Tag: president of India

  • ದೇಶದ ಇತಿಹಾಸದಲ್ಲಿ ಮೊದಲು; ರಾಜ್ಯಪಾಲರು-ರಾಷ್ಟ್ರಪತಿಗಳ ಸಮ್ಮತಿಯಿಲ್ಲದೆ 10 ಕಾಯ್ದೆಗಳನ್ನ ಜಾರಿಗೊಳಿಸಿದ ತ.ನಾಡು ಸರ್ಕಾರ

    ದೇಶದ ಇತಿಹಾಸದಲ್ಲಿ ಮೊದಲು; ರಾಜ್ಯಪಾಲರು-ರಾಷ್ಟ್ರಪತಿಗಳ ಸಮ್ಮತಿಯಿಲ್ಲದೆ 10 ಕಾಯ್ದೆಗಳನ್ನ ಜಾರಿಗೊಳಿಸಿದ ತ.ನಾಡು ಸರ್ಕಾರ

    ಚೆನ್ನೈ: ತಮಿಳುನಾಡು (Tamil Nadu) ಸರ್ಕಾರವು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಸಮ್ಮತಿಯಿಲ್ಲದೆ 10 ಕಾಯ್ದೆಗಳನ್ನು ಅಧಿಕೃತವಾಗಿ ಜಾರಿಗೊಳಿಸಿದೆ. ಸುಪ್ರೀಂ ಕೋರ್ಟ್‌ನ (Supreme Court) ಐತಿಹಾಸಿಕ ತೀರ್ಪಿನ ಆಧಾರದಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

    ತಮಿಳುನಾಡು ರಾಜ್ಯ ವಿಧಾನಸಭೆಯು 2020ರ ಜನವರಿಯಿಂದ 2023ರ ಏಪ್ರಿಲ್‌ವರೆಗೆ 12 ಮಸೂದೆಗಳನ್ನು ಅಂಗೀಕರಿಸಿತ್ತು. ಈ ಮಸೂದೆಗಳು ರಾಜ್ಯದ ವಿಶ್ವವಿದ್ಯಾಲಯಗಳ ಆಡಳಿತವನ್ನು ಗವರ್ನರ್‌ರಿಂದ ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವ ಗುರಿಯನ್ನು ಹೊಂದಿದ್ದವು. ಆದರೆ, ಗವರ್ನರ್ ಆರ್.ಎನ್.ರವಿ ಈ ಮಸೂದೆಗಳಿಗೆ ಸಮ್ಮತಿ ನೀಡದೆ ಮೂರು ವರ್ಷಗಳಿಗೂ ಹೆಚ್ಚು ಕಾಲ ವಿಳಂಬ ಮಾಡಿದರು.

    2023ರ ನವೆಂಬರ್‌ನಲ್ಲಿ ಗವರ್ನರ್ 10 ಮಸೂದೆಗಳಿಗೆ ಸಮ್ಮತಿಯನ್ನು ನಿರಾಕರಿಸಿದರು. ಎರಡನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದರು. ರಾಜ್ಯ ವಿಧಾನಸಭೆಯು ಈ 10 ಮಸೂದೆಗಳನ್ನು ವಿಶೇಷ ಅಧಿವೇಶನದಲ್ಲಿ ಮತ್ತೆ ಅಂಗೀಕರಿಸಿ ಗವರ್ನರ್‌ಗೆ ಕಳುಹಿಸಿತಾದರೂ, ಅವರು ಇವುಗಳನ್ನು ರಾಷ್ಟ್ರಪತಿಗಳಿಗೆ ರವಾನಿಸಿದರು. ರಾಷ್ಟ್ರಪತಿಗಳು ಒಂದು ಮಸೂದೆಗೆ ಸಮ್ಮತಿ ನೀಡಿದರು, ಏಳನ್ನು ತಿರಸ್ಕರಿಸಿದರು ಮತ್ತು ಎರಡನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ.

    ಈ ವಿಳಂಬ ಮತ್ತು ಕ್ರಮಗಳನ್ನು ಪ್ರಶ್ನಿಸಿ, ತಮಿಳುನಾಡು ಸರ್ಕಾರವು 2023ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಗವರ್ನರ್‌ರ ಕ್ರಮಗಳು ಸಂವಿಧಾನದ 200ನೇ ವಿಧಿಯನ್ನು ಉಲ್ಲಂಘಿಸುತ್ತವೆ ಎಂದು ಸರ್ಕಾರ ವಾದಿಸಿತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಜೆ.ಬಿ. ಪಾರ್ಡಿವಾಲಾ ಮತ್ತು ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠವು, ಗವರ್ನರ್ ಆರ್.ಎನ್. ರವಿ ಅವರ ಕ್ರಮವನ್ನು ಕಾನೂನುಬಾಹಿರ ಮತ್ತು ತಪ್ಪು ಎಂದು ಘೋಷಿಸಿತು.

    ರಾಜ್ಯಪಾಲರಿಗೆ ಮಸೂದೆಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯುವ ‘ಪಾಕೆಟ್ ವೀಟೋ’ ಅಧಿಕಾರವಿಲ್ಲ. ಸಂವಿಧಾನದಲ್ಲಿ ಇಂತಹ ಆಯ್ಕೆಯನ್ನು ಒದಗಿಸಲಾಗಿಲ್ಲ ಎನ್ನುವ ಮೂಲಕ ರಾಜ್ಯಪಾಲರ ಕಾರ್ಯವಿಧಾನಕ್ಕೆ ಸ್ಪಷ್ಟ ಸಮಯ ಮಿತಿಗಳನ್ನು ವಿಧಿಸಿತು. ಸಮ್ಮತಿಯನ್ನು ನಿರಾಕರಿಸಲು ಅಥವಾ ರಾಷ್ಟ್ರಪತಿಗಳಿಗೆ ಕಳುಹಿಸಲು ಒಂದು ತಿಂಗಳು, ಸಮ್ಮತಿಯನ್ನು ನಿರಾಕರಿಸಲು ಮತ್ತು ವಿಧಾನಸಭೆಗೆ ಮರಳಿಸಲು ಮೂರು ತಿಂಗಳು ಹಾಗೂ ಮರು-ಅಂಗೀಕೃತ ಮಸೂದೆಗೆ ಸಮ್ಮತಿ ನೀಡಲು ಒಂದು ತಿಂಗಳು ಸಮಯ ನಿಗದಿ ಮಾಡಿತು.

