Tag: Presidential Elections

  • ಜೂನ್ 28 ರಂದು ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ

    ಜೂನ್ 28 ರಂದು ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ

    – ದೇಶದಲ್ಲಿ 5 ದಿನ ಶೋಕಾಚರಣೆ

    ಟೆಹ್ರಾನ್:‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Risi) ಹೆಲಿಕಾಪ್ಟರ್ ಅಪಘಾತದಲ್ಲಿ (Helicopter Crash) ನಿಧನರಾದ ನಂತರ ಇರಾನ್ ದೊಡ್ಡ ಘೋಷಣೆಯೊಂದನ್ನು ಮಾಡಿದೆ. ರೈಸಿ ಅವರ ಸಾವಿನ ಬಳಿಕ ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಸಲು ಇರಾನ್ ನಿರ್ಧರಿಸಿದೆ. ಜೂನ್ 28 ರಂದು ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ (Iran Presidential Election) ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ.

    ಸರ್ಕಾರ ಮತ್ತು ಸಂಸತ್ತಿನ ಮುಖ್ಯಸ್ಥರ ಸಭೆಯಲ್ಲಿ 14 ನೇ ಅಧ್ಯಕ್ಷೀಯ ಚುನಾವಣೆಯನ್ನು ಜೂನ್ 28 ರಂದು ನಡೆಸಲು ನಿರ್ಧರಿಸಲಾಯಿತು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅವರನ್ನು ದೇಶದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ದೇಶದಲ್ಲಿ 5 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಇದನ್ನೂ ಓದಿ: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಗೌರವಾರ್ಥ ಮಂಗಳವಾರ ಭಾರತದಲ್ಲಿ ಶೋಕಾಚರಣೆ

    ಹೆಲಿಕಾಪ್ಟರ್ ಪತನ: ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಭಾನುವಾರದಂದು ದಟ್ಟವಾದ ಮಂಜಿನಿಂದಾಗಿ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಪರ್ವತ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ. ಪ್ರತಿಕೂಲ ಹವಾಮಾನದಿಂದಾಗಿ, ಶೋಧ ಮತ್ತು ರಕ್ಷಣಾ ತಂಡಗಳು ಅಪಘಾತದ ಸ್ಥಳವನ್ನು ತಲುಪಲು ಸಾಕಷ್ಟು ಪ್ರಯಾಸಪಡಬೇಕಾಯಿತು. ಕೊನೆಗೆ ಸೋಮವಾರ ಮುಂಜಾನೆ ಅವಘಡ ನಡೆದ ಸ್ಥಳಕ್ಕೆ ತಲುಪಲು ಸಾಧ್ಯವಾಯಿತು. ಈ ಅಪಘಾತದಲ್ಲಿ ಇರಾನ್‌ನ ವಿದೇಶಾಂಗ ಸಚಿವರೂ ಮೃತಪಟ್ಟಿದ್ದಾರೆ.

  • ಅಧ್ಯಕ್ಷೀಯ ಚುನಾವಣೆಯಿಂದಲೇ ಅನರ್ಹ – ಟ್ರಂಪ್‌ಗೆ ಬಿಗ್‌ ಶಾಕ್‌

    ಅಧ್ಯಕ್ಷೀಯ ಚುನಾವಣೆಯಿಂದಲೇ ಅನರ್ಹ – ಟ್ರಂಪ್‌ಗೆ ಬಿಗ್‌ ಶಾಕ್‌

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ (Presidential Elections) ಸ್ಪರ್ಧಿಸಲು ಮುಂದಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರನ್ನು ಕೊಲೊರಾಡೋ ಕೋರ್ಟ್ (Colorado Court) ಅನರ್ಹಗೊಳಿಸಿದೆ.

    ಕ್ಯಾಪಿಟಲ್‌ ಹಿಲ್‌ (Capitol Hill) ದಂಗೆಯಲ್ಲಿ ಟ್ರಂಪ್‌ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್‌ ಆದೇಶ ಪ್ರಕಟಿಸಿದೆ. ಆದೇಶವನ್ನು ಪ್ರಶ್ನಿಸಲು ಜ.4ರವರೆಗೆ ಮೇಲ್ಮನವಿ ಸಲ್ಲಿಸಲು ಟ್ರಂಪ್‌ಗೆ ಅವಕಾಶ ನೀಡಲಾಗಿದೆ.

