅವರು ಗೌರವ ಸನ್ಮಾನ ನೆರವೇರಿಸಲಿದ್ದಾರೆ ಎಂದು ಮಂಗಳೂರು ಪ್ರೆಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರಿಫ್ ತಿಳಿಸಿದ್ದಾರೆ.
ಬೆಂಗಳೂರು: 2019-20ರ ಪ್ರೆಸ್ ಕ್ಲಬ್ ಹಾಗೂ ಪಿಇಎಸ್ ಯೂನಿವರ್ಸಿಟಿ ಸಹಯೋಗದಲ್ಲಿ ಇಂಟರ್ ಮೀಡಿಯಾ ಟಿ-10 ಕ್ರಿಕೆಟ್ ಟೂರ್ನಮೆಂಟ್ ಗೆ ಇಂದು ಚಾಲನೆ ಸಿಕ್ಕಿತು.
ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದವರಿಗಾಗಿ ಆಯೋಜನೆಗೊಂಡಿದ್ದ ಈ ಟೂರ್ನಮೆಂಟ್‍ನ್ನು ಕಾಂಗ್ರೆಸ್ಸಿನ ನಾಯಕ ಡಿ.ಕೆ ಶಿವಕುಮಾರ್ ಉದ್ಘಾಟಿಸಿ, ಸಖತ್ ಆಗಿ ಬ್ಯಾಟ್ ಬೀಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ ಬಳಿಕ ಮಾತನಾಡಿದ ಡಿಕೆಶಿ, ಪ್ರೆಸ್ ಕ್ಲಬ್ ನಿಂದ ಇದೊಂದು ಒಳ್ಳೆಯ ಕೆಲಸ. ಮಾಧ್ಯಮ ದೊಡ್ಡ ಬುನಾದಿ. ನಿಮಗೆ ನಾನು ಗೌರವ ಕೊಡಬೇಕಾದದ್ದಿದೆ. ಹೀಗಾಗಿ ನಿಮ್ಮ ಆಹ್ವಾನಕ್ಕೆ ಬಂದಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಈಡೀ ರಾಜ್ಯದ ಎಲ್ಲಾ ಪತ್ರಕರ್ತರನ್ನ ಸೇರಿಸಿಕೊಂಡು ಸ್ಪರ್ಧೆಗೆ ಅವಕಾಶ ಮಾಡಿಕೊಡಿ ಎಂದು ಪ್ರೆಸ್ ಕ್ಲಬ್ ಸದಸ್ಯರಿಗೆ ಮನವಿ ಮಾಡಿಕೊಂಡಿದರು. ನೀವು ಏನೇ ತೋರಿಸಿದರೂ ನಮ್ಮ ಒಳ್ಳೆಯದಕ್ಕಾಗಿ ತೋರಿಸ್ತೀರಿ. ನಮ್ ತರ ನೀವು ಕಿತ್ತಾಡಬೇಡಿ ಎಂದು ಹೇಳಿದರು. ಈ ವೇಳೆ ತಮ್ಮ ಬಾಲ್ಯದ ಜೀವನದ ಬಗ್ಗೆ ಮೆಲಕು ಹಾಕಿದ ಡಿ.ಕೆ.ಶಿವಕುಮಾರ್, ನಾನು ನಮ್ಮ ಹಳ್ಳಿಯಲ್ಲಿ ಕ್ರಿಕೆಟ್ ಜೊತೆಗೆ, ಶಾಟ್ ಪುಟ್, ವಾಲಿಬಾಲ್ ಆಡುತ್ತಿದ್ದೆ ಇವತ್ತು ಬಹಳ ಸಂತೋಷ ಆಯ್ತು. ಬಾಲ್ಯದ ದಿನಗಳು ನೆನಪಾದವು ಅಂತ ಹೇಳಿದರು.
ಎರಡು ದಿನಗಳ ಕಾಲ ನಡೆಯುವ ಈ ಟೂರ್ನಮೆಂಟ್‍ನಲ್ಲಿ ಒಟ್ಟು 22 ತಂಡಗಳು ಭಾಗಿಯಾಗಿವೆ. ನಾಳೆ ಫೈನಲ್ ಪಂದ್ಯ ನಡೆಯಲಿದ್ದು, ಕಪ್ ಗೆಲ್ಲಲು ಎಲ್ಲಾ ತಂಡಗಳು ಫುಲ್ ಜೋಶ್ ನಲ್ಲಿ ಪಂದ್ಯಗಳನ್ನು ಆಡುತ್ತಿವೆ.