    ಸುಪ್ರೀಂ ಕೋರ್ಟ್ ತನ್ನ ವಿಶೇಷ ಅಧಿಕಾರವಾದ ಆರ್ಟಿಕಲ್ 142ನ್ನು ಬಳಸಿಕೊಂಡು, ಈ 10 ಮಸೂದೆಗಳು ರಾಜ್ಯ ವಿಧಾನಸಭೆಯಿಂದ ಮರು-ಅಂಗೀಕರಿಸಿದ ದಿನಾಂಕದಿಂದಲೇ ಗವರ್ನರ್‌ರ ಸಮ್ಮತಿಯನ್ನು ಪಡೆದಿರುವಂತೆ ಘೋಷಿಸಿತು. ರಾಷ್ಟ್ರಪತಿಗಳಿಂದ ತೆಗೆದುಕೊಂಡ ಯಾವುದೇ ಕ್ರಮಗಳನ್ನು ಅಸಿಂಧು ಎಂದು ಘೋಷಿಸಲಾಯಿತು.

    ಸುಪ್ರೀಂ ಕೋರ್ಟ್ ಆದೇಶದ ಅನ್ವಯ ತಮಿಳುನಾಡು ಸರ್ಕಾರವು ಈ 10 ಕಾಯ್ದೆಗಳನ್ನು ಸರ್ಕಾರಿ ಗೆಜೆಟ್‌ನಲ್ಲಿ ಅಧಿಸೂಚಿಸಿತು. ಇದರಿಂದಾಗಿ ಅವು ಕಾನೂನು ರೂಪವನ್ನು ಪಡೆದವು. ತಮಿಳುನಾಡು ವೆಟರಿನರಿ ಮತ್ತು ಪಶು ವಿಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ಕಾಯ್ದೆ, ತಮಿಳುನಾಡು ಮೀನುಗಾರಿಕೆ ವಿಶ್ವವಿದ್ಯಾಲಯ (ತಿದ್ದುಪಡಿ) ಕಾಯ್ದೆ, ಅಣ್ಣಾ ವಿಶ್ವವಿದ್ಯಾಲಯ (ತಿದ್ದುಪಡಿ) ಕಾಯ್ದೆ ಸೇರಿ ಹತ್ತು ಕಾಯ್ದೆಗಳು ಕಾನೂನಾಗಿ ಜಾರಿಯಾದವು. ಇದು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಬೆಳವಣಿಗೆಯಾಗಿದೆ.

  • ನಿಮ್ಮೊಂದಿಗೆ ನಾವಿದ್ದೇವೆ.. ಸಿಎಂಗೆ ಶಾಸಕರ ಬಲ; ರಾಷ್ಟ್ರಪತಿಗಳ ಮುಂದೆ 135 ಶಾಸಕರಿಂದ ಪೆರೇಡ್‌ಗೆ ಸಂಪುಟ ನಿರ್ಧಾರ

    ನಿಮ್ಮೊಂದಿಗೆ ನಾವಿದ್ದೇವೆ.. ಸಿಎಂಗೆ ಶಾಸಕರ ಬಲ; ರಾಷ್ಟ್ರಪತಿಗಳ ಮುಂದೆ 135 ಶಾಸಕರಿಂದ ಪೆರೇಡ್‌ಗೆ ಸಂಪುಟ ನಿರ್ಧಾರ

    ಬೆಂಗಳೂರು: ಮುಡಾ ಹಗರಣವೀಗ ಸರ್ಕಾರ (Karnataka Govt.) ವರ್ಸಸ್ ಗೌರ್ನರ್ ಎನ್ನುವಂತಾಗಿದೆ. ನಾವಾ ನೀವಾ.. ನೋಡೇ ಬಿಡೋಣ ಎನ್ನುತ್ತಾ ರಾಜ್ಯಪಾಲರು ಮತ್ತು ವಿಪಕ್ಷಗಳ ವಿರುದ್ಧ ರಾಜ್ಯ ಸರ್ಕಾರ ರಾಜಕಾರಣ ಶುರು ಮಾಡಿಕೊಂಡಂತೆ ಕಾಣುತ್ತಿದೆ. ಆರ್ಟಿಕಲ್ 163ರ ಅಡಿ ಮಂತ್ರಿ ಪರಿಷತ್‌ಗೆ ಇರುವ ಅಧಿಕಾರ ಬಳಸಿಕೊಂಡಿರುವ ಸಿದ್ದರಾಮಯ್ಯ (Siddaramaiah) ಸಂಪುಟ, ವಿಪಕ್ಷಗಳ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ, ಬಾಕಿ ಉಳಿದಿರುವ ಪ್ರಕರಣದ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮನವಿಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

    ಗುರುವಾರ ಸಿಎಂ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ (CLP Meeting) ಕಾಂಗ್ರೆಸ್ ಶಾಸಕರು, ಸಚಿವರು ಸಿಎಂಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ. ನೀವು ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ಕಾನೂನು ಹೋರಾಟ ನಡೆಸಿ ಅಂತ ಶಾಸಕರು ಸಲಹೆ ಕೊಟ್ಟಿದ್ದಾರೆ. ಅದಕ್ಕೆ ಸಿಎಂ ಸಹ ಧನ್ಯವಾದ ಹೇಳಿದರು. ನನ್ನ ಪರವಾಗಿ ಹೋರಾಡುತ್ತಿದ್ದೀರಿ, ನಿಮಗೆ ಧನ್ಯವಾದ ಅಂತ ಹೇಳಿದ್ದಾರೆ. ನಾಳೆ (ಆ.23) ಹೈಕಮಾಂಡ್ ಭೇಟಿಗಾಗಿ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದು, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

    ಇವತ್ತು ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ ಪೆಂಡಿಂಗ್ ಇರುವ ನಾಲ್ಕು ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸಲಹೆ ರೂಪದ ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ಭ್ರಷ್ಟಚಾರ ತಡೆ ಕಾಯ್ದೆ 1988ರ ಅಡಿ ಪ್ರಮುಖ 4 ಪ್ರಕರಣಗಳ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. As soon as possible ಪ್ರಾಸಿಕ್ಯೂಷನ್ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಿ. ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಪ್ರಕರಣ, ಜನಾರ್ದನ ರೆಡ್ಡಿ ಪ್ರಕರಣ, ಮುರುಗೇಶ್ ನಿರಾಣಿ ಪ್ರಕರಣ, ಶಶಿಕಲಾ ಜೊಲ್ಲೆ ಪ್ರಕರಣಗಳ ಪ್ರಾಸಿಕ್ಯೂಶನ್ ಅನುಮತಿ ಮನವಿ ಅರ್ಜಿಗಳನ್ನ ಇತ್ಯರ್ಥಗೊಳಿಸಬೇಕೆಂದು ಸಲಹೆ ನೀಡಿ ನಿರ್ಣಯ ಕೈಗೊಳ್ಳಲಾಗಿದೆ.

