ಕೊಲಂಬೊ: ಶ್ರೀಲಂಕಾದಲ್ಲಿ ಅರಾಜಕತೆ ತೀವ್ರಗೊಂಡಿದ್ದು, ಸತತ ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದಿರುವ ಜನರು ಪ್ರಧಾನಿ ಮನೆಗೇ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
Video – #WWE Wrestling on Prime Minister’s bed at Temple Trees ????#LKA #SriLanka #SriLankaCrisis #SriLankaProtests pic.twitter.com/5f2zE9uqLD
— Sri Lanka Tweet ???????? ???? (@SriLankaTweet) July 10, 2022
ಪ್ರಧಾನಿ ಮನೆಗೆ ಸಂಪೂರ್ಣ ಮುತ್ತಿಗೆ ಹಾಕಿದ್ದಾರೆ. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಅಧಿಕೃತ ನಿವಾಸ `ಟೆಂಪಲ್ ಟ್ರೀ’ ಅನ್ನು ಆಕ್ರಮಿಸಿಕೊಂಡಿರುವ ಪ್ರತಿಭಟನಾಕಾರರು ಅಲ್ಲಿಯೇ ಮೊಕ್ಕಾಂ ಹೂಡಿ, ಅವರ ಮನೆಯ ಆವರಣದಲ್ಲಿಯೇ ಅಡುಗೆ ಮಾಡಿದ್ದಾರೆ. ದಿನನಿತ್ಯ ಒಂದಷ್ಟು ಮಂದಿ ಪೂಲ್‌ನಲ್ಲಿ ಈಜಾಡುತ್ತಿದ್ದಾರೆ. ಇದನ್ನೂ ಓದಿ: ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್
#WATCH | Sri Lanka: Protestors start preparing & cooking food inside the premises of the residence of the Sri Lankan PM, in Colombo, as they continue to remain there amid ongoing protests against the country's financial turmoil#SriLankaEconomicCrisis pic.twitter.com/6kHuo2bgcY
— ANI (@ANI) July 10, 2022
ಈ ನಡುವೆ ಪ್ರತಿಭಟನಾ ನಿರತ ಯುವಕರು ಪ್ರಧಾನಿಯ ಶಯನಗೃಹದಲ್ಲಿ (ಬೆಡ್‌ರೂಂ) WWE ಆಡುತ್ತಾ ಸಖತ್ ಎಂಜಾಯ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮದುವೆಯಲ್ಲಿ ಸ್ನೇಹಿತರಿಂದ ಥಳಿತಕ್ಕೊಳಗಾದ ವಕೀಲ- ಮನನೊಂದು ಆತ್ಮಹತ್ಯೆ
https://twitter.com/SJIMYAKUS/status/1546005772920066049?ref_src=twsrc%5Etfw%7Ctwcamp%5Etweetembed%7Ctwterm%5E1546005772920066049%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fsri-lankan-protesters-find-millions-of-rupees-from-gotabaya-rajapaksas-house-amid-economic-turmoil%2F
ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಶ್ರೀಲಂಕಾದಲ್ಲಿ ಸರ್ವಪಕ್ಷ ಮಧ್ಯಂತರ ಸರ್ಕಾರ ರಚಿಸಲು ಅಲ್ಲಿನ ಪ್ರಮುಖ ವಿರೋಧ ಪಕ್ಷಗಳು ನಿರ್ಧರಿಸಿವೆ. ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಬಗ್ಗೆ ಜನರಲ್ಲಿ ಭಾರಿ ಆಕ್ರೋಶ ಸೃಷ್ಟಿಯಾಗಿದೆ. ಹಾಗಾಗಿ, ಗೊಟಬಯ ಅವರು ಬುಧವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ರಾಜೀನಾಮೆಯಿಂದ ಸೃಷ್ಟಿಯಾಗುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ಮುಖಂಡರು ಸಭೆ ನಡೆಸಿದ್ದಾರೆ.