    ಅಮೆರಿಕದ ಇತಿಹಾಸದಲ್ಲಿ ಮಾಜಿ ಅಧ್ಯಕ್ಷರೊಬ್ಬರನ್ನು ಚುನಾವಣೆಯಿಂದಲೇ ಅನರ್ಹಗೊಳಿಸಿದ್ದು ಇದೇ ಮೊದಲು. ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್‌ ವಕ್ತಾರರು, ಇದೊಂದು ಸಂಪೂರ್ಣ ದೋಷಪೂರಿತ ಆದೇಶ. ಈ ತೀರ್ಪನ್ನು ಪ್ರಶ್ನಿಸಿ ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.  ಇದನ್ನೂ ಓದಿ: ಇವಿಎಂ ಬಗ್ಗೆ ಮತ್ತೆ ವಿಪಕ್ಷಗಳಿಗೆ ಅನುಮಾನ – ವಿವಿಪ್ಯಾಟ್‌ ಸ್ಲಿಪ್‌ ಮತದಾರರ ಕೈಗೆ ನೀಡಬೇಕು

    ಏನಿದು ಪ್ರಕರಣ?
    2021ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ ಟ್ರಂಪ್‌ ಪ್ರಚೋದನಕಾರಿ ಭಾಷಣ ಮಾಡಿದ್ದರು. ಭಾಷಣದಿಂದ ಪ್ರಭಾವಿತರಾಗಿ 2 ಸಾವಿರಕ್ಕೂ ಹೆಚ್ಚು ಟ್ರಂಪ್‌ ಬೆಂಬಲಿಗರು   ಜನವರಿ 6 ರಂದು ಅಮೆರಿಕದ ಸಂಸತ್‌ ಕಟ್ಟಡ ಅಥವಾ ಕ್ಯಾಪಿಟಲ್‌ ಹಿಲ್‌ ಮೇಲೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ಸಂಬಂಧ ವಾಷಿಂಗ್ಟನ್‌ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಈ ಸಂಬಂಧ ಟ್ರಂಪ್‌ ವಿರುದ್ಧ ಕೇಸ್‌ ದಾಖಲಾಗಿತ್ತು.

  • ರಾಷ್ಟ್ರಪತಿ ಚುನಾವಣೆ – ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ಸಿಗಲಿದೆ ಜಯ

    ರಾಷ್ಟ್ರಪತಿ ಚುನಾವಣೆ – ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ಸಿಗಲಿದೆ ಜಯ

    ನವದೆಹಲಿ: ಉತ್ತರ ಪ್ರದೇಶದಲ್ಲಿ ಗೆಲುವು ಸಾಧಿಸಿದ್ದರಿಂದ ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ.

    ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಅವಧಿ ಜು.24ಕ್ಕೆ ಅಂತ್ಯಗೊಳ್ಳಲಿದೆ. 75 ವರ್ಷ ಮೇಲ್ಪಟ್ಟವರಿಗೆ ಪಕ್ಷದಿಂದ ನಿವೃತ್ತಿ ನೀಡುವ ಹಿನ್ನೆಲೆಯಲ್ಲಿ 76 ವರ್ಷದ ಕೋವಿಂದ್‌ ಅವರನ್ನು ಎರಡನೇ ಬಾರಿ ಆಯ್ಕೆ ಮಾಡುವುದು ಅನುಮಾನ. ರಾಷ್ಟ್ರಪತಿ ಚುನಾವಣೆಯನ್ನು ಗೆಲ್ಲಬೇಕಾದರೆ ಉತ್ತರ ಪ್ರದೇಶದ ಗೆಲುವು ಬಿಜೆಪಿಗೆ ಅನಿವಾರ್ಯವಾಗಿತ್ತು.

    ಮತ ಲೆಕ್ಕಾಚಾರ ಹೇಗೆ?
    ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಸದಸ್ಯರು, ರಾಜ್ಯಸಭೆ ಸದಸ್ಯರು, ರಾಜ್ಯ ವಿಧಾನಸಭೆಗಳ ಸದಸ್ಯರು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಸದಸ್ಯರು ಮತ ಹಾಕುತ್ತಾರೆ. ವಿಧಾನಪರಿಷತ್‌ ಸದಸ್ಯರಿಗೆ ಮತ ಇಲ್ಲ.

    543 ಲೋಕಸಭಾ ಸದಸ್ಯರು, 233 ರಾಜ್ಯಸಭಾ ಸದಸ್ಯರು ಮತ್ತು ದೇಶದ ವಿಧಾನಸಭೆಯಲ್ಲಿರುವ 4,120 ಶಾಸಕರು ಮತ ಹಾಕಲಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 10,98,903 ಮತಗಳು ಚಲಾವಣೆಯಾಗುತ್ತವೆ. ಶೇ.50ಕ್ಕಿಂತ ಹೆಚ್ಚು ಮತ ಪಡೆದ ಅಭ್ಯರ್ಥಿ ಜಯಗಳಿಸುತ್ತಾರೆ. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌, ಬುಲ್ಡೋಜರ್‌ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ

    ಎಲ್ಲ ಸಂಸದರ ವೋಟಿನ ಮೌಲ್ಯ 708. ರಾಜ್ಯದ ಜನಸಂಖ್ಯೆಯ ಆಧಾರದ ಮೇಲೆ ಶಾಸಕನ ಮತವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಉತ್ತರ ಪ್ರದೇಶದ ಒಬ್ಬ ಶಾಸಕನ ಮತಕ್ಕೆ ದೇಶದಲ್ಲೇ ಅತಿಹೆಚ್ಚು ಮೌಲ್ಯ 208 ಇದೆ. ದೇಶದಲ್ಲೇ ಕಡಿಮೆ ಇರುವ ಸಿಕ್ಕಿಂ ರಾಜ್ಯದ ಒಬ್ಬ ಶಾಸಕನ ಮತದ ಮೌಲ್ಯ 7 ಇದೆ.