    ಈ ಮೂಲಕ ರಾಜ್ಯಪಾಲರಿಗೆ ತಿರುಗೇಟು ಕೊಡುವುದು ಒಂದು ಕಡೆಯಾದ್ರೆ, ಹೆಚ್‌ಡಿಕೆ ಹಾಗೂ ವಿಪಕ್ಷ ನಾಯಕರಿಗೆ ಬಿಸಿ ಮುಟ್ಟಿಸಲು ಸಿದ್ದರಾಮಯ್ಯ ಕ್ಯಾಬಿನೆಟ್ ಯತ್ನಿಸಿದಂತಿದೆ. ಆದ್ರೆ ಈ ಮೊದಲು ಆಗಸ್ಟ್ 1ರಂದು ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ತೆಗೆದುಕೊಂಡಿದ್ದ ನಿರ್ಣಯಕ್ಕೆ ಕ್ಯಾರೇ ಎನ್ನದ ರಾಜ್ಯಪಾಲರು, ಮಂತ್ರಿ ಪರಿಷತ್ ನಿರ್ಣಯ ವಿಶ್ವಾಸಾರ್ಹ ಅಲ್ಲ ಎಂದು ತಿರುಗೇಟು ನೀಡಿ ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದರು. ‌ಹಾಗಾಗಿ ಇವತ್ತಿನ ನಿರ್ಣಯಕ್ಕೆ ರಾಜ್ಯಪಾಲರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲವಿದ್ದು, ರಾಜಭವನ ವರ್ಸಸ್ ಸರ್ಕಾರದ ಸಂಘರ್ಷ ಇನ್ನಷ್ಟು ತಾರಕಕ್ಕೇರುತ್ತಾ ಕಾದುನೋಡಬೇಕಿದೆ.

    ಪ್ರಮುಖ ನಿರ್ಣಯಗಳೇನು?
    ಅಲ್ಲದೇ ಸಿಎಂ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನೂ ಕೈಗೊಳ್ಳಲಾಯಿತು. ರಾಷ್ಟ್ರಪತಿಗಳ ಮುಂದೆ ಶಾಸಕರ ಪೆರೇಡ್‌ಗೆ ನಿರ್ಧರಿಸಲಾಯಿತು. ಆ.23ರಂದು ಹೈ ಕಮಾಂಡ್ ಬಳಿ ಈ ವಿಚಾರ ಮಾತನಾಡಲು ನಿರ್ಧಾರ ಕೈಗೊಳ್ಳಲಾಯಿತು. ಹೈಕಮಾಂಡ್ ಅನುಮತಿ ಕೊಟ್ಟರೇ, ಅಲ್ಲೇ ದಿನಾಂಕ ನಿಗದಿಪಡಿಸಲಿರುವ ಸಿಎಂ ಹಾಗೂ ಡಿಸಿಎಂ ಎಲ್ಲಾ 135 ಶಾಸಕರನ್ನ ದೆಹಲಿಗೆ ಕರೆದೊಯ್ದು, ರಾಷ್ಟ್ರಪತಿಗಳ ಮುಂದೆ ಪೆರೆಡ್ ಮಾಡಿಸಿ, ರಾಜ್ಯಪಾಲರ ವಿರುದ್ಧ ದೂರು ಕೊಡಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಯಿತು.

    ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಪ್ರದೀಪ್ ಈಶ್ವರ್, ವಿನಯ್ ಕುಲಕರ್ಣಿ, ರಾಜು ಕಾಗೆ, ಮಂಜುನಾಥ್ ಭಂಡಾರಿ, ಸುಧಾಮ್ ದಾಸ್, ಹ್ಯಾರಿಸ್, ಬೋಸರಾಜು, ನಾರಾಯಣಸ್ವಾಮಿ, ಕೆ.ಜೆ ಜಾರ್ಜ್, ಶರಣು ಪ್ರಕಾಶ್ ಪಾಟೀಲ್, ನರೇಂದ್ರ ಸ್ವಾಮಿ, ಶ್ರೀನಿವಾಸ ಮಾನೆ, ಉಮಾಶ್ರೀ, ರಾಜೇಗೌಡ, ರಾಮೋಜಿಗೌಡ, ಜಮೀರ್ ಅಹಮದ್ ಪಾಲ್ಗೊಂಡಿದ್ದರು.

    ರಾಜ್ಯಪಾಲರ ಒಪ್ಪಿಗೆಗೆ ಕಾದಿರುವ ಪ್ರಕರಗಳು
    1 ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಗಣಿ ಗುತ್ತಿಗೆ ಲೈಸೆನ್ಸ್ ಪ್ರಕರಣ
    2. ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣ
    3. ಮುರುಗೇಶ ನಿರಾಣಿ ವಿರುದ್ಧ `ಇನ್ವೆಸ್ಟ್ ವೀಡಿಯೋ’ ಪ್ರಕರಣ
    4. ಮಾಜಿ ಮಂತ್ರಿ ಶಶಿಕಲಾ ಜಿಲ್ಲೆ ವಿರುದ್ಧ ಮೊಟ್ಟೆ ಪ್ರಕರಣ