ಬೆಂಗಳೂರು: ವಿದೇಶದಿಂದ ಕಪ್ಪುಹಣ ವಾಪಸ್ ತರುವ ಬಗ್ಗೆ ಖುದ್ದು ಪ್ರಧಾನಿ ಮೋದಿಯವರು ಭರವಸೆ ನೀಡಿದ್ದರು, ಮೋದಿಯವರ ಮಾತನ್ನು ನಂಬಿ ಮೂರ್ಖನಾದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ರಾಮ್ ಜೇಠ್ಮಲಾನಿ ಹೇಳಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತು ಬೆಂಗಳೂರು ವರದಿಗಾರರ ಕೂಟದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದ ಕಪ್ಪುಹಣ ಜರ್ಮನಿಯಲ್ಲಿ ಇರುವ ಬಗ್ಗೆ ಜರ್ಮನಿ ದೇಶ ಮಾಹಿತಿ ಕೊಡಲು ಸಜ್ಜಾಗಿತ್ತು. ಆದರೆ ಅಂದಿನ ಆಡಳಿತಾರೂಢ ಕಾಂಗ್ರೆಸ್ ಆಸಕ್ತಿ ತೋರಲಿಲ್ಲ. ಜರ್ಮನಿ ದೇಶ ಕಪ್ಪುಹಣ ಇಟ್ಟಿರುವವರ ಮಾಹಿತಿ ಕೊಡಲು ತಯಾರಿದೆ ಆದರೆ ನಮ್ಮ ಸರ್ಕಾರ ಮಾಹಿತಿ ಪಡೆಯಲು ತಯಾರಿಲ್ಲ ಎಂದು ಸುಪ್ರೀಂ ಕೋರ್ಟ್ ಅಲ್ಲಿ 2011 ರಲ್ಲಿ ದೂರು ನೀಡಿದ್ದೆವು ಎಂದರು.
ಇದಾದ ಬಳಿಕ ಮೋದಿಯವರು ನನ್ನ ನಡೆಯನ್ನು ಬೆಂಬಲಿಸಿ ವಿದೇಶದಿಂದ ಕಪ್ಪು ಹಣವನ್ನು ವಾಪಸ್ ತರೋಣ ಎಂದು ಸಾಕಷ್ಟು ಬಾರಿ ನನ್ನ ಜೊತೆ ಮಾತನಾಡಿದ್ದರು. ಇದೇ ವಿಚಾರದ ಕುರಿತು ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಸಿದ್ದಪಡಿಸಲು ಹೇಳಿದರು. ಪ್ರಣಾಳಿಕೆಯ ಬಹುತೇಕ ಅಂಶಗಳನ್ನು ಬರೆದುಕೊಟ್ಟೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಬೆಂಬಲಿಸಿದ್ದೆ. ವಿದೇಶದಿಂದ ಕಪ್ಪು ಹಣ ತರುತ್ತಾರೆ, ಹದಿನೈದು ಲಕ್ಷ ರೂ ಪ್ರತಿ ಭಾರತೀಯನ ಆಕೌಂಟಿಗೆ ಜಮೆಯಾಗುತ್ತದೆ ಎಂದು ಕರೆ ಕೊಟ್ಟಿದ್ದರು. ಆದರೆ ಈಗ ಅದೆಲ್ಲವನ್ನು ಮರೆತಿದ್ದಾರೆ ಎಂದರು.
ಪ್ರಧಾನಿಯಾದ ಬಳಿಕ ಅವರಿಗೊಂದು ಪತ್ರ ಬರೆದು ಜನರ ಭರವಸೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದೆ. ಭರವಸೆಗಳು ಈಡೇರುತ್ತದೆ ಅಂತ ಅಂದುಕೊಂಡಿದ್ದೆ. ಮೋದಿಯವರನ್ನ ನಂಬಿದ್ದೆ ಆದರೆ ಮೂರ್ಖನಾದೆ. ಕೊಟ್ಟ ಮಾತು ಮೋದಿ ಉಳಿಸಿಕೊಂಡಿಲ್ಲ. ಈಗ ಅದೆಲ್ಲವನ್ನು ಮರೆತಿದ್ದಾರೆ. ಎರಡೂ ಪಕ್ಷಗಳಿಗೂ ಹಣ ತರುವಲ್ಲಿ ಆಸಕ್ತಿ ಇಲ್ಲ ಎಂದು ಮೋದಿ ವಿರುದ್ಧದ ಜಾರ್ಜ್ ಶೀಟ್ ಬಿಡುಗಡೆ ಮಾಡಿದರು.
ಅಮಿತ್ ಶಾ ಕಪ್ಪು ಹಣ ವಾಪಸ್ ತರುವ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಅದೆಲ್ಲವೂ ಹಾಸ್ಯ ಮಾಡಿರೋದು ಅಂತಾ ಈಗ ಅನಿಸಿದೆ. ಭಾರತೀಯರ ಕನಸನ್ನು ನುಚ್ಚು ನೂರು ಮಾಡಿದ್ದಾರೆ ಎಂದು ಹರಿಹಾಯ್ದರು.