    ಉತ್ತರ ಪ್ರದೇಶದ 403 ಶಾಸಕರ ವೋಟಿನ ಮೌಲ್ಯ ಒಟ್ಟು 83,824. 80 ಸಂಸದರು ಮತ ಸೇರಿದರೆ ಮೌಲ್ಯ 56,640 ಆಗುತ್ತದೆ. ಉತ್ತರ ಪ್ರದೇಶ ಒಂದೇ ರಾಜ್ಯದಿಂದ 1.4 ಲಕ್ಷ ಮೌಲ್ಯದ ಮತಗಳು ಚಲಾವಣೆ ಆಗುತ್ತದೆ. ಉತ್ತರಾಖಂಡ 4,480, ಗೋವಾ 800, ಮಣಿಪುರದಲ್ಲಿ 1,080 ಮತಗಳು ಚಲಾವಣೆ ಆಗುತ್ತದೆ.

    ಪಂಚರಾಜ್ಯಗಳ ಚುನಾವಣೆಗೂ ಮೊದಲು ಬಿಜೆಪಿ ಬಳಿ ರಾಷ್ಟ್ರಪತಿಯನ್ನು ಆಯ್ಕೆ ಮಾಡಿಕೊಳ್ಳಲು ಬೇಕಾದಷ್ಟು ಮತಗಳಿದ್ದವು. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಸೋತಿದ್ದರೆ ಬಿಜೆಡಿ, ಟಿಆರ್‌ಎಸ್‌, ವೈಎಸ್‌ಆರ್‌ ಪಕ್ಷಗಳ ಬೆಂಬಲವನ್ನು ಬಿಜೆಪಿ ಕೇಳಬೇಕಿತ್ತು.

    ಯಾಕೆ ಮಹತ್ವ?
    ರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಸೋತರೆ ಸರ್ಕಾರಕ್ಕೆ ಹಿನ್ನಡೆ ಎಂದೇ ಭಾವಿಸಲಾಗುತ್ತದೆ. ಕೇಂದ್ರ ಸರ್ಕಾರದ ಮಸೂದೆಗಳಿಗೆ ಸಹಿ ಹಾಕದೇ ಇದ್ದರೆ ಯೋಜನೆ/ ನಿರ್ಧಾರಗಳು ತಡವಾಗಿ ಜಾರಿಯಾಗಬಹುದು ಅಥವಾ ಜಾರಿ ಆಗದೇ ಇರಬಹುದು. ಹಲವು ಬಾರಿ ಸರ್ಕಾರದ ನಿರ್ಧಾರವನ್ನು ರಾಷ್ಟ್ರಪತಿಗಳು ಪ್ರಶ್ನಿಸುವ ಸಾಧ್ಯತೆ ಇರುತ್ತದೆ. ಸಂಸತ್ತಿನಲ್ಲೂ ಮಸೂದೆ ಪಾಸ್‌ ಆದರೂ ರಾಷ್ಟ್ರಪತಿಗಳು ಅಂಕಿತ ಹಾಕದೇ ಇದ್ದರೆ ಸರ್ಕಾರಕ್ಕೆ ಆದ ದೊಡ್ಡ ಮುಜುಗರ ಎಂದೇ ಭಾವಿಸಲಾಗುತ್ತದೆ.

    2014ರಲ್ಲಿ ಮೋದಿ ಸರ್ಕಾರ ಅಧಿಕಾರ ಬಂದಾಗ ಪ್ರಣಬ್‌ ಮುಖರ್ಜಿ ರಾಷ್ಟ್ರಪತಿ ಆಗಿದ್ದರು. ಈ ಸಂದರ್ಭದಲ್ಲಿ ಹಣಕಾಸಿಗೆ ಸಂಬಂಧಿಸಿದ ವಿಚಾರ ಬಂದಾಗ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರನ್ನು ಹಲವು ಬಾರಿ ಪ್ರಣಬ್‌ ಮುಖರ್ಜಿ ರಾಷ್ಟ್ರಪತಿ ಭವನಕ್ಕೆ ಕರೆಯಿಸಿ ಸ್ಪಷ್ಟನೆ ಕೇಳಿದ್ದರು.

    2017ರ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ಕೋವಿಂದ್‌ ಶೇ.65.65 ಮತಗಳನ್ನು ಪಡೆದಿದ್ದರೆ ಯುಪಿಎ ಅಭ್ಯರ್ಥಿಯಾಗಿದ್ದ ಮೀರಾ ಕುಮಾರ್‌ ಶೇ.34.35 ಮತಗಳನ್ನು ಪಡೆದಿದ್ದರು. ಕೋವಿಂದ್‌ 2,930 ಮತ(7,02,044 ಮೌಲ್ಯ) ಪಡೆದಿದ್ದರೆ ಮೀರಾ ಕುಮಾರ್‌ 1,844 ಮತ(3,67,314 ಮೌಲ್ಯ) ಪಡೆದಿದ್ದರು. 77 ಮತಗಳು ತಿರಸ್ಕೃತವಾಗಿದ್ದವು.