  • ಸಿದ್ದರಾಮಯ್ಯನವರೇ ಮಹಿಳಾ ರಾಷ್ಟ್ರಪತಿಗೆ ಕೊಡೋ ಗೌರವ ಇದೇನಾ – ಪ್ರಹ್ಲಾದ್‌ ಜೋಶಿ ಪ್ರಶ್ನೆ

    ಸಿದ್ದರಾಮಯ್ಯನವರೇ ಮಹಿಳಾ ರಾಷ್ಟ್ರಪತಿಗೆ ಕೊಡೋ ಗೌರವ ಇದೇನಾ – ಪ್ರಹ್ಲಾದ್‌ ಜೋಶಿ ಪ್ರಶ್ನೆ

    – ಸಿಎಂ ಏಕವಚನ ಮಾತಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕೆಂಡಾಮಂಡಲ

    ಬೆಂಗಳೂರು: ಅಹಿಂದ, ನಾರಿ ಶಕ್ತಿ ಎನ್ನುತ್ತ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯನವರೇ (Siddaramaiah) ಬುಡಕಟ್ಟು ಸಮುದಾಯದಿಂದ ಬಂದಂತಹ ಮಹಿಳಾ ರಾಷ್ಟ್ರಪತಿಗಳಿಗೆ ಕೊಡುವ ಗೌರವ ಇದೇನಾ? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಪ್ರಶ್ನಿಸಿದ್ದಾರೆ.

    ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಭಾಷಣದ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರ ಬಗ್ಗೆ ಏಕವಚನ ಪದ ಪ್ರಯೋಗಿಸಿದ್ದರು. ಈ ಕುರಿತ ವೀಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಜೋಶಿ ಅವರು ಸಿಎಂ ವಿರುದ್ಧ ಕಿಡಿ ಕಾರಿದ್ದಾರೆ.

    ಸಿದ್ದರಾಮಯ್ಯನವರೇ ನಿಮಗೂ ನಿಮ್ಮ ಪಕ್ಷಕ್ಕೂ ಅದೇನು ಮಂಕು ಬಡಿದಿದೆ, ಸಂವಿಧಾನದ ಪರಮೋಚ್ಛ ಸ್ಥಾನದಲ್ಲಿರುವ, ಅದರಲ್ಲೂ ದೇಶದ ಓರ್ವ ಮಹಿಳಾ ಪ್ರಥಮ ಪ್ರಜೆ ಬಗ್ಗೆ ಏಕವಚನದಲ್ಲಿ ಮಾತನಾಡುವುದೇ ನಿಮ್ಮ ಸಂಸ್ಕೃತಿ ಆಗಿದೆಯೇ? ಎಂದು ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶೋಷಿತರ ಸಮಾವೇಶದಲ್ಲಿ ಕ್ಷಿಂಟಾಲ್‌ಗಟ್ಟಲೇ ಚಿಕನ್ ಬಿರಿಯಾನಿ ನೆಲದ ಪಾಲು

    ಏಕವಚನದ ಶೋಕಿ:
    ದೇಶದ ಪ್ರಧಾನಿಯನ್ನು, ರಾಷ್ಟ್ರಪತಿಯನ್ನು ಏಕವಚನದಲ್ಲಿ ಕರೆಯೋ ಶೋಕಿ ಮಾಡುತ್ತೀರಿ. ಮಹಿಳಾ ರಾಷ್ಟ್ರಪತಿ ಬಗ್ಗೆ ಬಹಿರಂಗ ಸಭೆಯಲ್ಲೇ ಏಕವಚನದಲ್ಲೇ ಮಾತನಾಡುವ ನಿಮ್ಮ ಸಂಸ್ಕೃತಿ- ಸಭ್ಯತೆ ಇದೇನಾ? ಇದು, ರಾಷ್ಟ್ರಪತಿಗೆ ಅದರಲ್ಲೂ ಓರ್ವ ಮಹಿಳಾ ರಾಷ್ಟ್ರಪತಿಗೆ ನೀವು ಅಗೌರವ ತೋರಿದಂತೆ. ಇದನ್ನೂ ಓದಿ: Bigg Boss Kannada: ಡ್ರೋನ್ ಪ್ರತಾಪ್ ಅವರ ಅವಮಾನಕ್ಕೆ ರನ್ನರ್ ಅಪ್ ಉತ್ತರ

    ದುರಹಂಕಾರ ನಿಮ್ಮ, ಪಕ್ಷದ ಅವನತಿಗೆ ಬುನಾದಿ:
    ಸಿದ್ದರಾಮಯ್ಯ ಅವರೇ, ನಿಮ್ಮ ಎಲುಬಿಲ್ಲದ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಈ ದುರಹಂಕಾರ ನಿಮ್ಮ ಹಾಗೂ ನಿಮ್ಮ ಪಕ್ಷದ ಅವನತಿಗೆ ಬುನಾದಿಯಾಗಲಿದೆ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್‌ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಯೇ ಇದ್ದಂತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಧೀರ ರಂಜನ್ ಚೌಧರಿ ನಂತರ ಈಗ ಸಿದ್ದರಾಮಯ್ಯ ಸರದಿ… ಕೆಲವೇ ದಿನಗಳ ಹಿಂದೆ ಕಾಂಗ್ರೆಸ್ ಮೈತ್ರಿಯ ಪಟಾಲಂ ಕೂಡ ಉಪರಾಷ್ಟ್ರಪತಿಗಳನ್ನು ಸಂಸತ್ ಆವರಣದಲ್ಲೇ ಅಪಹಾಸ್ಯ ಮಾಡಿತ್ತು. ಪರಿಣಾಮ ಕಲಾಪದಿಂದ ಬಹಿಷ್ಕರಿಸಲಾಗಿತ್ತು ಎಂಬುದನ್ನು ಮರೆಯಬೇಡಿ ಎಂದು ಸಚಿವ ಜೋಶಿ ಎಚ್ಚರಿಸಿದ್ದಾರೆ.

    ತಪ್ಪೊಪ್ಪಿಕೊಳ್ಳಲಿ ಸಿಎಂ:
    ಇಂತಹ ಬೇಜವಾಬ್ದಾರಿ ನಡವಳಿಕೆ ಅತ್ಯಂತ ಪ್ರಜಾಪ್ರಭುತ್ವಕ್ಕೆ ಮಾರಕ. ಮಾತೆತ್ತಿದರೆ ಸಂವಿಧಾನ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ತಪ್ಪೊಪ್ಪಿಕೊಳ್ಳಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.

  • ಮನೆ ಕಟ್ಟಿಕೊಳ್ಳಲು ನಿವೇಶನ ಕೊಡಿಸಿ ಪ್ಲೀಸ್‌ – ರಾಷ್ಟ್ರಪತಿಗೆ ಪತ್ರ ಬರೆದ ವಿದ್ಯಾರ್ಥಿನಿ

    ಮನೆ ಕಟ್ಟಿಕೊಳ್ಳಲು ನಿವೇಶನ ಕೊಡಿಸಿ ಪ್ಲೀಸ್‌ – ರಾಷ್ಟ್ರಪತಿಗೆ ಪತ್ರ ಬರೆದ ವಿದ್ಯಾರ್ಥಿನಿ

    ತುಮಕೂರು: ಮನೆ ಕಟ್ಟಿಕೊಳ್ಳಲು ನಿವೇಶನ ಕೊಡಿಸುವಂತೆ ರಾಷ್ಟ್ರಪತಿಗೆ (President Of India) ವಿದ್ಯಾರ್ಥಿನಿಯೊಬ್ಬಳು ಪತ್ರ ಬರೆದು ಮನವಿ ಮಾಡಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ತೂಯಲಹಳ್ಳಿಯಲ್ಲಿ ವಿದ್ಯಾರ್ಥಿನಿ ಲಕ್ಷ್ಮಿ (11) ಮನೆ ಕಟ್ಟಿಕೊಳ್ಳಲು ನಿವೇಶನ ಇಲ್ಲದ ಕಾರಣ ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಮಾಡಿರುವ ವಿಷಯ ತಿಳಿದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ: ಜೈನ ಧರ್ಮ ಸಂಪ್ರದಾಯದಂತೆ ಜೈನಮುನಿ ಅಂತ್ಯಸಂಸ್ಕಾರ

    ತುಯಲಹಳ್ಳಿ ಗ್ರಾಮದ ನಿವಾಸಿ ನಾಗರಾಜು ಅವರ ಮಗಳು ತೂಯಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ಜೂನ್‌ 29ರಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಆ ಪತ್ರ ರಾಜ್ಯ ಸರ್ಕಾರದ ಮೂಲಕ ತುಮಕೂರು ಜಿಲ್ಲಾಧಿಕಾರಿ ಕಚೇರಿ ತಲುಪಿತ್ತು. ಜಿಲ್ಲಾಧಿಕಾರಿ ಕಚೇರಿ ಆದೇಶದಂತೆ ತಹಶೀಲ್ದಾರ್ ತುರ್ತು ಭೇಟಿ ನೀಡಿ ಪರಿಶೀಲಿಸಿದರು.

    ತಹಶೀಲ್ದಾರ್ ಕೂಡಲೇ ಗ್ರಾಮ ಲೆಕ್ಕಿಗರು ಹಾಗೂ ಪಿಡಿಒ ಅವರೊಂದಿಗೆ ಮಾತನಾಡಿ ಬಾಲಕಿಯವರ ಕುಟುಂಬ ಮನೆ ಕಟ್ಟಿಕೊಳ್ಳಲು ನಿವೇಶನ ಮುಂಜೂರು ಮಾಡಿಕೊಡಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲಲ್ಲಿ ಪಿಸ್ತೂಲ್ ತೋರಿಸಿ ಉದ್ಯಮಿಗೆ ಬೆದರಿಕೆ – 50 ಲಕ್ಷ ರೂ. ದರೋಡೆ

    ಪತ್ರದಲ್ಲಿ ಏನಿದೆ?
    ನಾನು, ತಂದೆ-ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ಗುಡಿಸಲಿನಲ್ಲಿ ವಾಸವಿದ್ದೇವೆ. ನಾವು ವಾಸಿಸುತ್ತಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ನಮ್ಮ ಸಂಬಂಧಿಕರಿಂದಲೇ ತೊಂದರೆ ಇದೆ. ಇದೇ ಗುಡಿಸಲಿನಲ್ಲಿ ವಾಸಿಸದೆ ಬೇರೆ ದಾರಿಯಿಲ್ಲ. ಮಳೆಗಾಲದಲ್ಲಿ ನಮ್ಮ ಕುಟುಂಬದವರ ಕಷ್ಟ ಹೇಳತೀರದು. ಮನೆ ಕಟ್ಟಲು ಗ್ರಾಮ ಪಂಚಾಯಿತಿಯಿಂದ ಅನುದಾನ ಬಿಡುಗಡೆ ಮಾಡಿದರೂ ಮನೆ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ದಯಮಾಡಿ ಮನೆ ಕಟ್ಟಿಕೊಳ್ಳಲು ನೀವು ನಿವೇಶನ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಧಾಮೂರ್ತಿ, ಎಸ್.ಎಲ್ ಭೈರಪ್ಪಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ

    ಸುಧಾಮೂರ್ತಿ, ಎಸ್.ಎಲ್ ಭೈರಪ್ಪಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ

    ನವದೆಹಲಿ: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ (Sudha Murty) ಹಾಗೂ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ (SL Bhyrappa) ಅವರಿಗೆ ಪದ್ಮ ಭೂಷಣ (Padma Bhushan) ಪ್ರಶಸ್ತಿ ಲಭಿಸಿದೆ.

    ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ಪ್ರಧಾನ ಸಮಾರಂಭದಲ್ಲಿ ರಾಷ್ಟ್ರಪತಿ (President Of India) ದ್ರೌಪದಿ ಮುರ್ಮು (Droupadi Murmu) ಅವರು ವಿವಿಧ ಕ್ಷೇತ್ರದ ಸಾಧಕರಿಗೆ 2023ನೇ ಸಾಲಿನ ಪದ್ಮಶ್ರೀ, ಪದ್ಮ ವಿಭೂಷಣ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನ ಪ್ರದಾನ ಮಾಡಿದರು. ಇದನ್ನೂ ಓದಿ: Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್

    ಸಮಾಜ ಸೇವೆ, ಮಹಿಳಾ ಸಬಲೀಕರಣ, ಶಿಕ್ಷಣ, ಕಲೆ ಮತ್ತು ಸಂಸ್ಕೃತಿ, ವನ್ಯಜೀವಿ ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಹಿರಿಯ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮ ನಿಯಂತ್ರಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತರಾಟೆ

    ಇದೇ ವೇಳೆ ಕೆಜಿಎಫ್-2 ನಟಿ ರವೀನಾ ಟಂಡನ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

  • ಹೆದ್ದಾರಿಗಳಿಗೆ ಹೆಸರಿಡುವ ಸಂಪ್ರದಾಯ ಇಲ್ಲ – ನಿತಿನ್ ಗಡ್ಕರಿ ಸ್ಪಷ್ಟನೆ

    ಹೆದ್ದಾರಿಗಳಿಗೆ ಹೆಸರಿಡುವ ಸಂಪ್ರದಾಯ ಇಲ್ಲ – ನಿತಿನ್ ಗಡ್ಕರಿ ಸ್ಪಷ್ಟನೆ

    ರಾಮನಗರ: ಹೆದ್ದಾರಿಗಳಿಗೆ (National Highway) ಹೆಸರಿಡುವ ಸಂಪ್ರದಾಯ ಇಲ್ಲ. ನಾವು ಹೆದ್ದಾರಿಗಳಿಗೆ ನಂಬರ್ ಅಷ್ಟೇ ಕೊಡೋದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಸ್ಪಷ್ಟನೆ ನೀಡಿದರು.

    ಬೆಂಗಳೂರು-ಮೈಸೂರು ದಶಪಥ ರಸ್ತೆ (Bengaluru Mysuru Expressway) ವೈಮಾನಿಕ ಸಮೀಕ್ಷೆ ನಡೆಸಿದ ನಿತಿನ್ ಗಡ್ಕರಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದನ್ನೂ ಓದಿ: ಮುಂದಿನ ತಿಂಗಳು ಪ್ರಧಾನಿ, ರಾಷ್ಟ್ರಪತಿಗಳಿಂದ ದಶಪಥ ರಸ್ತೆ ಲೋಕಾರ್ಪಣೆ

    ಹೆದ್ದಾರಿಗೆ ಹೆಸರು ಇಡುವಂತೆ ಕೇಳಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವಂತೆ ಒತ್ತಾಯ ಕೇಳಿಬರುತ್ತಿದೆ. ಮಾಜಿ ಸಿಎಂ ಎಸ್.ಎಂ ಕೃಷ್ಣ (SM Krishna) ಅವರು ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ. ನಾನು ಕೂಡ ಆ ಪತ್ರವನ್ನ ನೋಡಿದ್ದೇನೆ. ಆದರೆ ಹೆದ್ದಾರಿಗಳಿಗೆ ಹೆಸರಿಡುವ ಸಂಪ್ರದಾಯ ಇಲ್ಲ. ನಾವು ಹೆದ್ದಾರಿಗೆ ನಂಬರ್ ಅಷ್ಟೇ ಕೊಡುತ್ತೇವೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಬಳಿಕ ಪ್ರಧಾನಿಯವರ ಒಪ್ಪಿಗೆ ಪಡೆದು ಆಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.

    ಫೆಬ್ರವರಿಯಲ್ಲಿ ದಶಪಥ ರಸ್ತೆ ಉದ್ಘಾಟನೆ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯಕ್ಕೆ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ದ್ರೌಪದಿ ಮುರ್ಮು ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಗಡ್ಕರಿ ತಿಳಿಸಿದರು. ಇದನ್ನೂ ಓದಿ: ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಲಾಟರಿ ಮಾರಾಟ ಆರಂಭಿಸಿ – 15 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ಲಾಟರಿ ಮಾರಾಟ?

    ಈ ಹೆದ್ದಾರಿಯು ಕರ್ನಾಟಕದ (Karnataka) ಆರ್ಥಿಕ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ. ಕೈಗಾರಿಕೆಗಳ ಪ್ರಗತಿಗೆ ನೂತನ ಹೆದ್ದಾರಿ ಅನುಕೂಲ ಆಗಲಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹಾಗೂ ಕೆಲ ಸಂಚಾರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ಹೆದ್ದಾರಿಯಿಂದ ಮೈಸೂರು (Mysuru) ಭಾಗದಲ್ಲಿ ಆರ್ಥಿಕ ಚಟುವಟಿಕೆ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಮಾಲಿನ್ಯ, ಟ್ರಾಫಿಕ್ ಜಾಮ್ ಜೊತೆ ಅಪಘಾತಗಳ ಸಂಖ್ಯೆ ಕ್ಷೀಣಿಸುವಂತೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಹೊಸಕೋಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ರಾಮನಗರ ಡಾಬಸ್ ಪೇಟೆ ಸೇರಿದಂತೆ ಪ್ರಮುಖ ನಗರಗಳನ್ನ ಬೆಸೆಯಲು ವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಪ್ರಯಾಣದ ಸಮಯ ತಗ್ಗಿಸುವುದು ನಮ್ಮ ಉದ್ದೇಶವಾಗಿದ್ದು ಉತ್ತರ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶದಿಂದ ಆ ಭಾಗದ ರಸ್ತೆಗಳನ್ನೂ ಸಹ ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮುಂದಿನ ತಿಂಗಳು ಪ್ರಧಾನಿ, ರಾಷ್ಟ್ರಪತಿಗಳಿಂದ ದಶಪಥ ರಸ್ತೆ ಲೋಕಾರ್ಪಣೆ

    ಮುಂದಿನ ತಿಂಗಳು ಪ್ರಧಾನಿ, ರಾಷ್ಟ್ರಪತಿಗಳಿಂದ ದಶಪಥ ರಸ್ತೆ ಲೋಕಾರ್ಪಣೆ

    ಬೆಂಗಳೂರು: ಮುಂದಿನ ಫೆಬ್ರವರಿ ತಿಂಗಳಿನಿಂದಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರಿಂದ ಬಹುನಿರೀಕ್ಷಿತ ಬೆಂಗಳೂರು – ಮೈಸೂರು ದಶಪಥ ರಸ್ತೆ (Bengaluru Mysuru Expressway) ಲೋಕಾರ್ಪಣೆಗೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಮಹತ್ವದ ಘೋಷಣೆ ಮಾಡಿದ್ದಾರೆ.

    ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳು ದಶಪಥ ರಸ್ತೆ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ರೂಪುರೇಷೆಗೆ ದಿನಾಂಕ ನಿಗದಿ ಮಾಡುತ್ತೇವೆ. ಇನ್ಮುಂದೆ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ 1:10 ಗಂಟೆಗೆ ಇಳಿಯಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಹಾದಲ್ಲಿ ಸಕ್ಕರೆ ಹಾಕಿಲ್ಲ ಎಂದು ಹೋಟೆಲ್ ಮಾಲೀಕನಿಗೆ ಚಾಕು ಇರಿದ

    ಮುಂದುವರಿದು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru Chennai Expressway) ಕಾರಿಡಾರ್ ಬಗ್ಗೆ ಗಡ್ಕರಿ ಮಾಹಿತಿ ನೀಡಿದ್ದಾರೆ. 17 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು-ಚೆನ್ನೈ ಹೆದ್ದಾರಿ ನಿರ್ಮಾಣ ಆಗಲಿದೆ. ಇವತ್ತು ಕಾಮಗಾರಿಯ ಪರಿವೀಕ್ಷಣೆ ನಡೆಸಿದ್ದೇನೆ. ಮೂರು ಹಂತಗಳಲ್ಲಿ ಹೆದ್ದಾರಿ ಕಾಮಗಾರಿ ನಡೆಯಲಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಆಂಧ್ರ-ತಮಿಳುನಾಡು ನಡುವೆ ಎಕ್ಸ್ಪ್ರೆಸ್ ವೇ ನಿರ್ಮಾಣ ಆಗಲಿದೆ. ಕರ್ನಾಟಕದಲ್ಲಿ 5,069 ಕೋಟಿ ವೆಚ್ಚದಲ್ಲಿ ಮೂರು ಹಂತಗಳಲ್ಲಿ 71 ಕಿಮೀ ಕಾಮಗಾರಿ ನಡೆಯಲಿದೆ. ಈಗಾಗಲೇ ಶೇ.32 ರಿಂದ ಶೇ.36 ರಷ್ಟು ಕಾಮಗಾರಿ ಮುಗಿದಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಖಚಿತ- ಜ. 9ಕ್ಕೆ ಅಧಿಕೃತ ಘೋಷಣೆ?

    ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು-ಚೆನ್ನೈ ನಡುವೆ 2.15 ಗಂಟೆಯಲ್ಲಿ ಪ್ರಯಾಣಿಸಬಹುದು. ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚಾರ ಮಾಡಬಹುದು. ಎಕ್ಸ್ಪ್ರೆಸ್‌ವೇ ಪೂರ್ಣಗೊಂಡರೆ 38 ಕಿ.ಮೀ ಕಡಿತವಾಗಲಿದೆ. ಸದ್ಯ ಬೆಂ-ಚೆನ್ನೆöÊ ಮಧ್ಯೆ ಪ್ರಯಾಣಿಸಲು 5 ಗಂಟೆ ಸಮಯ ಆಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ರಾಷ್ಟ್ರಪತಿಗಳು ಸುಂದರವಾಗಿಲ್ಲ’ ಎಂದ TMC ನಾಯಕನ ಪರವಾಗಿ ಕ್ಷಮೆ ಕೋರಿದ ಮಮತಾ ಬ್ಯಾನರ್ಜಿ

    `ರಾಷ್ಟ್ರಪತಿಗಳು ಸುಂದರವಾಗಿಲ್ಲ’ ಎಂದ TMC ನಾಯಕನ ಪರವಾಗಿ ಕ್ಷಮೆ ಕೋರಿದ ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರ ಕುರಿತು ಟಿಎಂಸಿ (TMC) ಸಚಿವರು ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ರಾಷ್ಟ್ರಪತಿಯವರಲ್ಲಿ (President Of India) ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ವೈಯಕ್ತಿಕವಾಗಿ ಟೀಕಿಸುವುದು ಪಕ್ಷದ ಸಂಸ್ಕೃತಿಯಲ್ಲ ಎಂದಿದ್ದು, ಸಚಿವರಿಗೂ ಎಚ್ಚರಿಕೆ ನೀಡಿದ್ದಾರೆ.

    ನಾವು ರಾಷ್ಟ್ರಪತಿಗಳನ್ನು ತುಂಬಾ ಗೌರವಿಸುತ್ತೇವೆ. ಅವರು ತುಂಬಾ ಒಳ್ಳೆಯವರು ಅಂಥವರನ್ನು ಟೀಕಿಸಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಸೌಂದರ್ಯವು ನಾವು ಬಾಹ್ಯವಾಗಿ ಹೇಗೆ ಕಾಣುತ್ತೇವೆ ಎಂಬುದಲ್ಲ, ಆಂತರಿಕವಾಗಿ ಹೇಗಿದ್ದೀವಿ ಎಂಬುದರ ಮೇಲೆ ಇದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಟಿಎಂಸಿ (TMC) ಸಚಿವ ಅಖಿಲ್ ಗಿರಿ, ನಂದಿಗ್ರಾಮ್‌ನ ಹಳ್ಳಿಯೊಂದರಲ್ಲಿ ನಡೆದ ರ‍್ಯಾಲಿಯಲ್ಲಿ ರಾಷ್ಟ್ರಪತಿಗಳ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರು ಮಾತನಾಡಿದ ಅವರ 17 ಸೆಕೆಂಡ್‌ಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಈ ವೀಡಿಯೋನಲ್ಲಿ `ನಾವು ಯಾರನ್ನು ನೋಟದಿಂದ ನಿರ್ಣಯಿಸುವುದಿಲ್ಲ. ಆದರೆ ನಮ್ಮ ರಾಷ್ಟ್ರಪತಿಗಳು ನೋಡಲು ಹೇಗೆ ಕಾಣುತ್ತಾರೆ? ಅವರು ಸುಂದರವಾಗಿಲ್ಲ’ ಎಂದು ಹೇಳಿದ್ದರು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು

    ಟಿಎಂಸಿ ಸಚಿವರ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ರಾಜಭವನಕ್ಕೆ ಮೆರವಣಿಗೆ ನಡೆಸಿದ್ದರು. ಸಚಿವ ಅಖಿಲ್ ಗಿರಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ನೇಮಕ

    ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ನೇಮಕ

    ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ನ (Supreme Court) ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಡಿ.ವೈ ಚಂದ್ರಚೂಡ್ (DY Chandrachud) ಅವರನ್ನು ನೇಮಿಸಿ ಕೇಂದ್ರ ಸರ್ಕಾರ (Government Of India) ಅಧಿಸೂಚನೆ ಹೊರಡಿಸಿದೆ.

    ನವೆಂಬರ್ 8ರಂದು ಹಾಲಿ ಸಿಜೆಐ ಉದಯ್ ಉಮೇಶ್ ಲಲಿತ್ (UU Lalit) ಅವರು ನಿವೃತ್ತಿ ಹೊಂದಲಿದ್ದು, ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ (CJI) ಅವರು 2 ವರ್ಷ ಅಧಿಕಾರದಲ್ಲಿ ಇರಲಿದ್ದು, 2024ರ ನವೆಂಬರ್ 10ರಂದು ಚಂದ್ರಚೂಡ್ ನಿವೃತ್ತಿ ಹೊಂದಲಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    ಸಂವಿಧಾನದ 124ನೇ (Constitution of India) ವಿಧಿಯ ಕಲಂ (2)ರ ಅಡಿ ಅಧಿಕಾರ ಚಲಾಯಿಸಿ ನ್ಯಾಯಮೂರ್ತಿ ಡಾ. ಧನಂಜಯ ಯಶವಂತ್ ಚಂದ್ರಚೂಡ್ ಅವರನ್ನು ಸಿಜೆಐ ಆಗಿ 2022ರ ನವೆಂಬರ್ 9ರಿಂದ ಅನ್ವಯವಾಗುವಂತೆ ರಾಷ್ಟ್ರಪತಿ (President Of Inida) ಅವರು ಆದೇಶ ಮಾಡಿದ್ದಾರೆ ಎಂದು ಕಾನೂನು ಇಲಾಖೆ (Law) ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

    ಅಕ್ಟೋಬರ್ 11ರಂದೇ ಹಾಲಿ ಸಿಜೆಐ ಲಲಿತ್ (UU Lalit) ಅವರು ಚಂದ್ರಚೂಡ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಇದನ್ನೂ ಓದಿ: 200 ವರ್ಷಗಳಿಂದ ವಕ್ಪ್ ಆಸ್ತಿ , ಎರಡು ಬಾರಿ ನಮಾಜ್‌ಗೆ ಮಾತ್ರ ಅವಕಾಶ – ಸುಪ್ರೀಂ ಕೋರ್ಟ್‌ನಲ್ಲಿ ವಾದ ಹೇಗಿತ್ತು?

    ಚಂದ್ರಚೂಡ್ ಹಿನ್ನೆಲೆ ಏನು?
    ಎಲ್‌ಎಲ್‌ಎಂ (LLM) ಪೂರ್ಣಗೊಳಿಸಿದ ನ್ಯಾ. ಚಂದ್ರಚೂಡ್ ಅವರು ಡಾಕ್ಟರ್ ಇನ್ ಜುಡಿಷಿಯಲ್ ಸೈನ್ಸಸ್ ಪದವಿಯನ್ನು ಅಮೆರಿಕದ ಹಾರ್ವರ್ಡ್ ಕಾನೂನು ಶಾಲೆಯಿಂದ ಪಡೆದಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದರು. ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದರು. ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದ ನ್ಯಾ. ಚಂದ್ರಚೂಡ್ ಅವರನ್ನು ಬಾಂಬೆ ಹೈಕೋರ್ಟ್ 1998ರ ಜೂನ್‌ನಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು.

    2000ದಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗುವುದಕ್ಕೂ ಮೊದಲು 1998ರಿಂದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಅವರು ಕೆಲಸ ಮಾಡಿದ್ದರು. 2013ರ ಅಕ್ಟೋಬರ್ 31ರಂದು ನ್ಯಾ. ಚಂದ್ರಚೂಡ್ ಅವರನ್ನು ಅಲಾಹಾಬಾದ್ ಹೈಕೋರ್ಟ್ (Allahabad High Court) ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿತ್ತು. 2016ರ ಮೇ 13ರಂದು ನ್ಯಾ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಪತಿಗಳಿಗೆ ಕಣ್ಣಿನಪೊರೆ ಸಮಸ್ಯೆ – ಒಂದೇ ದಿನದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

    ರಾಷ್ಟ್ರಪತಿಗಳಿಗೆ ಕಣ್ಣಿನಪೊರೆ ಸಮಸ್ಯೆ – ಒಂದೇ ದಿನದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

    ನವದೆಹಲಿ: ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದ ರಾಷ್ಟ್ರಪತಿ (President Of India) ದ್ರೌಪದಿ ಮುರ್ಮು (Draupadi Murmu) ಅವರು ಕೊನೆಗೂ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ.

    ಹಲವು ದಿನಗಳಿಂದ ತಮ್ಮ ಎಡಗಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಭಾನುವಾರ ದೆಹಲಿಯ ಆರ್ಮಿ ಹಾಸ್ಪಿಟಲ್ ರಿಸರ್ಚ್ ಅಂಡ್ ರೆಫೆರಲ್‌ನಲ್ಲಿ (Army Hospital Research and Referral) ಶಸ್ತ್ರ ಚಿಕಿತ್ಸೆಗೆ (Eye Cataract Surgery) ಒಳಗಾಗಿದ್ದರು. ಬೆಳಿಗ್ಗೆ 11:30ರ ವೆಳೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು ಮಧ್ಯಾಹ್ನ 1:30ರ ವೇಳೆಗೆ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ನಾಲ್ಕು ದಿನದ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ತೆರೆ

    ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿರುವುದಾಗಿ ರಾಷ್ಟ್ರಪತಿ ಭವನದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಚರಿತ್ರೆಯಲ್ಲಿ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪಟ್ಟ – ಇಂದು ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ

    ಕಳೆದ ಜುಲೈ 25ರಂದು ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಸ್ವೀಕರಿಸಿದರು. 20 ಜೂನ್ 1958 ರಂದು ಜನಿಸಿದ ಅವರು ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]